Thursday, 19th September 2024

ಹೆಣ್ಣುಮಕ್ಕಳ ಸಬಲೀಕರಣ ಎಲ್ಲಿಂದ ಶುರುವಾಗಬೇಕು?

ಕಿಶೋರಿಯಾಗಿದ್ದಾಾಗಲೇ ಒತ್ತಾಯದ ಮದುವೆ ವಿರೋಧಿಸಿ, ಮನೆಯಿಂದ ಹೊರಬಂದು ಸಂಘರ್ಷದ ಬದುಕನ್ನು ಆಹ್ವಾನಿಸಿದ ಇಂಗ್ಲೆೆಂಡ್‌ನ ಭಾರತ ಸಂಜಾತ ಸಿಖ್‌ಮಹಿಳೆಯ ಸ್ಫೂರ್ತಿದಾಯಕ ಭಾಷಣ ಇದು. ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನದ ವಿಶೇಷ.

ಮೊದಲಿಗೆ ಟೆಡ್ ವೇದಿಕೆಗೆ ವಂದನೆಗಳನ್ನು ಸಲ್ಲಿಸಬಯಸುವೆ. ಏಕೆಂದರೆ ಇಂಗ್ಲೆೆಂಡ್‌ನಲ್ಲಿ ಹುಟ್ಟಿದವಳಾಗಿ ನನಗೆ ಮನೆ ಹಾಗೂ ಸಮುದಾಯದ ಹೊರತಾಗಿ ಬೇರೆ ಯಾರ ಸಂಗಡವೂ ಮಾತನಾಡದಿರಲು ತಾಕೀತು ಮಾಡಲಾಗಿತ್ತು. ಸಂಸಾರದ ಗುಟ್ಟನ್ನು ರಟ್ಟು ಮಾಡುವುದು ಅವಮಾನಕರ ಎಂದು ಹೇಳಿಕೊಡಲಾಗಿತ್ತು. ಹಾಗಾಗಿ ಇಂದು ಆ ಮೌನ ಮುರಿಯಲು ಅವಕಾಶ ನೀಡಿದ ಈ ವೇದಿಕೆಯನ್ನು ವಿಶ್ವದ ಎಲ್ಲೆೆಡೆ ಇರುವ ಮೌನವಾಗಿ ಇರಲು ಕಲಿಸಲ್ಪಟ್ಟ ಸಂತ್ರಸ್ತರು ಹಾಗೂ ಅದನ್ನು ಮೀರಿ ನಡೆದವರ ಜತೆ ಹಂಚಿಕೊಳ್ಳಲು ಬಯಸುತ್ತೇನೆ.

ನನ್ನ ಪರಿಚಯ ಚುಟುಕಾಗಿ ಮಾಡಿಕೊಡುವುದಾದರೆ, ಎಲ್ಲ ವಲಸಿಗರಂತೆ ನನ್ನ ತಂದೆಯೂ ಸಹ ಉದ್ಯೋೋಗ ನಿಮಿತ್ತ 1952ರಲ್ಲಿ ಇಂಗ್ಲೆೆಂಡ್‌ಗೆ ಬಂದುರು. ಗ್ರಾಾಮೀಣ ಪಂಜಾಬ್ ಪ್ರಾಾಂತ್ಯದವರು ಹೀಗೆ ಇಲ್ಲಿ ವಿದೇಶಕ್ಕೆೆ ಬಂದು ನೆಲೆಸಿ, ಆನಂತರ ನನ್ನ ತಾಯಿಯೂ ಅವರನ್ನು ಸೇರಿಕೊಂಡು, ಮಕ್ಕಳು ಹುಟ್ಟಿಿ ನಮ್ಮ ಕುಟುಂಬ ಇಲ್ಲಿ ನೆಲೆಯಾಯಿತು. ನಾವು ಏಳು ಸಹೋದರಿಯರು ಹಾಗೂ ಒಬ್ಬ ಸಹೋದರ. ನಮ್ಮ ತಾಯ್ನಾಾಡು ಇಂಗ್ರೆೆಂಡ್ ಎಂದುಕೊಂಡೇ ಬೆಳೆದೆವು. ಬ್ರಿಿಟಿಷ್ ಶಾಲೆಗಳಿಗೆ ನಮ್ಮನ್ನು ಸೇರಿಸಲಾಯಿತು. ಆದರೆ 14-15ರ ವಯೋಮಾನ ತಲುಪುತ್ತಿಿದ್ದಂತೆ ನನ್ನ ಎಲ್ಲ ಸಹೋದರಿಯರನ್ನೂ ಒಬ್ಬೊೊಬ್ಬರನ್ನಾಾಗಿ ಶಾಲೆ ಬಿಡಿಸಿ ವಿವಾಹ ಮಾಡಿಕೊಡಲಾಗುತ್ತಿಿತ್ತು. ಭಾರತದಿಂದ ಬರುತ್ತಿಿದ್ದ ವರ ಮಹಾಶಯರ ಫೋಟೊ ನೋಡಿ ಅವರು ಒಪ್ಪಿಿಗೆ ಸೂಚಿಸುತ್ತಿಿದ್ದರು. ಆಮೇಲೆ ಎಲ್ಲರನ್ನೂ ವಿಮಾನ ಹತ್ತಿಿಸಿ ಂಡಿಯಾಗೆ ಕಳುಹಿಸಲಾಗುತ್ತಿಿತ್ತು.

