Sunday, 8th September 2024

ರೈತ ಮಸೂದೆಯ ವಿಚಾರದಲ್ಲಿ ಉದ್ದುದ್ದ ಸುಳ್ಳುಗಳು ಸರಿಯೇ ?

ವೀಕೆಂಡ್‌ ವಿಥ್‌ ಮೋಹನ್‌

ಮೋಹನ್‌ ವಿಶ್ವ

ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಭಟನಾ ನಿರತ ರೈತರ ಜತೆ ಮಾತುಕತೆಗೆ ಸಿದ್ದನೆಂದು ‘ರಾಜ್ಯ ಸಭೆ’ಯಲ್ಲಿ ಘಂಟಾ ಘೋಷವಾಗಿ ಹೇಳಿದರೂ, ರೈತಪರ ಮಸೂದೆಗಳ ಬಗ್ಗೆ ಟ್ವಿಟ್ಟರ್‌ನಲ್ಲಿ ಉದ್ದುದ್ದ ಸುಳ್ಳು ಕಥೆ ಬರೆಯುವ ರಾಹುಲ್ ಗಾಂಧಿ
ಲೋಕಸಭೆಯಲ್ಲಿ ಮಾತ್ರ ಮಸೂದೆಗಳ ವಿಚಾರವಾಗಿ ಒಂದು ಮಾತನ್ನು ಆಡಲಿಲ್ಲ.

ನೂತನ ತಿದ್ದುಪಡಿಯಲ್ಲಿರುವ ಲೋಪ ದೋಷಗಳನ್ನು ಹೇಳಯ್ಯ ಎಂದರೆ ತುಟಿ ಬಿಚ್ಚಲೇಯಿಲ್ಲ. ತುಟಿ ಬಿಚ್ಚಲು ಆಗುವುದಿಲ್ಲ ಬಿಡಿ. ಯಾಕೆಂದರೆ ರೈತಪರ ವಾಗಿರುವ ಮಸೂದೆಯನ್ನು ಹೇಗೆ ತಾನೇ ರೈತ ವಿರೋಧಿಯೆಂದು ಸಂಸತ್ತಿನಲ್ಲಿ ಹೇಳಲಾದೀತು? ಹೇಳಲು ಏನಾದರೊಂದು ಬಲವಾದ ಕಾರಣವಿರಬೇಕಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳಬಹುದು.

ಆದರೆ ಸಂಸತ್ತಿನಲ್ಲಿ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡರೆ ಇಡೀ ಜಗತ್ತೇ ನಗುತಿತ್ತು. ಇದೇ ರಾಹುಲ್ ಗಾಂಧಿ ಮಾತು ಮಾತಿಗೂ ‘ಅಂಬಾನಿ’ ‘ಅದಾನಿ’ ಎಂದು ಹೇಳಿ ರೈತ ಮಸೂದೆಯ ವಿಚಾರದಲ್ಲಿ ಉದ್ದುದ್ದ ಸುಳ್ಳುಗಳನ್ನು ಹೇಳುತ್ತಿರುತ್ತಾನೆ. ಅಮ್ಮಂದಿರು
ಮಕ್ಕಳಿಗೆ ಗುಮ್ಮ ಬರ್ತಾನೆ ಊಟ ಮಾಡೆಂದು ಕಥೆ ಹೇಳುವ ಹಾಗೆ, ಅಂಬಾನಿ ಎಂಬ ಗುಮ್ಮವನ್ನು ರೈತರಿಗೆ ತೋರಿಸಿ ಹಸಿ
ಹಸಿ ಸುಳ್ಳು ಹೇಳುತ್ತಿರುತ್ತಾರೆ.

ಅಂಬಾನಿ ಹಾಗೂ ಅದಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ಏನು ಭಿಕ್ಷೆ ಬೇಡುತ್ತಿದ್ದರೆ? ಕಳೆದ ಏಳು ವರ್ಷದಲ್ಲಿ ಮಾತ್ರ ಅಂಬಾನಿ, ಅದಾನಿ ಅಷ್ಟೊಂದು ಆಸ್ತಿ ಮಾಡಿದರೆ? ಮೋದಿ ಬರುವ ಮುನ್ನ ಅಂಬಾನಿ ಏನು ಗುಡಿಸಲಿನಲ್ಲಿ
ವಾಸಿಸುತ್ತಿದ್ದನೆ? ಅಂಬಾನಿ ಅತಿ ಹೆಚ್ಚು ಶ್ರೀಮಂತನಾದದ್ದು 2005ರಿಂದ 2014ರ ನಡುವೆ, 2019ರಲ್ಲಿ ಅಂಬಾನಿ ಒಡೆತನದ ‘ರಿಲಯನ್ಸ್’ ಕಂಪನಿಯ ಸಾಲ ಒಂದೂವರೆ ಲಕ್ಷ ಕೋಟಿಯನ್ನು ತಲುಪಿತ್ತು, ಇಂತಹ ಪರಿಸ್ಥಿತಿಯಲ್ಲಿ ಅಮೆರಿಕಾದ ಫೇಸ್ ಬುಕ್’ ಕಂಪನಿಯು ಅಂಬಾನಿಯ ಕೈ ಹಿಡಿಯದೇ ಹೋಗಿದ್ದರೆ ರಿಲಯನ್ಸ್ ಕಂಪನಿಯು ಆ ಸಾಲವನ್ನು ತೀರಿಸಲು ಆಗುತ್ತಿರಲಿಲ್ಲ.

