Friday, 29th November 2024

ಬಹುಮಾಧ್ಯಮ ಸ್ಪರ್ಧೆಯಲ್ಲೂ ಮಿಂಚುತ್ತಿರುವ ದಿ ನ್ಯೂಯಾರ್ಕ್ ಟೈಮ್ಸ್

ಸಂಪರ್ಕ-ಸಾಧನೆ

ಎ.ಎಸ್.ಬಾಲಸುಬ್ರಹ್ಮಣ್ಯ

ಪತ್ರಿಕಾ ಪ್ರಪಂಚ ಬಹು ವೇಗವಾಗಿ ಬದಲಾಗುತ್ತಿದೆ. ಸಂವಹನ ತಂತ್ರeನ ಎಲ್ಲ ಸಮೂಹ ಮಾಧ್ಯಮಗಳನ್ನು ಬುಡಮೇಲು ಮಾಡುತ್ತಿದೆ. ಮುದ್ರಣ ಮಾಧ್ಯಮ ಈಗ ಇತರೆ ಮಾಧ್ಯಮಗಳ ಮೂಲಕ ಓದುಗರನ್ನು ತಲುಪಲು ಶ್ರಮ ಪಟ್ಟರೆ, ಮಾಂತ್ರಿಕ ಕಂಪ್ಯೂಟರ್, ಟ್ಯಾಬ್ ಹಾಗೂ ಮೊಬೈಲ್‌ಗಳು ಎಲ್ಲ ಮಾಧ್ಯಮಗಳನ್ನು ತಮ್ಮೊಳಗಿರಿಸಿಕೊಂಡು ನಕ್ಕು ನಲಿಯುತ್ತಿವೆ. ಇಂತಹ ಬಹುಮಾಧ್ಯಮ ಸ್ಪರ್ಧೆಗಳಲ್ಲಿ ಜಾಗತಿಕವಾಗಿ ಹೆಸರು ಮಾಡುತ್ತಿರುವ ಏಕೈಕ ಪತ್ರಿಕೆಯೆಂದರೆ, ಅದು ‘ದಿ ನ್ಯೂಯಾರ್ಕ್ ಟೈಮ್ಸ್’. ೧೭೩ ವರ್ಷಗಳ ಇತಿಹಾಸ ಹೊಂದಿರುವ ಈ ಪತ್ರಿಕೆ ಇದೀಗ ಹೊಸ ದಾಖಲೆಯೊಂದನ್ನು ಬರೆದಿದೆ.

ಈ ಪತ್ರಿಕೆಯ ೨೦ ಲಕ್ಷ ಆನ್ ಲೈನ್ ಚಂದಾದಾರರು ವಿಶ್ವದಾದ್ಯಂತ ೨೩೨ ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಹರಡಿzರೆ. ಈ ದಾಖಲೆಯನ್ನು ಬರೆದ ಏಕೈಕ ದೈನಿಕ ಇದಾಗಿದೆ. ‘ಮುದ್ರಿಸಲು ಯೋಗ್ಯವಾದ ಎಲ್ಲ ಸುದ್ದಿ’ (ಅ ಠಿeಛಿ ಘೆಛಿಡಿo SeZಠಿ’o ಜಿo ಊಜಿಠಿ ಠಿಟ Pಜ್ಞಿಠಿ)ಎಂಬ ಘೋಷವಾಕ್ಯ ಹೊಂದಿರುವ ಈ ಪತ್ರಿಕೆ, ಸುದ್ದಿ ಮತ್ತು ಅತ್ಯುತ್ತಮ ವಿಶ್ಲೇಷಣಾತ್ಮಕ ಸಂಪಾದಕೀಯ ಹಾಗೂ ಲೇಖನಗಳಿಗೆ ಜಾಗತಿಕ ಇಂಗ್ಲಿಷ್ ಭಾಷಿಕರಲ್ಲಿ ಜನಪ್ರಿಯವಾಗಿದೆ.

