* ಪಟಾಕಿಯನ್ನು ಯಾರೇ ಸುಡಲಿ, ಪರಿಸರ ಮಾಲಿನ್ಯಕ್ಕೆ ಯಾರೇ ಕಾರಣರಾಗಲಿ, ಅವರು ಮುಸಲ್ಮಾನರೇ ಇರಬಹುದು ಅಥವಾ ಹಿಂದುಗಳೇ ಇರಬಹುದು, ಅವರು ಶುದ್ಧ ಅವಿವೇಕಿಗಳೇ!
ಅಕ್ಷರಶಃ ದಿಲ್ಲಿ ಉಸಿರುಗಟ್ಟಿ ಹೋಗಿದೆ. ಅಲ್ಲಿನ ಜನ ಶುದ್ಧ ಗಾಳಿಗೆ ಪರಿತಪಿಸುತ್ತಿದ್ದಾರೆ. ದಿನ ದಿಲ್ಲಿಯಲ್ಲಿದ್ದರೆ ಐವತ್ತು ಸಿಗರೇಟು ಸೇದಿದಷ್ಟು ವಿಷಗಾಳಿಯನ್ನು ಸೇವಿಸಿದಂತೆ. ದಿಲ್ಲಿಯಲ್ಲಿ ತುರ್ತುಸ್ಥಿಿತಿ ಘೋಷಿಸಲಾಗಿದೆ. ಶಾಲೆಗಳಿಗೆ ರಜಾ ಘೋಷಿಸಲಾಗಿದೆ. ಇಡೀ ಜಗತ್ತಿನ ಎದುರು ದಿಲ್ಲಿ ನಗ್ನವಾಗಿ ನಿಂತಿದೆ. ನಮ್ಮ ದೇಶದ ರಾಜಧಾನಿ ಜಗತ್ತಿನಲ್ಲಿಯೇ ಅತ್ಯಂತ ಭಯಾನಕ, ಮಾಲಿನ್ಯಪೀಡಿತ ನಗರ ಎಂದು ಮತ್ತೊೊಮ್ಮೆೆ ಸಾಬೀತಾಗಿ ಹೋಯಿತು.
ಮೊನ್ನೆ ದೀಪಾವಳಿ ದಿನ ಪಟಾಕಿ ಹೊಡೆದವರು ಈ ಬಗ್ಗೆೆ ಏನಾದರೂ ಹೇಳಬಹುದಾ ಎಂದು ಕುತೂಹಲದಿಂದ ನೋಡುತ್ತಿದ್ದೆ. ಯಾರೂ ತುಟಿ ಪಿಟಿಕ್ ಎನ್ನಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕಾಳಜಿ ಮೆರೆಯುತ್ತಾಾರಾ ಎಂದು ನೋಡುತ್ತಿದ್ದೆ. ಅವರ ಪುಂಗಿಯೆಲ್ಲ ಬಂದ್ ಆಗಿತ್ತು. ದಿಲ್ಲಿಯಲ್ಲಿ ಕಳೆದ ಹತ್ತು ದಿನಗಳಿಂದ ಕವಿದ ವಿಷಗಾಳಿ ಹೊಡೆತದ ಪರಿಣಾಮ ಕೇಳಿ, ಬೆಂಗಳೂರಿನಲ್ಲಿ ದೀಪಾವಳಿ ದಿನದಂದು ಪಟಾಕಿ ಸುಟ್ಟವರು ಅಂಡು ಸುಟ್ಟವರಂತೆ ಆಡುತ್ತಿಿದ್ದರು. ಅವರೆಲ್ಲರಲ್ಲಿ ಪಾಪಪ್ರಜ್ಞೆ ಕಾಡುತ್ತಿಿತ್ತು. ಅದಕ್ಕಿಿಂತ ಹೆಚ್ಚಾಾಗಿ ದಿಲ್ಲಿಯ ವಾಯು ಮಾಲಿನ್ಯದ ಬಗ್ಗೆೆ ಕಾಮೆಂಟ್ ಮಾಡಲು ಅವರಲ್ಲಿ ಯಾವ ನೈತಿಕತೆಯೂ ಇರಲಿಲ್ಲ. ಕಾರಣ ದಿಲ್ಲಿಯಲ್ಲಿ ಪರಿಸರ ಮಾಲಿನ್ಯಕ್ಕೆೆ ಕಾರಣರಾದವರಂತೆ, ಇಲ್ಲಿ ಪಟಾಕಿ ಸುಟ್ಟವರು ಇಲ್ಲಿನ ಕಾರಣರಾಗಿದ್ದರು. ಹೀಗಿರುವಾಗ ಯಾವ ಮುಖ ಇಟ್ಟುಕೊಂಡು ಇವರೆಲ್ಲ ದಿಲ್ಲಿಯ ವಾಯು ಮಾಲಿನ್ಯಕ್ಕೆೆ ಕಾರಣರಾದವರ ವಿರುದ್ಧ ಮಾತಾಡುತ್ತಾಾರೆ?
ಅಷ್ಟಕ್ಕೂ ಬೆಂಗಳೂರಿನಲ್ಲಿ ಪಟಾಕಿ ಸುಟ್ಟವರು ಏನು ಸಾಧಿಸಿದರು? ಕೆಲವು ಸೆಕೆಂಡುಗಳ ‘ಢಮ್’ ಎಂಬ ಸದ್ದಿಗೆ ಶಬ್ದ ಮತ್ತು ವಾಯು ಮಾಲಿನ್ಯಕ್ಕೆೆ ಕಾರಣವಾಗುವ ಪಟಾಕಿ ಸುಡಬೇಡಿ ಅಂದರೆ ಕೆಲವರಂತೂ ಮುಸಲ್ಮಾಾನರ ವಿರುದ್ಧ ದಂಗೆ ಎದ್ದವರಂತೆ ಯರ್ರಾಾ ಬಿರ್ರಿಿ ಎಗರಿ ಬಂದರು. ಪಟಾಕಿ ಸುಟ್ಟರೆ, ಮೊದಲು ವಿಷಗಾಳಿ ಕುಡಿದು ಹೊಗೆ ಹಾಕಿಸಿಕೊಳ್ಳುವವರು ಪಟಾಕಿ ಸುಟ್ಟವರೇ. ವಿವೇಕಬೇಡವಾ? ಅದ್ಯಾಾವ ಸೀಮೆಯ ಮಜಾ, ಖುಷಿ ಸಿಗುವುದೋ ಆ ಬ್ರಹ್ಮನೇ ಬಲ್ಲ. ಪಟಾಕಿ ಸುಡುವುದೆಂದರೆ ಹಣವನ್ನು ಸುಟ್ಟಂತೆ. ಅದ್ಯಾಾವ ಸೀಮೆ ಹಬ್ಬ, ಅದ್ಯಾಾವ ಸೀಮೆ ಸಂಸ್ಕೃತಿ? ಪಟಾಕಿಯನ್ನು ಯಾರೇ ಸುಡಲಿ, ಪರಿಸರ ಮಾಲಿನ್ಯಕ್ಕೆೆ ಯಾರೇ ಕಾರಣರಾಗಲಿ, ಅವರು ಮುಸಲ್ಮಾಾನರೇ ಇರಬಹುದು ಅಥವಾ ಹಿಂದುಗಳೇ ಇರಬಹುದು, ಅವರು ಶುದ್ಧ ಅವಿವೇಕಿಗಳೇ! ಅವರು ವಿಕೃತಿ ಪುರುಷರೇ! ಯಾವಾಗ ದೀಪಾವಳಿ ಪಟಾಕಿ ಸದ್ದು ಅಡಗಿ, ದಿಲ್ಲಿಯಿಂದ ದಿನದಿಂದ ದಿನಕ್ಕೆೆ ಭಯಾನಕ ಸುದ್ದಿ ಬರಲಾರಂಭಿಸಿತೋ, ಬೆಂಗಳೂರಿನಲ್ಲಿ ಪಟಾಕಿ ಹೊಡೆದವರ ನೈತಿಕತೆಯೂ ಬೆಂಕಿಯಲ್ಲಿ ಅದ್ದಿದ ಪಟಾಕಿ ಸರದಂತೆ ‘ಡಂ’ ಆಗಿತ್ತು!
ಪಟಾಕಿ ಸುಡುವುದು ನಮ್ಮ ಸಂಸ್ಕೃತಿ ಎಂದು ವಾದಿಸಬಹುದು, ಆದರೆ ಮಾಲಿನ್ಯಕ್ಕೆೆ ಕಾರಣವಾಗುವುದು ನಮ್ಮ ಸಂಸ್ಕೃತಿಯಲ್ಲ. ವಾತಾವರಣದಲ್ಲಿ ವಿಷಗಾಳಿ ಹರಡಲು ಕಾರಣವಾಗುವುದು ಸಂಸ್ಕೃತಿ ಅಲ್ಲ. ಕರ್ಕಶ ಪಟಾಕಿ ಹೊಡೆದು ವಯಸ್ಸಾಾದವರಲ್ಲಿ, ಹೃದ್ರೋಗಿಗಳಲ್ಲಿ, ಉಸಿರಾಟದ ತೊಂದರೆ ಇದ್ದವರಲ್ಲಿ, ರೋಗಿಗಳಲ್ಲಿ ಭೀತಿ ಮೂಡಿಸುವುದು ಹಬ್ಬವಲ್ಲ. ನಮ್ಮ ಪರಿಸರ ಇಂದು ಒಂದೇ ಒಂದು ಪಟಾಕಿಯ ವಿಷಗಾಳಿಯನ್ನೂ ಸಹಿಸಿಕೊಳ್ಳುವ ಸ್ಥಿಿತಿಯಲ್ಲಿ ಇಲ್ಲ. ಪರಿಸರಕ್ಕೆೆ ಸಾವಿರಾರು ದಿಕ್ಕುಗಳಿಂದ, ವಿಧಾನಗಳಿಂದ ವಿಷಗಾಳಿ ಕ್ಷಣಕ್ಷಣಕ್ಕೂ ಬಂದು ಸೇರುತ್ತಲೇ ಇರುತ್ತದೆ. ಅದನ್ನು ಕಡಿಮೆ ಮಾಡುವುದು ಹೇಗೆಂದು ತಿಳಿಯದೇ ದಿಕ್ಕೆೆಟ್ಟು ಕುಳಿತಿದ್ದೇವೆ. ಹೀಗಿರುವಾಗ ದೀಪಾವಳಿಯಲ್ಲಿ ಪಟಾಕಿ ಸುಡುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದು ವಾದಿಸಿದರೆ ಅವರಿಗೆ ಏನೆನ್ನಬೇಕು? ಇದನ್ನು ಸಂಸ್ಕೃತಿ ಎನ್ನಬೇಕಾ, ವಿಕೃತಿ ಎನ್ನಬೇಕಾ?
ಪರಿಸರ ಮಾಲಿನ್ಯ ತಡೆಗಟ್ಟಲು ಪ್ರತಿಯೊಬ್ಬರೂ ಅವರ ಕೈಲಾದ ಮಟ್ಟಿಗೆ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ, ಆಫೀಸಿಗೆ ಹೋಗುವಾಗ ಸೈಕಲ್ ತುಳಿದರೆ, ಆಫೀಸಿನಲ್ಲೋ ಮನೆಯಲ್ಲೋ ಬಳಸದಿದ್ದರೆ, ಸಿಗರೇಟು ಸೇದದಿದ್ದರೆ, ಅಂಥವರು ಅಷ್ಟರಮಟ್ಟಿಿಗೆ ಪರಿಸರ ಮಾಲಿನ್ಯ ತಡೆಗಟ್ಟಲು ಹೆಣಗಿದಂತೆ. ಕೆಲವರಿಗೆ ಸ್ವಂತ ಕಾರು ಬಳಸುವುದು ಅನಿವಾರ್ಯ. ಏಸಿ ಬಳಸುವುದು ಸಹ ಅನಿವಾರ್ಯ. ಆದರೆ ಪಟಾಕಿ ಸುಡುವುದು ಅನಿವಾರ್ಯವಲ್ಲ. ವರ್ಷದಲ್ಲಿ ಒಂದು ದಿನ ಮಾತ್ರ ಪಟಾಕಿ ಸುಡುತ್ತೇವೆ ಎಂದು ಅವರು ಸಮರ್ಥನೆ ನೀಡುತ್ತಾಾರೆ. ಆದರೆ ಅವರಿಗೆ ಒಂದು ದಿನ ಪಟಾಕಿ ಸುಡಲು ಸಹ ಹಕ್ಕಿಲ್ಲ.
