Sunday, 8th September 2024

ಕೆಜಿಎಫ್ ’ಬೆಂಕಿ’ನೇ, ಆದರೆ ’ಹೊಗೆ’ ಹಾಕಿಸ್ಕೊಂಡಿದ್ದು ಮಾತ್ರ ಬೀಸ್ಟ್

ತುಂಟರಗಾಳಿ

ಹರಿ ಪರಾಕ್

ನೆಟ್ ಪಿಕ್ಸ್

ಒಂದಿನ ಕಾರ್‌ನಲ್ಲಿ ಒಬ್ಬ ವ್ಯಕ್ತಿ ತುಂಬಾ – ಆಗಿ ಹೋಗ್ತಾ ಇದ್ದ. ಹೈ ವೇನಲ್ಲಿ ಟ್ರಾಫಿಕ್ ಪೊಲೀಸ್ ಹಿಡಿದ್ರು. ಯಾಕೆ ಓವರ್ ಸ್ಪೀಡಿಂಗ್
ಮಾಡ್ತಾ ಇದ್ದೀರಾ ಅಂತ ಕೇಳಿದ್ದಕ್ಕೆ ನನ್ನ ಕೆಲಸಕ್ಕೆ ಲೇಟ್ ಆಗ್ತಾ ಇದೆ ಅದಕ್ಕೆ – ಆಗಿ ಹೋಗ್ತಾ ಇದ್ದಾ ಅಂದ. ಏನಂತ  ಅರ್ಜೆಂಟ್ ಕೆಲ್ಸ? ಎಲ್ಲಿ ಕೆಲ್ಸ ಮಾಡೋದು ನೀನು? ಏನು ನಿನ್ನ ಕೆಲ್ಸ? ಅಂತ ಕೇಳಿದ್ರು ಪೊಲೀಸ್.

ಅದಕ್ಕೆ ಆ ವ್ಯಕ್ತಿ ನಾನು ಜಂಬೋ ಸರ್ಕಸ್‌ನಲ್ಲಿ ಕೆಲ್ಸ ಮಾಡ್ತಾ ಇರೋದು, ಅಲ್ಲಿ ನಾನು ಬ್ಯಾಲೆನ್ಸಿಂಗ್ ಕೆಲ್ಸ ಮಾಡ್ತೀನಿ. ಒಂದ್ ಇಪ್ಪತ್ತು ರಿಂಗ್ ಗಳನ್ನ ಗಾಳಿಯಲ್ಲಿ ಎಸೆದು, ಅವು ಕೆಳಗೆ ಬರ್ತಾ ಇದ್ದ ಹಾಗೆ ಹಿಡಿಯುತ್ತಾ, ಮತ್ತೆ ಕೈಯಲ್ಲಿರೋದನ್ನ ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆ ಮಾಡೋದು ನನ್ನ ಕೆಲಸ ಅಂದ. ಅದಕ್ಕೆ ಪೊಲೀಸ್ ಇಪೆಕ್ಟರ್ ನಿನ್ನ ನಂಬೋದು ಹೆಂಗೆ?, ಎಲ್ಲಿ, ಒಂದ್ಸಲ ಇಲ್ಲೇ ಮಾಡಿ ತೋರಿಸು ಅಂದ. ಅದಕ್ಕೆ ಆ ವ್ಯಕ್ತಿ, ಇಲ್ಲ ರಿಂಗ್‌ಗಳೆ ಅ ಸರ್ಕಸ್‌ನಲ್ಲಿ ಇರ್ತಾವೆ. ನನ್ಹತ್ರ ಇರಲ್ಲ ಅಂದ. ಹೀಗೆ ಪೊಲೀಸ್  ಮತ್ತು ಆ ವ್ಯಕ್ತಿ ಮಧ್ಯೆ ಸಂಭಾಷಣೆ ನಡೆಯುತ್ತಿರುವಾಗ ಅಲ್ಲಿಗೆ ಖೇಮು ಕಾರಲ್ಲಿ ಬಂದ.