ನ್ಯೂಯಾರ್ಕ್ ನಗರದಿಂದ ಪ್ರಕಟವಾಗುವ ಈ ಬೆಳಗಿನ ದೈನಿಕ, ಅಮೆರಿಕೆಯಲ್ಲಿ ದಾಖಲೆಯ ವೃತ್ತ ಪತ್ರಿಕೆ ಎಂದೇ ಹೆಸರಾಗಿದೆ. ಅಂದರೆ ಇಲ್ಲಿ ಪ್ರಕಟ ವಾಯಿತೆಂದರೆ ಅದು ನಿಜವೇ ಆಗಿದೆ ಎಂದರ್ಥ. ಹಾಗಾಗಿಯೇ ಇದು ವಿಶ್ವದ ಶ್ರೇಷ್ಠ ಪತ್ರಿಕೆಗಳಲ್ಲಿ ಒಂದಾಗಿದೆ. ಅದರ ಶಕ್ತಿಯು ಅದರ ಸಂಪಾ ದಕೀಯ ಶ್ರೇಷ್ಠತೆಯಲ್ಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಪ್ರಸಾರ ಸಂಖ್ಯೆಯ ದೃಷ್ಟಿಯಿಂದ ಇದು ಎಂದಿಗೂ ದೊಡ್ಡ ಪತ್ರಿಕೆ ಯಾಗಿರಲಿಲ್ಲ. ಅಮೆರಿಕೆ ಯಲ್ಲಿ ಪತ್ರಿಕೆಗಳ ಪ್ರಸಾರ ೨೦೧೦ ರ ನಂತರ ತೀವ್ರವಾಗಿ ಕುಸಿಯಲಾರಂಭಿಸಿತು. ಇದನ್ನು ಮನಗಂಡ ಟೈಮ್ಸ್ ಮಾಲೀಕರು, ಬದಲಾಗುತ್ತಿರುವ ತಂತ್ರ ಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಯೋಜನೆ ಸಿದ್ಧಪಡಿಸಿದರು. ಮುದ್ರಿತ ಪತ್ರಿಕೆಗಳ ಪ್ರಸಾರ ಇಳಿಮುಖ ವಾಗುತ್ತಿದ್ದಂತೆ, ಆನ್‌ಲೈನ್ ಚಂದಾ ದಾರರ ಸಂಖ್ಯೆ ಏರುಮುಖ ಕಂಡಿತು. ಈ ತಂತ್ರಗಾರಿಕೆ ಪತ್ರಿಕೆಯ ಚಂದಾದಾರರ ಸಂಖ್ಯೆಯನ್ನು ಒಂದು ಕೋಟಿ ೫೫ ಲಕ್ಷಕ್ಕೆ ಏರಿಸಿತು. ೨೦೨೫ ರ ವೇಳೆಗೆ ಇಪ್ಪತ್ತು ಲಕ್ಷ ಅಂತಾರಾಷ್ಟ್ರೀಯ ಚಂದಾದಾರರನ್ನು ಆಕರ್ಷಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಟೈಮ್ಸ್ ಪತ್ರಿಕೆ, ನಿಗದಿಪಡಿಸಿದ ಗುರಿಗಿಂತ ಮುಂಚಿತವಾಗಿ ಮೈಲಿಗಲ್ಲನ್ನು ತಲುಪಿರುವುದು ಈ ಪತ್ರಿಕೆಯ ವಿಸ್ತೃತ ಸುದ್ದಿ ಪ್ರಕಟಣೆ ಮತ್ತು ಸಂಪಾದಕೀಯ ವಿಶ್ಲೇಷಣೆಗೆ ಸಾಕ್ಷಿ.

