Sunday, 8th September 2024

ಜೂಜಾಟದ ವ್ಯಸನದಿಂದ ಹೊರಬನ್ನಿ

ಪ್ರಚಲಿತ

ಪ್ರಕಾಶ್ ಶಾನುಬೋಗ

prakasha.shanbog@gmail.com

ಹೆಚ್ಚುವರಿ ಹಣ ಅಥವಾ ವಸ್ತು ಗೆಲ್ಲುವ ಪ್ರಾಥಮಿಕ ಉದ್ದೇಶದೊಂದಿಗೆ ಅನಿಶ್ಚಿತ ಫಲಿತಾಂಶದೊಂದಿಗೆ ಹಣವನ್ನು ಬಾಜಿ ಕಟ್ಟಿ ಅದೃಷ್ಟವನ್ನು ಪರೀಕ್ಷಿಸಿಕೊಳ್ಳುವು ದನ್ನು ಜೂಜಾಟ ಎನ್ನುತ್ತಾರೆ. ದುರದೃಷ್ಟವಶಾತ್ ಜೂಜಾಟವು ಒಂದು ಪ್ರಮುಖ ಅಂತಾರಾಷ್ಟ್ರೀಯ ವಾಣಿಜ್ಯ ಚಟುವಟಿಕೆಯಾಗಿದ್ದು, ಕಾನೂನುಬದ್ಧ ಜೂಜಾಟದ ಮಾರುಕಟ್ಟೆಯೇ 600 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ಕುದುರೆ ರೇಸಿಂಗ್, ಲಾಟರಿಗಳು, ಬಿಂಗೊ, ಬಿಲಿಯರ್ಡ್ಸ್ ಮೇಲೆ ಬೆಟ್ಟಿಂಗ್, ಇಸ್ಪೀಟ್ ಆಟಗಳು (ಪೋಕರ್, ಬ್ಲ್ಯಾಕ್ ಜಾಕ್), ಕ್ರೀಡಾ ಬೆಟ್ಟಿಂಗ್, ಕ್ಯಾಸಿನೊ ಆಟಗಳು (ಸ್ಲಾಟ್ ಯಂತ್ರಗಳು, ರೂಲೆಟ್, ಕೆನೊ) ರೂಢಿ ಯಲ್ಲಿರುವ ಸಾಮಾನ್ಯ ಜೂಜು ಚಟುವಟಿಕೆಗಳು, ಇವುಗಳಲ್ಲಿ ಕೆಲವಂತೂ ಶತಮಾನಗಳಿಂದ ರೂಡಿಯಲ್ಲಿವೆ. ಅನಧಿಕೃತ ಗುಂಪುಗಳ ಚೀಟಿ (ಚಿಟ್-ಫಂಡ್) ಚಟುವಟಿಕೆಯು ಸಹ ಒಂದು ರೀತಿಯಲ್ಲಿ ಜೂಜು ಆಗಿದೆ ಮತ್ತು ಅನೇಕರು ಈ ಚೀಟಿ ವ್ಯವಹಾರ ದಿಂದ ಹಣ ಕಳೆದುಕೊಂಡು ಹಾಳಾಗಿದ್ದಾರೆ. ಅನಧಿಕೃತ ಎನ್ನುವ ಭಯದಿಂದ ಬಹಳಷ್ಟು ಚೀಟಿ ಮೋಸಗಳ ದೂರುಗಳು ಪೋಲಿಸರನ್ನು ತಲುಪುವುದಿಲ್ಲ, ತಲುಪಿದ ಬಹಳಷ್ಟು ದೂರುಗಳಿಗೆ ಪುರಾವೆಗಳಿಲ್ಲದೆ ಪ್ರಕರಣಗಳು ಮುಚ್ಚಿಹೋಗುವುವು.

