Friday, 20th September 2024

ಇಕ್ಕಟ್ಟು, ಬಿಕ್ಕಟ್ಟಿನ ನಡುವೆ ಪ್ರವಾಸಕ್ಕೆ ತಯಾರಾದ ಬಿಎಸ್‌ವೈ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

‘ಮಳೆ ಬಂದು ನಿಂತರು.. ಹನಿಯೊಂದು ಉದುರಿದೆ’ ಎನ್ನುವ ಸಾಲು ಬಿಜೆಪಿಗೂ ಸದ್ಯಕ್ಕೆ ಅನ್ವಯಿಸುತ್ತದೆ. ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗೆ ಇಳಿದು
ಒಂದು ತಿಂಗಳು ಕಳೆದು, ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಽಕಾರ ಸ್ವೀಕರಿಸಿ ತಿಂಗಳು ಕಳೆದಿದೆ.

ಸಂಪುಟ ರಚನೆ, ಕ್ಯಾತೆ, ಖಾತೆ ಹಂಚಿಕೆ ಅಸಮಾಧಾನ ಕಡಿಮೆ ಮಾಡಲಾಗಿದೆ ಎಂದೇ ವರಿಷ್ಠರು ಹೇಳು ತ್ತಿದ್ದಾರೆ. ಇನ್ನು ಬೊಮ್ಮಾಯಿ ಅವರು ಸಹ ತಮ್ಮ ಸಣ್ಣ ಸಣ್ಣ ನಿರ್ಧಾರಗಳಿಂದ ಸಾರ್ವಜನಿಕ ವಲಯದಲ್ಲಿ ‘ಟಾಕ್ ಪಾಯಿಂಟ್’ ಆಗುತ್ತಿದ್ದಾರೆ. ಸರಕಾರದ ವಿರುದ್ಧ ಮಾತನಾಡುವವರಿಲ್ಲ, ಪ್ರತಿಪಕ್ಷಗಳು ಸಹ ಪರೋಕ್ಷ ವಾಗಿ ಮುಖ್ಯಮಂತ್ರಿಗಳಿಗೆ ಬೆಂಬಲ ನೀಡುತ್ತಿವೆ. ಇನ್ನು ವರಿಷ್ಠರ ವಿಷಯಕ್ಕೆ ಬರುವುದಾದರೆ, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅವರ ಬೆಂಬಲವೂ ಬೊಮ್ಮಾಯಿ ಅವರಿಗಿದೆ.

ಹಾಗಾದರೆ, ರಾಜ್ಯದಲ್ಲಿ ಒಂದು ಸುಭದ್ರ ಸರಕಾರಕ್ಕೆ ಇನ್ನೇನು ಬೇಕು? ಮಾದರಿ ಎನ್ನುವಂತೆ ಈ ಸರಕಾರ ವಿದೆ ಅಲ್ಲವೇ ಎಂದು ಅಂದುಕೊಂಡರೆ, ಅದು ತಪ್ಪು. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಈ ಸರಕಾರ ಒಂದು ರೀತಿ ‘ಎಲ್ಲವೂ ಇದ್ದೂ, ಏನೋ ಇಲ್ಲದಂತಾಗಿದೆ’. ಹೌದು, ಬೊಮ್ಮಾಯಿ ಅವರ ಆಡಳಿತ ವೈಖರಿ, ಸಾರ್ವಜನಿಕರಿಗೆ ಸಹಕಾರಿಯಾಗುವ ಹಲವು ತೀರ್ಮಾನಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು, ಜನರಲ್ಲಿಯೂ ಉತ್ತಮ ಅಭಿಪ್ರಾಯ ಮೂಡುತ್ತಿದೆ. ಆದರೆ ಈ ಅಭಿಪ್ರಾಯ ಬಿಜೆಪಿಯ ಸರಕಾರಕ್ಕೆ ಅಥವಾ ಸಂಘಟನೆಗೆ ಸಾಕಾಗುವುದೇ ಎಂದರೆ, ಅಲ್ಲೊಂದು ಕೊರತೆ ಇದೆ. ಆ ಕೊರತೆ ಏನೆಂದರೆ, ಪಕ್ಷದತ್ತ ಜನರನ್ನು ಆಕರ್ಷಣೆ ಮಾಡುವ, ಜನರ ಚಪ್ಪಾಳೆಯನ್ನು ಚುನಾವಣಾ ಸಮಯದಲ್ಲಿ ಮತವಾಗಿ ’convert’ ಮಾಡುವ ಶಕ್ತಿ.

ಅದನ್ನು ರಾಜಕೀಯವಾಗಿ ಹೇಳಬೇಕು ಎಂದರೆ, ಪಕ್ಷಕ್ಕೆ ಬೇಕಿರುವ ಒಂದು ಮಾಸ್ ಲೀಡರ್ ವ್ಯಕ್ತಿತ್ವ. ಬಿಜೆಪಿ ಆರಂಭವಾದ ದಿನದಿಂದ ಬಿಜೆಪಿ ಅಂದರೆ ಯಡಿ ಯೂರಪ್ಪ, ಯಡಿಯೂರಪ್ಪ ಅಂದರೆ ಬಿಜೆಪಿ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದರಿಂದ, ಇಲ್ಲಿಯವರೆಗೆ ಎರಡನೇ ಹಂತದ ಮಾಸ್ ನಾಯಕರು ಬೆಳೆಸುವ ಗೋಜಿಗೆ ಯಡಿಯೂರಪ್ಪ ಅವರಾಗಲಿ, ಬಿಜೆಪಿ ವರಿಷ್ಠರಾಗಲಿ ಹೋಗಲಿಲ್ಲ. ಇದೀಗ ಅವರನ್ನು ಕೆಳಗೆ ಇಳಿಸಿದ ಬಳಿಕ ಆ ಸ್ಥಾನವನ್ನು ಭರ್ತಿ ಮಾಡುವವರು ಯಾರು ಎನ್ನುವ ಪ್ರಶ್ನೆ ಈಗಲೂ ಸಾರ್ವಜನಿಕ ವಲಯದಲ್ಲಿದೆ. ಈ ಎಲ್ಲ ಪ್ರಶ್ನೆಗಳ ನಡುವೆ ಅಧಿಕಾರದಿಂದ ಕೆಳಗೆ ಇಳಿದರೂ ‘ನಾನು ಪಕ್ಷ ಸಂಘಟನೆ ಮಾಡುತ್ತೇನೆ’ ಎಂದು ಹೇಳಿ, ಯಡಿಯೂರಪ್ಪ ಇದೀಗ ರಾಜ್ಯ ಪ್ರವಾಸಕ್ಕೆ ಸಿದ್ಧತೆ ನಡೆಸಿಕೊಂಡಿದ್ದಾರೆ.

