Friday, 18th October 2024

ಅವನೊಬ್ಬ ಇರ‍್ತಾನೆ, ನಿಮ್ಮ ಕಂಡರ ಆಗದವನು !

ಪರಿಶ್ರಮ

parishramamd@gmail.com

ನೀವು ಹೀರೋ ಆಗಬೇಕಾದರೆವಿಲ್ಲನ್ ಇರಲೇಬೇಕು. ಶತ್ರುಗಳ ಸಂಖ್ಯೆ ಹೆಚ್ಚಾದಷ್ಟು ನಿನ್ನ ಹೀರೋಇಸ್ಮ್ ಜಗತ್ತಿಗೆ ಗೊತ್ತಾಗುತ್ತೆ. ದುಷ್ಮನ್ ಕಹಾ ಹೇ ಅಂದರೆ, ಊರ್ ತುಂಬಾ ಹೇ ಎನ್ನುವ ಜಮಾನದಲ್ಲಿ ನಾವಿರೋದು.

ಏನಾದರು ಸಾಧಿಸಬೇಕೆಂದು ಹೊರಟರೆ ಮೊದಲು ಬೇಕಿರುವ ಯಶಸ್ಸಿನ ಮಂತ್ರ, ಶತ್ರುಗಳ ವಿಮರ್ಶೆಯನ್ನ ನಿಭಾಯಿಸುವ ಗುಣ. ನಂತರ ಪರಿಶ್ರಮ, ತ್ಯಾಗವೆಲ್ಲ, ಶತ್ರುಗಳನ್ನ ನಿಭಾಯಿಸುವ ಗುಣ, ಬೆಳೆಸಿಕೊಳ್ಳಲಿಲ್ಲವೆಂದರೆ ನಿಮ್ಮೂರಿನ ಗಲ್ಲಿಗೆ ನೀವು ಸೀಮಿತರಾಗಿಬಿಡ್ತೀರಿ. ಯಶಸ್ಸು ಅಷ್ಟು ಸುಲಭವಾಗಿ ಯಾರಿಗೂ ಒಲಿಯುವುದಿಲ್ಲ. ಓದಿದ ತಕ್ಷಣ ಯಶಸ್ಸು ಸಿಗುವಂತಿದ್ದರೆ ಇವತ್ತು ಪ್ರತಿ ಶಾಲೆಯ ಟಾಪರ್‌ಗೂ ನೊಬೆಲ್ ಪ್ರಶಸ್ತಿ ಕೊಡಬೇಕಾಗಿತ್ತು. ಬರೆದ ತಕ್ಷಣ ಯಶಸ್ಸು ಒಲಿಯುವ ಆಗಿದ್ದಿದ್ದರೆ ಗುಮಾಸ್ತ ನಿಗೂ ಐಎಎಸ್ ಪದವಿ ಒಲಿಯ ಬೇಕಿತ್ತು. ಓದು, ಬರಹ-ವ್ಯಕ್ತಿ Raw materials.

ನಿಮ್ಮ ಧೈರ್ಯ, ವಿಕೃತ ಮನಸ್ಸುಗಳನ್ನ ಎದುರಿಸುವ ಸಾಮರ್ಥ್ಯವೇ Out put. ಅವಮಾನವಾದಾಗ, ನಂಬಿದವರೆಲ್ಲಾ at a time ದ್ರೋಹ ಬಗೆದಾಗ, ಇಷ್ಟಪಟ್ಟವರೆಲ್ಲ ನಿನ್ನ ಮುಖ ಕಂಡರೆ ಆಗದವರಂತೆ ವರ್ತಿಸಿದಾಗ, ಸಹನೆಯಿಂದ ವರ್ತಿಸಬೇಕು. Don’t
loose patience ಯಾವತ್ತಿದ್ದರೂ ಕೋಪ ಸೋಲುತ್ತೆ, ಸಹನೆ ಗೆಲ್ಲುತ್ತೆ. ಕಾರಣ ಒಳ್ಳೆತನ ಗೆಲ್ಲಬೇಕು. ಇಷ್ಟರ ನಡುವೆ ಅವನ್ನೊಬ್ಬ ಇರ‍್ತಾನೆ, ನಿಮ್ಮ ನಂಬಿಕೆಗೆ,ವಿಶ್ವಾಸಕ್ಕೆ ಜತೆ ಯಲ್ಲಿ ಇದ್ದೇ ದ್ರೋಹ ಮಾಡುವವನು. ಅವನೊಂದಿಗೆ ಎಚ್ಚರದಿಂದಿರಬೇಕು. ಬಡವ ನಾಗಿ ಹುಟ್ಟುವುದು ತಪ್ಪಲ್ಲ, ಬಡವನಾಗಿ ಸತ್ತರೆ ಅದು ತಪ್ಪು ಬಡತನ!