ವೆಬ್‌ಸೈಟ್‌ಗಳ ಮೂಲಕ ಅಂತರ್ಜಾಲದ ಯಾವುದೇ ಚಟುವಟಿಕೆಗಳ ಮೇಲೆ ನಡೆಯುವ ಬೆಟ್ಟಿಂಗ್‌ಗಳನ್ನು ಆನ್‌ಲೈನ್ ಜೂಜಾಟ ಎಂದು ವ್ಯಾಖ್ಯಾನಿಸಬಹುದು. ಇದನ್ನು ಇಂಟರ್‌ನೆಟ್ ಜೂಜು ಅಥವಾ ಇ-ಜೂಜು ಎಂದು ಸಹ ಕರೆಯುತ್ತಾರೆ. ಸಾಮಾನ್ಯವಾಗಿ, ಬಾಜಿ ಹಣ ಮತ್ತು ಗೆದ್ದ ಹಣದ ವಹಿವಾಟು ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಅಥವ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಮಾಡುವ ಸೌಲಭ್ಯ ಈ ವೆಬ್ ಸೈಟ್‌ಗಳಲ್ಲಿರುತ್ತದೆ. 1990ರ ದಶಕದ ಅಂತ್ಯದಲ್ಲಿ ಆನ್‌ಲೈನ್ ಜೂಜು ಜನಪ್ರಿಯತೆ ಗಳಿಸಿತು. 1996ರಲ್ಲಿ ಕೇವಲ 15 ಇಂತಹ ವೆಬ್‌ಸೈಟ್‌ಗಳು ಇದ್ದವು, ಈಗ ಇಂತಹ ಸಾವಿರಾರು ವೆಬ್‌ಸೈಟ್‌ಗಳು ಅಸ್ತಿತ್ವದಲ್ಲಿವೆ.

ವೆಬ್ ಸೈಟ್‌ಗಳು ಈಗಾಗಲೇ ಹೇಳಿದ ಸಾಂಪ್ರದಾಯಿಕ ವಿವಿಧ ಜೂಜಾಟಗಳ ನೈಜತೆಯನ್ನು ಸಾವೇರ್  ಮೂಲಕ ಸೃಷ್ಟಿಸಿ ಜೂಜುಕೋರರಿಗೆ ಜೂಜು
ಅಡ್ಡಗಳಲ್ಲಿ ಸಿಗುವ ಅದೇ ರೋಮಾಂಚಕತೆಯನ್ನು,ಪ್ರಚೋದನೆಯನ್ನು ದೊರಕುವಂತೆ ಮಾಡುವುದರಲ್ಲಿ ಯಶಸ್ವಿಯಾಗಿವೆ ಮತ್ತು ನಿರಂತರವಾಗಿ ಹೊಸ
ಹೊಸ ಉಪಯುಕ್ತತೆಗಳನ್ನು, ಆಟಗಳನ್ನು ವೆಬ್ ಸೈಟ್‌ಗೆ ಸೇರಿಸುತ್ತಿವೆ. ನಾವು ನೋಡುತ್ತಿರುವ ಕಂಪ್ಯೂಟರ್ ಯುಗವು ಮುಂದುವರಿಯುತ್ತಿದ್ದಂತೆ, ಎಲ್ಲವೂ ಡಿಜಿಟಲ್ ಆಗುತ್ತಿದೆ.

