Wednesday, 11th December 2024

ಚಿತ್ರೀಕರಣ ಬರದಿಂದ ಸಾಗುತ್ತಿದೆ

ತುಂಟರಗಾಳಿ

ಸಿನಿಗನ್ನಡ

ಈ ವಾರ ಬಿಡುಗಡೆ ಆಗಿರೋ ‘ಕಾಂಗರೂ’ ಸಿನಿಮಾದ ಬಗ್ಗೆ ಹೇಳೋದಾದ್ರೆ, ಸಿನಿಮಾ ನಿರೀಕ್ಷೆಗೂ ಮೀರಿ ಚೆನ್ನಾಗಿದೆ. ಆದಿತ್ಯ ಅವರನ್ನ ಕಂಡ್ರೆ
ನಂಗಂತೂ ತುಂಬಾ ಭಯನಪ್ಪ. ಇನ್ನು ಚಿತ್ರದ ಕಥೆ ಏನು ಅಂತ ಗೊತ್ತಾದ ಮೇಲೆ ಇಷ್ಟು ಒಳ್ಳೆ ಟೈಟಲ್ ಇರೋ ಸಿನಿಮಾ ಬಂದು ಬಹಳ ದಿನ ಆಗಿತ್ತು ಅನ್ನಿಸುತ್ತೆ. ಭ್ರೂಣ ಹತ್ಯೆಯ ಎಳೆ ಇಟ್ಕೊಂಡು ಒಂದೊಳ್ಳೆ ಸಸ್ಪೆನ್ಸ್, ಹಾರರ್ ಸಿನಿಮಾ ಮಾಡಿದ್ದಾರೆ ಕಿಶೋರ್. ಹಾಗಾಗಿ ಈ ಸಿನಿಮಾ ನೋಡಿದ
ಹೆಣ್ಣುಮಕ್ಕಳು ನಿರ್ದೇಶಕರಿಗೆ SeZho ಟಞ ಠಿeಛಿ ಚಿಟಠಿಠಿಟಞ ಟ್ಛ ಞqs oಠಿಟಞ Ze ಅಂತ ಹೇಳಬಹುದು.

ಭೂತದ ಛಾಯೆ ಇರೋ ಸಿನಿಮಾ ಆದ್ರೂ ಇದು ಅದ್ಭುತ ಸಿನಿಮಾ ಏನಲ್ಲ. ಆದ್ರೆ ಒಬ್ಬ ಮನುಷ್ಯನ ಭೂತಕಾಲ ಅವನನ್ನ ಹೆಂಗೆ ಹಂಟ್ ಮಾಡುತ್ತೆ
ಅನ್ನೋ ಆಧಾರದ ಮೇಲೆ ಒಂದು ಡೀಸೆಂಟ್ ಸಿನಿಮಾ ಮಾಡಿದ್ದಾರೆ ಕಿಶೋರ್. ಗರ್ಭಪಾತ ಮಾಡಿಸೋರು ಇದ್ದಕ್ಕಿದ್ದಂತೆ ಭೂಗತ ಆಗೋ ಕಥೆಯಲ್ಲಿನ ಕ್ಲೈಮ್ಯಾಕ್ಸ್ ತುಂಬಾ ಅರ್ಥಗರ್ಭಿತವಾಗಿದೆ. ಈ ಸಿನಿಮಾ ನೋಡಿದ ಮೇಲೆ ಅನ್ನಿಸಿದ್ದು ಅಂದ್ರೆ, ನಿರ್ದೇಶಕ ಕಿಶೋರ್ ಈ ಹಾರರ್ ಸಿನಿಮಾದಲ್ಲೇ ಪ್ರೇಕ್ಷಕರನ್ನ ಚೆನ್ನಾಗಿ ಹೆದರಿಸಿದ್ದಾರೆ.