೧೭೩ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಈ ಪತ್ರಿಕೆ ತನ್ನ ಪತ್ರಿಕಾ ಭಂಡಾರವನ್ನು ಪೂರ್ಣವಾಗಿ ಡಿಜಲೀಕರಣ ಗೊಳಿಸಿ ತನ್ನ ಐತಿಹಾಸಿಕ ಸಂಪನ್ಮೂಲದ ಸದುಪಯೋಗ ಮಾಡಿಕೊಂಡಿದೆ. ತನ್ನ ಓದುಗರಿಗೆ ಸುದ್ದಿ, ಪದಬಂಧ, ಅಡುಗೆ ಮಾಹಿತಿ, ಕ್ರೀಡಾ ಸುದ್ದಿ, ಗೇಮ್‌ಗಳು ಮತ್ತು ಪಾಡ್‌ಕಾ
ಸೇವೆಗಳನ್ನು ಒದಗಿಸುತ್ತಿದೆ. ಈ ಸೇವೆಗಳನ್ನು ಬಿಡಿಯಾಗಿ ಇಲ್ಲವೇ ಎರಡು ಅಥವಾ ಮೂರು ಸೇವೆಗಳಿಗೆ ಆಸಕ್ತರು ಚಂದಾದಾರರಾಗಬಹುದು. ಒಂದು ವರ್ಷದ ಹಿಂದೆ ಟೈಮ್ಸ್ ಪತ್ರಿಕೆ ಒಂದು ಕೋಟಿ ಚಂದಾದಾರರನ್ನು ಹೊಂದಿತ್ತು. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಸೇವೆಗಳನ್ನು ಪಡೆಯುತ್ತಿದ್ದರೆ, ಅದನ್ನು ಒಂದೇ ಚಂದಾದಾರಿಕೆ ಎಂದು ಪರಿಗಣಿಸಲಾಗುತ್ತದೆ. ಈ ಎಲ್ಲ ಸೇವೆಗಳನ್ನು ಅಂತರ್ಜಾಲದ ಮೂಲಕ ಜಗತ್ತಿನ ಯಾವ ಭಾಗದದರೂ ಓದುಗರು ಪಡೆಯಬಹುದಾಗಿದೆ. ಪತ್ರಿಕೆಯ ಆಕರ್ಷಣೆ ಜಾಗತಿಕ ಬೆಳವಣಿಗೆಗಳನ್ನು ನೇರ ಮತ್ತು ಸವಿವರವಾಗಿ ವರದಿ ಮಾಡುವ ಪತ್ರಿಕೆಯ ಧೋರಣೆ,
ದೇಶೀಯ ಮತ್ತು ವಿದೇಶಿ ಓದುಗರಿಗೆ ಪ್ರಮುಖ ಆಕರ್ಷಣೆಯಾಗಿದೆ.

ಯುರೋಪ್ ಮತ್ತು ಮಧ್ಯ ಪ್ರಾಚ್ಯದಲ್ಲಿನ ಸಂಘರ್ಷಗಳ ಸವಿವರ ಸಚಿತ್ರ ವರದಿಗಳು ಸಮಸ್ಯೆಗಳ ಎಲ್ಲ ಮುಖಗಳನ್ನು ಹೊರಹಾಕುತ್ತವೆ. ರಾಜಕೀಯ
ಬೆಳವಣಿಗೆಗಳ ಆಳವಾದ ವರದಿ ಮತ್ತು ವಿಶ್ಲೇಷಣೆಗಳು, ಟರ್ಕಿಯ ಭೂಕಂಪ ಸೇರಿದಂತೆ ಅನೇಕ ಜಾಗತಿಕ ದುರಂತಗಳನ್ನು ಪತ್ರಿಕೆ ಸುದೀರ್ಘವಾಗಿ ವರದಿ ಮಾಡುತ್ತದೆ. ಅಲ್ಲದೆ ಅನೇಕ ದೇಶಗಳ ಸ್ಥಳೀಯ ಸಮಸ್ಯೆಗಳನ್ನು ಕುರಿತ ಲೇಖನ-ವರದಿಗಳು ಆಯಾ ದೇಶದ ಓದುಗರಿಗೆ ಇಷ್ಟವಾಗುತ್ತವೆ. ಜಾಗತಿಕ-ಮನಸ್ಸಿನ ಓದುಗರಿಗೆ ಆಳವಾದ ವರದಿ, ಪತ್ರಿಕೆಯ ಸ್ವತಂತ್ರ ತನಿಖೆಗಳು ಮತ್ತು ನಿರ್ಭಿಡೆಯ ಅಂತಾರಾಷ್ಟ್ರೀಯ ಸುದ್ದಿಗಳ ಪ್ರಕಟಣೆ ಈ ದೈನಿಕದ ವಿಶೇಷ ಆಕರ್ಷಣೆಗಳಾಗಿವೆ. ಸಮಕಾಲೀನ ಪ್ರಮುಖ ಜಾಗತಿಕ ಸಮಸ್ಯೆಗಳ ವರದಿಗಳ ಸಮಗ್ರ ಚಿತ್ರಣವನ್ನು ಪತ್ರಿಕೆ ಓದುಗರ ಮುಂದಿರಿಸುತ್ತದೆ.