ಇದೆಲ್ಲ ಆಗುತ್ತಿಿದ್ದುದು ಸುಮಾರು 34 ವರ್ಷಗಳ ಹಿಂದೆ. ವಿದ್ಯಾಾಭ್ಯಾಾಸ ತುಂಡರಿಸಲ್ಪಟ್ಟ ಅವರೆಲ್ಲ ಎಲ್ಲಿಗೆ ಹೋದರು, ಏನಾಯಿತು ಎಂದು ಯಾರೂ ಪ್ರಶ್ನಿಿಸುತ್ತಲೂ ಇರಲಿಲ್ಲ. ನನಗಿಂತ ಎರಡೇ ವರ್ಷ ದೊಡ್ಡವಳಾಗಿದ್ದ ನನ್ನಕ್ಕ ರವೀನಾ, ಬೆರಳಿಗೆ ಉಂಗುರ ಧರಿಸಿ, ಯಾರದೋ ಪತ್ನಿಿಯಾಗಿ ಮತ್ತೆೆ ಶಾಲೆ ಸೇರಿದಳು. ಈಗವಳು ನನ್ನ ತರಗತಿಗೇ ಬಂದಳು. ಆದರೆ ವೇಷಭೂಷಣ ಸಂಪೂರ್ಣ ಬದಲಾಗಿತ್ತು. ಪಾಶ್ಚಿಿಮಾತ್ಯ ಉಡುಪುಗಳನ್ನು ಈಗ ಆಕೆ ತೊಡುವಂತಿರಲಿಲ್ಲ. ಈಗಲೂ ರವೀನಾ ಎಲ್ಲಿಗೆ ಹೋಗಿದ್ದಳು, ಯಾಕೆ ಹೋಗಿದ್ದಳು ಎಂದು ಯಾರೂ ವಿಚಾರಿಸಲಿಲ್ಲ.

ನನಗೆ 14 ವರ್ಷವಾದಾಗ ಒಂದು ದಿನ ಶಾಲೆಯಿಂದ ಮರಳಿದ ಮೇಲೆ ನನ್ನ ತಾಯಿ ಹತ್ತಿಿರ ಕರೆದು ಕುಳ್ಳಿಿರಿಸಿಕೊಂಡು ಒಬ್ಬ ಮನುಷ್ಯನ ಭಾವಚಿತ್ರ ತೋರಿಸಿ ಎಂಟು ವರ್ಷದವಳಿದ್ದಾಾಗಲೇ ನಿನ್ನನ್ನು ಇವರಿಗೆ ವಿವಾಹ ಮಾಡಿಕೊಡುವುದಾಗಿ ವಾಗ್ದಾಾನ ನೀಡಲಾಗಿದೆ ಎಂದರು. ನಾನು ಒಂದೇ ಸಾರಿಗೆ ನನಗೆ ಒಪ್ಪಿಿಗೆಯಿಲ್ಲ, ಬೇಡ ಅಂದೆ. ನಮ್ಮಮ್ಮ ತನ್ನ ಎಲ್ಲ ಹೆಣ್ಣುಮಕ್ಕಳಿಗೂ ಹೀಗೆ ಫೋಟೊ ತೋರಿಸಿ ಮದುವೆಗೆ ಒಪ್ಪಿಿಸಿದ್ದರು, ಅದೂ ತಮಾಷೆಯಾಗಿ ಮಾತನಾಡುತ್ತಾಾ, ನಕ್ಕು ನಗಿಸುತ್ತಾಾ. ಆದರೆ ಅಂತಹ ಪ್ರಸ್ತಾಾಪಕ್ಕೆೆ ವಿರೋಧ ತೋರಿದ್ದು ನಾನೊಬ್ಬಳೇ. ಈ ಜಿಗುಟು ಹುಡುಗಿಯನ್ನು ಏನು ಮಾಡುವುದೋ ತಿಳಿಯದೇ ‘ನೀನು ಹೀಗೇ ಅಂತ ನನಗೆ ಮೊದಲಿನಿಂದ ಗೊತ್ತಿಿತ್ತು. ಮನೆಯಲ್ಲಿ ನೀಬೊಬ್ಬಳೇ ಒಂದು ಥರಾ, ಆಸ್ಪತ್ರೆೆಯಲ್ಲಿ ಹುಟ್ಟಿಿದ್ದೆೆ, ತಲೆಕೆಳಕಾಗಿ ಹುಟ್ಟಿಿದ್ದೆೆ…ಅದಕ್ಕಾಾಗಿ ಹೀಗೆ ಆಡುತ್ತೀಯಾ’ ಎಂದು ಬೈದು ಭಂಗಿಸಿದರು.

