Friday, 20th September 2024

ಬ್ಯಾಾಂಕಿಂಗ್: ಖಾಸಗೀಕರಣದ ಯೋಚನೆ ಸಮಂಜಸವೇ?

ಅಭಿಮತ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಸಾ್ವತಂತ್ರ್ಯ ಪಡೆದಂದಿನಿಂದಲೂ ಸಾರ್ವಜನಿಕರ ಬೇಡಿಕೆಯಾಗಿದ್ದ ಬ್ಯಾಾಂಕ್ ರಾಷ್ಟ್ರೀಕರಣವು 1969ರಲ್ಲಿ ಅಂದಿನ ಸರಕಾರದ ಐತಿಹಾಸಿಕ ನಿರ್ಣಯದೊಂದಿಗೆ ಸಾಕಾರ ವಾಯಿತು. ಸಮಾಜದ ವಿಶಿಷ್ಟ ಶ್ರೇಣಿಯ ಉದ್ಯಮಿಗಳಿಗೆ ಸೀಮಿತವಾಗಿದ್ದ ಬ್ಯಾಾಂಕ್ ಸಾಮಾನ್ಯ ವರ್ಗದವರ ಬ್ಯಾಾಂಕಾಯಿತು.

1969 ಮತ್ತು1980ರಲ್ಲಿ ಎರಡು ಹಂತಗಳಲ್ಲಿ ದೇಶದ ಪ್ರಮುಖ 20 ಬ್ಯಾಾಂಕ್‌ಗಳು ರಾಷ್ಟ್ರೀಕರಣಗೊಂಡವು. ಆ ಸಂದರ್ಭದಲ್ಲಿ
ಜನರಿಗೆ ಬ್ಯಾಾಂಕ್‌ಗಳು ತಮ್ಮದೇ ಬ್ಯಾಾಂಕ್‌ಗಳು ಎಂಬ ಮನೋಭಾವನೆ ಮೂಡಿತು. ರಾಷ್ಟ್ರೀಕರಣದ ಪ್ರಮುಖ ಉದ್ದೇಶವೇನೆಂದರೆ ಖಾಸಗೀ ಕ್ಷೇತ್ರದ ಒಡೆತನದಲ್ಲಿದ್ದ ಬ್ಯಾಾಂಕ್ ಗಳು ದೇಶದ ಆರ್ಥಿಕ ನೀತಿಗೆ ಪೂರಕವಾಗಿ ವ್ಯವಹಾರ
ನಡೆಸುತ್ತಿಲ್ಲವೆಂಬುದಾಗಿತ್ತು ಮತ್ತು ಅವುಗಳು ಸಾಮಾಜಿಕ ಉದ್ದೇಶಗಳನ್ನು ಹೊಂದಿರಬೇಕು ಮತ್ತು ರಾಷ್ಟ್ರದ ಆರ್ಥಿಕ ನೀತಿಯ ಆದ್ಯತೆಯ ಉದ್ದೇಶಗಳಾದ ಕೃಷಿ ವಲಯ, ಸಣ್ಣ ಕೈಗಾರಿಕೆ, ಉದ್ಯೋಗ, ರಫ್ತು ರಂಗಗಳ ಅಭಿವೃದ್ಧಿಗೆ ಪೂರಕವಾಗ ಬೇಕೆಂಬು ದಾಗಿತ್ತು. ರಾಷ್ಟ್ರೀಕರಣವಾದ ಮೇಲೆ ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಆದ್ಯತಾ ರಂಗಕ್ಕೆ ಪ್ರೋತ್ಸಾಹ, ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಯಿಂದ ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಾಕಾರವಾಯಿತು. ಆದರೆ ಸರಕಾರ ನಿರೀಕ್ಷಿಸಿದಷ್ಟು ಮತ್ತು ಜನರು ಆಶಿಸಿದಷ್ಟು ಈ ರಾಷ್ಟ್ರೀಕೃತ ಬ್ಯಾಾಂಕ್‌ಗಳಿಂದ ದೊರೆಯಲಿಲ್ಲವೆಂಬ ಕೂಗು ಕೇಳಿ ಬರುತ್ತಿತ್ತು. ಆದರೂ ಬ್ಯಾಾಂಕ್ ಹಳ್ಳಿಹಳ್ಳಿ ಗಳಿಗೂ ವಿಸ್ತರಿಸುವ ಮೂಲಕ ಶೇ. 40ರಷ್ಟು ಆದ್ಯತಾ ರಂಗಕ್ಕೆ ಸಾಲ ಮೀಸಲಿಡುವ ಮುಖಾಂತರ ಕ್ಲಾಸ್ ಬ್ಯಾಾಂಕಿಂಗ್ ಮಾಸ್ ಬ್ಯಾಾಂಕಾಗಿ ಪರಿವರ್ತನೆಗೊಂಡಿತು.

