Thursday, 19th September 2024

ಚಿತ್ರಮಂದಿರಕ್ಕೆ ಬಾರದವರು ಓಟಿಟಿಗೆ ಬಂದಾರೆಯೇ ?

ತುಂಟರಗಾಳಿ

ಸಿನಿಗನ್ನಡ

ಹರಿಕೃಷ್ಣ ನಿರ್ದೇಶನದ ದರ್ಶನ್ ಅಭಿನಯದ ಕ್ರಾಂತಿ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಿ ಒಂದು ತಿಂಗಳು ಕಳೆಯುವ ಮುನ್ನವೇ ಓಟಿಟಿಗೆ ಕಾಲಿಟ್ಟಿದೆ. ಚಿತ್ರಮಂದಿರಗಳಲ್ಲಿ ಕ್ರಾಂತಿ ಸದ್ದು ಮಾಡಲಿಲ್ಲವಾದರೂ ನಿರ್ಮಾಪಕರು ಸಿನಿಮಾ ಸಕ್ಸಸ್ ಎಂದಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಿನಿಮಾ 109 ಕೋಟಿ ಗಳಿಕೆ ಮಾಡಿದೆ ಎಂದು ಹೇಳಿದ್ದು, ಎಲ್ಲದರ ನಂತರವೂ ಚಿತ್ರದ ಗಳಿಕೆಯ ಅಸಲಿಯತ್ತು ಎಲ್ಲರಿಗೂ ಗೊತ್ತು.

ಹಾಗಾಗಿ ಈಗ ಜನವರಿ 26ಕ್ಕೆ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದ್ದ ಚಿತ್ರ ಫೆಬ್ರವರಿ 26ಕ್ಕೂ ಮುನ್ನವೇ ಓಟಿಟಿಯಲ್ಲಿ ಕಾಣಿಸಿ ಕೊಂಡಿದೆ. ಅದರ ಜೊತೆಗೇ ಮತ್ತೆ ಸಿನಿಮಾ ವಿಮರ್ಶೆ ಮಾಡುವವರು ಸೋಷಿಯಲ್ ಮೀಡಿಯಾಗಳಲ್ಲಿ ಬ್ಯುಸಿ ಆಗಿದ್ದಾರೆ. ಒಂದು ಬದಲಾವಣೆ ಅಂದ್ರೆ ಸಿನಿಮಾ ಬಿಡುಗಡೆ ಆದಾಗ ಸಿನಿಮಾ ಚೆನ್ನಾಗಿಲ್ಲ ಅಂತ ಹೇಳೋಕೆ ಹಿಂದೆ ಮುಂದೆ ನೋಡ್ತಾ ಇದ್ದವರು, ಈಗ ಸಾರಾ ಸಗಟಾಗಿ ನಿರ್ದೇಶಕ ಹರಿಕೃಷ್ಣ ಅವರು ಸಂಗೀತ ಮಾಡ್ಕೊಂಡಿದ್ರೆ ಉತ್ತಮ ಅಂತ ನೇರವಾಗಿ ಹೇಳ್ತಾ ಇದ್ದಾರೆ.

ಪ್ರೇಕ್ಷಕರ ಮಟ್ಟಿಗೆ ಎಷ್ಟು ಜನ ಸಿನಿಮಾ ನೋಡೋಕೆ ಆಸಕ್ತಿ ತೋರಿಸ್ತಿದ್ದಾರೆ ಅನ್ನೋದ್ರ ಬಗ್ಗೆ ಇನ್ನೂ ಅಂಕಿ ಅಂಶಗಳು ಸಿಕ್ಕಿಲ್ಲ. ಥಿಯೇಟರ್‌ ನಲ್ಲಂತೂ ಸಿನಿಮಾ ನೋಡೋಕೆ ಪ್ರೇಕ್ಷಕರು ಬರಲಿಲ್ಲ, ಇದ್ರೂ ಬರ್ತಾರಾ ಅಂತ ನಿರ್ಮಾಪಕರು ಕಾಯ್ತಾ ಇದ್ದಾರೆ. ಆದರೆ, ಚಿತ್ರಮಂದಿರಕ್ಕೆ ಬಾರದವರು ಓಟಿಟಿಗೆ ಬಂದಾರೆಯೇ? ಅಂತ ಗಾಂಧಿನಗರದ ಪಂಡಿತರು, ಕ್ರಾಂತಿ ಮುಗಿದ ಅಧ್ಯಾಯ, ಕಾಟೇರನ ಬಗ್ಗೆ ಮಾತಾಡಿ ಅಂತಿರೋ ದಂತೂ ಸತ್ಯ.