ಅಲ್ಲಿಗೆ ಪ್ರಕರಣ ಮುಕ್ತಾಾಯಗೊಂಡು ನಾನು ಮತ್ತೆೆ ಶಾಲೆಗೆ ಹೋಗಿ, ಬಂದು ಮಾಡಿಕೊಂಡಿದ್ದೆೆ. ಆದರೆ ನನಗೆ ಹದಿನೈದೂವರೆ ವರ್ಷವಾದಾಗ ಮಾತ್ರ ಮದುವೆಯ ಒತ್ತಾಾಯ ಹೆಚ್ಚಾಾಯಿತು. ಇಂಗ್ಲೆೆಂಡ್‌ನಲ್ಲಿ ಹುಟ್ಟಿಿ ಬೆಳೆದಿದ್ದರೂ ‘ವಿಧೇಯ, ಸಂಪ್ರದಾಯಸ್ಥ, ಭಾರತೀಯ ಉಡುಗೆ ತೊಡುವ, ಹೆಚ್ಚು ಮಾತನಾಡದೇ ಇರುವ ’ ಹುಡುಗಿಯರಾಗೇ ನಮ್ಮನ್ನು ಪೋಷಿಸಲಾಗಿತ್ತು. ನಮ್ಮ ಇತರ ಇಂಗ್ಲಿಿಷ್ ಸಹಪಾಠಿಗಳಂತೆ ಡಿಸ್ಕೋೋಗೆ ಹೋಗುವಂತಿರಲಿಲ್ಲ, ಕೂದಲು ಕತ್ತರಿಸಿಕೊಳ್ಳುವಂತಿರಲಿಲ್ಲ. ಯಾವುದಾದರೂ ಹುಡುಗನನ್ನು ಡೇಟ್ ಮಾಡುವುದು ಒತ್ತಟ್ಟಿಿಗಿರಲಿ, ಹುಡುಗರನ್ನು ಮಾತನಾಡಿಸುವುದೂ ನಿಷಿದ್ಧವಾಗಿತ್ತು. ಮನೆತನದ ‘ಗೌರವ’ ನಮ್ಮ ಕೈಯಲ್ಲಿದೆ ಎಂದು ಪದೇಪದೆ ನೆನಪಿಸಲಾಗುತ್ತಿಿತ್ತು. ಹಾಗೂ ಭಾರತದಲ್ಲಿ ಇದ್ದ ಸಿಖ್ ಕುಟುಂಬಗಳ ಜತೆ ವಿವಾಹ ಬಂಧಕ್ಕೆೆ ಒಳಪಡಲು ಹೀಗೆ ಪಾಲನೆಗೊಳ್ಳುವುದು ಅಲಿಖಿತ ನಿಬಂಧನೆಗಳಾಗಿದ್ದವು. ಹಾಗಾಗಿ ನಮಗೆಲ್ಲ ಒಂದು ಬಗೆಯ ಇಬ್ಬಂದಿತನ. ವಯೋಸಹಜ ಚಟುವಟಿಕೆಗಳನ್ನು ಪಾಲಕರ, ಸಮುದಾಯದ ಕಣ್ಣು ತಪ್ಪಿಿಸಿ ರಹಸ್ಯವಾಗಿ ಮಾಡುವ ಅನಿವಾರ್ಯ.