ಕಾರಣ ನಮ್ಮ ಪರಿಸರ ಒಂದು ದಿನದ ಪಟಾಕಿ ಮಾಲಿನ್ಯವನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ನಾವು ಎಂಥ ಸ್ಥಿತಿಯಲ್ಲಿದ್ದೇವೆ ಅಂದ್ರೆೆ ಬೆಂಗಳೂರಿನಲ್ಲಿ ಉರಿಸುವ ದೀಪಗಳಿಂದ ವಾತಾವರಣದಲ್ಲಿ ತಾಪಮಾನ ಹೆಚ್ಚಿ ಅದರಿಂದ ಹಿಮಾಲಯದ ಹಿಮಗಡ್ಡೆೆಗಳು ಕರಗಿ, ಇನ್ನೆೆಲ್ಲೋ ಪ್ರವಾಹಕ್ಕೆೆ ಕಾರಣವಾಗಬಹುದು. ಇದು ಪಟಾಕಿಗೂ ಅನ್ವಯ. ವಾತಾವರಣದಲ್ಲಿ ವಿಷಾನಿಲವನ್ನು ನಮ್ಮ ಕೈಯಾರೆ ಬಿಡುವುದು ಅದ್ಯಾಾವ ಸಂಸ್ಕೃತಿ? ಯಾವ ಶಾಸ್ತ್ರದಲ್ಲಿ ವಿಷಗಾಳಿ ಬಿಟ್ಟು ಆನಂದಿಸಿ ಎಂದು ಹೇಳಿದೆ. ಮಾಲಿನ್ಯವಾದರೂ ಪರವಾಗಿಲ್ಲ, ಮೊದಲು ಅಂಥ ಶಾಸ್ತ್ರವನ್ನು ಸುಡಬೇಕು. ಈಗಿನ ಕಾಲದಲ್ಲಿ ಅದು ನಿಜಕ್ಕೂ ಗೊಡ್ಡು ಶಾಸ್ತ್ರ ಎಂದು ಕರೆಯಿಸಿಕೊಳ್ಳುತ್ತದೆ. ಕಾರಣ ನಗರವೂ ಇಂದು ಗ್ಯಾಾಸ್ ಚೇಂಬರ್ ಆಗಿದೆ. ವರ್ಷದಲ್ಲಿ ಒಂದು ದಿನ ಪಟಾಕಿ ಹೊಡೆದರೂ, ಅದರ ಪರಿಣಾಮ ಒಂದು ದಿನಕ್ಕಷ್ಟೇ ಸೀಮಿತವಾಗಿರುವುದಿಲ್ಲ.
ಜಗತ್ತಿಿನಲ್ಲಿ ಅತಿ ಹೆಚ್ಚು ಮಾಲಿನ್ಯದಿಂದ ತತ್ತರಿಸಿರುವ ನಗರಗಳ ಪೈಕಿ ದಿಲ್ಲಿಗೆ ಮೊದಲ ಸ್ಥಾಾನವಂತೆ. ಜನ ಮುಖ ಕವಚವಿಲ್ಲದೇ ಹೊರಗೆ ಹೋಗುವಂತೆಯೇ ಇಲ್ಲ. ಹತ್ತು ಮೀಟರ್ ಅಂತರದಲ್ಲಿ ಇರುವವರು ಸಹ ಕಾಣಿಸದಷ್ಟು ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಸುಮಾರು ಮೂವತ್ತು ವಿಮಾನಗಳಿಗೆ ನಿಲ್ದಾಾಣದಲ್ಲಿ ಇಳಿಯಲು ಆಗಲಿಲ್ಲ. ಇವೆಲ್ಲಕ್ಕೂ ಪಂಜಾಬ್ ಮತ್ತು ಕೃಷಿ ತ್ಯಾಾಜ್ಯ ಸುಟ್ಟಿಿದ್ದೇ ಕಾರಣ ಎಂದು ಹೇಳಲಾಗುತ್ತಿಿದೆ. ಅಂದರೆ ದಿಲ್ಲಿಯ ಮಾಲಿನ್ಯಕ್ಕೆೆ ರೈತರೇ ಕಾರಣ ಎಂದು ಆರೋಪಿಸಲಾಗುತ್ತಿಿದೆ. ದಿಲ್ಲಿಯಲ್ಲಿ ವಿಷಗಾಳಿ ಆವರಿಸಿಕೊಂಡರೆ ಅದಕ್ಕೆೆ ರೈತರು ಕಾರಣವಂತೆ. ಅಂದರೆ ದಿಲ್ಲಿಯಲ್ಲಿ ರೈತರು ಭತ್ತ ಬೆಳೆಯುತ್ತಿಿದ್ದಾರಾ? ತೋಟ ಮಾಡುತ್ತಿಿದ್ದಾರಾ? ದಿಲ್ಲಿಯ ಮಾಲಿನ್ಯಕ್ಕೆೆ ರೈತರನ್ನೇಕೆ ದೂರಬೇಕು?