ಅಫ್ಘಾನಿಸ್ತಾನದ ರಾಜಕೀಯ ಬೆಳವಣಿಗೆಗಳು, ಕರೋನ ಸಾಂಕ್ರಾಮಿಕ, ಅಮೆರಿಕೆಯ ಕ್ಯಾಪಿಟಲ್ ಭವನದ ಮುತ್ತಿಗೆ, ಕಪ್ಪು ಜನರ ಮೇಲೆ ನಡೆದ ದಾಳಿ, ಜಾಗತಿಕ ಹವಾಮಾನ, ತಂತ್ರಜ್ಞಾನಗಳ ಸಮಗ್ರ ವರದಿಗಳು, ೨೦೧೯-೨೦ ರ ಅವಧಿಯಲ್ಲಿ ಪತ್ರಿಕೆಯ ಅಂತಾರಾಷ್ಟ್ರೀಯ ಓದುಗರನ್ನು ದ್ವಿಗುಣ ಗೊಳಿಸಿತು. ವಿಶ್ವದಾದ್ಯಂತ ಓದುಗರನ್ನು ಆಕರ್ಷಿಸಲು ತನ್ನ ತಂತ್ರeನಕ್ಕೆ ಆಧುನಿಕ ಸ್ಪರ್ಶ ನೀಡಿದೆ. ಧ್ವನಿ, ಮಾಹಿತಿ ದೃಶ್ಯೀಕರಣ, ಗೇಮ್ ಗಳು ಮತ್ತು ಸಾಕ್ಷ್ಯ ಚಿತ್ರಗಳನ್ನು ಪತ್ರಿಕೆಯ ಜಾಲತಾಣಗಳಲ್ಲಿ ವೀಕ್ಷಿಸಬಹುದಾಗಿದೆ.

ಎಂಜಿನಿಯರಿಂಗ್, ಮಾರ್ಕೆಟಿಂಗ್ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಪತ್ರಿಕೆಯು ಹೆಚ್ಚು ಹೂಡಿಕೆ ಮಾಡಿದೆ. ವಿಶ್ವದ ಅನೇಕ ಪ್ರಮುಖ ಪತ್ರಿಕೆಗಳು
ಜಾಗತಿಕ ಸುದ್ದಿ ಸಂಗ್ರಹಣೆಗೆ ಸುದ್ದಿ ಸಂಸ್ಥೆಗಳ ಮೊರೆ ಹೋಗುತ್ತಿವೆ. ಆದರೆ ಟೈಮ್ಸ ದೈನಿಕ ವಿಶ್ವದಾದ್ಯಂತ ೩೦ ಕ್ಕೂ ಹೆಚ್ಚು ಸುದ್ದಿಸಂಗ್ರಹ ಕೇಂದ್ರ ಗಳನ್ನು ಸ್ಥಾಪಿಸಿ ಅಧಿಕ ಸಂಖ್ಯೆಯ ಪತ್ರಕರ್ತರನ್ನು ನೇಮಿಸಿ, ವಿಶೇಷ ಮತ್ತು ಪರಿಣತ ಸುದ್ದಿ ಹಾಗು ವಿಶ್ಲೇಷಣೆಗಳ ಮೂಲಕ ತನ್ನ ವೈಶಿಷ್ಟತೆ ಯನ್ನು ಉಳಿಸಿಕೊಂಡಿದೆ. ಹೀಗಾಗಿ ಜಾಗತಿಕ ಸುದ್ದಿ ನೀಡುವಲ್ಲಿ ಪತ್ರಿಕೆ ತನ್ನ ಛಾಪು ಮೂಡಿಸಿದೆ.

ಮಾಲೀಕತ್ವ ಬದಲು: ೧೮೫೧ ರಲ್ಲಿ ಹೆನ್ರಿ ಜಾರ್ವಿಸ್ ರೇಮಂಡ್ ಮತ್ತು ಜಾರ್ಜ್ ಜೋ ಅವರಿಂದ ಪೆನ್ನಿ ಪತ್ರಿಕೆಯಾಗಿ ತನ್ನ ಪಯಣ ಆರಂಭಿಸಿದ ಟೈಮ್ಸ್ ಪತ್ರಿಕೆ, ತನ್ನ ವಸ್ತುನಿಷ್ಠ ವರದಿ ಮತ್ತು ವಿಶೇಷ ವರ್ಗದ ಓದುಗರನ್ನು ಆಕರ್ಷಿಸುವುದರ ಮೂಲಕ ಆರಂಭಿಕ ಯಶಸ್ಸನ್ನು ಗಳಿಸಿತು. ವರ್ಣ ರಂಜಿತ ಮತ್ತು ಕಾಲ್ಪನಿಕ ಸುದ್ದಿಗಳ ಮೂಲಕ ಓದುಗರನ್ನು ರಂಜಿಸುತ್ತಿದ್ದ ಅಂದಿನ ಪತ್ರಿಕೆಗಳ ನಡುವೆ ಕ್ರಮೇಣವಾಗಿ ಟೈಮ್ಸ್ ಮಾದರಿ ಪತ್ರಿಕೆಯಾಗಿ ಜನಮನ್ನಣೆ ಗಳಿಸಿತು. ೧೮೯೬ ರಲ್ಲಿ ಅಡಾಲ ಸೈಮನ್ ಒಕ್ಸ್ ಈ ಪತ್ರಿಕೆಯನ್ನು ೭೫ ಸಾವಿರ ಡಾಲರ್ ನೀಡಿ ಖರೀದಿಸಿ, ಈ ಪತ್ರಿಕೆಗೆ ವಿಶ್ವವ್ಯಾಪಿ ಮನ್ನಣೆ ಗಳಿಸಲು ಕಾರಣನಾದ.

