Sunday, 8th September 2024

ಏರಿಕೆ, ಸೋರಿಕೆ, ಜಿಗಿತ, ಕುಸಿತ

ತುಂಟರಗಾಳಿ

ಸಿನಿಗನ್ನಡ
ಕರ್ನಾಟಕದಲ್ಲಿ ಚಿತ್ರಮಂದಿರಗಳು ಮುಚ್ಚೋದು ಹೊಸ ಸುದ್ದಿ ಏನಲ್ಲ. ಆದರೆ ಈಗ ಈ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತಿದೆ. ಇದು ಕೇವಲ ಕರ್ನಾಟಕದ ಸಮಸ್ಯೆ ಅಲ್ಲ, ಸಿನಿಮಾ ಕ್ರೇಜ್ ಸಿಕ್ಕಾಪಟ್ಟೆ ಇರೋ ತಮಿಳುನಾಡಿನಲ್ಲೂ ೧೫೦ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚುತ್ತಿವೆಯಂತೆ.

ನಮ್ಮಲ್ಲಿಯೂ ಇನ್ನೇನು ಹಲವು ಚಿತ್ರಮಂದಿರಗಳು ಕೌಂಟರ್ ಕ್ಲೋಸ್ ಮಾಡುವ ಮಾತನ್ನಾಡುತ್ತಿವೆ. ಸ್ಟಾರ್ ಸಿನಿಮಾಗಳೂ ಕಾಸು ಮಾಡದೆ, ಗ
ಪೆಟ್ಟಿಗೆ ತುಂಬುತ್ತಿಲ್ಲ ಎಂದು ಮೊದಲೇ ಸಂಕಷ್ಟದಲ್ಲಿದ್ದ ಈ ಚಿತ್ರಮಂದಿರಗಳು ಈಗ, ಗಲ್ಲದ ಮೇಲೆ ಕೈ ಇಟ್ಟು ಕೂತಿವೆ. ಅಂದಹಾಗೆ ಇವೆಲ್ಲ ಕೇವಲ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಸಮಸ್ಯೆ. ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಗಳು ಹೇಗೋ ಬಚಾವಾಗಲು ಹಲವು ಇನ್ನೋವೇಟಿವ್ ದಾರಿಗಳನ್ನು ಹುಡುಕಿಕೊಳ್ಳುತ್ತವೆ.

ಆದ್ರೆ ಸಿಂಗಲ್ ಸ್ಕ್ರೀನ್‌ಗಳ ಕತೆ ಹಾಗಿಲ್ಲ. ಹಾಗಾಗಿ ಜನ ಚಿತ್ರಮಂದಿರಗಳಲ್ಲಿ ಮಿಂಗಲ್ ಆಗ್ತಾ ಇಲ್ಲ ಎನ್ನುವಂಥ ಟೈಮಲ್ಲಿ ಸಿಂಗಲ್ ಥಿಯೇಟರ್‌ಗಳು ವಿರಹ ವೇದನೆಯಿಂದ ನರಳುವ ಸಿಂಗಲ್‌ಗಳಂತೆ ಆಗಿವೆ. ಸದ್ಯಕ್ಕೆ ಹಲವು ಚಿತ್ರಮಂದಿರಗಳ ಮಾಲೀಕರು ತಮ್ಮ ಲೈಸೆ ರಿನ್ಯೂ ಮಾಡೋಕೆ
ಅರ್ಜಿಯನ್ನೂ ಹಾಕಿಲ್ಲವಂತೆ. ಇಷ್ಟು ದಿನ ತಮ್ಮ ಮರ್ಜಿ ಎನ್ನುವಂತೆ ಟಿಕೆಟ್ ದರವನ್ನು ಹೆಚ್ಚಿಸುತ್ತಿದ್ದ ಚಿತ್ರಮಂದಿರಗಳ ಮಾಲೀ ಕರು ಸರಕಾರದ ಫಿಫ್ಟಿ ಫಿಫ್ಟಿ ನೀತಿಯಿಂದಾಗಿ ಕರೋನಾ ಲಾಕ್‌ಡೌನ್ ನ ಒಂದಿಷ್ಟು ಕಂಗೆಟ್ಟಿದ್ದರು.

