ಮೊನ್ನೆೆ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಒಂದು ಕಿಡಿ ಹತ್ತಿಸಿದರು. ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸುಡುವ ಕುರಿತು ಒಂದು ಟ್ವೀಟ್ ಮಾಡಿದ್ದರು. ಅವರು ಹೀಗೆ ಅಭಿಪ್ರಾಯಪಟ್ಟಿಿದ್ದರು. ‘ಇಷ್ಟು ವರ್ಷಗಳ ಜನ ಜಾಗೃತಿಯ ನಂತರ ಬೆಂಗಳೂರಿನಲ್ಲಿ ಪಟಾಕಿ ಸುಡುವ ಪ್ರವೃತ್ತಿ ಗಣನೀಯವಾಗಿ ಕಡಿಮೆ ಆಗಿದೆ. ಈ ಸಲದ ದೀಪಾವಳಿಯಲ್ಲಿ ಕೂಡ ಪಟಾಕಿ ಸುಟ್ಟಿದ್ದು ಕಡಿಮೆಯೇ. ಆದರೂ ಅಲ್ಲಲ್ಲಿ ಪಟಾಕಿ ಸದ್ದು ಇನ್ನೂ ಕೇಳಿ ಬರುತ್ತಿದೆ. ಅವಿವೇಕಿಗಳನ್ನು ತಿದ್ದುವುದು ಕಷ್ಟ. ಅವರಿಗೆ ತಡವಾಗಿ ಜ್ಞಾನೋದಯವಾಗುತ್ತದೆ. ಅಲ್ಲಿ ತನಕ ಸಹಿಸಿಕೊಳ್ಳಲೇಬೇಕು.’
ಭಟ್ ಅವರು ಟ್ವೀಟ್ ಮಾಡಿದ ತಕ್ಷಣ ಕೆಲವರು ಮೈಮೇಲೆ ಮುರುಕೊಂಡು ಬಿದ್ದವರಂತೆ ಪುಂಖಾನುಪುಂಖವಾಗಿ ಅವರು ವ್ಯಕ್ತಪಡಿಸಿದ ಅಭಿಪ್ರಾಾಯಕ್ಕೆ ವಿರುದ್ಧವಾಗಿ ಪ್ರತಿ ಟ್ವೀಟ್ ಮಾಡಲಾರಂಭಿಸಿದರು. ಪಟಾಕಿ ಹೊಡೆಯುವವರನ್ನು ಅವಿವೇಕಿಗಳು ಎಂದು ಭಟ್ ಅವರು ಸಂಬೋಧಿಸಿದ್ದು ಅವರೆಲ್ಲರಿಗೂ ಚೇಳು ಕಡಿದಂತಾಗಿತ್ತು. ಕೆಲವರಂತೂ ‘ಕಳ್ಳು ಕುಡಿದ ಮಳ್ಳು’ ಥರ ಟ್ವೀಟ್ ಮಾಡುತ್ತಿಿದ್ದರು. ಇವರೆಲ್ಲರ ವಾದ ಹೀಗಿತ್ತು. ದೀಪಾವಳಿ ಹಬ್ಬದಂದು ಪಟಾಕಿ ಹೊಡೆದರೆ ಏನಾಗುತ್ತದೆ? ಹಬ್ಬದ ದಿನದಂದೇ ಪರಿಸರ ಮಾಲಿನ್ಯದ ನೆನಪಾಗುತ್ತದಾ? ಮುಸಲ್ಮಾಾನರ ಬಕ್ರೀದ್ ಹಬ್ಬದಂದು ಎಷ್ಟು ಪರಿಸರ ಮಾಲಿನ್ಯ ಆಗುತ್ತದೆ ಎಂಬುದು ಗೊತ್ತಿಿಲ್ಲವಾ? ಕಾರಿನಲ್ಲಿ ಓಡಾಡಿದರೆ ಪೊಲ್ಲೂ ್ಯಷನ್ ಆಗೊಲ್ವಾಾ? ಎಸಿ ಬಳಸುವುದರಿಂದ ಪೊಲ್ಲ್ಯೂಷನ್ ಆಗೊಲ್ವಾಾ? ಸಿಗರೇಟು ಸೇದುವುದರಿಂದ ಮಾಲಿನ್ಯ ಆಗೊಲ್ವಾಾ? ನೀವು ಅವರನ್ನೇಕೆ ಪ್ರಶ್ನಿಿಸಿಲ್ಲ? ಬೆಂಗಳೂರಿನ ಟ್ರಾಾಫಿಕ್ ಸಿಗ್ನಲ್‌ನಲ್ಲಿ ವಾಹನಗಳ ಹೊಗೆಯಿಂದ ಎಷ್ಟು ಮಾಲಿನ್ಯ ಆಗುತ್ತೆೆ ಎಂಬುದು ನಿಮಗೆ ಗೊತ್ತಿಿಲ್ಲವಾ? ನೀವ್ಯಾಾಕೆ ಸೈಕಲ್‌ನಲ್ಲಿ ಹೋಗಬಾರದು? ಇವೆಲ್ಲವುಗಳ ಮುಂದೆ ಒಂದು ದಿನ ಪಟಾಕಿ ಸುಡುವುದರಿಂದ ಏನಾಗುತ್ತೆೆ? ಸಾವಿರಾರು ಕಾರ್ಖಾನೆಗಳು ಹೋಗೆ ಉಗುಳುತ್ತಿಿಲ್ಲವೇ? ಅವುಗಳಿಂದ ಪರಿಸರ ಮಾಲಿನ್ಯ ಆಗಿತ್ತಿಿಲ್ಲವೇ? ನೀವ್ಯಾಾಕೆ ನಿಮ್ಮ ಬೋಧನೆಯನ್ನು ಡಿಸೆಂಬರ್ ಮೂವತ್ತೊೊಂದರಂದು ಪಟಾಕಿ ಸುಡ್ತಾಾರಲ್ಲ, ಅವರಿಗೇಕೆ ಹೇಳಬಾರದವು? ದಿನಪತ್ರಿಿಕೆ ಮುದ್ರಿಿಸಲು ಎಷ್ಟು ಮರ ಕಡಿಯಲಾಗುತ್ತದೆ, ಅದರಿಂದ ಎಷ್ಟು ಪರಿಸರ ಮಾಲಿನ್ಯ ಆಗಿತ್ತೇ ಎಂಬುದು ನಿಮಗೆ ಗೊತ್ತಿಿಲ್ವಾಾ? ಎಲ್ಲಿ ತನಕ ಸಾಬರು ಕುರಿ ಕಡಿಯುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿ ತನಕ ನಾವು ಪಟಾಕಿ ಹೊಡೆಯುವುದನ್ನು ಯಾಕೆ ನಿಲ್ಲಿಸಬೇಕು? ದೀಪಾವಳಿ ಪಟಾಕಿ ಮೇಲೆ ನಿಮಗೇಕೆ ಕಣ್ಣು? …. ಇತ್ಯಾಾದಿ. ಇನ್ನುಳಿದಂತೆ ವೈಯಕ್ತಿಿಕ ಟೀಕೆ, ಬೈಗುಳ, ಅವರವರ ಯೋಗ್ಯತೆಗೆ ತಕ್ಕ ಮಾತು.
