Sunday, 8th September 2024

ತಾಳ್ಮೆ ಮತ್ತು ಅವಿರತ ಪ್ರಯತ್ನ; ಕಡೆಗಣಿಸುವ ಬದುಕಿನ ಹಾದಿಗಳು

ಶ್ವೇತಪತ್ರ

shwethabc@gmail.com

ಶ್ರೇಯ ೨೦೧೬ ಬ್ಯಾಚ್‌ನ ನನ್ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಎಂಬಿಬಿಎಸ್ ಕನಸನ್ನ ಹೊತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಿಂದ ಬೆಂಗಳೂರಿನ ತನ್ನ ದೊಡ್ಡಮ್ಮನ ಮನೆಯಲ್ಲಿ ಓದಲು ಬಂದು ನಮ್ಮ ಕಾಲೇಜನ್ನು ಸೇರಿಕೊಂಡಿದ್ದ ಹುಡುಗಿ, ಜಾಣೆ. ಕಣ್ಣುಗಳ ತುಂಬಾ ಕನಸು ತುಂಬಿಕೊಂಡು ಮುಂದಿನ ವರುಷದ ದ್ವಿತೀಯ ಪಿಯುಸಿ ನೀಟ್ ಪರೀಕ್ಷೆಗಳಿಗೆ ಈಗಿನಿಂದಲೇ ಎಲ್ಲ ತಯಾರಿ ನಡೆಸುತ್ತಿದ್ದ ಹುಡುಗಿ, ಟಾಪ್ ೨೦ರ ಒಳಗೆ
ರಾಂಕ್ ಪಡೆದು ಬೆಂಗಳೂರಿನ ಮೆಡಿಕಲ್ ಸೀಟ್ ಪಡೆದುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಓದುತ್ತಿದ್ದ ಮಧ್ಯಮ ವರ್ಗದ ಪ್ರತಿಭಾನ್ವಿತೆ.

ಶ್ರೇಯಾಳ ಬದುಕು ದೊಡ್ಡಮ್ಮನ ಮನೆಯಲ್ಲಿ ಅಷ್ಟು ಸುಲಭಕ್ಕೆ ಇರಲಿಲ್ಲ. ಆಕೆಯ ದೊಡ್ಡಮ್ಮನ ಮಗನಿಂದಲೇ ಆಕೆಗೆ ಲೈಂಗಿಕ ಕಿರುಕುಳದ ಅನುಭವ ಆಗುತ್ತಲ್ಲಿರುತ್ತದೆ. ಇದನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ, ಹಂಚಿಕೊಳ್ಳಲಾಗದೆ, ಒಳಗೆ ಕುಸಿಯುತ್ತಾ, ಕುಗ್ಗುತ್ತಾ ಹಿಂಸೆ ಪಡುತ್ತಿದ್ದಳು ಶ್ರೇಯ. ಕಾಲೇಜಿಗೆ ರಾಜರಾಜೇಶ್ವರಿ ನಗರದಿಂದ ವೀರಭದ್ರ ಸಿಗ್ನಲ್ ಮಾರ್ಗವಾಗಿ ಬರುವುದು ನನ್ನ ಎಂದಿನ ದಿನಚರಿ. ಆ ಹೊತ್ತು ಅದೇ ಮಾರ್ಗವಾಗಿ
ಬರುವಾಗ ವೀರಭದ್ರ ನಗರ ಸಿಗ್ನಲ್ ದಾಟಿ ಗಿರಿನಗರದ ಕಡೆಗೆ ಒಂದು ತಿರುವಿದೆ ಅಲ್ಲಿ ಒಂದು ಸ್ಕೂಟರ್ ಮಗುಚಿ ಬಿದ್ದಿತ್ತು.