ಅಂಬಾನಿಗೆ ಅಷ್ಟೊಂದು ಸಾಲ ಕೊಟ್ಟಿದ್ದು ಇದೇ ಕಾಂಗ್ರೆಸ್ಸಿನ ‘ಚಿದಂಬರಂ’ ಎಂಬುದು ನೆನಪಿರಲಿ. ಚಿದಂಬರಂ ವಿತ್ತ ಸಚಿವ ರಾಗಿದ್ದ ಸಮಯದಲ್ಲಿ ಸಿಕ್ಕಸಿಕ್ಕವರಿಗೆ ನೀಡಿದ ಸಾಲದ ಪರಿಣಾಮವಾಗಿ ಬ್ಯಾಂಕಿಂಗ್ ವಲಯಕ್ಕೆ ನಾಲ್ಕು ಲಕ್ಷ ಕೋಟಿಯಷ್ಟು ಹಣವನ್ನು ಬಂಡವಾಳವನ್ನಾಗಿ ಹೂಡಲಾಯಿತು. ಈ ಹಣ ಯಾರದ್ದು? ನಮ್ಮ ನಿಮ್ಮ ತೆರಿಗೆಯಿಂದ ಬಂದದ್ದು, ಇದೆ ಹಣವು ಉಳಿದಿದ್ದರೆ ಅದೆಷ್ಟು ಸಾವಿರ ಕಿಲೋಮೀಟರ್ ರಸ್ತೆಯನ್ನು ಕಟ್ಟಬಹುದಿತ್ತು.

ರೈತರ ವಿಚಾರದಲ್ಲಿಯೂ ಅಷ್ಟೇ ಅಂಬಾನಿಯನ್ನು ಎಳೆತಂದು ದಾರಿ ತಪ್ಪುವ ಕೆಲಸ ನಡೆಯುತ್ತಿದೆ, ಅಂಬಾನಿ ರೈತರ ಜಮೀನನ್ನು ಕಿತ್ತುಕೊಳ್ಳುತ್ತಾನೆಂದು ಗುಮ್ಮವನ್ನು ತೋರಿಸಿ ತೋರಿಸಿ ರೈತರ ಹೆಸರಿನಲ್ಲಿ ಇಲ್ಲ ಸಲ್ಲದ ಸುಳ್ಳು ಸುದ್ದಿ ಹಬ್ಬಿಸು ತ್ತಿದ್ದಾರೆ. ಈಗಾಗಲೇ ಹಲವು ವರ್ಷಗಳಿಂದ ರಿಲಯನ್ಸ್ ಕಂಪನಿಯು ರೈತರಿಂದ ನೇರವಾಗಿ ಖರೀದಿ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಹಾಗಾದರೆ ರೈತರ ಅದೆಷ್ಟು ಇಂಚು ಜಾಗವನ್ನು ಇದುವರೆಗೂ ರಿಲಯನ್ಸ್ ಕಂಪನಿ ವಶಪಡಿಸಿಕೊಂಡಿದೆ? ‘ಐಟಿಸಿ’ ಕಂಪನಿಯು ಸುಮಾರು ಎರಡು ದಶಕಗಳಿಂದ ರೈತರಿಂದ ನೇರವಾಗಿ ಅಕ್ಕಿ, ಬೇಳೆ, ಗೋದಿಯನ್ನು ಟನ್ನುಗಳ ಲೆಕ್ಕದಲ್ಲಿ ಖರೀದಿ ಮಾಡುತ್ತಾ ಬಂದಿದೆ. ಈ ಕಂಪನಿಯು ಅದೆಷ್ಟು ರೈತರ ಭೂಮಿಯನ್ನು ವಶಪಡಿಸಿಕೊಂಡಿದೆ? ಅದೆಷ್ಟು ಜನ ರೈತರಿಗೆ ಹಣಕಾಸಿನ ವಿಚಾರದಲ್ಲಿ ಮೋಸ ಮಾಡಿದೆ ಹೇಳಿ ನೋಡೋಣ? ಇದೇ ಕಂಪನಿಯ ಅನ್ನವನ್ನು ತಿಂದು, ಈಗ ಹೊಟ್ಟೆಗೆ ಮಣ್ಣು ತಿನ್ನುವ ಮಾತನಾಡಿದರೆ ಭಗವಂತ ಮೆಚ್ಚುವುದಿಲ್ಲ.

ಇವರು ಹೇಳುವ ‘ಗುತ್ತಿಗೆ ಕೃಷಿ’ ಹೊಸತೇನಲ್ಲ, ಹಲವು ದಶಕಗಳಿಂದ ಭಾರತದಲ್ಲಿ ನಡೆದುಕೊಂಡು ಬಂದಿದೆ. ಸಣ್ಣ ಸಣ್ಣ ವ್ಯವಹಾರಸ್ಥರು ರೈತನು ಬಿತ್ತನೆ ಮಾಡುವ ಮುನ್ನವೇ ಒಪ್ಪಂದವನ್ನು ಮಾಡಿಕೊಂಡು ರೈತ ಬೆಳೆದ ಬೆಳೆಯನ್ನು ಖರೀದಿ ಮಾಡಲು ಮುಂಗಡ ಹಣವನ್ನು ಸಂದಾಯ ಮಾಡುತ್ತಾರೆ. ಕನಕಪುರ, ಚನ್ನಪಟ್ಟಣದ ಕಡೆ ಒಮ್ಮೆ ಭೇಟಿ ನೀಡಿ ರೈತರನ್ನು
ಮಾತನಾಡಿಸಿ ‘ಸಾಹೇಬರು’ಗಳು ಮುಂಚಿತವಾಗಿಯೇ ಅವರಿಗೆ ಹಣ ಸಂದಾಯ ಮಾಡಿ ‘ದೊಡ್ಡ ಮೆಣಸಿನ ಕಾಯಿ’ಯನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿರುತ್ತಾರೆ.

