Sunday, 19th May 2024

ಚುನಾವಣಾ ಭ್ರಷ್ಟಾಚಾರದಲ್ಲಿ ಆರೋಪಿಗಳು ಯಾರು ?

ಚರ್ಚಾಕೂಟ

ರಮಾನಂದ ಶರ್ಮಾ

ಚುನಾವಣಾ ಭ್ರಷ್ಟಾಚಾರ ಲಾಗಾಯ್ತನಿಂದ ಚರ್ಚೆಯಲ್ಲಿದ್ದು,ಇದಕ್ಕೆ ಹೊಣೆ ಯಾರು ಎನ್ನುವ ಜಿಜ್ಞಾಸೆ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಅಭಿಪ್ರಾಯಗಳು ಏನೇ ಇರಲಿ ಇದರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂದು ಬೊಟ್ಟು ಮಾಡಿ ತೋರಿಸಲಾಗದು. ಇದರಲ್ಲಿ ಮತದಾರ, ಅಭ್ಯರ್ಥಿ, ಪಕ್ಷ, ಸರಕಾರ ಮತ್ತು ಚುನಾವಣಾ ಅಯೋಗ ಎಲ್ಲರೂ ಸಮಾನ ಹೊಣೆಗಾರರು ಎನ್ನಬಹುದು. ಈ ಹೊಣೆಗಾರಿಕೆ ಸಂದರ್ಭಕ್ಕೆ ಅನುಗುಣವಾಗಿ ಏರಿಳಿತ ಕಾಣುತ್ತದೆ.

ಒಟ್ಟಿನಲ್ಲಿ ಇವರೆಲ್ಲ ಸಾಮೂಹಿಕ ಆರೋಪಿಗಳು ಎನ್ನುವುದರಲ್ಲಿ ಸಂದೇಹವಿಲ್ಲ. ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದವರ ಅಸ್ತಿ-ಪಾಸ್ತಿ
ವಿವರಗಳು, ಹೂಡಿಕೆಗಳು, ನಗದು, ಅದಾಯಗಳನ್ನು ನೋಡಿದರೆ ಚುನಾವಣೆಯು ಉಳ್ಳವವರ ಮತ್ತು ಪ್ರಭಾವಿಗಳ ಒಡ್ಡೋಲಗ ಮತ್ತು ಜನಸಾಮಾ ನ್ಯರು, ಬಡವರು ಮತ್ತು ಮಧ್ಯಮ ವರ್ಗದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಕನಸು ಎನ್ನಬಹುದು. ಈ ಪರಿಸ್ಥಿತಿ ಪಂಚಾಯತ ಚುನಾವಣೆ ಯಿಂದ ಪಾರ್ಲಿಮೆಂಟ್ ಚುನಾವಣೆವರೆಗೂ ವ್ಯಾಪಿಸಿದೆ. ತಮ್ಮಲ್ಲಿ ಹಣ ಇಲ್ಲದಿರುವುದರಿಂದ ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರ ಹೇಳಿಕೆ ಚುನಾವಣೆಯ ನಿಜ ಸ್ವರೂಪವನ್ನು ಅ ನಾವರಣ ಗೊಳಿಸಿದೆ. ಓಡಿಸ್ಸಾದ ಪುರಿಯಲ್ಲಿ ಚುನಾವಣೆಗೆ ಸ್ಪರ್ದಿಸಲು ತಮ್ಮಲ್ಲಿ ಹಣವಿಲ್ಲ ಮತ್ತು ಪಕ್ಷವು ಸಹಾಯ ಮಾಡುತ್ತಿಲ್ಲ ಎಂದು ಮಹಿಳಾ ಅಭ್ಯರ್ಥಿಯೊಬ್ಬರು ಪಕ್ಷವು ತಮಗೆ ನೀಡಿದ ಟಿಕೆಟನ್ನು ಹಿಂತಿರುಗಿಸಿದ್ದು, ನಿರ್ಮಲಾ ಸೀತಾರಾಮನ್ ಹೇ ಳಿಕೆಯನ್ನು ದೃಢೀಕರಿಸಿದ್ದಾರೆ.

ಉಳ್ಳವರು ಸೋತರೂ ನಿಭಾಯಿಸಿಕೊಳ್ಳುತ್ತಾರೆ. ಅರ್ಥಿಕವಾಗಿ ಅಷ್ಟಕ್ಕಷ್ಠೇ ಇದ್ದವರು ಚುನಾವಣೆಯಲ್ಲಿ ಸ್ಪರ್ಧಿಸಿ ಮಕಾಡಿ ಮಲಗಿದರೆ? ಇದು
ಕೋರ್ಟ್‌ನಲ್ಲಿ ಗೆದ್ದವನು ಸೋತ, ಸೋತವನು ಸತ್ತ ಎನ್ನುವಂತೆ. ಚುನಾವಣಾ ಭ್ರಷ್ಟಾಚಾರವನ್ನು ಕೇವಲ ಕುರುಡು ಕಾಂಚಾಣಕ್ಕೆ ಸೀಮಿತಗೊಳಿಸ ಲಾಗದು. ನಿರ್ವಿವಾದವಾಗಿ ಹಣದ ಪಾತ್ರ ಮುಖ್ಯವಾಗಿರುತ್ತದೆ. ಅದರೆ, ಚುನಾವಣೆಯಲ್ಲಿ ಭ್ರಷ್ಟಾಚಾರವು ವಿವಿಧ ರೂಪದಲ್ಲಿ ಇರುತ್ತದೆ.

