Sunday, 8th September 2024

ದಕ್ಷಿಣದಲ್ಲಿ ಬಿಜೆಪಿ ಕಮಾಲ್

ವೀಕೆಂಡ್ ವಿತ್ ಮೋಹನ್

camohanbn@gmail.com

ಸ್ವತಂತ್ರ ಭಾರತದ ಇತಿಹಾಸದಲ್ಲಿ ನೆಹರು ನಂತರ ಸತತವಾಗಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾದವರು ನರೇಂದ್ರ ಮೋದಿ.
ಇಂದಿರಾ ಗಾಂಧಿ ಮೂರನೇ ಬಾರಿಗೆ ಪ್ರಯತ್ನಪಟ್ಟರೂ ಸಹ, ದೇಶದ ಜನರ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರಪರಿಣಾಮ ಹೀನಾಯವಾಗಿ ಸೋತರು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ ೨೯೨ ಕ್ಷೇತ್ರಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಸಹ ವಿರೋಧ ಪಕ್ಷಗಳು
ಮೋದಿ ಯವರದ್ದು ದೊಡ್ಡ ಸೋಲೆಂಬಂತೆ ಬಿಂಬಿಸುವ ಪ್ರಯತ್ನ ಮಾಡಿದವು, ಇಂಡಿ ಒಕ್ಕೂಟಕ್ಕಿಂತಲೂ ಭಾರತೀಯ ಜನತಾ ಪಕ್ಷ ಗೆದ್ದಿರುವ ಸೀಟುಗಳು ಹೆಚ್ಚಿದ್ದರೂ ಸಹ ತಮ್ಮ ಸೋಲನ್ನು ಸಂಭ್ರಮಿಸುತ್ತಿದ್ದರು.

ಭಾರತೀಯ ಜನತಾ ಪಕ್ಷವನ್ನು ಕೇವಲ ಹಿಂದಿ ಮಾತನಾಡುವ ರಾಜ್ಯಗಳಿಗೆ ಸೀಮಿತವಾದ ಉತ್ತರ ಭಾರತದ ಪಕ್ಷವೆಂದು ವಿರೋಧಿಗಳು ಹೇಳುತ್ತಿದ್ದರು, ಆದರೆ ೨೦೨೪ರ ಲೋಕಸಭಾ ಚುನಾವಣೆ ಯಲ್ಲಿ ದೇಶದ ನಾಲ್ಕೂ ದಿಕ್ಕುಗಳಲ್ಲಿಯೂ ಭಾರತೀಯ ಜನತಾ ಪಕ್ಷ ತನ್ನ ಅಸ್ತಿತ್ವವನ್ನು ತೋರಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಂತೂ ಭಾರತೀಯ ಜನತಾ ಪಕ್ಷದ ನೆಲೆಯೇ ಇಲ್ಲದಂತೆ ವಿರೋಧಿಗಳು ಮಾತನಾಡುತ್ತಿದ್ದರು, ಪಂಚರಾಜ್ಯಗಳ ಚುನಾವಣೆಗಳನ್ನು ಗೆದ್ದಾಗ ಕಾಂಗ್ರೆಸ್ಸಿನ ಪಿ.ಚಿದಂಬರಂ ದಕ್ಷಿಣದಲ್ಲಿ ಬಿಜೆಪಿಗೆ ಜನರು ಮನ್ನಣೆ ನೀಡುವುದಿಲ್ಲವೆಂದು ಟ್ವೀಟ್ ಮಾಡಿದ್ದರು.