ಜನ ಸೇರಿದ್ದರು ಯಾವುದೋ ಆಕ್ಸಿಡೆಂಟ್ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತಿತ್ತು ಕಾಲೇಜಿಗೆ ತಡವಾಗಿದ್ದರಿಂದ ಜನಸಂದಣಿ ಹೆಚ್ಚಾಗಿದ್ದ
ಕಾರಣ ಅಲ್ಲಿಂದ ಹೊರಡುವುದು ಅನಿವಾರ್ಯವಾಗಿತ್ತು. ನಂತರದ ದಿನಗಳಲ್ಲಿ ತಿಳಿದುಬಂದದ್ದೇನೆಂದರೆ ಆ ದಿನ ನಾನು ಕಾಲೇಜಿಗೆ ಹಾದು ಬರುವಾಗ ಅಪಘಾತವಾಗಿ ಬಿದ್ದಿದ್ದು ನನ್ನ ವಿದ್ಯಾರ್ಥಿನಿ ಶ್ರೇಯ ಅವಳ ಬಲಗೈಗೆ ತೀವ್ರವಾದ ಪೆಟ್ಟು ಬಿದ್ದು ಮುಂದಿನ ಆರು ತಿಂಗಳುಗಳ ಕಾಲ ಆಕೆಗೆ ಬರೆಯಲು ಸಾಧ್ಯವಾಗದೆ ಹೋಯಿತು. ಕೆಲ ದಿನಗಳು ವಿಶ್ರಮಿಸಿದ ನಂತರ ಶ್ರೇಯ ಎದೆಗುಂದಲಿಲ್ಲ.

ನಿಧಾನವಾಗಿ ಕಾಲೇಜಿಗೆ ಬರತೊಡಗಿದಳು ತನ್ನ ಸ್ನೇಹಿತರಿಂದ ನೋಟ್ಸ್‌ಗಳನ್ನು ಪಡೆದು ಪ್ರತಿ ವಿಷಯದಲ್ಲೂ ಅಪ್ಡೇಟ್ ಆಗತೊಡಗಿದಳು. ಈ ನಡುವೆ ತನ್ನ ದೊಡ್ಡಮ್ಮನ ಮಗ ನೀಡುತ್ತಿದ್ದ ಲೈಂಗಿಕ ಕಿರುಕುಳವನ್ನು ಧೈರ್ಯವಾಗಿ ಎದುರಿಸುವ ಶಕ್ತಿಯನ್ನು ಬೆಳೆಸಿಕೊಂಡಿದ್ದಳು. ಒಂದೆಡೆ ಲೈಂಗಿಕ ಕಿರುಕುಳ ಮತ್ತೊಂದೆಡೆ ಅಪಘಾತದಲ್ಲಿ ಕೈಗೆ ಪೆಟ್ಟಾಗಿ ಬರೆಯಲಾಗದ ಅಸಹಾಯಕ ಸ್ಥಿತಿ ಈ ಎರಡು ವಿಚಾರಗಳು ಆ ಪುಟ್ಟ ಎಳೆಯ ಹೃದಯದ ಮೇಲೆ ಬರೆ ಎಳೆದಂತಾಗಿತ್ತು. ಎಲ್ಲ ನೋವುಗಳ ನಡುವೆಯೂ ಮುನ್ನುಗ್ಗಬೇಕಾಗಿರುವುದೊಂದೆ ಆಕೆಯ ಎದುರಿಗಿದ್ದ ಆಯ್ಕೆಯಾಗಿತ್ತು.

