Friday, 20th September 2024

ಗರ್ಭಿಣಿಯರ ವಿಚಿತ್ರ ಬಯಕೆ!

ವೈದ್ಯ ವೈವಿಧ್ಯ
ಡಾ.ಹೆಚ್.ಎಸ್.ಮೋಹನ್

ಗರ್ಭಿಣಿಯರು ಹಲವರು ತಮ್ಮ ಬಸುರಿನ ಅವಧಿಯಲ್ಲಿ ಬಸುರಿ ಬಯಕೆ ಎಂದು ಏನೇನೋ ತಿನ್ನುವ ಆಸೆ ಬೆಳೆಸಿಕೊಳ್ಳುತ್ತಾರೆ.
ಹಾಗಾದರೆ ಇಂತಹವರಲ್ಲಿ ಬೇಕಿಂಗ್ ಸೋಡಾ ಬಗ್ಗೆೆ ತೀವ್ರ ಬಯಕೆ ಗೊತ್ತೇ ? ಹಾಗೆಯೇ ಕಣ್ಣಿನೊಳಗೆ ಕೂದಲು ಬೆಳೆಯುವುದರ ಬಗ್ಗೆೆ ಕೇಳಿದ್ದೀರಾ? ಕಳೆದ ವಾರದ ಹಾಗೆಯೇ ಈ ವಾರವೂ ಹಲವು ಅಪರೂಪದ ವೈದ್ಯಕೀಯ ವೈಚಿತ್ರ್ಯಗಳತ್ತ ಗಮನ
ಹರಿಸೋಣ.

1. ಗರ್ಭಿಣಿ ಬೇಕಿಂಗ್ ಸೋಡಾ ಬಯಕೆ : ಹೌದು, ಮೇಲೆ ತಿಳಿಸಿದಂತೆ ಗರ್ಭಿಣಿ ಮಹಿಳೆಯರಲ್ಲಿ ಒಬ್ಬೊಬ್ಬರಲ್ಲಿ ಒಂದು ರೀತಿಯ ಬಯಕೆ ಇರುತ್ತದೆ. ಕೆಲವರು ಮಣ್ಣು ತಿನ್ನುತ್ತಾರೆ. ಇನ್ನೂ ಕೆಲವರು ಇನ್ನೂ ವಿಚಿತ್ರ ವಸ್ತುಗಳನ್ನು ತಿನ್ನುತ್ತಾರೆ. ಅಮೆರಿಕದ ಈ ಬಸುರಿ ಮಹಿಳೆ ಪ್ರತಿದಿನ ಒಂದು ಪೌಂಡ್ ನಷ್ಟು ಬೇಕಿಂಗ್ ಸೋಡಾ ತಿನ್ನತೊಡಗಿದಳು. ಕೆಲವು ದಿನಗಳ ನಂತರ ಆಕೆಗೆ ತೀವ್ರ ರೀತಿಯ ಮಾಂಸ ಖಂಡಗಳ ಮತ್ತು ಹೃದಯದ ತೊಂದರೆ ಕಾಣಿಸಿಕೊಂಡಿತು. ಈ ರೀತಿಯ ಬಯಕೆಯನ್ನು ಪೈಕಾ
ಎಂದು ವೈದ್ಯಕೀಯವಾಗಿ ವೈದ್ಯರು ಗುರುತಿಸಿದರು.

ಬೇಕಿಂಗ್ ಸೋಡಾದಲ್ಲಿ ಮುಖ್ಯವಾಗಿ ಸೋಡಿಯಂ ಬೈಕಾರ್ಬೋನೇಟ್ ಇರುತ್ತದೆ. ಅದನ್ನು ಬಹಳ ಜಾಸ್ತಿ ಪ್ರಮಾಣದಲ್ಲಿ ಸೇವಿಸಿದರೆ ದೇಹದ ಮೆಟಬಾಲಿಕ್ ಕ್ರಿಯೆಗಳನ್ನು ಅಲ್ಲೋಲ ಕಲ್ಲೋಲವಾಗಿಸುತ್ತದೆ. ಹೀಗೆ ಹೆಚ್ಚು ಪ್ರಮಾಣದ ಬೇಕಿಂಗ್
ಸೋಡಾ ಸೇವಿಸಿದ್ದರಿಂದ ಹೃದಯ ಮತ್ತು ಮಾಂಸ ಖಂಡಗಳು ಶಿಥಿಲಗೊಳ್ಳತೊಡಗಿದವು. ಆಕೆಗೆ ಹೆರಿಗೆಯ ಸಮಯ ಹತ್ತಿರವಿದ್ದದ್ದರಿಂದ ವೈದ್ಯರು ತಕ್ಷಣ ಹೆರಿಗೆ ಮಾಡಿಸಿದರು. ಅದೃಷ್ಟಕರ ವಿಚಾರವೆಂದರೆ ಆಕೆಯ ಮಗು ಆರೋಗ್ಯವಾಗಿಯೇ ಇತ್ತು.

2. ಸಾಯ್ ಸಾಸ್ ವಿಪರೀತ ಸೇವಿಸಿದಾಗ : ಆಲ್ಕೋಹಾಲ್ ವಿಪರೀತ ಪ್ರಮಾಣದಲ್ಲಿ ಕುಡಿಯುವ ಬಗ್ಗೆ ಎಲ್ಲರಿಗೆ ಗೊತ್ತು. ಆದರೆ ಅಮೆರಿಕದ ವರ್ಜೀನಿಯಾದ 19 ವರ್ಷದ ಈ ಯುವಕ ಏನೋ ಸಾಹಸ ಮಾಡಲು ಹೋಗಿ ಒಂದೇ ಬಾರಿಗೆ ಒಂದು ಸಾಯ್ ಸಾಸ್ ಬಾಟಲಿಯನ್ನು (ಸುಮಾರು ಒಂದು ಕ್ವಾರ್ಟರ್ ) ಕುಡಿದುಬಿಟ್ಟ. ಸ್ವಲ್ಪ ಹೊತ್ತಿಗೇ ಕೈ ಕಾಲಿನಲ್ಲಿ ನಡುಕ ಆರಂಭವಾ ಯಿತು. ನಂತರ ವಿಪರೀತ ಫಿಟ್ಸ್, ಕಂಪನ ಆರಂಭವಾಯಿತು. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ಆತ 3 ದಿನ ಕೋಮಾ ಸ್ಥಿತಿ ಯಲ್ಲಿದ್ದ. ವೈದ್ಯರು ರಕ್ತದಲ್ಲಿ ತೀರಾ ಅಪಾಯಕಾರಿ ಮಟ್ಟ ತಲುಪಿದ ಸೋಡಿಯಂ ಲವಣದ ಓವರ್ ಡೋಸ್ ಎಂದು ( ಹೈಪರ್ ನ್ಯಾಟ್ರೀಮಿಯಾ) ರೋಗ ನಿರ್ಣಯಿಸಿದರು. ಈ ಪ್ರಮಾಣದ ಸಾಯ್ ನಲ್ಲಿ 150 ಗ್ರಾಾಂ ಸೋಡಿಯಂ ಇರುತ್ತದೆ. ದೇಹದಲ್ಲಿ ಸೋಡಿಯಂ ಅಂಶ ತುಂಬಾ ಜಾಸ್ತಿಯಾದಾಗ ಆಸ್ಮಾಸಿಸ್ ಎಂಬ ಪ್ರಕ್ರಿಯೆ ತೊಡಗಿ ಹತ್ತಿರದ ಅಂಗಾಂಶಗಳಿಂದ ನೀರು ಹೀರಲ್ಪಡುತ್ತದೆ.

ಹಾಗೆಯೇ, ಮೆದುಳಿನಿಂದಲೂ ನೀರು ಹೀರಲ್ಪಟ್ಟು ಅದು ಕ್ಷೀಣವಾಗುತ್ತಾ ಬಂದು ಅಲ್ಲಿ ರಕ್ತಸ್ರಾವವಾಗತೊಡಗುತ್ತದೆ. ವೈದ್ಯರು 5.7 ಲೀಟರ್ ( 1.5 ಗ್ರಾಾಂ) ನಷ್ಟು ಸಕ್ಕರೆಯ ನೀರನ್ನು ದೇಹಕ್ಕೆೆ ಕೊಟ್ಟು 5 ಗಂಟೆಯ ಚಿಕಿತ್ಸೆಯ ನಂತರ ಈತನ ಸೋಡಿಯಂ
ಮಟ್ಟವನ್ನು ಒಂದು ಹದಕ್ಕೆೆ ತರಲಾಯಿತು. ಆ ನಂತರ ಆತನಿಗೆ ಯಾವುದೇ ರೀತಿಯ ನರಗಳ ದೌರ್ಬಲ್ಯ ಬರಲಿಲ್ಲ ಎಂಬುದು ವಿಶೇಷ.

3. ಅನ್ನನಾಳ ತಿರುಚಿಕೊಂಡಾಗ !
87 ವರ್ಷದ ಸ್ವಿಟ್ಜರ್ಲೆಂಡ್ ದ ಮಹಿಳೆ ಪ್ರತಿ ಬಾರಿ ಆಹಾರ ನುಂಗುವಾಗ ತುಂಬಾ ನೋವಾಗಿ ಒಂದು ರೀತಿಯ ನಡುಕ ಬರಲಾರಂಭಿಸಿತು. ಕೂಡಲೇ ಆಕೆ ಆಸ್ಪತ್ರೆಗೆ ಬಂದಾಗ ವೈದ್ಯರು ವಿವರವಾಗಿ ಪರೀಕ್ಷಿಸಿದರು. ಎ್ಸೃ್ರೇ ಮತ್ತು ಸ್ಕ್ಯಾನ್
ಮಾಡಿದಾಗ ಆಕೆ ಆಹಾರ ನುಂಗಿದಾಗ ಈಕೆಯ ಅನ್ನನಾಳ (Oesophagus) ಸ್ಕ್ರೂ ತರಹ ತಿರುಚಿಕೊಳ್ಳುತ್ತಿತ್ತು. ಕೆಲವಾರು ತಿಂಗಳುಗಳು ಈಕೆಗೆ ಈ ತರಹ ತೊಂದರೆ ಕೊಟ್ಟಿದ್ದರಿಂದ ಈಕೆಯ ತೂಕ ಸುಮಾರು 5 ಕೆ ಜಿ ( 11 ಪೌಂಡ್) ಕಡಿಮೆಯಾಗಿತ್ತು.
ಈ ತರಹ ಅನ್ನನಾಳ ತನ್ನ ಮೇಲ್ಮೈಯಲ್ಲೇ ತಿರುಚಿಕೊಳ್ಳುವುದು ತುಂಬಾ ಅಪರೂಪ ಎಂದು ವೈದ್ಯರ ಅನಿಸಿಕೆ. ಆಹಾರ ಅನ್ನನಾಳ ತಲುಪಿದಾಗ ಅಲ್ಲಿ ಮಾಂಸಖಂಡಗಳು ಸೆಳೆತಕ್ಕೆ ಒಳಗಾಗಿ ಈ ತರಹ ತಿರುಚುವಿಕೆ ಆಗುತ್ತದೆ ಎನ್ನಲಾಗಿದೆ. ಆಹಾರ ಈ
ಭಾಗಕ್ಕೆ ಹೋದಾಗ ಇಲ್ಲಿನ ಮಾಂಸಖಂಡಗಳು ಬಿಗಿ ಹಿಡಿದು ನಂತರ ಸಡಿಲವಾಗಬೇಕು. ಆದರೆ ಇಲ್ಲಿನ ಮಾಂಸಖಂಡಗಳು ಬಿಗಿಹಿಡಿದ ಕ್ರಿಯೆ ಮಾಡಿದ ನಂತರದ ಸಡಿಲವಾಗುವ ಕ್ರಿಯೆ ಮಾಡುತ್ತಿರಲಿಲ್ಲ. ಇದಕ್ಕೆೆ ಸೂಕ್ತ ಚಿಕಿತ್ಸೆ ಇಲ್ಲ ಎನ್ನಲಾಗಿದೆ.
4. ಕಣ್ಣಿನಲ್ಲಿ ನಕ್ಷತ್ರ !
ಆಸ್ಟ್ರಿಯಾದ ಒಬ್ಬಾತನಿಗೆ ಕಣ್ಣಿನ ಮೇಲೆ ನೇರವಾದ ಒಂದು ಹೊಡೆತ ಬಿದ್ದು ಕಣ್ಣಿನ ಭಾಗದಲ್ಲಿ ನಕ್ಷತ್ರದ ಆಕಾರ ಉಂಟಾಯಿತು. ಹಾಗೆಯೇ ಆತನ ದೃಷ್ಟಿ ಆ ಕಣ್ಣಿನಲ್ಲಿ ತೀವ್ರವಾಗಿ ಕುಂಠಿತವಾಯಿತು. ಕಣ್ಣಿನ ವೈದ್ಯರಲ್ಲಿ ಬಂದಾಗ ಕಣ್ಣಿನ ಕಪ್ಪು ಭಾಗದಲ್ಲಿ ಇರುವ ನೈಸರ್ಗಿಕ ಮಸೂರದ ಭಾಗದಲ್ಲಿ ನಕ್ಷತ್ರ ಆಕಾರದ ಕಣ್ಣಿನ ಪೊರೆ ಉಂಟಾಗಿತ್ತು. ಈ ತರಹದ ಕಣ್ಣಿನ
ಪೊರೆ ತುಂಬಾ ಅಪರೂಪ ಎಂದು ಈತನನ್ನು ಚಿಕಿತ್ಸೆ ಮಾಡಿದ ನ್ಯೂಯಾರ್ಕ್‌ನ ಕಣ್ಣಿನ ವೈದ್ಯರ ಅಭಿಪ್ರಾಯ. ತಕ್ಷಣವೇ ಕಣ್ಣಿನ ಪೊರೆ ಶಸ್ತ್ರಕ್ರಿಯೆ  ಮಾಡಿ ತೆಗೆದು ದೃಷ್ಟಿ ಬರುವಂತೆ ಮಾಡಲಾಯಿತು.