ಕೃಷಿ ತ್ಯಾಾಜ್ಯಗಳನ್ನು ಒಂದೇ ಸಲ ಸುಟ್ಟಿಿದ್ದರಿಂದ ಮಾಲಿನ್ಯದ ತೀವ್ರತೆ ಜಾಸ್ತಿಿ ಆಗಿರಬಹುದು. ಆದರೆ ದಿಲ್ಲಿ ಮಾಲಿನ್ಯಕ್ಕೆೆ ಪಂಜಾಬ್ ಮತ್ತು ಹರಿಯಾಣ ರೈತರು ಮಾತ್ರ ಕಾರಣರಲ್ಲ, ಮಾಲಿನ್ಯಕ್ಕೆೆ ಕೊಡುಗೆ ಕೇವಲ 25 – 30 ರಷ್ಟು ಮಾತ್ರ. ಉಳಿದ ಮಾಲಿನ್ಯಕ್ಕೆೆ ಅಲ್ಲಿನ ಜನರೇ ಕಾರಣ. ಅವರ ಪ್ರವೃತ್ತಿಿಯೇ ಕಾರಣ. ದೀಪಾವಳಿ ನಿಮಿತ್ತ ಒಂದು ವಾರ ಕಾಲ ಪಟಾಕಿ ಸುಟ್ಟಿಿದ್ದೇ ಕಾರಣ. ಆದರೆ ಇದನ್ನು ಮಾತ್ರ ಒಪ್ಪಿಿಕೊಳ್ಳದೆ ರೈತರ ಮೇಲೆ ಆರೋಪ ಹೊರಿಸುತ್ತಿಿದ್ದಾರೆ. ಕಳೆದ ಒಂದು ವಾರದಿಂದ ರಾಷ್ಟ್ರೀಯ ಮಾಧ್ಯಮಗಳಲ್ಲಿ ರೈತರ ಮೇಲೆ ಗೂಬೆ ಕೂರಿಸುವ ಯತ್ನ ನಿರಂತರವಾಗಿ ನಡೆಯುತ್ತಿಿದೆ. ರೈತರ ಮೇಲೆ ಕೇಸು ಹಾಕಿ ಜೈಲಿಗೆ ಅಟ್ಟಲಾಗುತ್ತಿಿದೆ. ತ್ಯಾಾಜ್ಯ ಸುಡುವ ರೈತರನ್ನು ಹುಡುಕಲೆಂದೇ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಎಂಟು ಸಾವಿರಕ್ಕೂ ಹೆಚ್ಚು ರೈತರ ವಿರುದ್ಧ ಕೇಸು ಹಾಕಿದ್ದಾರೆ.
ಆದರೆ ಮಾಲಿನ್ಯಕ್ಕೆೆ ಕಾರಣರಾದ ಎಷ್ಟು ಜನರ ವಿರುದ್ಧ ದಿಲ್ಲಿ ಪೊಲೀಸರು ಕೇಸು ಹಾಕಿದ್ದಾರೆ? ಮಾಲಿನ್ಯಕ್ಕೆೆ ಕಾರಣರಾದವರನ್ನು ಹುಡುಕಲು ದಿಲ್ಲಿ ಪೊಲೀಸರೇನಾದರೂ ವಿಶೇಷ ತಂಡ ರಚಿಸಿದ ನಿದರ್ಶನ ಇದೆಯಾ? ಆದರೆ ಈ ವರ್ಷ ಪಟಾಕಿ ಹೊಡೆದು ಮಾಲಿನ್ಯಕ್ಕೆೆ ಕಾರಣರಾದವರ ದಿಲ್ಲಿಯ ಅರವಿಂದ ಕೇಜ್ರಿಿವಾಲ ನೇತೃತ್ವದ ಸರಕಾರ ಕ್ರಮಕ್ಕೆೆ ಮುಂದಾದಾಗ ಜನ ಅದನ್ನು ತೀವ್ರವಾಗಿ ವಿರೋಧಿಸಿದರು. ಇದೇ ಜನ ಮಾಲಿನ್ಯಕ್ಕೆೆ ಕಾರಣರಾದರು ಎನ್ನಲಾದ ರೈತರ ವಿರುದ್ಧ ಸರಕಾರ ಕೇಸು ಹಾಕಿದಾಗ ಸುಮ್ಮನಿದ್ದರು. ಯಾವಾಗ ದಿಲ್ಲಿಯಲ್ಲಿ ಪಟಾಕಿ ಹೊಡೆಯುವವರ ವಿರುದ್ಧ ಸರಕಾರ ಕ್ರಮಕ್ಕೆೆ ಮುಂದಾಯಿತೋ, ಆಗ ಕೆಲವು ಅವಿವೇಕಿಗಳು, ‘ನೀವು ಮುಸಲ್ಮಾಾನರು ಬಕ್ರೀದ್ ಹಬ್ಬದಂದು ಮಾಲಿನ್ಯ ಮಾಡಿದಾಗ ಇದೇ ರೀತಿ ಕೇಸು ಹಾಕುತ್ತೀರಾ?’ ಎಂದು ವಿತ್ತಂಡ ವಾದ ಮಾಡಲಾರಂಭಿಸಿದರು. ಮಾಲಿನ್ಯಕ್ಕೆೆ ಮುಸಲ್ಮಾಾನರಾದರೇನು, ಎಲ್ಲರ ವಿರುದ್ಧವೂ ಕೇಸು ಹಾಕಲೇ ಬೇಕು. ಮೊದಲ ಬಾರಿಗೆ ಪಟಾಕಿ ಸುಟ್ಟು ಮಾಲಿನ್ಯಕ್ಕೆೆ ಕಾರಣರಾದ ಸುಮಾರು ಇನ್ನೂರು ಜನರನ್ನು ದಿಲ್ಲಿ ಪೊಲೀಸರು ಬಂಧಿಸಿದರು. ಏನಿಲ್ಲವೆಂದರೂ ಸುಮಾರು ಐದು ಸಾವಿರ ಕೆ.ಜಿ. ಪಟಾಕಿಗಳನ್ನು ವಶಪಡಿಸಿಕೊಂಡರು.