ತಮಿಳುನಾಡಿನ ಸ್ಟಾಲಿನ್ ಕುಟುಂಬದ ಸಂಸದರು ಸಂಸತ್ತಿನಲ್ಲಿ ಬೇಕಂತಲೇ ಹಿಂದಿಯನ್ನು ವಿರೋಧಿಸುವ ಸಲುವಾಗಿ, ಹಿಂದಿ ಹೇರಿಕೆ ಎಂಬ ನಿರೂಪಣೆಯನ್ನು ಮೋದಿಯವರ ವಿರುದ್ಧ ಚುನಾ ವಣೆಯ ಸಂದರ್ಭದಲ್ಲಿ ಮುನ್ನೆಲೆಗೆ ತರುತ್ತಿದ್ದರು. ಆದರೆ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಚಿತ್ರಣ ಸಂಪೂರ್ಣ ಬದಲಾಗಿದೆ, ಬಿಜೆಪಿ ತನ್ನ ಖಾತೆ ಯನ್ನು ಅಧಿಕೃತವಾಗಿ ತೆರೆಯದಿದ್ದರೂ ಸಹ ಮತಗಳಿಕೆಯ ಪ್ರಮಾಣವನ್ನು
ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಬಿಜೆಪಿಯ ಒಟ್ಟಾರೆ ರಾಜ್ಯದ ಮತಪ್ರಮಾಣ ಶೇ.೧೧.೨೪ ರಷ್ಟಿದೆ, ಆಡಳಿತಾರೂಢ ಡಿ.ಎಂ.ಕೆ ಪಕ್ಷಕ್ಕೆ ೧,೧೬,೮೯,೮೭೯ ಮತಗಳು ಬಿದ್ದಿವೆ, ಬಿ.ಜೆ.ಪಿಗೆ ೪೮,೮೦,೯೮೪ ಬಿದ್ದಿವೆ. ತಮಿಳುನಾಡಿನ ಪ್ರಮುಖ ಕ್ಷೇತ್ರಗಳಾದ ಚೆನ್ನೈ ಸೆಂಟ್ರಲ್ ನಲ್ಲಿ ಶೇ.೨೩, ಚೆನ್ನೈ
ದಕ್ಷಿಣದಲ್ಲಿ ಶೇ.೨೬, ವೆಲ್ಲೂರಿನಲ್ಲಿ ಶೇ.೩೧, ಕೊಯಮತ್ತೂರಿ ನಲ್ಲಿ ಶೇ.೩೨, ನೀಲಗಿರೀಸ್ (ಊಟಿ)ಯಲ್ಲಿ ಶೇ.೨೨, ಪೊಚಿಯಲ್ಲಿ ಶೇ.೧೯, ತೆಂಕಾಶಿಯಲ್ಲಿ ಶೇ.೨೦, ತಿರುನಲ್ವೇಲಿಯಲ್ಲಿ ಶೇ.೩೧, ಮದುರೈನಲ್ಲಿ ಶೇ.೨೨ರಷ್ಟು ಮತಗಳು ಭಾರತೀಯ ಜನತಾ ಪಕ್ಷಕ್ಕೆ ಸಿಕ್ಕಿದೆ.

ಬಿ.ಜೆ.ಪಿಯ ಮಿತ್ರಪಕ್ಷಗಳ ಮತಗಳಿಕೆಯ ಪ್ರಮಾಣ ಶೇ.೫.೫ರಷ್ಟಿದ್ದು, ಒಟ್ಟಾರೆ ಮಿತ್ರಪಕ್ಷಗಳ ಜೊತೆಗೂಡಿ ತಮಿಳುನಾಡಿನಲ್ಲಿ ಮತಪ್ರಮಾಣ ಶೇ.೧೬ ಕ್ಕೆ ತಲುಪಿದೆ. ಬಿಜೆಪಿಯವರು ಹಿಂದಿವಾಲಗಳು, ಆರ್ಯರು, ಉತ್ತರ ಭಾರತದವರು ಅವರಿಗೆ ತಮಿಳುನಾಡಿನಲ್ಲಿ ನೆಲೆಯೂರಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದವರಿಗೆ ೨೦೨೪ರ ಫಲಿತಾಂಶ ದೊಡ್ಡ ಪೆಟ್ಟನ್ನು ನೀಡಿದೆ. ಸಾಕ್ಷಿಯಿಲ್ಲದ ಟೊಳ್ಳು ದ್ರಾವಿಡ ಮತ್ತು  ಆರ್ಯ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಆರು ದಶಕ ಗಳ ಕಾಲ ರಾಜಕೀಯ ಮಾಡಿದ ದ್ರಾವಿಡ ಪಕ್ಷಗಳಿಗೆ ಬಿಜೆಪಿಯ ತಮಿಳುನಾಡಿನ ಫಲಿತಾಂಶ ಶಾಕ್ ನೀಡಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ಲೋಕಸಭೆಯಲ್ಲಿ ಗಳಿಸಿರುವ ಮತಪ್ರಮಾಣವನ್ನು ಗಮನಿಸಿದರೆ ೨೦೨೬ ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಉತ್ತಮ ಫಲಿತಾಂಶ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ, ಸತತ ೧೦ ವರ್ಷಗಳ ಪಕ್ಷದ ನಾಯಕರ ಶ್ರಮ ಮತ್ತು ಅಣ್ಣಾಮಲೈ ನೇತೃತ್ವ ಬಿಜೆಪಿಯ ೨೦೨೪ರ ಚುನಾವಣಾ ಫಲಿತಾಂಶದಲ್ಲಿ ಕಾಣುತ್ತಿದೆ. ದಕ್ಷಿಣ ಭಾರತದ ಮತ್ತೊಂದು ರಾಜ್ಯ ಕೇರಳ, ಸತತವಾಗಿ ಕಮ್ಯುನಿಸ್ಟರ ಆಡಳಿತದಲ್ಲಿ ಅಭಿವೃದ್ಧಿಯನ್ನು ಕಾಣದೆ ತನ್ನದೇ ಲೋಕದಲ್ಲಿರುವ ರಾಜ್ಯವಿದು. ಸ್ವಾಮಿ ವಿವೇಕಾನಂದರು ಕೇರಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಲ್ಲಿನ
ಸಮಾಜದಲ್ಲಿದ್ದ ಜಾತಿಗಳ ನಡುವಣ ಅಸಮಾನತೆಯನ್ನು ಕಂಡು ಹುಚ್ಚರ ಸಂತೆ ಎಂದಿದ್ದರು.