5. ಕಣ್ಣಿನೊಳಗಡೆ ಕೂದಲು ಅಸಹ್ಯವೇ ? :
ಕಣ್ಣಿನ ಮೇಲ್ಭಾಗದ ಹುಬ್ಬು ಮತ್ತು ರೆಪ್ಪೆಗಳಲ್ಲಿ ಕೂದಲುಗಳು ಇರುವುದು ಎಲ್ಲರಿಗೂ ಗೊತ್ತು. ಇನ್ನೂ ಅಪರೂಪದಲ್ಲಿ ರೆಪ್ಪೆ ಕೂದಲು ಕಣ್ಣಿನೊಳಗೆ ಬರುವ ಸಂಭವವೂ ಇದೆ. ಆದರೆ ಈ ಉದಾಹರಣೆ ಸಂಪೂರ್ಣ ಭಿನ್ನ. ಇರಾನಿನ ಒಬ್ಬಾತನಿಗೆ ಚಿಕ್ಕಂದಿ
ನಿಂದಲೂ ಕಣ್ಣಿನ ಒಳಭಾಗದಲ್ಲಿ ಸಣ್ಣ ಗಾತ್ರದ ಗೆಡ್ಡೆ ಇತ್ತು. ಆತನಿಗೆ 19 ವರ್ಷ ಆಗುವಾಗ ಅದು 1/4 ಇಂಚಿನಷ್ಟು ( 0.64 ಸೆ. ಮೀ.) ದೊಡ್ಡದಾಗಿದ್ದು ಮಾತ್ರವಲ್ಲದೆ ಅದರಲ್ಲಿ ಕೂದಲುಗಳು ಬೆಳೆಯತೊಡಗಿದವು. ಆತನಿಗೆ ತುಂಬಾ ಅಸಹ್ಯ ಎನಿಸತೊಡ ಗಿತು. ಕಣ್ಣಿನ ವೈದ್ಯರಲ್ಲಿ ಬಂದು ಸಲಹೆ ಕೇಳಿದ. ಅವರು ಲಿಂಬಲ್ ಡರ್ಮಾಯಿಡ್ ಎಂಬ ಕ್ಯಾನ್ಸರ್ ಅಲ್ಲದ ಗೆಡ್ಡೆ ಎಂದು ಕಾಯಿಲೆ ಪತ್ತೆ ಹಚ್ಚಿದರು. ಆತನ ಇಚ್ಛೆಯಂತೆ ಅದನ್ನು ಶಸ್ತ್ರಕ್ರಿಯೆ ಮಾಡಿ ತೆಗೆಯಲಾಯಿತು. ಈ ತರಹದ ಲಿಂಬಲ್
ಡರ್ಮಾಯಿಡ್ ಗೆಡ್ಡೆ ಅಪರೂಪವೇನಲ್ಲ. ಎಲ್ಲಾ ದೇಶಗಳಲ್ಲೂ ಕಂಡು ಬರುತ್ತವೆ. ನನ್ನ ಅನುಭವದಲ್ಲೇ ನಾನು 20-25 ನೋಡಿರಬಹುದು. ಆದರೆ ಅಪರೂಪದ ಸಂಗತಿ ಎಂದರೆ ಅದರಲ್ಲಿ ಕೂದಲ ಬೆಳವಣಿಗೆ. ಆ ತರಹದ ಎಷ್ಟೋ ಸಾವಿರ
ಕೇಸ್ ಗಳಲ್ಲಿ ಒಮ್ಮೆ ಆಗುತ್ತದೆ ಎನ್ನಲಾಗಿದೆ.