ಪೀತ ಪತ್ರಿಕೋದ್ಯಮದ ಹಾವಳಿಯ ಆ ದಿನಗಲ್ಲಿ ಕೂಡ, ಟೈಮ್ಸ ತನ್ನ ನಿಲುವನ್ನು ಬದಲಿಸದೆ, ವಸ್ತುನಿಷ್ಠತೆಗೆ ಮನ್ನಣೆ ನೀಡಿ ಓದುಗರ ವಿಶ್ವಾಸ ಸಂಪಾದಿಸಿತು. ಏಪ್ರಿಲ್ ೧೯೧೨ ರಲ್ಲಿ ಟೈಟಾನಿಕ್ ಹಡಗು ದುರಂತದ ಎಲ್ಲ ಮಗ್ಗಲುಗಳನ್ನು ಸವಿವರವಾಗಿ ಪ್ರಕಟಿಸಿ ಓದುಗರ ಗಮನ ಸೆಳೆಯಿತು. ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಪತ್ರಿಕೆ ವ್ಯಾಪಕವಾಗಿ ಬಳಸಿ ತನ್ನ ವೃತ್ತಿಪರತೆಯನ್ನು ಪ್ರದರ್ಶಿಸಿತು. ಪತ್ರಿಕೆಯ ಪ್ರತಿಷ್ಠೆ ಬಹುಮುಖವಾಗಿ ಬೆಳೆಯಿತು. ಎರಡು ವಿಶ್ವ ಯುದ್ಧಗಳ ವರದಿಗಾರಿಕೆಯಲ್ಲಿ ಟೈಮ್ಸ ಪತ್ರಿಕೆಯ ಶ್ರೇಷ್ಠತೆ ವಿಶ್ವಖ್ಯಾತಿ ಗಳಿಸಿತು.

ವಿಯೆಟ್ನಾಂ ಯುದ್ಧದ ಸಮಯದಲ್ಲಿ ಅಮೆರಿಕೆಯ ರಹಸ್ಯ ಸರಕಾರಿ ಅಧ್ಯಯನ ಪೆಂಟಗನ್ ಪೇಪರ್ಸ್ ಅನ್ನು ಆಧರಿಸಿ, ವರದಿಗಳ ಸರಣಿಯನ್ನು ಟೈಮ್ಸ್ ಪತ್ರಿಕೆ ಪ್ರಕಟಿಸಿದಾಗ ಸರಕಾರದಿಂದ ಭಾರಿ ವಿರೋಧ ವ್ಯಕ್ತವಾಯಿತು. ಸರಕಾರಿ ಅಧಿಕಾರಿಗಳೇ ಪತ್ರಿಕೆಗೆ ಈ ವರದಿಯನ್ನು ಗುಪ್ತವಾಗಿ
ರವಾನಿಸಿದ್ದರು. ಪತ್ರಿಕೆಯ ವಿರುದ್ಧ ಸರಕಾರ ನ್ಯಾಯಾಲಯದ ಮೆಟ್ಟಿಲು ಏರಿತು. ಆದರೆ ಅಲ್ಲಿನ ಸುಪ್ರೀಂ ಕೋರ್ಟ್ ಪತ್ರಿಕೆಯ ಪರವಾಗಿ ನಿಂತಿತು. ಈ ವರದಿಗೆ ಪತ್ರಿಕೆ ಪುಲಿಟ್ಜರ್ ಪ್ರಶಸ್ತಿ ಪಡೆಯಿತು. ತನ್ನ ಪ್ರಭಾವಯುತ ತನಿಖಾ ವರದಿಗಳಿಗೆ, ಲೇಖನಗಳಿಗೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಬರಹಗಳಿಗೆ ಟೈಮ್ಸ್ ಪತ್ರಿಕೆಯು ಇದುವರೆಗೆ ೧೩೨ ಪುಲಿಟ್‌ಜರ್ ಪ್ರಶಸ್ತಿಗಳನ್ನು ಪಡೆದು ತನ್ನ ಪತ್ರಿಕಾ ಧರ್ಮದ ಶ್ರೇಷ್ಠತೆಯ ಸಾಧನೆಗಳನ್ನು
ಸಾಬೀತುಪಡಿಸಿದೆ.