ಖೇಮು ಸಂಜೆ ಹೊತ್ತಿಗೇ ಕುಡಿದು ಫುಲ್ ಟೈಟ್ ಆಗಿದ್ದ. ಪೊಲೀಸ್ ಅವನನ್ನು ನೋಡಿ, ಕೈ ತೋರಿಸಿ ಗಾಡಿ ನಿಲ್ಲಿಸಿ, ಇವ್ರದ್ದು ಮುಗಿದ ಮೇಲೆ ನಿಮ್ಮನ್ನ ಚೆಕ್ ಮಾಡ್ತೀನಿ, ಗಾಡಿ ಸೈಡಿಗೆ ಹಾಕಿ ಅಂತ ಹೇಳಿದ. ಸರಿ, ಇವರಿಬ್ಬರೂ ಮಾತಾಡ್ತಾ ಇರೋದನ್ನ ಮೊದಲೇ ಗಮನಿಸಿದ್ದ ಖೇಮು, ಅ ಸೈಡಲ್ಲಿ ನಿಂತುಕೊಂಡ. ಪೊಲೀಸ್ ಮತ್ತೆ ಆ ಮೊದಲನೇ ವ್ಯಕ್ತಿಯ ಬಳಿ ಹೋದ. ಆ ವ್ಯಕ್ತಿ ರಿಂಗ್ ಇಲ್ಲ ಅಂದಿದ್ದಕ್ಕೆ, ಸರಿ ನನ್ನ ಕಾರ್‌ನಲ್ಲಿ ಒಂದಷ್ಟು ರಿಂಗ್ಸ್ ಇದ್ದಾವೆ, ಅವುಗಳನ್ನೇ ಎಸೆದು, ಹಿಡಿದು ಬ್ಯಾಲೆ ಮಾಡಿ ತೋರಿಸು ಅಂದ ಪೊಲೀಸ್.

ಆ ವ್ಯಕ್ತಿ ಒಪ್ಪಿಕೊಂಡು ಪೊಲೀಸ್ ತಂದುಕೊಟ್ಟ ಆ ರಿಂಗ್‌ಗಳನ್ನ ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆ ಮಾಡಿ ತೋರಿಸಿದ. ಅದನ್ನು ನೋಡಿ ಪೊಲೀಸ್‌ಗೆ ಅವನು ಸರ್ಕಸ್‌ನಲ್ಲಿ ಕೆಲಸ ಮಾಡ್ತಾನೆ ಅಂತ ನಂಬಿಕೆ ಬಂತು. ಸರಿ, ನೀನಿನ್ನು ಹೊರಡು ಅಂತ ಅವನನ್ನು ಕಳಿಸಿದ. ಇದನ್ನು ನೋಡಿದ ಖೇಮು, ತನ್ನ ಕಾರನ್ನು ಅ ಬಿಟ್ಟು, ಸೀದಾ ಹೋಗಿ ಪೊಲೀಸ್ ಗಾಡಿಯಲ್ಲಿ ಕುಳಿತುಬಿಟ್ಟ. ಪೊಲೀಸ್‌ಗೆ ಆಶ್ಚರ್ಯ ಆಯ್ತು. ಯಾಕೆ ನೀನೇ ಬಂದು ಪೊಲೀಸ್ ಕಾರಲ್ಲಿ ಕೂತೆ ಅಂತ ಕೇಳಿದ್ದಕ್ಕೆ ಖೇಮು ಹೇಳಿದ ಅಯ್ಯೋ, ಅಷ್ಟೆ ರಿಂಗ್ ಎಸೆದು ಹಿಡಿದು ಬ್ಯಾಲೆ ಮಾಡಿ ತೋರಿಸಿ, ನಾನು ಕುಡಿದಿಲ್ಲ ಅಂತ ಪ್ರೂವ್ ಮಾಡೋಕೆ ನನ್ ಕೈಲಾಗಲ್ಲ, ನಾನೇ ಹೇಳ್ತಾ ಇದ್ದೀನಿ, ಫುಲ್ ಟೈಟಾಗಿದ್ದೀನಿ. ಅರೆ ಮಾಡಿ ನನ್ನ.