ಇದು Zoe,hಜ್ಞಿb Zb Zoಛಿ mಟ ಞಜಿoಛಿ ಮತ್ತು ಹಲವು ಆಮಿಷಗಳ ರೂಪದಲ್ಲೂ ಇರಬಹುದು. ರೂಪವಷ್ಟೇ ಬೇರೆ, ಉದ್ದೇಶ ಒಂದೇ: ಚುನಾವಣಾ ಭ್ರಷ್ಟಾಚಾರ ದ ಮೂಲ ಬೀಜ ಇರುವುದು ತಮ್ಮನ್ನು ತಾವು ಮಾರಿಕೊಳ್ಳುವ ಮತದಾರರಲ್ಲಿ. ಈ ದೇಶದಲ್ಲಿ ಯಾರು ಯಾರಿಗೆ ಮತ ಹಾಕುತ್ತಾರೆ ಎಂದು ನಿರ್ಧಾರವಾಗುವುದು ಮತದಾನದ ಹಿಂದಿನ ದಿನ ರಾತ್ರಿಯ ಬಾಡೂಟ ಮತ್ತು ಹಣದ ಪ್ರಮಾಣದ ಮೇಲೆ ಎನ್ನುವ ಸಾಮಾನ್ಯ ಟೀಕೆಯಲ್ಲಿ ಅರ್ಥ ವಿಲ್ಲದಿಲ್ಲ.

ನಾವು ನೀಡುವ ಮತ ಪವಿತ್ರವಾಗಿದ್ದು, ಅದನ್ನು ದೇಶದ ಕಲ್ಯಾಣಕ್ಕೆ ಬಳಕೆ ಯಾಗ ಬೇಕು ಎನ್ನುವ ಮನಸ್ಥಿತಿ ಹಳ್ಳಹಿಡಿದಿದ್ದು ಈಗ ಇತಿಹಾಸ. ಒಂದು ಕಾಲಕ್ಕೆ ಮತ ಕೇಂದ್ರಗಳಿಗೆ ಮತದಾರರನ್ನು ವಾಹನದಲ್ಲಿ ಕರೆತಂದು ತಮಗೆ, ತಮ್ಮವರಿಗೆ ಮತ ಹಾಕಿಸುವುದನ್ನು ದೊಡ್ಡ ಅಪರಾದವಾಗಿ ನೋಡ ಲಾಗುತ್ತಿತ್ತು. ಆ ಕಾಲದಲ್ಲಿ ಮತಗಟ್ಟೆಗಳು ದೂರವಿದ್ದು ಕೈಲಾಗದವರಿಗೆ ಮತ್ತು ವಯಸ್ಸಾದವರ ಅನುಕೂಲಕ್ಕೆ ಕೆಲವರು ಇದನ್ನು ಮಾಡುತ್ತಿದ್ದರು. ಅದು ಬೇರೆ ಮಾತು. ಹಾಗೆ ಬಂದವರಿಗೆ ಸೌಜನ್ಯಕ್ಕಾಗಿ ಕಾಫಿ ತಿಂಡಿ ನೀಡುವುದನ್ನೂ ಭ್ರಷ್ಟಾಚಾರವಾಗಿ ಕಾಣಲಾಗುತ್ತಿತ್ತು.

