Thursday, 19th September 2024

ಕೋವಿಡ್ 19 : ವಿಶ್ವಾದ್ಯಂತ 5.7 ದಶಲಕ್ಷ ಸಮೀಪಿಸಿದ ಸೋಂಕು ಪ್ರಕರಣ

ವಾಷಿಂಗ್ಟನ್

ಜಾಗತಿಕ ಕೋವಿಡ್ -19 ಪ್ರಕರಣಗಳ ಸಂಖ್ಯೆ 5.7 ದಶಲಕ್ಷದ ಸಮೀಪದಲ್ಲಿದ್ದು, ಸಾವುಗಳು 355,000 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಗುರುವಾರ ಬೆಳಗಿನ ವೇಳೆಗೆ, ಒಟ್ಟು ಪ್ರಕರಣಗಳ ಸಂಖ್ಯೆ 5,690,951 ಆಗಿದ್ದರೆ, ಸಾವಿನ ಸಂಖ್ಯೆ 355,615 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಕೇಂದ್ರ (ಸಿಎಸ್‌ಎಸ್‌ಇ) ತನ್ನ ನವೀಕೃತ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.

ಅಮೆರಿಕವು 100,000 ಕ್ಕಿಂತಲೂ ಹೆಚ್ಚು ಕೋವಿಡ್ -19 ಸಾವುಗಳ ಘೋರ ಮೈಲಿಗಲ್ಲನ್ನು ತಲುಪಿದೆ. ಪ್ರಸ್ತುತ, ದೇಶವು 1,699,126 ದೃಢೀಕೃತ ಪ್ರಕರಣಗಳು ಮತ್ತು 100,418 ಸಾವುಗಳನ್ನು ಹೊಂದಿದೆ, ಎಂದು ಸಿಎಸ್ಎಸ್ಇ ತಿಳಿಸಿದೆ.
ಏತನ್ಮಧ್ಯೆ, ಬ್ರೆಜಿಲ್ 411,821 ಸೋಂಕುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಇದರ ನಂತರ ರಷ್ಯಾ -370,680, ಇಂಗ್ಲೆಂಡ್ -268,619, ಸ್ಪೇನ್ 236,259, ಇಟಲಿ 231,139, ಫ್ರಾನ್ಸ್ 183,038, ಜರ್ಮನಿ 181,524, ಟರ್ಕಿ 159,797, ಭಾರತ 158,086, ಇರಾನ್ 141,591, ಮತ್ತು ಪೆರು 135,905, ಕೋವಿಡಟ್ 19 ಸೋಂಕು ಪ್ರಕರಣಗಳನ್ನು ಹೊಂದಿರುವುದಾಗಿ ಸಿಎಸ್ಎಸ್ಇ ಅಂಕಿಅಂಶ ತಿಳಿಸಿದೆ.

ಸಾವುನೋವುಗಳಿಗೆ ಸಂಬಂಧಿಸಿದಂತೆ, ಅಮೆರಿಕ ನಂತರ 37,542 ಕೋವಿಡ್ -19 ಸಾವುಗಳೊಂದಿಗೆ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ, ಇದು ಯುರೋಪಿನಲ್ಲಿ ಅತಿ ಹೆಚ್ಚು ಸಾವುನೋವಾಗಿದೆ. ಹತ್ತು ಸಾವಿರಕ್ಕೂ ಅಧಿಕ ಸಾವು ಸಂಭವಿಸಿರುವ ದೇಶಗಳಲ್ಲಿ ಇಟಲಿ 33,072, ಫ್ರಾನ್ಸ್ 28,599, ಸ್ಪೇನ್ 27,117, ಮತ್ತು ಬ್ರೆಜಿಲ್ ನಲ್ಲಿ 25,598 ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ.