Sunday, 8th September 2024

ಸದಾಶಿವನಿಗೆ ಚಾರ್‌ ಸೌ ಧ್ಯಾನ

ತುಂಟರಗಾಳಿ

ಸಿನಿಗನ್ನಡ
ಕರ್ನಾಟಕದಲ್ಲಿ ಚಿತ್ರಮಂದಿರಗಳು ಮುಚ್ಚೋದು ಹೊಸ ಸುದ್ದಿ ಏನಲ್ಲ. ಕರೋನಾ ನಂತರ ಶುರು ಆದ ಈ ಸಮಸ್ಯೆ ಈಗ ಇನ್ನಷ್ಟು ಉಲ್ಬಣವಾಗುತ್ತಿದೆ. ಇದು ಕೇವಲ ಕರ್ನಾಟಕದ ಸಮಸ್ಯೆ ಅಲ್ಲ, ಸಿನಿಮಾ ಕ್ರೇಜ್ ಸಿಕ್ಕಾಪಟ್ಟೆ ಇರೋ ತಮಿಳು ನಾಡಿನಲ್ಲೂ ೧೫೦ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚುತ್ತಿವೆ ಯಂತೆ.

ನಮ್ಮಲ್ಲಿಯೂ ಕೂಡ ಇನ್ನೇನು ಹಲವು ಚಿತ್ರಮಂದಿರಗಳು ಕೌಂಟರ್ ಕ್ಲೋಸ್ ಮಾಡುವ ಮಾತನ್ನಾಡುತ್ತಿವೆ. ಸ್ಟಾರ್ ಸಿನಿಮಾಗಳೂ ಕಾಸು ಮಾಡದೆ, ಗ
ಪೆಟ್ಟಿಗೆ ತುಂಬುತ್ತಿಲ್ಲ ಎಂದು ಮೊದಲೇ ಸಂಕಷ್ಟದಲ್ಲಿದ್ದ ಈ ಚಿತ್ರಮಂದಿರಗಳು ಗಲ್ಲದ ಮೇಲೆ ಕೈ ಇಟ್ಟು ಕೂತಿವೆ. ಅಂದಹಾಗೆ ಇವೆಲ್ಲ ಕೇವಲ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಸಮಸ್ಯೆ. ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಗಳು ಹೇಗೋ ಬಚಾವಾಗಲು ಹಲವು ಇನ್ನೋವೇಟಿವ್ ದಾರಿಗಳನ್ನು ಹುಡುಕಿಕೊಳ್ಳುತ್ತವೆ.

ಆದ್ರೆ ಸಿಂಗಲ್ ಸ್ಕ್ರೀನ್‌ಗಳ ಕತೆ ಹಾಗಿಲ್ಲ. ಹಾಗಾಗಿ ಜನ ಒಂದು ಕಡೆ ಮಿಂಗಲ್ ಆಗೋಕೆ ಸಾಧ್ಯ ಇಲ್ಲ ಎನ್ನುವಂಥ ಕರೋನಾ ಟೈಮ ಸಿಂಗಲ್ ಥಿಯೇಟರ್‌ಗಳು ವಿರಹ ವೇದನೆಯಿಂದ ನರಳುವ ಸಿಂಗಲ್‌ಗಳಂತೆ ಆಗಿದ್ದವು. ಈಗಂತೂ ಅವುಗಳ ಕಷ್ಟ ಗಗನಕ್ಕೇರಿದೆ. ಹಲವು ಚಿತ್ರಮಂದಿರಗಳ ಮಾಲೀಕರು ತಮ್ಮ ಲೈಸೆನ್ಸ್ ರಿನ್ಯೂ ಮಾಡೋಕೆ ಅರ್ಜಿಯನ್ನೂ ಹಾಕಿಲ್ಲವಂತೆ. ಇಷ್ಟುದಿನ ತಮ್ಮ ಮರ್ಜಿ ಎನ್ನುವಂತೆ ಟಿಕೆಟ್ ದರವನ್ನು ಹೆಚ್ಚಿಸುತ್ತಿದ್ದ ಚಿತ್ರಮಂದಿರಗಳ ಮಾಲೀಕರು ಕರೋನಾ ಕಾಲದಲ್ಲಿ ಸರಕಾರದ ಫಿಫ್ಟಿ ಫಿಫ್ಟಿ ನೀತಿಯಿಂದಾಗಿ ಮೊದಲ ಲಾಕ್‌ಡೌನ್‌ನ ಒಂದಿಷ್ಟು ಕಂಗೆಟ್ಟಿದ್ದರು.