ಇದು ಕ್ರಮೇಣ ಬಾಡೂಟ, ಗರಿ- ಗರಿ ನೋಟುಗಳು, ವಿದ್ಯುನ್ಮಾನ ಗ್ಯಾಜೆಟ್‌ಗಳು, ಉಡುಗೊರೆಗಳು, ಚಿಕ್ಕ ದ್ವಿಚಕ್ರವಾಹನಗಳು, ಕುಕರ್‌ಗಳು, ಫೋನ್‌ಗಳು, ಸಣ್ಣ ಪುಟ್ಟ ಪ್ರವಾಸಗಳು, ಧಾರ್ಮಿಕ ಕೇಂದ್ರಗಳಿಗೆ ಭೇಟಿ ಮತ್ತು ಉದ್ಯೋಗ ಅಮಿಷಗಳಿಗೆ ಉನ್ನತೀಕರಣಗೊಂಡಿದೆ. ಮತದಾರರು ಇದನ್ನು ನೈತಿಕ ಅಪರಾಧ ಎಂದು ಪರಿಗಣಿಸುವುದಿಲ್ಲ.ಇವರೇನು ದಿನಾ ಕೊಡ್ತಾರಾ? ಇನ್ನೈದು ವರ್ಷ ಈ ಕಡೆ ಮುಖ ಹಾಕುವುದಿಲ್ಲ. ಬಂದಷ್ಟು ಬರಲಿ, ಅವರೇನು ಅವರು ಬೆವರು ಹಣದಿಂದ ನೀಡುತ್ತಿಲ್ಲ, ವಾಮ ಮಾರ್ಗದಿಂದ ಗಳಿಸಿದ್ದರಲ್ಲಿ ಒಂದಿಷ್ಟನ್ನು ಸ್ವಲ್ಪ ಈ ಕಡೆ ಎಸೆಯುತ್ತಾರೆ, ಇದು ಮತದಾರರಿಂದ ಸಾಮಾನ್ಯವಾಗಿ ಬರುವ ಪ್ರತಿಕ್ರಿಯೆಯಾಗಿರುತ್ತದೆ. ಹಾಗೆಯೇ ಈ ಫಲಾನುಭವಿಗಳು ಎಲ್ಲರಿಂದಲೂ ಪಡೆದು, ಯಾರಿಗೋ ಒಬ್ಬರಿಗೆ ಮತ್ತು ಹೆಚ್ಚು ನೀಡಿದವರಿಗೆ ತಮ್ಮಮತ ನೀಡುವುದು ಬೇರೆ ವಿಷಯ.

ಮತಗಳು ಮಾರಾಟದ ವಸ್ತುಗಳಾಗಿರುವಾಗ, ಮತದಾರರು ಮಾರಾಟಕ್ಕೆ ಸಿದ್ದರಾಗಿರುವಾಗ, ಅವಕಾಶವನ್ನು ರಾಜಕಾರಿಣಿಗಳು ಬಳಸಿಕೊಳ್ಳದೇ ತಮ್ಮ ಮೂರ್ಖತನವನ್ನು ತೋರಿಸಲಾರರು. ಇವರ ಧಾವಂತದಲ್ಲಿ ಪ್ರಾಮಾಣಿಕವಾಗಿ ಒಳಿತು-ಕೆಡುಕುಗಳನ್ನು ವಿಶ್ಲೇಷಿಸಿ ಮತ ಚಲಾಯಿಸುವವರ ಧ್ವನಿ ಅಡಗುತ್ತದೆ, ರಾಜಕೀಯ ವಾಗಿ ಭಾರತೀಯ ಮತದಾರ ಅಷ್ಟು ಜಾಗೃತವಾಗಿಲ್ಲ. ಕೇರಳ, ತಮಿಳುನಾಡು,ಬೆಂಗಾಲದಂಥ ರಾಜ್ಯಗಳನ್ನು ಬಿಟ್ಟರೆ
ರಾಜ್ಯದ, ದೇಶದ ರಾಜಕೀಯ ಅಗು ಹೋಗುಗಳ ಬಗೆಗೆ ಅಳವಾದ eನ ಮತ್ತು ತಿಳುವಳಿಕೆ ಕಡಿಮೆ.

ಹಾಗೆಯೆ ಅದನ್ನು ತಿಳಿದುಕೊಳ್ಳುವ ಪ್ರಯತ್ನ ಕೂಡಾ ಅಷ್ಟಕಷ್ಟೇ? ಅಶಿಕ್ಷಿತ, ಅರೆ ಶಿಕ್ಷಿತ ಮತದಾರರೇ ಹೆಚ್ಚಾಗಿರುವಾಗ ಮತ್ತು ಸುಶಿಕ್ಷಿತ ಮತದಾರರು
ಮತಗಟ್ಟೆಯತ್ತ ಬೆನ್ನು ಹಾಕುತ್ತಿರುವಾಗ ಅರ್ಹ ಆಭ್ಯರ್ಥಿಗಳ ಆಯ್ಕೆ ಗಗನ ಕುಸುಮವಾಗಿ ಪ್ರಜಾಪ್ರಭುತ್ವದ ಆಶಯಕ್ಕೆ ಲಕ್ವ ಬಡಿಯುತ್ತದೆ. ಎಷ್ಟೋ ಮತದಾರರಿಗೆ ತಾವು ಯಾವ ಚುನಾವಣೆಗೆ ಮತಹಾಕುತ್ತಿದ್ದೇವೆ (ಉದಾ: ಪಂಚಾಯತ, ಜಿಲ್ಲಾ ಪರಿಷತ್, ನಗರಸಭೆ, ವಿಧಾನಸಭೆ, ಲೋಕಸಭೆ)
ಎನ್ನುವ ಪರಿಜ್ಞಾನ ಕೂಡಾ ಇರುವುದಿಲ್ಲ.

ವಿಪರ್ಯಾಸವೆಂದರೆ, ಬಹುತೇಕ ಎಲ್ಲಾ ಚುನಾವಣೆಗಳಲ್ಲಿ, ನೀರು, ರಸ್ತೆ, ರೈಲು, ಸೇತುವೆ ಅಸ್ಪತ್ರೆಗಳಂತಾ ಅಜೆಂಡಾಗಳೇ ಮಾಮೂಲಾಗಿ ಇರುತ್ತವೆ. ಮತದಾರ ಕೂಡಾ ನಿರ್ಲಿಪ್ತನಾಗಿ ಯಾರು ಗೆದ್ದರೇನು, ನಮಗೆ ರಾಗಿ ಬೀಸುವುದು ತಪ್ಪುತ್ತದೆಯೇ? ಎಂದು ಉಸುರುತ್ತಾನೆ. ಹಾಗೆಯೇ ಊರಿನ ಗೌಡರು (ಹಿರಿಯರು) ಹೇಳಿದವರಿಗೆ ನಮ್ಮಮತ ಎನ್ನುವ -ಡಲ್ ಮನಸ್ಥಿತಿ ಕೂಡಾ ಅಲ್ಲಲ್ಲಿ ಇನ್ನೂ ಜೀವಂತ ಇದೆ. ಈ ಜಂಜಾಟದಲ್ಲಿ ಅರ್ಹ ಅಭ್ಯರ್ಥಿ
ಕಳಚಿ ಕೊಂಡು ಅನರ್ಹ ಅಭ್ಯರ್ಥಿ ಅಟ್ಟಹಾಸ ಗೈಯುತ್ತಾನೆ. ಕೆಲವು ಅಭಿವೃದ್ಧಿ ಹೊಂದಿದ ದೇಶಗಳಂತೆ ಸಿದ್ಧಾಂತ, ಪ್ರಣಾಳಿಕೆ ಮೇಲೆ ನಮ್ಮಲ್ಲಿ
ಚುನಾವಣೆ ನಡೆಯುವದಿಲ್ಲ.

ಅಮೆರಿಕ ಮತ್ತು ಇಂಗ್ಲೆಂಡ್‌ಗಳಲ್ಲಿ ತೆರಿಗೆ, ಹಣದುಬ್ಬರ ಮತ್ತು ವಿದೇಶಾಂಗ ನೀತಿಗಳು ಚುನಾವಣೆಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಈ ದೇಶದಲ್ಲಿ ತೀರಾ ಕೆಳಮಟ್ಟದ ಪ್ಯೂನ್ ಹುzಯಿಂದ ಅರಂಭಿಸಿ ಸಂಸ್ಥೆಯ ಸಿಇಓ ಹುzಯವರೆಗೆ ಶೈಕ್ಷಣಿಕ ಅರ್ಹತೆಯ ನಿಟ್ಟಿನಲ್ಲಿ ಮಾನದಂಡ ಇರುತ್ತದೆ. ಅದರೆ, ಚುನಾವಣೆಗೆ ಸ್ಪರ್ದಿಸಲು ವಯಸ್ಸನ್ನು ಬಿಟ್ಟು ಇನ್ನು ಯಾವುದೇ ಮಾನದಂಡ ಇರುವುದಿಲ್ಲ. ಹೆಬ್ಬೆಟ್ಟಿನವರೂ ಸ್ಪರ್ದಿಸಬಹುದು, ಮಂತ್ರಿಗಳಾಗ ಬಹುದು. ಬಿಹಾರ ಮುಖ್ಯಮಂತ್ರಿಯಾಗಿದ್ದ ರಾಬ್ರಿ ದೇವಿಯವರ ಶೈಕ್ಷಣಿಕ ಅರ್ಹತೆ ಏನಿತ್ತು? ಅವರು ಬಿಹಾರದ ಮುಖ್ಯಮಂತ್ರಿಯಾದಾಗ ಅದು ಪ್ರಜಾಪ್ರಭುತ್ವದ ಅಣಕವೆಂದು ಹಲವರು ಮನಸ್ವೀ ಲೇವಡಿ ಮಾಡಿದ್ದರು.