ಕೆಟ್ಟದಾಗಿ ರಿವ್ಯೂ ಮಾಡಿದ್ರೆ ಹಂಗೆ ಮಾಡ್ತೀನಿ ಹಿಂಗ್ ಮಾಡ್ತೀನಿ ಅಂತ ಆದಿತ್ಯ ಅವರು ಸಪರೇಟ್ ಆಗಿ ಹೆದರಿಸೋದು ಬೇಕಿರಲಿಲ್ಲ. ಕಿಶೋರ್ ಅವರ ಹೆಗ್ಗಳಿಕೆ ಅಂದ್ರೆ ಚಿತ್ರದ ಸಸ್ಪೆನ್ಸ್‌ನ ಓZಜZಟಟ ಪ್ರಾಣಿ ತನ್ನ ಹೊಟ್ಟೆಯ ಚೀಲದಲ್ಲಿ ತನ್ನ ಮರೀನ ಜೋಪಾನವಾಗಿ ಕಾಪಾಡೋ ಹಾಗೆ ಕೊನೆವರೆಗೂ ಕಾಪಾಡಿಕೊಂಡು ಹೋಗಿದ್ದಾರೆ. ಆದಿಯಿಂದ ಅಂತ್ಯದವರೆಗೂ ಆದಿತ್ಯ ಕಥೆಯ ಅಗತ್ಯಕ್ಕೆ ತಕ್ಕಂತೆ ಗಂಭೀರವಾಗಿಯೇ ನಟಿಸಿದ್ದಾರೆ. ಅದನ್ನ, ಅವರಿಗೆ ಅಷ್ಚೇ ಆಕ್ಟಿಂಗ್ ಬರೋದು ಅಂತ ತಪ್ಪು ತಿಳ್ಕೋಬಾರದು.

ಒಟ್ಟಾರೆ ಹೇಳೋದಾದ್ರೆ, ಕಾಂಗರೂ ಸಿನಿಮಾನ ಒಬ್ಬ ರಿವ್ಯೂವರ್ ಆಗಿ ನೋಡುವಾಗ, ಸಿನಿಮಾದಲ್ಲಿರುವ ದೆವ್ವಕ್ಕಿಂತ ಆದಿತ್ಯ ಅವ್ರನ್ನ ನೋಡಿದಾಗ್ಲೇ ಜಾಸ್ತಿ ಭಯ ಆಗ್ತಿತ್ತು- ಎಲ್ಲಿ ಏನ್ ಮಾಡಿಬಿಡ್ತಾರೋ ಅಂತ. ಹಂಗಾಗಿ ನಂಗೆ ಸಿನಿಮಾ ಇಷ್ಟ ಆಯ್ತು ಅನ್ಸುತ್ತೆ. ಕಿಶೋರ್ ಮೇಗಳಮನೆ ಒಂದು ಒಳ್ಳೆ ಸಿನಿಮಾ ಅಂತೂ ಮಾಡಿದ್ದಾರೆ. ಇದರ ಜತೆಗೆ, ಅಟ್‌ಲೀಸ್ಟ್ ಸಿನಿಮಾ ಥಿಯೇಟರ್‌ನಲ್ಲಿ ಇರೋವರೆಗಾದ್ರೂ ತಮ್ಮ ನಾಯಕ ನಟನಿಗೆ ಬಾಡಿಗೆ ಕ್ಯಾಮೆರಾ ಗಳ ಮುಂದೆ ಬಾಯಿಗೆ ಬಂದಂತೆ ಮಾತಾಡದೆ ಮುಚ್ಕೊಂಡ್ ಕೂತಿರೋಕೆ ಹೇಳಿದ್ರೆ, ಒಂದಷ್ಟ್ ಜನನಾದ್ರೂ ಸಿನಿಮಾ ನೋಡಬಹುದು.

ಲೂಸ್ ಟಾಕ್

? ಸ್ಯಾಂಡಲ್‌ವುಡ್ ಹೊಸ ಡೈರೆಕ್ಟರ್ ಏನ್ ಸರ್, ಹೆಂಗ್ ನಡೀತಿದೆ ನಿಮ್ಮ ಸಿನಿಮಾ ಶೂಟಿಂಗ್?
– ಅಯ್ಯೋ ಚಿತ್ರೀಕರಣ ಬರದಿಂದ ಸಾಗುತ್ತಿದೆ ಕಣ್ರೀ.

ರೀ ಅದು ಬರದಿಂದ ಅಲ್ಲ, ಭರದಿಂದ; ಕನ್ನಡ ಸಿನಿಮಾ ಡೈರೆಕ್ಟರ್ ಅಂತೀರಾ, ಕನ್ನಡನೇ ಬರಲ್ವಾ?
– ರೀ ಸ್ವಾಮಿ ನಮ್ ಪ್ರೊಡ್ಯೂಸರ್ ಹತ್ರ ದುಡ್ಡಿಲ್ಲ, ಹಣದ ಕೊರತೆ ಇದೆ. ಅದಕ್ಕೇ ‘ಬರದಿಂದ’ ಸಾಗುತ್ತಿದೆ ಅಂತ ಹೇಳಿದ್ದು.