ಅಸಮಾನತೆಯನ್ನೇ ಬಳಸಿಕೊಂಡಂತಹ ಕಮ್ಯುನಿಸ್ಟರು ಕೇರಳ ರಾಜ್ಯದಲ್ಲಿ ಹಲವು ದಶಕಗಳ ಕಾಲ ನೆಲೆಯೂರಿ ರಾಜಕಾರಣ ಮಾಡಿದರು. ಬದಲಾದ ಕಾಲಘಟ್ಟದಲ್ಲಿ ಕೇರಳದ ಮತದಾರರು ತಮ್ಮ ಪೂರ್ವಜರ ಮನಸ್ಥಿತಿಯನ್ನೇ ಮುಂದುವರೆಸಿಕೊಂಡು ಬಂದರು. ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಬಿ.ಜೆ.ಪಿಯ ಮತಪ್ರಮಾಣ ಶೇ.೧೬.೬೮ ರಷ್ಟಿದೆ,ರಾಜ್ಯದಲ್ಲಿ ಒಟ್ಟಾರೆ ೩೨,೯೬,೩೫೪ ಮತಗಳು ಬಿ. ಜೆ.ಪಿಗೆ ಸಿಕ್ಕಿದೆ, ಕಮ್ಯುನಿಸ್ಟರಿಗೆ ಸುಮಾರು ೫೧,೦೦,೦೦೦ ಮತಗಳು ಬಿದ್ದಿದ್ದರೆ, ಕಾಂಗ್ರೆಸ್ಸಿಗೆ ಸುಮಾರು ೬೯,೦೦,೦೦೦ ಮತಗಳು ಬಿದ್ದಿವೆ. ಮೊಟ್ಟಮೊದಲ ಬಾರಿಗೆ ಕೇರಳದ ತ್ರಿಶೂರ್ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಸುರೇಶ್ ಗೋಪಿ ಗೆದ್ದಿದ್ದಾರೆ, ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿರುವನಂತಪುರಂ ಕ್ಷೇತ್ರದಿಂದ ಶಶಿ ತರೂರ್ ವಿರುದ್ಧ ಸ್ಪಽಸಿದ್ದರು. ಶೇ.೩೫ರಷ್ಟು ಮತಗಳಿಸಿ ಕೇವಲ ೧೬,೦೭೭ ಮತಗಳಿಂದ ಸೋತಿದ್ದಾರೆ, ಬಿಜೆಪಿ ಅಲಪ್ಪುಲದಲ್ಲಿ ಶೇ.೨೮, ಅಳತೂರಿನಲ್ಲಿ ಶೇ.೧೮, ಅಟ್ಟಿನಗಳ್ ಕ್ಷೇತ್ರದಲ್ಲಿ  ಶೇ.೩೧,ಕಾಸರಗೋಡಿನಲ್ಲಿ ಶೇ.೧೯, ಪಾಲಕ್ಕಾಡಿನಲ್ಲಿ ಶೇ.೨೪, ಪತಣಂತಿಟ್ಟ ಕ್ಷೇತ್ರದಲ್ಲಿ ಶೇ.೨೫ರಷ್ಟು ಮತಗಳನ್ನು ಗಳಿಸಿದೆ.