ಇದಕ್ಕಾಗಿ ಸುಮಾರು ಒಂದು ಕೋಟಿ ಮೌಲ್ಯದ ಕಾರನ್ನು ಖರೀದಿಸಿದ್ದಾರೆ. ಈ ರಾಜ್ಯ ಪ್ರವಾಸದ ಗೊತ್ತು ಗುರಿಯ ಬಗ್ಗೆ ಸ್ಪಷ್ಟತೆ ಅನೇಕರಿಗೆ ಇಲ್ಲ. ರಾಜ್ಯದಲ್ಲಿ ಚುನಾವಣೆ ಎದುರಾಗಲು ಇನ್ನು ಎರಡು ವರ್ಷವಿದೆ. ಇನ್ನು ಬಿಜೆಪಿಯದ್ದೇ ಸರಕಾರ ಇರುವಾಗ, ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡಿ ಏನು
ಮಾಡಲಿದ್ದಾರೆ ಎನ್ನುವ ಗೊಂದಲವಿದೆ. ಈ ಪ್ರವಾಸ ಬಿಜೆಪಿ ಸಂಘಟನೆಯನ್ನು ಗಟ್ಟಿಗೊಳಿಸುವುದಕ್ಕಾಗಿಯೋ? ತಮ್ಮ ಬೆಂಬಲಿಗರನ್ನು ತಮ್ಮಲ್ಲಿಯೇ ಉಳಿಸಿ ಕೊಳ್ಳುವುದಕ್ಕಾಗಿಯೋ? ಅಥವಾ ‘ಮಾಜಿ ಮುಖ್ಯಮಂತ್ರಿ’ಯಾದರೂ ತಮ್ಮ ಶಕ್ತಿ ಮಾತ್ರ ಕುಂದಿಲ್ಲ ಎನ್ನುವ ಸಂದೇಶವನ್ನು ವರಿಷ್ಠರಿಗೆ ರವಾನಿಸುವುದಕ್ಕಾ ಗಿಯೋ ಅಥವಾ ಈ ಎಲ್ಲದರ ಮಿಶ್ರಣವೋ ಎನ್ನುವ ಖಚಿತತೆ ಸಿಕ್ಕಿಲ್ಲ.

ಆದರೂ ಗಣಪತಿ ಹಬ್ಬದ ಬಳಿಕ ರಾಜ್ಯ ಪ್ರವಾಸಕ್ಕೆ ಸಿದ್ಧತೆಯನ್ನು ಮಾತ್ರ ಮಾಡಿಕೊಳ್ಳಲಾಗಿದೆ. ಇದಕ್ಕೆ ವರಿಷ್ಠರ ಅನುಮತಿ ಸಿಗುವುದೋ? ಸಿಕ್ಕರು ಏನಾದರೂ ಷರತ್ತು ವಿಧಿಸುವರೋ ಎನ್ನುವುದು ಕಾದು ನೋಡಬೇಕಿದೆ. ಹಾಗೆ ನೋಡಿದರೆ, ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ಹಿಂದೆ ಹಲವು ಪರ-ವಿರೋಧ
ಅಭಿಪ್ರಾಯಗಳಿವೆ. ಬಿಜೆಪಿ ವರಿಷ್ಠರಿಗೆ ಈ ಪ್ರವಾಸವನ್ನು ಅಧಿಕೃತಗೊಳಿಸಬೇಕೋ ಅಥವಾ ತಡೆಯಬೇಕೋ ಎನ್ನುವ ಗೊಂದಲಗಳಿವೆ. ಯಡಿಯೂರಪ್ಪನವರಿಗೆ ರಾಜ್ಯ ಪ್ರವಾಸದ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕು ಎನ್ನುವುದಾಗಿದೆ. ಆದರೆ ಯಡಿಯೂರಪ್ಪ ಅವರ ಈ ಯೋಜನೆಯನ್ನೇ ಅರಿತಿರುವ ಬಿಜೆಪಿ ವರಿಷ್ಠರು, ಈ ರಾಜ್ಯ ಪ್ರವಾಸವನ್ನು ಬೇಡ ಎನ್ನುವ ಮಾತನ್ನು ಆರಂಭದಲ್ಲಿ ಆಡಿದ್ದರು.

ಆದರೀಗ ಪ್ರವಾಸಕ್ಕೆ ಒಪ್ಪಿಗೆ ಕೊಟ್ಟರೆ ಒಂದು ಸಮಸ್ಯೆ, ಕೊಡದಿದ್ದರೆ ಇನ್ನೊಂದು ಸಮಸ್ಯೆ ಎನ್ನುವ ರೀತಿಯಾಗಿದೆ. ಏಕೆಂದರೆ, ಈಗಾಗಲೇ ಘೋಷಣೆ ಯಾಗಿರುವ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ, ಬೊಮ್ಮಾಯಿ ನೇತೃತ್ವದ ನೂತನ ಸರಕಾರಕ್ಕೆ ಪ್ರತಿಷ್ಠೆಯ
ಕಣವಾಗಿದೆ. ಆದ್ದರಿಂದ ಈ ಚುನಾವಣೆಯನ್ನು ಗೆಲ್ಲಲೇಬೇಕಾದ ಸ್ಥಿತಿಯಿದೆ. ಲಿಂಗಾಯತ ಪ್ರಭಾವವಿರುವ ಉತ್ತರ ಕರ್ನಾಟಕದಲ್ಲಿ ಚುನಾವಣೆ ಗೆಲ್ಲಲು
‘ಯಡಿಯೂರಪ್ಪ’ ಎನ್ನುವ -ಸ್ ಅಗತ್ಯವಾಗಿದೆ. ಆದ್ದರಿಂದ ಪ್ರವಾಸಕ್ಕೆ ಅವಕಾಶ ಕೊಡದಿದ್ದರೆ, ಈ ಮೂರು ಮಹಾನಗರ ಪಾಲಿಕೆ ಚುನಾವಣೆ ಮೇಲೆ ಹೊಡೆತ
ಬೀಳಲಿದೆ. ಇದಿಷ್ಟೇ ಅಲ್ಲದೇ, ಮುಂಬರಲಿರುವ ಉಪಚುನಾವಣೆ, ಪಂಚಾಯಿತಿ ಚುನಾವಣೆಯಲ್ಲಿಯೂ ಯಡಿಯೂರಪ್ಪ ಅವರ ಬಸವರಾಜ ಬೊಮ್ಮಾಯಿ ಅವರಿಗೆ ಅಗತ್ಯ ಎನ್ನುವುದನ್ನು ಪಕ್ಷದ ವರಿಷ್ಠರು ಹಾಗೂ ಸಂಘ ಪರಿವಾರದವರು ಅರಿತಿದ್ದಾರೆ.

ಆದರೆ ಹಾಗೆಂದು ಯಡಿಯೂರಪ್ಪ ಅವರಿಗೆ ರಾಜ್ಯ ಪ್ರವಾಸ ಮಾಡಲು ಅವಕಾಶ ಕೊಟ್ಟರೆ, ಪುನಃ ಮತ್ತೊಮ್ಮೆ ತಮ್ಮದೇಯಾದ ಪ್ರಭಾವಳಿಯನ್ನು ಸಿದ್ಧಪಡಿಸಿ ಕೊಳ್ಳುವುದು ಖಚಿತ. ಬಿಜೆಪಿಗೆ ಇರುವ ಯಡಿಯೂರಪ್ಪ ಎನ್ನುವ ಪ್ರಭಾವಳಿ ತಗೆಯಬೇಕೆಂದು ವರಿಷ್ಠರು ಮಾಡಿದ್ದ ಯೋಚನೆಗೆ ಈ ಪ್ರವಾಸ ಅಡ್ಡಿಯಾಗುತ್ತದೆ. ಆದ್ದರಿಂದ ಸಂಪೂರ್ಣ ಅವಕಾಶ ನೀಡಲು ಸಾಧ್ಯವಿಲ್ಲ. ಹಾಗೆಂದು, ಯಡಿಯೂರಪ್ಪ ಅವರಿಗೆ ಪ್ರವಾಸ ಮಾಡಬೇಡಿ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಅವರು ಅದನ್ನು ಕೇಳುವುದಿಲ್ಲ ಎನ್ನುವುದು ವರಿಷ್ಠರಿಗೆ ತಿಳಿದ ವಿಚಾರ. ಈ ವಿಚಾರವನ್ನು ಗಮನಿಸಿಯೇ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು, ‘ಯಡಿಯೂರಪ್ಪ ಅವರ ಪ್ರವಾಸಕ್ಕೆ ಅಡ್ಡಿ ಮಾಡುವುದಿಲ್ಲ’ ಎಂದಿದ್ದಾರೆ.

