ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ಹಣದುಬ್ಬರ ಪ್ರಮಾಣ ಶೇ.6ರ ಮೇಲಿರಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು. ಹಣ ದುಬ್ಬರ ನಿಯಂತ್ರಿಸುವ ಉದ್ದೇಶ ದಿಂದ ಆರ್‌ಬಿಐ ಮೇ 4ರಂದು ರೆಪೊ ದರವನ್ನು ಶೇ 0.40 ರಷ್ಟು ಹೆಚ್ಚಿಸಿತ್ತು.
ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಆರು ಮಂದಿ ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಸೋಮವಾರದಿಂದ ಬುಧವಾರದವರೆಗೆ ಸಭೆ ನಡೆಸಿತ್ತು. ರೆಪೊ ದರ ಹೆಚ್ಚಿಸುವ ಬಗ್ಗೆ ಈ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳ ಲಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಆರ್ಥಿಕ ವೃದ್ಧಿ ದರ ಶೇ 7.2ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. 23ನೇ ಹಣ ಕಾಸು ವರ್ಷದ ಹಣದುಬ್ಬರ ಪ್ರಮಾಣ ಶೇ 5.7ರಷ್ಟು ಇರಬಹುದು ಎಂದು ಈ ಹಿಂದೆ ಅಂದಾಜಿಸಲಾಗಿತ್ತು.