ಕೋವಿಡ್ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, ಜನರು ಹೊರಗೆ ಹೋಗಿ ನಿಜವಾದ ಕ್ಯಾಸಿನೊಗಳಲ್ಲಿ, ಇಸ್ಪೀಟ್ ಅಡ್ಡಗಳಲ್ಲಿ, ಕುದುರೆ ಜೂಜು ಅಡ್ಡಗಳಲ್ಲಿ ಬಾಜಿ ಆಡುವ ಸೌಲಭ್ಯಗಳು ಕಡಿಮೆ ಅಥವಾ ಇಲ್ಲವೇ ಆಯಿತು. ಇದು ಆನ್‌ಲೈನ್ ಜೂಜು ಮತ್ತಷ್ಟು ಜನಪ್ರಿಯವಾಗಲು ಕಾರಣವಾಯಿತು. ಆನ್‌ಲೈನ್ ಜೂಜಾಟದಲ್ಲಿ ಜನರು ನೈಜ ಅಥವಾ ನಕಲಿ ಹಣದಲ್ಲಿ ಆಡಬಹುದಾದ ಸೌಲಭ್ಯಗಳು ಲಭ್ಯವಿದೆ. ಆನ್‌ಲೈನ್ ಜೂಜಿನ ವೆಬ್‌ಸೈಟ್‌ಗಳನ್ನು
ನಡೆಸುವುದು ಇಂದು ಬಹಳ ಲಾಭದಾಯಕ ವ್ಯವಹಾರವಾಗಿದೆ, ವಿಶ್ವಾದ್ಯಂತ ಅನೇಕ ಕಂಪನಿಗಳು ಇದರಲ್ಲಿ ತೊಡಗಿಕೊಂಡಿವೆ, ಅಗ್ರ ಸ್ಥಾನದಲ್ಲಿರುವ
ಅಂತಹ ಐದು ಕಂಪನಿಗಳೆಂದರೆ ಲಾಸ್ ವೇಗಾಸ್ ಸ್ಯಾಂq, ಎವಲ್ಯೂಷನ್ ಗೇಮಿಂಗ್, -ಟರ್ ಎಂಟರ್‌ಟೇನ್ಮೆಂಟ್, ಡ್ರಾ- ಕಿಂU, ಎಂಜಿಎಂ ರೆಸಾರ್ಟ್‌ಗಳು. ಈ ಕಂಪನಿಗಳ ವಾರ್ಷಿಕ ಆದಾಯವು 3 ಶತಕೋಟಿ ಡಾಲರ್ ಆಜುಬಾಜಿನಲ್ಲಿದೆ.

ಕರ್ನಾಟಕ ವಿಧಾನಸಭೆ 2021ರ ಸೆಪ್ಟೆಂಬರ್‌ನಲ್ಲಿ ಆನ್‌ಲೈನ್ ಜೂಜು ಸೇರಿದಂತೆ ರಾಜ್ಯದಲ್ಲಿ ಎಲ್ಲಾ ರೀತಿಯ ಜೂಜಾಟಗಳನ್ನು ನಿಷೇಽಸಲು ಕರ್ನಾಟಕ
ಪೊಲೀಸ್ ಕಾಯಿದೆ 1963ಕ್ಕೆ ತಿದ್ದುಪಡಿ ತರಲು ಮಸೂದೆಯೊಂದನ್ನು ಅಂಗೀಕರಿಸಿದೆ. ‘ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿ ಸಾಕಷ್ಟು ಜೂಜು
ಚಟುವಟಿಕೆ ಗಳು ನಡೆಯುತ್ತಿವೆ, ಈಗ ಇದನ್ನು ನಿಯಂತ್ರಿಸಬೇಕಾಗಿದೆ’ ಎಂದು ಹೊಸ ಮಸೂದೆಯನ್ನು ಮಂಡಿಸುವಾಗ ಗೃಹ ಸಚಿವರು ವಿಧಾನಸಭೆಯುಲ್ಲಿ ಹೇಳಿದರು.

ಈ ಮಸೂದೆಯು ಜೂಜನ್ನು ಜಾಮೀನು ರಹಿತ ಅಪರಾಧವನ್ನಾಗಿಸುತ್ತದೆ, ಈ ಮಸೂದೆಯಲ್ಲಿ ಇಂಟರ್‌ನೆಟ್ ಸಂಪನ್ಮೂಲಗಳ, ಮೊಬೈಲ್ ಆಪ್ ಗಳ ಬಳಕೆಯ ಮೂಲಕ ಮತ್ತು ತಂತ್ರಜ್ಞಾನ ಕಾಯಿದೆ, 2000 ರಲ್ಲಿ ವಿವರಿಸಿರುವ ಇತರೆ ಕಂಪ್ಯೂಟರ್ ಸಂಪನ್ಮೂಲಗಳ ಅಥವಾ ಯಾವುದೇ ಸಂವಹನ ಸಾಧನಗಳ ಬಳಕೆಯ, ಸೈಬರ್ ಸ್ಪೇಸ್‌ನ ಬಳಕೆಯ ಮೂಲಕ ಬಾಜಿ ಕಟ್ಟುವ ಎಲ್ಲ ಚಟುವಟಿಕೆಗಳನ್ನು ಜೂಜೆಂದು ಪರಿಗಣಿಸುತ್ತದೆ. ಈ ಕಾನೂನು ಎಷ್ಟರ ಮಟ್ಟಿಗೆ ಅನುಷ್ಠಾನ ಗೊಳ್ಳುವುದು ಮತ್ತು ಆನ್‌ಲೈನ್ ಜೂಜನ್ನು ಎಷ್ಟರ ಮಟ್ಟಿಗೆ ತಡೆಯುವುದು ಎಂಬುದನ್ನು ನಾವು ಕಾದು ನೋಡಬೇಕಾಗಿದೆ.

ಸಾಮಾಜಿಕ ಪರಿಣಾಮ ಕೆಲವು ಜನರಿಗೆ, ಜೂಜಾಟವು ನಿರುಪದ್ರವ ವಿನೋದವಾಗಿದೆ, ಆದರೆ ಸ್ವಯಂ ನಿಯಂತ್ರಣದ ಕೊರತೆ ಇರುವಂತವರಿಗೆ ಇದು ಚಟವಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಆನ್‌ಲೈನ್ ಆಗಿರಲಿ ಅಥವಾ ಆ-ಲೈನ್ ಆಗಿರಲಿ, ಜೂಜು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹಾನಿಕಾರಕ. ಈ ವ್ಯಸನಕ್ಕೊಳಗಾಗಿರುವವರು ಖಿನ್ನತೆ, ಮೈಗ್ರೇನ್ ತಲೆನೋವು, ಯಾತನೆ, ಕರುಳಿನ ಅಸ್ವಸ್ಥತೆಗಳು ಮತ್ತು ಇತರ ಆತಂಕ-ಸಂಬಂಽತ ಸಮಸ್ಯೆಗಳನ್ನು ಅನುಭವಿಸಬಹುದು. ಇತರ ವ್ಯಸನಗಳಂತೆ, ಜೂಜಾಟದ ಪರಿಣಾಮಗಳು ನಿರಾಶೆ ಮತ್ತು ಅಸಹಾಯಕತೆಯ ಭಾವನೆಗಳಿಗೆ ಕಾರಣವಾಗಬಹುದು.

ಭಾರತ ಆನ್‌ಲೈನ್ ಜೂಜು ಆಪರೇಟರ್‌ಗಳಿಗೆ ಚಿನ್ನದ ಗಣಿಯಾಗಿ ಕಾಣುತ್ತಿದೆ, ಇದಕ್ಕೆ ಕಾರಣಗಳ್ಯಾವುವೆಂದರೆ ಮಧ್ಯಮ ವರ್ಗದ ಆರ್ಥಿಕ ಬೆಳವಣಿಗೆ ಮತ್ತು ಅಂತರ್ಜಾಲವನ್ನು ಪ್ರವೇಶಿಸುವ ಜನರ ಘಾತೀಯ ಬೆಳವಣಿಗೆ. ಕಂಪ್ಯೂಟರ್ ಹೊಂದಿರುವ ಭಾರತಿಯರಲ್ಲಿ ಶೇ.೪೦ ಜನರು ಜೂಜಿನ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಾರೆ ಎಂದು ಅಂದಾಜಿಸಲಾಗಿದೆ. ದೀರ್ಘಕಾಲದಿಂದ ಭಾರತದಲ್ಲಿ ಬೆಟ್ಟಿಂಗ್ ಅನ್ನು ನೈತಿಕವಾಗಿ ಮತ್ತು ಕಾನೂನುಬದ್ಧವಾಗಿ ಕೆಟ್ಟ ಚಟುವಟಿಕೆಯೆಂದು ಪರಿಗಣಿಸಲಾಗಿದೆ, ಆದರೆ ಆನ್‌ಲೈನ್ ಜೂಜಾಟವನ್ನು ಕಾನೂನುಬಾಹಿರ ಚಟುವಟಿಕೆಯನ್ನಾಗಿಸುವ ಯಾವುದೇ ಬಲವಾದ ಕಾನೂನುಗಳು ಇದುವರೆಗೆ ಇರಲಿಲ್ಲ, ಬೆಟ್ಟಿಂಗ್ ಆಪರೇಟರ್‌ಗಳು ಈ ಲೋಪದೋಷವನ್ನು ಬಳಸಿ ಭಾರತೀಯರನ್ನು ಬಹುತೇಕ ಎಲ್ಲದರ ಮೇಲೆ ಬಾಜಿ ಕಟ್ಟುವಂತೆ ಮಾಡುತ್ತಲಿದ್ದಾರೆ.

