Sunday, 8th September 2024

ಕಪ್‌ ಇಲ್ಲ, ಬರೀ ’ಕಪ್‌’ ಚುಕ್ಕಿ ಮಾತ್ರ

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ

ತೆತ್ತಿದರೆ ಕೋಟಿ, ಕೋಟಿ ಎನ್ನುವ ಕೆಜಿಎಫ್ ಚಿತ್ರದ ಹವಾ ಕಡಿಮೆ ಆದಂತಿದೆ. ಮತ್ತೆ ಚಿತ್ರರಂಗ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಮಾತು ಹೇಳ್ತಾ ಇರೋದ್ ಯಾಕೆ ಅಂದ್ರೆ ಮತ್ತೆ ಕನ್ನಡದ ಕಮ್ಮಿ ಬಜೆಟ್ಟಿನ ಚಿತ್ರಗಳು ಸದ್ದು ಮಾಡ್ತಿವೆ. ರಕ್ಷಿತ್ ಶೆಟ್ಟಿ ಅವರ ಚಾರ್ಲಿ ಚಿತ್ರ ಈಗಾಗಲೇ ಸಿನಿಮಾ ಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ
ಹುಟ್ಟಿದೆ.

ಟ್ರೈಲರ್ ನೋಡಿದವರು ಇದು ಪ್ಯಾನ್ ಇಂಡಿಯಾ ಸಿನಿಮಾನೋ ಅಲ್ವೋ, ಆದ್ರೆ ನೋಡ್ದೋರೆ ಫ್ಯಾನ್ ಆಗೋದು ಗ್ಯಾರಂಟಿ, ಸಿನಿಮಾ ಸೂಪರ್ ಹಿಟ್ ಆಗೋ ಎಲ್ಲಾ ಲಕ್ಷಣಗಳಿವೆ ಅಂತ ಮಾತಾಡುತ್ತಿದ್ದಾರೆ. ಇನ್ನು, ನಮ್ ಗಣಿ ಬಿಕಾಂ ಪಾಸ್ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರ ಗಜಾನನ ಅಂಡ್ ಗ್ಯಾಂಗ್ ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಜತೆಗೆ ಲೇಟೆ ಸೇರ್ಪಡೆ ಅಂದ್ರೆ ನಟರಾಜ್ ನಿರ್ದೇಶನದ ವೀಲ್ ಚೇರ್ ರೋಮಿಯೋ ಚಿತ್ರ.

ಇತ್ತೀಚೆಗೆ ಬರಹಗಾರ ಕಮ್ ನಿರ್ದೇಶಕರಾದ ಶಂಕರ್ ಗುರು ನಿರ್ದೇಶನದ ಬಡವ ರ‍್ಯಾಸ್ಕಲ್ ಚಿತ್ರ ಬಜೆಟ್ ಬಿಟ್ಟು ತನ್ನ ಬರವಣಿಗೆಯಿಂದ ಸದ್ದು ಮಾಡಿತ್ತು. ಈಗ ವೀಲ್ ಚೇರ್ ರೋಮಿಯೋ ಚಿತ್ರ ಕೂಡಾ ಅದೇ ದಾರಿಯಲ್ಲಿ ಸಾಗುತ್ತಿದೆ. ಅಂತೂ, ಕೆಜಿಎಫ್ ಗುಂಗಿನಿಂದ ಹೊರಗೆ ಬಂದಿರುವ ಕನ್ನಡ ಪ್ರೇಕ್ಷಕ ಚಿತ್ರವೊಂದರ ಬಜೆಟ್ ಬಗ್ಗೆ ಮಾತಾಡದೆ, ಚಿತ್ರದ ಕಂಟೆಂಟ್, ಕಥೆ, ಡೈಲಾಗ್ಸ್  ಬಗ್ಗೆ ಮಾತಾಡುತ್ತಿದ್ದಾನೆ. ಹಾಗಾಗಿ, ವೀಲ್ ಚೇರ್ ರೋಮಿಯೋ ಚಿತ್ರ ಈ ವಿಷಯದಲ್ಲಿ ಮೊದಲ ದಿನವೇ ಗೆದ್ದಿದೆ ಅಂದ್ರೆ ತಪ್ಪೇನಿಲ್ಲ. ಇದು ಖಂಡಿತಾ ಒಳ್ಳೆಯ ಲಕ್ಷಣ.

