Sunday, 8th September 2024

ಎಲ್ಲದರ ಕೊನೆಯೂ ಹೊಸದರ ಆರಂಭವೇ…!

ಶ್ವೇತಪತ್ರ

shwethabc@gmail.com

ನಮ್ಮೊಳಗಿನ ನಮ್ಮ ಅತ್ಯಂತ ಕೆಟ್ಟ ಶತ್ರು ನಾವೇ. ಮೊದಲು ಅದರ ಬಗ್ಗೆ ನಾವು ನಿಗಾವಹಿಸಬೇಕು. ಪಾಸಿಟಿವ್ ಆಗಿ ಆಲೋಚಿಸುವ ವ್ಯಕ್ತಿಗಳಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು. ನಿಮಗೆ ಮೀನು ಸಿಗುವವರೆಗೂ ಬಲೆಯನ್ನು ಬೀಸುತ್ತಲೇ ಇರಬೇಕು. ಕೊಳದಲ್ಲಿ ನೀರು ಖಾಲಿಯಾಗಿದೆ, ಅಲ್ಲಿ ಮೀನುಗಳಿಲ್ಲ ಎಂದು ಯಾರು ಎಷ್ಟೇ ಹೇಳಿದರೂ ಮೀನುಗಳಿವೆ ಎಂಬ ನಂಬಿಕೆಯಲ್ಲೇ ಬಲೆ ಹಿಡಿದಿರಬೇಕು.

ಎಲ್ಲಾ ಕಥೆಗಳಿಗೂ ಒಂದು ಅಂತ್ಯವಿದೆ. ಆದರೆ ಬದುಕಲ್ಲಿ ಎಲ್ಲಾ ಕೊನೆಯು ಹೊಸದರ ಮುನ್ನುಡಿಯೇ. ಹೊಸ ನಾಳೆ, ಹೊಸ ಅವಕಾಶ, ಹೊಸ ಸವಾಲು, ಹೊಸ ಕನಸು-ಎಲ್ಲಾ ಕೊನೆಗಳ ಎದುರು ನಿಲ್ಲುವ ಹೊಸ ಸಾಧ್ಯತೆಗಳಿವು. ಈ ಸಾಧ್ಯತೆಗಳನ್ನು ಮುಕ್ತಾಯ ಗೊಳಿಸಿಕೊಳ್ಳುತ್ತೇ ವೆಯೋ, ಪರಿವರ್ತಿಸಿಕೊಳ್ಳುತ್ತೇವೆಯೋ ಅದು ನಮ್ಮೊಳಗಿನ ಶಕ್ತಿ.

ಎಲ್ಲ ಅಡೆತಡೆಗಳನ್ನು ಮೀರಿ ಹೊಸತನದೊಂದಿಗೆ ನಾವು ಮರು ಹುಟ್ಟಬೇಕು. ನೀವು ನೋಡಬೇಕಿರುವುದು ಕಳೆದುಕೊಂಡ ದ್ದನ್ನಲ್ಲ ನಿಮ್ಮೆದುರಿಗೆ ಇನ್ನೂ ಉಳಿದಿರುವುದನ್ನು. ನಿಮ್ಮ ಎದುರಿಗೆ ಇನ್ನೂ ಹಲವಾರು ದಾರಿಗಳಿವೆ, ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ ಮತ್ತು ಹಿಂದೆ ನಿಮ್ಮ ಬದುಕಲ್ಲಾದದ್ದಕ್ಕೆ ನೀವು ಹೇಗೆ ಪ್ರತಿಕ್ರಿಯಿಸಿದ್ದೀರಿ, ಆ ಮೂಲಕ ನೀವು ನೆಗೆಟಿವ್ ಆಗಬೇಕಾ ಅಥವಾ ಉತ್ತಮವಾಗಬೇಕಾ ಅದು ನಿಮ್ಮ ಕೈಯಲ್ಲೇ ಇದೆ.