ಈ ಸಲ ದಿಲ್ಲಿಯಲ್ಲಿ ಅನಿಲ ತುರ್ತು ಪರಿಸ್ಥಿಿತಿ ಘೋಷಿಸಲು ಕೃಷಿ ತ್ಯಾಾಜ್ಯ ಸುಟ್ಟ ರೈತರಷ್ಟೇ, ಪಟಾಕಿ ಸುಟ್ಟ ದಿಲ್ಲಿಯ ನಾಗರೀಕರು ಕಾರಣ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಜಗತ್ತಿಿನೆಲ್ಲೆಡೆಯಿಂದ ಛೀಮಾರಿ ಹಾಕಿಸಿಕೊಂಡವರು ಮಾತ್ರ ರೈತರು. ನ್ಯಾಾಯವಪ್ಪ?! ಕಳೆದ ವರ್ಷ ಇದೇ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸುಮಾರು ಐವತ್ತೆೆಂಟು ಲಕ್ಷ ಕೆ.ಜಿ. ಪಟಾಕಿಗಳನ್ನು ಸುಟ್ಟು ಹಾಕಲಾಗಿತ್ತು. ಈ ವರ್ಷ ಈ ಪ್ರಮಾಣ ಇನ್ನೂ ಜಾಸ್ತಿಿ. ಒಂದು ಅಂದಾಜಿನ ಪ್ರಕಾರ ಈ ವರ್ಷ ಸುಮಾರು ಎಪ್ಪತ್ತು ಲಕ್ಷ ಕೆ.ಜಿ.ಯಷ್ಟು ಪಟಾಕಿ ಸುಡಲಾಗಿದೆಯಂತೆ. ಪರಿಸರ ಸ್ನೇಹಿ ಪಟಾಕಿ ಅಥವಾ ಹಸುರು ಪಟಾಕಿ ಸುಡಲು ಅನುಮತಿ ನೀಡಿರುವುದು ಈ ಸಲ ಹೆಚ್ಚು ಪ್ರಮಾಣದಲ್ಲಿ ಪಟಾಕಿ ಸುಡಲು ಕಾರಣವಾಗಿದೆ.
ದುರಂತವೆಂದರೆ ಈ ಪಟಾಕಿ ಪರಿಸರ ಸ್ನೇಹಿ ಅಲ್ಲ, ಇವೆಲ್ಲವೂ ನಕಲಿ. ಹಿಂದಿನ ವರ್ಷ ಖರ್ಚಾಗದೆ ಇದ್ದ ಪಟಾಕಿಗಳೂ ಇದರಲ್ಲಿ ಸೇರಿಕೊಂಡಿತ್ತು. ಜನರೆಲ್ಲ ಪರಿಸರ ಸ್ನೇಹಿ ಪಟಾಕಿ ಹೊಡೆಯುತ್ತಿಿದ್ದಾರೆಂದು ಸರಕಾರ ಸುಮ್ಮನಿತ್ತು. ಆದರೆ ಯಾವಾಗ ಹೊಗೆ ಪ್ರಮಾಣ ಏಕಾಏಕಿ ಹೆಚ್ಚಿಿತೋ, ಆಗಲೇ ಸರಕಾರಕ್ಕೆೆ ಗೊತ್ತಾಾಗಿದ್ದು ಇವೆಲ್ಲಾ ಪರಿಸರ ಸ್ನೇಹಿ ಪಟಾಕಿ ಅಲ್ಲ ಎಂದು. ಆಗ ಸರಕಾರ ಅಕ್ರಮ ಮತ್ತು ವಿಷಕಾರಿ ಹೊಗೆ ಉಗುಳುವ ಪಟಾಕಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಿತ್ತು . ಆದರೆ ಆಗ ಕಾಲ ಹೋಗಿತ್ತು.