ಲೂಸ್ ಟಾಕ್
ಅಕ್ಷರ್ ಪಟೇಲ್ (ಕಾಲ್ಪನಿಕ ಸಂದರ್ಶನ)
ಏನ್ ಪಟೇಲ್ರೇ, ಟೆನಲ್ಲಿ ಬೋಲರ್‌ಗಳು ಬಾಲ್ ಟರ್ನ್ ಮಾಡ್ರೋ ಅಂದ್ರೆ ಮ್ಯಾಚ್‌ನೇ ಟರ್ನ್ ಮಾಡ್ತಿದ್ದೀ?
-ಏನ್ ಮಾಡೋದು. ಬೋಲರ್ಸ್‌ಗಳು ಬ್ಯಾಟ್ಸ್‌ಮನ್ ಆಗಿ ಟರ್ನ್ ಆಗ್ತಾ ಇದ್ದೀವಿ. ಬ್ಯಾಟಿಂಗ್ ಆಡೋಕೆ ಬಂದೋರೆಲ್ಲ ಬೋಲರ್‌ಗಳಿಗೆ ಬ್ಯಾಟ್ಸ್ ಆಫ್ ಟು ಯೂ ಅಂತ ವಿಕೆಟ್ ಚೆಲ್ಲಿದರೆ ಏನ್ ಮಾಡೋಕಾಗುತ್ತೆ.

ಆದ್ರೂ, ಇದು ೨-೩ ದಿನದ ಒಳಗೇ ಟೆ ಮ್ಯಾಚ್ ಮುಗಿದು ಹೋಗ್ತಾ ಇವೆಯಲ್ಲ. ಪಾಪ ಬ್ಯಾಟ್ಸ್‌ಮನ್‌ಗಳು ಪಿಚ್‌ನ ಎಷ್ಟು ಬೈಕೊಂಡ್ರೋ ಏನೋ?
-ನೋಡಿ ಇದರಲ್ಲಿ ಪಿಚ್‌ದೇನೂ ತಪ್ಪಿಲ್ಲ. ಬ್ಯಾಟ್ಸ್‌ಮನ್‌ಗಳ ಫುಟ್ ವರ್ಕ್ ಸರಿ ಇರಲಿಲ್ಲ ಅಷ್ಟೇ. ಅದೆನೋ ಅಂತಾರಲ್ಲ ಕುಣೀಲಾರದವಳು ನೆಲ ಡೊಂಕು ಅಂದ್ಳಂತೆ ಅಂತ, ಹಂಗಾಯ್ತು ಇದು.

ಪಿಚ್ ಸರಿ ಇಲ್ಲ ಅಂತ ಕೆಲವರು ತುಂಬಾ ಟೀಕೆ ಮಾಡ್ತಾ ಇದ್ದಾರಲ್ಲ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ?
-ಅದನ್ನೆ ಕೇಳಿ ಮನಸ್ಸಿಗೆ ಪಿಚ್ಚೆನ್ನಿಸಿತು. ಆದ್ರೆ, ಇಷ್ಟಕ್ಕೇ ಹಿಂಗಂದ್ರೆ ಹೆಂಗೆ. ಮುಂದಿನ ಮ್ಯಾಚ್ ಕೂಡ ಹಿಂಗೇ ನಡೆಯೋದು. ಪಿಚ್ ಅಭೀ ಬಾಕೀ ಹೈ.

ಸರಿ, ನಮ್ಮ ಸ್ಪಿನ್ನರ್‌ಗಳ ಬೋಲಿಂಗ್ ಬಗ್ಗೆ ಏನ್ ಹೇಳ್ತೀರಿ?

-ಹದಿನೈದು ಸೆಷನ್‌ಗಳಲ್ಲಿ ನಡೆಯಬೇಕಿದ್ದ ಟೆ ಮ್ಯಾಚ್ ಅನ್ನು ಐದೇ ಸೆಷನ್‌ಗಳಲ್ಲಿ ಮುಗಿಸಿದ ನಮ್ಮ ಬೋಲರ್‌ಗಳಿಗೆ ಅರ್ಜುನ ಅಲ್ಲ, ಬಬ್ರುವಾಹನ
ಪ್ರಶಸ್ತಿ ಕೊಡಬೇಕು

ಅಂತೂ ನಿಮ್ಮೂರ ಸ್ಟೇಡಿಯಂಗೆ ಮೋದಿ ಹೆಸರಿಟ್ಟಿದ್ದಕ್ಕೇ ಆ ಮಟ್ಟದ ಗೆಲುವು ಸಾಧ್ಯವಾಯಿತಾ ಅಂತ ?
-ಸ್ಟೇಡಿಯಂಗೆ ಮೋದಿ ಹೆಸರಿಟ್ರೂ ಕೊನೆಗೂ ಅದು ಪಟೇಲರದ್ದೇ ಅಂತ ಈಗಾಗ್ಲೇ ನಾನೇ ಪ್ರೂವ್ ಮಾಡಿದ್ನಲ್ಲ.

