Thursday, 3rd October 2024

ಆರ್ಯನ್ ಪ್ರಕರಣದಲ್ಲಿ ಕಲಿಯಬೇಕಾದ ಪಾಠಗಳು

ವಿಶ್ಲೇಷಣೆ

ಕರಣ್ ಥಾಪರ್‌

ಅಸಮರ್ಥನೀಯ ದಸ್ತಗಿರಿ ನಡೆದಾಗ ನಷ್ಟಭರ್ತಿ ಮಾಡುವುದಕ್ಕೆ ಕಾನೂನಾತ್ಮಕ ಹಕ್ಕು ಇರಬೇಕು ಮತ್ತು ಪೊಲೀಸ್ ವಿಚಾರಣಾ ಏಜೆನ್ಸಿಗಳಿಗೆ ತನಿಖೆ ವೇಳೆ ದಸ್ತಗಿರಿ ಮಾಡುವ ಅಧಿಕಾರವಿದ್ದರೂ, ಅವರದನ್ನು ತರಾತುರಿಯಲ್ಲಿ ಮಾಡ ಬಾರದು.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಆರ್ಯನ್ ಖಾನ್‌ರನ್ನು ನಡೆಸಿಕೊಂಡ ರೀತಿಯ ಬಗ್ಗೆ ಅಚ್ಚರಿ ಪಡಬೇಕಾದದ್ದು ಏನೂ ಇಲ್ಲ. ಸಹಸ್ರಾರು ಮಂದಿ ಭಾರತೀಯರನ್ನು ನಮ್ಮ ಭಾರತೀಯ ತನಿಖಾ ಸಂಸ್ಥೆಗಳು ಅಷ್ಟೇ ಕೀಳಾಗಿ ನಡೆಸಿಕೊಂಡ ಉದಾಹರಣೆಗಳಿವೆ. ಅಂತಹ ಅನುಭವಗಳು ನಮ್ಮವರಿಗೆ ಆದಾಗ ನಾವು ಆಘಾತಕ್ಕೆ ಒಳಗಾಗುತ್ತೇವೆ.

ಅದೆಲ್ಲವೂ ಬೂಟಾಟಿಕೆ ಎಂಬುದೂ ನನ್ನ ಅರಿವಿನಲ್ಲಿದೆ. ಅದೊಂದು ಕ್ರೂರ ಎಚ್ಚರಿಕೆ ಎಂಬುದನ್ನು ನಾವ್ಯಾರೂ ಅಲ್ಲಗಳೆಯ ಲಾಗದು. ಆ ಕಾರಣಕ್ಕಾಗಿಯೇ ನಾನು ಈ ಲೇಖನ ವನ್ನು ಬರೆಯುತ್ತಿದ್ದೇನೆ. ನಾನು ಇಲ್ಲಿ ಉಲ್ಲೇಖಿಸಬೇಕಾಗಿರುವ ಅಂಶ ಅದಲ್ಲ. ನನ್ನನ್ನು ಖಿನ್ನನಾಗಿಸುವ ಮತ್ತು ದಿಗ್ಭಮೆಗೆ ದೂಡುವ ಸಂಗತಿಯೆಂದರೆ ನಮ್ಮ ವ್ಯವಸ್ಥೆಗೆ ಸಾಕಷ್ಟು ಸಾಮರ್ಥ್ಯದ ಕೊರತೆ ಇದೆ. ಸರಕಾರದ ಇಲಾಖೆಗಳಿಂದಾಗುವ ಉದ್ದೇಶ ಪೂರ್ವಕ ತಪ್ಪು ಗಳಿಗೆ ಮತ್ತು ಅವರು ಕ್ಷಮೆಕೋರುವ ಪರಿಯನ್ನು ನಾನು ಉದಾರತೆ ಎಂದು ಭಾವಿಸಲಾರೆ.