ಈಗ ಫಿಫ್ಟಿ ಫಿಫ್ಟಿ ಇರಲಿ, ಚಿತ್ರಮಂದಿರಗಳಲ್ಲಿ ಶೋಗಳೇ ಇಲ್ಲದೆ ಅವರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡು
ಸೀಟುಗಳನ್ನ ಬ್ಲಾಕ್ ಮಾಡಿಕೊಳ್ಳುತ್ತಿದ್ದ, ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಬ್ಲ್ಯಾಕ್ ಟಿಕೆಟ್ ಮಾರುತ್ತಿದ್ದ ಚಿತ್ರಮಂದಿರಗಳೇ ಈಗ ಬ್ಲಾಕ್ ಆಗುವ ಭಯದಲ್ಲಿವೆ. ಈ ಚಿತ್ರಮಂದಿರಗಳ ಸಿಟ್ ಔಟ್‌ನ ಕೂತು, ಕಮ್ ಆನ್ ಇನ್ ಅಂದ್ರೂ ಯಾರೂ ಬರ್ತಾ ಇಲ್ಲ. ಹಾಗಾಗಿ ಚಿತ್ರಮಂದಿರ ತುಂಬಿದೆ ಎಂಬ ಬೋರ್ಡ್ ನೋಡಬೇಕಾಗಿದ್ದ ಹಲವು ಕಡೆ ಇನ್ನುಮುಂದೆ ಚಿತ್ರಮಂದಿರ ಮುಚ್ಚಿದೆ ಎಂಬ ಬೋರ್ಡ್ ತಗಲಾಕಿದರೆ ಅಚ್ಚರಿಯಿಲ್ಲ.

ಲೂಸ್ ಟಾಕ್: ನರೇಂದ್ರ ಮೋದಿ

ಏನ್ ಸಾರ್, ದೇಶದಲ್ಲಿ ಬರೀ ನೀಟ್ ಪ್ರಶ್ನೆ ಪತ್ರಿಕೆಗಳಷ್ಟೇ ಅಲ್ಲ, ಏರ್ ಪೋರ್ಟ್‌ಗಳು ಕೂಡಾ ಸೋರಿಕೆ ಆಗ್ತಾ ಇವೆ. ಅವನ್ನೂ ನೀಟಾಗಿ ಕಟ್ಟಿಲ್ವಾ ನೀವು?
-ಏನ್ರೀ, ಬೆಲೆ ಏರಿಕೆ ಆದ್ರೂ  ಕಿರಿಕಿರಿ ಮಾಡ್ತೀರಾ, ಎದ್ರೂ ಸೋರಿಕೆ ಆದ್ರೂ ಕಿರಿಕಿರಿ ಮಾಡ್ತೀರಾ. ಏನ್ ನಿಮ್ ಪ್ರಾಬ್ಲಮ್ಮು?

ಇದರ ಜತೆ ಸೇತುವೆಗಳೂ ಕುಸಿಯುತ್ತಾ ಇವೆ ಅಂತ ಜನ ಕೇಳ್ತಾ ಇದ್ದಾರೆ ಸರಿ. ಯಾಕೆ ಹಿಂಗೆ ಅಂತ?
-ಅಯ್ಯೋ, ಅವರಿಗೇನ್ ಬಿಡ್ರಿ, ಷೇರು ಪೇಟೆಯಲ್ಲಿ ಜಿಗಿತ ಆದ್ರೂ ಮಾತಾಡ್ತಾರೆ. ಸೇತುವೆ ಕುಸಿತ ಆದ್ರೂ ಮಾತಾಡ್ತಾರೆ. ಸೇತುವೆ ಕುಸಿದ ತಕ್ಷಣ ಈ ವಿಷಯದಲ್ಲಿ ನಾವು ಸೋತೆವು ಅಂತ ಹೇಳೋಕಾಗುತ್ತಾ?

ಹಂಗಲ್ಲ, ಆದ್ರೂ ಸೇತುವೆಗಳು ಯಾಕೆ ಕುಸಿತಾ ಇವೆ ಅಂತ?
-ಅಯ್ಯೋ. ಸಮುದ್ರದ ನೀರಿನ ಮೇಲೆ, ಕಲ್ಲುಗಳನ್ನ ಹಾಕಿ ತೇಲಿಸಿ ಸೇತುವೆ ಕಟ್ಟಿದ ರಾಮನ ದೇಶ ಇದು. ಅದಕ್ಕೇ ನಾವೂ ಸ್ವಲ್ಪ ಹಂಗೇ ಕಟ್ಟೋಕೆ ಟ್ರೈ
ಮಾಡಿದ್ವಿ, ಹಿಂಗಾಗ್ಬಿಡ್ತು ಅಷ್ಟೇ.