ದಿಲ್ಲಿ ನಗರದ ಮೇಲ್ಭಾಾಗದಲ್ಲಿ ದಟ್ಟವಾದ ಮೋಡ ಕಟ್ಟಿಿಕೊಂಡಿತ್ತು. ಇಡೀ ನಗರ ಮಬ್ಬು ಮಬ್ಬಾಾಗಿತ್ತು. ಜನ ಏಕಾಏಕಿ ಕೆಮ್ಮಲು ಶುರು ಮಾಡಿದ್ದರು. ಉಸಿರಾಟದ ತೊಂದರೆಯಿಂದ ಸಂಕಷ್ಟಕ್ಕೊೊಳಗಾದ ಜನರ ಪ್ರಮಾಣ ಶೇಕಡಾ ಐನೂರರಷ್ಟು ಜಾಸ್ತಿಿಯಾಯಿತು. ದಿನ ಬೆಳಗಾಗುವುದರೊಳಗೆ ದಿಲ್ಲಿಯ ಮಾನ ಜಗತ್ತಿಿನೆದುರಲ್ಲಿ ಬಟಾ ಬಯಲಾಗಿತ್ತು. ಅದೇ ದಿನ ದಿಲ್ಲಿಗೆ ಬಂದ ಜರ್ಮನಿಯ ಚಾನ್ಸಲರ್ ಮುಖಕ್ಕೆೆ ಮ್ಕ್‌ಾ ಧರಿಸಿದ್ದರೆ ಭಾರತದ ಮಾನ ಮರ್ಯಾದೆ ಹರಾಜಾಗುತ್ತಿಿತ್ತು. ಅವರು ಮ್ಕ್‌ಾ ಧರಿಸದೇ ಬಂದಿದ್ದೇ ಒಂದು ಕಾರಣ ದಿಲ್ಲಿಯ ವಾತಾವರಣ ಅಷ್ಟು ಅಧೋಗತಿಗೆ ಹೋಗಿತ್ತು.
ದಿಲ್ಲಿಯ ನಾಗರೀಕರು ತಾವು ಸುಟ್ಟಿಿದ್ದು ಪರಿಸರ ಸ್ನೇಹಿ ಪಟಾಕಿ ಎಂದು ವಾದಿಸುತ್ತಿಿದ್ದರೆ, ದೀಪಾವಳಿಯ ದಿನ ದಿಲ್ಲಿಯ ವಾಯು ಗುಣಮಟ್ಟ 999ಕ್ಕೆೆ ಏರಿಕೆಯಾಗಿತ್ತು. ಸಾಮಾನ್ಯವಾಗಿ ಈ ಪ್ರಮಾಣ 450ಕ್ಕಿಿಂತ ಜಾಸ್ತಿಿ ಆಗಲೇ ಕೂಡದು. 999 ಅತ್ಯಂತ ಅಪಾಯದ ಮಟ್ಟ. ಅದು ನಿಜವಾದ ತುರ್ತುಪರಿಸ್ಥಿಿತಿಯೇ. ಇಂಥ ಸ್ಥಿಿತಿಯಲ್ಲಿ ಏನು ಬೇಕಾದರೂ ಸಂಭವಿಸಬಹುದು. ಭೋಪಾಲ್ ವಿಷಾನಿಲ ಕುಡಿದು ಸಾವಿರಾರು ಜನ ಸತ್ತರಲ್ಲ, ಅಂಥ ಸ್ಥಿಿತಿಗೆ ಸನ್ನಿಿವೇಶವನ್ನು ದಿಲ್ಲಿ ಜನ ಅನುಭವಿಸಿದರು. ಇನ್ನು ಎರಡು ದಿನ ದಿಲ್ಲಿಯ ಅವಿವೇಕಿಗಳು ಪಟಾಕಿ ಹೊಡೆಯುವ ತಮ್ಮ ಬುದ್ಧಿಿಗೇಡಿ ವರ್ತನೆಯನ್ನು ಮುಂದುವರಿಸಿದ್ದರೆ, ದಿಲ್ಲಿಯಲ್ಲಿ ಕನಿಷ್ಠ ಒಂದು ಸಾವಿರ ಜನ ಸಾಯುತ್ತಿಿದ್ದರು ಎಂದು ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆೆಯ ಮುಖ್ಯಸ್ಥರು ಹೇಳಿದ್ದು ಇಡೀ ಘಟನೆಗೆ ಹಿಡಿದ ಕೈಗನ್ನಡಿ.