ಈಗ ಫಿಫ್ಟಿ ಫಿಫ್ಟಿ ಇರಲಿ, ಚಿತ್ರಮಂದಿರಗಳಲ್ಲಿ ಶೋ ಗಳೇ ಇಲ್ಲದೆ ಅವರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ಅಡ್ವಾ ಬುಕ್ಕಿಂಗ್ ಮಾಡಿಕೊಂಡು ಸೀಟುಗಳನ್ನ ಬ್ಲಾಕ್ ಮಾಡಿಕೊಳ್ಳುತ್ತಿದ್ದ, ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಬ್ಲ್ಯಾಕ್ ಟಿಕೆಟ್ ಮಾರುತ್ತಿದ್ದ ಚಿತ್ರಮಂದಿರಗಳೇ ಈಗ ಬ್ಲಾಕ್  ಆಗುವ ಭಯದಲ್ಲಿವೆ. ಹಾಗಾಗಿ ಚಿತ್ರಮಂದಿರ ತುಂಬಿದೆ ಎಂಬ ಬೋರ್ಡ್ ನೋಡಬೇಕಾಗಿದ್ದ ಹಲವು ಕಡೆ ಇನ್ನುಮುಂದೆ ಚಿತ್ರಮಂದಿರ ಮುಚ್ಚಿದೆ ಎಂಬ ಬೋರ್ಡ್ ತಗಲಾಕಿದರೆ ಅಚ್ಚರಿಯಿಲ್ಲ.

ಲೂಸ್ ಟಾಕ್-ನರೇಂದ್ರ ಮೋದಿ

ಏನ್ ಸಾರ್ ಏನಿದು, ನಿಮ್ಮ ಧ್ಯಾನ ತುಂಬಾ ಸೌಂಡ್ ಮಾಡ್ತಾ ಇದೆಯಲ್ಲ ?
-ರೀ, ಸೈಲೆಂಟ್ ಆಗಿ ಧ್ಯಾನ ಮಾಡ್ತಾ ಇದ್ದೀನಿ. ಅದನ್ನೂ ಸೌಂಡ್ ಅಂತೀರಲ್ಲ

ಥೂ, ಹಂಗಲ್ಲ ಸರ್, ಧ್ಯಾನ ಮಾಡೋದ್ ಮಾಡ್ತಿದ್ದೀರ. ಅಲ್ಲೂ ಕ್ಯಾಮರಾಮನ್ ಯಾಕೆ ಅಂತ ಎಲ್ಲರೂ ಟ್ರೋಲ್ ಮಾಡ್ತಾ ಇದ್ದಾರೆ?
-ಅಯ್ಯೋ, ಹೌದಲ್ಲ, ಸುತ್ತ ಅ ಕ್ಯಾಮರಾಮನ್ ಇದ್ರೂ ಇದು ನಂಗೆ ‘ಫ್ಲಾಷ್’ ಆಗ್ಲಿಲ್ಲ ನೋಡಿ