ಈ ಬಾರಿ ನಾನು ಮದುವೆಯನ್ನು ಪ್ರಬಲವಾಗಿಯೇ ವಿರೋಧಿಸಿದೆ. ಸರಿ, ಗೃಹಬಂಧನದಲ್ಲಿ ಇರಿಸಲಾಯಿತು. ಅದರಿಂದ ಮುಕ್ತಳಾಗಲು ‘ಆಯಿತು, ಒಪ್ಪಿಿದ್ದೇನೆ’ ಎಂದು ಘೋಷಿಸಿ ಹೊರಬಂದೆ. ನನ್ನ ಪಲಾಯನಕ್ಕೆೆ ತಯಾರಿ ನಡೆಸಲೂ ಇದೊಂದು ಅವಕಾಶವಾಗಿ ಒದಗಿತು. ಮನೆಯಲ್ಲಿ ಜೋರು ತಯಾರಿ ನಡೆದಿರುವಾಗಲೇ ಫೈನಲ್ ಪರೀಕ್ಷೆೆ ಬರೆದ ನಾನು ಮನೆಗೆ ವಾಪಸಾಗದೇ ಅಲ್ಲಿಂದ ಹಾಗೇ ಓಡಿಹೋದೆ. ಸುಮಾರು 150 ಮೈಲಿ ದೂರ ಕ್ರಮಿಸಿ, ಇಲ್ಲಿಯತನಕ ನನ್ನನ್ನು ಬೆಂಬತ್ತಲಾರರು ಎಂದು ಅಂದುಕೊಂಡಿದ್ದು ಸುಳ್ಳಾಾಯಿತು. ನನ್ನ ಪಾಲಕರು ಪೊಲೀಸರಿಗೆ ದೂರು ನೀಡಿ, ಪತ್ತೆೆಹಚ್ಚಿಿಯೇ ಬಿಟ್ಟರು.

ಆದರೆ, ಈಗ್ಗೆೆ 33ವರ್ಷಗಳ ಹಿಂದೆ ಸೇವೆಯಲ್ಲಿದ್ದ ಒಬ್ಬ ತರುಣ ಪೊಲೀಸ್ ಅಧಿಕಾರಿ ನನ್ನ ನೆರವಿಗೆ ಬಂದರು. ನನ್ನೆೆಲ್ಲಾಾ ಸಮಸ್ಯೆೆ ಅವರಲ್ಲಿ ನಿವೇದಿಸಿಕೊಂಡಾಗ ಅದರ ಗಂಭೀರತೆ ಅವರಿಗೆ ಅರ್ಥವಾಯಿತು. ಮತ್ತು ಅವರು ಒಬ್ಬ ಕಿಶೋರಿಯ ಬಡಬಡಿಕೆ ಎಂದು ತಳ್ಳಿಿಹಾಕದೇ ನಾನು ಹೇಳಿದ್ದನ್ನು ಆಲಿಸಿ, ಯುಕ್ತ ಕ್ರಮ ಕೈಗೊಂಡರು. ಮೊದಲು ನನ್ನ ಪಾಲಕರಿಗೆ ಕ್ಷೇಮವಾಗಿದ್ದೇನೆ ಎಂದು ತಿಳಿಸಲು ಸೂಚಿಸಿದರು. ನಾನದನ್ನು ಕೂಡಲೇ ಮಾಡಿದೆ. ಆಪತ್ಬಾಾಂಧವನಂತೆ ಒದಗಿದ ಆತ ಮರಳಿ ನನ್ನನ್ನು ಕುಟುಂಬದವರಿಗೆ ಒಪ್ಪಿಿಸಲಿಲ್ಲ ಎಂಬ ಒಂದೇ ಕಾರಣದಿಂದ ನಾನು ಅಂದಿನ ಬಲವಂತದ ವಿವಾಹ ತಪ್ಪಿಿಸಿಕೊಂಡು, ಇಂದು ನಿಮ್ಮ ಮುಂದೆ ನಿಂತಿದ್ದೇನೆ.

ಕುಟುಂಬದ ಹಿರಿಯರು, ವಿಶೇಷವಾಗಿ ಮಹಿಳೆಯರು ತಮ್ಮ ನಿಲುವುಗಳಿಗೇ ಆತುಕೊಂಡರು. ನನ್ನ ತಾಯಿಯಂತೂ ಮನೆಗೆ ವಾಪಸಾಗಿ, ನಾವು ಹೇಳಿದವರನ್ನು ವಿವಾಹವಾಗದಿದ್ದರೆ ನೀನು ನಮ್ಮ ಪಾಲಿಗೆ ಸತ್ತಂತೆ ಎಂದು ಘೋಷಿಸಿದರು. ನಾನು ‘ಕುಟುಂಬದ ಗೌರವ ಮುಕ್ಕಾಾಗಿಸಿದೆ, ಮನೆತನದ ಮರ್ಯಾದೆ ಹಾಳುಮಾಡಿದೆ’ ಎಂಬುದು ಅವರ ದೂಷಣೆಯಾಗಿತ್ತು. ಬದುಕಿನ ಸಂಧಿಕಾಲ ಅದು. ಎರಡು ಕಠಿಣ ಆಯ್ಕೆೆಗಳು ಕಣ್ಣ ಮುಂದೆ ಇದ್ದವು: ಒಂದು, ಮನೆಗೆ, ನನ್ನ ಚಿರಪರಿಚಿತ ಆವರಣಕ್ಕೆೆ, ಜನರ ಸಾಂಗತ್ಯಕ್ಕೆೆ ಮರಳುವುದು. ಇಲ್ಲವೇ ಯಾರೂ ಬಂಧು-ಬಾಂಧವರಿಲ್ಲದ ಏಕಾಕಿಯಾಗಿ ಬಾಳು ಕಟ್ಟಿಿಕೊಳ್ಳುವುದು. ನಾನು ಎರಡನೆಯದನ್ನೇ ಆರಿಸಿಕೊಂಡೆ. ಎಷ್ಟೊೊಂದು ಮಂದಿ ಥೇಟ್ ಇಂತಹುದೇ ಸನ್ನಿಿವೇಶ ಎದುರಿಸಿ ಹೊರಬಂದಿರುತ್ತಾಾರೆ.