ಆದರೆ ನೇರವಾಗಿ ಅಡ್ಡಿಪಡಿಸದಿದ್ದರೂ, ಪರೋಕ್ಷವಾಗಿ ಹತ್ತು ಹಲವು ನಿರ್ಬಂಧ ವಿಧಿಸುವ ಸಾಧ್ಯತೆಯಿದೆ. ಇದರ ಭಾಗವಾಗಿಯೇ, ಯಡಿಯೂರಪ್ಪ ಅವರು
ರಾಜ್ಯ ಪ್ರವಾಸ ಕೈಗೊಂಡರೆ, ಅದಕ್ಕೆ ಪೂರಕವಾದ ಮಾಹಿತಿಯನ್ನು ಮೊದಲೇ ಪಕ್ಷದ ನಾಯಕರ ಗಮನಕ್ಕೆ ತರಬೇಕು. ಜತೆಗೆ ಪಕ್ಷ ಸಂಘಟನೆಯ ಉದ್ದೇಶ ದಿಂದ ಪ್ರವಾಸ ಮಾಡುತ್ತಿರುವುದರಿಂದ, ಈ ಪ್ರವಾಸವನ್ನು ‘ಯಡಿಯೂರಪ್ಪ ಅವರ ಸಂಘಟನಾ ಪ್ರವಾಸ’ ಎನ್ನುವ ರೀತಿ ಬಿಂಬಿಸುವ ಬದಲು, ರಾಜ್ಯ ಬಿಜೆಪಿಯ ಪ್ರವಾಸ ಎನ್ನುವ ರೀತಿ ಮಾಡಬೇಕು. ಅದಕ್ಕಾಗಿಯೇ ಕೇವಲ ಯಡಿಯೂರಪ್ಪ ಮಾತ್ರ ಪ್ರವಾಸದಲ್ಲಿ ಭಾಗವಹಿಸದೇ, ಅವರೊಂದಿಗೆ ಪಕ್ಷದ ಪ್ರಮುಖರು, ಸರಕಾರದ ಪರವಾಗಿ ಕೆಲವು ಆಯ್ದ ಸಚಿವರನ್ನು ಸೇರಿಸಿಕೊಳ್ಳಬೇಕು.

ಪ್ರತಿ ಜಿಲ್ಲೆಗೆ ಹೋಗುವಾಗಲೂ, ಅಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮನ್ವಯತೆ ಸಾಧಿಸಿ ಈ ಪ್ರವಾಸ ಮಾಡಬೇಕು ಎನ್ನುವ ಷರತ್ತು ವಿಧಿಸುವ ಸಾಧ್ಯತೆಯಿದೆ. ಆದರೆ ಇದಕ್ಕೆ ಯಡಿಯೂರಪ್ಪ ಒಪ್ಪುತ್ತಾರಾ? ಗೊತ್ತಿಲ್ಲ! ಪಕ್ಷದ ವರಿಷ್ಠರು ಈ ರೀತಿ ಷರತ್ತು ವಿಧಿಸುವುದು ಯಡಿಯೂರಪ್ಪ ಅವರಿಗೂ ಸಹ್ಯ ವಾಗುತ್ತಿಲ್ಲ. ಕಾರಣ ಅವರು ಈ ಪ್ರವಾಸದಲ್ಲಿ ಪಕ್ಷದ ಸಂಘಟನೆಗಿಂತ ಹೆಚ್ಚಾಗಿ ತಮ್ಮ ಬಲ ಪ್ರದರ್ಶನದ ಲೆಕ್ಕಾಚಾರದಲ್ಲಿದ್ದರು. ಆದರೀಗ ಇದನ್ನು ಪಕ್ಷದ ಅಧಿಕೃತ ಕಾರ್ಯಕ್ರಮ ಎನ್ನುವ ರೀತಿ‘ಮ ಳೆ ಬಂದು ನಿಂತರು.. ಹನಿಯೊಂದು ಉದುರಿದೆ’ ಎನ್ನುವ ಸಾಲು ಬಿಜೆಪಿಗೂ ಸದ್ಯಕ್ಕೆ ಅನ್ವಯಿಸುತ್ತದೆ.

ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗೆ ಇಳಿದು ಒಂದು ತಿಂಗಳು ಕಳೆದು, ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ತಿಂಗಳು ಕಳೆದಿದೆ. ಸಂಪುಟ ರಚನೆ, ಕ್ಯಾತೆ, ಖಾತೆ ಹಂಚಿಕೆ ಅಸಮಾಧಾನ ಕಡಿಮೆ ಮಾಡಲಾಗಿದೆ ಎಂದೇ ವರಿಷ್ಠರು ಹೇಳುತ್ತಿದ್ದಾರೆ. ಇನ್ನು ಬೊಮ್ಮಾಯಿ ಅವರು ಸಹ ತಮ್ಮ ಸಣ್ಣ ಸಣ್ಣ ನಿರ್ಧಾರಗಳಿಂದ ಸಾರ್ವಜನಿಕ ವಲಯದಲ್ಲಿ ‘ಟಾಕ್ ಪಾಯಿಂಟ್’ ಆಗುತ್ತಿದ್ದಾರೆ. ಸರಕಾರದ ವಿರುದ್ಧ ಮಾತನಾ ಡುವವರಿಲ್ಲ, ಪ್ರತಿಪಕ್ಷಗಳು ಸಹ ಪರೋಕ್ಷವಾಗಿ ಮುಖ್ಯಮಂತ್ರಿಗಳಿಗೆ ಬೆಂಬಲ ನೀಡುತ್ತಿವೆ. ಇನ್ನು ವರಿಷ್ಠರ ವಿಷಯಕ್ಕೆ ಬರುವುದಾದರೆ, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅವರ ಬೆಂಬಲವೂ ಬೊಮ್ಮಾಯಿ ಅವರಿಗಿದೆ.

