Sunday, 8th September 2024

ಚಂಬಾ ಕಣಿವೆಯ ಕತ್ತಲಲ್ಲಿ…

ಅಲೆಮಾರಿಯ ಡೈರಿ

ಸಂತೋಷ ಕುಮಾರ ಮೆಹೆಂದಳೆ

mehandale100@gmail.com

ಎದುರಿನವರು ಕಾಣದಷ್ಟು ಕೊನೆಗೆ ಮಧ್ಯಾಹ್ನದ ಹೊತ್ತು ಸೂರ್ಯ ರಶ್ಮಿಯೂ ಬಾರದಷ್ಟು ದಟ್ಟ ಮಂಜು ಮಳೆಯಂತೆ ಸುರಿಯುತ್ತಿತ್ತು. ಶೀತಲ
ಉಷ್ಣಾಂಶ ಸಂಜೆಯಾಗುತ್ತಿದ್ದಂತೆ ಮೈನಸ್ ತಲುಪಿ ಬೆನ್ನ ಹುರಿಗುಂಟ ಚಳಿ ಸುರಿಯುತ್ತಿತ್ತು. ದಟ್ಟ ಪೈನ್ ವೃಕ್ಷಗಳು ಅದೆಷ್ಟು ಅಗಲ ಪಸರಿಸಿಕೊಂಡು, ನಿಂತಿರುತ್ತವೆಂದರೆ ಮಧ್ಯಾಹ್ನದ ಬಿಸಿಲನ್ನೂ ಒಳಕ್ಕೆ ಬಿಡಲಾರವು.

ಮತ್ಹೇಗೆ ಬೆಳಕಾದೀತು ಈ ನೆಲದಲ್ಲಿ. ಅಂತ ಕತ್ತಲೆಯ ಫೀಲು ಕೊಡುವ ನೆಲ ಕಾಲಾ ಟಾಪ್ ಆಗದೇ ಇನ್ನೇನಾದೀತು..?  ಅದು ಹಿಮಾಚಲ ಪ್ರದೇಶ ಮತ್ತು ಜಮ್ಮುವಿನ ಮಧ್ಯೆ ಸ್ಥಾಪಿತವಾಗಿರುವ ಚಂಬಾ ಕಣಿವೆ. ದೇಶದ ಅತ್ಯುತ್ತಮ ಗಿರಿಧಾಮಗಳಲ್ಲಿ ಒಂದಾದ ಡಾಲ್‌ಹೌಸಿ ಬೇಸ್ ಕ್ಯಾಂಪ್ ಮಾಡಿ ಕೊಂಡರೆ, ಅಲ್ಲಿಂದ ಹೊರಟು ಹದಿಮೂರು ಸಾವಿರ ಅಡಿ ಏರಿ ನಿಂತರೆ ನಮ್ಮ ಕಾಲ ಕೆಳಗೆ ಕಾಲಾಟಾಪ್ ಅಥವಾ ಚಂಬಾ ಕತ್ತಲ ಕಣಿವೆಯ ನೆತ್ತಿ. ಅಲ್ಲಿ ಸೂರ್ಯನ ಕಿರಣಗಳಿರಲ್ಲ… ಮಂದ ಬೆಳಕಿತ್ತು. ನೀರಿರಲಿಲ್ಲ, ಆದರೆ ಗಾಳಿಯಲ್ಲಿನ ತೇವಾಂಶ ಎಲ್ಲವೂ ಮಂಜಾಗಿ ಮುತ್ತಿನ ಮಣಿಗಳಂತೆ ಮೈ ಕೈಗೆಲ್ಲಾ ಅಡರುತ್ತಿತ್ತು. ಗಾಳಿ ಯಿರಲಿಲ್ಲ… ಗಂಟೆಗೆ ಹದಿನೆಂಟು ಮೈಲಿ ವೇಗದಿಂದ ಬೀಸುವ ಶೀತಲ ಮಾರುತಗಳಿದ್ದವು.

ಉಸಿರಾಡಿದ ವಾಯು ಅದಕ್ಕೂ ಮೊದಲೇ ಹಬೆಯಾಗುತ್ತಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ನಮಗಿಂತಲೂ ಮುಂಚೆ ಎದ್ದು ಎಲ್ಲೆಲ್ಲಿ ಬಿಸಿಲು ಬರುತ್ತದಲ್ಲೆಲ್ಲ ಕಾಯ್ದು ಕೂತು ಬಿಸಿಲು ಕಾಯಿಸಲು ರೊಣೆ ರೊಣೆ ಕೂದಲ ಕರಡಿಗಳು ಜಾಗ ಹುಡುಕಿಕೊಂಡು ತಮ್ಮ ವಸಾಹತು ಸ್ಥಾಪಿಸಿದ್ದು ಕಾಣಿಸುತ್ತಿತ್ತು ದೂರದಿಂದ. ಡಾರ್ಜಿಲಿಂಗ್‌ ನಿಂದ ಸರಿ ಸುಮಾರು ಎಂಬತ್ತು ಕಿ.ಮೀ. ದೂರದ ಕಾಲಾ ಟಾಪ್ ಪ್ರದೇಶ ಅದ್ಭುತ ಎತ್ತರದ ಪ್ರದೇಶಗಳ ಲ್ಲೊಂದು. ಅಪರೂಪಕ್ಕೆ ಅಂಥಾ ಕತ್ತಲ ಲೋಕದಲ್ಲೂ ಪರ್ವತದ ದಿಬ್ಬದ ಮೂಗಿಗೆ ಕಟ್ಟಿಕೊಂಡು ನಿಂತಂತೆ ಒಂದೊಂದು ಮನೆಗಳು ಕಂಡು ಅಚ್ಚರಿ ಹುಟ್ಟಿಸುತ್ತವೆ.