ಕೋಲಾರದ ಕಡೆ ವಿಚಾರಿಸಿ ನೋಡಿ ‘ಮಾವಿನ ಹಣ್ಣಿ’ನ ರೈತರ ಬಳಿ ಒಪ್ಪಂದ ಮಾಡಿಕೊಂಡು ಬೆಳೆಯು ಫಸಲಿಗೆ ಬರುವ ಮುನ್ನವೇ ಮುಂಗಡ ಹಣ ಸಂದಾಯ ಮಾಡುತ್ತಾರೆ. ಹಣ್ಣಿನ ಬೆಲೆಯೂ ಮೊದಲೇ ನಿಗದಿಯಾಗಿರುತ್ತದೆ. ಫಸಲು ಬರುವ ವೇಳೆಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದರೆ ರೈತನಿಗಾಗುವ ನಷ್ಟದ ಬಗ್ಗೆ ಇವರಿಗೆ ಯಾವ ಯೋಚನೆಯೂ ಇಲ್ಲ, ಇಷ್ಟು ವರ್ಷಗಳಿಂದ
ನಡೆದುಕೊಂಡು ಬರುತ್ತಿರುವ ಈ ಪದ್ಧತಿಯ ಬಗ್ಗೆ ತುಟಿ ಬಿಚ್ಚದ ರೈತ ಹೋರಾಟಗಾರರು ಈಗ ಇದೇ ಪದ್ಧತಿಯನ್ನು ಕಾನೂನು ಬದ್ಧಗೊಳಿಸಿ ರೈತನಿಗೆ ನ್ಯಾಯ ಒದಗಿಸಿದರೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ.

ಕರೋನಾ ಸಂಕಷ್ಟದ ಸಂದರ್ಭದಲ್ಲಿ ಅದೆಷ್ಟು ರೈತರು ನೇರವಾಗಿ ತಾವು ಬೆಳೆದ ಬೆಳೆಯನ್ನು ನೇರವಾಗಿ ಬೆಂಗಳೂರಿನ ‘ಅಪಾರ್ಟ್ ಮೆಂಟ್’ಗಳಿಗೆ ನೇರವಾಗಿ ಮಾರಾಟ ಮಾಡಿಲ್ಲ? ಲಾಲ್ ಬಾಗ್, ಕಬ್ಬನ್ ಪಾರ್ಕಿನ ಮುಂದೆ ಲಾರಿಗಳಲ್ಲಿ ತಾವು ಬೆಳೆದ ಬೆಳೆಗಳನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದನ್ನು ಕಣ್ಣಾರೆ ನಾವೇ ಕಂಡಿದ್ದೇವೆ. ಕೋಲಾರದ ರೈತನೊಬ್ಬ ತಾನು ಬೆಳೆದ ಮಾವನ್ನು ಬೆಂಗಳೂರಿನ ಅಪಾರ್ಟ್ ಮೆಂಟ್‌ಗಳಿಗೆ ನೇರವಾಗಿ ಮಾರಿ ಎರಡೇ ದಿನದಲ್ಲಿ ಬಂದ ಲಾಭದಲ್ಲಿ
ಹೊಸದೊಂದು ‘ಹೋಂಡಾ ಆಕ್ಟಿವಾ’ ಗಾಡಿಯನ್ನು ಕೊಂಡುಕೊಂಡದ್ದನ್ನು ಸ್ವತಃ ನಾನೇ ನನ್ನ ಕಣ್ಣಾರೆ ಕಂಡಿದ್ದೇನೆ.

ಸ್ವತಃ ನಾನೇ ಅವನಿಗೆ ಹಲವಾರು ಸ್ನೇಹಿತರನ್ನು ಪರಿಚಯ ಮಾಡಿಸಿ ಮಾವು ಮಾರಾಟ ಮಾಡಿಸಿಕೊಟ್ಟಿದ್ದೇನೆ. ಸಾಗರದ
ರೈತನೊಬ್ಬ ತಾನು ಬೆಳೆದ ‘ಅನಾನಸ್’ ಬೆಳೆಯನ್ನು ಕೇವಲ ಎರಡು ಘಂಟೆಯಲ್ಲಿ ‘ಲಾಲ್ ಬಾಗ್’ನ ಮುಂದೆ ಮಾರಾಟ
ಮಾಡಿದನ್ನು ನನ್ನ ಕಣ್ಣಿಂದ ಕಂಡಿದ್ದೇನೆ. ಇವರೆಲ್ಲರೂ ಕರೋನ ಸಮಯದಲ್ಲಿ ಕೃಷಿ ಮಾರುಕಟ್ಟೆಗಳು ತೆರೆಯದ
ಸಂದರ್ಭ ದಲ್ಲಿ ಹೆಚ್ಚಿನ ಲಾಭವನ್ನು ಗ್ರಾಹಕರಿಗೆ ನೇರವಾಗಿ ಮಾರುವ ಮೂಲಕ ಮಾಡಿದ್ದರು.