ಬ್ಯಾಾಂಕ್ ರಾಷ್ಟ್ರೀಕರಣದಿಂದ ಆಗಿನ ಸಮಾಜಕ್ಕೆ ಅನುಕೂಲವಾಗುವಂತಹ ವಾತಾವರಣ ಸೃಷ್ಟಿಯಾದದ್ದು ನಿಜ. ಆದರೆ ಕಾಲಕಳೆದಂತೆ ಸರಕಾರಿ ವಶ ದಲ್ಲಿರುವ ಬ್ಯಾಾಂಕ್ ಗಳ ಆಳ್ವಿಕೆಯಲ್ಲಿ ಬಾಹ್ಯ ಶಕ್ತಿಗಳ ಜತೆಗೆ ರಾಜಕೀಯ ಶಕ್ತಿಗಳ ಒತ್ತಡವೂ ಸೇರಿ ಉದ್ದೇಶಿತ ಗುರಿ ದಾರಿ ತಪ್ಪಿತು. ಇದು ಬ್ಯಾಾಂಕ್‌ಗಳ ಆರೋಗ್ಯ ಸ್ಥಿತಿಯ ಮೇಲೆ ಆಗಾಧ ಹಾನಿಯನ್ನುಂಟು ಮಾಡಿತು. ಇದರೊಂದಿಗೆ ಬ್ಯಾಾಂಕ್ ಸೇವೆಯೂ ಜನರ ಅಪೇಕ್ಷೆಯ ಮಟ್ಟ ತಲುಪಲಿಲ್ಲ. ಅದೇ ಸಂದರ್ಭದಲ್ಲಿ ಇಡೀ ಜಗತ್ತು ಖಾಸಗೀ ಕ್ಷೇತ್ರಕ್ಕೆ ರತ್ನಗಂಬಳಿ ಹಾಸಿದ ಸಂದರ್ಭದಲ್ಲಿ ಭಾರತ ಇನ್ನೂ ಸರಕಾರಿ ಆಶ್ರಿತ ಸಂಸ್ಥೆಗಳನ್ನು ಪ್ರೋತ್ಸಾಹಿಸುವಲ್ಲಿ  ಮಗ್ನವಾ ಗಿತ್ತು. ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಯನ್ನು ಒಪ್ಪಿಕೊಂಡ ನಂತರ ಹಣಕಾಸು ನೀತಿಯಲ್ಲಿ ಗಮನಾರ್ಹ ವಾದ ಬದಲಾವಣೆ ಅಗತ್ಯ ವಾಗಿತ್ತು. ಬ್ಯಾಾಂಕಿಂಗ್ ವ್ಯವಸ್ಥೆೆ ಬೃಹದಾಕಾರವಾಗಿ ಬೆಳೆದರೂ ದೊಡ್ಡ ಉದ್ದಿಮೆಗಳಿಗೆ ಬಂಡವಾಳ ಒದಗಿಸಲು ಸಾಧ್ಯವಾಗಲಿಲ್ಲವೆಂಬ ದೃಷ್ಟಿಯಿಂದ ರಿಸರ್ವ್ ಬ್ಯಾಾಂಕ್ 1993ರಲ್ಲಿ ಸಾರ್ವಜನಿಕ ವಲಯ  ಅಪೇಕ್ಷಿಸುವ ಸೇವೆ ಯನ್ನು ಒದಗಿಸುವ ನೆಲೆಯಲ್ಲಿ ರಾಷ್ಟ್ರೀಕರಣದ ಖಾಸಗೀ ಬ್ಯಾಾಂಕ್‌ಗಳ ಸ್ಥಾಪನೆಗೆ ಅನುಮತಿ ನೀಡಿತು.