6. ಹಚ್ಚೆೆ ಎಲ್ಲಿ ಹಚ್ಚಬಾರದು ? : ಜಗತ್ತಿನ ಹಲವೆಡೆ ದೇಹದ ವಿವಿದೆಡೆ ಹಚ್ಚೆ ಹೆಚ್ಚಿಸಿಕೊಳ್ಳುವ ಹವ್ಯಾಸ ಅಥವಾ ಫ್ಯಾನ್ಸಿ  ಇರುವುದು ಎಲ್ಲರಿಗೆ ಗೊತ್ತಿದೆ. ಇರಾನಿನ 21 ವರ್ಷದ ಈ ಯುವಕ ಎಲ್ಲಿ ಹಚ್ಚೆ ಹಚ್ಚಿಸಿಕೊಂಡ ಗೊತ್ತಾ ? ತನ್ನ ಗೆಳತಿಗೆ ತನ್ನ ಪ್ರೇಮ ನಿವೇದನೆ ಎಂದು ಅವಳ ಹೆಸರಿನ ಮೊದಲ ಅಕ್ಷರ ‘M’ ಅನ್ನು ತನ್ನ ಗುಪ್ತಾಾಂಗದ ಮೇಲೆ ಹಚ್ಚೆ ಬರೆಸುವ ಕಲಾವಿದನಿಂದ
ಬರೆಸಿಕೊಂಡ. ಅದಾದ 8 ದಿನಗಳ ನಂತರ ಆತನಿಗೆ ಆ ಭಾಗದಲ್ಲಿ ನೋವು ಬರಲಾರಂಭಿಸಿತು. ಅಷ್ಟು ಸಾಲದು ಎಂದು ಅದು ಒಂದು ರೀತಿಯ ಅರ್ಧ ನಿಗುರಿನ ರೀತಿ (Semi erect) ಬದಲಾಗಿ ಹಾಗೆಯೇ ಇತ್ತು. ಆತ ಹಾಗೆಯೇ 3 ತಿಂಗಳು ದಬ್ಬಿದ. ನಂತರ ಅನಿವಾರ್ಯವಾಗಿ ವೈದ್ಯರಲ್ಲಿ ಸಲಹೆಗೆ ಬಂದಾಗ ಅವರು ಆ ಭಾಗದಲ್ಲಿ ಶೇಖರಣೆಗೊಂಡ ಹೆಚ್ಚಿನ ರಕ್ತವನ್ನು ಹೊರಗೆ ತೆಗೆದು
ಚಿಕಿತ್ಸೆ ಮಾಡಿದರು. ಅದರ ನಂತರ ಆತನಿಗೆ ಸರಿಯಾಯಿತು. ಇದು 2012 ರಲ್ಲಿ ಜರ್ನಲ್ ಆಫ್ ಸೆಕ್ಷುವಲ್ ಮೆಡಿಸಿನ್ ನಲ್ಲಿ ಪ್ರಕಟವಾಗಿದೆ.

7. ಅತೀವ ಕೋಲಾ ಹುಚ್ಚು !
ಜಗತ್ತಿನಲ್ಲಿ ಎಂತೆತಹಾ ಜನರಿರುತ್ತಾರೆ ನೋಡಿ. ಈಕೆ ಕುಡಿದಳು ಕುಡಿದಳು ನೀರಿನ ಹಾಗೆ ಕುಡಿದಳು. ಏನನ್ನು ಎಂದು ಕೇಳುತ್ತೀರಾ ? ಯಾರೂ ಊಹಿಸದ ಪಾನೀಯ ಕೋಲಾವನ್ನು ಬರೀ ಕೋಲಾವನ್ನೇ ಎಷ್ಟು ದಿನ ಗೊತ್ತಾ? ಒಂದಲ್ಲ ಎರಡಲ್ಲ 15 ವರ್ಷಗಳ ಕಾಲ. ನಂಬಲು ಸಾಧ್ಯವಾಗದ ಕತೆ ಇದು. ಮೊನಾಕೋದ 31 ವರ್ಷದ ಈಕೆ ಹಾಗೆ ಕೋಲಾವನ್ನೇ ಕುಡಿದು ಒಮ್ಮೆ ಎಚ್ಚರ ತಪ್ಪಿದಾಗ ಆಸ್ಪತ್ರೆೆಗೆ ದಾಖಲಾದಳು. ಅಲ್ಲಿ ವಿವರವಾಗಿ ಪರೀಕ್ಷೆ ಮಾಡಿದಾಗ ಆಕೆಗೆ ಪೊಟ್ಯಾಸಿಯಮ್ ಮಟ್ಟ ತೀರಾ
ಕಡಿಮೆ ಇರುವುದು ಗೊತ್ತಾಯಿತು. ಹಾಗೆಯೇ  ಆಕೆಯ ಹೃದಯದ ಬಡಿತ ಅನಿಯಮಿತವಾಗಿತ್ತು. ಆದರೆ ಆಶ್ಚರ್ಯಕರವಾಗಿ ಆಕೆಗೆ ಹಾರ್ಮೋನಿನ ಸಮಸ್ಯೆ ಇರಲಿಲ್ಲ. ಆಕೆಗೆ 15 ವರ್ಷ ಆದಂದಿನಿಂದ ದಿವಸದಲ್ಲಿ 2 ಲೀಟರ್ ಕೋಲಾ ಕುಡಿಯುತ್ತಿದ್ದಳು.
ಅದು ಕರುಳಿನಿಂದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿ ಭೇದಿ ಉಂಟುಮಾಡುತ್ತದೆ. ಹಾಗೆಯೇ ಪೊಟ್ಯಾಸಿಯಮ್ ಕಡಿಮೆಯಾಗಲು ಕಾರಣವಾಗುತ್ತದೆ. ಅಲ್ಲದೇ ಕೋಲಾದಲ್ಲಿರುವ ಹೆಚ್ಚಿನ ಪ್ರಮಾಣದ ಕೆಫೀನ್ ದೇಹವು ಪೊಟ್ಯಾಸಿಯಮ್
ಹೀರಿಕೊಳ್ಳುವುದನ್ನು ಕುಂಠಿತಗೊಳಿಸುತ್ತದೆ.