ಖಾಸಗೀಕರಣದ ವಿಚಾರದಲ್ಲಿ ಮಾತು ಮಾತಿಗೂ ಅಂಬಾನಿ ಹಾಗೂ ಅದಾನಿಯೆಂಬ ಗುಮ್ಮವನ್ನು ತೋರಿಸುವ ಕಮ್ಯುನಿಸ್ಟರು ಹಾಗೂ ಕಾಂಗ್ರೆಸ್ಸಿಗರಿಗೆ, 1991ರಲ್ಲಿ ತಮ್ಮದೇ ಸರಕಾರ ಜಾಗತೀಕರಣದ ಹೆಸರಿನಲ್ಲಿ ಆರ್ಥಿಕ ಕ್ರಾಂತಿಯೊಂದನ್ನು ಮಾಡಿತ್ತೆಂಬು ದು ತಿಳಿದಿಲ್ಲವೇ? ಅಂದು ಕಾಂಗ್ರೆಸ್ ಸರಕಾರ ತೆಗೆದುಕೊಂಡಂತಹ ನಿರ್ಣಯ ಗಳಿಂದಲೇ ಅಂಬಾನಿ ಹಾಗೂ ಅದಾನಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಮೂಲಭೂತ ಸೌಕರ್ಯ ದಲ್ಲುಂಟಾದ ವಿದೇಶಿ ಬಂಡವಾಳ ನೀತಿ, ಟೆಲಿಕಾಂ
ಕ್ಷೇತ್ರದ ಬಂಡವಾಳ ನೀತಿ, ಪೆಟ್ರೋಲಿಯಂ ಕ್ಷೇತ್ರದದ ಖಾಸಗೀಕರಣ ಎಲ್ಲವೂ ಅವರ ಕಾಲದಲ್ಲಿಯೇ ನಡೆಯಿತು.

ಟೆಲಿಕಾಂ ಕ್ಷೇತ್ರದಲ್ಲಿ ‘ರಿಲಯನ್ಸ್ ಜಿಯೋ’  ಕಂಪನಿ ಇಲ್ಲದಿದ್ದಿದ್ದರೆ ಕರೋನ ಸಮಯದಲ್ಲಿ ಬಡ ಕುಟುಂಬದವರು ತಮ್ಮ ಮಕ್ಕಳಿಗೆ ‘ಆನ್ ಲೈನ್’ ಶಿಕ್ಷಣ ನೀಡಲು ಸಾಧ್ಯವಾಗುತ್ತಿರಲಿಲ್ಲ, ಒಂದು ಜಿ.ಬಿ. ಡೇಟಾಕ್ಕೆ ನೂರು ರುಪಾಯಿ ಕೊಡುತ್ತಿದ್ದಂಥ ಕಾಲದಿಂದ ಒಂದು ರುಪಾಯಿ ಕೊಡುವಲ್ಲಿಗೆ ತಂದದ್ದು ಇದೇ ರಿಲಯನ್ಸ್ ಕಂಪನಿಯ ಅಂಬಾನಿ ಅಲ್ಲವೇ? ಪ್ರತಿಯೊಂದು
ದೇಶದಲ್ಲಿಯೂ ದೊಡ್ಡ ದೊಡ್ಡ ಉದ್ಯಮಿಗಳು ಇದ್ದೇ ಇರುತ್ತಾರೆ. ಅಮೆರಿಕಾ ದೇಶದಲ್ಲಿಯೂ ಅಷ್ಟೇ, ಪ್ರತಿಯೊಂದು ಕ್ಷೇತ್ರದಲ್ಲಿಯೂ ದೊಡ್ಡ ದೊಡ್ಡ ಉದ್ಯಮಿಗಳಿದ್ದಾರೆ.

ರಷ್ಯಾದಲ್ಲಿಯೂ ದೊಡ್ಡ ದೊಡ್ಡ ಉದ್ಯಮಿಗಳಿzರೆ, ಕಮ್ಯುನಿಸ್ಟ್ ರಾಷ್ಟ್ರವೆಂದು ಹೇಳಿಕೊಳ್ಳುವ ಚೀನಾದಲ್ಲಿ ಹೆಚ್ಚಿನ ಬಿಲೇನಿ ಯರ್‌ಗಳಿದ್ದಾರೆ. ಇವರಿಗೆ ಯಾವ ಸರಕಾರ ಬಂದರೂ ಅಷ್ಟೇ ತಮ್ಮ ತಮ್ಮ ಕೆಲಸ ಮಾಡಿಕೊಳ್ಳುತ್ತಾರೆ. ಸರಕಾರವನ್ನು ನಂಬಿ  ಕೊಂಡು ಇವರ‍್ಯಾರೂ ತಮ್ಮ ವ್ಯವಹಾರವನ್ನು ಮುಂದುವರಿಸುವುದಿಲ್ಲ. ಸಮಾಜದಲ್ಲಿ ಇವರಿಂದ ಸೃಷ್ಟಿಯಾಗುವ ಉದ್ಯೋಗ ಗಳು, ತೆರಿಗೆ ಸಂಗ್ರಹಣೆ, ಸಾಮಾಜಿಕ ಕಾರ್ಯಗಳನ್ನು ನೋಡಿ ಸರಕಾರಗಳು ಅನುಕೂಲ ಮಾಡಿಕೊಡುತ್ತವೆ.

