Thursday, 19th September 2024

ನಮ್ಮೊಡನೆ ಹೀಗಿದ್ದರು ಅನಂತಕುಮಾರ್

ಜಿ.ಎಂ.ಇನಾಂದಾರ್

ಅನಂತಕುಮಾರರ ಮಾಜಿ ವಿಶೇಷ ಕರ್ತವ್ಯಾಧಿಕಾರಿ ಬೆಂಗಳೂರು.

ಅನಂತಕುಮಾರ್ ಏರ್‌ಪೋರ್ಟ್‌ಗೆ ಹೋಗುವಾಗ, ಸಾಮಾನ್ಯವಾಗಿ ಪತ್ರಗಳಿಗೆ ಸಹಿ ಹಾಕುವುದು ವಾಡಿಕೆ. ಪತ್ರ ಸಹಿಯಾಗದೇ ಮರಳಿ ಬಂತು. ಮುಂದಿನ ವಾರ ಏರ್‌ಪೋರ್ಟ್ ಹೊರಟಾಗ ನಾನೇ ಕಾರಿನಲ್ಲಿ ಪತ್ರ ಸಹಿ ಹಾಕಿಸಿ ತರುವುದೆಂದು ಅವರ ಜತೆ ಹೊರಟೆ. ನಾನು ಯಥಾ ಪ್ರಕಾರ ಸಹಿ ಹಾಕಿಸಲು ನೀಡಿದಾಗ, ‘ಇನಾಂದಾರ್‌ರೇ ನಾನು ಈ ಪತ್ರಕ್ಕೆೆ ಸಹಿ ಹಾಕುವುದಿಲ್ಲ. ಕೋರ್ಟಿನಲ್ಲಿ ಈ ಕೇಸ್‌ನ್ನು ಎದುರಿಸುತ್ತೇನೆ. ನನ್ನ ವೈಯಕ್ತಿಕ ಕೇಸನ್ನು ಹಿಂಪಡೆಯುವಂತೆ ನಾನು ಮುಖ್ಯಮಂತ್ರಿಗಳನ್ನು ಕೋರುವುದಿಲ್ಲ’ ಎಂದು ಹೇಳಿ ಪತ್ರವನ್ನು ಮರಳಿಸಿದರು.

ಅನಂತಕುಮಾರ್ ಈ ದೇಶ ಕಂಡ ಅಪರೂಪದ ರಾಜಕಾರಣಿ. ಬಹುಮುಖ ವ್ಯಕ್ತಿಿತ್ವ. ಸಾಹಿತ್ಯ, ಸಂಗೀತ ಕಲೆಗಳಲ್ಲಿ ಆಸಕ್ತಿಿ. ಉತ್ತಮ ವಾಗ್ಮಿಿ. ಹಾಸ್ಯ ಭರಿತ ಸಂಭಾಷಣೆಗಳೊಂದಿಗೆ ಜನರನ್ನು ರಂಜಿಸಬಲ್ಲ ಕುಶಲ ಮಾತುಗಾರ. ದೇಶದ ರಾಜಕಾರಣದಲ್ಲಿ ಹತ್ತು ವಿವಿಧ ಖಾತೆಗಳನ್ನು ನಿಭಾಯಿಸಿದ ಅಪರೂಪದ ಆಡಳಿತಗಾರ. ಹೀಗೆ ಒಬ್ಬೊೊಬ್ಬರಿಗೆ ಅವರ ಒಂದೊಂದು ಮುಖದ ಪರಿಚಯ. ಇಂದಿಗೆ ಅನಂತಕುಮಾರ ಸ್ವರ್ಗಸ್ಥರಾಗಿ ಒಂದು ವರ್ಷ ಕಳೆದಿದೆ. ಅವರ ವ್ಯಕ್ತಿಿತ್ವದ ಕೆಲ ಮುಖಗಳು ಇಲ್ಲಿವೆ.