ಲೂಸ್ ಟಾಕ್
ಯಶ್ (ಕಾಲ್ಪನಿಕ ಸಂದರ್ಶನ)
ಸಿನಿಮಾದಲ್ಲಿ ‘ನುಗ್ಗಿ ಹೊಡೀತೀವಿ’ ಅಂತ ಹೇಳೋದು ರವೀನಾ ಟಂಡನ್, ಆದ್ರೆ ಗನ್ ಹಿಡ್ಕೊಂಡು ಪಾರ್ಲಿಮೆಂಟಿಗೆ ನುಗ್ಗಿ ಹೊಡೆಯೋದು ನೀವು. ವಿಚಿತ್ರವಾಗಿದೆಯಲ್ವಾ?
-ಗನ್ ಹಿಡ್ಕೊಂಡ್ ಇನ್ನೇನ್ ‘ಗನಂಧಾರಿ’ ಕೆಲ್ಸ ಮಾಡೋಕಾಗುತ್ತೆ. ಅಡ್ಡ ಬಂದೋರನ್ನ ಮುಗಿಸಬೇಕು ಅಂದ್ರೆ ನಮ್ ಅಡ್ಡದ
ಕೂತ್ಕೊಂಡಿರೋಕಾಗುತ್ತಾ?ನುಗ್ಲೇಬೇಕು

ಸರಿ, ಕೆಜಿಎಫ್ ೨ ಸಿನಿಮಾ ನೋಡಿ ರಾಧಿಕಾ ಪಂಡಿತ್ ಅವ್ರು ಏನ್ ಹೇಳಿದ್ರು ?
-ಚಿನ್ನಾ…., ಎಂಥಾ ಬಂಗಾರದಂಥ ಸಿನಿಮಾ ಮಾಡಿದ್ದೀಯ ಅಂದ್ರು..

ಸಿನಿಮಾದ ಪ್ರಮೋಷನ್ ಮಾತ್ರ ಭರ್ಜರಿಯಾಗಿ ಮಾಡ್ತಾ ಇದ್ದೀರಾ…
-ಮತ್ತೆ, ‘ಸುವರ್ಣ’ ಚಾನಲ್‌ನ ಅಫಿಷಿಯಲ್ ಮೀಡಿಯಾ ಪಾರ್ಟ್‌ನರ್ ಕೂಡಾ ಮಾಡ್ಕೊಂಡಿದ್ದೀವಿ.

ಕನ್ನಡ ಸಿನಿಮಾದಿಂದನೂ ಇಷ್ಟೊಂದ್ ದುಡ್ ಮಾಡಬಹುದಾ, ಈ ಗೆಲುವಿನ ರಹಸ್ಯ ಏನು ?
-ಮೊದ್ಲೆ, ನಮ್ ಕನ್ನಡ ಸಿನಿಮಾ ನಿರ್ಮಾಪಕರು ‘ಗೋಲ್ಡ್ ಅಡ ಇಟ್ಟು’ ಸಿನಿಮಾ ಮಾಡ್ತಾ ಇದ್ರು. ನಾವು ‘ಗೋಲ್ಡ್ ಇಟ್ಕೊಂಡ್’ ಸಿನಿಮಾ ಮಾಡಿದ್ದೀವಿ. ನಾವು ‘ಅಡದಾರಿ’ಯಲ್ಲಿ ಹೋಗ್ಲಿಲ್ಲ, ‘ಅಡ್ಡದಾರಿ’ಯಲ್ಲೂ ಹೋಗ್ಲಿಲ್ಲ. ಹಂಗಾಗಿ, ‘ವಿ ವಿನ್ನಡ್ ಚಿನ್ನ…’