ಮತ್ತು ಖಾಸಗೀಕರಣದ ಕಡೆಗೆ ದೃಷ್ಟಿ ಹೊರಳಿಸಬೇಕಾದದ್ದು ಅಂದಿನ ಸಮಯಕ್ಕೆ ಅನಿವಾರ್ಯ ವಾಯಿತು. ಇದರ ಪರಿಣಾಮ ದಿಂದ ವಿದೇಶೀ ಬಂಡವಾಳದ ಹೂಡಿಕೆಗೂ ಮುಕ್ತ ಅವಕಾಶ ದೊರೆಯಿತು. ಖಾಸಗಿ ಬ್ಯಾಾಂಕ್‌ಗಳು ಪ್ರಾರಂಭಿಕ ಮಟ್ಟದಲ್ಲಿಯೇ ಉಚ್ಚ ಮಟ್ಟದ ತಂತ್ರಜ್ಞಾನ, ಶೀಘ್ರ ಸೇವೆ, ಶೀಘ್ರ ಸಾಲ, ಬ್ಯಾಾಂಕ್ ಕಚೇರಿಗಳಲ್ಲಿನ ವಾತಾವರಣ ಸಾರ್ವಜನಿಕರಿಗೆ ಹಿತವೆನಿಸಿತು. ತನ್ಮೂಲಕ ಸಾರ್ವಜನಿಕ ಬ್ಯಾಾಂಕ್‌ಗಳೊಂದಿಗೆ ಸ್ಪರ್ಧೆಯುಂಟಾಗಿ ಅವುಗಳ ದಕ್ಷತೆಯೂ ಹೆಚ್ಚಿತು.

ದೇಶದ ಆರ್ಥಿಕ ವ್ಯವಸ್ಥೆೆಗನುಗುಣವಾಗಿ ಕಾಲಕಾಲಕ್ಕೆ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದ ಸರಕಾರ ಹೊಣೆವಹಿಸಿ ನಾಡಿನ ಕಲ್ಯಾಣಕ್ಕನುಗುಣವಾಗಿ ತೀರ್ಮಾನ ಗಳನ್ನು ತೆಗೆದುಕೊಳ್ಳಬೇಕಾದುದು ಅನಿವಾರ್ಯವಾಗುತ್ತದೆ.  ಸರಕಾರವು ನೀತಿ ನಿಯಮಗಳನ್ನು ಪರಾಮರ್ಶಿಸಿ ವೈಜ್ಞಾನಿಕವಾಗಿ ಹಣಕಾಸು ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಗಮನಾರ್ಹವಾದ ಮತ್ತು ಖಚಿತ ಬದಲಾವಣೆಗಳನ್ನು ತರಬೇಕಾಗುತ್ತದೆ.

ಇತ್ತೀಚೆಗೆ ಕೇಂದ್ರ ಸರಕಾರವು ಬ್ಯಾಾಂಕ್‌ಗಳ ವಿಲೀನ ಪ್ರಕ್ರಿಯೆಯನ್ನು ಕೈಗೊಂಡಿತ್ತು. ಮೂರು ಹಂತದ ವಿಲೀನೀಕರಣದ ನಂತರ ಸರಕಾರಿ ಸ್ವಾಮ್ಯದ ಬ್ಯಾಾಂಕ್‌ಗಳ ಸಂಖ್ಯೆೆ 12ಕ್ಕೆೆ ಇಳಿದಿದೆ. ಈಗ 5ಕ್ಕಿಿಂತ ಹೆಚ್ಚು ಸರಕಾರಿ ಬ್ಯಾಾಂಕ್ ಗಳ ಅಗತ್ಯವಿಲ್ಲ ವೆಂದು ಹಲವು ಆರ್ಥಿಕ ಸಮಿತಿಗಳು ವರದಿ ನೀಡಿದ್ದವು. ಬ್ಯಾಾಂಕ್‌ಗಳ ಗಾತ್ರ ಹೆಚ್ಚಿಸುವ ಅಗತ್ಯವಿದೆಯೆಂದು ಹೇಳಿ  ಬ್ಯಾಾಂಕ್‌ಗಳ ವಿಲೀನೀಕರಣವಾಯಿತು. ಇದರ ಹಿಂದೆ ಅಡಕವಾಗಿರುವ ಕಾರ್ಯಸೂಚಿ ಮತ್ತು ನಿಲುವು ಏನೆಂದರೆ
ಬ್ಯಾಾಂಕ್‌ಗಳ ಗಾತ್ರವು ದೊಡ್ಡದಾಗಿ ವಿದೇಶಿ ಬ್ಯಾಾಂಕ್ ಗಳೊಂದಿಗೆ ಪೈಪೋಟಿ ನಡೆಸುವ ಶಕ್ತಿಗನುಗುಣವಾಗಿ ಬ್ಯಾಾಂಕ್
ಗಳನ್ನು ಪುನಃ ರಚಿಸುವುದು ಮತ್ತು ಅದಲ್ಲದೆ ಇನ್ನೊೊಂದು ಅಜೆಂಡಾವೇನೆಂದರೆ ಬ್ಯಾಾಂಕ್‌ಗಳ ವ್ಯವಹಾರ ನಡೆಸುವುದು
ಸರಕಾರದ ಜವಾಬ್ದಾರಿಯಲ್ಲ ಎನ್ನುವ ನೀತಿ. ಅಂದರೆ ತನ್ಮೂಲಕ ಖಾಸಗೀಕರಣಗೊಳಿಸುವುದಾಗಿರುತ್ತದೆ. ಆದರೆ ವಿಲೀನೀಕರಣದ ಬಳಿಕ ಬ್ಯಾಾಂಕ್‌ಗಳ ಆಡಳಿತ ವ್ಯವಸ್ಥೆಗಳ ತೊಂದರೆಗಳನ್ನು ಸರಿಪಡಿಸುವುದೇ ದೊಡ್ಡ ಸಮಸ್ಯೆಯಾಗಿದೆ.
ಎಲ್ಲಾ ಬ್ಯಾಾಂಕ್‌ಗಳಲ್ಲಿ ಅನುತ್ಪಾದಕ ಆಸ್ತಿ ಇದೆ. ಇದು ಬ್ಯಾಾಂಕ್ ಗಳ ಲಾಭದ ಮೇಲೆ ತೀವ್ರ ಹೊಡೆತ ಉಂಟು ಮಾಡಿದೆ. ಈ
ಕರೋನಾ ಮಹಾಮಾರಿಯ ಆರ್ಭಟದಿಂದ ಸಾಲ ವಸೂಲಿಗೆ ಒತ್ತಡ ಹಾಕದಂತೆ ಆರ್‌ಬಿಐ ಸೂಚಿಸಿದೆ. ಸಾಲ ವಸೂಲಿ
ನಿಂತಿದೆ ಸುಸ್ತಿ ಸಾಲ ಬೆಳೆಯುತ್ತಿದೆ.