ನಿಮ್ಮನ್ನು ನೀವು ಮೀರಿ ಬೆಳೆಯಬಹುದಾದ ಎಲ್ಲಾ ಅನಂತ ಸಾಧ್ಯತೆಗಳಿವೆ, ಅದ್ಭುತ ಅವಕಾಶಗಳಿವೆ. ನೀವೇ ನೆಗ್ಲೆಟ್ ಮಾಡಿರಬಹುದಾದ ನಿಮ್ಮೊಳಗಿನ ಅಸಾಧಾರಣ ಪ್ರತಿಭೆಗಳಿವೆ. ಇವೆಲ್ಲ ನಿಮ್ಮೊಳಗೆ ನಿಮ್ಮೆದುರೇ ಇರಬಹುದಾದ ಸುಪ್ತ ಸ್ವತ್ತುಗಳು. ಬಾಗಿಲು ತೆಗೆದು ಜಿಗಿಯಬೇಕಷ್ಟೇ. ಕೆಲವೊಮ್ಮೆ ಬದುಕು ನಮಗೆ ಸಿನಿಕತೆಯಿಂದಲೂ ನಿರರ್ಥಕವಾಗಿಯೂ ಕೂಡಿರುವಂತೆಯೂ ಕಂಡು ಬರಬಹುದು. ಆದರೆ ನಮ್ಮೊಳಗಿನ ಪಾಸಿಟಿವ್ ಆಲೋಚನೆಗಳಷ್ಟೇ ಈ ಅನಿಸಿಕೆಗಳಿಂದ ನಮ್ಮನ್ನು ಹೊರ ತಂದು ನಮ್ಮಲ್ಲಿ ಪ್ರೀತಿಯನ್ನು ಖುಷಿಯನ್ನು ಮೂಡಿಸುವುದು.

ಹಾಗಿದ್ದರೆ ಆತ್ಮ ತೃಪ್ತಿಯನ್ನು ಪಡೆದುಕೊಳ್ಳುವುದು ಹೇಗೆ? ನಮ್ಮೊಳಗಿನ ನಮ್ಮ ಅತ್ಯಂತ ಕೆಟ್ಟ ಶತ್ರು ನಾವೇ. ಮೊದಲು ಅದರ ಬಗ್ಗೆ ನಾವು ನಿಗಾವಹಿಸಬೇಕು. ಪಾಸಿಟಿವ್ ಆಗಿ ಆಲೋಚಿಸುವ ವ್ಯಕ್ತಿಗಳಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು. ನಿಮಗೆ ಮೀನು ಸಿಗುವವರೆಗೂ ಬಲೆಯನ್ನು ಬೀಸುತ್ತಲೇ ಇರಬೇಕು. ಕೊಳದಲ್ಲಿ ನೀರು ಖಾಲಿಯಾಗಿದೆ, ಅಲ್ಲಿ ಮೀನುಗಳಿಲ್ಲ ಎಂದು ಯಾರು ಎಷ್ಟೇ ಹೇಳಿದರೂ ಮೀನುಗಳಿವೆ ಎಂಬ ನಂಬಿಕೆ ಯಲ್ಲೇ ಬಲೆ ಹಿಡಿದಿರಬೇಕು.

ಅಂತೆಯೇ ಎಷ್ಟೇ ನೆಗೆಟಿವ್ ಆಲೋಚನೆಗಳು ನಮ್ಮನ್ನು ಮುತ್ತಿ ನಿಮಗೆ ಪ್ರೀತಿ ಸಿಗುವುದಿಲ್ಲ, ಖುಷಿ ಸಿಗುವುದಿಲ್ಲ, ಯಶಸ್ಸು ಸಿಗುವುದಿಲ್ಲ ಎಂದು ಹೇಳುತ್ತಲಿದ್ದರೂ ಹೊಸ ನಾಳೆಯ ಅದ್ಭುತ ಶುರುವಿನ ಬಗ್ಗೆ ನಮ್ಮದು ಪಾಸಿಟಿವ್ ಮನಸ್ಥಿತಿಯೇ ಆಗಿರಬೇಕು. ನಿಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದೀರಾ? ನಿಮ್ಮದೇ ದೋಣಿಯಲ್ಲಿ ಪಯಣಿಸುತ್ತಿರುವ ಕೋಟ್ಯಂತರ
ಜನರಿರುತ್ತಾರೆ. ಈ ಜಗತ್ತಿನಲ್ಲಿ ಅವರೆಲ್ಲರಲ್ಲೂ ಒಂಟಿತನವಿದೆ, ಅವರೂ ಸಾಂಗತ್ಯಕ್ಕೆ ಹವಣಿಸುತ್ತಿದ್ದಾರೆ.