ಅಂಬಾನಿ ಹಾಗೂ ಅದಾನಿ ಸರಕಾರದ ಬೊಕ್ಕಸಕ್ಕೆ ಕಟ್ಟುವ ಸಾವಿರಾರು ಕೋಟಿಯ ತೆರೆಗೆ ಹಣವನ್ನು ಯಾರಿಗಾಗಿ ಬಳಸ ಲಾಗುತ್ತಿದೆ? ದೇಶದ ಅಭಿವೃದ್ಧಿಗಾಗಿ ತಾನೇ? ಗುಜರಾತಿಗಳೆಂದು ಅಂಬಾನಿ ಹಾಗೂ ಅದಾನಿಯನ್ನು ಮೋದಿಯವರೊಂದಿಗೆ
ತಾಳೆ ಮಾಡುವುದಾದರೆ, ಮಹಾತ್ಮ ಗಾಂಧಿಯವರೂ ಸಹ ಒಬ್ಬ ಗುಜರಾತಿ ಎಂಬುದನ್ನು ಮರೆಯುವ ಹಾಗಿಲ್ಲ. ಮಹಾತ್ಮಾ ಗಾಂಧಿಯನ್ನು ಮಾತ್ರ ನರೇಂದ್ರ ಮೋದಿ ಯವರಿಗೆ ತಾಳೆ ಮಾಡಲಾಡಲು ಇವರು ತಯಾರಿಲ್ಲ, ಯಾಕೆಂದರೆ ಅವರ ಹೆಸರನ್ನೇ ಸಂಪೂರ್ಣವಾಗಿ ಇಟಲಿಯ ಕುಟುಂಬ ಹೈಜಾಕ್ ಮಾಡಿಬಿಟ್ಟಿದೆ.

ಅಂಬಾನಿ ತನ್ನ ಸಂಸ್ಥೆಯನ್ನು ಸ್ಥಾಪಿಸಿದ್ದು 1970ರ ದಶಕದಲ್ಲಿ, ಅಂದರೆ ಇಂದಿಗೆ ಸುಮಾರು ಐದು ದಶಕಗಳು ಕಳೆದಿವೆ. ಈ ಐದು ದಶಕದಲ್ಲಿ ಅತಿ ಹೆಚ್ಚು ಭಾರತವನ್ನು ಆಳಿದ್ದು ಯಾರು? ಇದೇ ಕಾಂಗ್ರೆಸ್ ಪಕ್ಷವಲ್ಲವೇ !! ಅಂಬಾನಿಯನ್ನು ಬುಡಮಟ್ಟ ದಿಂದ ಬೆಳೆಸಿದ್ದು ಯಾರು? 2004ರಲ್ಲಿ ಅಂಬಾನಿಯ ಬಳಿ ಏನು ಇರಲಿಲ್ಲವೇ? ನರೇಂದ್ರ ಮೋದಿ ಅಧಿಕಾರಕ್ಕೆ ಬರುವ
ಮುನ್ನವೇ ಅಂಬಾನಿ ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದರು.

ಅಷ್ಟು ಹೊತ್ತಿಗಾಗಲೇ, ಬಹುತೇಕ ಎಲ್ಲಾ ವಲಯದಲ್ಲಿಯೂ ತಮ್ಮ ವ್ಯವಹಾರವನ್ನು ರಿಲಯನ್ಸ್ ಶುರುಮಾಡಿತ್ತು. ಟೆಲಿಕಾಂ ಕ್ಷೇತ್ರದಲ್ಲಿ ‘ಜಿಯೋ’ ಬಂದಕೂಡಲೇ ಇವರೆಲ್ಲರಿಗೂ ಅಂಬಾನಿ ಶ್ರೀಮಂತನಂತೆ ಕಂಡುಬಿಟ್ಟಿದೆ. ಕಾಂಗ್ರೆಸ್ ಹಾಗೂ ಕಮ್ಯುನಿ ಸ್ಟರು ತಮ್ಮ ಜಿಯೋ ಮೊಬೈಲ್ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಅಂಬಾನಿಯ ಬಗ್ಗೆ ಮಾತನಾಡುತ್ತಾರೆ. ಅವರು ಅಷ್ಟೊಂದು ‘ಇಂಟರ್ನೆಟ್’ ಬಳಸಲು ಸಹಾಯ ಮಾಡಿದ್ದೇ ರಿಲಯನ್ಸ್ ಸಂಸ್ಥೆಯ ಅಂಬಾನಿ ಸಹೋದರರು.

ಅಂಬಾನಿ, ಅದಾನಿ ಮಾತ್ರವಲ್ಲದೆ ಹಲವಾರು ಸಣ್ಣ ಪುಟ್ಟ ಕಂಪನಿಗಳು ರೈತರಿಂದ ಉತ್ಪನ್ನಗಳನ್ನು ಖರೀದಿ ಮಾಡುತ್ತಿವೆ.
ಕರ್ನಾಟಕದ ‘ನೀಲ್ ಗಿರೀಸ್’ ಸಂಸ್ಥೆ ಅದೆಷ್ಟು ವರ್ಷಗಳಿಂದ ರೈತರಿಂದ ಉತ್ಪನ್ನಗಳನ್ನು ಖರೀದಿ ಮಾಡುತ್ತಿದೆ ಗೊತ್ತೇ?
ಸುಮಾರು ಇಪ್ಪತ್ತು ವರ್ಷಗಳಿಂದ ರೈತರಿಂದ ನೇರವಾಗಿ ಹಾಲನ್ನು ಖರೀದಿ ಮಾಡಿ ಗ್ರಾಹಕರಿಗೆ ನೀಡುತ್ತಿದೆ.