ರಾಷ್ಟ್ರೀಕೃತ ಬ್ಯಾಾಂಕ್‌ಗಳು ಒಟ್ಟು 124.38 ಬಿಲಿಯನ್ ಡಾಲರ್‌ನಷ್ಟು ಸಾಲ ನೀಡಿದ್ದು ಈಗ ಸಾಲದ ಸುಳಿಯಲ್ಲಿಸಿಕ್ಕಿವೆ. ಸುಸ್ತಿ ಸಾಲಗಳೆಂಬ ಸುಳಿಯಲ್ಲಿ ಒದ್ದಾಡುತ್ತಿವೆ. ವಸೂಲಾಗದ ಸಾಲಗಳಿಂದ ಬಳಲುತ್ತಿದ್ದು ಲಾಭಗಳಿಸಲು ಸಾಧ್ಯವಾಗುತ್ತಿಲ್ಲ. 2008ರಿಂದ 2019 ಹನ್ನೊೊಂದು ವರ್ಷಗಳ ಅವಧಿಯಲ್ಲಿ 3.15 ಲಕ್ಷ ಕೋಟಿ ಬಂಡವಾಳವನ್ನು ಸರಕಾರ ಬ್ಯಾಾಂಕ್‌ಗಳಿಗೆ ನೀಡಿದೆ. ಇದು ಅನುತ್ಪಾದಕ ಆಸ್ತಿಯ ನೇರ ಪರಿಣಾಮ ಈ ನೀತಿಯನ್ನು ಸರಕಾರ ಎಷ್ಟು ಸಮಯ ಅನುಸರಿಸಲು ಸಾಧ್ಯ. ಆದುದರಿಂದ ಸರಕಾರದ ಬಳಿ ಇರುವ ಏಕ ಮಾತ್ರ ದಾರಿ ಖಾಸಗೀಕರಣ. ಇದರಿಂದ ಸರಕಾರಕ್ಕೆ ದೊಡ್ಡ ಮೊತ್ತದ ಸಂಪತ್ತು ಲಭಿಸಲಿದೆ. ಆದ್ದರಿಂದ ಸರಕಾರದ ಬ್ಯಾಾಂಕ್ ಶೇರುಗಳನ್ನು ಖಾಸಗೀ ವಲಯಕ್ಕೆೆ ಹಸ್ತಾಾಂತರಿಸಿ ಸರಕಾರ  ತೊಳೆದುಕೊಳ್ಳುವ ಯೋಜನೆಯಲ್ಲಿದ್ದಂತೆ ಕಾಣುತ್ತಿದೆ.