ನಿಮ್ಮ ಒಂಟಿತನಕ್ಕೆ ಮದ್ದು ಸಮಾಜಮುಖಿಯಾಗಿ ಹೊಂದಿಕೊಂಡು ಬದುಕುವುದು. ಕೆಲಸ ಕಳೆದುಕೊಂಡಿದ್ದೀರಾ? ನೆನಪಿರಲಿ, ನಿಮಗಾಗಿ ಉತ್ತಮವಾದ ಮತ್ತೊಂದು ಕೆಲಸ ಕಾಯುತ್ತಲಿರಬಹುದು. ನಿಮಗೆ ನೀವೇ ಹಾಕಿಕೊಂಡಿರುವ
ಅಡೆತಡೆಗಳನ್ನು ಮೀರಿ ನಡೆದಾಗಲೇ ನಿಮ್ಮಿಂದ ಹೊಸ ಆಶಯವೊಂದು ಹುಟ್ಟಲು ಸಾಧ್ಯ. ಒಂದೂರು, ಆ ಊರಲ್ಲಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಅಜ್ಜಿ ಒಬ್ಬಳು ಇದ್ದಳು. ಆಕೆಗೆ ಗೊತ್ತಿದ್ದದ್ದು ಕೇವಲ ಖುಷಿಯಾಗಿರುವುದಷ್ಟೇ. ಎಂತಹದೇ ವಿಷಮ ಸಂದರ್ಭದಲ್ಲೂ ಆಕೆ ಖುಷಿಯಿಂದ ಇರುತ್ತಿದ್ದಳು. ಆಕೆಗೆ ಎಲ್ಲರ ಜೊತೆಗೂಡಿ ಡಾನ್ಸ್ ಮಾಡುವುದೆಂದರೆ ಎಲ್ಲಿಲ್ಲದ ಹರುಷ. ಒಮ್ಮೆ ರಾಜನೊಬ್ಬ ಅಜ್ಜಿ ಇದ್ದ ಊರಿಗೆ ಭೇಟಿ ನೀಡುತ್ತಾನೆ.

ಅಜ್ಜಿ ರಾಜನ ಕೈಹಿಡಿದು ಬಾ ನನ್ನ ಜೊತೆ ಹೆಜ್ಜೆ ಹಾಕು ಎಂದು ವಿನಂತಿಸಿಕೊಳ್ಳುತ್ತಾಳೆ. ರಾಜ ತನಗೆ ಡಾನ್ಸ್ ಮಾಡಲು ಬರುವುದಿಲ್ಲ ತಾನು ಕಲಿತಿಲ್ಲ ಎಂದು ಹೇಳಿ ನೃತ್ಯ ಮಾಡಲು ನಿರಾಕರಿಸುತ್ತಾನೆ. ಅಜ್ಜಿ ತನ್ನ ಬಳಿ ಇದ್ದ ಆಸ್ತಿಯನ್ನೆಲ್ಲ ರಾಜನಿಗೆ ದಾನ ಮಾಡಿ ಬಡವರಿಗೆ ಹಂಚಲು ಹೇಳುತ್ತಾಳೆ. ಸ್ವಲ್ಪ ದಿನಗಳ ನಂತರ ಯಾವುದೋ ಕಾಯಿಲೆಯಿಂದ ಅಜ್ಜಿ ನರಳ ತೊಡಗುತ್ತಾಳೆ.