ತೆಲಂಗಾಣ ರಾಜ್ಯದಲ್ಲಿ ಹತ್ತು ವರ್ಷಗಳ ಶ್ರಮ ಭಾರತೀಯ ಜನತಾ ಪಕ್ಷದ ಕೈಹಿಡಿದೆ, ಸತತವಾಗಿ ಛಲಬಿಡದೆ ಪಕ್ಷ ಕಟ್ಟುವ ಕೆಲಸ ಕಳೆದ ಒಂದು ದಶಕದಿಂದ ನಡೆಯುತ್ತಿತ್ತು. ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಮತಗಳಿಕೆಯ ಪ್ರಮಾಣ ಶೇ.೧೦.೫೦ ರಷ್ಟಿತ್ತು ಮತ್ತು ಒಂದು ಕ್ಷೇತ್ರವನ್ನು
ಗೆದ್ದಿತ್ತು, ೨೦೧೯ ರಲ್ಲಿ ಮತಗಳಿಕೆಯ ಪ್ರಮಾಣ ಶೇ.೧೯.೬೫ ಕ್ಕೆ ಏರಿಕೆಯಾಗಿ ನಾಲ್ಕು ಕ್ಷೇತ್ರವನ್ನು ಬಿಜೆಪಿ ಗೆದ್ದಿತ್ತು, ೨೦೨೪ ರ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣ ಶೇ.೩೬ ಕ್ಕೆ ಏರಿಕೆ ಯಾಗಿ ಎಂಟು ಕ್ಷೇತ್ರಗಳಲ್ಲಿ ಬಿ.ಜೆ.ಪಿ ಜಯಭೇರಿ ಬಾರಿಸಿದೆ.

ಹೈದರಾಬಾದಿನ ಪಾಲಿಕೆ ಚುನಾವಣೆಯಲ್ಲಿ ೪೮ ವಾರ್ಡು ಗಳನ್ನು ಗೆಲ್ಲುವ ಮೂಲಕ ೨೦೨೦ರಲ್ಲಿ ಬಿ.ಜೆ.ಪಿ ಕಮಾಲ್ ಮಾಡಿತ್ತು, ನಂತರ ೨೦೨೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ತನ್ನ ನೆಲೆಯನ್ನು ಮತ್ತಷ್ಟು ಭದ್ರ ಮಾಡಿಕೊಂಡಿತ್ತು. ಬಂಡಿ ಸಂಜಯ್ ರೆಡ್ಡಿ, ಕಿಶನ್ ಕುಮಾರ್‌ರಂತಹ ನಾಯಕರು ಸತತವಾಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತಾ ಬಂದ ಪರಿಣಾಮ ದಕ್ಷಿಣ ಭಾರತದಲ್ಲಿ ತೆಲಂಗಾಣ ರಾಜ್ಯ ಇಂದು ಬಿ.ಜೆ.ಪಿಯ ಭದ್ರ ಕೋಟೆಯಾಗುವತ್ತ ಸಾಗುತ್ತಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾದ ಬಿ.ಎಲ.ಸಂತೋಷ್ ಅವರ ಪಕ್ಷ ಸಂಘಟನೆಯ ನಿರಂತರ ಶ್ರಮ ಬಿಜೆಪಿಗೆ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕಾಣುತ್ತಿದೆ.