‘ಫಾರ್ಮ್ ಫ್ರೆಶ್’ ಸಂಸ್ಥೆ ಕೂಡ ಹಲವು ವರ್ಷಗಳಿಂದ ರೈತರಿಂದ ಹಣ್ಣು, ತರಕಾರಿ, ಸೊಪ್ಪುಗಳನ್ನು ಖರೀದಿ ಮಾಡುತ್ತಿದೆ. ‘ನಾಮ್ ಧಾರೀಸ್’ ಸಂಸ್ಥೆಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ, ಈ ಸಂಸ್ಥೆಯೂ ಕೂಡ ಹಲವು ವರ್ಷಗಳಿಂದ ರೈತರಿಂದ ನೇರವಾಗಿ ಬೆಳೆಗಳನ್ನು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಈ ಕಂಪನಿಗಳು ಇದುವರೆಗೂ ಯಾವ ರೈತನಿಗಾದರೂ ಮೋಸ ಮಾಡಿದ್ದಾರೆಂದು ಎದರೂ ವರದಿಯಾಗಿದ್ದನ್ನು ನಾನಂತೂ ಕೇಳಿಲ್ಲ. ಈ ಕಂಪನಿಗಳು ಒಂದಿಂಚು ಭೂಮಿಯನ್ನೂ ರೈತರಿಂದ ಮೋಸ ಮಾಡಿ ಕಿತ್ತುಕೊಂಡಿರುವ ಉದಾಹರಣೆಯನ್ನು ನಾನಂತೂ ಕೇಳಿಲ್ಲ ಅಥವಾ ಎಲ್ಲಿಯೂ ಕಂಡುಬಂದಿಲ್ಲ, ಹೀಗಿರುವಾಗ
ಹೇಗೆ ತಾನೇ ‘ಅಂಬಾನಿ’ ಹಾಗೂ ‘ಅದಾನಿ’ಯಾ ಗುಮ್ಮವನ್ನು ತೋರಿಸಿ ರೈತರ ತಲೆ ಹಾಳು ಮಾಡಲಾಗುತ್ತಿದೆ.

ಕಬ್ಬು ಬೆಳೆಗಾರರ ವಿಷಯದಲ್ಲಿ ಈಗಾಗಲೇ ಗುತ್ತಿಗೆ ಕೃಷಿ ಹಲವು ವರ್ಷಗಳಿಂದ ರಾಜ್ಯದಲ್ಲಿ ಜಾರಿಯಲ್ಲಿದೆ, ರೈತನಿಗೆ ಬೇಕಾಗುವ ಬೀಜದಿಂದ ಹಿಡಿದು, ಕಟಾವು ಮಾಡಿದ ಮೇಲೆ ಕಾರ್ಖಾನೆಗಳಿಗೆ ತಂದು ಹಾಕಲು ತಗಲುವ ಸಾಗಾಣಿಕಾ ವೆಚ್ಚಕ್ಕೂ ಕಾರ್ಖಾನೆಗಳ ಮಾಲೀಕರು ಮುಂಗಡ ಹಣವನ್ನು ನೀಡಿರುವ ಹಲವು ಉದಾಹರಣೆಗಳಿವೆ. ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರ ನಡುವೆ ಹಲವು ದಶಕಗಳಿಂದ ಹಗ್ಗ ಜಗ್ಗಾಟಗಳು ನಡೆಯುತ್ತಿದ್ದರೂ ಸಹ ಯಾವುದಾದ ರೊಂದು ಕಾರ್ಖಾನೆಯ ಮಾಲೀಕ ರೈತನ ಜಮೀನನ್ನು ಬಲವಂತವಾಗಿ ಕಿತ್ತುಕೊಂಡಿರುವ ಉದಾಹರಣೆ ಇದೆಯೇ?

1991ರ ಆರ್ಥಿಕ ಉದಾರತೆಯು ಆಗದಿದ್ದರೆ ಇಂದು ನಮಗೆ ನಿಮಗೆ ನೋಡಲು ಕೇವಲ ‘ದೂರದರ್ಶನ’ ಚಾನೆಲ್ ಮಾತ್ರ ವಿರುತಿತ್ತು. ಜಗತ್ತಿನ ಯಾವುದೇ ಮುಂದುವರಿದ ದೇಶವನ್ನು ಉದಾಹರಣೆಗೆ ತೆಗೆದುಕೊಂಡರೆ ಅಲ್ಲಿ ಖಾಸಗೀಕರಣದಿಂದ ಹರಿದು ಬಂದಂಥ ಬಂಡವಾಳವೇ ಅಲ್ಲಿನ ಆರ್ಥಿಕ ಪ್ರಗತಿಯ ಮುಖ್ಯ ಬೆನ್ನೆಲುಬಾಗಿರುತ್ತದೆ. ಎರಡು ವರ್ಷಗಳ ಹಿಂದೆ ‘ರಫೇಲ್‌’ ಯುದ್ಧವಿಮಾನ ಖರೀದಿಯಲ್ಲಿ ‘ಹಿಂದೂಸ್ತಾನ್ ಏರೊನಾಟಿಕ್ಸ್ ಸಂಸ್ಥೆ’ಯ ಬಗ್ಗೆ ಕರುಣಾಜನಕವಾಗಿ ಮಾತನಾಡಿದ್ದ ರಾಹುಲ್ ಗಾಂಧಿಗೆ, ಈಗ ಕೇಂದ್ರ ಸರಕಾರ ‘ತೇಜಸ್’ ಯುದ್ಧ ವಿಮಾನವನ್ನು ಖರೀದಿಸಲು 48000 ಕೋಟಿಯ ಹಣವನ್ನು ನೀಡಿರುವ
ಬಗ್ಗೆ ಮಾತನಾಡುವುದಿಲ್ಲ.