ಅನಂತಕುಮಾರ್ ಶಾಲೆಯಲ್ಲಿದ್ದಾಾಗಿನ ಘಟನೆ. ಎಲ್ಲ ಶಾಲೆಗಳಲ್ಲಿ ಕೇಳುವಂತೆ ಶಿಕ್ಷಕರು ಮಕ್ಕಳನ್ನು ನೀವೇನಾಗ ಬಯಸುತ್ತೀರಿ ಎಂದು ಕೇಳಿದರು. ಒಬ್ಬೊೊಬ್ಬರದು ಒಂದೊಂದು ಉತ್ತರ. ಬಸ್ ಕಂಡಕ್ಟರ್, ಪೈಲಟ್, ರೈಲು ಡ್ರೈವರ್, ಟೀಚರ್ ಹೀಗೆ ಅನಂತಕುಮಾರ್ ಸರದಿ ಬಂದಾಗ ಎದ್ದು ನಿಂತು, *ಠಿಟ ್ಕ್ಠ್ಝಛಿ ಟಛ್ಟಿಿ ಠಿಛಿ ಠಿಛ್ಟ್ಟಿಿಜಿಠಿಟ್ಟಜಿಛಿ ಎಂದಾಗ ಶಿಕ್ಷಕರೇ ತಬ್ಬಿಿಬ್ಬಾಾಗುವ ಸರದಿ. (ಸ್ವತಃ ಅನಂತಕುಮಾರ ಹೇಳಿದ್ದು).

ಅನಂತಕುಮಾರ್ ವಿದ್ಯಾಾರ್ಥಿ ಪರಿಷತ್‌ನಲ್ಲಿದ್ದ ಸಮಯ. ಆಗಿನ ಕರ್ನಾಟಕ ವಿಶ್ವವಿದ್ಯಾಾಲಯ ಕುಲಪತಿ ಶ್ರೀ. ಡಿ.ಎಂ.ನಂಜುಂಡಪ್ಪನವರು ಪರೀಕ್ಷೆೆಗಳನ್ನು ಸಮಯಕ್ಕೆೆ ಸರಿಯಾಗಿ ನಡೆಸುವುದಾಗಿ ಘೋಷಿಸಿ ವೇಳಾಪಟ್ಟಿಯನ್ನೂ ಪ್ರಕಟಿಸಿದರು. ಸಾಮಾನ್ಯವಾಗಿ ಪರೀಕ್ಷೆೆಗಳನ್ನು ಮುಂದೂಡುವಂತೆ ಮಾಡುವ ಪ್ರತಿಭಟನೆಗಳು ಸಾಮಾನ್ಯ ಸಂಗತಿ. ಆದರೆ ಅನಂತಕುಮಾರ್ ವಿದ್ಯಾಾರ್ಥಿ ಸಮುದಾಯದ ಮುಂದೆ ಭಾಷಣ ಮಾಡಿ ಸಮಯಕ್ಕೆೆ ಸರಿಯಾಗಿ ಪರೀಕ್ಷೆೆಗಳು ನಡೆಯುವುದು ಅವಶ್ಯಕವೆಂದೂ ಹಾಗೂ ಈ ರೀತಿ ಪರೀಕ್ಷೆೆಗಳನ್ನು ಮುಂದೂಡುವುದು ಸರಿಯಲ್ಲವೆಂದು ತಿಳಿಸಿ ವಿದ್ಯಾಾರ್ಥಿಗಳ ಪ್ರತಿಭಟನೆಯನ್ನು ರದ್ದು ಪಡಿಸಿದ್ದು ಈಗ ಇತಿಹಾಸ. ಆದರೆ ತನಗೆ ಸರಿ ಕಂಡದ್ದನ್ನು ಖಡಾಖಂಡಿತವಾಗಿ ಹೇಳುವ ಗುಣ ಅವರಲ್ಲಿ ಆಗಲೇ ಎದ್ದು ಕಾಣುತ್ತಿಿತ್ತು. *ಛಿ ಠ್ಟ್ಠಿಿಛಿ ್ಝಛಿಛ್ಟಿಿ ಜಿ ಠಿಛಿ ಟ್ಞಛಿ ಡಿಟ ಠಿಛಿ ಛಿಟ್ಝಛಿ ್ಞಟಠಿ ಡಿಛ್ಟಿಿಛಿ ಠಿಛಿ ಡ್ಞಿಠಿ ಠಿಟ ಜಟ ಚ್ಠಿಿಠಿ ಡಿಛ್ಟಿಿಛಿ ಠಿಛಿ ಟ್ಠಜಠಿ ಠಿಟ ಚಿಛಿ ಎನ್ನುವುದಕ್ಕೆೆ ಸರಿಯಾದ ಉದಾಹರಣೆ.