ಓ ಹಂಗೆ , ಆದ್ರೆ ಮೊನ್ನೆ ಶೂಟಿಂಗಿಗೆ ಅಂತ ರಾಜಸ್ಥಾನಕ್ಕೆ ಹೋಗಿದ್ದಾಗ, ನಮ್ ಪ್ರೊಡ್ಯೂಸರ್ ದುಡ್ಡನ್ನ ನೀರಿನ್ ಥರ ಖರ್ಚು ಮಾಡಿದ್ರು ಅಂತಿದ್ರಿ?
– ಹೌದು ರೀ, ರಾಜಸ್ಥಾನದಲ್ಲಿ ನೀರಿನ್ ಥರ ಖರ್ಚ್ ಮಾಡಿದ್ರು ಅಂದ್ರೆ ತುಂಬಾ ಕಡಿಮೆ ದುಡ್ಡು ಖರ್ಚು ಮಾಡಿದ್ರು ಅಂತ ಅಲ್ವಾ.

ಓಹೋ, ಯಾಕೋ ಡೈರೆಕ್ಟರ್ ಸಾಹೇಬ್ರು ಬರೀ ಇನ್‌ಡೈರೆಕ್ಟ್ ಆಗಿ ಮಾತಾಡ್ತಾ ಇದ್ದೀರ?

– ಏನ್ ಮಾಡೋದು, ನಮ್ಮ ರಿಯಲ್ ಎಸ್ಟೇಟ್ ಓನರ್ ‘ನಿರ್ಮಾ’ಪಕರು ‘ಏರಿಯಲ್’ ಶಾಟ್ ತೆಗೆಯೋಕೂ ದುಡ್ಡು ಬಿಚ್ಚಲ್ಲ.. ಕಲೆ ಒಳ್ಳೆಯದೇ ನಿಜ,
ಆದ್ರೆ ಸಿನಿಮಾ ಕಲೆಗೆ ಬೆಲೆ ಕಟ್ಟಲಿಲ್ಲ ಅಂದ್ರೆ ಹೆಂಗೆ?