ಸರಿ, ಧ್ಯಾನದ ನಡುವೆ ಉಪಾಹಾರ, ಪಾನೀಯ ಸಮಾರಾಧನೆ ಹೇಗೆ ನಡೀತಾ ಇದೆ

-ಏನು? ಉಪಾಹಾರ, ಪಾನೀಯ ಧ್ಯಾನದ ಮಧ್ಯಾನ? ಅದೂ ಮಟ ಮಟ ಮಧ್ಯಾಹ್ನ.. ನೋ.. ವೇ ಚಾನ್ಸೇ ಇಲ್ಲ

ಹೋಗ್ಲಿ, ನಿಮ್ಮ ಈ ಧ್ಯಾನದ ಉದ್ದೇಶ ಏನು?
-ಆ? ಧ್ಯಾನ್‌ಚಂದ್ ಅವಾರ್ಡ್ ತಗೊಳ್ಳೋದು..ಹೋಗ್ರೀ ಹೋಗ್ರೀ ಡಿಸ್ಟರ್ಬ್ ಮಾಡ್ಬೇಡಿ

ಅಂದಹಾಗೆ, ಈ ಸಲ ನಿಮಗೆ ಚಾರ್‌ಸೌ ಪಾರ್ ಸೀಟು ಸಿಗುತ್ತಂತೆ?
-ಏನೋ ಜೋಷ್‌ನಲ್ಲಿ ಹೇಳಿದೆ. ಅದನ್ನೇ ಹಿಡ್ಕೊಂಡ್ ಕೂತಿದ್ದೀರಲ್ಲ. ಅದೇನೋ ಅಂತಾರಲ್ಲ, ಸದಾಶಿವನಿಗೆ ಬರೀ ಚಾರ್‌ಸೌ ಧ್ಯಾನ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮು ಹುಟ್ಟಾ ಕುರುಡ. ಆದ್ರೆ ಜೊತೆಗೆ ಹುಟ್ಟಾ ಕುಡುಕ. ಊರಲ್ಲಿರೋ ಎಲ್ಲಾ ಬಾರುಗಳು, ಪಬ್ಬುಗಳು ಅವನಿಗೆ ಚೆನ್ನಾಗಿ ಗೊತ್ತಿದ್ದವು. ಕುರುಡನಾದ್ರೂ ಹೋದ ಕಡೆಯ ಹುಡುಗಿಯರನ್ನ ಪಟಾಯಿಸಿ ಪ್ಲೇ ಬಾಯ್ ಎನಿಸಿಕೊಂಡಿದ್ದ. ಹೀಗಿದ್ದ ಖೇಮು ಒಂದಿನ ಒಂದು ಹೊಸ ಪಬ್ಬಿಗೆ ಹೋದ. ಖೇಮುಗೆ ಒಂದು ಸ್ಪೆಷಲ್ ಕಲೆ ಇತ್ತು. ಏನಂದ್ರೆ ಅಲ್ಲಿ ಕುಡಿಯುವಾಗ ತಿನ್ನೋಕೆ ಅಂತ ಫುಡ್ ತರಿಸುವಾಗ ಅವನು ಆ ಡಿಷ್‌ನಲ್ಲಿ ಅದ್ದಿ ತೆಗೆದ ಸ್ಪೂನ್ ಅನ್ನು ಮೂಸಿ ನೋಡಿ ಅದು ಯಾವ ಡಿಶ್ ಎಂದು ಕಂಡುಹಿಡಿದು ಆರ್ಡರ್ ಮಾಡುತ್ತಿದ್ದ. ಅಂದು ಕೂಡಾ ಒಂದು ಹೊಸ ಪಬ್ಬಿಗೆ ಹೋಗಿದ್ದರಿಂದ ವೈಟರ್‌ನ ಕರೆದು, ಡ್ರಿಂಕ್ಸ್ ಹೇಳಿದ.