ಆಗ ಜೋಧ್‌ಪುರದಲ್ಲಿ ಶ್ರೀಮತಿ ವಸುಂಧರಾ ರಾಜೆ ಅವರ ಆಹ್ವಾಾನದ ಮೇರೆಗೆ ‘ಅದಮ್ಯ ಚೇತನ’ ಮಧ್ಯಾಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ಪ್ರತಿ ನಿತ್ಯ 70,000 ಮಕ್ಕಳಿಗೆ ನೀಡಲು ಸಿದ್ಧವಾಗುತ್ತಿಿದ್ದ ಸಮಯ. ಜೋಧ್‌ಪುರದಲ್ಲಿ ಹೊಸ ಅಡುಗೆ ಮನೆಗೆ ಪಾತ್ರೆೆ, ವಾಹನ ಇತ್ಯಾಾದಿಗಳ ಅವಶ್ಯಕತೆ ಇತ್ತು. ಬೆಂಗಳೂರಿನಲ್ಲಿ ವಾಸಿಸುತ್ತಿಿರುವ ಜೋಧ್‌ಪುರದ ಜೈನ ಬಾಂಧವರ ಒಂದು ಕಾರ್ಯಕ್ರಮ ಆಯೋಜಿಸಿ ಅದರಲ್ಲಿ ಈ ಪ್ರಕಲ್ಪಕ್ಕೆೆ ಬೇಕಾಗುವ ಹಣ ಸಂಗ್ರಹಣೆ ಮಾಡುವುದೆಂದು ಯೋಜನೆ ಆಗಿತ್ತು. ಆ ಕಾರ್ಯಕ್ರಮದಲ್ಲಿ ಒಬ್ಬ ಮಹನೀಯರು 70,000 ಮಕ್ಕಳಿಗೆ 70 ಲಕ್ಷ ಆಗಲೇ ನೀಡುವುದಾಗಿ ಘೋಷಣೆ ಮಾಡಿದರು. ಆಗ ಅನಂತಕುಮಾರ್ ಕೇಂದ್ರ ಮಂತ್ರಿಿಯಾಗಿದ್ದರು. ಅವರು ತಕ್ಷಣ ಎದ್ದು ನಿಂತು ಯಾವುದೇ ಸಾರ್ವಜನಿಕ ಸಂಸ್ಥೆೆ ಒಬ್ಬರಿಂದಲೇ ಇಷ್ಟು ದೊಡ್ಡ ಮೊತ್ತದ ಹಣ ಸ್ವೀಕರಿಸುವುದು ಯೋಗ್ಯವಲ್ಲವೆಂದು ನಯವಾಗಿ 70 ಲಕ್ಷ ರುಪಾಯಿಗಳನ್ನು ನಿರಾಕರಿಸಿದರು. ಒಬ್ಬರು 70 ಲಕ್ಷ ರುಪಾಯಿಗಳನ್ನು ನೀಡುವುದಕ್ಕೆೆ ಸಿದ್ಧರಾಗಿದ್ದೂ ಹಾಗೂ 70 ಲಕ್ಷ ರುಪಾಯಿಗಳನ್ನು ಬೇಡವೆಂದು ನಿರಾಕರಿಸಿದ ಅಪರೂಪದ ಘಟನೆಗೆ ಆ ಸಮಾರಂಭ ಸಾಕ್ಷಿಿಯಾಯಿತು.