ಜನರಿಗೆ ಕೊನೆಗೂ ಕಂಟೆಂಟ್ ಮುಖ್ಯ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ವೀಲ್ ಚೇರ್ ಮೇಲೆ ಕೂತಿ ದ್ದರೂ ಈ ರೋಮಿಯೋ ಬಾಕ್ಸ್ ಆಫೀಸ್‌ನಲ್ಲಿ ಗಾಲೋಟದಲ್ಲಿ ಓಡುವ ಲಕ್ಷಣವನ್ನಂತೂ ತೋರಿಸಿದ್ದಾನೆ ಅನ್ನೋದು ಖುಷಿಯ ವಿಷಯ.

ಲೂಸ್ ಟಾಕ್
ಆರ್‌ಸಿಬಿ ಫ್ಯಾನ್ (ಕಾಲ್ಪನಿಕ ಸಂದರ್ಶನ)
ಏನಪ್ಪಾ, ನಿಮ್ ಟೀಮ್ ಕೈಲಿ ಮತ್ತೆ ಕಪ್ ಗೆಕಾಗ್ಲಿಲ್ಲವಲ್ಲ?
-ಏನ್ ಮಾಡೋದು, ಚೆನ್ನಾಗೇ ಆಡಿದ್ರು, ಆದ್ರೆ, ಇ ವರ್ಷ ಆದ್ರೂ ಕಪ್ ಗೆಲ್ಲಲಿಲ್ಲ ಅನ್ನೋ ಕಪ್ ಚುಕ್ಕಿ ಮಾತ್ರ ಮತ್ತೆ ಉಳ್ಕೊಂಡ್ ಬಿಡ್ತು.

ಆದ್ರೂ ಐಪಿಎಲ್‌ನಲ್ಲಿ ಆರ್‌ಸಿಬಿ ತುಂಬಾ ಫೇಮಸ್ ಟೀಮ್ ಅಲ್ವಾ?
-ಅದು ನಿಜಾನೇ. ನಮ್ಮದು ಬ್ಲಾಕ್ ಬಸ್ಟರ್ ಟೀಮೇ. ಆದ್ರೆ, ಈ ಬ್ಲಾಕ್ ಬಸ್ಟರ್ ಟೀಮ್‌ಗೆ, ಕಪ್ ಗೆಲ್ಲಲಿಲ್ಲ ಅನ್ನೋ ಬ್ಲ್ಯಾಕ್ ಮಾರ್ಕ್‌ನ ಬ ಮಾಡಿ, ಬ್ಲ್ಯಾಕ್
ಬಸ್ಟರ್ ಅನ್ನಿಸಿಕೊಳ್ಳೋಕೆ ಆಗ್ತಾ ಇಲ್ಲ ಅಷ್ಟೇ.

ನಿಮ್ ಟೀಮಲ್ಲಿ ಒಳ್ಳೆ ಆಲ್ ರೌಂಡರ್ ಗಳಿಲ್ಲ ಅಲ್ವಾ?
-ಹೆಸರಿಗೆ ಒಬ್ಬ ಇದ್ದಾನೆ, ಹಸರಂಗ ಅಂತ. ಆದ್ರೆ, ನಮ್ಮ ಮೋದಿನಾ ಒಳ್ಳೆ ಪ್ರಧಾನಿ ಅಂತ ಒಪ್ಕೊಬಹುದು, ಆದ್ರೆ, ಈ ಹಸರಂಗನ್ನ ಆಲ್ ರೌಂಡರ್ ಅಂದ್ರೆ
ಮೈಯೆ ಉರಿಯುತ್ತೆ. ಕೈಗೆ ಬ್ಯಾಟ್ ಕೊಟ್ರೆ ಬರೀ ರೌಂಡ್ ಸುತ್ತೋದೇ ಆಯ್ತು. ಆ ವಿಷಯದಲ್ಲಿ ಅವನು ಆಲ್ ರೌಂಡರ್.

ಅದ್ಸರಿ, ಸಿರಾಜ್ ಕಥೆ ಏನು?

-ಏನ್ ಮಾಡೋದು ಹೆಸರಲ್ಲಿ ರಾಜ್ ಅಂತ ಇದ್ದ ತಕ್ಷಣ, ಅವನನ್ನೂ ಕನ್ನಡಿಗರ ಹೆಮ್ಮೆ ಅಂದ್ಕೊಂಡಿದ್ದು ನಮ್ಮ ತಪ್ಪು.