ಆದ್ರೂ ೧೫ ದಿನ ಶೂಟಿಂಗ್ ಯಶಸ್ವಿಯಾಗಿ ಮುಗಿಸಿದ್ದೀರ ಅಲ್ವಾ?
– ಹೌದೌದು. ಅದೇ ದೊಡ್ಡ ಸಾಧನೆ. ಸಿನಿಮಾಗಳು ಬಿಡುಗಡೆ ಆದಮೇಲೆ ಯಶಸ್ವಿ ೧೦ನೇ ದಿನ, ೧೫ ದಿನ ಅಂತ ಹಾಕ್ಕೋತಾರಲ್ಲ, ಹಂಗೇ ನಾವು ಅಮೋಘ ೧೫ ದಿನಗಳ ಶೂಟಿಂಗ್ ಮುಕ್ತಾಯ ಅಂತ ಪೋಸ್ಟರ್ ಹಾಕಿಸ್ಬೇಕು ಅಂದ್ಕೊಂಡಿದ್ದೀವಿ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮು ಹೆಂಡ್ತಿ ಖೇಮುಶ್ರೀ ಬರ್ತಾ ಬರ್ತಾ ತುಂಬಾ ದಪ್ಪ ಆಗ್ತಾ ಇದ್ಳು. ಆದ್ರೂ ಅವಳಿಗೆ ತೂಕ ಜಾಸ್ತಿ ಆಗ್ತಾ ಇರೋದ್ರ ಬಗ್ಗೆ ಕೇರ್ ಇರಲಿಲ್ಲ. ಅವಳು ಅದಕ್ಕೆ ತಲೆಕೆಡಿಸಿಕೊಳ್ತಾ ಇರಲಿಲ್ಲ. ಆದ್ರೆ ಖೇಮುಗೆ ಮಾತ್ರ ಹೆಂಡ್ತಿ ಅಷ್ಟು ದಪ್ಪ ಆಗ್ತಾ ಇರೋದು ನೋಡೋಕೆ ಆಗ್ತಾ ಇರಲಿಲ್ಲ. ಅಲ್ಲದೆ ಅವನ ಗೆಳೆಯರ ಹೆಂಡತಿಯರೆಲ್ಲಾ ತುಂಬಾ ಸ್ಲಿಮ್ ಆಗಿದ್ರು. ಸೋ, ಖೇಮುಗೆ ತನ್ನ ಹೆಂಡತಿನೂ ಹಂಗೇ ಇರಬೇಕು ಅಂತ ಆಸೆ. ಖೇಮುಶ್ರೀಗೆ ಡೈಲಿ ವಾಕಿಂಗ್ ಮಾಡು ಅಂತ ಹೇಳಿ ಹೇಳಿ ಸಾಕಾಗಿತ್ತು. ಅವಳು ಮಾಡ್ತಾನೇ ಇರಲಿಲ್ಲ. ಒಂದು ದಿನ ಖೇಮು ಖಡಕ್ಕಾಗಿ ಹೇಳಿಬಿಟ್ಟ, ‘ನೀನು ಇವತ್ತಿಂದ ಡೈಲಿ ೧೦ ಸಾವಿರ ಸ್ಟೆಪ್ಸ್ ವಾಕ್ ಮಾಡಬೇಕು. ನೀನು ಸೋಮಾರಿ ಅಂತ ಗೊತ್ತು. ಅದಕ್ಕೇ ಈ ಸ್ಮಾರ್ಟ್ ವಾಚ್ ತಂದಿದ್ದೀನಿ. ಇನ್ಮೇಲೆ ನೀನು ತಪ್ಪಿಸಿಕೊಳ್ಳೋಕಾಗಲ್ಲ’ ಅಂತ. ಸರಿ, ಅಂದಿನಿಂದ ಪ್ರತಿದಿನ ಆಫೀಸಿಂದ ಬಂದಮೇಲೆ ಖೇಮು ಹೆಂಡತಿಯ ಸ್ಮಾರ್ಟ್ ವಾಚ್ ಟೆಸ್ಟ್ ಮಾಡ್ತಾ ಇದ್ದ. ಅದು ೧೦ ಸಾವಿರಕ್ಕಿಂತ ಜಾಸ್ತಿನೇ ತೋರಿಸ್ತಾ ಇತ್ತು. ಖೇಮು ಖುಷಿಯಾಗ್ತಾ ಇದ್ದ. ಆದ್ರೆ ಎಷ್ಟೇ ದಿನ ಆದ್ರೂ ಖೇಮುಶ್ರೀ ಮಾತ್ರ ಸಣ್ಣ ಆಗ್ಲಿಲ್ಲ. ಖೇಮು ಕೇಳಿದ್ರೆ, ‘ನಾನೇನ್ ಮಾಡ್ಲಿ, ದಿನಾ
ನೀವು ಆಫೀಸಿಗೆ ಹೋದಾಗ ವಾಕಿಂಗ್ ಮಾಡ್ತೀನಿ. ೧೦ ಸಾವಿರ ಸ್ಟೆಪ್ಸ್‌ಗಿಂತ ಜಾಸ್ತಿ. ಆದ್ರೂ ಸಣ್ಣ ಆಗ್ತಿಲ್ಲ’ ಅಂದ್ಳು. ಖೇಮುಗೆ ಅನುಮಾನ ಬಂದು ಒಂದ್ ದಿನ ಆಫೀಸಿನಿಂದ ಸ್ವಲ್ಪ ಮುಂಚೆನೇ ಮನೆಗೆ ಹೊರಟ. ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ. ಯಾರು ಬಂದಿರಬಹುದು ಅಂತ ಖೇಮುಶ್ರೀ ಅನುಮಾನದಲ್ಲೇ ಹೊರಗೆ ಬಂದಳು. ಅಷ್ಟೊತ್ತಿಗೆ, ಅದೆಲ್ಲಿತ್ತೋ ಅವರ ಮನೆಯ ನಾಯಿ ರಾಬರ್ಟ್, ಓಡಿ ಬಂದು ಖೇಮು ಮುಂದೆ ಬಾಲ ಅಲ್ಲಾಡಿಸ್ತಾ ನಿಂತ್ಕೊಂತು. ಅದರ ಕುತ್ತಿಗೆಯಲ್ಲಿದ್ದ ಸ್ಮಾರ್ಟ್ ವಾಚ್‌ನಲ್ಲಿ ೧೧ ಸಾವಿರ ಸ್ಟೆಪ್ಸ್ ರೀಡಿಂಗ್ ತೋರಿಸ್ತಾ ಇತ್ತು.

ಲೈನ್ ಮ್ಯಾನ್

ನನ್ನ ಸಿನಿಮಾ ಬಗ್ಗೆ ಕೆಟ್ಟದಾಗಿ ರಿವ್ಯೂ ಮಾಡೋರನ್ನ ಮತ್ತೆ ಕ್ಯಾಮೆರಾ ಮುಂದೆ ಬರದೇ ಇರೋ ಹಾಗೆ ಮಾಡ್ತೀನಿ. ಸಿನಿಮಾ ಮಾಡೋಕೆ ಬಂದ್ರೆ ಮಾತ್ರ ರಿವ್ಯೂ ಮಾಡಬೇಕು- ನಟ ಆದಿತ್ಯ

– ಅಲ್ಪನಿಗೆ ಅಪರೂಪಕ್ಕೆ ಸಿನಿಮಾ ಸಿಕ್ರೆ, ಖಾಲಿ ಥಿಯೇಟರ್ ಮುಂದೆ ಬ್ಲಾಕ್ ಟಿಕೆಟ್ ಮಾರ್ತಾ ಇದ್ನಂತೆ!