ಅನಂತಕುಮಾರ್ ಕೇಂದ್ರ ಮಂತ್ರಿಿಯಾಗಿದ್ದಾಾಗ, ಕಾವೇರಿ ಸಮಸ್ಯೆೆಯ ಪರಿಹಾರಕ್ಕಾಾಗಿ ವಿಶೇಷ ಶ್ರಮವಹಿಸಿ ಕರ್ನಾಟಕದ ಮೇಲಿದ್ದ ತೂಗುಗತ್ತಿಿಯನ್ನು ನಿವಾರಿಸಿದ್ದರು. ಆಗ ಮುಖ್ಯಮಂತ್ರಿಿಗಳಾಗಿದ್ದ ಎಸ್.ಎಂ.ಕೃಷ್ಣ ಹಾಗೂ ಅನಂತಕುಮಾರ್ ಮಧ್ಯೆೆ ಒಂದು ಸೌಹಾರ್ದಯುತ ಸ್ನೇಹ ಏರ್ಪಟ್ಟಿಿತ್ತು. ಖುದ್ದು ಎಸ್.ಎಂ.ಕೃಷ್ಣ ಅನಂತಕುಮಾರರ ದೆಹಲಿ ಮನೆಗೆ ಹೋಗಿ ಕರ್ನಾಟಕದ ಅಪದ್ಬಾಾಂಧವ ಎಂದು ಹೊಗಳಿದ ಅಪರೂಪದ ಕಾಲಘಟ್ಟ.

ಆಗ ನಮ್ಮ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ವಿವಿಧ ಪೊಲೀಸ್ ಕೇಸ್‌ಗಳನ್ನು ಕೈ ಬಿಡುವಂತೆ ಕೋರಿ ಪತ್ರ ಬರೆಯುವುದು ಎಂದೂ ಹಾಗೂ ಅವುಗಳನ್ನು ಕರ್ನಾಟಕದ ಮಂತ್ರಿಿ ಮಂಡಲದ ಮುಂದೆ ಅನುಮೋದನೆ ಪಡೆದು ಬಿ ರಿಪೋರ್ಟ್ ಹಾಕಿಸುವುದೆಂದು ನಿರ್ಧರಿಸಲಾಯಿತು. ಈ ಬಹುತೇಕ ಕೇಸುಗಳು ರಾಜಕೀಯ ಪ್ರತಿಭಟನೆ ಹಾಗೂ ರಾಜಕೀಯ ಕಾರಣಗಳಿಗಾಗಿ ನಮ್ಮ ಕಾರ್ಯಕರ್ತರ ಮೇಲೆ ದಾಖಲಾಗಿದ್ದು ಅವುಗಳಲ್ಲಿ ಸತ್ಯಾಾಂಶಗಳಿರಲಿಲ್ಲ.

ಆದರೆ ನಮ್ಮ ಕಾರ್ಯಕರ್ತರು ಕೋರ್ಟುಗಳಿಗೆ ವಿನಾ ಕಾರಣ ಅಲೆದಾಡುವುದನ್ನು ತಪ್ಪಿಿಸಲು ಈ ಕ್ರಮ ಅವಶ್ಯವಿತ್ತು. ನಾನು ಹಾಗೂ ಅಡ್ವೋೋಕೇಟ್ ದೊರೈರಾಜು ಈ ಪಟ್ಟಿಿಯನ್ನು ಸಿದ್ಧಪಡಿಸಿ ಆಗಿನ ಮುಖ್ಯ ಕಾರ್ಯದರ್ಶಿಗಳ ಮುಖಾಂತರ ಕ್ರಮಕ್ಕಾಾಗಿ ಕಳಿಸಲಾಯಿತು.