ಆಪ್ತ ಸಲಹೆಯ ರೂಮಿನೊಳಗೆ ನನ್ನೆದುರು ಗುಬ್ಬಚ್ಚಿ ಮರಿಯಂತೆ ಮುದುರಿ ಕುಳಿತಿದ್ದ ಶ್ರೇಯಾಳಿಗೆ ನಾನು ನೀಡಿದ್ದು ಎರಡೇ ಆಯ್ಕೆ ಆಗಿರುವ ನೋವು ಗಳನ್ನು ನೆನೆಯುತ್ತಾ ಕೊರಗುತ್ತಾ ದುಃಖದೊಳಗೆ ಮುಳುಗಿ ಯಾತನವಾಗಿರುವ ಬದುಕನ್ನ ಇನ್ನಷ್ಟು ಯಾತನಾಮಯ ವಾಗಿಸಿಕೊಳ್ಳುವುದು, ಇಲ್ಲವೇ ನೋವುಗಳ ಜತೆ ಸೆಣೆಸಿ ಹೊಸ ಬದುಕಿಗೆ ಮುಖ ಮಾಡುವುದು ಸಂಶಯವೇ ಬೇಡ ಶ್ರೇಯ ಆಯ್ದುಕೊಂಡದ್ದು ಎರಡನೆಯ ಆಯ್ಕೆ. ತನ್ನ ದೈಹಿಕ ಹಾಗೂ ಮಾನಸಿಕ ನೋವುಗಳಿಂದ ನಿಧಾನ ವಾಗಿ ಚೇತರಿಸಿಕೊಂಡ ಆಕೆ ಹೊರಹೊಮ್ಮಿದ್ದು ಮಾತ್ರ ಗಟ್ಟಿಯಾಗಿ ೨೦೧೮ರಲ್ಲಿ ಹೊರಬಂದ ನೀಟ್ ಪರೀಕ್ಷೆಯ ಫಲಿತಾಂಶದಲ್ಲಿ ಶ್ರೇಯಾಳಿಗೆ ಬೆಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಸೀಟು ದೊರಕಿತ್ತು.

ಬದುಕಿನ ಎಂತಹಹುದೇ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಬಿಟ್ಟುಕೊಡದ ಮನಸ್ಥಿತಿ ಶ್ರೇಯಾದಾಗಿತ್ತು. ಹಾಗಿದ್ದರೆ ಬದುಕಿನ ಈ ಸವಾಲಿನ ಪರಿಸ್ಥಿತಿಗಳ ನಡುವೆಯೂ ಶ್ರೇಯಾಳನ್ನು ಗಟ್ಟಿಗೊಳಿಸಿದ ಆ ಶಕ್ತಿಗೆ ನಾವು ಇಡಬಹುದಾದ ಹೆಸರೇನು? ಅದು ಮತ್ತೇನಲ್ಲ ತಾಳ್ಮೆ ಮತ್ತು ಅವಿರತ ಪ್ರಯತ್ನ. ಬದುಕಲ್ಲಿ ಎಂತಹುದೇ ಸವಾಲು, ಸಮಸ್ಯೆ, ಕಷ್ಟ ಬಂದರೂ ಅದರಿಂದ ಯಶಸ್ಸು ನಮ್ಮಿಂದ ದೂರ ಸರಿದರು ನಿರಂತರವಾಗಿ ಸಾಗಿ ಗುರಿಮುಟ್ಟುತ್ತೇವೆ ಎಂಬ ಮನಸ್ಥಿತಿಯೊಂದಿಗೆ ನಡೆದು ಬಿಡುವುದಿದೆಯಲ್ಲ ಅದೇ ತಾಳ್ಮೆ ಮತ್ತು ಅವಿರತ ಪ್ರಯತ್ನ. ಬದುಕಲ್ಲಿ ಯಶಸ್ಸನ್ನು ಪಡೆಯಲು ಅನೇಕ ಮಾರ್ಗಗಳಿವೆ ಅನೇಕ ಗುಣಲಕ್ಷಣಗಳು ಸಹ ಯಶಸ್ಸನ್ನು ಪಡೆಯಲು ಬಹಳ ಮುಖ್ಯವಾಗುತ್ತವೆ.

