Sunday, 8th September 2024

ಬಂದಂತೆ ಬದುಕು ಅಪ್ಪಿಕೊಳ್ಳುವಿಕೆಯೇ ಒಪ್ಪಿಕೊಳ್ಳುವಿಕೆ

ಶ್ವೇತಪತ್ರ

shwethabc@gmail.com

ಬದುಕಿನ ಕಷ್ಟದ ಸಂದರ್ಭಗಳಲ್ಲಿ ಎಲ್ಲವೂ ಸರಿ ಇರುವಂತೆ ನಾವು ತೋರಿಸಿಕೊಳ್ಳುತ್ತೇವೆ. ಅಸಮಾಧಾನಗಳಿರುವಾಗಲೂ ನಕ್ಕು ಸರಿ ಇರುವಂತೆ ನಟಿಸುತ್ತೇವೆ. ನಾವೆಲ್ಲ ನಮ್ಮದೇ ಸರಿ ಇರದ ಭಾವಗಳನ್ನು, ಭಾವನೆಗಳನ್ನು ನಿಭಾಯಿಸುವುದು ಸಂಪೂರ್ಣವಾಗಿ ಸರಿ ಇದೆ ಎಂಬ ಸಹಮತದ ಮೇರೆಗೆ ಅಲ್ಲವೇ? ಕಷ್ಟದ ಸಂದರ್ಭಗಳನ್ನು ಹೀಗೆ ನಿಭಾಯಿಸು ವುದು ನಮಗೆ ಅಭ್ಯಾಸವಾಗಿ ಬಿಟ್ಟಿದೆ.

ಆಪ್ತ ಸಲಹೆಯ ಅನೇಕ ಸಂದರ್ಭಗಳಲ್ಲಿ ನನ್ನ ಕ್ಲೈಂಟ್(ಕಕ್ಷಿ)ಗಳಿಗೆ ನಾನು ನೋವು ಹಾಗೂ ಬಳಲಿಕೆ ಇವು ಗಳ ನಡುವಿನ ವ್ಯತ್ಯಾಸವನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇನೆ. ನೋವು ಅದು ತನ್ನದೇ ನೆಲಗಟ್ಟಿನಲ್ಲಿ ಒದಗುವ ಕಷ್ಟದ ಸ್ಥಿತಿ. ಆದರೆ ಆ ನೋವನ್ನು ನಾವು ಒಪ್ಪಿಕೊಳ್ಳದೆ ಹೋದಾಗ ಅದು ಬಳಕೆ ಯಾಗಿ ಬದಲಾಗುತ್ತದೆ. ಕೋವಿಡೋತ್ತರ ಕಾಲ ಘಟ್ಟದಲ್ಲಿ ನಿಂತಿರುವ ನಮ್ಮೆಲ್ಲರಿಗೂ ನೋವು ಹಾಗೂ ಬಳಲಿಕೆಗಳು ಅರ್ಥೈಸುವ ಅನುಭವಗಳೇ ಆಗಿವೆ.

ನಮ್ಮನ್ನು ನಾವೇ ಅನುಕಂಪದ ಆಧಾರದಲ್ಲಿ ಸಂಧಿಸುವುದಾದರೆ ನಮ್ಮವೇ ಸಂಕಟಗಳನ್ನು, ವೇದನೆಗಳನ್ನು ನಾವು ಹೇಗೆ ಮುಕ್ತ ಗೊಳಿಸುತ್ತಾ ಹಗುರಾಗುತ್ತೇವೆ ಎಂಬ ಕಾಳಜಿಯನ್ನು ವಹಿಸಬೇಕಾ ಗುತ್ತದೆ. ನನ್ನ ಕಕ್ಷಿಗಳ ಬೇಗುದಿಗಳನ್ನು ಕೇಳಿಸಿಕೊಂಡ ನಂತರ ಅವರನ್ನು ಸದಾ ನಾನು ತಮಗೆ ಒದಗಿರುವ ಸವಾಲುಗಳನ್ನು, ಸಮಸ್ಯೆಗಳನ್ನು ಆಮೂಲಾಗ್ರವಾಗಿ ಅಪ್ಪಿಕೊಂಡು, ಒಪ್ಪಿಕೊಳ್ಳುವಂತೆ ಪ್ರೇರೇಪಿಸುತ್ತೇನೆ.