ಇತ್ತೀಚಿನ ದಿನಗಳಲ್ಲಿ ಅಭ್ಯರ್ಥಿಗಳ ಅಯ್ಕೆಯಲ್ಲಿ ಮೇಲ್ಮೆಯಲ್ಲಿ ಮುಖ್ಯವಾಗಿ ಕಾಣುವುದು ಅವರು ಗೆಲ್ಲುವ ಕುದುರೆಯೇ ಎನ್ನುವ ಮಾನ
ದಂಡ ಮಾತ್ರ. ಒಂದು ಪ್ರಕರಣದಲ್ಲಿ ೫-೬ ಬಾರಿ ಸಂಸದರಾಗಿ ತಮ್ಮ ಕ್ಷೇತ್ರಕ್ಕೆ ಏನನ್ನೂ ನೀಡದ ಸಂಸದರೊಬ್ಬರಿಗೆ ಗೆಲ್ಲುವ ಕುದುರೆ ಹೆಸರಿನಲ್ಲಿ ಪುನಾ ಟಿಕೆಟ್ ನೀಡುವ ಪ್ರಯತ್ನ ನಡೆದಿತ್ತು. ತಮ್ಮಮೂರು ದಶಕಗಳ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆಇಲ್ಲದ, ಸರಳ ಮತ್ತು ಪ್ರಾಮಾಣಿಕೆ ರಾಜಕಾರಿಣಿಯೊಬ್ಬರಿಗೆ ಹೊಸ ಮುಖವನ್ನು ತರುವ ಹೆಸರಿನಲ್ಲಿ ಟಿಕೆಟ್ ನಿರಾಕರಿಸಲಾಯಿತಂತೆ. ಕಾರಣ? ಅವರ ಬಳಿ ಚುನಾವಣಾ ಖರ್ಚಿಗೆಂದು ಪಕ್ಷಕ್ಕೆ ನೀಡಲು ಕೋಟಿ ಇರಲಿಲ್ಲವಂತೆ? ಅರ್ಹತೆಯನ್ನು ಪರಿಗಣಿಸದೆ, ಕುಟುಂಬದಿಂದ ರಾಜಕಾರಣ ಹೊರಗೋಗದಂತೆ ತಂದೆ-ತಾಯಿ, ಅತ್ತೆ-ಮಾವ, ಅಣ್ಣ-ತಮ್ಮರ ಅನುಭವದ ಮೂಸೆಯ ಹೆಸರಿನಲ್ಲಿ ಅಭ್ಯರ್ಥಿಗಳನ್ನು ಕಣ ಕ್ಕಿಳಿಸುವುದು ಇನ್ನೊಂದು ರೀತಿಯ ಭ್ರಷ್ಟಾಚಾರ.

ಸೋಜಿಗವೆಂದರೆ ಮತದಾರರು ಇಂಥವರನ್ನೇ ಅಯ್ಕೆಮಾಡುತ್ತಾರೆ. ಈ ಅಭ್ಯರ್ಥಿಗಳಿಗೆ ಅರ್ಹತೆ ಇದೆಯೇ, ಮತದಾರರ ಆಶೆ-ಆಕಾಂಕ್ಷೆಗಳನ್ನು ಈಡೇರಿಸ ಬಹುದೇ? ಎಂದು ಕಿಂಚಿತ್ ಚಿಂತಿಸುವುದಿಲ್ಲ. ಅಭ್ಯರ್ಥಿಗಳನ್ನು ಅಯ್ಕೆ ಮಾಡುವಾಗ ವಯಸ್ಸು, ಅರೋಗ್ಯ, ಸದನದಲ್ಲಿ ಈ ವರೆಗೆ ಸವೆಸಿದ ಸಮಯ,
ಅವರ ಸಾದನೆಗಳು ಮಾನದಂಡ ವಾಗುತ್ತವೆ ಎಂದು ಹೇಳಲಾಗುತ್ತಿದ್ದರೂ, ವಾಸ್ತವದಲ್ಲಿ ಅಳವಡಿಸುವ ಮಾನದಂಡಗಳೇ ಬೇರೆ. ಅಭ್ಯರ್ಥಿಗಳ ಅರ್ಥಿಕ ನೆಲೆಗಟ್ಟು, ಅವರು ಪಕ್ಷಕ್ಕೆ ನೀಡುವ ಧನ ಸಹಾಯ ಮತ್ತು ಅವರ ಪಕ್ಷ ನಿಷ್ಠೆ ಗಳು ಅಭ್ಯರ್ಥಿಗಳ ಅಯ್ಕೆಯಲ್ಲಿ ಮೇಲ್ಮೆಯಲ್ಲಿರುತ್ತವೆ. ಬ್ರೀಫ್ ಕೇಸ್‌ನ ಸೈಜ್‌ನ ಆಧಾರದ ಮೇಲೆ ಟಿಕೆಟ್ ಪಡೆದು, ಸೂಟ್ಕೇಸ್ ಪ್ರಮಾಣದಲ್ಲಿ ಹಣ ವ್ಯಯಿಸಿ ಜಯಶೀಲದಾದವರಿಂದ ಏನನ್ನೂ ನಿರೀಕ್ಷಿಸಲಾಗದು.

ಅವರ ಅಜೆಂಡಾದಲ್ಲಿ ಸುರಿದ ಹಣವನ್ನು ಮರಳಿ ಪಡೆಯುವದಿದ್ದು, ಉಳಿದೆಲ್ಲವೂ ಗೌಣ. ಇತ್ತೀಚಿನ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬರು,
ಹಣವನ್ನು ಸರಿಯಾಗಿ ಹಂಚಲಾಗದಿರುವುದರಿಂದ ತಾನು ಸೊತಿದ್ದೇನೆ ಎಂದು ಬಹಿ ರಂಗವಾಗಿ ಹೇಳಿದ್ದಾರಂತೆ. ಇದು ಚುನಾವಣೆಯಲ್ಲಿ ಕುರುಡು
ಕಾಂಚಾಣದ ಮಹಿಮೆಯನ್ನು ಎತ್ತಿ ತೋರಿಸುತ್ತದೆ.

ಚುನಾವಣೆಯಲ್ಲಿ ಯೋಗ್ಯ ಮತ್ತು ಅರ್ಹ

ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವುದು ಪಕ್ಷದ ಹೈಕಮಾಂಡ್ನ ಹೊಣೆ. ಹೈಕಮಾಂಡ್ ಅಯ್ಕೆ ಮಾಡಿದ ಅಭ್ಯರ್ಥಿ ಜಯಗಳಿಸದಿದ್ದರೆ ಅದರ ಜವಾಬ್ದಾರಿ
ಯನ್ನು ಹೈಕಮಾಂಡ್ ಹೊರಬೇಕಾಗುತ್ತದೆ. ಅದರೆ, ಬಹುತೇಕ ಸಂದರ್ಭಗಳಲ್ಲಿ ಗೆಲ್ಲುವ ಕುದುರೆಯ ಹುಡುಕಾಟದಲ್ಲಿ ಮೂಲ ಆಶಯಗಳು ನೇಪಥ್ಯಕ್ಕೆ
ಸರಿದು, ಒತ್ತಡಗಳ ಹಗ್ಗ- ಜಗ್ಗಾಟದಲ್ಲಿ ಅಂತೂ ಇಂತೂ ಅಭ್ಯರ್ಥಿಗಳ ಅಯ್ಕೆ ಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸ್ಥಳೀಯರ ಭಾವನೆಗಳಿಗೆ ಸ್ಪಂದನೆ
ದೊರಕದೇ, ಹೈಕಮಾಂಡ್ ಸೂಚಿಸಿದವರನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಸಮಾಜವಾದಿ ನಾಯಕ ಫೈರ್‌ಬ್ರ್ಯಾಂಡ್ ಜಾರ್ಜ್  ಫೆರ್ನಾಂ ಡೀಸ್ ಹೇಳುವಂತೆ, ಹೈಕಮಾಂಡ ಮೊದಲು ಅಭ್ಯರ್ಥಿಯ ಅಯ್ಕೆ ಮಾಡಿ ನಂತರ, ಅಭ್ಯರ್ಥಿಯ ಎಲ್ಲಾ ಒಳ್ಳೆಯ ಲಕ್ಷಣಗಳನ್ನು ಅವರಿಗೆ ಲೇಪ ಹಚ್ಚಲಾಗುತ್ತದೆ.

ಇದು ಈ ದೇಶದ ಚುನಾವಣಾ ವ್ಯವಸ್ಥೆಯ ಮಹಾ ದುರ್ದೈವ. ಹಾಗೆಯೇ ವ್ಯಕ್ತಿಯನ್ನು ನೋಡದೆ ಅವನ ಪಕ್ಷವನ್ನು ಮತ್ತು ಅ ಪಕ್ಷದ ನಾಯಕನನ್ನು
ನೋಡಿ ಮತ ಹಾಕುತ್ತಾರಾರೆ. ಇಂದಿರಾಗಾಂದಿ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಆಯಾಮ, ಈಗ ಮೋದಿ ಕಾಲದಲ್ಲಿ ಉತ್ತುಂಗಕ್ಕೇರಿದೆ. ಹಿಂದೆ
ಇಂದಿರಾಗಾಂಧಿಗೆ ಮತ ಹಾಕುತ್ತೇವೆ ಎನ್ನುವ ರಾಗ ಈಗ ಮೋದಿಗೆ ಮತ ಎನ್ನುವ ಹಾದಿಯಲ್ಲಿ ಜೋರಾಗಿ ಅಲಾಪ ನುಡಿಸುತ್ತಿದೆ.