ಅದಕ್ಕಿಂತಲೂ ಅಚ್ಚರಿ ಅಲ್ಲಿನ ಜನಗಳ ಜೀವನ ಪ್ರೇಮ. ಖುಷಿಯಾಗಿ ನಮ್ಮನ್ನು ಅಣಗಿಸುತ್ತಾ ನಿಲ್ಲುತ್ತಿದ್ದ ಕೆಂಪುಮುಖದ ಮಕ್ಕಳು ಮರೆಯದ ಚಿತ್ರಗಳಂತೆ ಮನದಲ್ಲಿ ನೆಲೆ ನಿಲ್ಲುತ್ತಾರೆ. ಬೆಳಗಿನ ಬಿಸಿಲು ಪ್ರತಿಯೊಬ್ಬ ರಿಗೂ ಇಲ್ಲಿ ಅಗಾಧ ಸಂಪತ್ತು. ಕುಕ್ಕರಗಾಲಲ್ಲಿ ದೊಂಗಡಿ ಹೊದ್ದು ಕೊಂಡು ಬಿಸಿಲಿಗೆ ಮುಖ ಮಾಡಿ ಮನೆ ಜನ, ಸಂಸಾರ, ಓಣಿಯ ಗುಂಪುಗಳೆಲ್ಲ ದೇಶದ ಭವಿಷ್ಯ ನಿರ್ಣಯಿಸು ವವರಂತೆ ಭಾರಿ ಚರ್ಚೆಗೆ ಬಿದ್ದಿರುತ್ತವೆ. ಅದರಲ್ಲೆ ಬೆಳಗಿನ ಮಣ್ಣಿನ ಕುಡಿಕೆಯ ಚಹಾ ಸಮಾರಾಧನೆ ನಡೆಯುತ್ತಿರುತ್ತದೆ. ಅದರಲ್ಲೂ ಅಲ್ಲಲ್ಲಿ ಸಿಗುವ ಸಣ್ಣ ಸಣ್ಣ ಟೀ ಸರ್ವೀಸು ನಮ್ಮನ್ನೂ ಕಟ್ಟಿಗೆ ಬೆಂಚುಗಳ ಮೇಲೆ ಕೂತು ಸೊರ್ರನೆ ಹೀರಿ ಹೋಗಲು ಪುಸಲಾಯಿಸುತ್ತವೆ. ಆ ವಾತಾವರಣಕ್ಕೆ ಅದು ಅನಿವಾರ್ಯ ಮತ್ತು ಮುದ ಮುದ ಕೂಡಾ.

ಅಪರೂಪಕ್ಕೆ ರಣರಣ ಸುರಿವ ಬಿಸಿಲು ಬಿದ್ದರೆ ಕೇವಲ ಬಿಸಿಲು ಕಾಯುವುದೇ ಕಾಯಕವಾಗಿಸಿಕೊಂಡಂತಿದ್ದ ಜನಗಳ ವ್ಯವಹಾರ, ಜನಜೀವನದ ಕ್ರಮಗಳು ಈ ಪರ್ವತ ಪ್ರದೇಶದಲ್ಲಿ ಸ್ಪಷ್ಟವಾಗಿ ಕಂಡು ಬರುವುದಿಲ್ಲ. ಆದರಲ್ಲೂ ಅತಿ ಎತ್ತರದ ದಿಬ್ಬಗಳನ್ನೇರಿ ಗೋಧಿ, ಬಟಾಟೆ ಬೆಳೆಯುವ ಸಾಹಸ ಮಾಡುವ ರೈತರೂ ಇದ್ದಾರೆ. ಕಾರಣ ಎತ್ತರದ ಪ್ರದೇಶದ ವ್ಯವಸಾಯಕ್ಕೆ ಯಾವುದೇ ಕಾನೂನು ಪರವಾನಿಗಿ, ಮಾನದಂಡಗಳ ಕಿರಿಕಿರಿ ಇಲ್ಲ. ಆಗೀಗ ಇಲಾಖಾ ಅಧಿಕಾರಿ ಬಂದಾಗ ಮಾಹಿತಿ ಕಾಳು ಕಡಿ ಕೊಟ್ಟು ಕಳುಹಿಸುವುದೂ ಇದೆ. ಅದರಲ್ಲೂ ಆ ಎತ್ತರಕ್ಕೆ ಏರಿ ದಂಡ ಪಾವತಿಸು ಎನ್ನುವವನೂ ಇಲ್ಲ. ಕೇಳಿದರೂ ಪಾವತಿಸಲು ಅಲ್ಲೇನಿರುತ್ತೆ..? ಏನಿದ್ದರೂ ಪಹಾಡಿ ಇಲಾಖಾ ಮತ್ತು ಪಹಾಡಿ ಲೋಗ್ ಎನ್ನುವ ಟ್ರೇಡ್ ಮಾರ್ಕ್ ಕೆಲಸ ಮಾಡುತ್ತದೆ.

ಹಾಗಾಗಿ ಬದುಕು ಮತ್ತು ಕಾನೂನು, ಎಕ್ಸಿಕ್ಯೂಶನ್ನು ಎಲ್ಲ ತೀರ ಸರಳ ಸರಳ. ಅಲ್ಲಲ್ಲಿ ಸೇಬಿನ ಮರಗಳು ಮತ್ತು ಸಣ್ಣ ಪುಟ್ಟ ಕೈ ತೋಟಗಳು ಬಿಟ್ಟರೆ
ನಿಶ್ಚಲ… ನೀರವ… ನಿರ್ಮಾನುಷ್ಯ ಪ್ರದೇಶ. ಕೇವಲ ಚಾರಣಿಗರಿಗೇ ಮಿಸಲಾದಂತಿದೆ. ಹತ್ತಿಳಿದದ್ದೆಲ್ಲಾ ದಾರಿಗಳೇ, ಡಿಸ್ಟಿನಿಗಳೆ, ಕೊನೆಗೆ ಎತ್ತರದ ಸೆಲಿ ಜಾಗಗಳೇ. ಐದು ದಿನಗಳ ಕಾಲ ಆ ಏರು ದಾರಿಯಲ್ಲಿ ದಿನಕ್ಕೆ ಇಷ್ಟಿಷ್ಟೇ ಕಿ.ಮೀ. ಕ್ರಮಿಸಿ ತಲುಪಿದ್ದು ಕಾಲಾಟಾಪ್ ಎನ್ನುವ ಚಂಬಾ ಕಣಿವೆಯ ಪ್ರದೇಶ ವನ್ನು. ಹೆಸರೇ ತಿಳಿಸುವಂತೆ ಅದು ಅಚ್ಚ ಹಸಿರಿನ ದಟ್ಟ ಕತ್ತಲೆಯ ಪ್ರದೇಶ. ಅದೆಂಥಾ ದಟ್ಟ ಹಸಿರಿನ ಕಾಡನ್ನು ಆ ಪ್ರದೇಶ ಆವರಿಸಿದೆಯೆಂದರೆ, ಅದ್ಭುತ ದಪ್ಪದ ಕಾಂಡಗಳ ಫೈನ್ ವೃಕ್ಷಗಳ ದಟ್ಟತೆ ತುಂಬ ಅನ್ವರ್ಥಕ ಎನ್ನಿಸಿಬಿಡುತ್ತದೆ.