ಟಿ.ಆರ್.ಎಸ್ ಪಕ್ಷದ ಚಂದ್ರಶೇಖರ್ ರಾವ್ ಬಿ.ಎಲ್. ಸಂತೋಷ್ ಅವರ ಪಕ್ಷ ಸಂಘಟನೆಯನ್ನು ಗಮನಿಸಿ, ಭಾರತೀಯ ಜನತಾ ಪಕ್ಷದ ವೇಗಕ್ಕೆ ಕಡಿವಾಣ ಹಾಕಲು ಅವರ ಮೊಬೈಲ್ ಟ್ಯಾಪ್ ಮಾಡಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದಿದ್ದರೆಂಬ ಆಘಾತಕಾರಿ ಅಂಶವೂ ಇತ್ತೀಚಿಗೆ ವರದಿಯಾಗಿತ್ತು. ಚಂದ್ರಶೇಖರ್ ರಾವ್ ತಮ್ಮ ಮಗಳನ್ನು ದೆಹಲಿಯ ಲಿಕ್ಕರ್ ಹಗರಣದಿಂದ ಮುಕ್ತಿಗೊಳಿಸಲು ಹೂಡಿದ್ದ ದೊಡ್ಡ ಷಡ್ಯಂತ್ರದ ಭಾಗವಾಗಿತ್ತೆಂಬ ಮತ್ತೊಂದು ಅಂಶ ಬಯಲಾಯಿತು. ಮುಂದಿನ ಕೆಲವೇ ಕೆಲವು ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷ ಸ್ವತಂತ್ರ
ವಾಗಿ ಅಽಕಾರ ಹಿಡಿಯಲು ಮುಂಚೂಣಿಯಲ್ಲಿರುವ ಮತ್ತೊಂದು ರಾಜ್ಯ ತೆಲಂಗಾಣ. ೨೦೨೪ರ ಚುನಾವಣೆಯಲ್ಲಿ ಇಡೀ ದೇಶದ ಗಮನಸೆಳೆದ ಹೈದರಾಬಾದ್ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಮಾಧವಿ ಲತಾ ಓ.ವೈ.ಸಿಗೆ ಸರಿಯಾದ ಠಕ್ಕರ್ ನೀಡಿದ್ದರು.

ಚುನಾವಣೆ ಗೆಲ್ಲಲು ಸಾಧ್ಯವಾಗದಿದ್ದರೂ ಮುಸ್ಲಿಂ ಮತಬ್ಯಾಂಕಿನ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಮಾಧವಿ ಲತಾ ಶೇ.೨೯% ಮತಗಳಿಸಿದ್ದರು,
ಹಿಂದೂ ಧರ್ಮದ ಮೇಲಿನ ಅವರ ಅಪಾರ ನಿಷ್ಠೆ ತೆಲಂಗಾಣದ ಇತರ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿತ್ತು. ೨೦೨೪ ರಲ್ಲಿ ಆಂಧ್ರ ಪ್ರದೇಶದಲ್ಲಿ ಎನ್.ಡಿ.ಎ ಮೈತ್ರಿಕೂಟ ಅದ್ಬುತ ಸಾಧನೆ ಮಾಡಿದೆ, ಭಾರತೀಯ ಜನತಾ ಪಕ್ಷ ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಪಕ್ಷಗಳ ಮೈತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಿದೆ. ಭಾರತೀಯ ಜನತಾ ಪಕ್ಷ ಮೂರು ಕ್ಷೇತ್ರಗಳನ್ನು ಗೆದ್ದಿದೆ, ಭಾರತೀಯ ಜನತಾ ಪಕ್ಷದ ಮತಗಳಿಕೆಯ ಪ್ರಮಾಣ ಶೇ.೧೧.೨೮ ಕ್ಕೇರಿದೆ, ಚುನಾವಣೆಯಲ್ಲಿ ನಿಂತ ಮೂರು ಕ್ಷೇತ್ರಗಳಲ್ಲಿ ಜಯಗಳಿಸಿದೆ.

ತೆಲುಗು ನಟ ಪವನ್ ಕಲ್ಯಾಣ್ ೨೦೧೪ ರಲ್ಲಿ ಜನಸೇನಾ ಪಕ್ಷ ಸ್ಥಾಪನೆ ಮಾಡಿದಾಗ ಸ್ಪರ್ಧಿಸಿದ್ದ ಎರಡು ಕ್ಷೇತ್ರದಲ್ಲಿ ನಿಂತು ಸೋತಿದ್ದರು, ಸೋತರೂ ಧೃತಿಗೆಡದೆ ಮತ್ತೆ ೨೦೧೯ ಮತ್ತು ೨೦೨೪ ರಲ್ಲಿ ಸ್ಪರ್ದಿಸಿ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದರು. ೨೦೨೪ರ ವಿಧಾನಸಭೆಯಲ್ಲಿ ಸ್ಪರ್ದಿಸಿದ್ದ ೨೧ ಕ್ಷೇತ್ರದಲ್ಲಿ ೨೧ ಕ್ಷೇತ್ರಗಳನ್ನು ಗೆದ್ದಿದ್ದಾರೆ, ಲೋಕಸಭೆಯಲ್ಲಿ ಸ್ಪರ್ದಿಸಿದ್ದ ಎರಡು ಕ್ಷೇತ್ರ ಗಳನ್ನು ಗೆದ್ದು ಶೇ.೧೦೦ ರಷ್ಟು ಅಂಕ ಗಳಿಸಿzರೆ. ಪವನ್
ಕಲ್ಯಾಣ್ ವಿಶಾಖ ಪಟ್ಟಣದಲ್ಲಿ ಏರ್ಪಡಿಸಿದ್ದ ಪಾದಯಾತ್ರೆ ಯನ್ನು ಜಗನ್ ಸರಕಾರ ತಡೆದಿತ್ತು, ಜನಸೇನಾ ಪಕ್ಷದ ಕಾರ್ಯಕರ್ತರನ್ನು ಸಿಕ್ಕಸಿಕ್ಕಲ್ಲಿ ಬಂಽಸಿ ಜೈಲಿಗಟ್ಟಿತ್ತು.