ಹಾಗೆಯೇ, ದೇಹದಲ್ಲಿ ಕಡಿಮೆಯಾದಾಗ ಹೃದಯದ ಬಡಿತವು ಏರುಪೇರಾಗುತ್ತದೆ. ಆಕೆಯ ಈ ಕೆಟ್ಟ ಹವ್ಯಾಸವನ್ನು ಬಿಡಿಸಿ ಒಂದು ವಾರದ ನಂತರ ಆಕೆಯ ಹೃದಯದ ಬಡಿತ ಸರಿಯಾಯಿತು. ಪೊಟ್ಯಾಸಿಯಮ್ ಮಟ್ಟ ಸಾಮಾನ್ಯ ಮಟ್ಟಕ್ಕೆ ಬಂದಿತು. ಇದು ಗ್ರೀಸ್ ನಿಂದ ವರದಿಯಾದ ಅಪರೂಪದ ಉದಾಹರಣೆ.

8. ಲಿವರ್ ನಲ್ಲಿ ಟೂತ್ ಪ್ರಿಕ್ ! : ಕಲ್ಲಂಗಡಿ ಹಣ್ಣಿನ ಬೀಜ, ಅಂಟು ಮತ್ತಿತರ ಹಲವು ಪದಾರ್ಥಗಳನ್ನು ನುಂಗುವುದರ ಬಗ್ಗೆ ನಾವೆಲ್ಲಾ ಕೇಳಿದ್ದೇವೆ. ಆದರೆ ಊಟ ಆದ ಮೇಲೆ ಬಳಸುವ ಟೂತ್ ಪ್ರಿಕ್ ನುಂಗುವುದರ ಬಗ್ಗೆೆ ಕೇಳಿದ್ದೀರಾ ? ಬ್ರಿಟನ್ನಿನ 45 ವರ್ಷದ ಈ ಮಹಿಳೆ ನಿಧಾನವಾಗಿ ಹಲವಾರು ತಿಂಗಳುಗಳಲ್ಲಿ ತೂಕ ಕಡಿಮೆ ಆಗಿ ವೀಕ್ ಆಗ ತೊಡಗಿದಳು. ಆ ಹಂತದಲ್ಲಿ ವಿಪರೀತ ವಾಂತಿ ಮತ್ತು ಕಡಿಮೆ ಮಟ್ಟದ ರಕ್ತದೊತ್ತಡ ಎಂದು ಆಸ್ಪತ್ರೆಗೆ ದಾಖಲಾದಳು. ಆಕೆಗೆ ದೇಹದ ಯಾವುದೋ ಭಾಗದಲ್ಲಿ ತೀವ್ರ ರೀತಿಯ ಸೋಂಕು ಆಗಿರಬಹುದು ಎಂದು ವೈದ್ಯರು ಆರಂಭದಲ್ಲಿ ಭಾವಿಸಿದ್ದರು. ಆದರೆ ವಿವಿಧ ಪರೀಕ್ಷೆ, ಸ್ಕ್ಯಾನ್ ಗಳನ್ನು ಮಾಡಿದಾಗ ಲಿವರ್ ಅಥವಾ ಯಕೃತ್ತಿನಲ್ಲಿ ಒಂದು ಇಂಚು (2.5 ಸೆ. ಮೀ.) ಕೀವು ತುಂಬಿದ ಕವಾಟ ಕಂಡುಬಂದಿತು. ಅದನ್ನು ಶಸ್ತ್ರಕ್ರಿಯೆ ಮಾಡಿ ಲಿವರ್‌ನಿಂದ ತೆಗೆದಾಗ ಅದು ಟೂತ್ ಪ್ರಿಕ್ , ಬಹುಶಃ ಆಕೆ ಅಕಸ್ಮಾತ್ತಾಗಿ ನುಂಗಿದ್ದಾಳೆ ಎಂಬ ಅಂಶ ಗೊತ್ತಾಯಿತು. ಆಕೆಯ ಜೀರ್ಣಾಂಗ ವ್ಯೂೆಹದ ಎಲ್ಲಾ ಹಂತಗಳನ್ನು ದಾಟಿ ಅದು ಯಕೃತ್ತಿನಲ್ಲಿ
ಸೇರಿದ್ದು ಆಶ್ಚರ್ಯವೇ ಸರಿ. ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ 2012 ರ ಕೇಸ್ ರಿಪೋರ್ಟ್‌ಗಳಲ್ಲಿ ಇದು ದಾಖಲಾಗಿದೆ. ವೈದ್ಯರು ಹಿಂದಿನ ದಾಖಲೆಗಳನ್ನು ಪರಿಶೀಲಿಸಿದಾಗ ಈ ತರಹ ಲಿವರ್ ನಲ್ಲಿ ಟೂತ್ ಪ್ರಿಕ್ ಇರುವ 17 ಹಿಂದಿನ ಉದಾಹರಣೆಗಳು ಕಂಡುಬಂದವು.