ತೀರ ತುತ್ತಾನು ತುದಿ ಪ್ರದೇಶ ತಲುಪುವವರೆಗೂ ಬೆಳಕಿನ ಮೇಲೆ ಹೊತ್ತನ್ನು ಅಂದಾಜಿಸುವುದೂ ಸಾಧ್ಯವಾಗಲಾರದು. ಹಿಮಾಚಲ ಪ್ರದೇಶದ ಒಂದು ಪಾರ್ಶ್ವದಲ್ಲಿ ಕೇಂದ್ರೀಕೃತವಾಗಿರುವ ಈ ಪ್ರದೇಶಕ್ಕೆ ತಲುಪಲು ಡೆಲ್ಲಿ, ಪಠಾನ್‌ಕೋಟ್ ಮಾರ್ಗ ಸೂಕ್ತ. ಎಂಬತ್ತು ಕಿ.ಮೀ. ಹಾದಿಗೆ ಮೂರುವರೆ ತಾಸು ತೆಗೆದುಕೊಳ್ಳುವ ಕಠಿಣ ದುರ್ಗಮ ಪರ್ವತದ ಕಡಿದಾದ ಜೀಪಿನ ದಾರಿ. ಒಂದೆಡೆಯಲ್ಲಿ ನೂರು ಅಡಿಗೂ ಮಿಗಿಲಾದ ಪ್ರಪಾತ. ಇನ್ನೊಂದೆಡೆಗೆ ಮುಂಚಾಚಿದ ಕೋಡುಗಲ್ಲಿನ ಮೇಲೆ ಸರ್ಕಸ್ ಮಾಡುತ್ತಾ ಹಿಮಾಚಲ ಪ್ರದೇಶದ ಪರಿವಹನ ನಿಗಮದ ಬಸ್ಸು, ಖ್ಯಾತ ಗಿರಿಧಾಮ ಡಾಲ್‌ಹೌಸಿಯ ತೆಕ್ಕೆಗೆ
ತಲುಪಿಸಿ ಬಿಟ್ಟರೆ ಮುಂದಿನ ದಾರಿಗೆ ನೀವುಂಟು ನಿಮ್ಮ ಕಾಲುಗಳುಂಟು.

ಸ್ಥಳೀಯವಾಗಿ ಯಾವುದೇ ಅನುಕೂಲತೆಗಳನ್ನು ಹೊಂದಿರದ ಹಳ್ಳಿಯಲ್ಲಿ ಜನರು ಇವತ್ತಿಗೂ ಬೆನ್ನ ಮೇಲೆ ಒಂದು ಸಲಕ್ಕೆ ಮೂವತ್ತು ಇಟ್ಟಂಗಿಯನ್ನು ಹೊತ್ತೇ ಸಾಗಿಸುವಷ್ಟು ಗಟ್ಟಿಗರು. ಉಳಿದೆಲ್ಲ ಸಾಮಾನು ಹೊರವುದು ಲೆಕ್ಕವೇ ಅಲ್ಲ. ಹಾಗಾಗಿ ಸಾಗಾಟ ಮತ್ತು ಚಲನೆ ಅಲ್ಲಲ್ಲಿ ಬೆಟ್ಟದ ಸೆರಗುಗಳಲ್ಲಿ
ಅವ್ಯಾಹತ. ಬದುಕು ನಿಧಾನವೇ ಪ್ರಧಾನ. ಎಲ್ಲಿ ನೋಡಿದರೂ ಬಿಸಿಲು ಮಚ್ಚಿಗೆ ಚಳಿ ಕಾಯಿಸುವ ಜನರು ಒಂದೋ ಕಾಲಾಟಾಪ್ ಆಚೆ ಬದಿಗೆ ವಾಸಿಸುತ್ತಾರೆ. ಇಲ್ಲ ಸರ ಹೊತ್ತಿನಲ್ಲಿ ಹೊರಟು ಇತ್ತ ಬಂದು ತಲುಪಿ ಬದುಕಿಕೊಳ್ಳುವುದು ಅಭ್ಯಾಸ. ಮಧ್ಯಾಹ್ನದ ನಂತರ ನಾಲ್ಕು ಗಂಟೆಯ ಹೊತ್ತಿ ಗೆಲ್ಲ ಸೂರ್ಯ ಮುಳುಗಿ ಹೋಗುವ ಅಪರೂಪದ ವಿದ್ಯಮಾನ ಇಲ್ಲಿಯದು. ಅತಿ ದೊಡ್ಡ ದಿನವೆಂದರೆ ಆ ದಿನ ವರ್ಷದಲ್ಲಿ ಸಂಜೆಯ ಐದಾರು ಗಂಟೆ ಯವರೆಗೂ ಕೊಂಚ ಬೆಳಕಿರುತ್ತದೆ.

ಒಮ್ಮೆ ಕತ್ತಲಾಗುವ ವರೆಗೂ ಒಂದು ತೆರನಾಗಿ ಅನುಭವ ನೀಡುವ ಪ್ರದೇಶ, ಅಮೇಲೆ ಇದ್ದಕ್ಕಿದ್ದಂತೆ ಕುಳಿರ್ಗಾಳಿಗೆ ತನ್ನನ್ನು ತೆರೆದುಕೊಂಡು ಇನ್ನಿಲ್ಲ ದಂತೆ ಉಷ್ಣಾಂಶ ಕುಸಿಯುವಂತೆ ಮಾಡುತ್ತದೆ. ತುಂಬ ವೇಗವಾಗಿ ಇಳಿದು ಬಿಡುವ ಮಾಮೂ ಲಿನ ಉಷ್ಣಾಂಶ ಗಂಟೆಯೊಂದರಲ್ಲಿ ಮೈನಸ್
ಏಳರಿಂದ ಹನ್ನೊಂದರವರೆಗೆ ತಲುಪಿದ ಉದಾಹರಣೆಗಳು ಇವೆ.

ಎತ್ತರದಿಂದ ಕಂಡು ಬರುವ ಸೂರ್ಯಾಸ್ತ ಇಲ್ಲಿನ ಇನ್ನೊಂದು ಆಕರ್ಷಣೆ. ಸಮುದ್ರ ಮಟ್ಟದಿಂದ ಸುಮಾರು ಹನ್ನೊಂದು ಸಾವಿರ ಅಡಿ ಎತ್ತರದಲ್ಲಿ ತುಂಬ ಮಟ್ಟಸವಾದುದೊಂದು ಅಂಗಳದ ಹಾಗೆ ಉಳಿದುಕೊಂಡಿರುವ ಸ್ಥಳವಿದೆ. ಆ ಕಗ್ಗಾಡಿನ ಪ್ರಕೃತಿಗೆ ಯಾವುದೇ ರೀತಿಯ ಛಾಯಾಗ್ರಹಣದ ಉಪಕರಣವಿದ್ದರೂ ಅಲ್ಲಿ ವಿಫಲಗೊಂಡು ಬಿಡುತ್ತದೆ ಎನ್ನುವುದೇ ಅಲ್ಲಿನ ವಿಶೇಷತೆ. ಊರಿನ ಹೆಸರು ಮ್ಯಾಗಝಿನ್. ಕಾರಣ ಬ್ರಿಟಿಷ ಜನರಲ್‌ನೊಬ್ಬ
ಕಂಡು ಹಿಡಿದನೆನ್ನಲಾದ ಈ ಪ್ರದೇಶ, ಅವನ ನೆನಪಿಗಾಗಿ ಕಾಲಾಟಾಪ್‌ನ ಹತ್ತಿರದ ಹಳ್ಳಿಯೊಂದಕ್ಕೆ ಅವನದೆ ಹೆಸರನ್ನಿಟ್ಟಿದ್ದಾರೆ.