ಬೇರೆ ದೇಶಗಳಲ್ಲೂ ಕೆಜಿಎಫ್ ೨ ಸದ್ದು ಮಾಡ್ತಿದೆ. ನಿಮ್ಮ ನಿರ್ದೇಶಕರ ಬಗ್ಗೆ ಏನ್ ಹೇಳ್ತೀರಾ?
-ಕೆಜಿಎಫ್- ಮೂಲಕ, ನಾವ್ ಯಾರಿಗೂ ಕಮ್ಮಿ ಇಲ್ಲ, ಕನ್ನಡ ಚಿತ್ರರಂಗ ಯಾರಿಗೂ ಬೆಂಡ್ ಆಗಲ್ಲ, ಯಾರ ಮುಂದೆನೂ ‘ನೀಲ್ ಡೌನ್’ ಆಗಲ್ಲ ಅಂತ ಪ್ರಶಾಂತ್ ‘ನೀಲ್’ ಅವರು ತೋರಿಸಿಕೊಟ್ಟಿದ್ದಾರೆ.

ಕೆಜಿಎಫ್ ನೋಡಿದೋರೆ ಬೆಂಕಿ ಸಿನಿಮಾ ಅಂತಿದ್ದಾರೆ. ಆದ್ರೆ ಹೊಗೆ ಹಾಕಿಸ್ಕೊಂಡಿದ್ದು ಮಾತ್ರ ‘ಬೀ’ ಅಂತೆ?
-ಹೌದಾ? ರಿಲೀಸ್ ಆಗೋಕೆ ಮುಂಚೆ ಅವ್ರಿಗೆ, ‘ಆಲ್ ದಿ ಬೀ’ ಅಂತ ಮೆಸೇಜ್ ಮಾಡಿದ್ದೆ, ಆದ್ರೂ ಯಾಕಿಂಗಾಯ್ತು ಗೊತ್ತಿಲ್ಲಪ್ಪ..

ಸರಿ, ನಿಮ್ಮ ಮುಂದಿನ ಸಿನಿಮಾಗಳಿಗೂ ಇಂಥz ಗೆಲುವು ಸಿಗುತ್ತೆ ಅನ್ನೋ ನಂಬಿಕೆ ಇದೆಯಾ ?
-೧೦೦% ಚಿನ್ನ…ರಾಕಿ ಭಾಯ್ ಏನಿದ್ರೂ, ಬಾP ಆಫೀಸ್ ಸುಲ್ತಾನ, ಸೋಲ್ತಾನಾ ಅನ್ನೋ ಭಯ ಇಲ್ವೇ ಇಲ್ಲ.

ಸರಿ, ಕೆಜಿಎಫ್ ಸಿನಿಮಾ ಇಲ್ಲಿಯವರೆಗೂ ಎ ಕಲೆಕ್ಷನ್ ಮಾಡಿದೆ?
-ಕನ್ನಡ ಸಿನಿಮಾಗಳನ್ನ ಆಡಿಕೊಳ್ತಾ ಇದ್ದವರ ಗಲ್ಲದ ಮೇಲೆ ಕೊಟ್ಟ ಪೆಟ್ಟಿಗೆ, ಗಲ್ಲಾ ಪೆಟ್ಟಿಗೆ ತುಂಬಿ ತುಳುಕಾಡ್ತಾ ಇದೆ.

ಅಂತೂ, ಕಾಂಪಿಟೇಟರ್‌ಗಳನ್ನೆ ಫುಟ್ ಬಾಲ್ ಆಡಿ ಗೋಲ್ ಹೊಡೆದ್ಬಿಟ್ರಿ ಅಲ್ವಾ?
-ನಿಮ್ ಪ್ರಕಾರ, ಗೋಲ್ಡ ಬಗ್ಗೆ ಸಿನಿಮಾ ಮಾಡಿ, ಫುಟ್ ಬಾಲ್ ಆಡಿ, ಜನ್ರಿಗೂ ಕಿಕ್ ಕೊಟ್ಟು, ವಿ ಗೋಲ-ಡ್… ಅಲ್ವಾ ಚಿನ್ನ?