ಬ್ಯಾಾಂಕ್‌ಗಳ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ದೃಷ್ಟಿಯಿಂದ ಆರ್‌ಬಿಐ ಮತ್ತು ಕೇಂದ್ರ ಹಣಕಾಸು ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಪರಿಸ್ಥಿತಿ ಸುಧಾರಿಸುವ ಬದಲು ಹದಗೆಡುತ್ತಿದೆ. ವಂಚನೆ ಮತ್ತು ಭ್ರಷ್ಟಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದೂ ಕೂಡಾ ಇಂದಿನ ಪ್ರಸಕ್ತ ಕೋವಿಡ್ ಸನ್ನಿವೇಶದಲ್ಲಿ ಆರ್‌ಬಿಐ ಬಡ್ಡಿದರವನ್ನು ಕಡಿಮೆ ಮಾಡಿದರೂ ಬ್ಯಾಾಂಕ್ ಅಧಿಕಾರಿಗಳು ಸಾಲ ನೀಡಲು ಹಿಂಜರಿಯುತ್ತಿದ್ದಾರೆ. ಗ್ರಾಹಕರೂ ಕೂಡಾ ಸಾಲಕ್ಕೆ ಮುಂದೆ ಬರುತ್ತಿಲ್ಲ. ವಸೂಲಿ ಪ್ರಕ್ರಿಯೆ ಪ್ರಸಕ್ತ ನೀತಿಯಿಂದ ಅಜಮಾನು ನಿಲುಗಡೆಯಾಗಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ವಿಲೀನವಾಗದ ಬ್ಯಾಾಂಕ್‌ಗಳನ್ನು ಒಂದು ವರ್ಷದೊಳಗೆ ಖಾಸಗೀಕರಣಗೊಳಿಸುವುದು ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಸರಕಾರ ಅಲ್ಲಗಳೆದಿದೆ.

ಖಾಸಗೀಕರಣಗೊಳಿಸಿ ಆರ್ಥಿಕ ಸುಧಾರಣೆ ತರಲು ಸಾಧ್ಯವೇ? ಅದರ ಬದಲು ಪ್ರಸಕ್ತ ಸನ್ನಿವೇಶದಲ್ಲಿ ಬ್ಯಾಾಂಕಿಂಗ್ ನೀತಿಯಲ್ಲಿ, ಸಾಲ ಮರುಪಾವತಿ ಮತ್ತು ವಸೂಲಿ ನೀತಿಯಲ್ಲಿ ಬದಲಾವಣೆಯನ್ನು ತಂದು ಬ್ಯಾಾಂಕಿಂಗ್ ಕ್ಷೇತ್ರವನ್ನು ಪ್ರಭಾವೀ ವ್ಯಕ್ತಿಗಳು ಮತ್ತು ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪದಿಂದ ದೂರವಿಟ್ಟು ಬಲಾಢ್ಯಗೊಳಿಸುವ ಕಾರ್ಯ ವಾಗಬೇಕು. ಅನುತ್ಪಾದಕ ಆಸ್ತಿಯಲ್ಲಿ ಶೇ.75ರಷ್ಟು ಸುಸ್ತಿ ಸಾಲ ಹೈಪ್ರೊಫೈಲ್ ಕಾರ್ಪೋರೇಟ್ ಕುಳಗಳದ್ದೇ ಆಗಿದೆ. ಬ್ಯಾಾಂಕ್‌ಗಳು ಸಾಲ ಕೊಡುವಾಗ ಹೊಣೆಗಾರಿಕೆ ಮತ್ತು ತತ್ವಗಳಿಗೆ ಬದ್ಧವಾಗಿರಬೇಕು. ಸಾಲಗಳ ಲಿಕ್ವಿಡಿಟಿ ಮತ್ತು ಸಾಲಕ್ಕೆ ಸರಿಯಾಗಿ ಪಡೆದ ಆಸ್ತಿಗಳನ್ನು ಹಣವಾಗಿ ಪರಿವರ್ತನೆ ಮಾಡುವಂತಿರಬೇಕು.