ಏನೋ ಹೇಳಿ ಸೇತುವೆ ಕಟ್ಟಿದ ಕತೆ ಕಟ್ಟಿ, ಕಲ್ಲು ತೇಲಿಸಿದ ಹಾಗೆ ಮಾತು ತೇಲಿಸ್ತಾ ಇದ್ದೀರಾ. ನನ್ನ ಪ್ರಶ್ನೆಗೆ ಸರಿಯಾಗಿ ಉತ್ತರನೇ ಕೊಡ್ತಿಲ್ಲ ನೋಡಿ ನೀವು
-ನೀಟ್ ಎಕ್ಸಾಮ್ ಥರ, ನಿಮ್ಮ ಪ್ರಶ್ನೆಗಳೂ ಮೊದಲೇ ಲೀಕ್ ಆಗಿದ್ದಿದ್ರೆ ಸರಿಯಾಗಿ ಪ್ರಿಪೇರ್ ಆಗಿ ಉತ್ತರ ಕೊಡ್ತಿದ್ದೆ. ಅದೊಂದ್ ಬಾಕಿ ಇತ್ತು.

ಹೋಗ್ಲಿ, ಮೊನ್ನೆ ಕ್ರಿಕೆಟ್ ವರ್ಲ್ಡ್ ಕಪ್ ಟ್ರೋಫಿ ಕೈಯಲ್ಲಿ ಇಟ್ಕೊಂಡಿದ್ರಲ್ಲ, ಮಾರಿಬಿಡೋ ಪ್ಲ್ಯಾನ್ ಏನಾದ್ರೂ ಇತ್ತಾ?
-ಪ್ಲ್ಯಾನ್ ಏನೋ ಇತ್ತು. ಆದ್ರೆ ಅದು ಒರಿಜಿನಲ್ ಅಲ್ಲ, ಡ್ಯೂಪ್ಲಿಕೇಟ್ ಅಂತೆ. ಅದಕ್ಕೇ ಸುಮ್ಮನಾದೆ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮುಶ್ರೀ ಶಾಪಿಂಗ್ ಮಾಲ್‌ನಿಂದ ಖರೀದಿ ಮುಗಿಸಿ ಹೊರಬಂದಳು. ಕಾರಿನ ಕೀ ತೆಗೆಯಲು ಪರ್ಸ್‌ಗೆ ಕೈ ಹಾಕಿದರೆ ಕೀ ಸಿಗಲಿಲ್ಲ. ತಡಬಡಾಯಿಸಿ ಎಲ್ಲ ಕಡೆ ಹುಡುಕಿದರೂ ಕಾರ್ ಕೀನ ಸುಳಿವೇ ಇಲ್ಲ. ಅವಳಿಗೂ ಗೊತ್ತಿತ್ತು, ಕಾರ್ ಕೀ ವಿಷಯದಲ್ಲಿನ ತನ್ನ ಬೇಜವಾಬ್ದಾರಿತನ ಇದೇನೂ ಮೊದಲ ಬಾರಿ ಅಲ್ಲ ಎಂಬುದು. ಎಷ್ಟೋ ಸಾರಿ, ಕಾರ್ ಕೀಯನ್ನು ಕಾರಿನ ಬಿಟ್ಟು ಹೋಗಿದ್ದಕ್ಕಾಗಿ ಗಂಡ ಖೇಮುವಿನಿಂದ ಸಿಕ್ಕಾಪಟ್ಟೆ ಬೈಸಿಕೊಂಡಿದ್ದು ಅವಳಿಗಿನ್ನೂ ನೆನಪಿತ್ತು. ಈ ಸಲಾನೂ ಹಂಗೇ ಆಯ್ತಾ, ಹಂಗೇ ಆಗಿದ್ರೆ ಆಕಸ್ಮಾತ್ ಯಾರಾದ್ರೂ ಕಾರನ್ನು ಲಪಟಾಯಿಸಿದ್ರೆ ಏನ್ ಗತಿ ಎಂಬ ಆತಂಕದಲ್ಲಿ ಪಾರ್ಕಿಂಗ್ಗೆ ಓಡೋಡಿ ಬಂದಳು. ಅವಳಂದುಕೊಂಡ ಹಾಗೇ ಆಗಿತ್ತು. ಅಲ್ಲಿ ಅವಳ ಕಾರ್ ಇರಲಿಲ್ಲ. ತಕ್ಷಣ ಪೊಲೀಸರಿಗೆ ಕಾಲ್ ಮಾಡಿ ಕರೆಸಿ, ಕಾರ್‌ನ ಕಲರ್, ನಂಬರ್ ಮತ್ತಿತರ ವಿವರ ಕೊಟ್ಟು ದೂರು ಕೊಟ್ಟಳು.