ಆಪ್ತ ಸಲಹೆಯ ಚಿಕಿತ್ಸೆಯಲ್ಲಿ ನಾನು ಬಳಸುವ ಮುಖ್ಯ ಅಂಶವಿದು. ಇದನ್ನು ಮನೋವೈಜ್ಞಾನಿಕವಾಗಿ ಡಯಾಲಿಟಿಕಲ್ ಬಿಹೇವಿಯರಲ್ ಥೆರಪಿ ಎನ್ನುತ್ತಾರೆ. ನಮ್ಮ ಭಾವನಾತ್ಮಕ ಅಥವಾ ಮಾನಸಿಕ ಒತ್ತಡ ಗಳನ್ನು ಗುರುತಿಸಿ ಅವುಗಳನ್ನು ಅವಿರುವಂತೆ ಒಪ್ಪಿಕೊಳ್ಳುವ ಪರಿಭಾಷೆಗೆ ರಾಡಿಕಲ್ ಅಕ್ಸೆಪ್ಟೆನ್ಸ್ ಎನ್ನುತ್ತಾರೆ. ಅದು ಟ್ರಾಫಿಕ್ ಜಾಮ್ ತರಹದ ಸಣ್ಣ ಒತ್ತಡವೇ ಆಗಿರಬಹುದು ಅಥವಾ ಕ್ಯಾನ್ಸರ್‌ನೊಡನೆ ಹೋರಾ ಬೇಕಿರುವ ಮನಸ್ಥಿತಿಯೇ ಆಗಿರಬಹುದು. ಅದನ್ನು ಮನಸೂರ್ತಿಯಾಗಿ ಅಪ್ಪಿಕೊಂಡು ಒಪ್ಪಿಕೊಳ್ಳಬೇಕು. ಋಣಾತ್ಮಕ ಸಂದರ್ಭಗಳನ್ನು ಸನ್ನಿವೇಶಗಳನ್ನು ಒಪ್ಪಿಕೊಳ್ಳುವುದು ಮನಸ್ಸಿಗೆ ವಿರುದ್ಧಾರ್ಥಕವೇ ಎನಿಸಿ ದರು ಆ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದು ಮನಸ್ಥಿತಿಯನ್ನು ಉತ್ತಮವಾಗಿಸುತ್ತದೆ.

ಬದುಕಲ್ಲಿ ಭಾವನಾತ್ಮಕ ಏರುಪೇರುಗಳು, ಕೋಪ, ಭಯ, ಆರೋಗ್ಯದ ಏರುಪೇರು, ಅವಮಾನ, ಸೋಲು, ಸಂಬಂಧಗಳ ನಿರ್ವಹಿಸುವಿಕೆಯ ವೈಫಲ್ಯ ಇವೆಲ್ಲವೂ ಸಾಮಾನ್ಯ ಹಾಗೂ ಅನಿವಾರ್ಯ. ಇವೆಲ್ಲವುಗಳನ್ನು ಹೆಚ್ಚು ಮನಸ್ಸಿಗೆ ತೆಗೆದುಕೊಂಡಷ್ಟು ಮೈ-ಮನಸ್ಸುಗಳಿಗೆ ಭಾರ. ಬದುಕಿನ ಕಷ್ಟದ ಸಂದರ್ಭಗಳಲ್ಲಿ ಎಲ್ಲವೂ ಸರಿ ಇರುವಂತೆ ನಾವು ತೋರಿಸಿಕೊಳ್ಳುತ್ತೇವೆ. ಅಸಮಾಧಾನಗಳಿರುವಾಗಲೂ ನಕ್ಕು ಸರಿ ಇರುವಂತೆ ನಟಿಸು ತ್ತೇವೆ. ನಾವೆಲ್ಲ ನಮ್ಮದೇ ಸರಿ ಇರದ ಭಾವಗಳನ್ನು, ಭಾವನೆಗಳನ್ನು ನಿಭಾಯಿಸುವುದು ಸಂಪೂರ್ಣ ವಾಗಿ ಸರಿ ಇದೆ ಎಂಬ ಸಹಮತದ ಮೇರೆಗೆ ಅಲ್ಲವೇ? ಕಷ್ಟದ ಸಂದರ್ಭಗಳನ್ನು ಹೀಗೆ ನಿಭಾಯಿಸುವುದು ನಮಗೆ ಅಭ್ಯಾಸವಾಗಿ ಬಿಟ್ಟಿದೆ. ಈ ಅಭ್ಯಾಸಗಳೆಂದು ಸವಕಳಿಗಳೇ ಹೊರತು ನಮ್ಮನ್ನು ಪುನಹಃ ಚೈತನ್ಯ ಗೊಳಿಸುವ ಉಪಶಮನ ಕಾರಕಗಳಲ್ಲ.