ವಿವರಣೆಗೆ ಸಿಗದ, ವಿವರಿಸಲು ಸಾಧ್ಯವಾಗದ ಅನುಭವಿಸಿದವನಿಗೆ ಮಾತ್ರ ಗೊತ್ತಿರುವ ಸಂಗತಿ. ಸಿನಿಮಾದಲ್ಲೋ, ಸೀರಿಯಲ್‌ ನಲ್ಲೋ, ಬಡತನದ ಬಗ್ಗೆ ಸೀನ್ ಬಂದ್ರೆ ನೋಡಿ ದಾನವೀರ ಶೂರರಂತೆ ಬಿಲ್ಡಪ್ ಕೊಡುವ ನಮಗೆ, ಮನೆಯ ಮುಂದೆ ಹಸಿದು ಬಂದವನಿಗೆ ಅನ್ನವಿಡಬೇಕೆಂಬ ಸೌಜನ್ಯವೂ ಇರುವುದಿಲ್ಲ. ಬಹಳಷ್ಟು ಮಂದಿಗೆ ಬಡತನವೆಂಬುದು ಶಾಪದಂತಾಗಿರುತ್ತದೆ.
ಶ್ರೀಮಂತರೆಲ್ಲಾ ಹಣದಲ್ಲಿ ಶ್ರೀಮಂತರಿರಬಹುದು ಆದರೆ ಗುಣದಲ್ಲಿ ಎಂದಿಗೂ ಬಡವನದ್ದೇ ಮೇಲುಗೈ. ಹಸಿದ ಹೊಟ್ಟೆ, ಹೊಡೆದ ಹೃದಯ, ಖಾಲಿ ಜೇಬು, ಮನುಷ್ಯನಿಗೆ ಸಾವಿರ ಪಾಠ ಕಲಿಸುತ್ತದೆ.

ಯಾವ ವಿಶ್ವವಿದ್ಯಾಲಯವೂ ನೀಡದ ಅನುಭವವೆಂಬ ಡಾಕ್ಟರೇಟನ್ನ ಕೊಡುತ್ತದೆ. ಬಡವನಿಗಾದರೂ ಶ್ರೀಮಂತನಾಗ ಬೇಕೆಂಬ ಕನಸ್ಸಿರುತ್ತದೆ. ಶ್ರೀಮಂತನಿಗೆ ಇರುವುದನ್ನ ಉಳಿಸಿಕೊಳ್ಳುವುದೇ ಸಾಹಸವಾಗಿರುತ್ತದೆ. ಬಡವನಿಗೆ ಪ್ರತಿದಿನ ಸಂಸಾರದ ರವನ್ನು ಸಾಗಿಸುವುದೇ ದೊಡ್ಡ ಸಂಗತಿಯಾದರೆ, ಶ್ರೀಮಂತನಿಗೆ ಹಾದಿ ತಪ್ಪಿದ ಯೋಚನೆಗಳನ್ನ ಸರಿ ದಾರಿಗೆ ತರುವುದೇ ದೊಡ್ಡ ಸವಾಲಾಗಿದೆ. ಹಾಗಾಗ ಕೇಳ್ತಿರ್ತಿವಿ ಬಡವನ ಮನೆ ಹುಡುಗ ರ‍್ಯಾಂಕ್ ಬಂದ, ಬಡವರ ಮನೆ ಹುಡುಗಿ ವಿಶ್ವವಿದ್ಯಾಲಯ ದಲ್ಲಿ ಚಿನ್ನದ ಪದಕ ಪಡೆದಳು, ಸ್ಲಮ್ ನಲ್ಲಿ ಬೆಳೆದ ಹುಡುಗ ಸಾಫ್ಟ್ ವೇರ್ ಇಂಜಿನಿಯರ್ ಆದ, ತಂದೆ-ತಾಯಿ ಇಲ್ಲದೆ ಬೆಳೆದ ಹುಡುಗ ಅದ್ಭುತವಾದ ಯಶಸ್ಸನ್ನ ಕಂಡಿದ್ದಾನೆ ಎನ್ನುವ ಸಂಗತಿಗಳನ್ನ ಕೇಳ್ತಾನೇ ಇರ್ತಿವಿ.