ಸಾಲದ ಉದ್ದೇಶ ರಚನಾತ್ಮಕವಾಗಿರ ಬೇಕೇ ಹೊರತು ಎಂದೂ ವಿನಾಶದ ಅಂಚಿಗೆ ತಲುಪು ವಂತಿರಬಾರದು. ಸಾಲ ವಸೂಲಿ ನ್ಯಾಯ ಮಂಡಳಿಗಳಲ್ಲಿ ವಸೂಲಾತಿಗೆ ಸಂಪೂರ್ಣ ಪರಿಹಾರ ಸಿಗುವಂತಿರಬೇಕು. ಉದ್ದೇಶಪೂರ್ವಕ ಸಾಲ ಮರು ಪಾವತಿಸದವರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದು ಕೊಳ್ಳುವುದು ಅಸಾಧ್ಯದ ಮಾತಲ್ಲ. ಖಾಸಗೀಕರಣವಾದರೆ ಲಾಭದ ದೃಷ್ಟಿಯೇ
ಪ್ರಮುಖವಾಗುತ್ತದೆ. ಬ್ಯಾಾಂಕ್ ಸಾಲ ನೀತಿ, ಅಗತ್ಯವಿಲ್ಲದವರಿಗೆ ಸಾಲ, ಆದ್ಯತಾ ರಂಗಗಳ ಕಡೆಗಣನೆ, ಸೇವಾಶುಲ್ಕ ಹೆಚ್ಚಳ, ದೊಡ್ಡ ಉದ್ದಿಮೆಗಳ ಬಗ್ಗೆೆ ಉತ್ತೇಜನ ನೀಡಿ, ಏಕಾಗ್ರತೆ ಬೀರಿದರೆ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ.

ಉದಾರೀಕರಣದ ಆರಂಭದಲ್ಲಿ ಹಲವಾರು ಖಾಸಗೀ ಬ್ಯಾಾಂಕ್ ಗಳು ಮುಳುಗುವ ಹಂತಕ್ಕೆ ತಲುಪಿದಾಗ ಗ್ರಾಹಕರ ಹಿತರಕ್ಷಣೆ
ಯ ದೃಷ್ಟಿಯಿಂದ ರಾಷ್ಟ್ರೀಕೃತ ಬ್ಯಾಾಂಕ್‌ಗಳೊಂದಿಗೆ ವಿಲೀನ ಮಾಡಿ ರಕ್ಷಿಸಲಾಯಿತು. ಇತ್ತೀಚಿಗಿನ ಗ್ಲೋಬಲ್ ಟ್ರಸ್ಟ್‌
ಬ್ಯಾಾಂಕ್, ಐಸಿಐಸಿಐ ಬ್ಯಾಾಂಕ್ ಅವ್ಯವಹಾರಗಳು, ಯಸ್ ಬ್ಯಾಾಂಕ್ ಗೋಟಾವಳಿ ಬ್ಯಾಾಂಕೇತರ ಹಣಕಾಸು ಸಂಸ್ಥೆ ಐಎಲ್
ಎಫ್‌ಎಸ್ ಕಂಪನಿ ಹಾಗೂ ಸಹಕಾರಿ ರಂಗದ ಮಹಾರಾಷ್ಟ್ರ ಕೋಪರೇಟಿವ್ ಬ್ಯಾಾಂಕ್ ನಡಾವಳಿಗಳು ಕೇವಲ ಕೆಲ
ಉದಾರಣೆಗಳಷ್ಟೇ. ರಾಷ್ಟ್ರೀಕರಣದ ಬಳಿಕ ಹಲವಾರು ಅಸಮರ್ಥ ಮತ್ತು ಅವ್ಯವಹಾರಗಳಿಂದೊಡಗೂಡಿದ ಖಾಸಗೀ
ಕ್ಷೇತ್ರದ ಬ್ಯಾಾಂಕ್‌ಗಳನ್ನು ರಾಷ್ಟ್ರೀಕೃತ ಬ್ಯಾಾಂಕ್‌ಗಳೊಂದಿಗೆ ವಿಲೀನ ಗೊಳಿಸಿ ರಕ್ಷಿಸಲಾಯಿತು. ಇದು ಖಾಸಗೀ ವಲಯದ
ಅವ್ಯವಹಾರಗಳಿಂದಾದ ಸಮಸ್ಯೆಯಲ್ಲವೇ? ಹಾಗಿರುವಾಗ ಖಾಸಗೀಕರಣದತ್ತ ಮುಖ ಮಾಡುವುದರಿಂದ ಸಮಸ್ಯೆ
ಬಿಗಡಾಯಿಸಬಹುದು ಮತ್ತು ಪ್ರಸಕ್ತ ಸನ್ನಿವೇಶದಲ್ಲಿ ಇದು ಸಮಯ ಸಂದರ್ಭವಲ್ಲ.