ಸೈಡ್ ಡಿಶ್ ಏನು ಕೊಡ್ಲಿ ಅಂತ ಅವನು ಕೇಳಿದಾಗ, ಖೇಮು ಹೇಳಿದ, ನೀವು ತಯಾರಿಸಿದ ಡಿಶ್‌ನಲ್ಲಿ ಇಟ್ಟಿರೋ ಸ್ಪೂನ್ ತಗೊಂಡ್ ಬಾ. ಸ್ಮೆಲ್ ನೋಡಿ ಹೇಳ್ತೀನಿ ಅಂದ. ವೈಟರ್‌ಗೆ ಆಶ್ಚರ್ಯ ಆದ್ರೂ,. ಸರಿ ಅಂತ ಒಳಗೆ ಹೋಗಿ ಒಂದು ಸ್ಪೂನ್ ತಗೊಂಡ್ ಬಂದು ಕೊಟ್ಟ. ಖೇಮು ಅದನ್ನು ಮೂಸಿ ನೋಡಿ, ಸರಿ ಈ ಚೈನೀಸ್ ಶೆಜ್ವಾನ್ ಫ್ರೈಡ್ ಚಿಕನ್ ಚೆನ್ನಾಗಿರುತ್ತೆ, ಒಂದ್ ಪ್ಲೇಟ್ ತಗೊಂಡ್ ಬಾ ಅಂದ. ವೈಟರ್‌ಗೆ ಆಶ್ಚರ್ಯ ಆಯ್ತು. ಸರಿ ಒಂದು ಪ್ಲೇಟ್ ಅದೇ ಚಿಕನ್ ತಂದುಕೊಟ್ಟ. ಖೇಮು ಮುಂದಿನ ಬಾರಿ ಇನ್ನೊಂದು ಡಿಷ್ ಆರ್ಡರ್ ಮಾಡುವಾಗ ಮತ್ತೆ ಸ್ಪೂನ್ ತಗೊಂಡ್ ಬಾ ಅಂದ. ಈ ಬಾರಿ ಅವನನ್ನು ಆಟ ಆಡಿಸಬೇಕು ಅಂತ ಡಿಸೈಡ್ ಮಾಡಿದ ವೈಟರ್, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಹೆಂಡತಿಯನ್ನು ಕರೆದು, ಈ ಸ್ಪೂನ್ ಅನ್ನು ನಿನ್ನ ಬಾಯಲ್ಲಿ ಒಂದು ಸಲ ಚೀಪಿ, ಆಮೇಲೆ ಅದನ್ನು ನಿನ್ನ ಲಿಪ್‌ಸ್ಟಿಕ್‌ಗೆ ಒರೆಸಿ ಕೊಡು ಅಂದ. ಹೆಂಡಿ ಯಾಕೆ ಅಂದ್ಳು. ಸುಮ್ನೆ ಹೇಳಿದಷ್ಟು ಮಾಡು ಅಂತ ಮಾಡಿಸಿ ಆ ಸ್ಪೂನ್ ಅನ್ನು ತಗೊಂಡ್ ಬಂದು ಖೇಮುಗೆ ಕೊಟ್ಟ. ಖೇಮು ಅದನ್ನು ಮೂಸಿ ನೋಡಿ ಹೇಳಿದ ಓ, ಲಿಂಡಾ ಈವಾಗ ನಿಮ್ ಹೋಟ್ಲಲ್ಲಿ
ಕೆಲ್ಸ ಮಾಡ್ತಾ ಇದ್ದಾಳಾ?

ಲೈನ್ ಮ್ಯಾನ್
ನಮ್ಮವರಿಗೆ ಸಚಿವ ಸ್ಥಾನ ಕೊಡದಿದ್ರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೀವಿ- ಸ್ವಾಮೀಜಿ
-ಇವ್ರದ್ದೇನು ಮುತ್ತಿಗೆ ಮಠನಾ?

ಇಂದಿನ ಸರಕಾರಗಳಲ್ಲಿ ಮಿನಿಸ್ಟರ್ ಆಗೋಕೆ ಬರೀ ಸಜ್ಜನ ಆಗಿದ್ರೆ ಆಗಲ್ಲ
-ಅವ್ರ್ ಯಾವ್ ಜನ ಅನ್ನೋದೂ ಮುಖ್ಯ ಆಗುತ್ತೆ.