ಅಡಾಲ್ಫ್ ಓP ಅವರ ಮೊಮ್ಮಗ, ಆರ್ಥರ್ ಓP ಸುಲ್ಜ ಬರ್ಗರ್ ವ್ಯಾಪಕವಾದ ತಾಂತ್ರಿಕ ಬದಲಾವಣೆಗಳನ್ನು ಪರಿಚಯಿಸಿದರು. ಉಪಗ್ರಹದಿಂದ
ಪ್ರಾದೇಶಿಕ ಮುದ್ರಣ ಘಟಕಗಳಿಗೆ ರವಾನೆಯಾಗುವ ರಾಷ್ಟ್ರೀಯ ಆವೃತ್ತಿಯನ್ನು ಹೊರತಂದರು. ೨೦೧೧ ರಲ್ಲಿ ಟೈಮ್ಸ್ ತನ್ನ ಡಿಜಿಟಲ್ ಆವೃತ್ತಿಗೆ  ಚಂದಾದಾರಿಕೆ ಯೋಜನೆಯನ್ನು ಆರಂಭಿಸಿ ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಸುದ್ದಿ, ಅಡುಗೆ ಮಾಹಿತಿ, ಆಟಗಳು, ಕ್ರೀಡಾಸುದ್ದಿ, ಆಡಿಯೋ ಸುದ್ದಿ ನೀಡುವುದರ ಮೂಲಕ ಜಗತ್ತಿನ ಎಡೆ ತನ್ನ ಓದುಗರನ್ನು ಆಕರ್ಷಿಸುತ್ತಿದೆ. ಪ್ರತಿದಿನ ಮಾರುಕಟ್ಟೆಯಲ್ಲಿ ಹೊರಬರುವ ಹೊಸ ಉತ್ಪನ್ನಗಳನ್ನು ಪರಿಶೀಲಿಸಿ ತನ್ನ ಓದುಗರಿಗೆ ಶಿಫಾರಸ್ಸು ಮಾಡುವ ‘ವೈರ್ ಕಟರ್’ ಎಂಬ ಸೇವೆ ಸಹ ಓದುಗರಿಗೆ ಲಭ್ಯವಿದೆ.

ಪತ್ರಿಕೆಯಲ್ಲಿ ಪ್ರಕಟವಾಗುವ ಎಲ್ಲ ಸುದ್ದಿ-ಲೇಖನಗಳನ್ನು ನೀವು ಓದಬಹುದು ಇಲ್ಲವೇ ಆಲಿಸಬಹುದಾದ ತಂತ್ರeನ ಅಳವಡಿಕೆ ಓದುಗರಿಗೆ
ಇನ್ನೊಂದು ಆಕರ್ಷಣೆ. ಅಮೆರಿಕೆಯಲ್ಲಿ ಬಿಡಿ ಪತ್ರಿಕೆಯ ಬೆಲೆ ನಾಲ್ಕು ಡಾಲರ್, ಅಂದರೆ ೩೩೫ ರುಪಾಯಿ. ಭಾರತೀಯರು ಆನ್ ಲೈನ್ ಮೂಲಕ ಚಂದಾದಾರರಾಗಲು ಮಾಸಿಕ ೪೦೦ ರುಗಳನ್ನು ನೀಡಿ ಟೈಮ್ಸ ಪತ್ರಿಕೆಯನ್ನು ಓದಬಹುದಾಗಿದೆ. ಆರಂಭಿಕ ಆಕರ್ಷಣೆಯಾಗಿ ಕೇವಲ ೧೦೦ ರುಗಳಲ್ಲಿ ಸಹ ಈ ಸೇವೆ ಪಡೆಯಬಹುದು!

(ಲೇಖಕರು: ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕರು
ಮತ್ತು ಮಾಧ್ಯಮ ತಜ್ಞರು)