ಇವರೆಲ್ಲ ಯಶಸ್ಸಿಗೆ ಕಾರಣವೇನು ಗೊತ್ತಾ? ಅವರು ಹಾಕಿರುವ ಬಟ್ಟೆ ಹರಿದಿರಬಹುದು ಆದರೆ ಏಕಾಗ್ರತೆ ಎಂಬ ಅಸ ಗಟ್ಟಿಯಾಗೆ ಇರುತ್ತೆ. ಹೊಟ್ಟೆ ಖಾಲಿ ಇರಬಹುದು ಕಾನ್ವಿಟೆನ್ಸ್ ಕೆ.ಜಿ. ಗಟ್ಟಲೆ ಇರುತ್ತದೆ. ಸ್ಲಮ್ ನಲ್ಲಿ ಬೆಳದಿರಬಹುದು ಆದರೆ ಯೋಚನೆ ಮಾತ್ರ ಸ್ಲಿಮ್ಮಾಗೆ ಇರುತ್ತದೆ. ತಂದೆ-ತಾಯಿ ಇಲ್ಲದಿರಬಹುದು ಆದರೆ ಅವರ ಒಳ್ಳೆತನ ಗೆಲುವಿನ ಕಡೆ ದಾರಿ ತೋರಿಸುತ್ತಲೇ
ಇರುತ್ತದೆ.

ಆತನ ಹೆಸರು ವಿಜಯ್ ಸಿಂಗ್. ಹುಟ್ಟಿದ್ದು ಫಿಜಿ ದೇಶದಲ್ಲಿ 1963 ರಲ್ಲಿ ತಂದೆ ವಿಮಾನ ನಿಲ್ದಾಣದಲ್ಲಿ ಟೆಕ್ನಿಷಿ ಯನ್ ಆಗಿ ದ್ದರು. ಬಿಡುವಿನ ಸಮಯದಲ್ಲಿ ವಿಜಯ್ ಸಿಂಗ್‌ರ ತಂದೆ ಗಾಲ್ ಆಟದ ತರಬೇತಿ ನೀಡುತ್ತಿದ್ದರು. ತಂದೆಯ ಜತೆ ಗಾಲ್ ಮೈದಾನಕ್ಕೆ ಹೋಗುತ್ತಿದ್ದ ವಿಜಯ್ ಸಿಂಗ್ ಗಾಲ್‌ನ ಬಗ್ಗೆ ಆಸಕ್ತಿ ನಡೆಯಿತು. ಯಾವತ್ತಾದರೂ ಒಂದು ದಿನ ವಿಶ್ವ ಚಾಂಪಿಯನ್  ಆಗಲೇ ಬೇಕು ಎಂಬ ಕನಸು ಕಂಡ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಬಡತನದ ನಡುವೆ ಗಾಲ್ ಆಟಗಾರನಾಗುವುದು ಹೇಗೆ ಎಂಬ ಪ್ರಶ್ನೆ? ಏಕೆಂದರೆ ಗಾಲ್ ಶ್ರೀಮಂತರ ಆಟ. ಗಾಲ್ ಆಟಗಾರನಾಗಬೇಕೆಂಬ ಅವನ ಕನಸು ದಿನದಿಂದ ದಿನಕ್ಕೆ ಹೆಚ್ಚಾ ಯಿತು.

ಏನಾದರೂ ಮಾಡಿ ಗಾಲ್ ಆಟ ಕಲಿತು ಚಾಂಪಿಯನ್ ಆಗಲೇಬೇಕು ಎಂಬ ಉದ್ದೇಶದಿಂದ ಗಾಲ್ ಕೋಸ್‌ನಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡ. ಕೂಲಿ ಕೆಲಸ ಮಾಡುತ್ತಲೇ ಶ್ರದ್ಧೆಯಿಂದ ಆಟವನ್ನು ಗಮನಿಸಿದ ಹೀಗೇ ಇದ್ದರೆ ಕೂಲಿಯವನಾಗೇ ಉಳಿದು ಹೋಗುತ್ತೇನೆ ಎಂದು ಭಾವಿಸಿದ ಆತ ಒಂದು ದಿನ ಮಲೇಷ್ಯಾಗೆ ವಲಸೆ ಹೋದ. ಹಗಲೆಲ್ಲಾ ಗಾಲ್ ಪ್ರಾಕ್ಟೀಸ್, ರಾತ್ರಿಯಲ್ಲಾ ಪ್ಲಾಟ್ಫಾರ್ಮ್. ಮಾಲೇಷ್ಯಾದಲ್ಲೇ ನೆಲೆಸಬೇಕೆಂದು ಅರ್ಜಿ ಹಾಕಿದ. ಆದರೆ ಅವನ ಅರ್ಜಿಯನ್ನು ಆ ದೇಶ ನಿರಾಕರಿಸಿತು.