ಆದರೆ ‘ನೀನು ನಮಗೆ ಬೇಡ’ ಎಂದು ತಂದೆ-ತಾಯಿ ನನ್ನನ್ನು ತೊರೆಯುತ್ತಾಾರೆ ಎಂಬುದು ನನಗೆ ಅನೀರಿಕ್ಷಿಿತವಾಗಿತ್ತು. ನನ್ನದಲ್ಲದ ತಪ್ಪಿಿಗಾಗಿ ಶಿಕ್ಷೆೆ ಅನುಭವಿಸುವಂತೆ ಮಾಡಲಾಯಿತು. ಒಂದು ಅವಮಾನವಾಗಿ, ತಪ್ಪಿಿತಸ್ಥ ಭಾವನೆಯಾಗಿ ಅದು ನನ್ನನ್ನು ಒಳಗೊಳಗೇ ಕೊರೆಯಿತು. ನಾನು ತಂದೆತಾಯಿಯರನ್ನು ಕಡಿಮೆ ಪ್ರೀತಿಸಿದೆನೇ? ಮದುವೆಗೆ ನಿರಾಕರಿಸಿದ್ದು ಅಷ್ಟೊೊಂದು ಭಯಂಕರ ಅಪರಾಧವೇ ಎಂದು ನೊಂದುಕೊಂಡ ಪರಿಣಾಮ ಎರಡೆರಡು ಸಾರಿ ಜೀವ ತೆಗೆದುಕೊಳ್ಳಲು ಪ್ರಯತ್ನಿಿಸಿದೆ. ಆದರೆ ಕ್ರಮೇಣ ನನ್ನ ಜೀವನ ನಾನು ಬದುಕಲು ಕಲಿತೆ. ಕುಟುಂಬದೊಂದಿಗೆ ಇದ್ದ ನನ್ನ ಒಂದೇ ನಂಟೆಂದರೆ, ಅಕ್ಕ ರವೀನಾಳದ್ದು. ಹೀಗೆ ಅಪ್ಪ-ಅಮ್ಮನೇ ಬೇಡ ಎಂದು ತೊರೆದರೂ ಹತಭಾಗಿನಿಯರಿಗೆ ಹೇಗೋ ಒಂದು ಬಂಧ ಉಳಿದುಕೊಂಡಿರುತ್ತದೆ. ನಾನು ರಹಸ್ಯವಾಗಿ ಮಾತನಾಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿಿದ್ದೆೆವು.

ರವೀನಾ ಒಂದು ಕೆಟ್ಟ ವಿವಾಹದಲ್ಲಿ ಸಿಕ್ಕಿಿಬಿದ್ದಿದ್ದಳು. ನನ್ನ ಒತ್ತಾಾಸೆಯ ಮೇರೆಗೆ ಎಲ್ಲವನ್ನೂ ಹಿರಿಯರಲ್ಲಿ ಹೇಳಿಕೊಂಡಳು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಎಲ್ಲ ಸಂಧಾನ ನಡೆಸಿ ಮತ್ತೆೆ ಆಕೆಯನ್ನು ಗಂಡನಲ್ಲಿಗೇ ದೂಡಿದರು. 24 ವರ್ಷದ ನನ್ನ ಅಕ್ಕ ಸುಟ್ಟುಕೊಂಡು ಆತ್ಮಹತ್ಯೆೆ ಮಾಡಿಕೊಂಡಳು. ಯಾರ ಗೌರವ ಕಾಪಾಡಲಿಕ್ಕಾಾಗಿಯೋ ಗೊತ್ತಿಿಲ್ಲ. ‘ಗಂಡನನ್ನು ಬಿಟ್ಟು ಬಂದು ಕುಟುಂಬದ ಹೆಸರು ಕೆಡಿಸುವುದಕ್ಕಿಿಂತ ಹೀಗೆ ಮಾಡಿದ್ದು ಒಳ್ಳೆೆಯದೇ ಆಯಿತು’ ಎಂಬ ಕ್ರೂರ ಪ್ರತಿಕ್ರಿಿಯೆ ನನ್ನ ಮನೆಯಿಂದ ಬಂತು. ಆದರೆ ಈ ದಾರುಣ ಘಟನೆ ನನ್ನನ್ನು ಅಡಗುತಾಣದಿಂದ ಹೊರಬಂದು ಕಾರ್ಯೋನ್ಮುಖಳಾಗಲು ಪ್ರೇರಿಸಿತು. 20 ವರ್ಷಗಳ ಹಿಂದೆ ಮನೆಯ ವೆರಾಂಡಾವನ್ನೇ ಕಚೇರಿಯಾಗಿಸಿ ನಾನು ‘ಕರ್ಮ ನಿರ್ವಾಣ’ ಹೆಸರಿನ ಸಾಮಾಜಿಕ ಸಂಸ್ಥೆೆ ಕಟ್ಟಿಿದೆ.