ಮ್ಯಾಗಝಿನ್ ಅದೇನು ಲೆಕ್ಕಿಸಿ ಇಲ್ಲಿಗೆ ಕುದುರೆ ಏರಿ ದೌಡಾಯಿಸಿದ್ದನೋ ಗೊತ್ತಿಲ್ಲ, ಆದರೆ ಜನ ಮಾತ್ರ ಅದಕ್ಕೂ ಮೇಲೇರಿ ಬದುಕು ಕಟ್ಟಿಕೊಂಡಿದ್ದಾರೆ, ನಮ್ಮಂಥವರಿಗೆ ಅಚ್ಚರಿಯ ಸರಕಾಗುತ್ತಾರೆ. ಎರಡು ದಿನ ಲಾಕ್ ಡೌನಾದರೆ ಮರುದಿನವೇ ಸುಖಾ ಸುಮ್ಮನೆ ರಸ್ತೆಗಿಳಿದು ಗಾಡಿ ಓಡಿಸಿ ಏನೋ ಸ್ವಾತಂತ್ರ್ಯ ಅನುಭವಿಸಿದಿವಿ ಅನ್ನುವ ಹಾಗೆ ಆಡುವ ನಾವು ತಿಂಗಳಾನುಗಟ್ಟಲೆ ಈ ಜನ ಬೆಟ್ಟ ಇಳಿಯುವುದೇ ಇಲ್ಲವಲ್ಲ. ಈ ಲಾಕ್‌ಡೌನ್ ಮುಂದೆ ನಮ್ಮದೆಲ್ಲ ಯಾವ ಲೆಕ್ಕ. ತೀರ ಚಳಿಯಲ್ಲಿ ದೇಶಾದ್ಯಂತದ ಮುಖ ಮೂತಿ ತಿಳಿಯದ ಚಾರಣಿಗರ ದಂಡಿನೊಂದಿಗೆ ಹೊಸ ಹೊಸ ಪರಿಚಯ ಜನ-ಸಂಸ್ಕೃತಿಯ ವ್ಯತ್ಯಾಸವನ್ನು ಅರಿತುಕೊಳ್ಳುತ್ತಾ, ಕನಿಷ್ಠ ಒಂದೆರಡಕ್ಕೆ ಇಳಿಯುವ ಸಾಮಾನ್ಯ ಉಷ್ಣಾಂಶ, ಇಂತಹದಕ್ಕೆ ಕಾಯ್ದು ಕಾಡ ಮಧ್ಯೆ ಚಹಾ ಮಾಡಿ ತಂದುಕೊಟ್ಟು, ಗ್ಲಾಸಿಗೆ ಹದಿನೈದು ರೂಪಾಯಿ ದುಡಿಯುವ ಶೆರ್ಪಾಗಳು, ಇಟ್ಟುಕೊಂಡಿದ್ದ ಡ್ರೈ ಫ್ರೂಟ್ಸ್ ಕಲ್ಲಿನಂತಾಗಿ ಅದು ಇನ್ನೆಂದೂ ಸಹಜ ಸ್ಥಿತಿಗೆ ಮರಳುವುದೇ ಇಲ್ಲವೇನೋ ಎನ್ನಿಸುವ ಅಯೋಮಯತೆ, ಆಗೀಗ ಮೂಗಿದೆಯಾ ಎಂದು ಮುಟ್ಟಿ ನೋಡಿಕೊಳಬೇಕಾದ ವಿಚಿತ್ರ ಮರಗಟ್ಟಿಸುವ ಚಳಿ, ಪಕ್ಕದ ಮನೆಯ ಸಾಕಿದ ನಾಯಿಯಂತೆ ಕುಂಯ್ ಎಂದು ಸರಿದು ಹೋಗುತ್ತಾ ಹೃದಯ ಬಡಿತ ಹೆಚ್ಚಿಸುವ ಕಪ್ಪು ಧಡಿಯ ಕರಡಿಗಳು. ಕೆಂಪು ಟೊಮ್ಯಾಟೊ ಮುಖದ ಮಕ್ಕಳು. ಬೆಳ್ಳಿ ಕೂದಲಿನ ಅಜ್ಜಿ. ಒಂದೇ ಎರಡೇ ಅಲ್ಲಿನ ಎಲ್ಲಾ ಆ ವಿಚಿತ್ರತೆಯನ್ನು ಅನುಭವಿಸಲು ಒಮ್ಮೆ ಚಂಬಾದ ಚಳಿಯಲ್ಲಿ ಬದುಕು ಕಳೆಯಬೇಕು ಕಣ್ರಿ.

ಬರೀ ನಮ್ಮ ಊರೆ ಚೆಂದಪಾ ಎನ್ನುವುದಕ್ಕೆ ಪುರಾವೆಗಳು ಇರಬೇಕಲ್ಲ. ಅದಕ್ಕಾದರೂ ಚಂಬಾದಂತಹ ಕಣಿವೆಯ ಸೆರಗಿನಲ್ಲಿ ಯಾವ ನೆಪದಲ್ಲಾದರೂ ಕಳೆದುಹೋಗಬೇಕು ನೋಡಿ. ಬದುಕುವ ಉತ್ಸಾಹ ಮುಂದಿನ ಮತ್ತೆರಡು ವರ್ಷಕ್ಕೆ ಖಾಯಮ್ಮಾಗುತ್ತದೆ. ಅದು ಮುಗಿವ ಮೊದಲೇ ಮತ್ತೊಮ್ಮೆ ಗುಳೆ ಎದ್ದರಾಯಿತು. ಅಲೆಮಾರಿತನ ಮೈಗೂಡಿಸಿಕೊಂಡರೆ ಬೇರಿನ್ನೇನೂ ಬೇಕಾಗುವುದಿಲ್ಲ. ಅದರೆ ಅದರೊಂದಿಗೆ ಏಗುವ ಐನಾತಿ ಖುಷಿ ಇರಬೇಕು ಕಣ್ರಿ..ಎ ದುರಿನವರು ಕಾಣದಷ್ಟು ಕೊನೆಗೆ ಮಧ್ಯಾಹ್ನದ ಹೊತ್ತು ಸೂರ್ಯ ರಶ್ಮಿಯೂ ಬಾರದಷ್ಟು ದಟ್ಟ ಮಂಜು ಮಳೆಯಂತೆ ಸುರಿಯುತ್ತಿತ್ತು.