ಕಂಡವರಿಗೆಲ್ಲಾ ಕೈಮುಗಿದ, ಕಾಲು ಹಿಡಿದ, ಕಾಡಿ ಬೇಡಿದ ಆದರೂ ಪ್ರಯೋಜನವಾಗಲಿಲ್ಲ. ಕೊನೆಗೂ ಹೇಗೋ ಕಷ್ಟಪಟ್ಟು ಅಮೆರಿಕ ಸೇರಿಕೊಂಡ. ಈತನ ಸಾಮರ್ಥ್ಯವನ್ನು ಗಮನಿಸಿದ ಕೆಲವರು ಸಹಾಯ ಹಸ್ತ ಚಾಚಿದರು. 1982ರಲ್ಲಿ ವೃತ್ತಪರ ಗಾಲ್ ಆಟಗಾರನಾಗಿ ಆಯ್ಕೆ ಯಾದ. ಆರ್ಶ್ಚಯವೆಂದರೆ ಯಾವ ಮಲೇಷ್ಯಾ ಆತನ ಅರ್ಜಿಯನ್ನು ನಿರಾಕರಿಸಿತ್ತೋ ಅದೇ ದೇಶದಲ್ಲಿ ತನ್ನ ಮೊದಲ ಪದಕವನ್ನ ಗೆದ್ದ. 1988ರಲ್ಲಿ ನೈಜೀರಿಯಾದಲ್ಲಿ, 1989 ಐವೇರಿಕೋರ್ಸ್‌ನಲ್ಲಿ, 1990ರಲ್ಲಿ ಎಲ್ಬೋಸ್ ಓಪನ್‌ನಲ್ಲಿ ಮತ್ತು ಕಿಂಗ್ ಹಸನ್ ಟ್ರೋಫಿಯನ್ನ ಗೆದ್ದು ಜಗತ್ತಲ್ಲಿ ಹೆಸರು ಮಾಡಿದ ಆದರೆ ವಿಧಿ ಬರಹ ನೋಡಿ ಎಲ್ಲವೂ ಸರಿ ಇದೆ ಎನ್ನು ವಷ್ಟರಲ್ಲೇ ಆತನಿಗೆ ಕತ್ತು ಮತ್ತು ಬೆನ್ನು ನೋವು ತೀರ್ವವಾಗಿ ಕಾಡಿತು. ಆದರೂ ದೃತಿ ಗೆಡಲಿಲ್ಲ 1998ರಲ್ಲಿ ವಾಷಿಂಗ್‌ಟನ್‌ನ ಪಿ.ಜಿ.ಎ. ಚಾಂಪಿಯನ್‌ಷಿಪ್ ಪ್ರಶಸ್ತಿ ಪಡೆದ ಕೊನೆಗೂ ೨೦೦೦ರಲ್ಲಿ ವಿಶ್ವಚಾಂಪಿಯನ್ ಪ್ರಶಸ್ತಿ ಪಡೆದು ತಾನೇನೆಂದು ಜಗತ್ತಿಗೆ ತೋರಿಸಿದ.

ಬಡತನಕ್ಕೆ ಹೆದರಬೇಡಿ. ಕಾಸಿಲ್ಲವೆಂದು ಕಣ್ಣೀರಾಕಬೇಡಿ. ತಿನ್ನಲು ಗತಿ ಇಲ್ಲವೆಂದು ಹತಾಶರಾಗಬೇಡಿ. ಬದುಕಿನ ಬಂಡಿ ಸಾಗಿಸುವುದೇ ಕಷ್ಟವೆಂದು ಬೇಸರ ಪಡ ಬೇಡಿ. ಅಳಲು ನೂರು ಕಾರಣವಿದ್ದರೆ, ನಗಲು ಸಾವಿರ ಕಾರಣವಿರುತ್ತದೆ. ಏನಂತೀರ?
ಹೆಂಡತಿಯನ್ನ ತಾಯಿ ಮಾಡುವವನು ಗಂಡಸಲ್ಲಹೆಂಡತಿಯನ್ನ ತಾಯಿಯ ರೀತಿ ನೋಡಿಕೊಳ್ಳವವನು ನಿಜವಾದ ಗಂಡಸು
ಸಾವಿರಾರು ಆಸೆಗಳು, ನೂರಾರು ಈಡೇರದ ಬಯಕೆಗಳು, ದೇವರಂತ ಹುಡುಗ ಬದುಕಿಗೆ ಬರಲಿ, ಎನ್ನುವ ಕನಸಿನೊಂದಿಗೆ ಪ್ರಾಯದ ಹುಡುಗಿಯರು ಬದುಕುತ್ತಿರುತ್ತಾರೆ.