ಸರಿ, ಹೋಗ್ಲಿ ಬಿಡಿ, ತುಂಬಾ ಬೇಜಾರಲ್ಲಿದ್ದೀರಾ, ಸುಮ್ನೆ ಡಿಸ್ಟರ್ಬ್ ಮಾಡಿದೆ ಅನ್ಸುತ್ತೆ.

-ಅಯ್ಯೋ, ಹಂಗೇನಿಲ್ಲ, ನಾವ್ ಆರ್‌ಸಿಬಿ ಫ್ಯಾನ್ಸು. ಈ ಸಲ ಕಪ್ ಗೆದ್ದಿದ್ರೆ, ಮುಂದಿನ ಸೀಸನ್‌ನಲ್ಲಿ, ಈ ಸಲ ಕಪ್ ನಮ್ದೆ ಅಂತ ಹೇಳ್ಕೊಳ್ಳೋಕೆ ಅವಕಾಶ ಇರ್ತಾ
ಇರ್ಲಿಲ್ಲ. ಒಳ್ಳೇದೇ ಆಯ್ತು ಬಿಡಿ.

ಅಯ್ಯೋ, ಈ ಸಲ ಕಪ್ ನಮ್ದೆ ಅನ್ನೋ ಸ್ಲೋಗನ್ ಮೇಲೆ ಅಷ್ಟೊಂದ್ ಪ್ರೀತಿನಾ?
-ಮತ್ತೆ, ಅದೇನ್ ಸಾಮಾನ್ಯದ ಸ್ಲೋಗನ್ ಅಂದ್ಕೊಂಡಿದ್ದೀರಾ, ಏರ್ ಟೆಲ್, ಜಿಯೋ ಕಂಪನಿಗಳು ಕೊಡೋ ಯಾವ ಆಫರ್‌ಗೂ ಈ ಸ್ಲೋಗನ್ ಗಿರೋ
ವ್ಯಾಲಿಡಿಟಿ ಇರಲ್ಲ. ಲೈಫ್ ಟೈಮ್ ವ್ಯಾಲಿಟಿಡಿ ಇದೆ ಅದಕ್ಕೆ.

ನೆಟ್ ಪಿಕ್ಸ್
ಮೂರು ಜನ ವಯಸ್ಸಾದ ಹಿರಿಯ ನಾಗರಿಕರು ಕ್ಲೋಸ್ ಫ್ರೆಂಡ್ ಗಳಾಗಿದ್ರು. ಒಂದೇ ಊರಿನವರಾಗಿದ್ದಕ್ಕೆ ಆಗಾಗ ಸಿಗುವ ಅಭ್ಯಾಸ ಇತ್ತು. ಸಿಕ್ಕಾಗ ಮಾತಾ ಡೋಕೆ ಮಾತುಗಳಿಗೇನೂ ಬರ ಇರಲಿಲ್ಲ. ತಮ್ಮ ಹಳೆಯ ದಿನಗಳ ಬಗ್ಗೆ, ಜೀವನದಲ್ಲಿ ತಮ್ಮ ಸಾಧನೆಗಳ ಬಗ್ಗೆ ಹೇಳಿಕೊಳ್ತಾ ಇದ್ರು. ಒಂದು ದಿನ ಹೀಗೇ ಮಾತಾಡುವಾಗ ಮಕ್ಕಳ ವಿಷಯ ಬಂತು. ಮೊದಲನೆಯ ಯಜಮಾನ್ರು ಹೇಳಿದ್ರು.

ಅಯ್ಯೋ, ನನ್ನ ಮಗ ಬೆಂಗಳೂರಲ್ಲಿ ಎಂಜಿನಿಯರ್ ಆಗಿದ್ದಾನೆ. ಪ್ರತಿ ತಿಂಗಳೂ ನಂಗೆ ದುಡ್ಡು ಕಳಿಸ್ತಾನೆ. ಸಿಕ್ಕಾಪಟ್ಟೆ ದುಡಿತಾನೆ ಅನ್ಸುತ್ತೆ, ಇಂದ್ರೆ ಹೋದ್
ತಿಂಗಳು ಅವನ ಗರ್ಲ್ ಫ್ರೆಂಗೆ ಗಿಫ್ಟ್ ಅಂತ ಒಂದ್ ಡೈಮಂಡ್ ನೆಕ್ಲೇಸ್ ಕೊಡ್ಸೋಕಾಗ್ತಿತ್ತಾ? ಅಂತ ಮಗನ ಬಗ್ಗೆ ಹೇಳಿಕೊಂಡರು. ಅದನ್ನು ಕೇಳಿ ಇನ್ನೊಬ್ಬ
ಯಜಮಾನರಿಗೆ ಉತ್ಸಾಹ ಬಂತು. ಅಯ್ಯೋ, ನನ್ನ ಮಗನೂ ಬೆಂಗಳೂರಲ್ಲಿ ಇದ್ದಾನೆ.

