ಅವರದ್ದೇ ಪಕ್ಷದ (ಕನ್ಸರ್‌ವೇಟಿವ್ ಪಾರ್ಟಿ) 148 ಮಂದಿ ಸಂಸದರು ಬೋರಿಸ್ ವಿರುದ್ಧ ಮತ ಚಲಾಯಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ವೇಳೆ ಲಾಕ್‌ಡೌನ್ ಇದ್ದರೂ ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಕೋವಿಡ್ ನಿರ್ವಹಣೆಯಲ್ಲಿ ವಿಫಲ ರಾಗಿದ್ದು ಪಕ್ಷದ ಘನತೆಗೆ ಸಾರ್ವಜನಿಕವಾಗಿ ಧಕ್ಕೆ ತಂದಿದೆ ಎಂದು ಸ್ವಪಕ್ಷೀಯರೇ ಬೋರಿಸ್ ಅವರ ವಿರುದ್ಧ ಆರೋಪಿಸಿದ್ದರು.
ಅಂತಿಮವಾಗಿ ಜಾನ್ಸನ್ ಅವರು ಶೇ 58.6 ಮತ ಪಡೆಯುವ ಮೂಲಕ ವಿಶ್ವಾಸಮತ ಗೆದ್ದಿದ್ದಾರೆ. ಬೋರಿಸ್ ಜಾನ್ಸನ್, ಒಗ್ಗಟ್ಟಿನಿಂದ ಮುನ್ನಡೆಯಲು ಫಲಿತಾಂಶ ಅವಕಾಶ ಕಲ್ಪಿಸಿದೆ ಎಂದು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ಇತ್ತೀಚಿನ ದಶಕಗಳಲ್ಲೇ ಕನ್ಸರ್ವೇಟಿವ್ ಪಕ್ಷದ ಅಭೂತಪೂರ್ವ ವಿಜಯಕ್ಕೆ ಜಾನ್ಸನ್ ಕಾರಣ ರಾಗಿದ್ದರು.