ಒಂದು ರಾಷ್ಟ್ರವ್ಯಾಾಪ್ತಿಿಯ ಸಾಮಾಜಿಕ ಸಂಘಟನೆಯಾಗಿರುವ ನಮ್ಮ ಸಂಸ್ಥೆೆ, ಒತ್ತಾಾಯದ ವಿವಾಹ ವಿರೋಧಿಸಿ ಮನೆಯಿಂದ ಹೊರಬೀಳುವ ಎಲ್ಲ ಹೆಣ್ಣುಮಕ್ಕಳ ನೆರವಿಗೆ ಕಂಕಣಬದ್ಧವಾಗಿದೆ. ‘ಅದು ಅವರವರ ಸಂಸ್ಕೃತಿಗೆ ಸಂಬಂಧಪಟ್ಟದ್ದು’ ಎಂಬ ಕಾರಣ ಮುಂದೊಡ್ಡುವುದು, ಸಂಪ್ರದಾಯ ಹಾಗೂ ಧರ್ಮದ ಹೆಸರಿನಲ್ಲಿ ಹೆಣ್ಣುಮಕ್ಕಳ ಬಲಿದಾನವಾಗಲು ಬಿಡದೆ ಬಲವಾದ ಪ್ರತಿರೋಧ ಒಡ್ಡುವುದನ್ನು ಇಂಥ ವೃತ್ತಿಿಪರ ಸಂಘಟನೆಗಳು ಹೆಗಲೇರಿಸಿಕೊಂಡಿವೆ.

ಒಂದು ನಿದರ್ಶನ ಹೇಳಬೇಕೆಂದರೆ, ಒತ್ತಾಾಯದ ವಿವಾಹ ವಿರೋಧಿಸಿ ಮನೆಯಿಂದ ಹೊರಬಿದ್ದು ಇಂಗ್ಲೆೆಂಡ್‌ನಲ್ಲಿದ್ದ ಒಬ್ಬ ಪಾಕಿಸ್ತಾಾನಿ ಹುಡುಗಿಯ ತಂದೆ-ತಾಯಿಯರನ್ನು ಕರೆಸಿ, ಸಂಧಾಣ ನಡೆಸಿ ನಿದ್ದೆೆ ಔಷಧ ಕೊಟ್ಟು ಪಾಕಿಸ್ತಾಾನದ ವಿಮಾನ ಹತ್ತಿಿಸಲಾಯಿತು. ಇನ್ನೂ ಹದಿನಾರು ವರ್ಷವೂ ತುಂಬದ ಹುಡುಗಿಗೆ ವಿವಾಹ ನೆಂಟಸ್ತಿಿಕೆ ತರಲಾಯಿತು. ಬೇಡ ಎಂದು ಆತ್ಮಹತ್ಯೆೆಗೆ ಪ್ರಯತ್ನಿಿಸಿ ಮತ್ತೆೆ ಇಂಗ್ಲೆೆಂಡ್ ಆಸ್ಪತ್ರೆೆ ಸೇರಿದಳು ಆಕೆ. ಯಾರೂ ಭೇಟಿಯಾಗಕೂಡದು ಎಂದು ಜತನವಾಗಿ ಆಕೆಯನ್ನು ಕಾಪಾಡಿದ ಮೇಲೆ ಮತ್ತೆೆ ತಂದೆ-ತಾಯಿಗಳ ಬಳಿ ಕಳುಹಿಸಲಾಯಿತು. ಆ ಇಬ್ಬರೂ ಅಕ್ಷರಶಃ ಮಗಳ ಕೊಲೆ ಮಾಡಿದರು.