ಈ ಹೊತ್ತಿನ ಸೊ ಕಾಲ್ಡ ಆಧುನಿಕ ಸಮಾಜ ಕಳೆದು ಕೊಳ್ಳುತ್ತಿರುವ ಯಶಸ್ಸಿಗೆ ಬೇಕಾದ ಆ ಎರಡು ಮುಖ್ಯ ಗುಣಗಳೇ ತಾಳ್ಮೆ ಮತ್ತು ಅವಿರತಶ್ರಮ. ಇಂದಿನ ಜನಕ್ಕೆ ತತ್ತಕ್ಷಣದ ತೃಪ್ತಿ ಬಹು ಅಗತ್ಯ. ಈ ಹೊತ್ತು ಜನರಿಗೆ ಯಶಸ್ಸು ಹೇಗೆ ದೊರೆಯಬೇಕೆಂದರೆ ಎರಡು ನಿಮಿಷದಲ್ಲಿ ತಯಾರಾಗುವ ಮ್ಯಾಗಿಯಂತೆ ಬದುಕಲ್ಲಿ ಎಲ್ಲವೂ ಅಂದು ಕೊಂಡ ಕ್ಷಣಕ್ಕೆ ಸಿಕ್ಕಿಬಿಡಬೇಕು ಅದಕ್ಕೆ ಬೇಕಾದ ಪ್ರಯತ್ನ, ಪರಿಶ್ರಮವನ್ನು ಹಾಕಲು ಯಾರು ತಯಾರಿಲ್ಲ. ಸಣ್ಣಪುಟ್ಟ ಸೋಲುಗಳು ನಮ್ಮನ್ನು ಅಧಿಕವಾಗಿ ನಿರಾಶೆಗೊಳಿಸುತ್ತಿವೆ. ಸಣ್ಣ ಸೋಲುಗಳನ್ನೇ ಬದುಕಿನ ಕೊನೆ ಎಂದು ಮನ ಗಾಣಲು ಶುರು ಮಾಡಿ ದ್ದೇವೆಯೇ ಹೊರತು ನಮ್ಮನ್ನು ನಾವು ಸಂಯೋಜಿಸಿಕೊಂಡು ಮತ್ತೆ ಎದ್ದೇಳಲು ತಯಾರಿಯ ನಡೆಸುವುದಿಲ್ಲ.

ನಾವಿಲ್ಲಿ ನೆನಪಿಡಬೇಕಾದ ಒಂದು ಮಾತೆಂದರೆ Tough situation never last but tough people do! ಸವಾಲಿನ ಸಮಸ್ಯೆಯ ಕಷ್ಟದ ಸಂದರ್ಭದಲ್ಲಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಮುಖ್ಯ ಪ್ರಶ್ನೆ ಎಂದರೆ ಇನ್ನೂ ಒಂದು ವರುಷ ಕಳೆದ ಮೇಲೆ ಈ ವಿಷಯ ನನಗೆ ನಿಜವಾಗಿಯೂ ಸವಾಲೇ? ಸಮಸ್ಯೆಯೇ? ಎಂದು ಸವಾಲು,ಸಮಸ್ಯೆ ಎಂದ ತಕ್ಷಣವೇ ಜನ ಬಹಳ ಸುಲಭವಾಗಿ ತಮ್ಮ ಸೋಲನ್ನು ಒಪ್ಪಿಕೊಂಡು ಬಿಡುತ್ತಾರೆ. ತಾವು ಅಂದು ಕೊಂಡದ್ದು ಆಗದೆ ಹೋದಾಗ ಸುಲಭವಾಗಿ ಅಸಮಾಧಾನಕ್ಕೆ ಒಳಗಾಗಿ ಸೋತು ಬಿಡುತ್ತಾರೆ.

ಸಮಾಧಾನದಿಂದ ಸೋಲನ್ನು ಒಪ್ಪಿಕೊಂಡು ತಮ್ಮ ಶಕ್ತಿಯನ್ನು ಗುರಿಯತ್ತ ಹೂಡಿಕೆ ಮಾಡಿದರೆ ಯಶಸ್ಸು ಖಂಡಿತ ಶತಸಿದ್ಧ. ಬದುಕಿನ ಕಹಿ ಸತ್ಯವೊಂದು ನಿಮಗೆಲ್ಲ ಗೊತ್ತಿರಲಿ. ನಮ್ಮ ಗುರಿ ಅದು ಯಾವುದೇ ಆಗಿರಲಿ ವೈಯಕ್ತಿಕ ಅಥವಾ ವೃತ್ತಿ ಸಂಬಂಧಿತ ಅಲ್ಲಿ ನೂರಾರು ಸವಾಲುಗಳು, ಸಮಸ್ಯೆಗಳು, ಸಂಕೀರ್ಣತೆಗಳು, ಸೋಲುಗಳು ಇರುವುದಂತೂ ಸಹಜ. ಅವೆಲ್ಲವುಗಳನ್ನು ಮೀರಿ ಬದುಕಲ್ಲಿ ನಮಗೇನು ಬೇಕೋ ಅದನ್ನು ಪಡೆದು ಕೊಳ್ಳಬೇಕಿರುವುದು ನಮ್ಮ ಜಾಣತನ ಅದಕ್ಕೆ ಬೇಕಿರುವುದು ತಾಳ್ಮೆ ಮತ್ತು ಪರಿಶ್ರಮ.