ಒಂದು ರಾಜಕೀಯ ಪಕ್ಷವನ್ನು ನಡೆಸಲು ಅಪಾರ ಹಣಬೇಕು. ಸದಸ್ಯರು ನೀಡುವ ಸದಸ್ಯತ್ವದ ಶುಲ್ಕ ಮತ್ತು ವಾರ್ಷಿಕ ದೇಣಿಗೆ ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತೆ. ಅಂತೆಯೇ ರಾಜಕೀಯ ಪಕ್ಷಗಳು ಶ್ರೀಮಂತರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದ್ದು. ಈ ಸಂಧಿಗ್ದತೆಯನ್ನು ಉಳ್ಳವರು ಸದುಪಯೋಗ ಪಡಿಸಿಕೊಳ್ಳುತ್ತಾರೆ. ಧಾರಾಳವಾಗಿ, ಕೈಎತ್ತಿ ಪಕ್ಷಕ್ಕೆ ದೇಣಿಗೆ ನೀಡಿದವರಿಗೆ ಶರಣಾಗಲೇಬೇಕಾಗುತ್ತದೆ. ಇದು ಈ ಸ್ಥಿತಿಗೆ ತಲುಪಿದೆಯಂದರೆ
ರಾಜಕೀಯ ರಾಜಕೀಯೋಧ್ಯಮವಾಗಿದ್ದು, ಅವರೇ ಸರಕಾರದ ನೀತಿ ನಿಯಮಾವಳಿ, ಕಾಯ್ದೆ ಕಾನೂನನ್ನು ತಮ್ಮ ಉದ್ಯಮದ ಹಿತಕ್ಕೆ ಅನುಕೂಲ ವಾಗುವಂತೆ ನಿರೂಪಿಸುವ ವಿನ್ಯಾಸ ಮಾಡುವ ಹಂತಕ್ಕೆ ಹೋಗುತ್ತಾರಂತೆ.

ಇಲ್ಲಿ ಜನಸಾಮಾನ್ಯರ ಒಳಿತು-ಕೆಡುಕುಗಳು ಮತ್ತು ಕಲ್ಯಾಣಕ್ಕಿಂತ ಉಧ್ಯಮಿಗಳ ಹಿತವೇ ಮೇಲ್ಮೆಯಲ್ಲಿ ಇರುತ್ತದೆಯಂತೆ. ಪಕ್ಷದ ಮುಂದೆ ಹಣ
ಮತ್ತು ಅರ್ಹತೆಗಳು ಎದುರಾದಾಗ, ನೀತಿ-ನಿಯಮಾವಳಿ, ನಿಷ್ಟೆ, ತತ್ವ ಆದರ್ಶಗಳನ್ನು ಬದಿಗೊತ್ತಿ ಹಣ ಜೈ ಅನ್ನುತ್ತದೆ. ಹಣವೇ ಭ್ರಷ್ಟಾಚಾರದ ಮೂಲ ಎನ್ನುವುದು ಬಹಿರಂಗ ಸತ್ಯ. ಟಿ.ಎನ್.ಶೇಷನ್ ಚುನಾವಣಾ ಅಯೋಗದ ಮುಖ್ಯ ಅಯುಕ್ತರಾಗುವವರೆಗೆ ಈ ದೇಶದಲ್ಲಿ ಈ ಅಯೋಗದ ಕಾರ್ಯ ವ್ಯಾಪ್ತಿ ಮತ್ತು ಅಧಿಕಾರಗಳ ಬಗೆಗೆ ಜನತೆಗೆ ಯಾವುದೇ ಮಾಹಿತಿ ಇರಲಿಲ್ಲ.

ಅವರು ಈ ಸಂಸ್ಥೆಯ ಆಧಿಕಾರವನ್ನು ತೋರಿಸಿದ ನಂತರ ಚುನಾವಣಾ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಗೋಚರಿಸಿದ್ದು, ಇತ್ತೀಚೆಗೆ ಅದು ಕೂಡಾ
ತನ್ನ ಅಧಿಕಾರವನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎನ್ನುವ ಪುಕಾರು ಕೇಳುತ್ತಿದೆ. ಚುನಾವಣೆಯಲ್ಲಿ ಕುರುಡು ಕಾಂಚಾಣದ ಕುಣಿತ ಮತ್ತು ಕ್ರಿಮಿನಲ್‌ ಗಳ ಭಾಗವಹಿಸುವಿಕೆಯ ನಿಟ್ಟಿನಲ್ಲಿ ಅದು ಇನ್ನೂ ಕ್ರಿಯಾ ಶೀಲವಾಗಬೇಕಿದೆ. ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿ ಅರಿಸಿ ಬರುವುದು ಹತ್ತಾರು ಪೋಲೀಸ್ ಪ್ರಕರಣಗಳು ದಾಖಲಾಗಿದ್ದರೂ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡುವುದು ಯಾವ ನ್ಯಾಯ ಎಂದು ಪ್ರeವಂತರು ಪ್ರಶ್ನಿಸುತ್ತಿದ್ದಾರೆ.