ಅಜ್ಜಿಯನ್ನು ನೋಡಲು ರಾಜ ಮತ್ತೆ ಆ ಊರಿಗೆ ಬರುತ್ತಾನೆ. ಅಜ್ಜಿಗೆ ಏನಾದರೂ ಉಡುಗೊರೆ ಬೇಕಾ ಎಂದು ಕೇಳುತ್ತಾನೆ. ಹೌದು, ನನಗೊಂದು ದೊಡ್ಡ ಕ್ಯಾಲೆಂಡರ್ ಬೇಕು. ಅದರಲ್ಲಿ ನಾಳೆಗಳಿಗಾಗಿ ನಾನು ಸಾವಿರ ಕನಸುಗಳನ್ನು ಬರೆದಿಡಬೇಕು ಎಂದು ಅಜ್ಜಿ ಹೇಳುತ್ತಾಳೆ. ರಾಜ ಕ್ಯಾಲೆಂಡರ್ ಒಂದನ್ನು ಅಜ್ಜಿಗೆ ಉಡುಗೊರೆಯಾಗಿ ನೀಡುತ್ತಾನೆ. ನಾಳೆಗಳ ಕನಸುಗಳನ್ನು
ಬರೆದಿಡಲು ಕ್ಯಾಲೆಂಡರ್ ಬಯಸುವ ಅಜ್ಜಿಯದ್ದು ನಿಜವಾದ ಬದುಕಿನ ಭರವಸೆ. ಈ ಭರವಸೆ ನಮಗೂ ಬೇಕು, ನಾವು ಅನ್ವಯಿಸಿಕೊಳ್ಳಬೇಕು. ಹೊಸ ನಾಳೆಗಳ ಮುನ್ನುಡಿಗೆ ನಾವು ಅಂದುಕೊಂಡಿರುವುದಕ್ಕಿಂತಲೂ ನಾಳೆಯನ್ನು ಹತ್ತಿರವಾಗಿಸಿ ಕೊಳ್ಳೋಣ. ನಾಳೆ ಎಂದರೆ ಬೇರೆಯಲ್ಲ ಅದು ಇಂದೇ.

ಒಮ್ಮೆ ಹೀಗಾಯಿತು-ನನ್ನ ಪತಿ ಕ್ಯಾಲಿ-ರ್ನಿಯಾದಲ್ಲಿ ಇರುವುದರಿಂದ ನಾವಿಬ್ಬರೂ ಫೋನ್‌ನಲ್ಲಿ ಬಹಳ ಹೊತ್ತು ಮಾತನಾಡು ತ್ತೇವೆ. ಇಲ್ಲಿ ನನಗೆ ಮಂಗಳವಾರ ಬೆಳಗ್ಗೆ ಏಳು ಗಂಟೆಯಾಗಿದ್ದರೆ ಅವರಿಗೆ ಅಲ್ಲಿ ಸೋಮವಾರ ಸಂಜೆ ೭ ಗಂಟೆಯಾಗಿರು ತ್ತದೆ. ದೀಪು, ನನಗೆ ಗುಡ್ ಬೈ ಹೇಳುವ ಬದಲು Have a wonderful tomorrow ಎಂದು ಟೈಪಿಸಿದ್ದರು. ಆಗ ನಾನು ಆಲ್ರೆಡಿ ಇಲ್ಲಿ ನಾಳೆಯಾಗಿದೆ ಎಂದು ಉತ್ತರಿಸಿದ್ದೆ. ಅದು ನಿಜವೂ ಆಗಿತ್ತು. ಇವತ್ತು ನನ್ನ ದೀಪುವಿಗೆ ನಾಳೆ ಯಾಗಿತ್ತು. ನನ್ನ ಪ್ರಕಾರ ನಾಳೆ ಎಂದರೆ ಅದು ಇಂದೇ. ಈ ಹೊತ್ತೇ ಎಲ್ಲಾ ಹೊಸದರ ಶುರುವಿಗೂ ಬೇಕಿರುವುದು ನಮ್ಮ ರೆಡಿನೆಸ್ ಅಷ್ಟೇ.