ನೆಟ್ ಪಿಕ್ಸ್

ಇಬ್ಬರು ಬ್ಯುಸಿನೆಸ್‌ಮನ್‌ಗಳು ಅಂದಿನ ಗಾಲ ಪ್ರಾಕ್ಟೀಸಿಗೆ ರೆಡಿ ಆಗ್ತಾ ಇದ್ರು. ಖೇಮು ಅದೇ ಕ್ರೀಡಾಂಗಣದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಾ ಇದ್ದ. ಇವರಿಬ್ಬರೂ ಆಡೋಕೆ ರೆಡಿ ಆಗ್ತಾ ಇದ್ದಿದ್ದನ್ನು ನೋಡಿ, ಇವರ ಬಳಿ ಬಂದು, ಸರ್ ನನ್ನ ಬಳಿ ಒಂದು ವಿಶೇಷವಾದ ಬಾಲ್ ಇದೆ, ಬೇಕಾ ಅಂತ ಕೇಳಿದ. ಅದಕ್ಕೆ ಅವರು ಗಾಲ್ ಬಾಲ್‌ನಲ್ಲಿ ವಿಶೇಷ ಏನಿರುತ್ತೆ ಅಂತ ಆಶ್ಚರ್ಯ ಪಟ್ಟುಕೊಂಡೇ ಖೇಮುವಿನಿಂದ ಬಾಲ್ ತೆಗೆದುಕೊಂಡು ನೋಡಿದರು. ಅದರಲ್ಲಿ ಅವರಿಗೆ ವಿಶೇಷ ಏನೂ ಕಾಣಲಿಲ್ಲ. ಮಾಮೂಲಿ ಬಾಲ್ ಥರನೇ ಇತ್ತು. ಅದಕ್ಕೆ ಇಬ್ಬರೂ ಮುಖ ಮುಖ ನೋಡಿಕೊಂಡು ಮತ್ತೆ ಖೇಮು ಮುಖ ನೋಡಿ ಕೇಳಿದರು, ಎಲ್ಲಾ ಬಾಲ್ ಥರಾನೇ ಇದೆಯಲ್ಲಪ್ಪ ಇದರಲ್ಲಿ ವಿಷೇಷ ಏನ್ ಬಂತು?. ಅದಕ್ಕೆ ಖೇಮು ಹೇಳಿದ, ಸರ್ ನೋಡೋಕೆ ಮಾಮೂಲಿಯಾಗೇ ಇದೆ. ಆದ್ರೆ ಇದರ ವಿಶೇಷ ಏನು ಅಂದ್ರೆ, ಇದು ಏನ್ ಮಾಡಿದರೂ ಕಳೆದೇ ಹೋಗದ ಬಾಲ್ ಅಂದ.

ಇಬ್ಬರೂ ಅದು ಹೆಂಗೆ ಅಂತ ಕೇಳಿದ್ರು. ಅದಕ್ಕೆ ಮುಂದುವರಿದ ಖೇಮು, ನೋಡಿ ಸರ್, ಇದು ಎದರೂ ಪೊದೆಯೊಳಗೆ ಹೋದ್ರೆ ಅಲ್ಲಿಂದ ಬೀಪ್ ಬೀಪ್ ಅಂತ ಸೌಂಡ್ ಮಾಡುತ್ತೆ. ನೀರಿನಲ್ಲಿ ಬಿದ್ದರೆ ಗುಳ್ಳೆಗಳನ್ನು ಹೊರಡಿಸುತ್ತೆ. ಬೆಂಕಿಯಲ್ಲಿ ಬಿದ್ರೆ ಸುಡೋದಿಲ್ಲ, ಅಲ್ಲಿಂದಲೇ ಬೇರೆ ಬೇರೆ ಕಲರ್ ಫ್ರೇಮ್ ಹೊರಡಿಸುತ್ತೆ. ಹಾಗಾಗಿ ಬಾಲ್ ಹುಡುಕೋದು ಸುಲಭ ಆಗುತ್ತೆ. ಕಳೆದು ಹೋಗೋ ಛಾನ್ಸೇ ಇಲ್ಲ ಅಂದ.