ಶೀತಲ ಉಷ್ಣಾಂಶ ಸಂಜೆಯಾಗುತ್ತಿದ್ದಂತೆ ಮೈನಸ್ ತಲುಪಿ ಬೆನ್ನ ಹುರಿಗುಂಟ ಚಳಿ ಸುರಿಯುತ್ತಿತ್ತು. ದಟ್ಟ ಪೈನ್ ವೃಕ್ಷಗಳು ಅದೆಷ್ಟು ಅಗಲ ಪಸರಿಸಿ ಕೊಂಡು, ನಿಂತಿರುತ್ತವೆಂದರೆ ಮಧ್ಯಾಹ್ನದ ಬಿಸಿಲನ್ನೂ ಒಳಕ್ಕೆ ಬಿಡಲಾರವು. ಮತ್ಹೇಗೆ ಬೆಳಕಾದೀತು ಈ ನೆಲದಲ್ಲಿ. ಅಂತ ಕತ್ತಲೆಯ ಫೀಲು ಕೊಡುವ ನೆಲ ಕಾಲಾ ಟಾಪ್ ಆಗದೇ ಇನ್ನೇನಾದೀತು..? ಅದು ಹಿಮಾಚಲ ಪ್ರದೇಶ ಮತ್ತು ಜಮ್ಮುವಿನ ಮಧ್ಯೆ ಸ್ಥಾಪಿತವಾಗಿರುವ ಚಂಬಾ ಕಣಿವೆ. ದೇಶದ ಅತ್ಯುತ್ತಮ ಗಿರಿಧಾಮಗಳಲ್ಲಿ ಒಂದಾದ ಡಾಲ್‌ಹೌಸಿ ಬೇಸ್ ಕ್ಯಾಂಪ್ ಮಾಡಿಕೊಂಡರೆ, ಅಲ್ಲಿಂದ ಹೊರಟು ಹದಿಮೂರು ಸಾವಿರ ಅಡಿ ಏರಿ ನಿಂತರೆ ನಮ್ಮ ಕಾಲ ಕೆಳಗೆ ಕಾಲಾಟಾಪ್ ಅಥವಾ ಚಂಬಾ ಕತ್ತಲ ಕಣಿವೆಯ ನೆತ್ತಿ.

ಅಲ್ಲಿ ಸೂರ್ಯನ ಕಿರಣಗಳಿರಲ್ಲ… ಮಂದ ಬೆಳಕಿತ್ತು. ನೀರಿರಲಿಲ್ಲ, ಆದರೆ ಗಾಳಿಯಲ್ಲಿನ ತೇವಾಂಶ ಎಲ್ಲವೂ ಮಂಜಾಗಿ ಮುತ್ತಿನ ಮಣಿಗಳಂತೆ ಮೈ ಕೈಗೆಲ್ಲಾ ಅಡರುತ್ತಿತ್ತು. ಗಾಳಿಯಿರಲಿಲ್ಲ… ಗಂಟೆಗೆ ಹದಿನೆಂಟು ಮೈಲಿ ವೇಗದಿಂದ ಬೀಸುವ ಶೀತಲ ಮಾರುತಗಳಿದ್ದವು. ಉಸಿರಾಡಿದ ವಾಯು ಅದಕ್ಕೂ
ಮೊದಲೇ ಹಬೆಯಾಗುತ್ತಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ನಮಗಿಂತಲೂ ಮುಂಚೆ ಎದ್ದು ಎಲ್ಲೆಲ್ಲಿ ಬಿಸಿಲು ಬರುತ್ತದಲ್ಲೆಲ್ಲ ಕಾಯ್ದು ಕೂತು ಬಿಸಿಲು ಕಾಯಿಸಲು ರೊಣೆ ರೊಣೆ ಕೂದಲ ಕರಡಿಗಳು ಜಾಗ ಹುಡುಕಿಕೊಂಡು ತಮ್ಮ ವಸಾಹತು ಸ್ಥಾಪಿಸಿದ್ದು ಕಾಣಿಸುತ್ತಿತ್ತು ದೂರದಿಂದ.

ಡಾರ್ಜಿಲಿಂಗ್‌ನಿಂದ ಸರಿ ಸುಮಾರು ಎಂಬತ್ತು ಕಿ.ಮೀ. ದೂರದ ಕಾಲಾ ಟಾಪ್ ಪ್ರದೇಶ ಅದ್ಭುತ ಎತ್ತರದ ಪ್ರದೇಶಗಳಲ್ಲೊಂದು. ಅಪರೂಪಕ್ಕೆ ಅಂಥಾ ಕತ್ತಲ ಲೋಕದಲ್ಲೂ ಪರ್ವತದ ದಿಬ್ಬದ ಮೂಗಿಗೆ ಕಟ್ಟಿಕೊಂಡು ನಿಂತಂತೆ ಒಂದೊಂದು ಮನೆಗಳು ಕಂಡು ಅಚ್ಚರಿ ಹುಟ್ಟಿಸುತ್ತವೆ. ಅದಕ್ಕಿಂತಲೂ ಅಚ್ಚರಿ ಅಲ್ಲಿನ ಜನಗಳ ಜೀವನ ಪ್ರೇಮ. ಖುಷಿಯಾಗಿ ನಮ್ಮನ್ನು ಅಣಗಿಸುತ್ತಾ ನಿಲ್ಲುತ್ತಿದ್ದ ಕೆಂಪುಮುಖದ ಮಕ್ಕಳು ಮರೆಯದ ಚಿತ್ರಗಳಂತೆ ಮನದಲ್ಲಿ ನೆಲೆ ನಿಲ್ಲುತ್ತಾರೆ. ಬೆಳಗಿನ ಬಿಸಿಲು ಪ್ರತಿಯೊಬ್ಬರಿಗೂ ಇಲ್ಲಿ ಅಗಾಧ ಸಂಪತ್ತು.