ಇಂತಹ ಸಮಯದಲ್ಲಿ ಮುಖ್ಯವಾಗುವುದೇ ಆ ಹೊತ್ತಿನ ಎಂತಹುದೆ ಸಂದರ್ಭವನ್ನು ಒಪ್ಪಿಕೊಂಡು ಅಪ್ಪಿ ಕೊಂಡು ಬಿಡುವುದು. ಅಲ್ಲಿಗೆ ಅರ್ಧ ಯುದ್ಧವೇ ಗೆದ್ದಂತೆ. ಇದು ನಿಮಗಷ್ಟೇ ಅಲ್ಲ ನಿಮ್ಮ ಸುತ್ತಲಿ ನವರೆಗೂ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಉದ್ವಿಗ್ನತೆಯ ಮನಸ್ಥಿತಿಯನ್ನು ಒಪ್ಪಿಕೊಂಡು ಹೌದು ನನ್ನ ಮಾನ ಸಿಕ-ಭಾವನಾತ್ಮಕ ಸ್ಥಿತಿ ಸರಿಯಿಲ್ಲವೆಂದು ಒಪ್ಪಿಕೊಂಡು ಬಿಡಬೇಕು. ಆದರೆ ನಾವೆಲ್ಲ ಅಂತಹ ಮನಸ್ಥಿತಿ ಯನ್ನು ತಡೆಯಲು ಪ್ರಯತ್ನಿಸುತ್ತೇವೆ. ಉದ್ವಿಗ್ನ ಮನಸ್ಥಿತಿಯೂ ನಮ್ಮದೇ ಎಂಬ ಒಪ್ಪಿತ ಮನೋ ಸ್ಥೈರ್ಯ ನಮ್ಮದಾದರೆ ಬದುಕಿಗೆ ಅರ್ಥಪೂರ್ಣತೆಯನ್ನು ಅಲ್ಲಿ ಒದಗಿಸಬಹುದು.

ನನ್ನ ಎಷ್ಟೋ ಕಕ್ಷಿಗಳು ಬೇಜಾರು ಮಾಡಿಕೊಳ್ಳುವುದು, ದುಃಖದಿಂದಿರುವುದು ಎಲ್ಲವೂ ತಪ್ಪು ಎಂದೇ ಭಾವಿಸುತ್ತಾರೆ. ಆದರೆ ಅದೊಂದು ಭ್ರಮೆ ಎಂಬುದರ ಅರಿವೇ ಅವರಿಗಿರುವುದಿಲ್ಲ. ಸಕಾರಾತ್ಮಕ ಮನಸ್ಥಿತಿ ಗಳಾದ ಖುಷಿ, ಸಂತಸಗಳನ್ನು ನಾವು ಹೇಗೆ ಒಪ್ಪಿಕೊಳ್ಳುತ್ತೇವೆಯೋ ಋಣಾತ್ಮಕ ಮನಸ್ಥಿತಿಯನ್ನು ಒಪ್ಪಿ ಕೊಳ್ಳುವ ನಿಲುವು ನಮ್ಮದಾಗಬೇಕು. ಈ ಒಪ್ಪಿಕೊಳ್ಳುವಿಕೆಯೇ ನಮ್ಮೊಳಗೆ ಬದಲಾವಣೆಯನ್ನು ತಂದು ಡ್ಡುತ್ತಾ ನಮ್ಮವೇ ಭಾವನಾತ್ಮಕ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಕಾರಿಯಾಗುತ್ತದೆ. ನಾನು ತುಂಬಾ ದಪ್ಪಗಿದ್ದೇನೆ ಎಂಬ ನೆಗೆಟಿವ್ ಅಂಶವೇ ಒತ್ತಡವಾಗಿ ಪರಿಣಮಿಸಿ ಮತ್ತಷ್ಟು ಅನಾರೋಗ್ಯ ಕರವಾಗಿ ತಿನ್ನುವಂತೆ ಪ್ರೇರೇಪಿಸುತ್ತದೆ.

ಹೌದು ನಾನು ದಪ್ಪಗಿದ್ದೇನೆ ಎನ್ನುವ ವಾಸ್ತವವನ್ನು ಮನಸ್ಸಿಗೆ ತೆಗೆದುಕೊಂಡು ಅದನ್ನು ಅಕ್ಸೆಪ್ಟ್ ಮಾಡಿ ಕೊಂಡು ಬಿಟ್ಟರೆ ಆ ಮನಸ್ಥಿತಿಯೇ ನಮ್ಮನ್ನು ಆರೋಗ್ಯಕರ ಆಹಾರದೆಡೆಗೆ ಉತ್ತೇಜಿಸುತ್ತದೆ. ಎನ್‌ಜಿಒ
ಒಂದರಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತೆಯ ಕಥೆ ಇಲ್ಲಿ ನೆನಪಾಗುತ್ತಿದೆ. ಆಕೆ ಎನ್‌ಜಿಒಗೆ ಸೇರಿ ಅದಾಗಲೇ
ಒಂಬತ್ತು ವರ್ಷಗಳೇ ಕಳೆದಿದ್ದವು. ಇನ್ನೇನು ಕೆಲಸ ಪರಮನೆಂಟ್ ಆಗಬೇಕು ಅನ್ನುವಷ್ಟರಲ್ಲಿ ಎನ್‌ಜಿಒ ಮುಚ್ಚುವ ಹಂತಕ್ಕೆ ಬಂದಿದೆ ಎಂಬುದು ತಿಳಿದು ಬರುತ್ತದೆ. ಅದು ಆಕೆಯನ್ನು ಬಳಲುವಂತೆ ಮಾಡುತ್ತದೆ.

ಗಂಡನಿಂದ ಬೇರಾದದ್ದು, ನಂತರದ ದಿನಗಳಲ್ಲಿ ಗಂಡನ ಸಾವು, ಎರಡು ಹೆಣ್ಣು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಹೆಗಲಿಗೆ. ಈ ಎಲ್ಲವನ್ನು ಒಂದು ಹಂತದಲ್ಲಿ ಯೋಚಿಸಿದ ಆಕೆಗೆ ವೈ ಮಿ? ಕಷ್ಟಗಳು ಬರೀ ನನಗೂ ಏಕೆ? ಎನ್ನುವ ಪ್ರಶ್ನೆಗಳು ಕಾಡದಿರಲಿಲ್ಲ. ನನ್ನ ಬದುಕಲ್ಲೇ ಏಕೆ ಇಷ್ಟೊಂದು ಏರುಳಿತಗಳು ಎನಿಸದಿರಲಿಲ್ಲ. ಆದರೆ ಆಕೆ ಅಂತಹ ಹೋರಾಟದ ದಿನಗಳಲ್ಲೂ ಕುಳಿತು ತನ್ನ ಬದುಕಲ್ಲಾದ ಒಳ್ಳೆಯ ಘಟನೆಗಳನ್ನು ಮರುಕಳಿಸಿಕೊಳ್ಳುತ್ತಾಳೆ.