ಹಾಗಾದರೆ, ರಾಜ್ಯದಲ್ಲಿ ಒಂದು ಸುಭದ್ರ ಸರಕಾರಕ್ಕೆ ಇನ್ನೇನು ಬೇಕು? ಮಾದರಿ ಎನ್ನುವಂತೆ ಈ ಸರಕಾರವಿದೆ ಅಲ್ಲವೇ ಎಂದು ಅಂದುಕೊಂಡರೆ, ಅದು
ತಪ್ಪು. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಈ ಸರಕಾರ ಒಂದು ರೀತಿ ‘ಎಲ್ಲವೂ ಇದ್ದೂ, ಏನೋ ಇಲ್ಲದಂತಾಗಿದೆ’. ಹೌದು, ಬೊಮ್ಮಾಯಿ ಅವರ ಆಡಳಿತ ವೈಖರಿ, ಸಾರ್ವಜನಿಕರಿಗೆ ಸಹಕಾರಿಯಾಗುವ ಹಲವು ತೀರ್ಮಾನಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು, ಜನರಲ್ಲಿಯೂ ಉತ್ತಮ ಅಭಿಪ್ರಾಯ ಮೂಡುತ್ತಿದೆ. ಆದರೆ ಈ ಅಭಿಪ್ರಾಯ ಬಿಜೆಪಿಯ ಸರಕಾರಕ್ಕೆ ಅಥವಾ ಸಂಘಟನೆಗೆ ಸಾಕಾಗುವುದೇ ಎಂದರೆ, ಅಲ್ಲೊಂದು ಕೊರತೆ ಇದೆ. ಆ ಕೊರತೆ ಏನೆಂದರೆ, ಪಕ್ಷದತ್ತ ಜನರನ್ನು ಆಕರ್ಷಣೆ ಮಾಡುವ, ಜನರ ಚಪ್ಪಾಳೆಯನ್ನು ಚುನಾವಣಾ ಸಮಯದಲ್ಲಿ ಮತವಾಗಿ ’convert’ ಮಾಡುವ ಶಕ್ತಿ. ಅದನ್ನು ರಾಜಕೀಯವಾಗಿ ಹೇಳಬೇಕು ಎಂದರೆ, ಪಕ್ಷಕ್ಕೆ ಬೇಕಿರುವ ಒಂದು ಮಾಸ್ ಲೀಡರ್ ವ್ಯಕ್ತಿತ್ವ.

ಬಿಜೆಪಿ ಆರಂಭವಾದ ದಿನದಿಂದ ಬಿಜೆಪಿ ಅಂದರೆ ಯಡಿಯೂರಪ್ಪ, ಯಡಿಯೂರಪ್ಪ ಅಂದರೆ ಬಿಜೆಪಿ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದರಿಂದ, ಇಲ್ಲಿಯವರೆಗೆ ಎರಡನೇ ಹಂತದ ಮಾಸ್ ನಾಯಕರು ಬೆಳೆಸುವ ಗೋಜಿಗೆ ಯಡಿಯೂರಪ್ಪ ಅವರಾಗಲಿ, ಬಿಜೆಪಿ ವರಿಷ್ಠರಾಗಲಿ ಹೋಗಲಿಲ್ಲ. ಇದೀಗ ಅವರನ್ನು ಕೆಳಗೆ
ಇಳಿಸಿದ ಬಳಿಕ ಆ ಸ್ಥಾನವನ್ನು ಭರ್ತಿ ಮಾಡುವವರು ಯಾರು ಎನ್ನುವ ಪ್ರಶ್ನೆ ಈಗಲೂ ಸಾರ್ವಜನಿಕ ವಲಯದಲ್ಲಿದೆ. ಈ ಎಲ್ಲ ಪ್ರಶ್ನೆಗಳ ನಡುವೆ ಅಧಿಕಾರದಿಂದ
ಕೆಳಗೆ ಇಳಿದರೂ ‘ನಾನು ಪಕ್ಷ ಸಂಘಟನೆ ಮಾಡುತ್ತೇನೆ’ ಎಂದು ಹೇಳಿ, ಯಡಿಯೂರಪ್ಪ ಇದೀಗ ರಾಜ್ಯ ಪ್ರವಾಸಕ್ಕೆ ಸಿದ್ಧತೆ ನಡೆಸಿಕೊಂಡಿದ್ದಾರೆ.

ಇದಕ್ಕಾಗಿ ಸುಮಾರು ಒಂದು ಕೋಟಿ ಮೌಲ್ಯದ ಕಾರನ್ನು ಖರೀದಿಸಿದ್ದಾರೆ. ಈ ರಾಜ್ಯ ಪ್ರವಾಸದ ಗೊತ್ತು ಗುರಿಯ ಬಗ್ಗೆ ಸ್ಪಷ್ಟತೆ ಅನೇಕರಿಗೆ ಇಲ್ಲ. ರಾಜ್ಯದಲ್ಲಿ ಚುನಾವಣೆ ಎದುರಾಗಲು ಇನ್ನು ಎರಡು ವರ್ಷವಿದೆ. ಇನ್ನು ಬಿಜೆಪಿಯದ್ದೇ ಸರಕಾರ ಇರುವಾಗ, ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡಿ ಏನು
ಮಾಡಲಿದ್ದಾರೆ ಎನ್ನುವ ಗೊಂದಲವಿದೆ. ಈ ಪ್ರವಾಸ ಬಿಜೆಪಿ ಸಂಘಟನೆಯನ್ನು ಗಟ್ಟಿಗೊಳಿಸುವುದಕ್ಕಾಗಿಯೋ? ತಮ್ಮ ಬೆಂಬಲಿಗರನ್ನು ತಮ್ಮಲ್ಲಿಯೇ
ಉಳಿಸಿಕೊಳ್ಳುವುದಕ್ಕಾಗಿಯೋ? ಅಥವಾ ‘ಮಾಜಿ ಮುಖ್ಯಮಂತ್ರಿ’ಯಾದರೂ ತಮ್ಮ ಶಕ್ತಿ ಮಾತ್ರ ಕುಂದಿಲ್ಲ ಎನ್ನುವ ಸಂದೇಶವನ್ನು ವರಿಷ್ಠರಿಗೆ ರವಾನಿಸುವು ದಕ್ಕಾಗಿಯೋ ಅಥವಾ ಈ ಎಲ್ಲದರ ಮಿಶ್ರಣವೋ ಎನ್ನುವ ಖಚಿತತೆ ಸಿಕ್ಕಿಲ್ಲ.

ಆದರೂ ಗಣಪತಿ ಹಬ್ಬದ ಬಳಿಕ ರಾಜ್ಯ ಪ್ರವಾಸಕ್ಕೆ ಸಿದ್ಧತೆಯನ್ನು ಮಾತ್ರ ಮಾಡಿಕೊಳ್ಳಲಾಗಿದೆ. ಇದಕ್ಕೆ ವರಿಷ್ಠರ ಅನುಮತಿ ಸಿಗುವುದೋ? ಸಿಕ್ಕರು ಏನಾದರೂ ಷರತ್ತು ವಿಧಿಸುವರೋ ಎನ್ನುವುದು ಕಾದು ನೋಡಬೇಕಿದೆ. ಹಾಗೆ ನೋಡಿದರೆ, ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ಹಿಂದೆ ಹಲವು ಪರ-ವಿರೋಧ
ಅಭಿಪ್ರಾಯಗಳಿವೆ. ಬಿಜೆಪಿ ವರಿಷ್ಠರಿಗೆ ಈ ಪ್ರವಾಸವನ್ನು ಅಧಿಕೃತಗೊಳಿಸಬೇಕೋ ಅಥವಾ ತಡೆಯಬೇಕೋ ಎನ್ನುವ ಗೊಂದಲಗಳಿವೆ. ಯಡಿಯೂರಪ್ಪನವರಿಗೆ ರಾಜ್ಯ ಪ್ರವಾಸದ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕು ಎನ್ನುವುದಾಗಿದೆ.