ಮಹತ್ವಾಕಾಂಕ್ಷೆ ಹಾಗೂ ಧೈರ್ಯ ಇವೆರಡು ಇದ್ದರೆ ಬದುಕಿಗೊಂದು ಸ್ಪಷ್ಟತೆ. ಮನುಷ್ಯನಿಗೆ ತನ್ನ ಜನ್ಮಜಾತ ಗುಣಗಳಿಗಿಂತ ಮುಖ್ಯವಾಗಿಬೇಕಿರುವುದು ತಾಳ್ಮೆ ಮತ್ತು ಅವಿರತ ಪ್ರಯತ್ನ. ಅವುಗಳನ್ನು ಆತ ನಿಧಾನವಾಗಿ ರೂಢಿಸಿಕೊಳ್ಳಬೇಕು. ಬಹಳ ನಿಶಬ್ದವಾಗಿ, ನಮ್ಮಷ್ಟಕ್ಕೆ ನಾವೇ ಪ್ರತ್ಯೇಕಗೊಂಡು ಬದುಕಿನ ಸವಾಲುಗಳಿಂದ ಆಯಾಸಗೊಂಡಿರುವಾಗ ನಮ್ಮನ್ನು ಹಾಗೂ ನಮ್ಮ ಬದುಕಿನ ಉದ್ದೇಶವನ್ನು ನಾವೇ ಅನುಮಾನದಿಂದ ನೋಡುವಂತಾಗಿ ಬಿಡುತ್ತದೆ. ಬದುಕಲ್ಲಿ ಹೀಗೆ ನಮ್ಮನ್ನು ನಾವು ಸ್ವಯಂ ಪ್ರತಿ-ಲಿಸಿಕೊಳ್ಳುವುದು ಹೊಸ ದಾರಿಯ ಪಯಣಕ್ಕೆ ದಿಕ್ಸೂಚಿಯಾಗುವುದರಲ್ಲಿ ಎರಡು ಮಾತಿಲ್ಲ ಇಂತಹ ಸಂದರ್ಭದಲ್ಲಿ ನಮಗೆ ಅವಶ್ಯಕವಾಗಿ ಬೇಕಿರುವುದು ತಾಳ್ಮೆ ಮತ್ತು ಅವಿರತಪ್ರಯತ್ನ.

ನಮ್ಮ ಬಗ್ಗೆ ನಮ್ಮದೇ ಅನುಮಾನಗಳನ್ನು ಸರಿಸಿ ನಮ್ಮನ್ನು ಗುರಿಯತ್ತ ಮುಖ ಮಾಡುವಂತೆ ದಿಕ್ಕುಗಾಣಿಸುತ್ತವೆ ಈ ತಾಳ್ಮೆ ಮತ್ತು ಅವಿರತ ಪ್ರಯತ್ನ. ಥಾಮಸ್ ಆಲ್ವಾ ಎಡಿಸನ್ ಹೇಳಿದ ಅದ್ಭುತವಾದ ಮಾತೊಂದು ಇಲ್ಲಿ ನೆನಪಿಗೆ ಬರುತ್ತಿದೆ ಬದುಕಲ್ಲಿ ಜನರು ಎಷ್ಟು ಬೇಗನೆ ಸೋಲನ್ನು ಒಪ್ಪಿಕೊಂಡು
ಬಿಡುತ್ತಾರೆಂದರೆ ಅವರಿಗೆ ತಾವು ಯಶಸ್ಸಿಗೆ ಎಷ್ಟು ಹತ್ತಿರವಾಗಿದ್ದೇವೆ ಎಂಬ ಅರಿವೇ ಇರುವುದಿಲ್ಲ. ಅವಿರತ ಪ್ರಯತ್ನದ ಅರ್ಥವೇ ನಂಬಿಕೆಯೊಂದಿಗೆ ಇದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಗುರುತಿಸುವುದು ಜೊತೆಗೆ ಎಂತಹುದೇ ಅಡೆ-ತಡೆಗಳು ಎದುರಾದರು ಸ್ಥಿರವಾಗಿ ಶಿಸ್ತಿನಮನೋಭಾವದಿಂದ ನಿರಂತರವಾಗಿ ಮುನ್ನಡೆದು ಬಿಟ್ಟರೆ ಅಂತಿಮ ಫಲಿತಾಂಶವನ್ನು ನಮಗೆ ಬೇಕಾದ ಹಾಗೆ ಸಾಧಿಸಲು ಸಾಧ್ಯವಾಗುತ್ತದೆ.