ಪ್ರತಿ ಸಂಸ್ಥೆಯಲ್ಲೂ ತಪ್ಪುಗಳಾಗುವುದು ಸಹಜ ಎಂದು ನಾನು ಧೈರ್ಯದಿಂದ ಹೇಳಬ. ಆದರೆ ನಮ್ಮಗುತ್ತಿರುವ ತಪ್ಪುಗಳ ಪಾಲು ಬಹುದೊಡ್ಡದಿದೆ. ಆದರೆ ಇಂತಹದೊಂದು ಗುರುತರ ಪ್ರಮಾದ ಘಟಿಸಿದಾಗ ನೈತಿಕವಾಗಿ ಕ್ಷಮೆಯಾಚಿಸುವುದು ಕಡ್ಡಾಯ ಮತ್ತು ಅದರ ಹಾನಿ ತುಂಬಿಕೊಡುವ ಕೆಲಸವೂ ಆಗಬೇಕಲ್ಲವೇ? ಏನಾಯಿತು ಎಂಬುದರ ಕುರಿತು ಒಂದರೆ ಕ್ಷಣ ಯೋಚಿಸಿ. 24ರ ಹರೆಯದ ಯುವಕನೊಬ್ಬನನ್ನು ದಸ್ತಗಿರಿ ಮಾಡಿ ನಾಲ್ಕುವಾರಗಳ ಕಾಲ ಜೈಲಿನಲ್ಲಿಡಲಾಯಿತು.

ಆರೋಪಿಸಲಾದ ಕಾರಣಗಳು ಆಧಾರರಹಿತ, ಅಸಮರ್ಥನೀಯ ಮತ್ತು ಕಪೋಲಕಲ್ಪಿತ. ಅಂತಾರಾಷ್ಟ್ರೀಯ ಡ್ರಗ್ ದಂಧೆ ಯೊಂದರ ಭಾಗವಾಗಿದ್ದಾನೆ ಎಂದು ಆರೋಪಿಸಿ ಅನಿರ್ದಿಷ್ಟವಾದ ಡ್ರಗ್ ಪೆಡ್ಲಿಂಗ್ ಸಂಚಿನ ಆರೋಪ ಮಾಡಲಾಯ್ತು. ಮಾಧ್ಯಮಗಳಲ್ಲಿ ಹನಿಹನಿಯ ರೂಪದಲ್ಲಿ ಬಿತ್ತರವಾದ ಊಹಾತ್ಮಕ ಕಲ್ಪನೆಗಳು ಮತ್ತು ಉದ್ದೇಶ ಪೂರ್ವಕ ಕಲ್ಪಿತ ಆರೋಪ ಗಳು ಇದಕ್ಕೆ ಪೂರಕವಾದವು.

ಎನ್‌ಸಿಬಿ ಅಲ್ಲದೆ ಇನ್ನಾರು ಇದನ್ನೆಲ್ಲ ಮಾಡಲು ಸಾಧ್ಯ? ತನಿಖೆಗೆ ಯೋಗ್ಯವಾದ ಪ್ರಕರಣ ಇಲ್ಲದೇ ಇರುವುದು ಇಲ್ಲಿ ಎದ್ದು ಕಾಣುತ್ತದೆ. ಒಬ್ಬ ಯುವಕನ ಪ್ರತಿಷ್ಠೆ ಮತ್ತು ಗೌರವವನ್ನು ಹಾಳುಗೆಡಹುವ ಉದ್ದೇಶ ಅವರದಾಗಿತ್ತು ಎಂಬುದೇ ಇಲ್ಲಿ ಪ್ರಮುಖ ವಾಗಿ ಕಾಣಿಸುವ ಸಂಗತಿ. ಹಾಗಾಗಿ ಆತನ ಹೆಸರಿಗೆ ಮಸಿಬಳಿದು, ಸಾರ್ವಜನಿಕರನ್ನು ಪೂರ್ವಗ್ರಹಿತರನ್ನಾಗಿಸಿ, ನ್ಯಾಯಾಂಗ ವನ್ನು ಪ್ರಭಾವಿಸಿ, ಇಂತಹದೊಂದು ತಪ್ಪುಬಲೆ ಹೆಣೆಯುವುದು ತನಿಖಾ ಸಂಸ್ಥೆಯ ಉದ್ದೇಶವಾಗಿತ್ತೆನಿಸುತ್ತದೆ. ಆರೋಪಕ್ಕೆ ಪೂರಕವಾದ ಸಂಗತಿಗಳೇ ಅಲ್ಲಿರಲಿಲ್ಲ.