ಈ ಮಾತನ್ನು ಕೇಳಿ ಇಬ್ಬರೂ ತುಂಬಾ ಇಂಪ್ರೆಸ್ ಆಗಿ, ಆ ಬಾಲ್ ಅನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ರು. ಬಾಲ್ ಕೊಟ್ಟು ಹಣ ಇಸ್ಕೊಂಡು ಹೊರಟ ಖೇಮುವನ್ನು ಒಬ್ಬ ಬ್ಯುಸಿನೆಸ್ ಮನ್ ದೂರದಿಂದಲೇ ಕೇಳಿದ, ಅ ಖೇಮು, ಈ ಬಾಲ್ ನಿಂಗೆ ಎಲ್ಲಿ ಸಿಕ್ತು? ಅದಕ್ಕೆ ಖೇಮು ಅಲ್ಲಿಂದಲೇ ತಿರುಗಿ ನೋಡಿ ಕೂಲಾಗಿ ಹೇಳಿದ, ಯಾರೋ ಕಳಕೊಂಡಿದ್ರು ಅನ್ಸುತ್ತೆ, ಹಿಂಗೇ ಎ ಸಿಕ್ತು ಸರ್!

ಲೈನ್ ಮ್ಯಾನ್

ಕುಡಿತ ಬಿಡಿಸುವ ಕೆಲಸ
-ಡಿ ‘ವೈನ್’
ಹಳೇ ಕಾಲದ ಹಳ್ಳಿ ಶೈಲಿಯಲ್ಲಿ ಊಟ ಮಾಡೋ ಪದ್ಧತಿ
-‘ತಾಟ್’ಪ್ರೊಸೆಸ್
ದುಂಬಿ ಜೇನಿಗೆ ಹೇಳಿದ್ದೇನು?
-ನಾನು ನಿನ್ನ ಮನದುಂಬಿ ಪ್ರೀತಿಸ್ತೀನಿ
ಕೆಲಸ ಮಾಡೋರದ್ದು – ಟಾಸ್ಕ್ ಫೋರ್ಸ್
ಎಲ್ಲವನ್ನೂ ಬರೀ ಪ್ರಶ್ನೆ ಮಾಡುವವರ ಗುಂಪು -ಆಸ್ಕ್ ಫೋರ್ಸ್

ಧ್ರುವ ಸರ್ಜಾ ಓದುಗರ ಪ್ರಶ್ನೆಗೆ ಉತ್ತರಿಸುವ ಕಾಲಂ ಶುರು ಮಾಡಿದ್ರೆ ಅದರ ಹೆಸರು
-ಉತ್ತರ ಧ್ರುವ

ಧ್ರುವ ಸರ್ಜಾ ಅವರ ಹೊಸ ಸಿನಿಮಾ ರಿಲೀಸ್ ಆದಾಗ ಥಿಯೇಟರ್‌ನಲ್ಲಿ ಸೊಳ್ಳೆಗಳ ಕಾಟ ಇರಲ್ಲ
-ಯಾಕಂದ್ರೆ ಸಿನಿಮಾ ಹೆಸರು ಮಾರ್ಟಿನ್

ಡೇಂಜರಸ್ ಆಗಿ ಡ್ರೈವ್ ಮಾಡೋ ಆಂಬುಲೆ ಡ್ರೈವರ್‌ಗೆ ಏನಂತ ಬಯ್ಬೇಕು?
-ಯಾಕೋ ಮಗನೇ, ಇವತ್ ಯಾರೂ ಗಿರಾಕಿ ಸಿಗಲಿಲ್ವಾ?

ಪೂರಿಗೆ ಬರೀ ಚಟ್ನಿ ಕೊಟ್ಟಾಗ ಆಗೋ ಬೇಸರದಲ್ಲಿ ಮೂಡುವ ಹಾಡು
-ಏನಾಗಲಿ ಮುಂದೆ ಸಾಗು ನೀ
ಕುರಿ ಮಾಂಸ ತಿಂದು ಹೊಟ್ಟೆ ಬರಿಸಿಕೊಂಡವನು
-ಲ್ಯಾಂಬೋದರ
ಮನುಷ್ಯನ ದೇಹದಲ್ಲಿ ಕೋಪ ಹುಟ್ಟಿಸುವ ಅಂಗ
-ಪಿತ್ತ ಜನಕಾಂಗ