ಪೊಲೀಸರು ಕಾರು ಹುಡುಕಲು ಹೊರಟರು. ಒಬ್ಬಳೇ ನಿಂತಿದ್ದ ಖೇಮುಶ್ರೀ ಸ್ವಲ್ಪ ಹೊತ್ತಿನ ನಂತರ, ಬೈಸಿಕೊಂಡರೂ ಪರವಾಗಿಲ್ಲ, ಯಾವುದಕ್ಕೂ ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸೋದು ಒಳ್ಳೇದು ಎಂದು ಖೇಮುಗೆ ಕಾಲ್ ಮಾಡಿ ಮೆಲ್ಲನೆ ಅಳುಕಿನಿಂದಲೇ ಹೇಳಿದಳು ‘ರೀ, ನನ್ನ ಕಾರ್ ಕೀ ಕಾರ ಬಿಟ್ಟಿz. ಈಗ ಕಾರು ಕಳುವಾಗಿದೆ. ಬಯ್ಬೇಡಿ, ನಾನಿಲ್ಲಿ ಶಾಪಿಂಗ್ ಮಾಲ್ ಬಳಿ ಒಬ್ಬಳೇ ಇದೀನಿ ಬರ್ತೀರಾ ಪ್ಲೀಸ್’. ಆ ಕಡೆಯಿಂದ ಗಂಡ ಖೇಮು ರೇಗಿದ, ‘ಅಯ್ಯೋ, ನಿನ್ನ, ಲೇ, ಇವತ್ತು ನೀನೆ ಡ್ರೈವ್ ಮಾಡ್ಕೊಂಡ್ ಹೋಗಿz.. ಬೆಳಿಗ್ಗೆ ನಾನೇ ನಿನ್ನ ಕಾರಲ್ಲಿ ಕರ್ಕೊಂಡ್ ಹೋಗಿ ಶಾಪಿಂಗ್ ಮಾಲ್ ಹತ್ರ ಬಿಟ್ ಬರಲಿಲ್ವಾ. ಈಗ ಈ ಪೊಲೀಸ್ನೋರಿಗೆ ನಿನ್ನ ಕಾರನ್ನ ನಾನು ಕದ್ದಿಲ್ಲ ಅಂತ ಕನ್ವಿ ಮಾಡಿ ಆಮೇಲ್ ಬರ್ತೀನಿ ಇರು’.

ಲೈನ್ ಮ್ಯಾನ್

ಮಹಾಲಕ್ಷ್ಮಿ ಮಹಾತ್ಮೆ
-ಮೊದಲೆ, ಭವ್ಯ, ಮಾಧವಿ, ಸರಿತಾ, ಅಂಬಿಕಾ, ಆರತಿ, ಭಾರತಿ, ಮಂಜುಳಾ.. ಯಾರೇ ಆಗಿರಲಿ.. ಹೀರೋಯಿನ್ ಎಷ್ಟೇ ಚೆನ್ನಾಗಿದ್ರೂ.. ಎಷ್ಟೇ ಕೆಟ್ಟದಾಗಿದ್ರೂ ‘ಒಳ್ಳೆ ಮಹಾಲಕ್ಷ್ಮಿ ಇದ್ದಂಗಿದೀಯಮ್ಮ’ ಅಂತ ಡೈಲಾಗ್ ಬರೀತಿದ್ರು.. ಕ್ರೆಡಿಟ್ ಸಿಗ್ತಾ ಇದ್ದಿದ್ದು ನಟಿ ಮಹಾಲಕ್ಷ್ಮಿಗೆ ಮಾತ್ರ

ಲಿವಿಂಗ್ ಆನ್ ದಿ ಎಡ್ಜ್
-ಗಾಡ್ ಫಾದರ್ ಥರ ಬೆನ್ನ ಹಿಂದೆ ನಿಂತು ನಮ್ಮನ್ನ ಪುಶ್ ಮಾಡೋರು ಯಾರೂ ಇಲ್ಲ ಅಂತ ಬೇಸರದಲ್ಲಿರೋರು, ಬೆಟ್ಟದ ತುದಿಯಲ್ಲಿ ನಿಂತ್ಕೊಬಾರದು