ಸಂಸತ್ತಿನಲ್ಲಿ ಸುಮಾರು ಶೇ.೬೦ ಸದಸ್ಯರಿಗೆ ಕ್ರಿಮಿನಲ್ ಹಿನ್ನೆಲೆ ಇದೆಯಂತೆ. ಪೋ ಲೀಸ್ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುವವರೆಗೂ ಇಂಥವರು ಚುನಾವಣಾ ಅಖಾಡಕ್ಕಿಳಿಯುವದನ್ನು ತಡೆಯಲು ಅ ಯೋಗಕ್ಕೆ ಸಾಧ್ಯವಿಲ್ಲವೇ? ಈ ನಿಟ್ಟಿನಲ್ಲಿ ಚುನಾವಣಾ ಅಯೋಗ ಮುಂದುವರಿಯಬೇಕೇ ವಿನಾಃ
ಜನಪ್ರತಿನಿಧಿಗಳಿಂದ ಇದನ್ನು ನಿರೀಕ್ಷಿಸಲಾಗದು. ಅಭ್ಯರ್ಥಿಗಳು ಚುನಾವಣಾ ಪೂರ್ವದಲ್ಲಿ ಅಥವಾ ಚುನಾವಣಾ ದಿನಗಳಲ್ಲಿ ಮತದಾರರಿಗೆ
ನೀಡುವ ಅಮೀಷ, ಹಣದ ಬಗೆಗೆ ಭಾರೀ ಮಾತು ಕೇಳಿ ಬರುತ್ತದೆ. ಇದನ್ನು ಭ್ರಷ್ಟಾಚಾರದ ಉತ್ತುಂಗ ಎಂದು ಬಣ್ಣಿಸಲಾಗುತ್ತದೆ.

ಅದರೆ, ಈ ಸಮಯದಲ್ಲಿ ಅಡಳಿತದಲ್ಲಿರುವ ಪಕ್ಷವು ಪ್ರಕಟಿಸುವ ಸಾವಿರಾರು ಕೋಟಿಯ ಯೋಜನೆಗಳ ಬಗೆಗೆ ಮೌನವೇಕೆ? ಇದೂ ಭ್ರಷ್ಟಾಚಾರ ವಲ್ಲವೇ? ಅರವತ್ತರ ದಶಕದ ಲ್ಲಿಯೇ ಮುತ್ಸದ್ದಿ ರಾಜಕಾರಿಣಿ ಚಕ್ರವರ್ತಿರಾಜಾಜಿಯವರು ರಾಜಕೀಯ ಪಕ್ಷಗಳಿಗೆ ಕಂಪನಿ ದೇಣಿಗೆಗಳನ್ನು ವಿರೋಧಿಸಿ ದ್ದರು. ದೂರದೃಷ್ಟಿಯ ಈ ನಾಯಕ ಅಂದೇ ಇದರ ದುಷ್ಪರಿಣಾಮವನ್ನು ಗೃಹಿಸಿದ್ದರು. ಹೋದೆಯಾ ಪಿಶಾಚಿ ಎಂದರೆ,ಬಂದೆಯಾ ಗವಾಕ್ಷಿಯಲಿ ಎನ್ನುವಂತೆ, ಅಳಿಯ ಅಲ್ಲ ಮಗಳ ಗಂಡ ಹೆಸರಿನಲ್ಲಿ ಇದು ಪುನಾ ಅವತರಿಸಿದೆ. ಸುದೈ ವದಿಂದ ಸುಪ್ರೀಮ್ ಕೋರ್ಟ್ ಸಧ್ಯ ಕೆಂಪುನಿಶಾನೆ ತೋರಿಸಿದೆ.

ಚುನಾವಣೆಯಲ್ಲಿ ಭ್ರಷ್ಟಾಚಾರವನ್ನು ತಡೆಯಲು ಸಾದ್ಯವಿ ಂದು ಹೇಳುವಂತಿಲ್ಲ. ಇಲ್ಲಿ ಬೇಕಾಗಿರುವುದು ರಾಜಕೀಯ ಇಚ್ಛಾಶಕ್ತಿ. ಮತದಾರ, ಅಭ್ಯರ್ಥಿ, ಪಕ್ಷ, ಸರಕಾರ ಮತ್ತು ಚುನಾವಣಾ ಅಯೋಗ ಕೈಜೋಡಿಸಿದರೆ ಮಾತ್ರ ಇದು ಸಾಧ್ಯ. ಆದರೆ,ಇದು ಸದ್ಯದ ಮಟ್ಟಿಗೆ ಮಿಲಿಯನ್ ಡಾಲರ್ ಪ್ರಶ್ನೆ. ಸಧ್ಯದ ವ್ಯವಸ್ಥೆಯಲ್ಲಿ ಎಲ್ಲರೂ ಚಂದಾದಾರರು, ಫಲಾನುಭವಿಗಳು ಮತ್ತು ಪಾಲುದಾರರು ಆಗಿರುವುದರಿಂದ, ಬದಲಾವಣೆಯ ಬೋಗಿ ಯು ಮುಂದೆ ಚಲಿಸುವುದು ಸಂದೇಹ ಅನಿಸುತ್ತದೆ.

(ಲೇಖಕರು : ರಾಜಕೀಯ ಮತ್ತು ಅರ್ಥಿಕ
ವಿಶ್ಲೇಷಕರು)

Leave a Reply

Your email address will not be published. Required fields are marked *

error: Content is protected !!