ಸುಮಾರು ನಾನೂರಕ್ಕೂ ಹೆಚ್ಚು ಕಾಮೆಂಟುಗಳನ್ನು ನೋಡಿದ ನಂತರ ನನಗನಿದ್ದು-ಪಟಾಕಿ ಹೊಡೆಯುವವರ ಬಗ್ಗೆೆ ಭಟ್ ಅವರು ಬಹಳ ನಾಜೂಕಿನಿಂದಲೋ, ಸಂಕೋಚದಿಂದಲೋ ಅಥವಾ ಬೇಸರದಿಂದಲೋ ಕೇವಲ ‘ಅವಿವೇಕಿಗಳು’ ಎಂದು ಹೇಳಿದರು. ಆದರೆ, ಇವರು ನಿಜವಾಗಿ ಅವಿವೇಕಿಗಳು ಮಾತ್ರ ಅಲ್ಲ, ಇಂಥ ಮನಸ್ಥಿಿತಿಯವರನ್ನು ಬದಲಿಸುವುದು ಸಾಧ್ಯವೇ ಇಲ್ಲ. ಇವರಿಗೆ ಬುದ್ಧಿಿ ಹೇಳಲು ಹೋಗಲೇಬಾರದು. ಇವರು ಆ ಕಡೆ ದಡ್ಡರೂ ಅಲ್ಲ, ಈ ಕಡೆ ವಿವೇಕವಂತರೂ ಅಲ್ಲ. ಈ ಅಂತರ-ಸ್ಥಿಿತಿಯಲ್ಲಿ ಇರುವವರನ್ನು ಸುಧಾರಿಸುವುದು ಸಾಧ್ಯವೇ ಇಲ್ಲ. ಅವರ ಜತೆ ಏನಂತ ವಾದ ಮಾಡ್ತೀರಿ? ದೀಪಾವಳಿ ದಿನ ಪಟಾಕಿ ಹೊಡಿಬೇಡ್ರೋೋ ಅಂತ ಹೇಳಿದರೆ, ಅವರಿಗೆ ಹಾಗೆ ಹೇಳಿದವರು ಎಡಪಂಥೀಯ ಎಂದೆನಿಸುತ್ತದೆ. (ಈ ಮೂಲಕವಾದರೂ ಭಟ್ ಅವರನ್ನು ಕೆಲ ಕಾಲ ಎಡಪಂಥೀಯರನ್ನಾಾಗಿಸಿದರು! ಚಚ್ಕೋೋಬೇಕು!!)
ಹಾಗಾದರೆ ಬಲಪಂಥೀಯರು ಬೌದ್ಧಿಿಕವಾಗಿ ಇಷ್ಟು ಬರಗೆಟ್ಟು ಹೋದರಾ? ದೀಪಾವಳಿ ದಿನ ಪಟಾಕಿ ಹೊಡೆದರೆ ಏನೇನೆಲ್ಲ ಅನಾಹುತ ಆಗುತ್ತೆೆ ಅಂತ ಹೇಳಿದರೆ, ಸಾಬರು ತಮ್ಮ ಹಬ್ಬದ ದಿನದಂದು ಪರಿಸರ ಮಾಲಿನ್ಯ ಮಾಡ್ತಾಾರಲ್ಲ ಆಗ ಅವರಿಗೆ ಬುದ್ಧಿಿ ಹೇಳಿದ್ರಾಾ ಅಂತ ಕೇಳ್ತಾಾರೆ. ಹಾಗಾದರೆ ಬಕ್ರೀದ್ ಹಬ್ಬ ಬಂದಾಗ, ಮಾಂಸ ಕಡಿಯಬೇಡಿ, ಅದರಿಂದ ಪರಿಸರ ಮಾಲಿನ್ಯ ಆಗಿತ್ತದೆ ಎಂದು ಹೇಳಿದರೆ ಅವರೇನು ಹೇಳುತ್ತಾಾರೆ ಗೊತ್ತಾಾ? ನಮಗ್ಯಾಾಕೆ *‘ಹೇಳೀರ್ರೀ, ಮೊದಲು ದೀಪಾವಳಿ ಹಬ್ಬದ ದಿನದಂದು ಪಟಾಕಿ ಹೊಡೆದು ಮಾಲಿನ್ಯ ಮಾಡ್ತಾಾರಲ್ಲ, ಅವರಿಗೆ ಬುದ್ಧಿಿ ಹೇಳಿ ನಮಗ್ಯಾಾಕೆ ಹೇಳ್ತೀರಾ?’ ಅಂದರೆ ಅವರು ಮಾಡ್ತಾಾರೆ ಅಂತ ಇವರು, ಇವರು ಮಾಡ್ತಾಾರೆ ಅಂತ ಅವರು, ಈ ರೀತಿ ಮಾಲಿನ್ಯ ಮಾಡುವುದನ್ನು ಮುಂದುವರಿಸಿದರೆ, ಅದರಲ್ಲಿಯೇ ಹೆಮ್ಮೆೆ ಕಾಣುವುದಾದರೆ , ಈ ಪರಿಸರದ ಗತಿಯೇನು? ಈ ರೀತಿಯ ಮೆಂಟಾಲಿಟಿ ಜನರ ವಾದಗಳನ್ನು ಕೇಳಿದರೆ ಭಯಂಕರ ಗಾಬರಿಯಾಗುತ್ತದೆ. ಮುಸಲ್ಮಾಾನರ ವಿರುದ್ಧ ಮುಯ್ಯಿಿ ತೀರಿಸಿಕೊಳ್ಳಲು ದೀಪಾವಳಿಗೆ ಪಟಾಕಿ ಹೊಡೆಯುತ್ತೇವೆ ಎನ್ನುವುದಾದರೆ, ಹಿಂದೂಗಳ ವಿರುದ್ಧ ಪ್ರತೀಕಾರಕ್ಕೆೆ ನಾವು ಮಾಂಸ ಕಡಿದು ಮಾಲಿನ್ಯ ಮಾಡ್ತೇವೆ ಎಂದು ಮುಸಲ್ಮಾಾನರು ಸೆಟೆದು ನಿಂತರೆ ಈ ಭೂಮಿ ಪರಿಸ್ಥಿಿತಿ ಏನಾಗಬೇಕು?