ಈತನ ಬಾಯಿಗೆ ಈಗ ಫೆವಿಕಾಲ್ ಅಂಟಿಸಿಕೊಂಡು ಮತ್ತೊಂದು ಸುಳ್ಳನ್ನು ನಿಜ ಮಾಡುವ ಯತ್ನದಲ್ಲಿರುತ್ತಾನೆ. ಜಗತ್ತಿನಲ್ಲಿ ‘ತೇಜಸ್’ ಯುದ್ಧ ವಿಮಾನವನ್ನು ಮೀರಿಸುವ ನೂತನ ತಂತ್ರಜ್ಞಾನವಿರುವ ಯುದ್ಧ ವಿಮಾನಗಳಿದ್ದರೂ ಸಹ ‘ಆತ್ಮನಿರ್ಭರ ಭಾರತ’ ಅಡಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಒಪ್ಪಂದವನ್ನು ಮಾಡಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ. ‘ಅನಿಲ್
ಅಂಬಾನಿ’ ಕಂಪನಿಗೆ ‘ರಫೆಲ್‌’ ಯುದ್ಧ ವಿಮಾನದ ಸಣ್ಣದೊಂದು ಗುತ್ತಿಗೆಯನ್ನು ಫ್ರೆಂಚ್‌ ಕಂಪನಿಯು ನೀಡಿದಾಗ ಇದೇ ರಾಹುಲ್ ಗಾಂಧಿ, ಅಂಬಾನಿಯ ಗುಮ್ಮವನ್ನು ಜನರಿಗೆ ತೋರಿಸಿ ಗೆಲ್ಲಬೇಕೆಂದಿದ್ದ, 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರದ ವಿರುದ್ಧ ಸುಳ್ಳು ಹೇಳಿ ಚುನಾವಣೆ ಗೆದ್ದಂತೆಯೇ 2004ರಲ್ಲಿ ಪಟ್ಟಂಥ ಶ್ರಮವೆಲ್ಲವೂ ವ್ಯರ್ಥವಾಯಿತು.

‘ಜೆ.ಎನ್.ಯು’ ವಿಶ್ವವಿದ್ಯಾಲಯದ ಕಮ್ಯುನಿಸ್ಟ್ ‘ಪಂಟರ್’ಗಳು ಚೀನಾ ದೇಶದ ಬಂಡವಾಳವು ಭಾರತದ ಕಂಪನಿಗಳಲ್ಲಿ ಹೂಡಿಕೆ ಯಾದರೆ ಒಂದು ಮಾತನ್ನೂ ಆಡುವುದಿಲ್ಲ, ಆದರೆ ನಮ್ಮದೇ ದೇಶದ ಉದ್ಯಮಿ ‘ಅಂಬಾನಿ’ ಯಾವುದಾದರೊಂದು ನೂತನ ವ್ಯವಹಾರವನ್ನು ಶುರುಮಾಡಿದರೆ ಸಾಕು, ಅಲ್ಲಿನ ಕಮ್ಯುನಿಸ್ಟ್ ಬೆಂಬಲಿತ ಗಂಡಸರೆಲ್ಲರೂ ಹೆಂಗಸರ ರೀತಿಯಲ್ಲಿ ಮೇಕ್ ಅಪ್ ಮಾಡಿಕೊಂಡು ‘ಗಾಂಜಾ’ ಸೇದಿಕೊಂಡು ಚಿತ್ರ ವಿಚಿತ್ರವಾಗಿ ಪ್ರತಿಭಟನೆ ಮಾಡುತ್ತಾರೆ.

ಹೆಣ್ಣು ದೆವ್ವದಂತೆ ಕಾಣುವ ಕಮ್ಯುನಿಸ್ಟ್ ಪೋಷಿತ ಪತ್ರಕರ್ತೆ ‘ಅರುಂಧತಿ ರಾಯ’ ಚೀನಾದ ಬಂಡವಾಳದ ಬಗ್ಗೆ ಒಂದು ಮಾತನ್ನೂ ಆಡುವುದಿಲ್ಲ, ಆಡಿದರೆ ಅವಳಿಗೆ ಚೀನಾದಿಂದ ಬರುತ್ತಿರುವ ‘ರೋಲ್ ಕಾಲ’ ನಿಂತು ಹೋಗುತ್ತದೆ. ವಿಶಾಖಪಟ್ಟಣಂ
ನಲ್ಲಿರುವ ಚೀನಾ ದೇಶದ ‘ಕ್ಸಿಯೋಮಿ’ ಕಂಪನಿಯ ಬಗ್ಗೆ ಒಂದು ದಿವಸವು ತುಟಿ ಬಿಚ್ಚಿಲ್ಲ, ಸಾವಿರಾರು ಕೋಟಿಯ
ಬಂಡವಾಳವು ಚೀನಾ ದೇಶದಿಂದ ಈ ಕಂಪನಿಗೆ ಹರಿದು ಬಂದಾಗ ಇಲ್ಲದ ಖಾಸಗೀಕರಣದ ಕಿಚ್ಚು ಈಗ ‘ಅಂಬಾನಿ’
‘ಅದಾನಿ’ಯ ವಿಚಾರದಲ್ಲಿ ರಾತ್ರೋ ರಾತ್ರಿ ಎದ್ದು ಬರುತ್ತದೆ.

