Thursday, 19th September 2024

ದೋಹಾದಿಂದ 146 ವಲಸಿಗರನ್ನು ಹೊತ್ತ ವಿಶೇಷ ವಿಮಾನ ಬಿಹಾರದ ಗಯಾಗೆ ಆಗಮನ

ಗಯಾ

ವಂದೇ ಭಾರತ್ ಮಿಷನ್ ಅಡಿ ಕತಾರ್‌ನ ರಾಜಧಾನಿ ದೋಹಾದಿಂದ 146 ವಲಸಿಗರನ್ನು ಹೊತ್ತ ವಿಶೇಷ ವಿಮಾನ ಸೋಮವಾರ ಗಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು.

ವಿಮಾನ ನಿಲ್ದಾಣದಲ್ಲಿ ಎಲ್ಲಾ ವಲಸಿಗರನ್ನು ವೈದ್ಯಕೀಯ ತಂಡ ತಪಾಸಣೆಗೆ ಒಳಪಡಿಸಿತು. ತಪಾಸಣೆಯ ನಂತರ ವಲಸಿಗರ ಸರಕುಗಳನ್ನು ಸ್ಚಚ್ಛಗೊಳಿಸಲಾಯಿತು. ಎಲ್ಲರಿಘು ವಂದೇ ಭಾರತ್ ಕಿಟ್ ನೀಡಲಾಯಿತು. 146 ವಲಸಿಗರ ಪೈಕಿ ಜಾರ್ಖಂಡ್‍ ನ ಐವರು,ಉಳಿದವರು ಬಿಹಾರ ಮೂಲದವರಾಗಿದ್ದಾರೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ದಿಲೀಪ್ ಕುಮಾರ್ ಅವರು ಇಂದು ಇಲ್ಲಿ ಹೇಳಿದ್ದಾರೆ.

ಸಂಪೂರ್ಣ ವೈದ್ಯಕೀಯ ತಪಾಸಣೆಯ ನಂತರ ಎಲ್ಲಾ ವಲಸಿಗರನ್ನು ಅವರ ಸ್ವಂತ ಸ್ಥಳಗಳಿಗೆ ಬಸ್‍ಗಳ ಮೂಲಕ ಕರೆದೊಯ್ಯಲಾಯಿತು ಎಂದು ಅವರು ಹೇಳಿದ್ದಾರೆ.

ನಿನ್ನೆ ಮಸ್ಕತ್‍ ನಿಂದ 132 ಪ್ರಯಾಣಿಕರನ್ನು ಹೊತ್ತ ವಿಶೇಷ ವಿಮಾನ ಗಯಾ ವಿಮಾನನಿಲ್ದಾಣಕ್ಕೆ ಆಗಮಿಸಿತ್ತು. ಈ ಪ್ರಯಾಣಿಕರು ಜಾರ್ಖಂಡ್‍ ಮತ್ತು ಬಿಹಾರದವರಾಗಿದ್ದಾರೆ.