ಲೈನ್ ಮ್ಯಾನ್

ಕೆಜಿಎಫ್ ೨ ಕೂಡಾ ಸೂಪರ್ ಹಿಟ್
– ಹಂಗಾದ್ರೆ ಗಣೇಶ್‌ನ ಬಿಟ್ಟು, ಇನ್ಮೇಲೆ ಯಶ್ ಅವರನ್ನ ಗೋಲ್ಡನ್ ಸ್ಟಾರ್ ಅಂತ ಕರಿತಾರೇನೋ ನಮ್ ಜನ

ಓಎಲ್‌ಎಕ್ಸ್ ನಂಥ ಕಂಪನಿಗಳಿಗೊಂದು ಟ್ಯಾಗ್ ಲೈನ್
-ಓಲ್ಡ್ ಈಸ್ ಸೋಲ್ಡ್
ಕೆಜಿಎಫ್ ಪುಸ್ತಕದ ‘ಚಾಪ್ಟರ್’ ೨ ನಲ್ಲಿ ಯಶ್ 
-‘ಪುಟ’ಕ್ಕಿಟ್ಟ ಚಿನ್ನ
ಬೊಮ್ಮಾಯಿ ಕೇಳಿದ ತಕ್ಷಣ ರಾಜೀನಾಮೆ ಕೊಟ್ಟ ಈಶ್ವರಪ್ಪ, ಬಿಜೆಪಿ ಸರಕಾರದ ಪಾಲಿಗೆ
-ಸಚಿವ ಸಂಪುಟಕ್ಕಿಟ್ಟ ಚಿನ್ನ
ಕ್ಯಾಮೆರಾ ಮ್ಯಾನ್, ಕ್ಯಾಮೆರಾ ರೋಲಿಂಗ್ ಅಂತ ಹೇಳಿದ ಮೇಲೆನೇ ಕೆಜಿಎಫ್ ಸಿನಿಮಾ ಶೂಟ್ ಆಗಿರೋದು. ಅದಕ್ಕೆ ಅದು
-ರೋಲ್ಡ್ ಗೋಲ್ಡ್.

ಕೆಜಿಎಫ್ನಿಂದ ಬಂದ ದುಡ್ಡಲ್ಲಿ ನಿರ್ಮಾಪಕರು ಕಟ್ಟಿಸೋ ಮನೆ
-ಗೋಲ್ಡ್ ಏಜ್ ಹೋಮ್’ಬೆ
ಕೆಜಿಎಫ್ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಲು ಸಿಕ್ಕ ಅವಕಾಶವನ್ನು ಕಲಾವಿದರು ಏನಂತ ಹೇಳ್ಕೊತಿದ್ದಾರೆ?
-‘ಸುವರ್ಣಾ’ವಕಾಶ
ಕೆಜಿಎಫ್ನಲ್ಲಿ ಚಿನ್ನನೇ ಇರಲಿಲ್ಲ ಅಂತ ಸುಳ್ಳು ಹೇಳಿದ್ರೆ ಅದು
-‘ಕಾಗೆ’ ಬಂಗಾರ
ಒಟ್ಟಾರೆ ಕೆಜಿಎಫ್ ಚಿತ್ರದ ಕಲೆಕ್ಷನ್ ಎಷ್ಟಾಯ್ತು ಅಂತ ಲೆಕ್ಕ ಹಾಕೋಕೆ, ನಿರ್ಮಾಪಕರಿಗೆ ಏನು ಗೊತ್ತಿರಬೇಕು?
-‘ಗಣಿ’ತ
ಕಲೆಕ್ಷನ್ನೇ ಆಗಿಲ್ಲ ಅಂತ ವಿತರಕರು ನಿರ್ಮಾಪಕರಿಗೆ ಸುಳ್ಳು ಲೆಕ್ಕ ತೋರಿಸಿದ್ರೆ ಅದು
-‘ಗೋಲ್ಡ್ ಬಿಸ್ಕೆಟ್

error: Content is protected !!