ಆ ಮೂಲಕ ತನ್ನ ಸಾಮರ್ಥ್ಯವೇನು? ಕೌಶಲ್ಯಗಳೇನು? ಒಂದೇ ಬಾರಿಗೆ ತಾನು ಎಷ್ಟೊಂದು ಕೆಲಸಗಳನ್ನು ಒಟ್ಟಿಗೆ ಮಾಡಬಲ್ಲೆ, ನಿಭಾಯಿಸಬಲ್ಲೆ ಎಂಬೆಲ್ಲಾ ಸಂಗತಿಗಳು ಆಕೆಯ ಅರಿವಿಗೆ ಬರತೊಡಗುತ್ತವೆ. ನಿಧಾನವಾಗಿ ತನ್ನ ಇಂದಿನ ಪರಿಸ್ಥಿತಿಯನ್ನು ಆಕೆ ಒಪ್ಪಿಕೊಳ್ಳತೊಡಗುತ್ತಾಳೆ. ಇರುವುದನ್ನು ಇದ್ದಂತೆ ಒಪ್ಪಿಕೊಂಡದ್ದರಿಂದ ಈ ಹೊತ್ತು ಆಕೆ ತನ್ನ ಕನಸಿನ ಹಾದಿಯನ್ನು ನನಸು ಮಾಡಿಕೊಂಡು ತನ್ನದೇ
ಯಶಸ್ಸಿನ ಪಯಣದಲ್ಲಿ ಹೆಜ್ಜೆ ಹಾಕುತ್ತಿದ್ದಾಳೆ. ಇದಲ್ಲವೇ ನಮಗೆ ನಾವು ಕೊಟ್ಟುಕೊಳ್ಳಬಹುದಾದ ಅಪೂರ್ವ
ಚಿಕಿತ್ಸೆ, ದಟ್ಸ್ ಒಪ್ಪಿಕೊಳ್ಳುವಿಕೆ.

ಹೆಚ್ಚು ಹೆಚ್ಚು ನಮ್ಮನ್ನು ನಮ್ಮ ಪರಿಸ್ಥಿತಿಗಳನ್ನು ಒಪ್ಪಿಕೊಂಡಷ್ಟು ನಮ್ಮ ಬಗೆಗಿನ ನಮ್ಮದೇ ಅರಿವು ಇನ್ನಷ್ಟು ಹೆಚ್ಚಾಗ ತೊಡಗುತ್ತದೆ. ನಮ್ಮ ಮನಸ್ಸಿನಲ್ಲಿ ಏನಾಗುತ್ತಿದೆ ಅದನ್ನು ಪಿನ್ ಪಾಯಿಂಟ್ ಮಾಡಿ ಗುರುತಿಸಿ ಒಪ್ಪಿಕೊಂಡು ನಮ್ಮೊಳಗೆ ನಾವೇ ಸಹಾನುಭೂತಿಯನ್ನು ಅಳವಡಿಸಿಕೊಳ್ಳಬೇಕಿದೆ. ಬಿಗಿಕೊಂಡ ಸಂದರ್ಭಗಳನ್ನು ಒಪ್ಪಿಕೊಳ್ಳುವುದರಿಂದ ಬದುಕಿಗೆ ಬೇಕಾದ ಸಂದರ್ಭಗಳಲ್ಲಿ ಸಾವಧಾನತೆಯನ್ನು ತುಂಬು ವುದು ಸಾಧ್ಯವಾಗುತ್ತದೆ.

ಅಕ್ಸೆಪ್ಟೆನ್ಸ್ ಕುರಿತಾಗಿ ನಡೆದಿರುವ ಅನೇಕ ಸಂಶೋಧನೆಗಳು ಒಪ್ಪಿಕೊಳ್ಳುವಿಕೆ ಆತ್ಮಹತ್ಯೆ, ದುಷ್ಟಗಳಿಗೆ ದಾಸರಾಗುವುದು, ಆತಂಕ, ಉದ್ವಿಗ್ನತೆ ಇವುಗಳನ್ನು ಕಡಿಮೆಗೊಳಿಸುತ್ತಾ ಆರೋಗ್ಯಕರ ಮನಸ್ಥಿತಿಯನ್ನು ನಮ್ಮದಾಗಿಸುತ್ತದೆ ಎನ್ನುವುದನ್ನು ನಿರೂಪಿಸಿವೆ. ಹೆಚ್ಚು ಹೆಚ್ಚು ಒಪ್ಪಿಕೊಳ್ಳುತ್ತಾ ವ್ಯಕ್ತಿತ್ವವನ್ನೇ ಮಾಗಿಸಿ ಕೊಳ್ಳಬಹುದು. ಅದಕ್ಕೆ ಐದಂಕಿಯ ಮೆಟ್ಟಿಲನ್ನು ನಾವು ಏರಬೇಕಾಗುತ್ತದೆ.