ಮೇ ೧ರಂದು ಪ್ರಧಾನಿ ಮೋದಿ: ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು –

ಜನ: ಸ್ವಾಮಿ, ಮೊದ್ಲು ಕೆಲ್ಸ ಕೊಡಿ, ಆಮೇಲೆ ಶುಭಾಶಯ ಹೇಳಿ

ಕಾರ್ಮಿಕರಿಗೆ ಮೇ ೧ರಂದೂ ರಜಾ ಕೊಡದೆ ಕೆಲಸ ಮಾಡಿಸಿದರೆ ಅದು

– ‘ಲೇಬರ್’ ಪೇಯ್ನ್

ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆ ಅಭ್ಯರ್ಥಿ ಆಗಿರೋ ಗೀತಾ ಶಿವರಾಜ್‌ಕುಮಾರ್ ಅವರಿಗೆ ಇರೋ ಅಡ್ವಾಂಟೇಜ್

– ಬಂಗಾರಪ್ಪನವರ ಮಗಳು, ಬಂಗಾರದ ಮನುಷ್ಯನ ಸೊಸೆ

ಕುಡುಕರ ಕಷ್ಟ

– ಕುಡಿದು ಸ್ವಲ್ಪ ಜಾಸ್ತಿ ಮಾತಾಡಿದ್ರೆ, ‘ಫುಲ್ ಟೈಟ್ ಆಗಿ ಸಿಕ್ಕಾಪಟ್ಟೆ ಮಾತಾಡ್ತಿದ್ದಾನೆ’ ಅಂತಾರೆ. ಹಂಗಂತ, ಇವ್ರ್ ಸಾವಾಸನೇ ಬೇಡ ಅಂತ ಸುಮ್ನೆ ಸೈಲೆಂಟ್ ಆಗಿ ಕೂತ್ಕೊಂಡ್ರೆ, ‘ಅಣ್ಣ ಫುಲ್ ಚಿತ್ತಾಗವ್ನೆ, ಮಾತೇ ಬರ್ತಿಲ್ಲ’ ಅಂತಾರೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶದ ಪ್ರಜೆಗಳು ಕುಡಿಯೋ ಅಭ್ಯಾಸ ಕಡಿಮೆ ಮಾಡೋದು ಹೇಗೆ? 

– ಏನಿಲ್ಲ, ಬೇಜಾರಾದಾಗೆಲ್ಲ ಕುಡೀಯೋದ್ ಬಿಟ್ಟು, ಬರೀ ಖುಷಿ ಆದಾಗ್ ಮಾತ್ರ ಕುಡಿಯೋ ಅಭ್ಯಾಸ ಮಾಡಿಕೊಂಡ್ರೆ ಸಾಕು.

ಫೇಕ್ ಫೇಸ್‌ಬುಕ್ ಅಕೌಂಟಿಂದ  ಸೆಂಜರ್‌ಗೆ ಬಂದು, ಫೋನ್ ಪೇ, ಗೂಗಲ್ ಪೇ ಇದ್ಯಾ ಅಂತ ಕೇಳಿದ್ರೆ ಏನ್ ಮಾಡಬೇಕು?

– ಇದೆ, ಬರೀ ಇನ್‌ಕಮಿಂಗ್ ಅಷ್ಟೇ, ಔಟ್‌ಗೋಯಿಂಗ್ ಇಲ್ಲ ಅನ್ಬೇಕು ಇನ್ನೊಬ್ರನ್ನ ಕನ್ ಫ್ಯೂಸ್ ಮಾಡೋದು ಹೇಗೆ?
– ಒಂದ್ ಟೀ ಸ್ಪೂನ್, ಕಾಫಿ ಪುಡಿ ಹಾಕಿ

ರಾಜಕೀಯ ರಹಸ್ಯ

– ‘ಎಕ್ಸ್’ ಸಿಎಂಗಳಾದ ಮೇಲೂ ಅವರಿಗೆ ‘ಝೆಡ್’ ಸೆಕ್ಯುರಿಟಿ ಕೊಟ್ರೂ ನಮ್ ಜನ ‘ವೈ’ ಅಂತ ಕೇಳಲ್ಲ.