ಮುಗಿಸುವ ಮುನ್ನ; ಒಂದು ಚಿಗುರಿನ ಕಥೆ. ಒಮ್ಮೆ ಭಯಂಕರವಾದ ಬಯಸದೆ ಬಂದ ಗಾಳಿ ನೆಮ್ಮದಿಯಾಗಿ ತನ್ನ ಕುಟುಂಬ ದೊಂದಿಗೆ ಗೂಡಿನಲ್ಲಿ ವಾಸವಿದ್ದ ಬೀಜಗಳ ಗುಂಪಿನ ಮೇಲೆ ದಾಳಿ ಮಾಡಿತು. ಹೀಗೆ ದಾಳಿ ಮಾಡಿದ ಭಯಂಕರ ಗಾಳಿಯು ಆ ಬೀಜಗಳ ಗುಂಪಲ್ಲಿ ಒಂದು ಬೀಜವನ್ನು ಅಪಹರಿಸಿ ತನ್ನ ಜೊತೆ ಹೊತ್ತೋಯ್ದು ಬಿಡುತ್ತದೆ. ಹೀಗೆ ತನ್ನ ಕುಟುಂಬದವರಿಂದ ದೂರಾದ ಬೀಜ ದುಃಖಿಸುತ್ತ, ಅಸಹಾಯಕವಾಗಿ ಗಾಳಿಯ ಜೊತೆಯೇ ಹೋಗುತ್ತದೆ. ಹೀಗೆ ಗಾಳಿ ಬೀಜವನ್ನು ಕೊಂಡೊ ಯ್ಯುತ್ತಾ ಒಂದು ಸಮುದ್ರದ ದಡದಲ್ಲಿ ಎಸೆದು ಬಿಡುತ್ತದೆ.

ಹೀಗೆ ಸಮುದ್ರ ದಡದಲ್ಲಿ ಬಿದ್ದ ಬೀಜದ ಮೇಲೆ ಅಲ್ಲೇ ಸಮುದ್ರದ ದಡದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬ ತನ್ನ ದೊಡ್ಡ ದಾದ ಬೂಟಿನ ಕಾಲನ್ನು ಇಡುತ್ತಾನೆ. ಬೀಜ ಆ ವ್ಯಕ್ತಿಯ ಬೂಟಿಗೆ ಅಂಟಿಕೊಂಡು ಬಿಡುತ್ತದೆ. ಬೀಜ ಇನ್ನಷ್ಟು ಅಸಹಾಯಕ ವಾಗುತ್ತದೆ. ಆದರೂ ಆ ಬೀಜಕ್ಕೆ ಒಳಗಿನಿಂದ ಅದೆಂತದೋ ಶಕ್ತಿ. ಇಲ್ಲ ನಾನು ಬದುಕಲೇಬೇಕು, ಮರು ಹುಟ್ಟಲೇಬೇಕು, ಮತ್ತೆ ಚಿಗುರೊಡೆಯಲೇಬೇಕು ಎಂಬ ಕಿಚ್ಚು ಒಳಗಿನಿಂದಲೇ ಒಡ ಮೂಡುತ್ತದೆ. ತನ್ನ ಬೂಟಿನ ಕಾಲಿನಲ್ಲಿ ಆ ಬೀಜವನ್ನು ತುಳಿದಿದ್ದ ವ್ಯಕ್ತಿ ಮುಂದೆ ನಡೆದು ಹೋಗುತ್ತಾ ಬೂಟಿನ ಕಾಲನ್ನು ಸಿಮೆಂಟ್ ಗೋಡೆಗೆ ಒದೆಯುತ್ತಾನೆ.

ಬೀಜ ಹೋಗಿ ಆ ಸಿಮೆಂಟ್ ಗೋಡೆಯ ಮಧ್ಯೆ ಸಿಕ್ಕಿಹಾಕಿಕೊಳ್ಳುತ್ತದೆ. ಸಿಮೆಂಟು ಗೋಡೆಯ ಮಧ್ಯೆ ಒಂದು ಸಣ್ಣದಾದ ಬಿರುಕು ಮೂಡಿರುತ್ತದೆ. ಅಲ್ಲಿ ಹೋಗಿ ಸಿಲುಕಿಕೊಂಡ ಬೀಜಕ್ಕೆ ಮತ್ತೆ ಚಿಗುರೊಡೆಯುವ ಹಂಬಲ ಉಂಟಾಗುತ್ತದೆ. ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳದ ಬೀಜ ಅಲ್ಲೇ ತನ್ನ ಜೀವನದಲ್ಲಿ ಯಾವುದಾದರೂ ಪವಾಡ ಬಂದೆರಗಬಹುದಾ ಎಂದು ಎದುರು ನೋಡುತ್ತಲೇ ಇರುತ್ತದೆ. ಬೀಜದ ಮನಸ್ಸಿನ ಅನಿಸಿಕೆ ಸತ್ಯವಾಗುತ್ತದೆ. ನಿಧಾನವಾಗಿ ಮಳೆಯ ಹನಿಗಳು ಬೀಜದ ಮೇಲೆ ಬೀಳುತ್ತವೆ. ಸೂರ್ಯನ ಕಿರಣ ಬೀಜದ ಮೈ ಸೋಕುತ್ತದೆ.