ನಿಯಂತ್ರಣದ ಸಂಕೋಲೆಯಲ್ಲಿರುವ ಬ್ಯಾಾಂಕ್‌ಗಳೇ ಕುಸಿಯುತ್ತಿರುವಾಗ, ಖಾಸಗೀ ಬ್ಯಾಾಂಕ್‌ಗಳ ಕರುಣಾ ಜನಕ ಕಥೆ ಕಣ್ಣೆೆದುರಿಗಿರುವಾಗ, ಅನುತ್ಪಾದಕ ಆಸ್ತಿಯೇ ಪ್ರಮುಖ  ಸಮಸ್ಯೆಯಾಗಿರುವಾಗ ಇದು ಖಾಸಗೀ ಕರಣದಿಂದ ನಿವಾರಣೆಯಾಗಬಹುದೇ? ಬ್ಯಾಾಂಕ್ ಖಾಸಗೀಕರಣದ ಪ್ರಸ್ತಾವನೆ ಅನಿರೀಕ್ಷಿತವಾಗಿ ಹಠಾತ್ತನೆ ಮೇಲ್ಮೆೆಗೆ ಬಂದ ವಿಚಾರವಲ್ಲ. ಎಲ್‌ಪಿಜಿಗೆ (ಉದಾರೀಕರಣ, ಖಾಸಗೀಕರಣ, ಜಾಗತೀಕರಣ ) ವಿಶ್ವವು ತೆರೆದುಕೊಂಡ ಸಂದರ್ಭದಲ್ಲಿ ಅಂದಿನ ವಿತ್ತ ಸಚಿವರಾದ
ಮನಮೋಹನ್ ಸಿಂಗ್ ಮತ್ತು ಪ್ರಧಾನಿ ಅವರ ಆರ್ಥಿಕ ಆಜೆಂಡಾಗಳಲ್ಲಿ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ
ವಿಚಾರಗಳು ಹುದುಗಿ ದ್ದವು. ಈ ವರ್ಷ ಖಾಸಗೀಕರಣವಿಲ್ಲದಿದ್ದರೂ ಈ ಬಗೆಗಿನ ಚಿಂತನೆ ನಡೆದಿದೆ ಎನ್ನುವುದು ನಿಜ ಸಂಗತಿ.

ನೀತಿ ಆಯೋಗವು ಈ ವಿಚಾರವನ್ನು ವಿಸ್ಕೃತವಾಗಿ ಚರ್ಚಿಸುತ್ತಿದೆ. ಈ ಆಯೋಗದ ವರದಿಯ ನಂತರ ಖಾಸಗೀಕರಣ ತ್ವರಿತವಾಗುವುದೆಂಬುದನ್ನು ಆರ್ಥಿಕ ಪತ್ರಿಕೆಗಳು ವರದಿ ಮಾಡುತ್ತಿವೆ. 1920 – 21ರ ಬಜೆಟ್‌ನಲ್ಲಿ ವಿತ್ತ ಸಚಿವೆಯರು ಉದ್ಯಮದ ಎಲ್ಲಾ ವಲಯವನ್ನು ಖಾಸಗೀ ವಲಯಕ್ಕೆೆ ಮುಕ್ತವಾಗಿಸುವ ಬಗ್ಗೆೆ ಸುಳಿವು ನೀಡಿದ್ದುದು ಚರ್ಚಾಗ್ರಾಸ್ತವಾದ ವಿಚಾರ ವಾಗಿದೆ.
ಇವತ್ತು ಬ್ಯಾಾಂಕಿಂಗ್ ಕ್ಷೇತ್ರ ಅನುಭವಿಸುತ್ತಿರುವ ಯಾತನೆಗೆ ಕಾರಣ ಮರುಪಾವತಿಯಾಗದ ಸುಸ್ತಿ ಸಾಲಗಳು. ಈ ಬಗ್ಗೆ
ಕೂಲಂಕಷವಾಗಿ ವಿಶ್ಲೇಷಿಸಿ ಕಾನೂನು ಕ್ರಮ ಬಿಗಿಗೊಳಿಸಿ ಉದ್ದೇಶಪೂರ್ವಕ ಸುಸ್ತಿದಾರರು ತಪ್ಪಿಸಿಕೊಳ್ಳದ ರೀತಿಯ ಕ್ರಮ
ಜರಗಿಸುವುದು ಅಸಾಧ್ಯದ ಮಾತೇನಲ್ಲ. ಮತ್ತು ಕಟ್ಟುನಿಟ್ಟಿನ ಹೊಸ ಕಾನೂನು ಜಾರಿಯಾಗದಿದ್ದರೆ ಠೇವಣಿದಾರರು
ಬ್ಯಾಾಂಕ್‌ಗಳ ಮೇಲಿರುವ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ.