ಮೊದಲನೆಯ ಮೆಟ್ಟಿಲಿನಲ್ಲಿ ತೀರ್ಪು ನೀಡುವ ನಮ್ಮ ಆಲೋಚನೆಗಳ ಬಗ್ಗೆ ನಮ್ಮದೇ ಗಮನವಿರಲಿ. ನನಗೆ ಏಕೆ ಹೀಗಾಯಿತು? ನಾನೇನು ಮಾಡಿದ್ದೆ? ಅಯ್ಯೋ ನನ್ನ ಜೀವನವೆಲ್ಲ ಇಷ್ಟೇ ಆಗಿ ಹೋಯಿತು. ಈ ನೆಗೆಟಿವ್
ಆಲೋಚನೆಗಳಲ್ಲಿ ಕಳೆದು ಹೋದರೆ ಪರಿಣಾಮಕಾರಿಯಾಗಿರುವುದು ದೂರದ ಮಾತಾಗಿ ಬಿಡುತ್ತದೆ.  ಹತಾಶೆ ಗಳನ್ನು ಸುಲಭಗೊಳಿಸಿಕೊಳ್ಳುವ ದಾರಿಗಳನ್ನು ನಾವು ಹುಡುಕಿಕೊಳ್ಳಬೇಕು. ವಾಸ್ತವದ ನೆಲಗಟ್ಟಿನಲ್ಲಿ ಯೋಚಿಸಿದಾಗ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.

ಎರಡನೆಯ ಮೆಟ್ಟಿಲು ನಮ್ಮ ಭಾವನೆಗಳನ್ನು ಗೌರವಿಸಬೇಕು-ಭಾವನೆಗಳು ಸದಾ ನಮ್ಮನ್ನು ಪ್ರೇರೇಪಿಸು ತ್ತವೆ. ಆದರೆ ನಮ್ಮ ಮನಸ್ಸಿನೊಳಗಿರುವ ಕಥೆಗಳು ನಮ್ಮನ್ನು ಮಂಥನಗೊಳಿಸುತ್ತಿರುತ್ತವೆ. ಅದಕ್ಕೆ ಹೇಳಿದ್ದು ನಮಗೇನನಿಸುತ್ತಿದೆಯೋ ಅದನ್ನು ಅನುಭವಿಸಿ ಬಿಡಬೇಕು. ಖುಷಿಯಾದರೂ ಸರಿಯೇ ದುಃಖವಾದರೂ ಸರಿಯೇ. ಮೂರನೆಯ ಮೆಟ್ಟಿಲು ಮನಸ್ಸಿನ ಭಾರವನ್ನು ಮುಖದಲ್ಲಿ ತೋರಕೊಡಬೇಡಿ. ನಮ್ಮ ಗಾದೆಗ ಳಲ್ಲೂ ಎಷ್ಟೊಂದು ಸೈಕಾಲಜಿ ಅಡಗಿದೆ.

-ಸ್ ಐಸ್ ದಿ ಇಂಡೆಕ್ಸ್ ಆಫ್ ಮೈಂಡ್ ಎನ್ನುತ್ತಾರೆ. ಎಷ್ಟು ನಿಜವಲ್ಲವೇ? ಮನಸು ಭಾರವಾಗಿದ್ದರೆ ಮುಖ ಗಂಟಿಡುತ್ತದೆ. ಉದ್ದನೆಯ ಕ್ಯೂನಲ್ಲಿ ಕಾಯುವಿಕೆ ಹತಾಶೆಯನ್ನು ತಂದೊಡುತ್ತದೆ. ಸಹಜವಾಗಿ ನಗು ಮಾಸಿ
ಸಿಡಿಮಿಡಿತ ಶುರುವಿಟ್ಟುಕೊಳ್ಳುತ್ತದೆ. ಅದೇ ನಾವು ಕ್ಯೂನಲ್ಲಿ ಕಾಯಲೇಬೇಕು ಎಂಬ ವಸ್ತುಸ್ಥಿತಿಯನ್ನು
ಒಪ್ಪಿಕೊಂಡು ಬಿಟ್ಟರೆ ಮನಸ್ಸಿಗೂ ನಿರಾಳತೆ, ಮುಖದಲ್ಲೂ ಮಂದಹಾಸ.