ಮನಿ ಮ್ಯಾಟರ್ಸ್

-ಪ್ರಶ್ನೆ- ಲೈಫಲ್ಲಿ ದುಡ್ಡಿರಬೇಕಾ? ಪ್ರೀತಿ ಇರಬೇಕಾ?
-ಉತ್ತರ-ದುಡ್ಡಿನ ಮೇಲೆ ಪ್ರೀತಿ ಇರಬೇಕು

ಲವ್‌ನಲ್ಲಿ ಹುಡುಗ ಕೈ ಕೊಟ್ರೆ – ಬಗಣಿ ಗೂಟ

ಹುಡುಗಿ ಕೈ ಕೊಟ್ರೆ – ಭಗಿನಿ ಗೂಟ
ಹಳೆ ಮಾತು: ಸಮುದ್ರ ದಡದಲ್ಲಿ ಕಪ್ಪೆಚಿಪ್ಪುಗಳು ಸಿಗುತ್ತವೆ. ಮುತ್ತುಗಳು ಬೇಕು ಅಂದ್ರೆ ಸಮುದ್ರದ ತಳಕ್ಕೆ ಹೋಗಬೇಕು.

ಹೊಸ ಮಾತು: ವಾಲ, ಟೈಮ್ಲೈನ್ ಗಳಲ್ಲಿ ಎಲ್ಲರೂ ಸಾಚಾಗಳೇ ಆಗಿರ್ತಾರೆ, ನಿಜವಾದ ಮುಖ ಗೊತ್ತಾಗಬೇಕು ಅಂದ್ರೆ ಇನ್‌ಬಾಕ್ಸ್‌ಗೆ ಹೋಗಬೇಕು.

ಚಳಿಗಾಲದ ಸಮಸ್ಯೆ -ಬೈಕಿನ ಹಿಂದೆ ಕೂತ ಹುಡುಗಿ ಬಾಯ್ ಫ್ರೆಂಡ್‌ನ ಅಪ್ಪಿಕೊಂಡಿರುವುದಕ್ಕೆ ಆ ಹುಡುಗನ ಮೇಲಿರೋ ಸಿಕ್ಕಾಪಟ್ಟೆ ಪ್ರೀತಿಯೇ ಕಾರಣ ಅಂತ ಹೇಳೋಕಾಗಲ್ಲ.

ನಮ್ ಜನ ಸರಿ ಇಲ್ಲಪ್ಪ,
-ಸಿಟ್ಟು ಬಂದಾಗ ರಾಜಕಾರಣಿಗಳನ್ನು ದೇಶದಿಂದ ಹೊರಗೆ ಹಾಕಬೇಕು ಅಂತಾರೆ

-ಈಗ ಅವರಾಗಿಯೇ ದೇಶದಿಂದ ಹೊರಗೆ ಹೋದರೆ ಸಿಟ್ಟು ಮಾಡಿಕೊಳ್ಳುತ್ತಾರೆ

ಸೀಕ್ವೆಲ್ ಮಾಡಲಾಗದ ಚಿತ್ರಗಳು
-ನಂ.೧
-ಒಕ್ಕೇ ಒಕ್ಕುಡು
-ಅಪವಾದ ಎಂಬಂತೆ ಎರಡೆರಡು ‘ಸ್ವರ್ಗ’ ತೋರಿಸಿದ್ದು ‘ಜನ್ನತ್ ೨’ ‘ಜನ್ನತ್ ೩’ ಸಿನಿಮಾ ಬಂದಿದ್ರೆ ಕನ್ನಡದಲ್ಲಿ ‘ಸ್ವರ್ಗಕ್ಕೆ ಮೂರೇ ಗೇಣು’ ಅಂತ
ರಿಮೇಕ್ ಮಾಡಬಹುದಿತ್ತು

ಮಾಡರ್ನ್ ಗಾದೆ
-ಸುಸ್ಸೂ ಬಂತು ಅಂತ ಬೆಂಗಳೂರು ‘ಒನ್’ಗೆ ಹೋಗೋಕಾಯ್ತದ..?

Leave a Reply

Your email address will not be published. Required fields are marked *

error: Content is protected !!