ಈಗ ಎಂಥ ವಿಷಮ ಸ್ಥಿಿತಿಯಲ್ಲಿ ನಾವಿದ್ದೇವೆ ಅಂದರೆ ಸಾಬರು ಮಾಂಸ ಕಡಿದು ಮಾಲಿನ್ಯ ಮಾಡುವುದನ್ನು ಬಿಡೊಲ್ಲ , ಹಿಂದೂಗಳು ಪಟಾಕಿ ಹೊಡೆದು ಮಾಲಿನ್ಯ ಮಾಡುವುದನ್ನೂ ಬಿಡೊಲ್ಲ. ಇವರಿಬ್ಬರ ಕಾದಾಟಕ್ಕೆೆ ಅಕ್ಷರಶಃ ಬಲಿಯಾಗುತ್ತಿಿರುವುದು ಪರಿಸರ! ಪರಿಸರ ಅಂದರೆ ಮತ್ತಿಿನ್ನೇನೋ ಅಲ್ಲ, ಅದು ನಾವೇ, ಪರಿಣಾಮ ಆಗುವುದು ನಮ್ಮ ಮೇಲೆಯೇ! ಈ ಪಟಾಕಿ-ಮಾಂಸ-ಮಾಲಿನ್ಯ ಎಂಬುದು ಅದೆಂಥ ಜಿದ್ದಿನ ವಿಷಯವಾಗಿದೆಯೆಂದರೆ, ಯಾರೂ ತಮ್ಮ ವಾದಗಳಿಂದ ಹಿಂದೆ ಸರಿಯುತ್ತಿಿಲ್ಲ. ಪರಿಸರ ಮಾಲಿನ್ಯವಾಗಿ ಹಾಳಾಗುವುದಾದರೆ ಆಗಲಿ ಎಂಬ ಧೋರಣೆ. ಹೀಗೆಲ್ಲ ವಾದಿಸುವವರು ಸುಶಿಕ್ಷಿತರೇ. ಅದೇ ನಿಜವಾದ ದುರಂತ. ‘ಯಾರೇ ಬುದ್ಧಿಿ ಹೇಳಿದರೂ ಕೇಳಬೇಡಿ, ಪಟಾಕಿ ಸುಡುವುದನ್ನು ನಿಲ್ಲಿಸಬೇಡಿ’ ಎಂದು ಹೇಳುವವರಿಗೆ ಸಹಾನುಭೂತಿ ಸಲ್ಲಿಸಬಹುದೇ ಹೊರತು ಮತ್ತೇನು ಮಾಡಲಾದೀತು?
ಮಾಲಿನ್ಯ ಎನ್ನುವುದು ಖಾತ್ರಿಿಯಾದರೆ ಅದನ್ನು ಯಾರೇ ಮಾಡಲಿ, ಅದನ್ನು ನಿಲ್ಲಿಸಬೇಕು. ಹಿಂದೂಗಳೇ ಮಾಡಲಿ, ಮುಸಲ್ಮಾಾನರೇ ಮಾಡಲಿ. ದೀಪಾವಳಿ ದಿನ ಮಾತ್ರ ಅಲ್ಲ, ವರ್ಷದಲ್ಲಿ ಯಾವ ಸಂದರ್ಭದಲ್ಲೂ ಸುಡಬಾರದು. ಮುಸಲ್ಮಾಾನರ ಹಬ್ಬದ ದಿನದಂದು ಮಾಲಿನ್ಯ ಮಾಡಲು ಬಿಡಬಾರದು. ಕಾನೂನು ಅಂದ್ರೆೆ ಎಲ್ಲರಿಗೂ ಒಂದೇ ಅಲ್ಲವೇ? ಇನ್ನು ಅವರು ಮಾಡಿದರೆಂದು ನಾವೂ ಮಾಡುವುದು, ಅವರಿಗೆ ಬುದ್ಧಿಿ ಇಲ್ಲ, ನಮಗೂ ಬುದ್ಧಿಿ ಇಲ್ಲ ಎಂಬುದನ್ನು ಸಾಬೀತುಪಡಿಸಿದಂತೆ.