ಈ ‘ಮರ್ಯಾದಾ ಹತ್ಯೆೆ’ಗಾಗಿ ಅವರಿಗೆ ಕಳೆದ ವರ್ಷ 25 ವರ್ಷಗಳ ಕಠಿಣ ಸಜೆ ದೊರೆತಿದೆ. ಇಂತಹ ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿತರಾಗಿರುವ, ಯಾವುದೇ ಮನಃಪರಿವರ್ತನೆ, ಹೃದಯಪರಿವರ್ತನೆ ಸಾಧ್ಯವಿಲ್ಲದ ತಂದೆ-ತಾಯಿಯರ ಹೆಣ್ಣುಮಕ್ಕಳು ನಮ್ಮ ಸಂಸ್ಥೆೆಯ ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆದುಕೊಳ್ಳುತ್ತಾಾರೆ. 2008ರಲ್ಲಿ ಸ್ಥಾಾಪಿಸಲಾದ ಈ ಹೆಲ್‌ಪ್‌ ಲೈನ್‌ಗೆ ಈವರೆಗೆ ಸುಮಾರು 30 ಸಾವಿರ ಕರೆಗಳು ಬರೀ ಯುಕೆಯಿಂದ ಬಂದಿವೆ.

‘ಅಪರಿಚಿತನನ್ನು ಮದುವೆಯಾಗಲೊಲ್ಲೆೆ’ ಎಂಬ ಒಂದೇ ಹಠಕ್ಕೆೆ ಆತುಕೊಂಡ ಹದಿನಾರು ವರ್ಷದ ಹುಡುಗಿಯಿಂದ ಇಂದು ನಾನು ಸುಂದರ ಸಂಸಾರ ಕಟ್ಟಿಿಕೊಂಡ ಪ್ರೌೌಢೆಯಾಗಿ ಮಾಗಿದ್ದೇನೆ, ನಿಜ. ಆದರೆ ಬಾಲ್ಯದ ನೆನಪು, ಮನೆಯ ನೆನಪು ಅಷ್ಟು ಸುಲಭವಾಗಿ ಮರೆಯಗುವುದಿಲ್ಲ. ಕುಟುಂಬದ ಪ್ರಥಮ ಗ್ಯಾಾಜ್ಯುಯೇಟ್ ಆಗಿ ಪದವಿ ಸ್ವೀಕರಿಸುವಾಗ ಸಮಾರಂಭದಲ್ಲಿ ನನ್ನ ತಂದೆ ಇರಬೇಕು ಎಂದು ಆಸೆಪಟ್ಟೆೆ. ಆಗ ಅವರು ನಿರಾಕರಿಸಿದರು. ಆದರೆ ಮರಣಹೊಂದಿದಾಗ ನಾನು ಉಯಿಲು ವಿಲೇವಾರಿ ಮಾಡಬೇಕು ಎಂದು ತಂದೆ ಬಯಸಿದರು. ಕೊನೆಯ ಪಕ್ಷ ತಮ್ಮ ಮರಣದಲ್ಲಿ ನನ್ನ ತೀರ್ಮಾನವನ್ನು ಗೌರವಿಸಿದ್ದರು. ಅದೇ ಒಂದು ನೆಪವಾಗಿ 27 ವರ್ಷಗಳ ನಂತರ ನಾನು ಮನೆಗೆ ಧಾವಿಸಿದಾಗ ಅವರ ಕೋಣೆಯ ಮೂಲೆಯಲ್ಲಿ ಕಂಡದ್ದು ಪದವಿ ಸ್ವೀಕರಿಸುತ್ತಿಿರುವ ನನ್ನ ಭಾವಚಿತ್ರ!