ಆದರೆ ಯಡಿಯೂರಪ್ಪ ಅವರ ಈ ಯೋಜನೆಯನ್ನೇ ಅರಿತಿರುವ ಬಿಜೆಪಿ ವರಿಷ್ಠರು, ಈ ರಾಜ್ಯ ಪ್ರವಾಸವನ್ನು ಬೇಡ ಎನ್ನುವ ಮಾತನ್ನು ಆರಂಭದಲ್ಲಿ ಆಡಿದ್ದರು. ಆದರೀಗ ಪ್ರವಾಸಕ್ಕೆ ಒಪ್ಪಿಗೆ ಕೊಟ್ಟರೆ ಒಂದು ಸಮಸ್ಯೆ, ಕೊಡದಿದ್ದರೆ ಇನ್ನೊಂದು ಸಮಸ್ಯೆ ಎನ್ನುವ ರೀತಿಯಾಗಿದೆ. ಏಕೆಂದರೆ, ಈಗಾಗಲೇ ಘೋಷಣೆಯಾಗಿ ರುವ ಬೆಳಗಾವಿ, ಹುಬ್ಬಳ್ಳಿ-ಧಾರವಾಡ  ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ, ಬೊಮ್ಮಾಯಿ ನೇತೃತ್ವದ ನೂತನ ಸರಕಾರಕ್ಕೆ ಪ್ರತಿಷ್ಠೆಯ
ಕಣವಾಗಿದೆ. ಆದ್ದರಿಂದ ಈ ಚುನಾವಣೆಯನ್ನು ಗೆಲ್ಲಲೇಬೇಕಾದ ಸ್ಥಿತಿಯಿದೆ.

ಲಿಂಗಾಯತ ಪ್ರಭಾವವಿರುವ ಉತ್ತರ ಕರ್ನಾಟಕದಲ್ಲಿ ಚುನಾವಣೆ ಗೆಲ್ಲಲು ‘ಯಡಿಯೂರಪ್ಪ’ ಎನ್ನುವ ಫೇಸ್ ಅಗತ್ಯವಾಗಿದೆ. ಆದ್ದರಿಂದ ಪ್ರವಾಸಕ್ಕೆ ಅವಕಾಶ ಕೊಡದಿದ್ದರೆ, ಈ ಮೂರು ಮಹಾನಗರ ಪಾಲಿಕೆ ಚುನಾವಣೆ ಮೇಲೆ ಹೊಡೆತ ಬೀಳಲಿದೆ. ಇದಿಷ್ಟೇ ಅಲ್ಲದೇ, ಮುಂಬರಲಿರುವ ಉಪಚುನಾವಣೆ, ಪಂಚಾಯಿತಿ ಚುನಾವಣೆಯಲ್ಲಿಯೂ ಯಡಿಯೂರಪ್ಪ ಅವರ ಬಸವರಾಜ ಬೊಮ್ಮಾಯಿ ಅವರಿಗೆ ಅಗತ್ಯ ಎನ್ನುವುದನ್ನು ಪಕ್ಷದ ವರಿಷ್ಠರು ಹಾಗೂ ಸಂಘ ಪರಿವಾರದವರು ಅರಿತಿದ್ದಾರೆ.

ಆದರೆ ಹಾಗೆಂದು ಯಡಿಯೂರಪ್ಪ ಅವರಿಗೆ ರಾಜ್ಯ ಪ್ರವಾಸ ಮಾಡಲು ಅವಕಾಶ ಕೊಟ್ಟರೆ, ಪುನಃ ಮತ್ತೊಮ್ಮೆ ತಮ್ಮದೇಯಾದ ಪ್ರಭಾವಳಿಯನ್ನು ಸಿದ್ಧಪಡಿಸಿ ಕೊಳ್ಳುವುದು ಖಚಿತ. ಬಿಜೆಪಿಗೆ ಇರುವ ಯಡಿಯೂರಪ್ಪ ಎನ್ನುವ ಪ್ರಭಾವಳಿ ತಗೆಯಬೇಕೆಂದು ವರಿಷ್ಠರು ಮಾಡಿದ್ದ ಯೋಚನೆಗೆ ಈ ಪ್ರವಾಸ ಅಡ್ಡಿಯಾಗುತ್ತದೆ. ಆದ್ದರಿಂದ ಸಂಪೂರ್ಣ ಅವಕಾಶ ನೀಡಲು ಸಾಧ್ಯವಿಲ್ಲ. ಹಾಗೆಂದು, ಯಡಿಯೂರಪ್ಪ ಅವರಿಗೆ ಪ್ರವಾಸ ಮಾಡಬೇಡಿ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಅವರು ಅದನ್ನು ಕೇಳುವುದಿಲ್ಲ ಎನ್ನುವುದು ವರಿಷ್ಠರಿಗೆ ತಿಳಿದ ವಿಚಾರ. ಈ ವಿಚಾರವನ್ನು ಗಮನಿಸಿಯೇ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು, ‘ಯಡಿಯೂರಪ್ಪ ಅವರ ಪ್ರವಾಸಕ್ಕೆ ಅಡ್ಡಿ ಮಾಡುವುದಿಲ್ಲ’ ಎಂದಿದ್ದಾರೆ.

ಆದರೆ ನೇರವಾಗಿ ಅಡ್ಡಿಪಡಿಸದಿದ್ದರೂ, ಪರೋಕ್ಷವಾಗಿ ಹತ್ತು ಹಲವು ನಿರ್ಬಂಧ ವಿಽಸುವ ಸಾಧ್ಯತೆಯಿದೆ. ಇದರ ಭಾಗವಾಗಿಯೇ, ಯಡಿಯೂರಪ್ಪ ಅವರು
ರಾಜ್ಯ ಪ್ರವಾಸ ಕೈಗೊಂಡರೆ, ಅದಕ್ಕೆ ಪೂರಕವಾದ ಮಾಹಿತಿಯನ್ನು ಮೊದಲೇ ಪಕ್ಷದ ನಾಯಕರ ಗಮನಕ್ಕೆ ತರಬೇಕು. ಜತೆಗೆ ಪಕ್ಷ ಸಂಘಟನೆಯ ಉದ್ದೇಶ ದಿಂದ ಪ್ರವಾಸ ಮಾಡುತ್ತಿರುವುದರಿಂದ, ಈ ಪ್ರವಾಸವನ್ನು ‘ಯಡಿಯೂರಪ್ಪ ಅವರ ಸಂಘಟನಾ ಪ್ರವಾಸ’ ಎನ್ನುವ ರೀತಿ ಬಿಂಬಿಸುವ ಬದಲು, ರಾಜ್ಯ ಬಿಜೆಪಿಯ ಪ್ರವಾಸ ಎನ್ನುವ ರೀತಿ ಮಾಡಬೇಕು. ಅದಕ್ಕಾಗಿಯೇ ಕೇವಲ ಯಡಿಯೂರಪ್ಪ ಮಾತ್ರ ಪ್ರವಾಸದಲ್ಲಿ ಭಾಗವಹಿಸದೇ, ಅವರೊಂದಿಗೆ ಪಕ್ಷದ ಪ್ರಮುಖರು, ಸರಕಾರದ ಪರವಾಗಿ ಕೆಲವು ಆಯ್ದ ಸಚಿವರನ್ನು ಸೇರಿಸಿಕೊಳ್ಳಬೇಕು.