ಅಷ್ಟಕ್ಕೂ ಪಟಾಕಿ ಎನ್ನುವುದು ಹಿಂದೂಗಳ ಐಡೆಂಟಿಟಿ ಅಲ್ಲ. ಅಲ್ಲದೇ ಅದನ್ನು ಐಡೆಂಟಿಟಿ ಆಗಿ ಇಟ್ಟುಕೊಳ್ಳ ಬೇಕಿಲ್ಲ. ಪಟಾಕಿ ಸಿಡಿಸಿದರೆ ದಕ್ಕುವುದು ಕರ್ಕಶ ಶಬ್ದ ಮತ್ತು ವಿಷ ಅನಿಲ. ಇದು ನಮ್ಮ ಸಂಸ್ಕೃತಿ ಅಲ್ಲವೇ ಅಲ್ಲ. ದೀಪಾವಳಿ ನಮ್ಮ ಆಚರಣೆ. ದೀಪ ಅರಿವಿನ ಸಂಕೇತ. ದೀಪಾವಳಿ ಆಚರಣೆ ಅಂದರೆ ಅದು ಅರಿವಿನ ಆಚರಣೆ, ವಿವೇಕದ ಆರಾಧನೆ. ದೀಪಾವಳಿ ಜ್ಞಾನದ ಸೂಚಕ. ಅಲ್ಲಿ ದೀಪವೇ ಹೀರೊ. ದೀಪ ಮತ್ತು ಪಟಾಕಿ ಪರಸ್ಪರ ವಿರುದ್ಧಾಾರ್ಥಕ ಪದಗಳು. ಒಂದು ಇದ್ದಲ್ಲಿ ಮತ್ತೊೊಂದು ಇರಲಾರದು. ದೀಪ ಇರುವಲ್ಲಿ ಕರ್ಕಶ ಶಬ್ದಕ್ಕೆೆ ಆಸ್ಪದವೇ ಇಲ್ಲ. ದೀಪ ಯಾವತ್ತೂ ಮಂದಸ್ಮಿಿತ. ದೀಪದಲ್ಲಿ ವಿಷವಿಲ್ಲ. ಅದು ಪ್ರಾಾಂಜಲ. ನೀವು ಹೀಗೆ ಹೇಳಿದರೆ, ‘ಇಲ್ಲ..ಇಲ್ಲ.. ದೀಪಾವಳಿ ಅಂದರೆ ಪಟಾಕಿಗಳನ್ನು ಸುಡಲೇಬೇಕು’ ಎಂದು ವಾದಿಸುವವರಿದ್ದಾರೆ. ದೀಪಾವಳಿ ಅಂದರೆ ಅದು ಪಟಾಕಿಗಳ ಸುಡುವ ಹಬ್ಬ ಎಂದು ತಮ್ಮದೇ ಅನಿಸಿಕೆಗಳನ್ನು ಹರಿಬಿಡುತ್ತಾಾರೆ.
ಸರಿ, ತಪ್ಪಿಿಲ್ಲ. ಆಗ ಪಟಾಕಿಗಳನ್ನು ಸುಡುತ್ತಿಿದ್ದರು ಎಂದೇ ಇಟ್ಟುಕೊಳ್ಳೋೋಣ. ಆದರೆ, ಆಗ ಈ ಪ್ರಮಾಣದ ಮಾಲಿನ್ಯ ಇರಲಿಲ್ಲ. ಕಾರಣ ಆಗ ಎಸಿ ಇರಲಿಲ್ಲ, ವಾಹನಗಳಿರಲಿಲ್ಲ, ಹೀಗಾಗಿ ವಾಹನಗಳ ಹೊಗೆ ಇರಲಿಲ್ಲ, ಯಾರೂ ಬೀಡಿ-ಸಿಗರೇಟುಗಳನ್ನು ಸೇದುತ್ತಿಿರಲಿಲ್ಲ ಅಥವಾ ಈ ಪ್ರಮಾಣದಲ್ಲಿ ಸೇದುತ್ತಿಿರಲಿಲ್ಲ, ಅಂಥವರ ಸಂಖ್ಯೆೆ ಹೆಚ್ಚಿಿರಲಿಲ್ಲ. ವಾಹನಗಳು ಇಲ್ಲದ್ದರಿಂದ ಟ್ರಾಾಫಿಕ್ ಜಾಮ್ ಆಗುತ್ತಿಿರಲಿಲ, ಮುಸ್ಲಿಿಮರೂ ಈ ಪ್ರಮಾಣದಲ್ಲಿ ಮಾಂಸ ಕಡಿಯುತ್ತಿಿರಲಿಲ್ಲ. ಜನಸಂಖ್ಯೆೆಯೂ ಇಷ್ಟೆೆಲ್ಲಾ ಇರಲಿಲ್ಲ. ಹೀಗಾಗಿ ಮಾಲಿನ್ಯ ಈ ಪ್ರಮಾಣದಲ್ಲಿ ಆಗುತ್ತಿಿರಲಿಲ್ಲ. ಒಟ್ಟಾಾರೆ ಹೇಳುವುದಾದರೆ, ಆಗ ಮಾಲಿನ್ಯ ಎಂಬ ಕಲ್ಪನೆಯೇ ಇರಲಿಲ್ಲ. ಹೀಗಾಗಿ ಆಗ ಪಟಾಕಿ ಹೊಡೆದರೂ ನಡೆಯುತ್ತಿಿತ್ತು. ಆಗ ಪಟಾಕಿಗಳಲ್ಲಿ ಸಹ ಹೆಚ್ಚಿಿನ ವೈವಿಧ್ಯಗಳಿರಲಿಲ್ಲ. ಸುರು ಸುರು ಬತ್ತಿಿ, ಭೂಚಕ್ರ, * ಗರ್ನಾಲುಗಳನ್ನೂ ಬಿಟ್ಟರೆ ಬೇರೆ ಪಟಾಕಿಗಳಿರಲಿಲ್ಲ. ಹೀಗಾಗಿ ಪಟಾಕಿಗಳನ್ನು ಸುಟ್ಟರೂ ಮಾಲಿನ್ಯದ ಪ್ರಮಾಣ ಬಹಳ ಕಡಿಮೆ ಇತ್ತು.
ಆದರೆ ಈಗ ಹಾಗಲ್ಲ, ನಾವು ಅಕ್ಷರಶಃ ಮಾಲಿನ್ಯಮಯ ಪ್ರಪಂಚದಲ್ಲಿ ಬದುಕುತ್ತಿಿದ್ದೇವೆ. ಈ ಜಗತ್ತಿಿನಲ್ಲಿ ಬದುಕುವ ನಾವು ಗಾಳಿಯನ್ನು ಸೇವಿಸುತ್ತಿಿಲ್ಲ, ಕುಡಿಯುತ್ತಿಿದ್ದೇವೆ. ಶುದ್ಧ ಗಾಳಿ ದೇವದುರ್ಲಭವಾಗಿದೆ. ದೃಶ್ಯ ಮಾಲಿನ್ಯ, ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಅಗ್ನಿಿ ಮಾಲಿನ್ಯ, ವಿಷ ಮಾಲಿನ್ಯ, ಆಹಾರ ಮಾಲಿನ್ಯ …ಹೀಗೆ ಹೆಜ್ಜೆೆ ಹೆಜ್ಜೆೆಗೆ ಮಾಲಿನ್ಯಮಯ ಜಗತ್ತಿಿನಲ್ಲಿ ಬದುಕುತ್ತಿಿದ್ದೇವೆ.