ಕಾಯಿದೆ ‘ಸಾರ್ವಜನಿಕ ಜೂಜು ಕಾಯಿದೆ ೧೮೬೭’ ಅಸ್ತಿತ್ವದಲ್ಲಿದ್ದರು ನಿಷ್ಪ್ರಯೋಜಕವಾಗಿದೆ. ವಿಶ್ವಾದ್ಯಂತ ಸುಮಾರು ೪೦ ವಿವಿಧ ದೇಶಗಳಲ್ಲಿ ಜೂಜು ಕಾನೂನುಬದ್ಧವಾಗಿದೆ, ಖಿಖಅ ಜೂಜಾಟ ವನ್ನು ನಿಷೇಽಸಲು ಪ್ರಯತ್ನಮಾಡುತ್ತಲೇ ಇದೆ, ಆದರೆ ಅನೇಕ ಪಟ್ಟಭದ್ರ ಹಿತಾಸಕ್ತಿಗಳು ಯಾವಾಗಲೂ ಆ ದೇಶದ ನೀತಿ ನಿರೂಪಕರ ಭಾಗವಾಗರುವುದರಿಂದ ಈ ದಿಟ್ಟಿನಲ್ಲಿ ಯಶಸ್ಸು ಸಾಧಿಸಿಲ್ಲ. ಜೂಜಾಟದೊಂದಿಗೆ ಕ್ರಿಮಿನಲ್‌ಗಳ ಸಂಬಂಧ ಅತಿ ಸಾಮಾನ್ಯವಾಗಿ ರುವುದರಿಂದ ಜೂಜಾಟವು ಅಪಾಯಗಳಿಂದ ಕೂಡಿರುತ್ತದೆ ಎಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ, ಆನ್‌ಲೈನ್ ಜೂಜಾಟವು ಕೆಲ ಅನನ್ಯ ಅಪಾಯಗಳನ್ನು ಒಳಗೊಂಡಿದ್ದು ಸಾಂಪ್ರದಾಯಿಕ ಜೂಜಾಟಕ್ಕಿಂತ ಹೆಚ್ಚು ಅಪಾಯ ಗಳನ್ನು ಒಳಗೊಂಡಿದೆ.

ಜನರು ತಮ್ಮ ಸ್ವಂತ ಮನೆಗಳಲ್ಲಿ ಅಥವಾ ಕಚೇರಿಗಳಲ್ಲಿ ಆರಾಮವಾಗಿ ಕುಳಿತು ಆನ್‌ಲೈನ್ ಜೂಜಾಟದಲ್ಲಿ ತೊಡಗಬಹುದು, ರಹಸ್ಯವಾಗಿ, ಎಲ್ಲಿಯಾದರೂ ಮತ್ತು ಎಡೆಯು ಇದರಲ್ಲಿ ತೊಡಗಬಹುದು. ಅನೇಕ ಹದಿಹರೆಯದವರು ಮತ್ತು ಯುವಕರು ಇಂಟರ್‌ನೆಟ್ ಜೂಜಿನ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಉಚಿತ ಆಟಗಳಿಂದ ಪ್ರಾರಂಭಿಸಿ ಮುಂದೆ ವ್ಯಸನಿಗರಾಗಿ ಕೊನೆಗೊಳ್ಳುತ್ತಾರೆ. ಆನ್‌ಲೈನ್ ಜೂಜಾಟದಲ್ಲಿ ಹಣ-ಹಿಂತಿರುಗಿಸುವ ಖಾತರಿಗಳು ವಾಸ್ತವಿಕವಾಗಿ ಇರುವುದಿಲ್ಲ, ಮತ್ತು ಅನೇಕ ವೇಳೆ, ವಯಸ್ಸಿನ ಪರಿಶೀಲನೆ ತಪಾಸಣೆ ಬೇಕೆಂತಲೆ ಸಭಲವಾಗಿರುವುದಿಲ್ಲ, ಹೀಗಾಗಿ ಯಾವುದೇ ವಯಸ್ಸಿನ ಮಕ್ಕಳು ಸುಲಭವಾಗಿ ಆನ್‌ಲೈನ್ ಜೂಜಾಟಕ್ಕೆ ಬಲಿಪಶುಗಳಾಗಬಹುದು.