ಈ ಕಲ್ಲು ಮುಳ್ಳಿನ ಹಾದಿಯಲ್ಲಿ ನಾವು ಗಟ್ಟಿಯಾಗುವುದಂತೂ ದಿಟ. ಗಟ್ಟಿತನದ ಜೊತೆಗೆ ಪ್ರಬುದ್ಧತೆಯು ನಮ್ಮದಾಗುತ್ತದೆ. ತಾಳ್ಮೆ ಇರಲಿ! ಜಗತ್ತನ್ನೇ ಗೆದ್ದು ಬಿಡಬೇಕು ಎಂಬ ಹುಂಬತನ ಬೇಡ. ಯಾವುದೇ ಕೆಲಸವು ಗಟ್ಟಿಯಾಗ ಬೇಕೆಂದರೆ ಅದಕ್ಕೆ ಎರಡರಿಂದ ನಾಲ್ಕು ವರ್ಷಗಳ ಪ್ರಯತ್ನ, ಪರಿಶ್ರಮ, ತಾಳ್ಮೆಯ ಅಗತ್ಯತೆ ಖಂಡಿತ ಇರುತ್ತದೆ. ಕೆಲವೊಮ್ಮೆ ಅದು ಐದರಿಂದ ಹತ್ತು ವರ್ಷಗಳು ಆಗಬಹುದು. ನನ್ನೊಳಗಿನ ಒಬ್ಬ ಅದ್ಭುತ ನಟ ಹೊರ ಬರಲು ಅವಕಾಶಕ್ಕಾಗಿ ನಾನು ೨೫ ವರ್ಷಗಳು ಕಾಯ ಬೇಕಾಗಿತ್ತು ಎಂದು ಹೆಸರಾಂತ ಖಳ ನಟ ರವಿಶಂಕರ್ ತಮ್ಮ ಸಂದರ್ಶನವೊಂದರಲ್ಲಿ ಹೇಳಿಕೊಂಡಿ ದ್ದರು.

ನಿರಂತರ ೨೫ ವರ್ಷಗಳ ಕಾಯುವಿಕೆಯಲ್ಲಿ ಆ ನಟ ಹೂಡಿಕೆ ಮಾಡಿದ್ದು ತನ್ನ ತಾಳ್ಮೆ, ಅವಿರತ ಪ್ರಯತ್ನವನ್ನು ಅದರ ಫಲವಾಗಿ ಅನೇಕ ಪ್ರಶಸ್ತಿಗಳು, ರವಿಶಂಕರ್ -ನ್ಸ್ ಅಸೋಸಿಯೇಷನ್‌ಗಳು, ದುಡ್ಡು, ಹೆಸರು ಎಲ್ಲವೂ! ಇದರರ್ಥ ಫಲಿತಾಂಶ ಸಮಯವನ್ನು ಬೇಡುತ್ತದೆ. Yes it take times! ಯಶಸ್ಸಿನ ಹಾದಿ ಕಠಿಣವೆನಿಸಿದಾಗ ಅನೇಕರು ಆಯ್ಕೆ ಮಾಡಿಕೊಳ್ಳುವುದು ಅಡ್ಡದಾರಿಗಳನ್ನ. ಅಡ್ಡದಾರಿಗಳು ನಮಗೆ ಹಿನ್ನಡೆಯಾಗಿ ಮಾರ್ಪಾಡಾಗು
ವುದರಲ್ಲಿ ಸಂಶಯವೇ ಬೇಡ. ಸೋಲುಗಳಿಂದ ಕಂಗೆಡುವುದು ಸಹಜ ಅಂದ ಮಾತ್ರಕ್ಕೆ ಅಡ್ಡದಾರಿಗಳನ್ನು ಹುಡುಕಿಕೊಳ್ಳುವುದು ಸಮಂಜಸವೂ, ಸಾಧುವೂ ಅಲ್ಲ.