ನಗರದ ಹೊರವಲಯದಲ್ಲಿ ಸೈಟ್ ತಗೊಂಡೋರು ಆಗಾಗ ಹೋಗಿ ನೋಡ್ಕಂಡ್ ಬರೋದು
-ಸೈಟ್ ಸೀಯಿಂಗ್

ಯಾರನ್ನಾದ್ರೂ ಪರೀಕ್ಷೆ ಮಾಡಬೇಕು ಅಂತ ಅವರಿಗೆ ಸಚಿವ ಸ್ಥಾನ ಕೊಟ್ರೆ ಅದು

-ಸಂಪುಟಕ್ಕಿಟ್ಟ ಚಿನ್ನ

ಕುಡುಕರ ಕಷ್ಟ
-ಕುಡಿದು ಸ್ವಲ್ಪ ಜಾಸ್ತಿ ಮಾತಾಡಿದ್ರೆ, ಫುಲ್ ಟೈಟ್ ಆಗಿ ಸಿಕ್ಕಾಪಟ್ಟೆ ಮಾತಾಡ್ತಿದ್ದಾನೆ ಅಂತಾರೆ. ಹಂಗಂತ, ಇವ್ರ್ ಸಾವಾಸನೇ ಬೇಡ ಅಂತ ಸುಮ್ನೆ ಸೈಲೆಂಟ್ ಆಗಿ ಕೂತ್ಕೊಂಡ್ರೆ, ಅಣ್ಣ ಫುಲ್ ಚಿತ್ತಾಗವ್ನೆ, ಮಾತೇ ಬರ್ತಿಲ್ಲ ಅಂತಾರೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶದ ಪ್ರಜೆಗಳು ಕುಡಿಯೋ ಅಭ್ಯಾಸ ಕಡಿಮೆ ಮಾಡೋದು ಹೇಗೆ ?
-ಏನಿಲ್ಲ, ಬೇಜಾರಾದಾಗೆಲ್ಲ ಕುಡಿಯೋದ್ ಬಿಟ್ಟು, ಬರೀ ಖುಷಿ ಆದಾಗ್ ಮಾತ್ರ ಕುಡಿಯೋ ಅಭ್ಯಾಸ ಮಾಡಿಕೊಂಡ್ರೆ ಸಾಕು.

ಫೇಕ್ ಫೇಸ್ ಬುಕ್ ಅಕೌಂಟಿಂದ ಮೆಸೆಂಜರ್‌ಗೆ ಬಂದು, ಫೋನ್ ಪೇ, ಗೂಗಲ್ ಪೇ ಇದ್ಯಾ ಅಂತ ಕೇಳಿದ್ರೆ ಏನ್ ಮಾಡಬೇಕು?
-ಇದೆ, ಬರೀ ಇನ್‌ಕಮಿಂಗ್ ಅಷ್ಟೇ, ಔಟ್‌ಗೋಯಿಂಗ್ ಇಲ್ಲ ಅನ್ಬೇಕು

ಇನ್ನೊಬ್ರನ್ನ ಕನ್ ಫ್ಯೂಸ್ ಮಾಡೋದು ಹೇಗೆ?
-ಒಂದ್ ಟೀ ಸ್ಪೂನ್, ಕಾಫಿ ಪುಡಿ ಹಾಕಿ

ರಾಜಕೀಯ ರಹಸ್ಯ
ಎಕ್ಸ್ ಸಿಎಂಗಳಾದ ಮೇಲೂ ಅವರಿಗೆ ಝೆಡ್ ಸೆಕ್ಯುರಿಟಿ ಕೊಟ್ರೂ ನಮ್ ಜನ ವೈ ಅಂತ ಕೇಳಲ್ಲ.

ಬಾಲಿವುಡ್ ಖಾನ್‌ಗಳು ಇನ್ನೊಬ್ಬರಿಗೆ ಹೇಳೋ ಕಿವಿ ಮಾತನ್ನ ಏನಂತಾರೆ?
-ಕಾನ್ ಕೀ ಬಾತ್

Leave a Reply

Your email address will not be published. Required fields are marked *

error: Content is protected !!