ಹಾಗೆ ನೋಡಿದರೆ, ನಾವ್ಯಾಾರೂ ವಾಹನಗಳನ್ನು ಬಳಸಲೇ ಬಾರದು, ಎಸಿ ಉಪಯೋಗಿಸಲೇಕೂಡದು, ಸಿಗರೇಟು ಸೇದಲೇಬಾರದು. ವಿಮಾನದಲ್ಲಿ ಪ್ರಯಾಣಿಸಲೇಕೂಡದು. ಇದರಿಂದ ಪರಿಸರದ ಮೇಲೆ ಒತ್ತದೆ ಮತ್ತು ಮಾಲಿನ್ಯಗಳಾಗುತ್ತವೆ. ಆದರೆ ಆಧುನಿಕ ಜಗತ್ತಿಿನಲ್ಲಿ ಅವುಗಳಿಲ್ಲದೇ ಮನುಷ್ಯ ಬದುಕಲಾರ. ವಾಹನಗಳಿಲ್ಲದ, ವಿಮಾನಗಳಿಲ್ಲದ ಜಗತ್ತನ್ನು ಕಲ್ಪಿಿಸಿಕೊಳ್ಳಲು ಸಾಧ್ಯವೇ? ಆದರೆ ಬಕ್ರೀದ್ ದಿನ ಮಾಂಸ ತಿನ್ನದಿದ್ದರೆ ಜಗತ್ತೇನೋ ಮುಳುಗಿಹೋಗುವುದಿಲ್ಲ. ದೀಪಾವಳಿ ದಿನ ಪಟಾಕಿ ಹೊಡೆಯದಿದ್ದರೆ ಜಗತ್ತಿಿನಲ್ಲಿ ಅಲ್ಲೋಲ ಕಲ್ಲೋಲ ಆಗುವುದಿಲ್ಲ.
ಹಾಗೆ ನೋಡಿದರೆ ಬಕ್ರೀದ್ ದಿನ ಮಾಂಸ ತಿಂದರೆ, ದೀಪಾವಳಿ ದಿನ ಪಟಾಕಿ ಹೊಡೆದರೆ ಅತೀವ ಮಾಲಿನ್ಯದಿಂದ ಜಗತ್ತು ಅಲ್ಲೋಲ ಕಲ್ಲೋಲವಾಗುತ್ತದೆ. ಮಾಂಸ ತಿನ್ನುವುದು ಮತ್ತು ಪಟಾಕಿ ಹೊಡೆಯುವುದು ಧಾರ್ಮಿಕ ಸಂಗತಿಗಳಲ್ಲ. ಇವೆರಡೂ ಮನುಷ್ಯನ * ಐಲುಗಳು, ಚಪಲಗಳು. ವರ್ಷದಲ್ಲಿ ಒಂದು ದಿನ ಮಾಂಸ ತಿಂದರೆ ಮಾಲಿನ್ಯವಾಗುತ್ತದಾ ಎಂದು ಸಾಬರು ವಾಸಿಸುತ್ತಾಾರೆ. ವರ್ಷದಲ್ಲಿ ಒಂದು ದಿನ ಪಟಾಕಿ ಹೊಡೆದರೆ ಅದೇನು ಮಾಲಿನ್ಯವಾಗುತ್ತದೆ ನೋಡೇ ಬಿಡೋಣ ಎಂದು ಹಿಂದೂಗಳು ಹೇಳುತ್ತಾಾರೆ. ಮೊದಲು ಮುಸ್ಲಿಿಮರಿಗೆ ಹೇಳಿ ಮಾಂಸ ತಿನ್ನೋೋದನ್ನು ನಿಲ್ಲಿಸಲು ಹೇಳಿ ಅಂತ ಹಿಂದೂಗಳು ಹೇಳುತ್ತಾಾರೆ. ನೀವು ಪಟಾಕಿ ಹೊಡೆಯಬಹುದು ನಾವು ಮಾಂಸ ತಿನ್ನಬಾರದಾ ಎಂದು ಮುಸ್ಲಿಿಮರು ವಾದಿಸುತ್ತಾಾರೆ. ಹೀಗಾಗಿ ಇಬ್ಬರೂ ಪರಿಸರದ ಮೇಲೆ ಅವ್ಯಾಾಹತವಾಗಿ ಆಕ್ರಮಣ ಮುಂದುವರಿಸಿದ್ದಾರೆ. ಯಾರೊಬ್ಬರ ಮೇಲೆ ಕ್ರಮ ಕೈಗೊಂಡರೆ ಇನ್ನೊೊಬ್ಬರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸದಂತಾಗುತ್ತದೆ.