ದುರದೃಷ್ಟವಶಾತ್ ನಮ್ಮ ಮಾಧ್ಯಮಗಳು ಕೂಡ ಪ್ರತಿ ರಾತ್ರಿ ಟಿವಿ ಶೋಗಳ ಮೂಲಕ ಆಟವಾಡಿದವು. ಖಾನ್‌ಗಳ ವಿಷಯ ಟಿ.ವಿ.ಡಿಬೇಟ್‌ಗಳಲ್ಲಿ ಪ್ರತಿಸಂಜೆಯ ಕಾಯಂ ವಿಷಯವಾಗಿ ಹೋಯಿತು. ಬೆಳಗಿನ ಸುದ್ದಿಗಳಲ್ಲಿ, ವೃತ್ತ ಪತ್ರಿಕೆಗಳಲ್ಲಿ ಅವೆಲ್ಲವೂ ಮೊದಲ ಪುಟಕ್ಕೆ ಆಹಾರವಾದವು. ತಾವೇನು ವರದಿ ಮಾಡುತ್ತಿದ್ದೇವೋ ಅದಕ್ಕೆ ತಮ್ಮ ಬಳಿ ಪುರಾವೆ ಇಲ್ಲ ಎಂಬುದರ ಬಗ್ಗೆ ನ್ಯೂಸ್ ಚಾನೆಲ್‌ಗಳು ಮತ್ತು ವೃತ್ತಪತ್ರಿಕೆಗಳು ಕಿಂಚಿತ್ತೂ ಯೋಚಿಸಲಿಲ್ಲ.

ಯರ್ಯಾರೋ ಅನಾಮಧೇಯ ಅಧಿಕಾರಿಗಳ ಮೂಲದಿಂದ ಬಂದ ಸುದ್ದಿಯೆಂದು ಕಲ್ಪಿತ ಸಂಗತಿಗಳ ವರ್ಣರಂಜಿತ ಕಥೆ ಸೃಷ್ಟಿಸ ಲಾಯಿತು. ಆದರೆ ಯಾರಿಗೂ ಸತ್ಯಾಸತ್ಯತೆ ಏನೆಂದು ಬಹಿರಂಗಗೊಳಿಸುವ ಧೈರ್ಯವಿರಲಿಲ್ಲ. ಅಂತಹ ಊಹಾತ್ಮಕ ವರದಿ, ವಿಶ್ಲೇಷಣೆಗಳು ಅಕ್ಷಮ್ಯ. ಎನ್ ಸಿಬಿ ಹೆಸರಿನಲ್ಲಿ ದುರುದ್ದೇಶಪೂರಿತ ಸಂಗತಿಗಳ ಪ್ರಸರಣಕ್ಕೆ ಮಾಧ್ಯಮ ಕೂಡ ಕಾರಣ ವಾಯಿತು. ಹಾಗಿದ್ದರೆ ಹೇಳಿ, ಕ್ಷಮೆ ಕೇಳುವಂತೆ ಆಗ್ರಹಿಸುವ ಹಕ್ಕು ಖಾನ್‌ಗೆ ಇಲ್ಲವೇ? ಅವರಿಗಾದ ಹಾನಿಗೆ ನಷ್ಟಭರ್ತಿ ಮಾಡಿ ಕೊಡಬೇಕಲ್ಲ.

ಎನ್‌ಸಿಬಿಯಿಂದ ಮಾತ್ರವಲ್ಲ, ಮಾಧ್ಯಮದಿಂದಲೂ ಕೂಡ ಅದಾಗಬೇಕಿದೆ. ಎನ್‌ಸಿಬಿಯ ಡೈರೆಕ್ಟರ್ ಜನರಲ್ ಎಸ್. ಎನ್. ಪ್ರಧಾನ್ ಪ್ರತಿಕ್ರಿಯಿಸಿ ಪ್ರಾಥಮಿಕ ತನಿಖಾ ಹಂತದಲ್ಲಿ ತಪ್ಪುಗಳಾಗಿವೆ, ಅಲ್ಲಿ ಅಕ್ರಮಗಳಾಗಿವೆ, ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿzರೆ. ನಮ್ಮ ಮಾಧ್ಯಮ ಎನ್ ಡಿಟಿವಿ ಮೂಲಕ ಅವರನ್ನು ಸಂಪರ್ಕಿಸಿ ದಸ್ತಗಿರಿ ಸಮರ್ಥ
ನೀಯವೇ ಎಂದು ಕೇಳಿದಾಗ ತನಿಖೆ ನಡೆಸಿದಾಗಲೇ ಸಂಬಂಧಪಟ್ಟ ವಿಚಾರಗಳು ಹೊರಬರುವುದು. ಹಾಗಾಗಿ ತನಿಖಾ ನಡ ವಳಿಕೆಗಳ ಮೇಲೆ ದೋಷಾರೋಪಣೆ ಮಾಡಲು ನಾನು ಬಯಸುವುದಿಲ್ಲ ಎಂದವರು ಹೇಳಿದ್ದರು.