ಕುಕ್ಕರಗಾಲಲ್ಲಿ ದೊಂಗಡಿ ಹೊದ್ದು ಕೊಂಡು ಬಿಸಿಲಿಗೆ ಮುಖ ಮಾಡಿ ಮನೆ ಜನ, ಸಂಸಾರ, ಓಣಿಯ ಗುಂಪುಗಳೆಲ್ಲ ದೇಶದ ಭವಿಷ್ಯ ನಿರ್ಣಯಿಸು ವವರಂತೆ ಭಾರಿ ಚರ್ಚೆಗೆ ಬಿದ್ದಿರುತ್ತವೆ. ಅದರಲ್ಲೆ ಬೆಳಗಿನ ಮಣ್ಣಿನ ಕುಡಿಕೆಯ ಚಹಾ ಸಮಾರಾಧನೆ ನಡೆಯುತ್ತಿರುತ್ತದೆ. ಅದರಲ್ಲೂ ಅಲ್ಲಲ್ಲಿ ಸಿಗುವ ಸಣ್ಣ ಸಣ್ಣ ಟೀ ಸರ್ವೀಸು ನಮ್ಮನ್ನೂ ಕಟ್ಟಿಗೆ ಬೆಂಚುಗಳ ಮೇಲೆ ಕೂತು ಸೊರ್ರನೆ ಹೀರಿ ಹೋಗಲು ಪುಸಲಾಯಿಸುತ್ತವೆ. ಆ ವಾತಾವರಣಕ್ಕೆ ಅದು ಅನಿವಾರ್ಯ ಮತ್ತು ಮುದ ಮುದ ಕೂಡಾ.

ಅಪರೂಪಕ್ಕೆ ರಣರಣ ಸುರಿವ ಬಿಸಿಲು ಬಿದ್ದರೆ ಕೇವಲ ಬಿಸಿಲು ಕಾಯುವುದೇ ಕಾಯಕವಾಗಿಸಿಕೊಂಡಂತಿದ್ದ ಜನಗಳ ವ್ಯವಹಾರ, ಜನಜೀವನದ  ಕ್ರಮಗಳು ಈ ಪರ್ವತ ಪ್ರದೇಶದಲ್ಲಿ ಸ್ಪಷ್ಟವಾಗಿ ಕಂಡು ಬರುವುದಿಲ್ಲ. ಆದರಲ್ಲೂ ಅತಿ ಎತ್ತರದ ದಿಬ್ಬಗಳನ್ನೇರಿ ಗೋಧಿ, ಬಟಾಟೆ ಬೆಳೆಯುವ ಸಾಹಸ ಮಾಡುವ ರೈತರೂ ಇದ್ದಾರೆ. ಕಾರಣ ಎತ್ತರದ ಪ್ರದೇಶದ ವ್ಯವಸಾಯಕ್ಕೆ ಯಾವುದೇ ಕಾನೂನು ಪರವಾನಿಗಿ, ಮಾನದಂಡಗಳ ಕಿರಿಕಿರಿ ಇಲ್ಲ. ಆಗೀಗ ಇಲಾಖಾ ಅಧಿಕಾರಿ ಬಂದಾಗ ಮಾಹಿತಿ ಕಾಳು ಕಡಿ ಕೊಟ್ಟು ಕಳುಹಿಸುವುದೂ ಇದೆ. ಅದರಲ್ಲೂ ಆ ಎತ್ತರಕ್ಕೆ ಏರಿ ದಂಡ ಪಾವತಿಸು ಎನ್ನುವವನೂ ಇಲ್ಲ.

ಕೇಳಿದರೂ ಪಾವತಿಸಲು ಅಲ್ಲೇನಿರುತ್ತೆ..? ಏನಿದ್ದರೂ ಪಹಾಡಿ ಇಲಾಖಾ ಮತ್ತು ಪಹಾಡಿ ಲೋಗ್ ಎನ್ನುವ ಟ್ರೇಡ್ ಮಾರ್ಕ್ ಕೆಲಸ ಮಾಡುತ್ತದೆ. ಹಾಗಾಗಿ ಬದುಕು ಮತ್ತು ಕಾನೂನು, ಎಕ್ಸಿಕ್ಯೂಶನ್ನು ಎಲ್ಲ ತೀರ ಸರಳ ಸರಳ. ಅಲ್ಲಲ್ಲಿ ಸೇಬಿನ ಮರಗಳು ಮತ್ತು ಸಣ್ಣ ಪುಟ್ಟ ಕೈ ತೋಟಗಳು ಬಿಟ್ಟರೆ
ನಿಶ್ಚಲ… ನೀರವ… ನಿರ್ಮಾನುಷ್ಯ ಪ್ರದೇಶ. ಕೇವಲ ಚಾರಣಿಗರಿಗೇ ಮಿಸಲಾದಂತಿದೆ. ಹತ್ತಿಳಿದದ್ದೆಲ್ಲಾ ದಾರಿಗಳೇ, ಡಿಸ್ಟಿನಿಗಳೆ, ಕೊನೆಗೆ ಎತ್ತರದ ಸೆಲಿ ಜಾಗಗಳೇ.

ಐದು ದಿನಗಳ ಕಾಲ ಆ ಏರು ದಾರಿಯಲ್ಲಿ ದಿನಕ್ಕೆ ಇಷ್ಟಿಷ್ಟೇ ಕಿ.ಮೀ. ಕ್ರಮಿಸಿ ತಲುಪಿದ್ದು ಕಾಲಾಟಾಪ್ ಎನ್ನುವ ಚಂಬಾ ಕಣಿವೆಯ ಪ್ರದೇಶವನ್ನು. ಹೆಸರೇ ತಿಳಿಸುವಂತೆ ಅದು ಅಚ್ಚ ಹಸಿರಿನ ದಟ್ಟ ಕತ್ತಲೆಯ ಪ್ರದೇಶ. ಅದೆಂಥಾ ದಟ್ಟ ಹಸಿರಿನ ಕಾಡನ್ನು ಆ ಪ್ರದೇಶ ಆವರಿಸಿದೆಯೆಂದರೆ, ಅದ್ಭುತ ದಪ್ಪದ ಕಾಂಡಗಳ ಫೈನ್ ವೃಕ್ಷಗಳ ದಟ್ಟತೆ ತುಂಬ ಅನ್ವರ್ಥಕ ಎನ್ನಿಸಿಬಿಡುತ್ತದೆ. ತೀರ ತುತ್ತಾನು ತುದಿ ಪ್ರದೇಶ ತಲುಪುವವರೆಗೂ ಬೆಳಕಿನ ಮೇಲೆ
ಹೊತ್ತನ್ನು ಅಂದಾಜಿಸುವುದೂ ಸಾಧ್ಯವಾಗಲಾರದು.

ಹಿಮಾಚಲ ಪ್ರದೇಶದ ಒಂದು ಪಾರ್ಶ್ವದಲ್ಲಿ ಕೇಂದ್ರೀಕೃತವಾಗಿರುವ ಈ ಪ್ರದೇಶಕ್ಕೆ ತಲುಪಲು ಡೆಲ್ಲಿ, ಪಠಾನ್‌ಕೋಟ್ ಮಾರ್ಗ ಸೂಕ್ತ. ಎಂಬತ್ತು ಕಿ.ಮೀ.
ಹಾದಿಗೆ ಮೂರುವರೆ ತಾಸು ತೆಗೆದುಕೊಳ್ಳುವ ಕಠಿಣ ದುರ್ಗಮ ಪರ್ವತದ ಕಡಿದಾದ ಜೀಪಿನ ದಾರಿ. ಒಂದೆಡೆಯಲ್ಲಿ ನೂರು ಅಡಿಗೂ ಮಿಗಿಲಾದ ಪ್ರಪಾತ. ಇನ್ನೊಂದೆಡೆಗೆ ಮುಂಚಾಚಿದ ಕೋಡುಗಲ್ಲಿನ ಮೇಲೆ ಸರ್ಕಸ್ ಮಾಡುತ್ತಾ ಹಿಮಾಚಲ ಪ್ರದೇಶದ ಪರಿವಹನ ನಿಗಮದ ಬಸ್ಸು, ಖ್ಯಾತ ಗಿರಿಧಾಮ ಡಾಲ್‌ಹೌಸಿಯ ತೆಕ್ಕೆಗೆ ತಲುಪಿಸಿ ಬಿಟ್ಟರೆ ಮುಂದಿನ ದಾರಿಗೆ ನೀವುಂಟು ನಿಮ್ಮ ಕಾಲುಗಳುಂಟು.

ಸ್ಥಳಿಯವಾಗಿ ಯಾವುದೇ ಅನುಕೂಲತೆಗಳನ್ನು ಹೊಂದಿರದ ಹಳ್ಳಿಯಲ್ಲಿ ಜನರು ಇವತ್ತಿಗೂ ಬೆನ್ನ ಮೇಲೆ ಒಂದು ಸಲಕ್ಕೆ ಮೂವತ್ತು ಇಟ್ಟಂಗಿಯನ್ನು ಹೊತ್ತೇ ಸಾಗಿಸುವಷ್ಟು ಗಟ್ಟಿಗರು. ಉಳಿದೆಲ್ಲ ಸಾಮಾನು ಹೊರವುದು ಲೆಕ್ಕವೇ ಅಲ್ಲ. ಹಾಗಾಗಿ ಸಾಗಾಟ ಮತ್ತು ಚಲನೆ ಅಲ್ಲಲ್ಲಿ ಬೆಟ್ಟದ ಸೆರಗುಗಳಲ್ಲಿ
ಅವ್ಯಾಹತ. ಬದುಕು ನಿಧಾನವೇ ಪ್ರಧಾನ. ಎಲ್ಲಿ ನೋಡಿದರೂ ಬಿಸಿಲು ಮಚ್ಚಿಗೆ ಚಳಿ ಕಾಯಿಸುವ ಜನರು ಒಂದೋ ಕಾಲಾಟಾಪ್ ಆಚೆ ಬದಿಗೆ ವಾಸಿಸುತ್ತಾರೆ. ಇಲ್ಲ ಸರ ಹೊತ್ತಿನಲ್ಲಿ ಹೊರಟು ಇತ್ತ ಬಂದು ತಲುಪಿ ಬದುಕಿಕೊಳ್ಳುವುದು ಅಭ್ಯಾಸ. ಮಧ್ಯಾಹ್ನದ ನಂತರ ನಾಲ್ಕು ಗಂಟೆಯ ಹೊತ್ತಿ ಗೆಲ್ಲ ಸೂರ್ಯ ಮುಳುಗಿ ಹೋಗುವ ಅಪರೂಪದ ವಿದ್ಯಮಾನ ಇಲ್ಲಿಯದು.

ಅತಿ ದೊಡ್ಡ ದಿನವೆಂದರೆ ಆ ದಿನ ವರ್ಷದಲ್ಲಿ ಸಂಜೆಯ ಐದಾರು ಗಂಟೆಯವರೆಗೂ ಕೊಂಚ ಬೆಳಕಿರುತ್ತದೆ. ಒಮ್ಮೆ ಕತ್ತಲಾಗುವ ವರೆಗೂ ಒಂದು ತೆರನಾಗಿ ಅನುಭವ ನೀಡುವ ಪ್ರದೇಶ, ಅಮೇಲೆ ಇದ್ದಕ್ಕಿದ್ದಂತೆ ಕುಳಿರ್ಗಾಳಿಗೆ ತನ್ನನ್ನು ತೆರೆದುಕೊಂಡು ಇನ್ನಿಲ್ಲದಂತೆ ಉಷ್ಣಾಂಶ ಕುಸಿಯುವಂತೆ
ಮಾಡುತ್ತದೆ. ತುಂಬ ವೇಗವಾಗಿ ಇಳಿದು ಬಿಡುವ ಮಾಮೂ ಲಿನ ಉಷ್ಣಾಂಶ ಗಂಟೆಯೊಂದರಲ್ಲಿ ಮೈನಸ್ ಏಳರಿಂದ ಹನ್ನೊಂದರವರೆಗೆ ತಲುಪಿದ ಉದಾಹರಣೆಗಳು ಇವೆ.

ಎತ್ತರದಿಂದ ಕಂಡು ಬರುವ ಸೂರ್ಯಾಸ್ತ ಇಲ್ಲಿನ ಇನ್ನೊಂದು ಆಕರ್ಷಣೆ. ಸಮುದ್ರ ಮಟ್ಟದಿಂದ ಸುಮಾರು ಹನ್ನೊಂದು ಸಾವಿರ ಅಡಿ ಎತ್ತರದಲ್ಲಿ ತುಂಬ ಮಟ್ಟಸವಾದುದೊಂದು ಅಂಗಳದ ಹಾಗೆ ಉಳಿದುಕೊಂಡಿರುವ ಸ್ಥಳವಿದೆ. ಆ ಕಗ್ಗಾಡಿನ ಪ್ರಕೃತಿಗೆ ಯಾವುದೇ ರೀತಿಯ ಛಾಯಾಗ್ರಹಣದ ಉಪಕರಣವಿದ್ದರೂ ಅಲ್ಲಿ ವಿಫಲಗೊಂಡು ಬಿಡುತ್ತದೆ ಎನ್ನುವುದೇ ಅಲ್ಲಿನ ವಿಶೇಷತೆ. ಊರಿನ ಹೆಸರು ಮ್ಯಾಗಝಿನ್. ಕಾರಣ ಬ್ರಿಟಿಷ ಜನರಲ್‌ನೊಬ್ಬ
ಕಂಡು ಹಿಡಿದನೆನ್ನಲಾದ ಈ ಪ್ರದೇಶ, ಅವನ ನೆನಪಿಗಾಗಿ ಕಾಲಾಟಾಪ್‌ನ ಹತ್ತಿರದ ಹಳ್ಳಿಯೊಂದಕ್ಕೆ ಅವನದೆ ಹೆಸರನ್ನಿಟ್ಟಿದ್ದಾರೆ.

ಮ್ಯಾಗಝಿನ್ ಅದೇನು ಲೆಕ್ಕಿಸಿ ಇಲ್ಲಿಗೆ ಕುದುರೆ ಏರಿ ದೌಡಾಯಿಸಿದ್ದನೋ ಗೊತ್ತಿಲ್ಲ, ಆದರೆ ಜನ ಮಾತ್ರ ಅದಕ್ಕೂ ಮೇಲೇರಿ ಬದುಕು ಕಟ್ಟಿಕೊಂಡಿದ್ದಾರೆ, ನಮ್ಮಂಥವರಿಗೆ ಅಚ್ಚರಿಯ ಸರಕಾಗುತ್ತಾರೆ. ಎರಡು ದಿನ ಲಾಕ್ ಡೌನಾದರೆ ಮರುದಿನವೇ ಸುಖಾ ಸುಮ್ಮನೆ ರಸ್ತೆಗಿಳಿದು ಗಾಡಿ ಓಡಿಸಿ ಏನೋ ಸ್ವಾತಂತ್ರ್ಯ ಅನುಭವಿಸಿದಿವಿ ಅನ್ನುವ ಹಾಗೆ ಆಡುವ ನಾವು ತಿಂಗಳಾನುಗಟ್ಟಲೆ ಈ ಜನ ಬೆಟ್ಟ ಇಳಿಯುವುದೇ ಇಲ್ಲವಲ್ಲ. ಈ ಲಾಕ್‌ಡೌನ್ ಮುಂದೆ ನಮ್ಮದೆಲ್ಲ ಯಾವ ಲೆಕ್ಕ. ತೀರ ಚಳಿಯಲ್ಲಿ ದೇಶಾದ್ಯಂತದ ಮುಖ ಮೂತಿ ತಿಳಿಯದ ಚಾರಣಿಗರ ದಂಡಿನೊಂದಿಗೆ ಹೊಸ ಹೊಸ ಪರಿಚಯ ಜನ-ಸಂಸ್ಕೃತಿಯ ವ್ಯತ್ಯಾಸವನ್ನು ಅರಿತು ಕೊಳ್ಳುತ್ತಾ, ಕನಿಷ್ಠ ಒಂದೆರಡಕ್ಕೆ ಇಳಿಯುವ ಸಾಮಾನ್ಯ ಉಷ್ಣಾಂಶ, ಇಂತಹದಕ್ಕೆ ಕಾಯ್ದು ಕಾಡ ಮಧ್ಯೆ ಚಹಾ ಮಾಡಿ ತಂದುಕೊಟ್ಟು, ಗ್ಲಾಸಿಗೆ ಹದಿನೈದು ರೂಪಾಯಿ ದುಡಿಯುವ ಶೆರ್ಪಾಗಳು, ಇಟ್ಟುಕೊಂಡಿದ್ದ ಡ್ರೈ ಫ್ರೂಟ್ಸ್ ಕಲ್ಲಿನಂತಾಗಿ ಅದು ಇನ್ನೆಂದೂ ಸಹಜ ಸ್ಥಿತಿಗೆ ಮರಳುವುದೇ ಇಲ್ಲವೇನೋ ಎನ್ನಿಸುವ ಅಯೋಮಯತೆ, ಆಗೀಗ ಮೂಗಿದೆಯಾ ಎಂದು ಮುಟ್ಟಿ ನೋಡಿಕೊಳಬೇಕಾದ ವಿಚಿತ್ರ ಮರಗಟ್ಟಿಸುವ ಚಳಿ, ಪಕ್ಕದ ಮನೆಯ ಸಾಕಿದ ನಾಯಿಯಂತೆ ಕುಂಯ್ ಎಂದು ಸರಿದು ಹೋಗುತ್ತಾ ಹೃದಯ ಬಡಿತ ಹೆಚ್ಚಿಸುವ ಕಪ್ಪು ಧಡಿಯ ಕರಡಿಗಳು.

ಕೆಂಪು ಟೊಮ್ಯಾಟೊ ಮುಖದ ಮಕ್ಕಳು. ಬೆಳ್ಳಿ ಕೂದಲಿನ ಅಜ್ಜಿ. ಒಂದೇ ಎರಡೇ ಅಲ್ಲಿನ ಎಲ್ಲಾ ಆ ವಿಚಿತ್ರತೆಯನ್ನು ಅನುಭವಿಸಲು ಒಮ್ಮೆ ಚಂಬಾದ ಚಳಿಯಲ್ಲಿ ಬದುಕು ಕಳೆಯಬೇಕು ಕಣ್ರಿ. ಬರೀ ನಮ್ಮ ಊರೆ ಚೆಂದಪಾ ಎನ್ನುವುದಕ್ಕೆ ಪುರಾವೆಗಳು ಇರಬೇಕಲ್ಲ. ಅದಕ್ಕಾದರೂ ಚಂಬಾದಂತಹ ಕಣಿವೆಯ ಸೆರಗಿನಲ್ಲಿ ಯಾವ ನೆಪದಲ್ಲಾದರೂ ಕಳೆದುಹೋಗಬೇಕು ನೋಡಿ. ಬದುಕುವ ಉತ್ಸಾಹ ಮುಂದಿನ ಮತ್ತೆರಡು ವರ್ಷಕ್ಕೆ ಖಾಯಮ್ಮಾಗುತ್ತದೆ. ಅದು ಮುಗಿವ ಮೊದಲೇ ಮತ್ತೊಮ್ಮೆ ಗುಳೆ ಎದ್ದರಾಯಿತು. ಅಲೆಮಾರಿತನ ಮೈಗೂಡಿಸಿಕೊಂಡರೆ ಬೇರಿನ್ನೇನೂ ಬೇಕಾಗುವುದಿಲ್ಲ. ಅದರೆ ಅದರೊಂದಿಗೆ ಏಗುವ ಐನಾತಿ ಖುಷಿ ಇರಬೇಕು ಕಣ್ರಿ..

Leave a Reply

Your email address will not be published. Required fields are marked *

error: Content is protected !!