ಪರಿಣಾಮ, ಎರಡೂ ಧರ್ಮಿಯರು ಪರಸ್ಪರ ಹಾಕ್ಯಾಾಟಕ್ಕೆೆ ಬಿದ್ದವರಂತೆ ತಮ್ಮ ತಮ್ಮ ಧಾರ್ಮಿಕ ಆಚರಣೆಗಳ ದಿನಗಳಂದು ಮಾಲಿನ್ಯದಲ್ಲಿ ನಿರತರಾಗುವುದೇ ಹಬ್ಬ ಎಂದು ಭಾವಿಸಿದ್ದಾರೆ. ಪರಿಸರದ ಮೇಲೆ ಆಕ್ರಮಣ ಎಸಗುವುದಕ್ಕೆೆ ಲೈಸೆನ್‌ಸ್ ಪಡೆದವರಂತೆ ವರ್ತಿಸಲಾರಂಭಿಸಿದ್ದಾರೆ. ಅಂದರೆ ತಮ್ಮ ತಮ್ಮ ಧಾರ್ಮಿಕ ಆಚರಣೆ ನೆಪದಲ್ಲಿ ಮಾಲಿನ್ಯಕ್ಕೆೆ ಕಾರಣರಾಗುವುದೇ ತಮ್ಮ ಹಕ್ಕು, ಪರಮಾಧಿಕಾರ ಎಂದು ಭಾವಿಸಿದ್ದಾರೆ. ಹಾಗಂತ ಹಿಂದೂಗಳಾಗಲಿ, ಮುಸ್ಲಿಿಮರಾಗಲಿ ಬೇರೆ ಗ್ರಹದಲ್ಲಿ ಜೀವಿಸುತ್ತಿಿಲ್ಲ. ಇಬ್ಬರೂ ಇದೇ ಭೂಮಿಯ ಮೇಲೆ ಒಟ್ಟಿಿಗೆ ಜೀವಿಸುತ್ತಿಿದ್ದಾರೆ. ಒಬ್ಬರು ಸೃಷ್ಟಿಿಸುವ ಮಾಲಿನ್ಯಕ್ಕೆೆ ಇಬ್ಬರೂ ಏಕಕಾಲಕ್ಕೆೆ ಬೆಲೆ ತೆರಲೇಬೇಕು. ಆದರೂ ಯಾರೂ ತಮ್ಮ ತಮ್ಮ ಧಾರ್ಮಿಕ ಆಚರಣೆ ನಿಮಿತ್ತ ಪರಿಸರಕ್ಕೆೆ ಮಾಲಿನ್ಯಕ್ಕೆೆ ಆಸ್ಪದ ಕೊಡುವುದಿಲ್ಲ ಎಂದು ಹೇಳುವುದಿಲ್ಲ. ನಾವು ಪರಿಸರ ಮಾಲಿನ್ಯ ಮಾಡೇ ಮಾಡುತ್ತೇವೆ, ಅವರು ಮಾಡುವಾಗ ಯಾಕೆ ಸುಮ್ಮನಿದ್ದಿರಿ ಎಂದು ಪ್ರಶ್ನಿಿಸುತ್ತಾಾ ಎಂದು ಹಠಕ್ಕೆೆ ಬಿದ್ದವರಂತೆ ವರ್ತಿಸುತ್ತಾಾರೆ. ಇವರಿಬ್ಬರೂ ಬೇರೆ ಗ್ರಹಗಳಲ್ಲಿ ಜೀವಿಸುತ್ತಿಿದ್ದಾರೆ, ಈ ರೀತಿಯ ವಾದ-ವಿವಾದಗಳಿಗೆ ತಲೆಕೆಡಿಸಿಕೊಳ್ಳಬೇಕಿರಲಿಲ್ಲ. ಆದರೆ, ಇಬ್ಬರೂ ಒಟ್ಟಿಿಗೇ ಜೀವಿಸುತ್ತಿಿದ್ದಾರೆ. ತಾನು ಸುಟ್ಟ ಪಟಾಕಿಯ ವಿಷಗಾಳಿಯನ್ನು ಮೊದಲು ನಾನೇ ಸೇವಿಸೋದು ಎಂಬ ಪ್ರಾಾಥಮಿಕ ಸಂಗತಿಯೂ ಅವನಿಗೆ ಅರ್ಥವಾಗುವುದಿಲ್ಲ. ಅದೇ ರೀತಿ ಮುಸ್ಲಿಿಮನಿಗೂ ತಾನೆಷ್ಟು ಹೊಲಸು ಮಾಡಿ, ಗಬ್ಬೆೆಬ್ಬಿಿಸಿ, ಪರಿಸರ ಮಾಲಿನ್ಯಕ್ಕೆೆ ಕಾರಣನಾಗಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ.
ಸಿಗರೇಟು ಸೇದುವವನು ಬೇರೆಯವರನ್ನು ಸುಡುವ ಮೊದಲು ತನ್ನನ್ನು ಸುಟ್ಟುಕೊಳ್ಳುತ್ತಾಾನೆ ಎಂಬ ಎಚ್ಚರವಿದ್ದರೆ ಸಿಗರೇಟು ಸೇದುವ ಬಗ್ಗೆೆ ಅವನ ಧೋರಣೆ ಬದಲಾಗುತ್ತದೆ. ಸಿಗರೇಟು ಸೇದುವುದು ಸಾಮಾಜಿಕ ಪಿಡುಗು ಎಂಬುದಕ್ಕಿಿಂತ ಅದು ತನ್ನ ಹಕ್ಕು ಎಂದೇ ಆತ ಭಾವಿಸುತ್ತಾಾನೆ. ಹೀಗಾಗಿ ಅವನಿಗೆ ಬೇರೆಯವರು ಸಿಗರೇಟು ಸೇದಬೇಡಿ ಎಂದರೆ ತನ್ನ ಹಕ್ಕಿಿಗೆ ಚ್ಯುತಿಯಾಯಿತು ಎಂದೇ ಭಾವಿಸುತ್ತಾಾನೆ. ಆತ ಪರಿಸರ ಮಾಲಿನ್ಯದ ಬಗ್ಗೆೆ ಸ್ವಲ್ಪವೂ ಯೋಚಿಸುವುದೇ ಇಲ್ಲ. ಇದೇ ಧೋರಣೆಯನ್ನು ಬಕ್ರೀದ್ ದಿನದಂದು ಮಾಂಸ ಕಡಿಯುವವ ಮತ್ತು ದೀಪಾವಳಿ ದಿನದಂದು ಪಟಾಕಿ ಸುಡುವವ ಬೆಳೆಸಿಕೊಂಡಿರುತ್ತಾಾರೆ. ಆಗ ಅವರಿಗೆ ಮಾಲಿನ್ಯಕ್ಕಿಿಂತ ಹೆಚ್ಚಾಾಗಿ ತಮ್ಮ ತಮ್ಮ ಧಾರ್ಮಿಕ ಆಚರಣೆಗಳ ಹಕ್ಕುಗಳೇ ಬಲವಾಗಿ ಜಾಗೃತವಾಗುತ್ತವೆ.