ಆನ್‌ಲೈನ್ ಜೂಜಾಟದ ಸಾ-ವೇರ್ ನ್ಯಾಯವಾಗಿ ಆಟದ ಪಲಿತಾಂಶ ನೀಡುತ್ತಿದೆ, ನಿಮ್ಮ ಅದೃಷ್ಟದ ಮೇಲೆ ಫಲಿತಾಂಶ ಬರುತ್ತಿದೆ ಎಂದು ಖಾತರಿ
ಪಡಿಸಿಕೊಳ್ಳುವ ಮಾರ್ಗಗಳು ಬಹಳ ಕಡಿಮೆ, ಜೂಜಾಟದ ವೆಬ್‌ಸೈಟ್ ಅಪರೇಟರುಗಳು ತಮಗೆ ಅನುಕೂಲವಾಗುವಂತೆ ಬಾಜಿ ಕಟ್ಟುವವರು ಯಾವಾಗಲು ಹಣವನ್ನು ಕಳೆದು ಕೊಳ್ಳುವಂತೆ ಸಾಫ್ಟವೇರನ್ನು ತಿರುಚಿರಲು ಸಾಧ್ಯ. ಆನ್‌ಲೈನ್ ಜೂಜನ್ನು ಬಹುತೇಕ ದೇಶಗಳು ನಿಷೇಧಿಸಿವೆ.

ಆದರೆ ಅವುಗಳನ್ನು ಅನುಮತಿಸಿರುವದೇಶಗಳಲ್ಲಿ ಸಾಮಾನ್ಯವಾಗಿ ನಿಯಂತ್ರಣ ಉತ್ತಮ ವಾಗಿಲ್ಲ. ಹೀಗಾಗಿ, ಜೂಜನ್ನು ಯಾರು ನಿಜವಾಗಿ ನಿರ್ವಹಿಸುತ್ತಿದ್ದಾರೆ, ಗೆಲ್ಲುವ ಮಾರ್ಗಗಳು ನಿಖರವಾಗಿವೆಯೇ ಎಂದು ತಿಳಿದುಕೊಳ್ಳುವುದು ಅಥವಾ ಮೋಸ ಹೋದರೆ ಕಾನೂನು ಕ್ರಮ ಕೈಗೊಳ್ಳುವುದು ಕಷ್ಟ ಅಥವಾ ಅಸಾಧ್ಯವಾಗ ಬಹುದು. ಕಂಪ್ಯೂಟರ್, ಮೊಬೈಲ್ ಎಲ್ಲರ ಕೈಗಳಲ್ಲಿ ಲಭ್ಯವಿರುವ ಈ ಕಾಲದಲ್ಲಿ, ನಿಮ್ಮ ಮನೆಯ ಮಕ್ಕಳು, ಹರೆಯದವರು ಕಂಪ್ಯೂಟರ್, ಮೊಬೈಲ್
ಮೂಲಕ ಏನು ಮಾಡುತ್ತಿzರೆ, ಯಾವ ಯಾವ ವೆಬ್‌ಸೈಟ್‌ಗಳಿಗೆ ಭೇಟಿಕೊಡುತ್ತಿzರೆ ಎಂಬುದರ ಮೇಲೆ ನಿಗಾ ಇಡಿ, ಅವರಿಗೆ ಸೂಕ್ತವಾದ ಮಾರ್ಗದರ್ಶನ ಒದಗಿಸಿ.