9. ಕಣ್ಣಿನ ಕಾಯಿಲೆ ಉಂಟು ಮಾಡಬಹುದಾದ ಭ್ರಮೆ :
ಈಕೆ ಕೆಂಟುಕಿಯ 67 ವರ್ಷದ ನಿವೃತ್ತ ಶಿಕ್ಷಕಿ. ಈಕೆಗೆ ಒಮ್ಮೆೆಲೇ ಉದ್ದ ಹಲ್ಲು, ಭಿನ್ನ ರೀತಿಯ ಕಣ್ಣು, ಏರು ಪೇರಾದ ಕಿವಿ – ಎಲ್ಲ ಹೊಂದಿರುವ ವಿಚಿತ್ರ ರೀತಿಯ ಮುಖ ಕಾಣತೊಡಗಿತು. ಈಕೆ ಯಾವುದೋ ಭೂತವೋ ದೆವ್ವವೋ ಚೇಷ್ಟೆೆ ಮಾಡುತ್ತಿದೆ ಎಂದು
ಭೂತ ಬಿಡಿಸುವ ಮಾಂತ್ರಿಕನನ್ನು ಕರೆಯುವ ಸನ್ನಾಹದಲ್ಲಿದ್ದಳು. ಆದರೆ ಅಕಸ್ಮಾತ್ತಾಗಿ ಆಕೆಯ ಸಂಬಂಧಿಗಳು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಆಕೆಯನ್ನು ಪರೀಕ್ಷಿಸಿ ಆಕೆ ಏನಾದರೂ ವಿಪರೀತ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾಳಾ ಎಂದು ವಿಚಾರಿಸಿದರು. ಆಕೆ ಯಾವ Drugs ತೆಗೆದು ಕೊಳ್ಳುತ್ತಿರಲಿಲ್ಲ. ಹಾಗೆಂದು ಆಕೆಗೆ ಮಾನಸಿಕ ಕಾಯಿಲೆಯೂ ಇರಲಿಲ್ಲ. ಆದರೆ ಆಕೆಯ ಕಣ್ಣಿನ
ಅಕ್ಷಿಪಟಲದ ಮಧ್ಯ ಭಾಗ ಒಂದು ರೀತಿಯ ಕ್ಷೀಣತೆಗೆ ಒಳಗಾಗಿ ಅಪರೂಪದ ಕಾಯಿಲೆ ಚಾಲ್ಸರ್ ಬಾನೆಟ್ ಸಿಂಡ್ರೋಮ್ ಆಗಿತ್ತು. ಈ ರೀತಿಯ ಕಣ್ಣಿನ  ಕಾಯಿಲೆ ಇರುವವರಿಗೆ ಮೇಲೆ ತಿಳಿಸಿದ ವಿಚಿತ್ರ ರೀತಿಯ ಆಕಾರಗಳು, ಮತ್ತೆ ಕೆಲವರಲ್ಲಿ ಬೇರೆ ಬೇರೆ
ರೀತಿಯ ಪ್ರಾಣಿಗಳು ಕಾಣಬಹುದು ಮತ್ತು ಭಿನ್ನ ರೀತಿಯ ಆಕೃತಿಗಳು ಕಾಣಬಹುದು. ಈ ಕಾಯಿಲೆಯಲ್ಲಿ ಕಣ್ಣಿನ ಅಕ್ಷಿಪಟಲದ ಮಧ್ಯ ಭಾಗ ತನ್ನ ಬೆಳಕನ್ನು ಸ್ಪಂದಿಸುವ ಕ್ರಿಯೆ ಮಾಡುವುದಿಲ್ಲ.

