Thursday, 19th September 2024

ರಾಮ ರಾಷ್ಟ್ರೀಯತೆ, ಸಂಸ್ಕೃತಿಯ ಪ್ರತೀಕ

ಚರಿತ್ರೆೆ

ಜಗದೀಶ ಮಾನೆ. ಸಂಶೋಧನಾ ವಿದ್ಯಾರ್ಥಿ,
ಕರ್ನಾಟಕ ವಿಶ್ವವಿದ್ಯಾಾಲಯ, ಧಾರವಾಡ.

ಇಡೀ ಭಾರತ ದೇಶಾದ್ಯಂತ ಜನರು ಕಾದು ಕುಳಿತಿರುವುದು ರಾಮಜನ್ಮ ಭೂಮಿಯ ತೀರ್ಪಿಗಾಗಿ. ನೂರಾರು ವರ್ಷಗಳಿಂದಲೂ ವಿವಾದಕ್ಕೆೆ ಕಾರಣವಾಗಿದ್ದ ಸಮಸ್ಯೆೆಗೆ ಪರಿಹಾರ ಸಿಗುವ ಕಾಲ ಬಂದಿದೆ. ದೇಶದ ಮೂಲೆ ಮೂಲೆಗಳಲ್ಲಿಯೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎಲ್ಲಿ ನೋಡಿದರಲ್ಲಿ ರಾಮ ಜನ್ಮಭೂಮಿಯ ತೀರ್ಪಿನದ್ದೇ ಸದ್ದು. ಯಾಕೆ ಅಂದರೆ ಇದೇನು ನಿನ್ನೆೆ ಮೊನ್ನೆೆಯಿಂದ ನಡೆದ ಹೋರಾಟವಲ್ಲ, ಭಾರತದ ಸಾವಿರಾರು ವರ್ಷಗಳ ಇತಿಹಾಸವನ್ನು ನೋಡಿದಾಗ ಶತ ಶತಮಾನಗಳ ಕಾಲದಿಂದ ಇಲ್ಲಿಯವರೆಗೂ ಹೋರಾಟ ನಡೆದಿರುವಂಥ ಯಾವುದಾದರೂ ಪ್ರಕರಣವಿದ್ದರೆ ಅದು ಅಯೋಧ್ಯೆೆ ರಾಮಮಂದಿರ ಪ್ರಕರಣ. ಸುಮಾರು ಆರೇಳುನೂರು ವರ್ಷಗಳಿಂದ ನಡೆದಂಥ ಈ ಹೋರಾಟ ಅನೇಕ ಬಾರಿ ಇಡೀ ದೇಶವೇ ಬೆಚ್ಚಿಿ ಬೀಳುವಂತೆ ಮಾಡಿದೆ.

ಶತಮಾನಗಳವರೆಗೆ ನಡೆದಂಥ ಈ ಹೋರಾಟದ ಒಂದಿಷ್ಟು ