Sunday, 8th September 2024

ಇದು, ಕತ್ತೆಗಳ ಹೊತ್ತು ನಡೆಸಬೇಕಾದ ಕಾಲ!

ಅಭಿವ್ಯಕ್ತಿ

ಡಾ.ದಯಾನಂದ ಲಿಂಗೇಗೌಡ

dayanandal@gmail.com

ಶಾಸಕರಾದ ಗೂಳಿಹಟ್ಟಿ ಶೇಖರ್ ಅವರು ತಮ್ಮ ಸ್ವಂತ ತಾಯಿ, ತಮ್ಮ ಗಮನಕ್ಕೆ ಬಾರದಂತೆ ಮತಾಂತರವಾದ ವಿಷಯವನ್ನು ಸದನದಲ್ಲಿ ಚರ್ಚಿಸಿ ಪ್ರಮುಖ
ವಿಷಯವೊಂದರ ಬಗ್ಗೆ ರಾಜ್ಯದ ಸರಕಾರವನ್ನು ಎಚ್ಚರಿಸಿದ್ದಾರೆ. ಪ್ರತಿ ಬಾರಿಯಂತೆ, ಈ ವಿಷಯಕ್ಕೆ ಬೇಕಾದ ವ್ಯಾಪಕ ಚರ್ಚೆ ಸದನದಲ್ಲಾಗಲಿ, ಮಾಧ್ಯಮ
ಗಳಲ್ಲಾಗಲಿ ನಡೆಯದಿರುವುದು ವಿಪರ್ಯಾಸ.

ಕರೋನಾ ವಿಶ್ವವ್ಯಾಪಿ ಹರಡುವ ಒಂದೆರಡು ವಾರಗಳ ಹಿಂದಿನ ಘಟನೆ. ಮಂಡ್ಯದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ಬರುವ ಬಡರೋಗಿಗಳಿಗೆ ಮತಾಂತರದ ಅಮಿಷ ಒಡ್ಡಲಾಗುತ್ತಿದೆ ಎಂಬ ವರದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿತ್ತು. ರೋಗಿಗಳ ಕೈಯಲ್ಲಿ ಕ್ರೈಸ್ತ ಮತವನ್ನು ಪ್ರಚಾರಪಡಿಸುವ ಹಸ್ತಪ್ರತಿಗಳು ಇದ್ದಿದ್ದು ಪ್ರಸಾರವಾಗಿತ್ತು. ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಆಸ್ಪತ್ರೆಯನ್ನು ನಿರ್ವಹಿಸುತ್ತಿರುವ ಫಾದರ್, ಈ ವಾದದಲ್ಲಿ ಹುರುಳಿಲ್ಲ ಎಂಬ ವಾದವನ್ನು ಮುಂದಿಟ್ಟಿದ್ದರು. ‘ರೋಗಿಗಳ ಹಾಸಿಗೆಯ ಪಕ್ಕದಲ್ಲಿ ಬೈಬಲ್ ಪ್ರತಿಗಳನ್ನು ಇಟ್ಟಿದ್ದೆವು.

ರೋಗಿಗಳು ಅದರ ಬಗ್ಗೆ ವಿಚಾರಿಸಿದಾಗ ಮಾಹಿತಿ ನೀಡಿದ್ದೆವು ಅಷ್ಟೇ. ಇದು ಮತಾಂತರದ ಪ್ರಯತ್ನ ವಾಗಿರಲಿಲ್ಲ’ ಎಂಬ ಉತ್ತರವನ್ನು ಆಸ್ಪತ್ರೆಯ ಫಾದರ್ ನೀಡಿದ್ದರು. ಸಾಮಾನ್ಯವಾಗಿ ಯಾವುದಾದರೂ ಬಿಸಿ ಸುದ್ದಿ ಸಿಕ್ಕಿದರೆ ಅದನ್ನು ಎಳೆದು,ಎಳೆದು, ವೈಭವೀಕರಿಸಿ, ಬೇಕೋ ಬೇಡವೋ ಎಂದು ನೋಡದೆ, ಹಗಲು-
ರಾತ್ರಿ ತಲೆಚಿಟ್ಟು ಬರುವವರೆಗೂ ಚರ್ಚಿಸುವ ದೃಶ್ಯ ಮಾಧ್ಯಮಗಳು, ಈ ವಿಷಯವನ್ನು ಸಣ್ಣ ವಿಷಯದಂತೆ ಚುಟುಕಾಗಿ ಪ್ರಸಾರ ಮಾಡಿ ಸುಮ್ಮನಾದವು.
ಇದು ಕೆಲವು ವಾಹಿನಿಗಳಲ್ಲಿ ಮಾತ್ರ ಪ್ರಸಾರವಾದರೂ ಮರುದಿನದ ಬಹುತೇಕ ಪತ್ರಿಕೆಗಳಲ್ಲಿ ಇದರ ಬಗ್ಗೆ ಸಣ್ಣ ವರದಿಯೂ ಇರಲಿಲ್ಲ. ಹಾಸಿಗೆಯ ಪಕ್ಕದಲ್ಲಿ ಒಂದು ಮತದ ಧಾರ್ಮಿಕ ಗ್ರಂಥಗಳನ್ನು ಏಕೆ ಇಡಬೇಕು  ಎಂಬ ಪ್ರಶ್ನೆಯನ್ನು ಮಾಧ್ಯಮದವರಾರೂ ಕೇಳಿಲ್ಲ.

ಮಾನಸಿಕ ಗೊಂದಲದಲ್ಲಿರುವ ರೋಗಿಗಳ ಹಾಸಿಗೆಯ ಪಕ್ಕದಲ್ಲಿ ಧರ್ಮ ಪ್ರಚಾರಪಡಿಸುವ ಸಾಮಗ್ರಿಗಳನ್ನು ನೀಡುವುದು ಕೂಡ ಪರೋಕ್ಷವಾಗಿ ಧರ್ಮಪ್ರಸಾರ
ಮಾಡಿದಂತೆಯೇ ಸರಿ. ಇದಕ್ಕೆ ಕೊಡುವ ಯಾವುದೇ ವಿವರಣೆ ಒಪ್ಪತಕ್ಕದ್ದಲ್ಲ. ಸ್ಥಳೀಯ ಮಾಧ್ಯಮಗಳು ಯಾರದೆ ಪರ ವಹಿಸದೆ, ಇದೊಂದು ಸಣ್ಣ ಘಟನೆ ಎಂದು ಪ್ರಸಾರ ಮಾಡಿದರೆ, ವಿದೇಶಿ ಜಾಲತಾಣಗಳಲ್ಲಿ ಬೇರೆಯದೇ ಸುದ್ದಿ ಪ್ರಕಟವಾಗಿತ್ತು. ವಿದೇಶಿ ಜಾಲತಾಣಗಳಲ್ಲಿ, ಘಟನೆಗೆ ಮೂಲ ಕಾರಣವನ್ನು ಪ್ರಸ್ತಾಪಿಸದೆ , ಇದು ಕ್ರೈಸ್ತರ ಮೇಲೆ ಹಿಂದೂ ಸಂಘಟನೆಯ ದಾಳಿ ಎಂದು ಬರೆದುಕೊಂಡಿದ್ದರು!.

ಭಾರತದ ಒಂದು ಸಣ್ಣ ಜಿಲ್ಲೆಯಲ್ಲಿ ನಡೆದ ಘಟನೆ, ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿಯಾದ ರೀತಿ ಗಮನಿಸಿದರೆ ಮತಾಂತರದ ಆಳ-ಅಗಲ-ಉದ್ದ, ನಮ್ಮ ನಿರೀಕ್ಷೆಗೂ ಮೀರಿ ವಿಸ್ತಾರವಾಗಿರುವ ಅದನ್ನು ಗಮನಿಸಬಹುದು. ಇದೇ ವರ್ಷ ಮೇ ತಿಂಗಳಲ್ಲಿ , ಭಾರತೀಯ ವೈದ್ಯ ಸಂಘದ ಅಧ್ಯಕ್ಷರಾದ ಡಾ . (ಜಾನ್) ಜಯಲಾಲ್ ವಿರುದ್ಧವೂ ಗಂಭೀರ ಆರೋಪ ಕೇಳಿಬಂದಿತ್ತು . ಆ ಸಮಯದಲ್ಲಿ ಕರೋನಾ ಚಿಕಿತ್ಸೆಗೆ ಬಗ್ಗೆ ಅಲೋಪತಿ ಮತ್ತು ಆಯುರ್ವೇದ ಚಿಕಿತ್ಸೆಗಳ ವಾದ ವಿವಾದಗಳು ತಾರಕ್ಕೇ ಹೋಗಿತ್ತು.

ಬಾಬಾ ರಾಮ್ ದೇವ್ ಅವರು ಪತಂಜಲಿಯ ಕೊರೊನಿಲ್ ಔಷಧ ತಯಾರಿಕೆ ವಿಧಾನಕ್ಕೆ ವಿಶ್ವ ಅರೋಗ್ಯ ಸಂಸ್ಥೆಯಿಂದ (WHO) ಪ್ರಮಾಣ ಪತ್ರ ಪಡೆದು, ಇದು ತಯಾರಿಕಾ ವಿಧಾನಕ್ಕೆ ಪಡೆದ ಪತ್ರ ಎಂಬುದನ್ನು ಮರೆಮಾಚಿ, ಇದು ಕರೋನಾ ಔಷಧಕ್ಕೆ ಕೊಟ್ಟ ಪ್ರಮಾಣ ಪತ್ರ ಎಂದು ಸುಳ್ಳು ಪ್ರಚಾರ ಪಡೆಯಲು ಯತ್ನಿಸಿದ್ದರು. ಇಂತಹ ಸದವಕಾಶವನ್ನು ಸದುಪಯೊಗಪಡಿಸಿಕೊಳ್ಳದೆ, ಬಾಬಾ ರಾಮ್ ದೇವ್ ಆಧುನಿಕ ವೈದ್ಯ ಪದ್ಧತಿ ಒಂದು ‘ಸ್ಟುಪಿಡ್ ಸೈನ್ಸ್’ ಎಂದು ಜರಿದ ವಿಷಯವನ್ನು ಭಾರತೀಯ ವೈದ್ಯ ಸಂಘ ಹಿಡಿದುಕೊಂಡು, ಒಂದು ಸಾವಿರ ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಿತು.

ಪ್ರತ್ಯುತ್ತರ ನೀಡಿದ ಭಾರತೀಯ ವೈದ್ಯ ಸಂಘದ ಅಧ್ಯಕ್ಷರು ‘ಸರಕಾರ ಒಂದು ದೇಶ, ಒಂದು ಭಾಷೆ, ಒಂದು ವೈದ್ಯಪದ್ಧತಿ ಎಂದು ಅಲೋಪತಿಯನ್ನು ತುಳಿದು, ಆಯುರ್ವೇದವನ್ನು ಮುನ್ನೆಲೆಗೆ ತರಲು ಯತ್ನಿಸುತ್ತಿದ್ದಾರೆ ’ ಎಂದು ಬಾಬಾ ರಾಮ್ ದೇವ್ ಸೇರಿಸಿಕೊಂಡು, ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿ ದ್ದರು. ಈ ವಿವಾದ, ಆಯುರ್ವೇದವೆಂದರೆ ಬಲಪಂಥಿಯರು ಮತ್ತು ಅಲೋಪತಿ ಎಂದರೆ ಎಡಪಂಥಿಯರು ಎಂದು ಬಿಂಬಿತವಾಗುವ ಅಪಾಯ ಮಟ್ಟಕ್ಕೆ ತಲುಪಿತ್ತು . ಇದಕ್ಕೆ ಭಾರತೀಯ ವೈದ್ಯಕೀಯ ಸಂಘವನ್ನು ಮುನ್ನೆಡೆಸುತ್ತಿದ್ದ ಡಾ.ಜಯಲಾಲ್ ಕೊಟ್ಟಿದ್ದರೆಂಬ ಇನ್ನೊಂದು ಸಂದರ್ಶದ ಹೇಳಿಕೆ ಕಾರಣವಾಗಿತ್ತು. ಈ ವಿವಾ ದಿತ ಸಂದರ್ಶನವನ್ನು ಡಾ.ಜಯಲಾಲ್, ಕ್ರೈಸ್ತ ಧಾರ್ಮಿಕ ಅಂತರ್ಜಾಲ ಪತ್ರಿಕೆ ಕೊಟ್ಟಿದ್ದರು ಎಂದು ಹೇಳಲಾಗಿತ್ತು. ಆ ಸಂದರ್ಶನದಲ್ಲಿ ‘ಮತಾಂತರಕ್ಕೆ ಕರೋನಾ ಒಳ್ಳೆ ವೇದಿಕೆ ಸೃಷ್ಟಿಮಾಡಿದೆ.

ಅದರ ಸದುಪಯೋಗವನ್ನು ಮಿಶನರಿಗಳು ಉಪಯೋಗಿಸಿಕೊಳ್ಳಬೇಕು’ ಎಂದು ಹೇಳಿದ್ದರಂತೆ. ವಿವಾದದ ನಂತರ ಆ ಪುಟಗಳನ್ನೂ ಜಾಲತಾಣಗಳಿಂದ ತೆಗೆದಿದ್ದರಿಂದ, ಇದರ ಸತ್ಯಾಸತ್ಯತೆಗಳನ್ನು ನಿರೂಪಿಸುವುದು ಕಷ್ಟ. ಈ ಹೇಳಿಕೆ ಕೋರ್ಟಿನ ಮೆಟ್ಟಿಲೇದರೂ, ಯಾವುದೇ ತಾರ್ತಿಕ ಅಂತ್ಯ ಕಾಣದೆ ತಣ್ಣಗಾ ಗಿತ್ತು. ಬಾಬಾ ರಾಮ್ ದೇವ್, ಈ ಹೇಳಿಕೆ ಕೊಡದಿದ್ದರೆ ಬಹುಶಃ ಡಾ.ಜಯಲಾಲ್ ಅವರ ಹೇಳಿಕೆ ಬಗ್ಗೆ ಬಹುಶಃ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ . ಆದರೂ ವೈದ್ಯ ಸಂಘದ ಅಧ್ಯಕ್ಷರು, ತಮ್ಮ ಹೇಳಿಕೆಯನ್ನು ಅರಗಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು.

ಆದರೆ ಭಾರತೀಯ ವೈದ್ಯ ಸಂಘ ವೇದಿಕೆಯನ್ನು ಇಂತಹ ವೈಯಕ್ತಿಕ ಕಾರಣಗಳಿಗೆ ಉಪಯೋಗಿಸಿಕೊಂಡ ಬಗ್ಗೆ, ಸಂಘದ ಒಳಗಡೆಯಿಂದ ಒಂದು ಗಟ್ಟಿ ಧ್ವನಿ ಕೇಳ ಬರದಿದ್ದುದು ಮತ್ತು ಯಾರೂ ಕೂಡ ರಾಜೀನಾಮೆಗೆ ಒತ್ತಾಯಿಸದೆ ಇದ್ದುದು, ಒಂದು ಕಪ್ಪು ಚುಕ್ಕೆಯಾಗಿಯೇ ಉಳಿದುಕೊಂಡಿತು. ಬಹುಶ ಬಲಪಂಥೀ ಯರು ಇಂತಹ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ, ತಲೆದಂಡವಾಗದೆ ಇರುತ್ತಿರಲಿಲ್ಲ ಎಂಬುದು ಸತ್ಯ.

ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಮತ್ತು ಕುಟುಂಬ ವರ್ಗದವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಒಂದು ಕಡೆ ಚಿಕಿತ್ಸೆಗೆ ಹಣ ಹೊಂದಿಸ
ಬೇಕಾದ ಒತ್ತಡ ಮತ್ತು ರೋಗದಿಂದ ಆಗುವ ದೈಹಿಕ ಒತ್ತಡ ಎರಡು ಸೇರಿ ಮಾನಸಿಕವಾಗಿ ಕುಂದು ಹೋಗಿರುತ್ತಾರೆ. ಕುಟುಂಬದ ಒಬ್ಬ ವ್ಯಕ್ತಿ ರೋಗಕ್ಕೆ ತುತ್ತಾದಾಗ ಇಡೀ ಕುಟುಂಬದ ದೈನಂದಿನ ಚಟುವಟಿಕೆಗಳು ಮತ್ತು ಆರ್ಥಿಕ ಸ್ಥಿತಿಗತಿಗಳು ಬದಲಾವಣೆಯಾಗುತ್ತದೆ. ತಾವು ಪೂಜಿಸುತ್ತಿರುವ ದೇವರು ಮತ್ತು ಧರ್ಮದ ಬಗ್ಗೆಯೂ ಅವರಿಗೆ ಅನುಮಾನಗಳು ಬರುವ ಸಾಧ್ಯತೆಗಳಿರುತ್ತವೆ. ದೇವರು ನಮಗೆ ಏಕೆ ಈ ರೀತಿ ಕಷ್ಟ ಕೊಡುತ್ತಿದ್ದಾನೆ? ದೇವರಿಗೆ ನಮ್ಮ ಮೇಲೆ ಪ್ರೀತಿ ಇಲ್ಲವೇ? ದೇವರಿಗೆ ನಮ್ಮ ಮೇಲೆ ಸಿಟ್ಟು ಏಕೆ? ದೇವರು ನಮ್ಮನ್ನು ಏಕೆ ರಕ್ಷಿಸುತ್ತಿಲ್ಲ? ಅವನು ನಿಜವಾಗಲೂ ಶಕ್ತಿವಂತನೇ? ದೇವರೆಂಬುವನು
ಇದ್ದಾನೆಯೇ? ಎಂಬ ಹಲವಾರು ಪ್ರಶ್ನೆಗಳು ರೋಗಿಗೆ ಮತ್ತು ಕುಟುಂಬದವರಿಗೆ ಕಾಡುತ್ತಿರುತ್ತವೆ.

ಕಾದ ಕಬ್ಬಿಣವನ್ನು ಹೇಗೆ ನಮ್ಮ ಅಗತ್ಯಕ್ಕೆ ತಕ್ಕಂತೆ ಬಗ್ಗಿಸಬಹುದು ಹಾಗೆಯೇ ಇಂತಹ ಗೊಂದಲದಲ್ಲಿರುವವರಿಗೆ, ಏನಾದರೂ ಸಹಾಯ ಮಾಡಿ ತಮ್ಮ
ಕಡೆಯ ಒಲಿಸಿಕೊಳ್ಳುವುದು ಬಹಳ ಸುಲಭ. ಇಂತಹ ಸಂಕಷ್ಟಗಳು ಮತಾಂತರಿಗಳಿಗೆ ವಿಪುಲವಾದ ಅವಕಾಶಗಳನ್ನು ತೆರೆದಿಡುತ್ತದೆ. ನಿಮ್ಮ ದೇವರು ನಿಮ್ಮನ್ನು
ಕೈಬಿಟ್ಟರೆ ಏನಂತೆ. ನಮ್ಮ ದೇವರು ಇಲ್ಲವೇ?. ನಮ್ಮದೇವರು ನಿಮ್ಮನ್ನು ಪ್ರೀತಿಸುತ್ತಾನೆ, ನಿಮಗಾಗಿ ಉಚಿತ ಚಿಕಿತ್ಸೆ ನೀಡಲು ನಮ್ಮನ್ನು ಕಳಿಸಿದ್ದಾನೆ, ಎಂಬ
ಮಾತುಗಳು ಬಹಳ ಪ್ರಭಾವವನ್ನು ಬೀರುತ್ತವೆ. ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆ ಎಂಬ ಹಾಗೆ ಸಿಕ್ಕ ಸಹಾಯವನ್ನು ಉಪಯೋಗಿಸಿಕೊಳ್ಳುವ ಮನ ಸ್ಥಿತಿಯನ್ನು ರೋಗಿಗಳು ಹೊಂದಿರುತ್ತಾರೆ. ಅವರು ಪಡೆದ ಸಹಾಯಕ್ಕೆ ಅವರು ಋಣಭಾರವನ್ನು ತೀರಿಸಬೇಕು ಎಂಬ ವಿಷಯ ತಕ್ಷಣಕ್ಕೆ ಅರಿವಿಗೆ ಬರುವುದಿಲ್ಲ.

ಕ್ಷಣಮಾತ್ರದಲ್ಲಿ ದೇಹದ ನೂನ್ಯತೆಗಳು ಮತ್ತು ರೋಗಗಳನ್ನು ಗುಣಪಡಿಸುವ ಪವಾಡಗಳನ್ನು ಮಾಡುವ ಧರ್ಮಪ್ರಚಾರಕರು ಬಹಳಷ್ಟು ಕಾಣಸಿಗುತ್ತಾರೆ. ನಡೆಯಲು ಆಗದ, ತೆವಳುತ್ತಾ ಬರುವ ವ್ಯಕ್ತಿ, ಕ್ಷಣ ಮಾತ್ರದಲ್ಲಿ ಧರ್ಮಪ್ರಚಾರಕರ ಸ್ಪರ್ಶಮಾತ್ರದಿಂದ ನೃತ್ಯ ಮಾಡಲು ತೊಡಗುತ್ತಾನೆ. ಇಂತಹ ಪವಾಡ ಗಳನ್ನು ಕೃತಕವಾಗಿ ಸೃಷ್ಟಿಸಿ, ಜನರ ಮೇಲೆ ಪ್ರಭಾವ ಮಾಡು ವುದು ಸಾಮಾನ್ಯವಾಗುತ್ತಿದೆ. ಇದು ನಿಜವೇ ಆಗಿದ್ದರೆ ಮತಾಂತರವಾದ ಎಲ್ಲರೂ ಸುಖವಾಗಿ ಸಮೃದ್ಧಿಯಿಂದ ಆರೋಗ್ಯವಾಗಿ ಇರಬೇಕಿತ್ತಲ್ಲವೇ? ಹಾಗೇನಾದರೂ ಆಗಿದೆಯೇ?.

ಸನಾತನ ಧರ್ಮದ ಒಂದು ಕೊರತೆ ಏನೆಂದರೆ, ನಮ್ಮ ಧಾರ್ಮಿಕ ಗ್ರಂಥಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ವ್ಯವಸ್ಥೆಯನ್ನು ನಾವು ಮಾಡಿಕೊಂಡಿಲ್ಲ.
ಇತರ ಮತಗಳಲ್ಲಿ ಮೂಲ ಧಾರ್ಮಿಕ ಗ್ರಂಥಗಳನ್ನು ಕಡ್ಡಾಯವಾಗಿ ಕಲಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸನಾತನ ಧರ್ಮದಲ್ಲಿ, ಇಂತಹ ವ್ಯವಸ್ಥೆ ಇಲ್ಲದಿರುವ ಕಾರಣ ಸನಾತನ ಬೇರುಗಳು ಸಡಿಲವಾಗುತ್ತಿವೆ. ಬರಿ ದೇವಸ್ಥಾನಗಳ ಭೇಟಿಯಿಂದ ಸನಾತನ ಧರ್ಮದ ಬಗ್ಗೆ ಆಳವಾದ ಅರಿವು ಮೂಡಿಸಲು ಅಸಾಧ್ಯ. ಜಾತ್ಯತೀತ ಎಂಬ ಹೆಸರಿನಲ್ಲಿ, ಸನಾತನ ಧರ್ಮಗಳ ಪ್ರಚಾರಕ್ಕೆ ಅಡ್ಡಿ ಪಡಿಸಲಾಗುತ್ತಿದೆ.

ದೂರ ದರ್ಶನದಲ್ಲಿ ರಾಮಾಯಣ ಮಹಾಭಾರತಗಳ ಪ್ರಸಾರವಾದುದ ಒಂದು ಸಾಧನೆ. ಅದರ ಪ್ರಸಾರವನ್ನು ತಡೆಯುವುದಕ್ಕೆ ಹಲವಾರು ಪ್ರಯತ್ನಗಳು ನೆಡೆದಿದ್ದವು ಎಂಬುದು ಬಹು ಜನರಿಗೆ ತಿಳಿದಿರಕ್ಕಿಲ್ಲ. ಪಠ್ಯ ಪುಸ್ತಕಗಳಲ್ಲಿ ಜಾತ್ಯತೀತತೆ ಹೆಸರಿನಲ್ಲಿ, ಹಿಂದೂ ಧರ್ಮ ಗ್ರಂಥಗಳಿಗೆ ಅನಧಿಕೃತ ನಿಷೇಧವಿದೆ.
ಹಿಂದೂ ದೇವಾಲಯಗಳ ಹಣವನ್ನು ಕೂಡ ಸರಕಾರ ಗಳು, ಹಿಂದೂ ಧರ್ಮ ಪ್ರಚಾರಕ್ಕೆ ಬಳಸಿಕೊಳ್ಳಲು ಬಿಡದಂತ ಹೀನಾಯ ವ್ಯವಸ್ಥೆಯಲ್ಲಿ ಸನಾತನ ಧರ್ಮ
ಸಿಲುಕಿಕೊಂಡಿದೆ.

ಹಿಂದೂ ಧರ್ಮ ಹಲವಾರು ದಾಳಿಗಳನ್ನು ಎದುರಿಸಿ ಉಳಿದುಕೊಂಡಿದ್ದರೂ, ಮುಂದೆ ಇದೇ ರೀತಿ ಎದುರಿಸಲು ಸಾಧ್ಯ ಎಂದು ಹೇಳುವಂತಿಲ್ಲ. ಇದುವರೆಗೂ ಸನಾತನ ಧರ್ಮ ರಕ್ಷಣಾತ್ಮಕವಾಗಿ ನಡೆದುಕೊಂಡೆ ಬಂದಿದೆ. ಆದರೆ ಬಹುಶಃ ಆಕ್ರಮಣಾತ್ಮಕವಾಗಿ ಆಡದಿದ್ದರೆ ಮುಂದೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗಿ
ಬರಬಹುದು. ಮಧ್ಯ ಪ್ರಾಚ್ಯಗಳ ಇತಿಹಾಸವನ್ನು ಗಮನಿಸಿದವರಿಗೆ, ಪವಿತ್ರ ಎನಿಸಿಕೊಂಡಿರುವ ಒಂದು ನಗರ, ಮತಾಂತರ ಗೊಳ್ಳಲು ತೆಗೆದುಕೊಂಡ ಕಾಲ
ಒಂದೇ ದಿನ ಎಂಬುದನ್ನು ನೆನಪಿನಲ್ಲಿ ಇಡಬೇಕು.

ಈಜಿಪ್ಟ್ ನಂತಹ ದೇಶಗಳು ಸಂಪೂರ್ಣ ಮತಾಂತರವಾಗಲು ಶತಮಾನಗಳು ತೆಗೆದುಕೊಂಡಿಲ್ಲ. ಕೇರಳದ ನನ್ನ ವೈದ್ಯ ಸ್ನೇಹಿತರೊಬ್ಬರು ಇಂಗ್ಲೆಂಡ್
ದೇಶಕ್ಕೆ ವಲಸೆ ಹೋದರು. ಅವರು ವಲಸೆ ಹೋಗುವುದಕ್ಕೆ, ಅರೋಗ್ಯ ಮತ್ತು ಸಾಮಾಜಿಕ ಭದ್ರತೆಯ ಕಾರಣದ ಜೊತೆಗೆ, ತಮ್ಮ ಮಗಳ ಭದ್ರತೆಯೂ ಒಂದು
ಕಾರಣವಾಗಿತ್ತು . ಒಂದು ದಿನ ತಮ್ಮ ಮಗಳು ‘ಲವ್ ಜಿಹಾದ್’ಗೆ ಒಳಗಾದರೆ, ಯಾರು ಸಹಾಯ ಮಾಡುವುದಿಲ್ಲ ಎಂಬ ಆಳವಾದ ಭಯ ಅವರಲ್ಲಿ ಕಾಡುತ್ತಿತ್ತು.
ಹಾಗಾಗಿ ಮತಾಂತರ ಎನ್ನುವುದು ಎಲ್ಲೋ ನೆಡೆಯುವ ಘಟನೆಯಾಗಿ ಉಳಿದುಕೊಂಡಿಲ್ಲ. ಅದು ನಮ್ಮ ಕಾಲ ಬುಡದಲ್ಲಿ ಬಂದು ನಿಂತಾಗಿದೆ. ಅದನ್ನು ನಿರಾಕರಿ ಸುವವರು ಪ್ರಗತಿಪರರೋ ಅಥವಾ ರಾಜಕೀಯದವರೋ ಆಗಿರುತ್ತಾರೆ. ಸಾಮಾನ್ಯ ಜನರಿಗೆ ಇದರ ಬಿಸಿ ತಟ್ಟಿಯಾಗಿದೆ.

ಇದು ಒಂದು ಧರ್ಮದ ಪ್ರಶ್ನೆಯಾಗಿ ಉಳಿಕೊಂಡಿಲ್ಲ. ಮತಾಂತರ ಎನ್ನುವುದು ಭಾಷೆ, ಸಂಸ್ಕೃತಿಯ ಅಳಿವು ಉಳಿವಿನ ಪ್ರಶ್ನೆ. ಉದಾಹರಣೆಯಾಗಿ ಹೇಳು
ವುದಾದರೆ ಆಫ್ರಿಕಾದ ಹಲವಾರು ದೇಶಗಳಲ್ಲಿ ಮೂಲಭಾಷೆ ಮರೆಯಾಗಿ, ಇಂಗ್ಲಿಷ್ ಭಾಷೆ ಅಪ್ಪಿಕೊಂಡಿದ್ದಾರೆ. ಈಜಿಪ್ಟ್ ಪಿರಮಿಡ್‌ಗಳು, ಮಮ್ಮಿಗಳು ಇಲ್ಲದಿದ್ದರೆ, ಈಜಿಪ್ಷನವರಿಗೆ ತಮ್ಮ ಇತಿಹಾಸವೇ ಹೀಗಿತ್ತು ಎಂದು ಹೇಳಿದರೂ ನಂಬುತ್ತಿರಲಿಲ್ಲ. ಹಾಗಾಗಿ, ಭಾಷೆ ಮತ್ತು ಸಂಸೃತಿಯ ಉಳಿವಿನ ಬಗ್ಗೆ ಸ್ವಲ್ಪ ಕಾಳಜಿ ಇರುವವರು ಕೂಡ, ಧರ್ಮದ ಉಳಿವಿನ ಬಗ್ಗೆ ಚಿಂತಿಸಬೇಕಾದ ವಿಷಯ. ಇಂತಹ ಸಂದರ್ಭದಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಪ್ರಕಟವಾದ ಚಿತ್ರ ವೊಂದು ಪರಿಸ್ಥಿತಿಯನ್ನು ಮಾರ್ಮಿಕವಾಗಿ ಹೇಳಬಹುದು.

ಎರಡನೇ ಮಹಾಯುದ್ಧದ ಸಮಯದಲ್ಲಿ ಸೈನಿಕನೊಬ್ಬನ ಕತ್ತೆ ಯೊಂದನ್ನು ಬೆನ್ನಮೇಲೆ ಹೊತ್ತುಕೊಂಡು ಯುದ್ಧ ಭೂಮಿಯಲ್ಲಿ ಸಾಗುತ್ತಿರುವ ದೃಶ್ಯವೊಂದು ಪ್ರಕಟವಾಗಿತ್ತು. ಈ ಕೆಲಸಕ್ಕೆ ಕತ್ತೆಯ ಮೇಲಿನ ಯಾವುದೇ ಕಾಳಜಿ ಕಾರಣವಾಗಿರಲಿಲ್ಲ. ಬದಲಿಗೆ ಆ ಯುದ್ಧಭೂಮಿ ಯಲ್ಲಿ ಬಹಳಷ್ಟು ಸಿಡಿಮದ್ದುಗಳನ್ನು ನೆಲದಲ್ಲಿ
ಅಡಗಿಸಿಟ್ಟಿದ್ದರು. ಎಚ್ಚರತಪ್ಪಿ ಈ ನೆಲ ಬಾಂಬುಗಳ ಮೇಲೆ ಕಾಲಿಟ್ಟರೆ ಸೋಟವಾಗಿ, ವಿನಾಶಕ್ಕೆ ಕಾರಣ ವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಕತ್ತೆಯನ್ನು
ತನ್ನಷ್ಟಕ್ಕೆ ತಾನೇ ಹೋಗಲು ಬಿಟ್ಟರೆ ವಿನಾಶಕ್ಕೆ ಆಹ್ವಾನವೇ ಸರಿ. ಆದ್ದರಿಂದ ಎಷ್ಟೇ ಕಷ್ಟವಾದರೂ ಸರಿ ಎಂದು, ಆ ಕತ್ತೆಯನ್ನು ಸೈನಿಕನೊಬ್ಬ ತನ್ನ ಹೆಗಲ ಮೇಲೆ ಹೊತ್ತು ಕೊಂಡು ಯುದ್ಧಭೂಮಿಯನ್ನು ಕ್ರಮಿಸಿದ್ದನು.

ಮತಾಂತರಿಗಳು ಒಂದು ರೀತಿಯ ಕತ್ತೆಗಳಿದ್ದ ಹಾಗೆ. ಅವರನ್ನು ಸ್ವಇಚ್ಛೆಯಂತೆ ನಡೆಯಲು ಬಿಟ್ಟರೆ, ಸಾಮಾಜಿಕ, ಭೌಗೋಳಿಕ, ಸಾಂಸ್ಕೃತಿಕ ಅವಾಂತರ ಗಳನ್ನು ಸೃಷ್ಟಿಸಬಲ್ಲರು. ಈಗಿರುವ ಸಾಮಾಜಿಕ ಸಾಮರಸ್ಯ ಹಾಳು ಮಾಡಬಲ್ಲವರು. ಮತಾಂತರಿಗಳು ಒಂದು ರೀತಿಯ ಕಾರ್ಪೊರೇಟ್ ಸಂಸ್ಥೆಗಳ ಹಾಗೆ. ಪ್ರತಿ
ವರ್ಷವೂ ಅಭಿವೃದ್ಧಿ ದರ ಏರುತ್ತಿರಬೇಕು . ಅದಕ್ಕೆ ಕೊನೆ ಎಂಬುದಿಲ್ಲ ಮತ್ತು ಅವರಿಗೆ ತೃಪ್ತಿ ಎನ್ನುವುದಿಲ್ಲ.

ಇಂತವರ ನಿಯಂತ್ರಣಕ್ಕಾಗಿ ಮತಾಂತರ ಕಾಯಿದೆ ಅವಶ್ಯಕವಾಗಿದೆ. ಮಾನಸಿಕ ಆರೋಗ್ಯಕ್ಕೆ ಧರ್ಮ ಮತ್ತು ಅಧ್ಯಾತ್ಮಿಕತೆಯ ಅವಶ್ಯಕತೆ ಖಂಡಿತ ಇದೆ. ಆದರೆ ಆತ್ಮಶಾಂತಿಯನ್ನು ಅವರವರ ಧರ್ಮಗಳಲ್ಲೇ ಅರಸುವುದು ಲೇಸು. ದೇವನೊಬ್ಬ ನಾಮ ಹಲವು ಎಂಬ ಮೂಲಮಾತ್ರ ಅರಿತವರಿಗೆ ಎಲ್ಲ ಧರ್ಮಗಳು ಒಂದೇ.

ಕೊನೆಮಾತು : ವಿಚಿತ್ರವೆಂದರೆ, ಯೇಸುವನ್ನು ಅನುಸರಿಸದವರು ಕ್ರೈಸ್ತ ಧರ್ಮೀಯರಾದರೂ, ಯೇಸು ಕ್ರಿಶ್ಚಿಯನ್ ಆಗಿರಲಿಲ್ಲ. ಪ್ರವಾದಿಗಳನ್ನೂ ಅನುಸರಿಸ ದವರು ಮುಸ್ಲಿಮರಾದರೂ, ಪ್ರವಾದಿಗಳು ಮುಸ್ಲಿಮರಾಗಿರಲಿಲ್ಲ. ಆದರೆ ಹಿಂದೂಗಳು ಅನುಸರಿಸುವ ರಾಮ ಕೃಷ್ಣರು, ಸನಾತನ ಧರ್ಮದವರೇ ಆಗಿದ್ದರು !

Leave a Reply

Your email address will not be published. Required fields are marked *

error: Content is protected !!