ಆಘಾತಕಾರಕ ಸಂಗತಿಯೇನೆಂದರೆ ಇವರಿಬ್ಬರಿಗೂ ತಾವು ತಮ್ಮ ಸುತ್ತ ಎಂಥ ಭಯಾನಕವಾದ ನರಕವನ್ನು ಸೃಷ್ಟಿಿಸುತ್ತಿಿದ್ದೇವೆ ಎಂಬುದು ಗೊತ್ತೇ ಆಗುವುದಿಲ್ಲ. ದೀಪಾವಳಿ ದಿನ ಪಟಾಕಿ ಸುಡುವವನಿಗೆ, ಬಕ್ರೀದ್ ದಿನ ಮಾಂಸ ಕಡಿಯುವವನಿಗೆ ಉಪದೇಶವಲ್ಲ, ನಾಲ್ಕು ತಿಳಿವಳಿಕೆ ಮಾಲುಗಳನ್ನು ಹೇಳಿ, ಅವರಿಬ್ಬರೂ ನಿಮ್ಮ ಮೇಲೆ ಮುರುಕೊಂಡು ಬರುತ್ತಾಾರೆ. ಮೊದಲು ಅವರಿಗೆ ಹೇಳ್ರೀ ಅಂತ ಹಿಂದೂ, ಮೊದಲು ಇವನಿಗೆ ಹೇಳ್ರೀ ಅಂತ ಮುಸ್ಲಿಿಂ ವಾದ ಮಾಡುತ್ತಾಾನೆ. ಆದರೆ, ಇಬ್ಬರಿಗೂ ತಾವು ತಮಗೆ ಮತ್ತು ಇಡೀ ಸಮಾಜಕ್ಕೆೆ, ವಿಶ್ವಕ್ಕೆೆ ಎಂಥ ದ್ರೋಹ ಮಾಡುತ್ತಿಿದ್ದೇವೆ ಎಂಬ ಸಣ್ಣ ಕಲ್ಪನೆಯೂ ಇರುವುದಿಲ್ಲ. ಒಬ್ಬರ ಮೇಲಿನ ರೊಚ್ಚಿಿಗೆ ಮತ್ತೊೊಬ್ಬರು ತಮ್ಮ ತಮ್ಮ ಹೊಲಸು ಕೆಲಸವನ್ನು ಮತ್ತು ಪಾಪ ಕಾರ್ಯವನ್ನು ಮುಂದುವರಿಸುತ್ತಾಾರೆ.
ಕಳೆದ ಮೂರು ದಿನಗಳಿಂದ ಹೊಡೆಯುತ್ತಿಿರುವ ಪಟಾಕಿಗೆ ದೇಶದ ರಾಜಧಾನಿ ದಿಲ್ಲಿ ಪತರಗುಟ್ಟಿಿಹೋಗಿದೆ.** ಈಛ್ಝಿಿಜಿಇಟಛಿ ಎಂಬ ಹ್ಯಾಾಶ್‌ಟ್ಯಾಾಗ್ ಎರಡು ದಿನಗಳಿಂದ ನ್ಯಾಾಷನಲ್ ಟ್ರೆೆಂಡ್ ಆಗಿದೆ. ಹಿಂದೆಂದೂ ಆಗದಷ್ಟು ದಿಲ್ಲಿಯ ಗಾಳಿ ವಿಷಯುಕ್ತವಾಗಿದೆ. ಆ ಪ್ರಮಾಣದಲ್ಲಿ ಅಲ್ಲಿನ ಜನ ಪಟಾಕಿ ಸುಟ್ಟಿಿದ್ದಾರೆ. ದಿಲ್ಲಿ ನಗರದ ಮೇಲೆ ವಿಷಾನಿಲಗಳ ಕಾರ್ಮೋಡ ಕಟ್ಟಿಿಕೊಂಡು ಹಗಲು ಹೊತ್ತೇ ಮಬ್ಬುಗತ್ತಲು ನಿರ್ಮಾಣವಾಗಿದೆ. ಇನ್ನು ಎರಡು ದಿನ ಇದೇ ಪ್ರಮಾಣದಲ್ಲಿ ಮದ್ದು-ಗುಂಡುಗಳನ್ನು ಸುಟ್ಟರೆ, ಜನರಿಗೆ ಉಸಿರಾಡಲು ಕಷ್ಟವಾಗಬಹುದು ಎಂದು ದಿಲ್ಲಿ ಸರಕಾರಕ್ಕೆೆ ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ವಾಹನಗಳ ಮಾಲಿನ್ಯದಿಂದ ನಲುಗಿ ಹೋಗಿರುವ ದಿಲ್ಲಿ, ಪಟಾಕಿ ಸೇರಿದಂತೆ ಯಾವ ಮಾಲಿನ್ಯವನ್ನೂ ಸಹಿಸಿಕೊಳ್ಳುವ ಸ್ಥಿಿತಿಯಲ್ಲಿ ಇಲ್ಲ. ಜಗತ್ತಿಿನ ಅತ್ಯಂತ ಅಪಾಯಕಾರಿ ವಾಯು ಮಾಲಿನ್ಯ ಎದುರಿಸುತ್ತಿಿರುವ ನಗರಗಳು ಯಾವವು ಎಂದರೆ ಮೊದಲ ಹತ್ತು ಸ್ಥಾಾನಗಳಲ್ಲಿ ಭಾರತದ ಮೂರು ನಗರ (ದಿಲ್ಲಿ, ಮುಂಬೈ ಮತ್ತು ಕೊಲ್ಕತ್ತಾಾ) ಗಳು ಕಾಣಿಸಿಕೊಳ್ಳುತ್ತವೆ. ಈ ನಗರಗಳ ಸ್ಥಿಿತಿ ಅಷ್ಟೊೊಂದು ದಾರುಣವಾಗಿವೆ. ದೀಪಾವಳಿ ಪಟಾಕಿಗಳನ್ನು ಸಹಿಸಿಕೊಳ್ಳಲು ದಿಲ್ಲಿಗೆ ಇನ್ನು ಕನಿಷ್ಠ ಒಂದು ತಿಂಗಳಾದರೂ ಬೇಕು. ಆದರೆ ಸಾರ್ವಜನಿಕ ಆರೋಗ್ಯದ ಮೇಲೆ ಇದರ ಪರಿಣಾಮ ಮಾತ್ರ ಅತ್ಯಂತ ದಾರುಣ ಮತ್ತು ಭಯಾನಕ.