ಜೀವವಿರೋಧಿ ಸಂಪ್ರದಾಯಗಳ ಪಾಲನೆಯಾಗುತ್ತಿಿರುವಾಗ ಅದನ್ನು ನೋಡಿಕೊಂಡು ಮೌನವಾಗಿರಲು ನನ್ನ ಮನಸ್ಸು ಸಮ್ಮತಿಸುವುದಿಲ್ಲ. ಹದಿನಾರರಲ್ಲಿ ವಿವಾಹದ ವಿರುದ್ಧ ಬಂಡೆದ್ದ ನಾನು ಈಗ ಮೂರು ಮಕ್ಕಳ ಸುಂದರ ಕುಟುಂಬ ಹೊಂದಿದ್ದೇನೆ. ಎರಡು ಸಾರಿ ವಿಚ್ಛೇದನ ಪಡೆದಿದ್ದೇನೆ. ಜಾತಿಯ ಹೊರಗೆ ಮದುವೆಯಾಗಿದ್ದೇನೆ. ನನ್ನ ಧಿಕ್ಕಾಾರಗಳನ್ನು ತಿರಸ್ಕರಿಸುವ ಮಾರ್ಗವಾಗಿ ನನ್ನ ಕುಟುಂಬ ಬಾಂಧವ್ಯ ಕಡಿದುಕೊಂಡಿದ್ದರಿಂದ ಸುಂದರವಾದ ನನ್ನ ಧರ್ಮದ ಆಚರಣೆಗಳು, ಸಂಪ್ರದಾಯ ಇವುಗಳಿಂದ ವಂಚಿತಳಾದ ನೋವೂ ನನಗಿದೆ. ಇದಕ್ಕೆೆಲ್ಲ ನನ್ನ ಮಕ್ಕಳ ಮೇಲೆ ಪ್ರತಿಕಾರ ತೆಗೆದುಕೊಂಡರೆ ಎಂಬ ಭಯವೂ ನನಗಿತ್ತು. ಆದರೆ ಇಲ್ಲೇ ಪ್ರೇಕ್ಷಕರಲ್ಲಿ ಕೂತಿರುವ ನನ್ನ ಮಗಳು ನತಾಶಾ ಒಂದು ಪ್ರಗತಿಪರವಾಗಿ ಯೋಚಿಸುವ ಭಾರತೀಯ ಯುವಕನ ಕೈ ಹಿಡಿಯಲಿದ್ದಾಾಳೆ.

ಸಿಖ್ ಧರ್ಮವಾಗಲೀ, ಇಸ್ಲಾಾಂ ಆಗಲೀ ಇಷ್ಟವಿಲ್ಲದ ಮದುವೆ ಅಥವಾ ಮರ್ಯಾದಾ ಹತ್ಯೆೆಗಳನ್ನು ಬೆಂಬಲಿಸುವುದಿಲ್ಲ ಎಂದು ನಾನು ಚೆನ್ನಾಾಗಿ ಬಲ್ಲೆೆ. ಸರಿಯಾಗಿ ಹೇಳಬೇಕೆಂದರೆ, ಅದು ನನ್ನ ವಿಚಾರಗಳನ್ನು ಅನುಮೋದಿಸುತ್ತದೆ.

ಜಸ್ವಿಿಂದರ್ ಸಾಂಘೇರಾ
ಡರ್ಬಿಯಲ್ಲಿ ಬಾಲ್ಯ, ಶಿಕ್ಷಣ ಪೂರೈಸಿದ ಭಾರತ ಮೂಲದ ಸಾಮಾಜಿಕ ಕಾರ್ಯಕರ್ತೆ ಜಸ್ವಿಿಂದರ್, ಸ್ವತಃ ಒಂದು ಒತ್ತಾಾಯದ ಮದುವೆ ವಿರೋಧಿಸಿ ಬದಲಾವಣೆಗೆ ಮುಂದಾದವರು. ಸಾಂಪ್ರದಾಯಿಕ ಸಿಖ್ ಕುಟುಂಬದ ಹಿರಿಯರ-ಪಾಲಕರ ತೀವ್ರ ವಿರೋಧವನ್ನು ಅವರು ಇದರ ಫಲವಾಗಿ ಕಟ್ಟಿಿಕೊಳ್ಳಬೇಕಾಯಿತು. ಆದರೂ ಎದೆಗುಂದದೇ ಒತ್ತಾಾಯದ ಮದುವೆ ಹಾಗೂ ಮರ್ಯಾದಾ ಹತ್ಯೆೆಗಳನ್ನು ಪ್ರತಿರೋಧಿಸಿ ರಾಷ್ಟ್ರಪ್ರಶಸ್ತಿಿ ಪುರಸ್ಕೃತ ಸಾಮಾಜಿಕ ಸಂಸ್ಥೆೆಯೊಂದನ್ನು ಇಂಗ್ಲೆೆಂಡ್‌ನಲ್ಲಿ ಕಟ್ಟಿಿ ಬೆಳೆಸಿದ್ದಾಾರೆ. ವಿಶ್ವಖ್ಯಾಾತಿಯ ಭಾಷಣಕಾರ್ತಿ, ಮಕ್ಕಳ, ನಾಗರಿಕ ಹಾಗೂ ಅಪರಾಧ ವಿಚಾರಣೆಗಳಲ್ಲಿ ನ್ಯಾಾಯಾಲಯಗಳಿಗೆ ತಜ್ಞ ಸಲಹೆಕಾರ್ತಿ ಆಗಿದ್ದಾಾರೆ. ಆತ್ಮಕಥಾನಕ ‘ಶೇಮ್’ ಬೆಸ್‌ಟ್‌ ಸೆಲ್ಲರ್ ಆಗಿ ಹೆಸರು ಗಳಿಸಿತು.