ಚಾರ್ಟರ್ಡ್ ಅಕೌಂಟೆಂಟ್. ಪ್ರತಿ ತಿಂಗಳೂ ನಂಗೆ ದುಡ್ಡು ಕಳಿಸ್ತಾನೆ. ಸಿಕ್ಕಾಪಟ್ಟೆ ದುಡಿತಾನೆ ಅನ್ಸುತ್ತೆ, ಇಂದ್ರೆ ಹೋದ್ ತಿಂಗಳು ಅವನ ಗರ್ಲ್ ಫ್ರೆಂಡ್‌ಗೆ ಗಿ-
ಅಂತ ಒಂದ್ ಕಾರ್ ಕೊಡ್ಸೋಕಾಗ್ತಿತ್ತಾ? ಅಂತ ಹೇಳಿಕೊಂಡರು. ಮೂರನೇಯ ಯಜಮಾನ್ರು ಶುರು ಮಾಡಿದ್ರು ಅಯ್ಯೋ, ನನ್ ಮಗ ಬೆಂಗಳೂರಲ್ಲಿ ಡಾಕ್ಟರ್.
ಪ್ರತಿ ತಿಂಗಳೂ ನಂಗೆ ದುಡ್ಡು ಕಳಿಸ್ತಾನೆ. ಸಿಕ್ಕಾಪಟ್ಟೆ ದುಡಿತಾನೆ ಅನ್ಸುತ್ತೆ, ಇಂದ್ರೆ ಹೋದ್ ತಿಂಗಳು ಅವನ ಗರ್ಲ್ ಫ್ರೆಂಡ್‌ಗೆ ಗಿಫ್ಟ್ ಅಂತ ಒಂದ್ ಫ್ಲ್ಯಾಟ್
ಕೊಡ್ಸೋಕಾಗ್ತಿತ್ತಾ? ಅಂತ ಹೇಳಿಕೊಂಡರು. ಈಗ ಕೊನೆಯವರ ಸರದಿ, ಅವರೂ ಮೆಲ್ಲನೆ ಶುರು ಮಾಡಿಕೊಂಡ್ರು, ನನ್ ಮಗಳೂ ಬೆಂಗಳೂರ ಇದ್ದಾಳೆ.

ಅವಳೂ ನಂಗೆ ಪ್ರತಿ ತಿಂಗಳೂ ದುಡ್ಡು ಕಳಿಸ್ತಾಳೆ. ಆದ್ರೆ ಏನ್ ಕೆಲ್ಸ ಮಾಡ್ತಾಳೆ ಅಂತ ಗೊತ್ತಿಲ್ಲ. ಆದ್ರೂ ಚೆನ್ನಾಗೇ ದುಡಿತಾ ಇದ್ದಾಳೆ. ತುಂಬಾ ಬುದ್ಧಿವಂತೆ ಅನ್ಸುತ್ತೆ. ಇಂದ್ರೆ ಒಂದೇ ತಿಂಗಳಲ್ಲಿ ಅವಳಿಗೆ ಗಿಫ್ಟ್ ಅಂತ ಒಂದ್ ಕಾರು, ಒಂದ್ ಡೈಮೆಂಡ್ ನೆಕ್ಲೇಸ್, ಒಂದ್ ಫ್ಲ್ಯಾಟ್ ಸಿಗ್ತಾ ಇತ್ತಾ?

ಲೈನ್ ಮ್ಯಾನ್

ಸೋಮಾರಿ ಕಟ್ಟೆ ಮೇಲೆ ಕೂತಿರೋ ಸೋಮಾರಿಯ ಮಾತುಗಳು 
-ಏನ್ರೀ, ದೇಶದಲ್ಲಿ ಏನಾಗ್ತಾ ಇದೆ ಅಂತ ತಿಳ್ಕೊಳ್ಳೋಕೆ ನೀವು ಪೇಪರ್ ಓದಲ್ವಾ? ‘ಅಯ್ಯೋ, ಓದಿ ಯಾರ್ ಉದ್ಧಾರ ಆಗಿದ್ದಾರೆ ಬಿಡಿ’