ಪ್ರತಿ ಜಿಲ್ಲೆಗೆ ಹೋಗುವಾಗಲೂ, ಅಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮನ್ವಯತೆ ಸಾಧಿಸಿ ಈ ಪ್ರವಾಸ ಮಾಡಬೇಕು ಎನ್ನುವ ಷರತ್ತು ವಿಧಿಸುವ ಸಾಧ್ಯತೆಯಿದೆ. ಆದರೆ ಇದಕ್ಕೆ ಯಡಿಯೂರಪ್ಪ ಒಪ್ಪುತ್ತಾರಾ? ಗೊತ್ತಿಲ್ಲ! ಪಕ್ಷದ ವರಿಷ್ಠರು ಈ ರೀತಿ ಷರತ್ತು ವಿಧಿಸುವುದು ಯಡಿಯೂರಪ್ಪ ಅವರಿಗೂ ಸಹ್ಯ ವಾಗುತ್ತಿಲ್ಲ. ಕಾರಣ ಅವರು ಈ ಪ್ರವಾಸದಲ್ಲಿ ಪಕ್ಷದ ಸಂಘಟನೆಗಿಂತ ಹೆಚ್ಚಾಗಿ ತಮ್ಮ ಬಲ ಪ್ರದರ್ಶನದ ಲೆಕ್ಕಾಚಾರದಲ್ಲಿದ್ದರು. ಆದರೀಗ ಇದನ್ನು ಪಕ್ಷದ ಅಧಿಕೃತ ಕಾರ್ಯಕ್ರಮ ಎನ್ನುವ ರೀತಿ ಮಾಡಿದರೆ, ತಮಗೆ ಇದರಿಂದ ‘ಲಾಭ’ ಸಿಗುವುದಿಲ್ಲ.

ಅದರಲ್ಲಿಯೂ ಈ ಪ್ರವಾಸದ ಹಿಂದೆ ಮುಂಬರುವ ಚುನಾವಣೆಗಳ ಲೆಕ್ಕಾಚಾರ ಇರುವುದರಿಂದ, ವರಿಷ್ಠರ ‘ಷರತ್ತು’ಗಳನ್ನು ಯಾವ ರೀತಿ ಪಾಲಿಸುತ್ತಾರೆ ಎನ್ನುವುದು ಯಕ್ಷಪ್ರಶ್ನೆ. ಆದರೆ ಗೊಂದಲ ನಡುವೆಯೇ, ತವರು ಜಿಲ್ಲೆ ಶಿವಮೊಗ್ಗದಲ್ಲಿ ತಮ್ಮ ಪ್ರವಾಸವನ್ನು ಆರಂಭಿಸಿದ್ದಾರೆ. ಹಬ್ಬದ ಬಳಿಕ ಯಾವ ರೀತಿ ಪ್ರವಾಸ ಮುಂದುವರಿಸುತ್ತಾರೆ ಎನ್ನುವ ಸ್ಪಷ್ಟತೆ ಸಿಗಬೇಕಷ್ಟೆ. ರಾಜ್ಯ ಪ್ರವಾಸಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಠರ ನಡುವಿನ ಈ ಅನುಮಾನದ ದಾಳಗಳು, ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿರುವುದಂತು ಸುಳ್ಳಲ್ಲ. ರಾಜ್ಯ ಬಿಜೆಪಿ, ಸರಕಾರದ ಗೊಂದಲಗಳಿಂದ ಪಕ್ಷ ಸಂಘಟನೆಯಲ್ಲಿ ಮೂಡಿರುವ ಬಿರುಕನ್ನು ಈಗಲೇ ಸರಿಪಡಿಸಿಕೊಳ್ಳಬೇಕಿದೆ.

ಲಿಂಗಾಯತ ಮತ ಬ್ಯಾಂಕ್‌ಗೂ ಸಮಸ್ಯೆಯಾಗದೇ, ಪಕ್ಷಕ್ಕೂ ಡ್ಯಾಮೇಜ್ ಆಗದೇ, ಯಡಿಯೂರಪ್ಪ ಅವರ ಗೌರವಕ್ಕೂ ಧಕ್ಕೆಯಾಗದ ರೀತಿ ನಡೆದುಕೊಳ್ಳ ಬೇಕಿದೆ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿದೆ. ಇದರ ಜತೆಜತೆಗೆ ಮುಂಬರುವ ಮಾಸ್ ನಾಯಕ ಯಾರು ಎನ್ನುವುದನ್ನು ವರಿಷ್ಠರು ನೋಡಬೇಕಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಅಥವಾ ಮೋದಿ, ಅಮಿತ್ ಶಾ ಹೆಸರಲ್ಲಿ ಚುನಾವಣೆ ಮಾಡಿದರೆ, ಕರ್ನಾಟಕದಲ್ಲಿ ಯಶಸ್ಸು ಸಿಗುವುದಿಲ್ಲ. ಕಾಂಗ್ರೆಸ್ ಈಗಾಗಲೇ ಚುನಾವಣಾ ತಯಾರಿ ಆರಂಭಿಸಿದೆ. ಬಿಜೆಪಿಯಲ್ಲಿ ಬೊಮ್ಮಾಯಿ ಅವರು ಮುಂದಿನ ದಿನದಲ್ಲಿ ಅತ್ಯುತ್ತಮ ಸಿಎಂ ಎನಿಸಿಕೊಂಡರೂ, ‘ಮಾಸ್ ಲೀಡರ್’ ಆಗುವರೇ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಇನ್ನು ನಳಿನ್‌ಕುಮಾರ್ ಕಟೀಲ್ ಅವರು ಎರಡು ವರ್ಷದಲ್ಲಿ ೧೮ ಬಾರಿ ರಾಜ್ಯ ಸುತ್ತಿದರೂ, ಜನರನ್ನು ತನ್ನತ್ತ ಸೆಳೆಯುವ ಕಲೆಯಿನ್ನೂ ಸಿದ್ಧಿಸಿಲ್ಲ. ಹಿರಿಯ ನಾಯಕರಾಧ ಜಗದೀಶ್ ಶೆಟ್ಟರ್, ಸದಾನಂದಗೌಡ, ಈಶ್ವರಪ್ಪ ಅವರಂತ ಸಾಲು ಸಾಲು ಹೆಸರುಗಳಿದ್ದರೂ, ಅವರು ಕೇವಲ ಕೆಲವು ಕ್ಷೇತ್ರ ಅಥವಾ ಒಂದು ಸಮುದಾಯಕ್ಕೆ ಸೀಮಿತ. ಈ ಎಲ್ಲವನ್ನು ಮೀರಿ ಜಾತಿ ಆಧಾರಿತ ಮತಬ್ಯಾಂಕ್ ಬದಲು ಹಿಂದುತ್ವ ಎನ್ನುವುದರ ಮೇಲೆ ಚುನಾವಣೆ ನಡೆಸೋಣ ಎನ್ನುವ ಯೋಚನೆ ಬಿಜೆಪಿ ವರಿಷ್ಠರಿಗೆ ಇದೆ.