ಆಗ ಆ ಮುಖ್ಯ ಭಾಗದಿಂದ ಮೆದುಳಿಗೆ ಯಾವ ನರಸಂವೇದನೆ ಆಗುತ್ತಿರುವುದಿಲ್ಲ. ಆಗ ಮೆದುಳು ತನ್ನದೇ ಬೇರೆ ರೀತಿಯ ಆಕೃತಿಯನ್ನು ಸೃಷ್ಟಿಸುತ್ತದೆ. ಇದೊಂದು ಭ್ರಮೆ ಅಥವಾ ಊಹಾಲೋಕವನ್ನು ಉಂಟು ಮಾಡುವ ಕಾಯಿಲೆ. ಮೆದುಳಿಗೆ ಕಣ್ಣಿನ ಆ ಭಾಗದಿಂದ ಮುಂದೆ ಸರಿಯಾದ ನರಸಂವೇದನೆ ಆಗದಿದ್ದಾಗ ಮೆದುಳು ಆ ಭಾಗವನ್ನು ನಿರ್ಲಕ್ಷ್ಯಿಸುತ್ತದೆ. ನಂತರ ತನ್ನಿಿಂದ  ತಾನೇ ಈ ರೀತಿಯ ಆಕೃತಿಗಳು ಕಾಣಿಸುವುದು ನಿಲ್ಲುತ್ತದೆ. ಹಾಗಾಗಿ ಇದಕ್ಕೆೆ ನಿರ್ದಿಷ್ಟ ಚಿಕಿತ್ಸೆ ಏನೂ ಬೇಡ.

10.ಬೆಕ್ಕಿನ ಮರಿ ಉಂಟು ಮಾಡಿದ ಗಾಯ ಗುಣವಾಗಲಿಲ್ಲ ಏಕೆ ? : ನೆದರ್ಲ್ಯಾಾ್ಂಸ್ ನ 17 ವರ್ಷದ ಹುಡುಗಿ ಒಂದು
ಬೆಕ್ಕಿನ ಮರಿ ಗುಂಡಿಗೆ ಬೀಳುವುದನ್ನು ತಪ್ಪಿಸಲು ಹೋಗಿ ಈಕೆಗೆ ಒಂದು ದೊಡ್ಡ ಗಾಯವಾಯಿತು. ಆ ಬೆಕ್ಕಿನ ಮರಿ ರಕ್ಷಿಸಲ್ಪಟ್ಟರೂ ವಿಪರೀತ ಕಾಯಿಲೆಯಿಂದ ನರಳಿ ಮರುದಿನ ಅದು ಸತ್ತುಹೋಯಿತು. ಆದರೆ ಆ ಹುಡುಗಿಗೆ ಆಕೆಯ ಮೊಳಕೈ ಮೇಲೆ ಒಂದು ಕೆಂಪು ಬಣ್ಣದ ಗಾಯವಾಯಿತು. ಆಕೆ ಅದು ಬೇಗ ಗುಣವಾಗದಾಗ ಹಲವಾರು ವೈದ್ಯರ ಸಲಹೆ ಪಡೆಯಬೇಕಾಯಿತು. ಮೊದಲು ಕೆಂಪಾಗಿದ್ದ ಈ ದೊಡ್ಡ ಗಾಯದ ಸುತ್ತಲೂ ನಂತರ ಹಲವು ಗುಳ್ಳೆಗಳು ಎದ್ದವು. ಕೆಂಪಾಗಿದ್ದ ಗಾಯ ಕಪ್ಪಾಯಿತು. ನಂತರ ತುಂಬಾ ನೋವಿನಿಂದ ಒಂದು ರೀತಿಯ ಉಬ್ಬಾದ ಒಂದು ಸೆಳೆ ಮೊಳಕೈಯಿಂದ ನಿಧಾನ
ಮೇಲೆ ಪಸರಿಸಿ ಆಕೆಯ ಕಂಕುಳವರೆಗೂ ಮುಂದುವರೆಯಿತು.

ಹಲವಾರು ಆಂಟಿಬಯೋಟಿಕ್‌ಗಳು ಏನೂ ಉಪಯೋಗವಾಗದಾಗ ವೈದ್ಯರು ಕೌ ಪ್ಸಾೃ್‌ ವೈರಸ್ ಸೋಂಕು ಆಗಿರಬಹುದೆಂದು ಸಂದೇಹಿಸಿ ಹಾಗೆಯೇ ಬಿಟ್ಟರು. ಈ ವೈರಸ್ ಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ತನ್ನಿಿಂದ ತಾನೇ ಗುಣವಾಯಿತು.