ಮಾತುಗಳನ್ನು ಅರ್ಥಮಾಡಿಕೊಳ್ಳಬೇಕು, ಭಾವನೆಗಳನ್ನ ಗೌರವಿಸಬೇಕು, ಘಾಸಿಗೊಂಡ ಮನಸ್ಸಿಗೆ ಸಮಾದಾನ ನೀಡಬೇಕು, ಕಣ್ಣೀರಾದಾಗ ಕಣ್ಣಂಚಿನಲ್ಲೇ ಇದ್ದು ಸಮಾದಾನ ಪಡಿಸಬೇಕು. ನಂಬಿದವರೆಲ್ಲ ದೂರವಾದರೂ ಅವನು ಮಾತ್ರ ದೂರವಾಗ ಬಾರದು, ಕಾಲೇಜಿನ ಜೀವನ ದಲ್ಲಾದ ಅವಮಾನಗಳನ್ನ ಲೆಕ್ಕಿಸದೆ Unconditi onal ಆಗಿ ಪ್ರೀತಿಸುವ ಹುಡುಗ ಗಂಡನಾಗಿ ಬರಲಿ ಎಂದು ಪ್ರತಿಯೊಂದು ಹುಡುಗಿಯ ಕನಸಾಗಿರುತ್ತೆ, ಕನವರಿಕೆಯಾಗಿರುತ್ತೆ. ಮದುವೆ ಆಗುವವರೆಗೂ ತಂದೆ-ತಾಯಿಯ ನೆರಳಲ್ಲಿ ಭದ್ರವಾಗಿ ಬೆಳೆದ ಹುಡುಗಿ, ಮೂರು ಗಂಟಿನ ಮೇಲೆ ನಂಬಿಕೆ ಇಟ್ಟು ಗಂಡನ ಮನೆಗೆ ನಡೆದು ಬಿಡ್ತಾಳೆ. ಸಪ್ತಪದಿ ತುಳಿದು ಗಂಡನೇ ಸರ್ವಸ್ವ ಎಂದು ಭಾವಿಸಿ ಅತ್ತೆಯ ಮನೆಕಡೆ ಹೆಜ್ಜೆ ಹಿಡುತ್ತಾಳೆ.

ಮುಂದಿನ ದಿನಗಳಲ್ಲಿ ಅತ್ತೆಯೇ ಅವಳ ಅಮ್ಮನೆಂದು ಜೀವನ ಸಾಗಿಸುತ್ತಾಳೆ. ಬಹಳಷ್ಟು ದಾಂಪತ್ಯಗಳು ಚೆಂದವಾಗಿದ್ದರೂ ಕೆಲವು ಜೀವಗಳ ಬದುಕು ಸ್ವರ್ಗಕ್ಕೂ-ನರಕಕ್ಕೂ ಮಧ್ಯದಲ್ಲಿರುತ್ತದೆ. ಅವಳ ಹೆಸರು ಜೆ.ಕೆ.ರೌಲಿಂಗ್, ಇಂಗ್ಲಿಷ್ ಶಿಕ್ಷಕಿಯಾಗಿ
ಬದುಕನ್ನ ಪ್ರಾರಂಭಿಸಿದಳು. ಪೋರ್ಚುಗಲ್ ದೇಶದಲ್ಲಿ ಅವಕಾಶವಿದ್ದ ಕಾರಣ ಇಂಗ್ಲಿಷ್ ಶಿಕ್ಷಕಿಯಾಗಿ ಅಲ್ಲಿ ನೇಮಕವಾದಳು. ಪೋರ್ಚುಗಲ್ಲಿನ ಪ್ರಕೃತಿಯ ಸೌಂದರ್ಯದ ನಡುವೆ ಒಬ್ಬ ಯುವಕನನ್ನ ಕಂಡಳು. ಮೊದಲ ನೋಟದಲ್ಲಿ ಅವನನ್ನ ತುಂಬಾ ಇಷ್ಟಪಟ್ಟಳು. ಮೊದಲ ಸೆಳೆತ ಪ್ರೀತಿಯಾಯಿತು. ಸ್ವಲ್ಪ ದಿನಗಳ ಪ್ರೀತಿಯ ನಂತರ ಇಬ್ಬರು ಮದುವೆಯಾದರು.

ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ರೌಲಿಂಗ್‌ಗೆ ದಾಂಪತ್ಯ ಏಕೋ ಹಾದಿ ತಪ್ಪುತ್ತಿದೆ ಎನ್ನಿಸಿತು. ಕ್ರಮೇಣ ಗಂಡ-ಹೆಂಡತಿಯ ದೂರ ಜಾಸ್ತಿಯಾಯಿತು. ಒಂದು ದಿನ ಗಂಡ ಬಂದು ‘ನಿನ್ನೊಂದಿಗೆ ಇರಲಾರೆ ನಾವು ದೂರವಾಗೋಣ ಎಂದು ಹೇಳಿ ವಿಚ್ಛೇದನ ನೀಡಿಬಿಟ್ಟ!’ ಗಂಡ ನಿಂದ ದೂರವಾದ ರೌಲಿಂಗ್‌ಗೆ ಸಾವೊಂದೇ ದಾರಿಯೆಂದು ಅನ್ನಿಸಲು ಶುರು ವಾಯಿತು. ತ್ರೀವ್ರವಾದ ಖಿನ್ನತೆಗೆ ಒಳಪಟ್ಟಳು. ಕೆಲಸವಿಲ್ಲದೇ ಬದುಕಿನ ಬಂಡಿ ಸಾಗಿಸುವುದು ಕಷ್ಟವಾಯಿತು. ಒಂದು ದಿನ ಇಳಿ ಸಂಜೆ ಯಲ್ಲಿ ಬರೆದು ಬದುಕಬೇಕು ಎಂದು ತೀರ್ಮಾನಿಸಿದಳು.

ಮೊದಲು ಪುಸ್ತಕವನ್ನ ತುಂಬಾ ಶ್ರದ್ಧೆಯಿಂದ, ಚದುರದ ಏಕಾಗ್ರತೆಯಿಂದ ಬರೆದು ಮುಗಿಸಿದಳು. ಬರೆದ ಪುಸ್ತಕವನ್ನ 12 ಪ್ರಕಾಶಕರು ಮುದ್ರಿಸಲು ನಿರಾಕರಿಸಿದರು. ಕೊನೆಯದಾಗಿ Bloomsburry ಎಂಬ ಸಂಸ್ಥೆ ಪುಸ್ತಕವನ್ನ ಪ್ರಕಟಿಸಿತು. ಮೊದಲ ಮುದ್ರಣ ಕೇವಲ 1000 ಪುಸ್ತಕಗಳಿಂದ ಶುರುವಾದ ನಂತರ ಆ ಪುಸ್ತಕಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಬಂತು. ಇಷ್ಟಕ್ಕೂ ಆ ಪುಸ್ತಕ ಯಾವುದು ಅಂತೀರ Harry Potter – by J.K. Rowling.

ಜೆ.ಕೆ. ರೌಲಿಂಗ್ ಇವತ್ತು ಜಗತ್ತಿನ ಶ್ರೀಮಂತ ಲೇಖಕಿಯಲ್ಲಿ ಒಬ್ಬಳು. ಗಂಡನಿಂದ ದೂರವಾದಳು. ಆದರು ಬರಹದಿಂದ ಪ್ರಪಂಚಕ್ಕೆ ಹತ್ತಿರವಾದಳು. ಜೆ.ಕೆ. ರೌಲಿಂಗ್‌ಳನ್ನ ತಾಯಿ ಮಾಡಿ ಗಂಡ ಹೊರಟು ಹೋದ, ಆದರೂ ಜೆ.ಕೆ. ರೌಲಿಂಗ್ ಅವಳ ಮಗಳ ಭವಿಷ್ಯಕ್ಕಾಗಿ ಬದುಕಿ ತೋರಿಸಿದಳು. ಬದುಕುವ ಛಲವಿದ್ದರೆ ಏನಾದರೂ ಸಾಧಿಸಬಹುದೆಂದು ತೋರಿಸಿಕೊಟ್ಟಳು