ಬೀಜ ನಿಧಾನಕ್ಕೆ ಮೊಳಕೆ ಹೊಡೆಯುತ್ತದೆ. ನಿಧಾನಕ್ಕೆ ತನ್ನ ಬೇರುಗಳನ್ನು ಅದೇ ಸಿಮೆಂಟು ಬಿರುಕಿನೊಳಗೆ ಮೂಡಿಸುತ್ತಾ ಹೋಗುತ್ತದೆ. ಬಿದ್ದ ಮಳೆ ಪ್ರಕಾಶಿಸಿದ ಸೂರ್ಯನ ಕಿರಣಗಳು ಇವುಗಳಿಂದ ಬೀಜ ಮತ್ತೆ ಮುಗುಳ್ನಕ್ಕೂ ಮತ್ತೊಂದು ಜೀವವನ್ನು ಸೃಷ್ಟಿಸುತ್ತದೆ ಅರಳುತ್ತದೆ. ಪ್ರಪಂಚಕ್ಕೆ ಕೂಗಿ ಹೇಳುತ್ತದೆ ಬೀಜ-ಅರೇ ಪ್ರಪಂಚ ಇದು ನನ್ನಿಂದ ಸಾಧ್ಯವಾಯಿತು. ನಾನು ಮೊಳಕೆಯೊಡೆದೆ, ನಾನು ಚಿಗುರೊಡೆದೆ, ನಾನು ಮತ್ತೆ ಬೆಳೆದೆ.

ಒಂದು ಪುಟ್ಟ ಬೀಜಕ್ಕೆ ಮತ್ತೆ ಮತ್ತೆ ಚಿಗುರೊಡೆಯಬೇಕು ಮೊಳಕೆಯೊಡೆಯಬೇಕು ಎಂಬ ಕನಸಿದ್ದರೆ. ಎಲ್ಲಾ ಶಕ್ತಿ ಇರುವ ನಾವು ಬದುಕಿಗೆ ಮತ್ತೆ ಭರವಸೆಗಳನ್ನು ಮೂಡಿಸಿಕೊಳ್ಳಲೇಬೇಕು. ಮುಗಿದೆ ಹೋಯಿತು ಇದೇ ಕೊನೆ ಎನ್ನುವ ಕತ್ತಲೆಯೂ ನಮ್ಮೊಳಗೆ ಹೊಸದೊಂದು ಕನಸನ್ನು ಮೂಡಿಸಬೇಕು. ಎಂತಹದ್ದೇ ಸವಾಲುಗಳು ಬಂದರೂ ಸವಾಲುಗಳನ್ನು ನಾವು ಅವಕಾಶಗಳನ್ನಾಗಿ ಬದಲಾಯಿಸಿಕೊಳ್ಳಬೇಕು. ಹೊಸ ನಾಳೆಗಳನು ನಮ್ಮದಾಗಿಸಿಕೊಳ್ಳಬೇಕು. ನಮ್ಮೊಳಗೆ ಇರುವ ಮುಕ್ತಾಯವೆಂಬ ಮನಸ್ಥಿತಿ ಪರಿವರ್ತನೆ ಎಂಬ ಮನಸ್ಥಿತಿಯಾಗಿ ರೂಪುಗೊಳ್ಳಬೇಕು. ಹೇಗೆ ಬೀಜ ಸಿಮೆಂಟ್ ಗೋಡೆಯ
ಬಿರುಕುಗಳ ಮಧ್ಯೆ ಹೊಸ ಸನ್ ಶೈನ್‌ನನ್ನು ಹೊಸ ಬ್ರೈಟ್ನೆಸ್ ಅನ್ನು ಪಡೆದು ಹೊಸ ಜೀವವನ್ನು ಅರಳಿಸಿಕೊಂಡಿತೋ ನಾವು ಹಾಗೆ ಬಿರುಕುಗಳ ಮಧ್ಯೆ ಅದ್ಭುತವಾದ ಬದುಕನ್ನು ಅರಳಿಸಿಕೊಳ್ಳಬೇಕು.

error: Content is protected !!