ತನ್ನ ನಡವಳಿಕೆಯಲ್ಲಿ ಇಷ್ಟೊಂದು ವಿರೋಧಾಭಾಸಗಳನ್ನು ಹೊಂದಿರುವ ಇನ್ನೊಬ್ಬ ವ್ಯಕ್ತಿಯನ್ನು ನಾನು ಸದ್ಯೋಭವಿಷ್ಯ ದಲ್ಲಿ ಕಂಡಿಲ್ಲ. ಖಾನ್ ಅವರ ವಕೀಲ ಮತ್ತು ಭೂತಪೂರ್ವ ಅಟಾರ್ನಿ ಜನರಲ್ ಆಗಿ ಖ್ಯಾತಿ ಪಡೆದಿರುವ ಮುಕುಲ್ ರೋಹಟಗಿ
ನನ್ನೊಂದಿಗೆ ಮಾತನಾಡಿ ಇಂತಹ ವಿಷಾದನೀಯ ಪ್ರಕರಣದಿಂದ ನಾವು ಎರಡು ಪಾಠಗಳನ್ನು ಕಲಿಯಬೇಕಾಗಿದೆ ಎಂದು ಹೇಳಿದರು. ಏನೆಂದು ಕೇಳಿದಾಗ ಅವರು, ಅಸಮರ್ಥನೀಯ ದಸ್ತಗಿರಿ ನಡೆದಾಗ ನಷ್ಟಭರ್ತಿ ಮಾಡುವುದಕ್ಕೆ ಕಾನೂನಾತ್ಮಕ ಹಕ್ಕು ಇರಬೇಕು. ಮತ್ತು ಪೊಲೀಸ್ ವಿಚಾರಣಾ ಏಜೆನ್ಸಿಗಳಿಗೆ ತನಿಖೆ ವೇಳೆ ದಸ್ತಗಿರಿ ಮಾಡುವ ಅಧಿಕಾರವಿದ್ದರೂ, ಅವರದನ್ನು ತರಾತುರಿಯಲ್ಲಿ ಮಾಡಬಾರದು.

ನಿಮ್ಮ ಮುಂದೆ ಒಂದು ಪ್ರಕರಣವಿದ್ದು ಇದೇ ರೀತಿ ದಸ್ತಗಿರಿ ಆದರೆ ಏನು ಮಾಡುವುದು ಎಂಬುದನ್ನು ಒಮ್ಮೆ ಯೋಚಿಸಿ ನೋಡಿ. ಇನ್ನೊಬ್ಬ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ.
ಪ್ರಾಥಮಿಕ ತನಿಖೆ ನಡೆಸಿದ ಸಮೀರ್ ವಾಂಖೆಡೆ ಹೆಸರನ್ನು ಉಲ್ಲೇಖಿಸಿ ಅವರು ಹೇಳುತ್ತಾರೆ – ಇಂತಹ ದುರುದ್ದೇಶಪೂರಿತ ಕ್ರಮಗಳು ನಡೆಸಿದವರ ಮೇಲೆ ಕ್ರಮ ಜರುಗಿಸಿದರೆ ಮುಂದೆ ಇಂತಹ ಪ್ರಕರಣಗಳು ನಡೆಯಲಾರವು.

ಇಂತಹ ಸಂಗತಿಗಳನ್ನು ತಡೆಯುವುದಕ್ಕೆ ಶಿಕ್ಷೆಯೊಂದೇ ನಿರೋಧಕ ಕ್ರಮವೆಂದು ನಂಬುವವರು ಭೂಷಣ್ ಒಬ್ಬರೇ ಅಲ್ಲ,
ತತ್ವಜ್ಞಾನಿ ಮತ್ತು ಚಿಂತಕ ವೋಲ್ಟೇರ್ ತನ್ನ ಕೃತಿ ‘ಕ್ಯಾಂಡೈಡ್ ’ನಲ್ಲಿ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲನಾದ ಬಿಂಜ್‌ಗೆ
ಮರಣದಂಡನೆ ವಿಧಿಸುವ ಬಗ್ಗೆ ಸ್ಮರಣಾರ್ಹ ನುಡಿಗಟ್ಟನ್ನು ಬರೆದಿದ್ದಾರೆ. ಬಹುಶಃ ಅದು ಇಲ್ಲಿಗೆ ಸೂಕ್ತವಾಗಿ ಅನ್ವಯವಾಗು ತ್ತದೆ ಎಂಬುದು ನನ್ನ ಭಾವನೆ