ಧೈರ್ಯವೆಂದರೆ ಎದೆಯೊಡ್ಡುವುದಷ್ಟೇ ಅಲ್ಲ, ಕೆಲವೊಮ್ಮೆ ಧೈರ್ಯವೆಂದರೆ ದಿನದ ಕೊನೆಯಲ್ಲಿ ನಾಳೆ ಇದನ್ನು ಸಾಧ್ಯವಾಗಿಸುತ್ತೇನೆ ಎನ್ನುವ ಮೆಲುಧ್ವನಿಯು, ಹೌದು! ತಾಳ್ಮೆ, ಅವಿರತ ಪ್ರಯತ್ನದ ಜತೆಗೆ ನಂಬಿಕೆಯೂ ಬಹಳ ಮುಖ್ಯವಾಗುತ್ತದೆ. ಬದುಕಿಗೆ-ಯಶಸ್ಸಿಗೆ. ಸಾಸಿವೆ ಕಾಳಿನಷ್ಟು ನಂಬಿಕೆಯೊಂದು ನಮ್ಮೊಳಗಿದ್ದರೆ ನಮ್ಮೆದುರಿಗಿನ ದೊಡ್ಡ ಮರವನ್ನು ಬೇರು ಸಹಿತ ಸಮುದ್ರದೊಳಗೆ ನೆಟ್ಟರು ಆ ಮರ ನಮ್ಮ ಆಜ್ಞೆಯನ್ನು ಪಾಲಿಸು ತ್ತದೆ, ನಂಬಿಕೆ ಎಂದರೆ ಅದು. ಗಟ್ಟಿಯಾದ ನಂಬಿಕೆ, ನಿರ್ಣಯ ಗಳು ಗುರಿ ತಲುಪುವ ದೀರ್ಘ ಪಯಣದ ಹಾದಿಯನ್ನು ಸುಲಭಗೊಳಿಸುವ ಸಾಧನಗಳು ಇವತ್ತಿನ ನನ್ನ ಅಂಕಣ ವನ್ನು Robert frost ಬರೆದಿರುವ ದ ರೋಡ್ ನಾಟ್ಟೇಕನ್ ಎಂಬ ಆತನ ಪದ್ಯದ ಸಾಲುಗಳನ್ನು ಇಲ್ಲಿ ಮರು ದಾಖಲಿಸದೆ ಮುಗಿಸಲು ಸಾಧ್ಯವೇ ಇಲ್ಲ.

I shall be telling this with a sigh Somewhere ages and ages hence: Two roads divereged in a wood and I & I took the one less travelled by, And that has made all the difference. ಹಾಗಿದ್ದರೆ ನಿಮ್ಮದು ತಾಳ್ಮೆ ಹಾಗೂ ಅವಿರತ ಪ್ರಯತ್ನದ ಹಾದಿಯೇ ನಂಬಿ ಈ ಹಾದಿ ಹೆಚ್ಚು ಮಂದಿ  ಯಣಿಸದ ದಾರಿಯೇ ಆಗಿದೆ. ಆದರೆ ಈ ಹಾದಿ ಬದುಕಲ್ಲಿ ಎಲ್ಲ ವ್ಯತ್ಯಾಸ ಮೂಡಿಸದೆ ಇರುವು ದಿಲ್ಲ. ನಂಬಿಕೆ ಇರಲಿ!

Leave a Reply

Your email address will not be published. Required fields are marked *

error: Content is protected !!