ಟೋಕಿಯೋ,
ಭಾರತ ಸೇರಿದಂತೆ 10 ದೇಶಗಳ ಪ್ರವಾಸಿಗರಿಗೆ ಜಪಾನ್ ಪ್ರವಾಸ ನಿರ್ಬಂಧ ವಿಧಿಸಿದೆ.
ಟೋಕಿಯೊ ಮಹಾನಗರ ಸೇರಿದಂತೆ ನಾಲ್ಕು ನಗರಗಳ ತುರ್ತು ಪರಿಸ್ಥಿತಿಯನ್ನು ಹಿಂಪಡೆದ ಬಳಿಕ ಜಪಾನ್ ಮಹತ್ವದ ಆದೇಶ ಪ್ರಕಟಿಸಿದೆ. ಕಳೆದ 14 ದಿನಗಳಲ್ಲಿ ಈ ದೇಶಗಳಲ್ಲಿ ಉಳಿದುಕೊಂಡಿದ್ದವರು ಸದ್ಯಕ್ಕೆ ಜಪಾನ್ ಪ್ರವೇಶ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ.
ಭಾರತ, ಅಫ್ಘಾನಿಸ್ತಾನ, ಅರ್ಜೆಂಟೀನಾ, ಬಾಂಗ್ಲಾದೇಶ, ಎಲ್ ಸಾಲ್ವಡರ್, ಘಾನಾ, ಕಜಕಿಸ್ತಾನ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ತಜಕಿಸ್ತಾನದ ನಾಗರಿಕರು ಸದ್ಯಕ್ಕೆ ಜಪಾನ್ ಪ್ರವೇಶಿಸುವಂತಿಲ್ಲ.
ವಿದೇಶಾಂಗ ಸಚಿವಾಲಯ ನೀಡಿರುವ ಮಾರ್ಗಸೂಚಿಯಂತೆ ಈ ಕ್ರಮ ಜರುಗಿಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಒಟ್ಟಾರೆ 112ಕ್ಕೂ ಅಧಿಕ ದೇಶಗಳ ಪ್ರವಾಸಿಗರು, ನಾಗರಿಕರಿಗೆ ಸದ್ಯಕ್ಕೆ ಪ್ರವೇಶ ನಿಷೇಧವಿದೆ. ಈ ಪಟ್ಟಿಯಲ್ಲಿ ಅಮೆರಿಕ ಚೀನಾ, ದಕ್ಷಿಣ ಕೊರಿಯಾ ಹಾಗೂ ಯುರೋಪಿನ ಕೆಲವು ರಾಷ್ಟ್ರಗಳು ಸೇರಿವೆ ಎನ್ನಲಾಗಿದೆ.