ನಾಲ್ಕನೆಯ ಮೆಟ್ಟಿಲು ಇಚ್ಛಾಪೂರಕವಾಗಿರುವುದು – ಕೆಲವನ್ನು ಕೆಲವರನ್ನು ಸಹಿಸುವುದು ನಮ್ಮಿಂದ ಕಷ್ಟ
ಆದರೆ ಅವರ ಮನಸ್ಥಿತಿಗಳಿಗೆ ನಾವು ಇಚ್ಛಾಪೂರಕವಾಗಿ ತಯಾರಾಗಿಬಿಟ್ಟರೆ ನೆಗೆಟಿವಿಟಿಗೆ ಅವಕಾಶವೇ
ಇರುವುದಿಲ್ಲ. ಇನ್ನು ನಾವು ಏರಬೇಕಿರುವ ಕೊನೆಯ ಮೆಟ್ಟಿಲು ಬದುಕ್ಕೊಂದು ಯೂ ಟರ್ನ್, ಸಿದ್ಧವಾಗಿ ರುವುದನ್ನು ಕಲಿಯಬೇಕಷ್ಟೇ ಎಂಬುದನ್ನು ಎಂತಹುದೇ ವಿಷಮ ಪರಿಸ್ಥಿತಿಯಲ್ಲಿ ಒಪ್ಪಿಕೊಂಡು ಆರಾಮಾ ಗಿರಿ ಎನ್ನುತ್ತಿಲ್ಲ, ಅದು ಅವಾಸ್ತವಿಕ ಅಥವಾ ಭ್ರಮೆ. ನಿಧಾನವಾಗಿ ನಮಗೆ ನಾವೇ ಪೂರಕವಾಗಿ ಸಹಾಯ ಮಾಡಿಕೊಳ್ಳುವುದನ್ನು ಅಂತಹ ಸಂದರ್ಭದಲ್ಲಿ ಕಲಿಯಬೇಕು. ಮನಸ್ಸುಗಳನ್ನು ಸಹಜವಾಗಿ ತಿರುಗುವಂತೆ ಮಾಡಿಕೊಳ್ಳಬೇಕು. ಅದಕ್ಕೆ ಬೇಕಿರುವುದೇ ಅಪ್ಪಿಕೊಳ್ಳುವ ಒಪ್ಪಿಕೊಳ್ಳುವಿಕೆ.

ನನ್ನ ಕ್ಲೈಂಟ್‌ಗಳಿಗೆ ಸದಾ ನಾನು ಹೇಳುವುದು ಅದನ್ನೇ. ಕಳೆದು ಹೋಗಿರುವ ಯಾವುದಕ್ಕೂ ಕೊರಗಬೇಡಿ, ಬದುಕು ಕೇವಲ ಒನ್ ಟೈಮ್ ಚಾಯ್ಸ್ ಅಲ್ಲ, ಅಲ್ಲಿ ಅಂತ್ಯವಿಲ್ಲದ ಅನಂತ ಅವಕಾಶಗಳಿವೆ. ಯಾವುದೇ ಕ್ಷಣದಲ್ಲಿ ನೀವು ನಿಮ್ಮ ಸ್ವಾತಂತ್ರವನ್ನು ಹುಡುಕಿಕೊಳ್ಳಬಹುದು. ಯಾಕೋ ಇದನ್ನು ನನಗೆ ನಾನೇ ಹೇಳಿಕೊಳ್ಳಬೇಕೆನಿಸಿತು, ಅದಕ್ಕೆ ಬರೆದೆ!

error: Content is protected !!