ಅಷ್ಟಾಾದರೂ ಜನರಿಗೆ ಬುದ್ಧಿಿ ಬರಲಿಲ್ಲ. ಇನ್ನೂ ಅಲ್ಲಲ್ಲಿ ಪಟಾಕಿ ಸುಡುವುದನ್ನು ಮುಂದುವರಿಸಿದ್ದರು. ಯಾವಾಗ ಪೊಲೀಸರು ಪಟಾಕಿ ಹೊಡೆಯುವವರನ್ನು ಕಂಡ ಕಂಡಲ್ಲಿ ಹಿಡಿದು ಜೈಲಿಗೆ ಆರಂಭಿಸಿದರೋ, ಆಗ ಕೆಲವರು ಸುಮ್ಮನಾದರು. ಇನ್ನು ಕೆಲವರು ಕೇಜ್ರಿಿವಾಲರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲು ಶುರುವಿಟ್ಟುಕೊಂಡಿದ್ದರು. ಒಂದು ವೇಳೆ ದಿಲ್ಲಿ ಸರಕಾರ ಪಟಾಕಿ ಸುಡುವವರನ್ನು ಬಂಧಿಸಲು ಮುಂದಾಗದಿದ್ದರೆ, ದೇಶದ ರಾಜಧಾನಿಯಲ್ಲಿ ಒಂದು ದೊಡ್ಡ ದುರಂತವೇ ಸಂಭವಿಸುತ್ತಿಿತ್ತು. ಹಾಗೆಂದು ಈಗ ಅಲ್ಲಿನ ಮಾಧ್ಯಮವೇ ಹೇಳುತ್ತಿಿದೆ. ನಾವು ವರ್ಷಕ್ಕೊೊಮ್ಮೆೆ ಮಾತ್ರ ಪಟಾಕಿ ಸುಡುತ್ತೇವೆ ಎಂದು ಪಟಾಕಿ ಸುಡುವವರು ವಾದಿಸುವಂತೆ, ನಾವು ವರ್ಷಕ್ಕೊೊಮ್ಮೆೆ ಮಾತ್ರ ನಮ್ಮ ಕೃಷಿ ತ್ಯಾಾಜ್ಯವನ್ನು ಸುಡುತ್ತೇವೆ ಎಂದು ರೈತರೂ ಹೇಳುತ್ತಾಾರೆ. ಪಟಾಕಿ ಸುಡುವವರು ರೈತರ ವಾದವನ್ನು ಒಪ್ಪುುತ್ತಿಿಲ್ಲ. ಅಷ್ಟೇ ಅಲ್ಲ, ಈ ಅವಾಂತರಕ್ಕೆೆ ರೈತರೇ ಕಾರಣ ಎಂದು ಬೊಟ್ಟು ಮಾಡುತ್ತಿಿದ್ದಾರೆ. ಶ್ರೀಮಂತರು ದೀಪಾವಳಿ ದಿನ ಪಟಾಕಿ ಸುಟ್ಟಿಿದ್ದು ತಮ್ಮ ಶೋಕಿಗೆ, ಮಜಾಕ್ಕೆೆ, ತಮ್ಮ ಹಣದ ಮದ ಪ್ರದರ್ಶನಕ್ಕೆೆ. ಆದರೆ ರೈತರು ತಮ್ಮ ಹೊಲಗಳಿಗೆ ಬೆಂಕಿಯಿಟ್ಟಿಿದ್ದು ಹೊಟ್ಟೆೆ ಪಾಡಿಗೆ. ಪಟಾಕಿ ಸುಡುವ ಅವಿವೇಕಿಗಳು ಈ ಸಂಗತಿಯನ್ನು ಅರಿಯಬೇಕು.
ದಿಲ್ಲಿಯಲ್ಲಿ ದೀಪಾವಳಿ ದಿನ ಐದಾರು ವರ್ಷಗಳ ಹಿಂದೆ ಇದ್ದ ಪರಿಸ್ಥಿಿತಿ ಈಗ ಬೆಂಗಳೂರಿನಲ್ಲಿದೆ. ಹೀಗೆ ಮುಂದುವರಿದರೆ, ಅನುಮಾನವೇ ಬೇಡ, ಬೆಂಗಳೂರು ಸಹ ಮುಂದೆ ದಿಲ್ಲಿಯಾಗುತ್ತದೆ. ಕಾರಣ ದೀಪಾವಳಿ ದಿನ ಪಟಾಕಿ ಸುಡಲೇಬೇಕು ಎಂದು ಹಠಕ್ಕೆೆ ಬೀಳುವ ಅವಿವೇಕಿಗಳು ಇಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿದ್ದಾರೆ.
ಇನ್ನು ಮುಂದಾದರೂ ಪಟಾಕಿ ಹೊಡೆಯುವವರಿಗೆ ದಿಲ್ಲಿಯಲ್ಲಿ ಮ್ಕ್‌ಾ ಧರಿಸಿ ಐದಾರು ದಿನ ಮನೆಯಲ್ಲೇ ಉಸಿರು ಬಿಗಿ ಹಿಡಿದು ಜೀವ ಉಳಿಸಿಕೊಂಡ ದಿಲ್ಲಿಗರು ನೆನಪಾಗಲಿ!