‘ಪವನ್‌ಕಲ್ಯಾಣ’ರನ್ನು ಹೋಟೆಲಿನಲ್ಲಿ ಗೃಹ ಬಂಧನ ದಲ್ಲಿಟ್ಟಿತು. ಪವನ್ ಕಲ್ಯಾಣ್ ಕಾರನ್ನು ತಡೆದಿತ್ತು. ತನ್ನ ಕಾರನ್ನು ತಡೆದರೂ ಧೃತಿಗೆಡದ ಪವನ್ ಕಲ್ಯಾಣ್ ಬರಿಗಾಲಿ ನಲ್ಲಿ ನಡೆದು ಕಾರ್ಯಕ್ರಮಕ್ಕೆ ತೆರಳುವ ದೃಶ್ಯಗಳು ಸಾಮಾನ್ಯವಾಗಿದ್ದವು. ಪವನ್‌ಕಲ್ಯಾಣ್ ತಮ್ಮ ಭಾಷಣದಲ್ಲಿ ಜಗನ್ ಮೋಹನ್ ರೆಡ್ಡಿಯವರಿಗೆ ಚಪ್ಪಲಿಯಲ್ಲಿ ಹೊಡೆಯು ವುದಾಗಿ ಹೇಳಿದ್ದರು. ಕಳೆದ ಒಂದು ವರ್ಷದಿಂದ ಆಂಧ್ರ ಪ್ರದೇಶದ ಚುನಾವಣೆಯಲ್ಲಿ ತೆಲುಗು ಸಿನಿಮಾ ಮಾದರಿಯ ಅನೇಕ ಘಟನೆಗಳು ನಡೆ ದವು. ಜಗನ್ ಮೋಹನ್ ರೆಡ್ಡಿಯ ದ್ವೇಷ ರಾಜಕೀಯದ ಪರಿಣಾಮ ಚಂದ್ರಬಾಬು ನಾಯ್ಡು ಅವರನ್ನು ಸೆಪ್ಟೆಂಬರ್ ೨೦೨೩ರಲ್ಲಿ ಬಂಧಿಸಿ ಜೈಲಿಗಟ್ಟಿದ್ದರು.

ಜಗನ್ ಅಧಿಕಾರಕ್ಕೆ ಬಂದ ನಂತರ ಆಂಧ್ರದಲ್ಲಿ ಹಿಂದೂ ಧರ್ಮಕ್ಕೆ ಅಪಚಾರ ವೆಸಗುವ ಹಲವು ಘಟನೆಗಳು ನಡೆದವು, ತಿರುಪತಿಯಲ್ಲಿ ಕ್ರಿಶ್ಚಿಯನ್ ಸಮು ದಾಯದವ ರನ್ನು ನಿರ್ದೇಶಕರನ್ನಾಗಿ ಮಾಡಲಾಗಿತ್ತು. ಲೀಲಾಜಾಲವಾಗಿ ಕ್ರಿಶ್ಚಿಯನ್ ಮಿಷನರಿಗಳ ಮತಾಂತರ ಸಿಕ್ಕ ಸಿಕ್ಕಲ್ಲಿ ನಡೆಯುತ್ತಿದ್ದವು, ಮತಾಂತರ ವನ್ನು ಪೋಷಿಸುತ್ತಲೇ ಬಂದ ಜಗನ್ ಇಡೀ ರಾಜ್ಯದಲ್ಲಿ ಹಿಂದುಗಳಿಂದ ದೂರವಾದರು. ದಕ್ಷಿಣ ಭಾರತದ ಭಾಗವಾಗಿಲ್ಲದಿದ್ದರೂ, ಭಾರತೀಯ ಜನತಾ ಪಕ್ಷದ ನಿರಂತರ ಪರಿ ಶ್ರಮದ ಫಲಿತಾಂಶ ಒಡಿಶಾ ರಾಜ್ಯದಲ್ಲಿ ಈ ಬಾರಿ ಕಂಡಿದೆ, ದಶಕಗಳ ಪ್ರಯತ್ನದ ಫಲವಾಗಿ ೨೪ ವರ್ಷಗಳ ಕಾಲ ನಿರಂತರವಾಗಿ ಆಡಳಿತ ನಡೆಸಿದ್ದ ಬಿಜು ಜನತಾದಳ ಅಽಕಾರ ಕಳೆದುಕೊಂಡಿದೆ.

ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ೭೮ ಕ್ಷೇತ್ರಗಳಲ್ಲಿ ಗೆದ್ದು ಬಹುಮತ ಪಡೆದು ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿದಿದೆ. ಲೋಕಸಭೆಯ ೨೧ ಸ್ಥಾನ ಗಳ ಪೈಕಿ ೨೦ ಸ್ಥಾನಗಳನ್ನು ಗೆದ್ದಿದೆ.  ಒಡಿಶಾದಲ್ಲಿ ಮೊದಲ ಬಾರಿಗೆ ಪಕ್ಷ ಸಂಘಟಿಸಲು ಮುಂದಾದಾಗ ಕಡಿಮೆ ಮತಗಳಿಕೆ ಸಿಕ್ಕಿತೆಂಬ ಕಾರಣಕ್ಕೆ ಕೈ
ಬಿಟ್ಟಿದ್ದರೆ, ಇಂದು ಅಲ್ಲಿ ಅಽಕಾರ ಹಿಡಿಯಲು ಸಾಧ್ಯ ವಾಗುತ್ತಿರಲಿಲ್ಲ. ಒಡಿಶಾ ಉದಾಹರಣೆ ಮುಂದಿರುವ ಬೆನ್ನ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಜೆಪಿಯ ಭವಿಷ್ಯ ಕಾಣುತ್ತಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮೊದಲ ಬಾರಿಗೆ ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ, ಬಿಜೆಪಿ ಅಧಿಕಾರ ಹಿಡಿದ ದಿನದಿಂದಲೂ ಕನ್ನಡಿಗರು ಕೇಂದ್ರ ದಲ್ಲಿ ಬಿಜೆಪಿ ಪಕ್ಷದ ಪರವಾಗಿ ನಿಂತಿದ್ದಾರೆ. ೨೦೨೪ ರ ಚುನಾವಣೆಯಲ್ಲೂ ಸಹ ಭಾರತೀಯ ಜನತಾ ಪಕ್ಷ ಕರ್ನಾಟಕದಿಂದ ೧೭ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಭಾರತೀಯ ಜನತಾ ಪಕ್ಷ ಉತ್ತರದ ರಾಜ್ಯಗಳಲ್ಲಿ ಕೆಲವು ಕ್ಷೇತ್ರಗಳನ್ನು ಕಳೆದುಕೊಂಡಿರಬಹುದು, ಆದರೆ ದಕ್ಷಿಣದ ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ವಿರೋಧಿಗಳಲ್ಲಿ ನಡುಕ ಹುಟ್ಟಿಸಿದೆ. ದಕ್ಷಿಣ ಭಾರತದಲ್ಲಿ ಎನ್.ಡಿ.ಎ ಮೈತ್ರಿಕೂಟ ೨೦೧೯ ರಲ್ಲಿ ೩೦ ಕ್ಷೇತ್ರಗಳನ್ನು ಗೆದ್ದಿತ್ತು, ೨೦೨೪ ರಲ್ಲಿ ೪೯ ಕ್ಷೇತ್ರಗಳಲ್ಲಿ ಗೆದ್ದಿದೆ. ೨೦೨೪ರ ಚುನಾವಣಾ -ಲಿತಾಂಶವನ್ನು ಗಮನಿಸಿದರೆ ಭಾರತೀಯ ಜನತಾ ಪಕ್ಷ ಸಂಸತ್ತಿನಲ್ಲಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ತನ್ನ ಪ್ರತಿನಿಧಿಗಳನ್ನು ಹೊಂದಿದೆ.

Leave a Reply

Your email address will not be published. Required fields are marked *

error: Content is protected !!