Thursday, 19th September 2024

ಕರೋನಾ ನಿಯಂತ್ರಣಕ್ಕೆೆ ಶೀಘ್ರ ಲಸಿಕೆ: ಹರ್ಷವರ್ಧನ್

ದೆಹಲಿ: ದೇಶಾದ್ಯಂತ ಕರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಇದೀಗ ಕರೋನಾಗೆ ನಾಲ್ಕು ಲಸಿಕೆ ದೇಶದಲ್ಲಿ ಶೀಘ್ರವೇ ಕ್ಲಿನಿಕಲ್ ಟ್ರಯಲ್ ಹಂತಕ್ಕೆ ತಲುಪಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಕರೋನಾ ತಡೆಗಾಗಿ ಸಿದ್ದಪಡಿಸಲಾಗಿರುವ 14 ಲಸಿಕೆಗಳ ಪೈಕಿ 4 ಲಸಿಕೆಗಳು ಶೀಘ್ರವೇ ಕ್ಲಿನಿಕಲ್ ಟ್ರಯಲ್ ಹಂತಕ್ಕೆ ಹೋಗಲಿವೆ ಎಂದು ಸಚಿವರು ತಿಳಿಸಿದ್ದಾರೆ. ವಿಶ್ವಾದ್ಯಂತ ಕರೋನಾ ತಡೆಗೆ 100 ಕ್ಕೂ ಹೆಚ್ಚಿನ ಲಸಿಕೆಗಳು ವಿವಿಧ ಹಂತಗಳ ಪ್ರಯೋಗಗಳಲ್ಲಿವೆ.