ನಿಮಗೆ ಬಾಂಡ್ ಸಿನಿಮಾ ಇಷ್ಟಾನಾ?
‘ನನಗೆ ಬ್ಯಾ’ ಸಿನಿಮಾ ಇಷ್ಟ. ಅದರಲ್ಲಿ ‘ನೋಡೋಕೆ ಏನಾದ್ರೂ ಇರ್ತದೆ’

ಸರಿ ಪೆಟ್ರೋಲ್ ರೇಟ್ ಜಾಸ್ತಿ ಆಗಿದೆಯ, ಇದಕ್ಕೇನಂತೀರಿ?
ಅಯ್ಯೋ, ಇದನ್ನೆ ನೋಡಿನೇ ಅಣ್ಣಾವ್ರು, ‘ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು’ ಅಂತ ಅವತ್ತೇ ಮುತ್ತಿನಂಥ ಮಾತ್ ಹೇಳಿದ್ರು.

ಸರಿ, ಕರ್ನಾಟಕದ ಮುಖ್ಯಮಂತ್ರಿ ಯಾರು?
ಅಯ್ಯೋ, ನಾನ್ ಸ್ಕೂಲ್ ಮುಗಿಸಿ ಎಷ್ಟೋ ವರ್ಷ ಆಯ್ತು. ಅವಾಗಾಗಿದ್ರೆ ಈ ಪ್ರಶ್ನೆಗೆ ಉತ್ರ ಕೊಟ್ರೆ ೨ ಮಾರ್ಕ್ ಆದ್ರೂ ಸಿಗ್ತಾ ಇತ್ತು. ಈಗ ಅದೂ ಸಿಗಲ್ಲ.
ತಿಳ್ಕೊಂಡ್ ಏನ್ ಮಾಡ್ಲಿ?

ಅಲಾರ್ಮ್ ಕ್ಲಾಕ್‌ಗಳಿಗೆ ಒಳ್ಳೆ ಬ್ರ್ಯಾಂಡ್ ಅಂಬಾಸಿಡರ್ ಯಾರು?
ಸ್ವಾಮಿ ವಿವೇಕಾನಂದ, ‘ಏಳಿ ಎದ್ದೇಳಿ’ ಅಂದಿದ್ದು ಅವರೇ ಅಲ್ವಾ?

‘ಯುವಜನರನ್ನು ಏಳಿ’ ಎದ್ದೇಳಿ ಅಂತ ಪ್ರೇರೇಪಿಸಿದ ವಿವೇಕಾನಂದ ಅವರನ್ನು ಏನಂತ ಕರೆಯಬಹುದು?
-‘ಅವೇಕ್’ ಆನಂದ
ವಾತಾವರಣ ‘ಚೇಂಜ’ ಆದ್ರೆ ಏನಾಗುತ್ತೆ?
‘ದುಡ್ಡಿನ’ ಮಳೆ ಸುರಿಯುತ್ತೆ.
ಎಲ್ಲವನ್ನೂ ಅನುವಾದ ಮಾಡೋಕ್ ಹೋಗ್ಬಾರ್ದು
ಇಂದ್ರೆ ‘ವಸತಿ’ ಖಾತೆ ಸಚಿವ ‘ಹೋಮ’ ಮಿನಿಸ್ಟರ್ ಆಗಿಬಿಡ್ತಾನೆ.
ಕಾರ್ಡ್ಸ್ ಆಡಿ ತನ್ನ ಸಂಸಾರ ಹಾಳು ಮಾಡಿಕೊಂಡವನನ್ನು ಏನಂತ ಕೇಳ್ಬೇಕು?
-ನೀನಾರಿಗಾದೆಯೋ ‘ಎಲೆ’ ಮಾನವ?
ಬಿಯರ್ ಕುಡಿಯುವುದರಲ್ಲಿ ತಲ್ಲೀನನಾದವನು
‘ಮಗ್’ ನ
ಎಸ್‌ಎಸ್‌ಎಲ್‌ಸಿ ವಿeನ ಪತ್ರಿಕೆ ಸೋರಿಕೆ ಆಗಿತ್ತಂತೆ.
ಈ ಬಿಜೆಪಿ ಸರಕಾರಕ್ಕೆ ಪ್ರಾಸ ಇಷ್ಟ ಅನ್ಸುತ್ತೆ – -ಬೆಲೆ ಏರಿಕೆ, ಹಿಂದಿ ಹೇರಿಕೆ, ವಿeನ ಪ್ರಶ್ನೆಪತ್ರಿಕೆ ಸೋರಿಕೆ

error: Content is protected !!