ಆಗ ಅನಂತಕುಮಾರ್ ಮೇಲೆಯೂ ಒಂದು ಕೇಸು ನಡೆಯುತ್ತಿಿತ್ತು. ಅಮಿತಾಬ್ ಬಚ್ಚನ್‌ರ ಬೆಂಗಳೂರು ಕಾರ್ಯಕ್ರಮದ ವಿರುದ್ಧ ನಡೆದ ಪ್ರತಿಭಟನೆಯ ಕೇಸ್. ಈ ಕೇಸನ್ನು ಕೂಡ ಕೈ ಬಿಡುವಂತೆ ಮುಖ್ಯಮಂತ್ರಿಿಗಳಿಗೆ ಪತ್ರ ಸಿದ್ಧಪಡಿಸಿದೆ. ಅನಂತಕುಮಾರ್ ಏರ್‌ಪೋರ್ಟ್‌ಗೆ ಹೋಗುವಾಗ, ಸಾಮಾನ್ಯವಾಗಿ ಪತ್ರಗಳಿಗೆ ಸಹಿ ಹಾಕುವುದು ವಾಡಿಕೆ. ಪತ್ರ ಸಹಿಯಾಗದೇ ಮರಳಿ ಬಂತು. ಮುಂದಿನ ವಾರ ಏರ್‌ಪೋರ್ಟ್ ಹೊರಟಾಗ ನಾನೇ ಕಾರಿನಲ್ಲಿ ಪತ್ರ ಸಹಿ ಹಾಕಿಸಿ ತರುವುದೆಂದು ಅವರ ಜತೆ ಹೊರಟೆ. ನಾನು ಯಥಾ ಪ್ರಕಾರ ಸಹಿ ಹಾಕಿಸಲು ನೀಡಿದಾಗ, ‘ಇನಾಂದಾರ್‌ರೇ ನಾನು ಈ ಪತ್ರಕ್ಕೆೆ ಸಹಿ ಹಾಕುವುದಿಲ್ಲ. ಕೋರ್ಟಿನಲ್ಲಿ ಈ ಕೇಸ್‌ನ್ನು ಎದುರಿಸುತ್ತೇನೆ. ನನ್ನ ವೈಯಕ್ತಿಿಕ ಕೇಸನ್ನು ಹಿಂಪಡೆಯುವಂತೆ ನಾನು ಮುಖ್ಯಮಂತ್ರಿಿಗಳನ್ನು ಕೋರುವುದಿಲ್ಲ’ ಎಂದು ಹೇಳಿ ಪತ್ರವನ್ನು ಮರಳಿಸಿದರು.

ಅನಂತಕುಮಾರ್ 6 ಬಾರಿ ಲೋಕಸಭಾ ಸದಸ್ಯರಾಗಿದ್ದರು. ಬಿಡಿಎ ಇಂದ ವಿಶೇಷ ಕೋಟಾದಡಿ ಅವರಿಗೆ ನಿವೇಶನ ಪಡೆಯುವ ಸವಲತ್ತು ಇತ್ತು. ಅದಕ್ಕೆೆ ಸಂಬಂಧಿಸಿದ ಅರ್ಜಿಯನ್ನು ಪತ್ನಿಿ ಶ್ರೀಮತಿ ತೇಜಸ್ವಿಿನಿಯವರು ಸಿದ್ಧಪಡಿಸಿದಾಗ ಅವರು ಅದಕ್ಕೆೆ ಸಹಿ ಹಾಕಲು ನಿರಾಕರಿಸಿದರು. ನನಗೆ ಏನಾದರೂ ಬೇಕೆಂದು ಕೋರುವ ಯಾವುದೇ ಮನವಿಗೆ ನಾನು ಸಹಿ ಹಾಕುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.