ಖಾಸಗೀ ಬ್ಯಾಾಂಕ್‌ಗಳು ದೃಢವಾಗಿದ್ದರೆ, ಇತ್ತೀಚಿನ ಖಾಸಗೀ ಬ್ಯಾಾಂಕ್‌ಗಳ ವೈಫಲ್ಯದ ಹಿಂದಿನ ರಹಸ್ಯವೇನು? ಇತ್ತೀಚೆಗೆ ಎಸ್‌ಬಿಐ ಮುಖ್ಯಸ್ಥರ ಪಾರದರ್ಶಕ ಹೇಳಿಕೆ ಏನೆಂದರೆ ಕೆಟ್ಟ ಆಡಳಿತ, ಒಳ್ಳೆಯ ಆಡಳಿತ, ಮಾಲೀಕತ್ವ ಎಲ್ಲಾ ಕಡೆಯಲ್ಲಿ ಇದೆ. ಎಲ್ಲರೂ ಒಪ್ಪುವ ಅರ್ಥಪೂರ್ಣ ಸಮಂಜಸವಾದ ಮಾತು ಅಲ್ಲವೇನು? ಬ್ಯಾಾಂಕ್‌ಗಳ ಖಾಸಗೀಕರಣದ ಹಿಂದೆ ಬಡವರ ಮತ್ತು
ಮಧ್ಯಮವರ್ಗದ ಕೋಟ್ಯಂತರ ರುಪಾಯಿ ಠೇವಣಿಯನ್ನು ದೊಡ್ಡ ದೊಡ್ಡ ಉದ್ಯಮಿಗಳ ಕೈಗೆ ಕೊಡುವುದು ಸಮಂಜಸವೇ? ಮುಂದುವರಿದ 2ದೇಶಗಳಲ್ಲಿ ಕಟ್ಟುನಿಟ್ಟಿನ ಶಾಸಗಳನ್ನು, ನಿಯಂತ್ರಕರು, ಬಿಗಿಯಾದ ಕಾರ್ಯ ವ್ಯವಸ್ಥೆಯಿದ್ದರೂ ಬೃಹತ್ ಖಾಸಗಿ ಬ್ಯಾಾಂಕ್‌ಗಳು ಅಕ್ರಮದಲ್ಲಿ ಭಾಗಿಯಾಗಿವೆ. ವಿಶ್ವಬ್ಯಾಾಂಕಿನ ತಜ್ಞರ ತಂಡವು ತಮ್ಮ ಅಧ್ಯಯನದಲ್ಲಿ ಖಾಸಗೀಕರಣ ಆರ್ಥಿಕ ಸಮಸ್ಯೆೆಗಳ ಪರಿಹಾರಕ್ಕೆ ಮದ್ದಲ್ಲ, ಏಕಸ್ವಾಮ್ಯದ ವಹಿವಾಟುಗಳ ಮೇಲೆ ಖಾಸಗೀಕರಣದಿಂದ  ಪ್ರಯೋಜನವಾಗ ಲಾರದು ಮತ್ತು ಸಂಪತ್ತಿನ ನ್ಯಾಯಯುತ ವಿತರಣೆ ಸಾಧ್ಯವಿಲ್ಲವೆಂಬ ತೀರ್ಮಾನಕ್ಕೆ ಬಂದಿದೆ. ಇದೀಗ ಕೇಂದ್ರ ಸರಕಾರವು ಖಾಸಗೀಕರಣಕ್ಕೆ ಧುಮುಕುವ ಮೊದಲು ಈ ಬಗ್ಗೆ  ತಜ್ಞರೊಂದಿಗೆ, ಅರ್ಥಪೂರ್ಣವಾದ, ರಚನಾತ್ಮಕವಾದ ಮತ್ತು ದೇಶದ ಜಾಯಮಾನಕ್ಕನುಗುಣವಾಗಿ ಚರ್ಚಿಸಿ, ಸಾಧಕ, ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ಯೋಜನೆಗಳನ್ನು ನಿರೂಪಿಸಬೇಕು.