ಆದರೆ ಕರ್ನಾಟಕದಲ್ಲಿ ಇದು ಸಾಧ್ಯವೇ? ಎನ್ನುವುದು ಗೊತ್ತಿಲ್ಲ. ಇನ್ನುಳಿದಂತೆ ಎರಡನೇ ಹಂತದ ನಾಯಕತ್ವದಲ್ಲಿ ಸಿ.ಟಿ. ರವಿ ಇದ್ದಾರೆ. ಆದರೆ ಅವರಿಗಿನ್ನೂ ಟ್ರೇನಿಂಗ್ ಟೈಮ್ ಮುಗಿದಿಲ್ಲ. ತೇಜಸ್ವಿ ಸೂರ್ಯ ಅವರಿಗೆ ಛರಿಶ್ಮಾ ಇದೆ. ಆದರೆ ಬೆಂಗಳೂರಿನ ಆಚೆ ಅವರನ್ನು ಮತದಾನ ಪ್ರಭು ಯಾವ ರೀತಿ ಸ್ವೀಕರಿಸು ತ್ತಾನೆ ಗೊತ್ತಿಲ್ಲ. ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಆರ್. ಅಶೋಕ್ ಅವರಿಗೆ ನೀಡಿದ ಅವಕಾಶವನ್ನು ಉಪಯೋಗಿಸಿಕೊಂಡಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಿದ್ದ ವಿಜಯೇಂದ್ರ ಅವರಿಗೆ ಒಂದು ‘ಮುಖ್ಯಮಂತ್ರಿ ಪುತ್ರ’ ಎನ್ನುವ ಗರಿಯಿಲ್ಲ. ಅದನ್ನು ಮೀರಿ ಸಂಘಟಿಸಲು ಅವರು ಸಿದ್ಧರಿದ್ದರೂ, ಪಕ್ಷದ ವರಿಷ್ಠರು ‘ಕುಟುಂಬ ರಾಜಕಾರಣ’ದ ನೆಪ ಹೇಳಿ ಹಿಂದಕ್ಕೆ ಸರಿಸುವ ಸಾಧ್ಯತೆಯೇ ಹೆಚ್ಚಿದೆ.

ಈ ರೀತಿ ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ಯಾರೆಂಬ ಪ್ರಶ್ನೆಯಲ್ಲಿಯೇ ವರಿಷ್ಠರೂ ದಿನದೂಡುತ್ತಿರುವ, ಪಕ್ಷದ ಕಾರ್ಯಕರ್ತರಿಗೆ ಈ ಬಗ್ಗೆ
ಸ್ಪಷ್ಟತೆ ನೀಡದೇ ಕಾಲ ಕಳೆಯುತ್ತಿರುವುದರಿಂದ, ಈ ಗೊಂದಲಗಳು ಮುಂದುವರಿಯುವುದು ಸಹಜ. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಯನ್ನಾಗಿ, ನಳಿನ್‌ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದರೂ, ಈ ಇಬ್ಬರಿಗೂ ಮಾಸ್ ಲೀಡರ್‌ಶಿಪ್ ಇಮೇಜ್ ಇಲ್ಲದಿರುವುದು ಬಿಜೆಪಿಯ ಮಟ್ಟಿಗೆ ಒಂದು ‘ಲೂಪ್ ಹೋಲ್’. ಕಟೀಲ್ ಅವರಿಗೆ ಎರಡು ವರ್ಷ ಅವಕಾಶ ಸಿಕ್ಕರೂ, ಈಗಲೂ ‘ಕರಾವಳಿ’ ಮೀರಿ ಬರುತ್ತಿಲ್ಲ.

ಆದ್ದರಿಂದ 2023ರ ವಿಧಾನಸಭೆ, ಲೋಕಸಭಾ ಚುನಾವಣಾ ದೃಷ್ಟಿಯಿಂದ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ. ಇನ್ನು ಯಡಿಯೂರಪ್ಪ ಅವರ ಕಡೆಯಿಂದ
ಯೋಚಿಸುವುದಾದರೆ, ಈ ಎರಡು ಚುನಾವಣೆಯ ಸೋಲು-ಗೆಲುವಿನಿಂದ ವೈಯಕ್ತಿಕವಾಗಿ ಏನು ಸಾಧಿಸುವುದು ಇಲ್ಲದಿದ್ದರೂ, ಪುತ್ರ ವಿಜಯೇಂದ್ರ ಅವರ
‘ರಾಜಕೀಯ ಭವಿಷ್ಯ’ದ ದೃಷ್ಟಿಯಿಂದಾದರೂ ಗೆಲುವು ಅನಿವಾರ್ಯ ಮತ್ತು ಅಗತ್ಯ ಎಂದರೆ ತಪ್ಪಾಗುವುದಿಲ್ಲ  ಮಾಡಿದರೆ, ತಮಗೆ ಇದರಿಂದ ‘ಲಾಭ’ ಸಿಗುವು ದಿಲ್ಲ.

ಅದರಲ್ಲಿಯೂ ಈ ಪ್ರವಾಸದ ಹಿಂದೆ ಮುಂಬರುವ ಚುನಾವಣೆಗಳ ಲೆಕ್ಕಾಚಾರ ಇರುವುದರಿಂದ, ವರಿಷ್ಠರ ‘ಷರತ್ತು’ಗಳನ್ನು ಯಾವ ರೀತಿ ಪಾಲಿಸುತ್ತಾರೆ ಎನ್ನುವುದು ಯಕ್ಷಪ್ರಶ್ನೆ. ಆದರೆ ಗೊಂದಲ ನಡುವೆಯೇ, ತವರು ಜಿಲ್ಲೆ ಶಿವಮೊಗ್ಗದಲ್ಲಿ ತಮ್ಮ ಪ್ರವಾಸವನ್ನು ಆರಂಭಿಸಿದ್ದಾರೆ. ಹಬ್ಬದ ಬಳಿಕ ಯಾವ ರೀತಿ ಪ್ರವಾಸ ಮುಂದುವರಿಸುತ್ತಾರೆ ಎನ್ನುವ ಸ್ಪಷ್ಟತೆ ಸಿಗಬೇಕಷ್ಟೆ. ರಾಜ್ಯ ಪ್ರವಾಸಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಠರ ನಡುವಿನ ಈ ಅನುಮಾನದ ದಾಳಗಳು, ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿರುವುದಂತು ಸುಳ್ಳಲ್ಲ.

ರಾಜ್ಯ ಬಿಜೆಪಿ, ಸರಕಾರದ ಗೊಂದಲಗಳಿಂದ ಪಕ್ಷ ಸಂಘಟನೆಯಲ್ಲಿ ಮೂಡಿರುವ ಬಿರುಕನ್ನು ಈಗಲೇ ಸರಿಪಡಿಸಿಕೊಳ್ಳಬೇಕಿದೆ. ಲಿಂಗಾಯತ ಮತ ಬ್ಯಾಂಕ್‌ಗೂ ಸಮಸ್ಯೆಯಾಗದೇ, ಪಕ್ಷಕ್ಕೂ ಡ್ಯಾಮೇಜ್ ಆಗದೇ, ಯಡಿಯೂರಪ್ಪ ಅವರ ಗೌರವಕ್ಕೂ ಧಕ್ಕೆಯಾಗದ ರೀತಿ ನಡೆದುಕೊಳ್ಳಬೇಕಿದೆ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿದೆ. ಇದರ ಜತೆಜತೆಗೆ ಮುಂಬರುವ ಮಾಸ್ ನಾಯಕ ಯಾರು ಎನ್ನುವುದನ್ನು ವರಿಷ್ಠರು ನೋಡಬೇಕಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಅಥವಾ ಮೋದಿ, ಅಮಿತ್ ಶಾ ಹೆಸರಲ್ಲಿ ಚುನಾವಣೆ ಮಾಡಿದರೆ, ಕರ್ನಾಟಕದಲ್ಲಿ ಯಶಸ್ಸು ಸಿಗುವುದಿಲ್ಲ.