ಇನ್ನು ಜೂಜು ವ್ಯಸನಿಗರಿಗೆ: ಜೂಜಿನಿಂದ ಹೊರಬರುವನೆಂದು ನಿರ್ಧರಿಸಲು ನಿಮಗೆ ಮಾತ್ರ ಸಾಧ್ಯ, ನಿಮ್ಮ ಹಿತೈಷಿಗಳು ನಿಮಗೆ ಹೊರಗೆ ಬರಲು ಸಹಾಯ ಮಾಡಬಲ್ಲರು, ಆದರೆ ನಿರ್ಧಾರ ನಿಮ್ಮದು. ವ್ಯಸನದಿಂದ ಹೊರಬರಲು ತಜ್ಞರ ಕೆಲವು ಸಲಹೆಗಳು ಈ ರೀತಿ ಇವೆ. ಯಾವುದಾದರು ಹವ್ಯಾಸದಲ್ಲಿ ನಿಮ್ಮನ್ನು
ತೊಡಗಿಸಿಕೊಳ್ಳಿ, ಅಥವಾ ಮರೆತುಹೋದ ನಿಮ್ಮ ಹಳೆಯ ಹವ್ಯಾಸವನ್ನು ಪುನರಾಂಭಿಸಿ ನಿಮ್ಮ ಹಣವು ನಿಮ್ಮ ಕೈಗೆ ಸುಲಭವಾಗಿ ನಿಲುಕದಂತೆ ಮಾಡಿಕೊಳ್ಳಿ, ನಿಮ್ಮ ಬ್ಯಾಂಕಿನ ಖಾತೆಯ, ಕ್ರೆಡಿಟ/ಡೆಬಿಟ್ ಕಾರ್ಡ್‌ಗಳ ನಿಯಂತ್ರಣವನ್ನು ನಿಮ್ಮ ಸಂಗಾತಿಯ ಅಥವಾ ಹಿತೈಷಿಗಳಿಗೆ ವರ್ಗಾಯಿಸಿ.

ಮನಸ್ಸಿನ ಒತ್ತಡ ಹೋಗಲಾಡಿಸುವಂತಹ ಚಟುವಟಿಕೆಗಳಲ್ಲಿ ಅಂದರೆ ಧ್ಯಾನ, ಯೋಗ, ಕ್ರೀಡೆ, ಮುಂತಾದಂತುವುಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಜೂಜು ಹಣಕಳೆದುಕೊಳ್ಳುವ ಚಟುವಟಿಕೆ ಎಂದು ನಿಮಗೆ ನೀವೇ ಆಗಾಗ ಮನಸ್ಸಿನಲ್ಲಿ ಹೇಳಿಕೊಳ್ಳಿ. ನಿಮಗೆ ತಿಳಿದ ಹಿರಿಯರಲ್ಲಿ ನಿಮ್ಮ ವ್ಯಸನದ ಬಗ್ಗೆ ಮುಕ್ತವಾಗಿ ಚರ್ಚಿಸಿ ಅವರ ಸಲಹೆಗಳಿಗೆ ಕಿವಿಕೊಡಿ.

ಕೊನೆಯ ಕಿವಿ ಮಾತು: ಜೂಜು ಇರುವುದು ಜೂಜುಕೋರರನ್ನು ಉದ್ದಾರ ಮಾಡಲಿಕ್ಕಲ್ಲ. ಹೆಚ್ಚಿನ ಜೂಜುಕೋರರು ಹಣವನ್ನು ಕಳೆದುಕೊಳ್ಳುತ್ತಾರೆ, ಏಕೆಂದರೆ ಜೂಜಿನ ಅಡ್ಡಗಳು ಎಂದಿಗೂ ಜೂಜುಕೋರರು ಹಣ ಗೆಲ್ಲಲಿ ಎಂದು ಮಾಡಿದ ಜಾಗಗಳಲ್ಲ, ಬದಲಾಗಿ ಅಡ್ಡವನ್ನು ನಡೆಸುವವರ ಲಾಭಕ್ಕಾಗಿ ಮಾಡಿದ ಜಾಗ ಗಳು. ಜೂಜಾಡುವವರು ಗಮನಾರ್ಹ ಮೊತ್ತವನ್ನು ಗೆದ್ದಾಗಲೂ ಸಹ ಜೂಜಾಡುವ ಪ್ರಚೋದನೆ ಹೆಚ್ಚಾಗಿ ಮತ್ತೆ ಎಲ್ಲವನ್ನೂ ಕಳೆದುಕೊಳ್ಳುವವರೆಗೂ
ಜೂಜನ್ನು ಮುಂದುವರಿಸುವ ಸಾಧ್ಯತೆಗಳು ಹೆಚ್ಚು

Leave a Reply

Your email address will not be published. Required fields are marked *

error: Content is protected !!