ಪ್ರಾಾಯಶಃ ಮೋದಿ, ಅಮಿತ್ ಶಾ ಅಥವಾ ಆರೆಸ್ಸೆೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರೆ ಮಾತ್ರ ಜನ ದೀಪಾವಳಿ ದಿನ ಪಟಾಕಿ ಹೊಡೆಯದೇ ಸುಮ್ಮನಿರಬಹುದು! ಬೇರೆ ಯಾರೇ ಹೇಳಿದರೂ ಕೇಳುವ ಸ್ಥಿಿತಿಯಲ್ಲಿ ಜನರಿಲ್ಲ. ಅಷ್ಟರಮಟ್ಟಿಿಗೆ ಪಟಾಕಿ ಸುಡುವುದು ಒಂದು ಧಾರ್ಮಿಕ ಆಚರಣೆಯಾಗಿ, ಪ್ರೆೆಸ್ಟೀಜ್ ಇಶ್ಯೂ ಆಗಿ ಪರಿಣಮಿಸಿದೆ.
‘ಈ ಜಗತ್ತನ್ನು ನೀವೆಲ್ಲಾ ಸೇರಿ ಹಾಳು ಮಾಡಿದ್ದೀರಿ. ಇದನ್ನು ಸರಿಪಡಿಸಲಾರದಷ್ಟು ಸತ್ಯಾಾನಾಶ ಮಾಡಿದ್ದೀರಿ. ನೀವು, ನಿಮ್ಮ ತಂದೆ, ತಾತಂದಿರೆಲ್ಲ ಸೇರಿ ನಮಗೆ ಅತ್ಯಂತ ದುಸ್ಥಿಿತಿಯಲ್ಲಿರುವ ಭೂಮಿಯನ್ನು ಕೊಡುತ್ತಿಿದ್ದೀರಿ. ನೀವು ಮಾಡಿದ ದುಷ್ಕೃತ್ಯಗಳಿಂದ ಈ ಭೂಮಿಯನ್ನು ಇನ್ನು ನೂರಾರು ವರ್ಷಗಳಾದರೂ ಸರಿಪಡಿಸಲು ಸಾಧ್ಯವಿಲ್ಲ. ಸುಡಾನ್ ನಲ್ಲೋ, ಇಥಿಯೋಪಿಯಾದಲ್ಲೋ ಒಂದು ಕಪ್ಪೆೆ ಸಂತತಿ ಸತ್ತರೆ ಅದರ ಪರಿಣಾಮ ಜಗತ್ತಿಿನ ಎಲ್ಲಾ ರಾಷ್ಟ್ರಗಳ ಮೇಲೂ ಆಗುತ್ತದೆ. ಇಂದು ಈ ಭೂಮಿ ಅದೆಷ್ಟು ನಾಜೂಕಾಗಿದೆ ಎಂದರೆ ನಮ್ಮ ಯಾವ ಮೂರ್ಖ ನಿರ್ಧಾರಗಳನ್ನು ತಡೆದುಕೊಳ್ಳುವ, ಸಹಿಸಿಕೊಳ್ಳುವ ಸ್ಥಿಿತಿಯಲ್ಲಿ ಈ ಭೂಮಿ ಇಲ್ಲ. ಈ ಭೂಮಿಯನ್ನು ಉಳಿಸಲು ಪ್ರತಿಯೊಬ್ಬ ವ್ಯಕ್ತಿಿಯ ಭಾಗೀದಾರಿಕೆ ಬೇಕಾಗಿದೆ. ಒಬ್ಬ ವ್ಯಕ್ತಿಿ ಮಾಡುವ ತಪ್ಪುು ನಡೆಯೂ ಈ ಭೂಮಿಗೆ ಹೊರೆಯಾಗಬಹುದು, ಅದೇ ಮರಣ ಶಾಸನವಾಗಬಹುದು’ ಎಂದು ಹದಿನಾರು ವರ್ಷದ ಪೋರಿ, ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ಕೈಮುಗಿದು ಕೇಳಿಕೊಂಡಳು.
ಪಟಾಕಿ ಹೊಡೆಯಬೇಡಿ, ಪರಿಸರಕ್ಕೆೆ ಮಾರಕವಾಗುವ ಕೆಲಸ ಮಾಡಬೇಡಿ ಎಂದು ಮಕ್ಕಳು ತಮ್ಮ ಪಾಲಕರಿಗೆ ಬುದ್ಧಿಿ ಹೇಳುತ್ತಿಿದ್ದಾರೆ. ಆದರೆ ನಮ್ಮ ಜನರಿಗೆ ಅವೆಲ್ಲ ತಲೆಯೊಳಗೆ ಹೋಗುತ್ತಿಿಲ್ಲ. ನಮ್ಮ ದುಡ್ಡಲ್ಲಿ ನಾವು ಪಟಾಕಿ ಹೊಡೆದರೆ ನಿಮಗೇನಾಗುತ್ತದೆ ಎಂದು ಶತಮೂರ್ಖರಂತೆ ಪ್ರಶ್ನೆೆ ಮಾಡುತ್ತಾಾರೆ. ಹಬ್ಬಕ್ಕೂ ಪಟಾಕಿಗೂ, ಪಟಾಕಿಗೂ ಧರ್ಮಕ್ಕೂ ಸಂಬಂಧ ಇಲ್ಲ ಎಂದು ಹೇಳಿದರೆ ಕೇಳುವ ಸ್ಥಿಿತಿಯಲ್ಲಿ ಇಲ್ಲ.
ಸದ್ಯಕ್ಕಂತೂ ಮುಸ್ಲಿಿಮರು ಬಕ್ರೀದ್ ದಿನ ಪ್ರಾಾಣಿವಧೆ ಮಾಡಿ ಪರಿಸರ ಮಾಲಿನ್ಯ ಮಾಡುವುದನ್ನು ನಿಲ್ಲಿಸುವುದಿಲ್ಲ. ಹಿಂದೂಗಳು ದೀಪಾವಳಿ ದಿನ ಪಟಾಕಿ ಸುಡುವುದನ್ನೂ ನಿಲ್ಲಿಸುವುದಿಲ್ಲ.
ಈ ಭೂಮಿಯನ್ನು ಆ ಭಗವಂತ ಬಂದರೂ ಕಾಪಾಡಲಾರ!