ಕಾಂಗ್ರೆಸ್ ಈಗಾಗಲೇ ಚುನಾವಣಾ ತಯಾರಿ ಆರಂಭಿಸಿದೆ. ಬಿಜೆಪಿಯಲ್ಲಿ ಬೊಮ್ಮಾಯಿ ಅವರು ಮುಂದಿನ ದಿನದಲ್ಲಿ ಅತ್ಯುತ್ತಮ ಸಿಎಂ ಎನಿಸಿಕೊಂಡರೂ,
‘ಮಾಸ್ ಲೀಡರ್’ ಆಗುವರೇ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಇನ್ನು ನಳಿನ್‌ಕುಮಾರ್ ಕಟೀಲ್ ಅವರು ಎರಡು ವರ್ಷದಲ್ಲಿ ೧೮ ಬಾರಿ ರಾಜ್ಯ ಸುತ್ತಿದರೂ, ಜನರನ್ನು ತನ್ನತ್ತ ಸೆಳೆಯುವ ಕಲೆಯಿನ್ನೂ ಸಿದ್ಧಿಸಿಲ್ಲ. ಹಿರಿಯ ನಾಯಕರಾಧ ಜಗದೀಶ್ ಶೆಟ್ಟರ್, ಸದಾನಂದಗೌಡ, ಈಶ್ವರಪ್ಪ ಅವರಂತ ಸಾಲು ಸಾಲು ಹೆಸರುಗಳಿದ್ದರೂ, ಅವರು ಕೇವಲ ಕೆಲವು ಕ್ಷೇತ್ರ ಅಥವಾ ಒಂದು ಸಮುದಾಯಕ್ಕೆ ಸೀಮಿತ.

ಈ ಎಲ್ಲವನ್ನು ಮೀರಿ ಜಾತಿ ಆಧಾರಿತ ಮತಬ್ಯಾಂಕ್ ಬದಲು ಹಿಂದುತ್ವ ಎನ್ನುವುದರ ಮೇಲೆ ಚುನಾವಣೆ ನಡೆಸೋಣ ಎನ್ನುವ ಯೋಚನೆ ಬಿಜೆಪಿ ವರಿಷ್ಠರಿಗೆ ಇದೆ.
ಆದರೆ ಕರ್ನಾಟಕದಲ್ಲಿ ಇದು ಸಾಧ್ಯವೇ? ಎನ್ನುವುದು ಗೊತ್ತಿಲ್ಲ. ಇನ್ನುಳಿದಂತೆ ಎರಡನೇ ಹಂತದ ನಾಯಕತ್ವದಲ್ಲಿ ಸಿ.ಟಿ. ರವಿ ಇದ್ದಾರೆ. ಆದರೆ ಅವರಿಗಿನ್ನೂ ಟ್ರೇನಿಂಗ್ ಟೈಮ್ ಮುಗಿದಿಲ್ಲ. ತೇಜಸ್ವಿ ಸೂರ್ಯ ಅವರಿಗೆ ಛರಿಶ್ಮಾ ಇದೆ. ಆದರೆ ಬೆಂಗಳೂರಿನ ಆಚೆ ಅವರನ್ನು ಮತದಾನ ಪ್ರಭು ಯಾವ ರೀತಿ ಸ್ವೀಕರಿಸು ತ್ತಾನೆ ಗೊತ್ತಿಲ್ಲ.

ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಆರ್. ಅಶೋಕ್ ಅವರಿಗೆ ನೀಡಿದ ಅವಕಾಶವನ್ನು ಉಪಯೋಗಿಸಿಕೊಂಡಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯನ್ನು ಗೆಲ್ಲಿಸಿಕೊಂಡು ಬರುತ್ತಿದ್ದ ವಿಜಯೇಂದ್ರ ಅವರಿಗೆ ಒಂದು ‘ಮುಖ್ಯಮಂತ್ರಿ ಪುತ್ರ’ ಎನ್ನುವ ಗರಿಯಿಲ್ಲ. ಅದನ್ನು ಮೀರಿ ಸಂಘಟಿಸಲು ಅವರು ಸಿದ್ಧರಿದ್ದರೂ, ಪಕ್ಷದ ವರಿಷ್ಠರು ‘ಕುಟುಂಬ ರಾಜಕಾರಣ’ದ ನೆಪ ಹೇಳಿ ಹಿಂದಕ್ಕೆ ಸರಿಸುವ ಸಾಧ್ಯತೆಯೇ ಹೆಚ್ಚಿದೆ. ಈ ರೀತಿ ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ಯಾರೆಂಬ ಪ್ರಶ್ನೆಯಲ್ಲಿಯೇ ವರಿಷ್ಠರೂ ದಿನದೂಡುತ್ತಿರುವ, ಪಕ್ಷದ ಕಾರ್ಯಕರ್ತರಿಗೆ ಈ ಬಗ್ಗೆ ಸ್ಪಷ್ಟತೆ ನೀಡದೇ ಕಾಲ ಕಳೆಯು ತ್ತಿರುವುದರಿಂದ, ಈ ಗೊಂದಲ ಗಳು ಮುಂದುವರಿಯುವುದು ಸಹಜ.

ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ, ನಳಿನ್‌ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದರೂ, ಈ ಇಬ್ಬರಿಗೂ ಮಾಸ್ ಲೀಡರ್‌ಶಿಪ್ ಇಮೇಜ್ ಇಲ್ಲದಿರುವುದು ಬಿಜೆಪಿಯ ಮಟ್ಟಿಗೆ ಒಂದು ‘ಲೂಪ್ ಹೋಲ್’. ಕಟೀಲ್ ಅವರಿಗೆ ಎರಡು ವರ್ಷ ಅವಕಾಶ ಸಿಕ್ಕರೂ, ಈಗಲೂ ‘ಕರಾವಳಿ’ ಮೀರಿ ಬರುತ್ತಿಲ್ಲ. ಆದ್ದರಿಂದ 2023ರ ವಿಧಾನಸಭೆ, ಲೋಕಸಭಾ ಚುನಾವಣಾ ದೃಷ್ಟಿಯಿಂದ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ.
ಇನ್ನು ಯಡಿಯೂರಪ್ಪ ಅವರ ಕಡೆಯಿಂದ ಯೋಚಿಸುವುದಾದರೆ, ಈ ಎರಡು ಚುನಾವಣೆಯ ಸೋಲು-ಗೆಲುವಿನಿಂದ ವೈಯಕ್ತಿಕವಾಗಿ ಏನು ಸಾಧಿಸುವುದು ಇಲ್ಲದಿದ್ದರೂ, ಪುತ್ರ ವಿಜಯೇಂದ್ರ ಅವರ ‘ರಾಜಕೀಯ ಭವಿಷ್ಯ’ದ ದೃಷ್ಟಿಯಿಂದಾದರೂ ಗೆಲುವು ಅನಿವಾರ್ಯ ಮತ್ತು ಅಗತ್ಯ ಎಂದರೆ ತಪ್ಪಾಗುವುದಿಲ್ಲ.