ಇವರಿಬ್ಬರ ಹೆಸರನ್ನು ಹೇಳಿಕೊಂಡು ರೈತರ ಭಾವನೆಗಳ ಜತೆ ಆಟವಾಡಿದರೆ ತಮ್ಮ ಬೇಳೆ ಬೇಯುತ್ತದೆಯೆಂಬ ಆತ್ಮವಿಶ್ವಾಸ ಇವರಲ್ಲಿ ಬಹಳಷ್ಟಿದೆ. ಪಂಜಾಬಿನ ರೈತರು ಪ್ರತಿಭಟನೆಯಲ್ಲಿ ಬಳಸುತ್ತಿದ್ದಂಥ ಐಷಾರಾಮಿ ಕಾರುಗಳನ್ನು ನೋಡಿದರೆ, ಇವರಿಗೆ ಅದ್ಯಾವ ಮಟ್ಟದ ಹಣ ಬೆಂಬಲವನ್ನು ಚೀನಾ ದೇಶ ಮಾಡಿದೆಯೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಚೀನಾ ದೇಶದ ಕಂಪನಿ ಯಾದ ‘”ZTE’ D’ ಭಾರತದಲ್ಲಿ 5ಜಿ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಂಡು ಸಾವಿರಾರು ಕೋಟಿಯ ವ್ಯವಹಾರ ಮಾಡುವ ತವಕದಲ್ಲಿತ್ತು, ನರೇಂದ್ರ ಮೋದಿ ಯಾವಾಗ ಈ ಕಂಪನಿಗೆ 5ಜಿ ತಂತ್ರಜ್ಞಾನದ ಹಕ್ಕನ್ನು ನೀಡಬಾರದೆಂದು ನಿರ್ಧರಿಸಿ ದರೋ ಅಂದೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ ಟ್ರಂಪ್ ಸಹ ಅಮೆರಿಕಾದಲ್ಲಿ ಈ ಕಂಪನಿಗೆ ನಿರ್ಬಂಧ ಹೇರಿದ್ದರು.

ಅತ್ತ ‘ಇಂಗ್ಲೆಂಡ್ ’ನಲ್ಲಿಯೂ ಸಹ ಈ ಚೀನಾ ಕಂಪನಿಗೆ ನಿರ್ಬಂಧ ಹೇರಲಾಗಿತ್ತು. ಈ ನಿರ್ಬಂಧ ಹೇರಿದ ಕೇವಲ ಇಪ್ಪತ್ತು
ದಿನಗಳಲ್ಲಿ ಭಾರತದಲ್ಲಿ ರೈತರ ಹೆಸರಿನಲ್ಲಿ ಇದ್ದಕಿದ್ದಂತೆಯೇ ಪ್ರತಿಭಟನೆಯು ಹೆಚ್ಚಾಗುತ್ತದೆ, ದೇಶದೊಳಗೆ ಅರಾಜಕತೆಯನ್ನು ಸೃಷ್ಟಿಸುವ ಸಲುವಾಗಿ ಚೀನಾ ದೇಶವೇ ಈ ಕೆಲಸವನ್ನು ಮಾಡಿರಬಹುದೆಂದು ಹಲವರು ಹೇಳುತ್ತಿದ್ದಾರೆ.

ಅವರ ತಾಳಕ್ಕೆ ತಕ್ಕಂತೆ ಕುಣಿಯಲು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪೋಷಿತ ಅಡಕಸಬಿಗಳು ಸದಾ ತಯಾರಾಗಿರುತ್ತಾರೆ. ಅವರೆಲ್ಲರೂ ರೈತ ಪ್ರತಿಭಟನೆ ಯಲ್ಲಿ ಕೂರುತ್ತಾರೆ. ದೇಶದಾದ್ಯಂತ ರೈತರ ಹೆಸರಿನಲ್ಲಿ ಸುಳ್ಳು ಸುದ್ದಿಯನ್ನು ಹರಡಿಸಲು ಮತ್ತದೇ ‘ಅಂಬಾನಿ’ ಹಾಗೂ ‘ಅದಾನಿ’ಯ ಗುಮ್ಮವನ್ನು ತೋರಿಸುತ್ತಾರೆ. ಒಟ್ಟಿನಲ್ಲಿ ನರೇಂದ್ರ ಮೋದಿಯವರ ವಿರುದ್ಧ ನೇರವಾಗಿ ಹೋರಾಡಲಾಗದೆ ‘ಅಂಬಾನಿ’ಯ ಗುಮ್ಮವನ್ನು ಪ್ರತಿಯೊಂದು ವಿಚಾರದಲ್ಲಿಯೂ ಮುಂದೆ ತರುತ್ತಿರುತ್ತಾರೆ. ಅವರ
ಹೆಸರನ್ನು ತರದಿದ್ದರೆ ಇವರಿಗೆ ತಿಂದಂತಹ ಅನ್ನ ಜೀರ್ಣವಾಗುವುದಿಲ್ಲ.

Leave a Reply

Your email address will not be published. Required fields are marked *

error: Content is protected !!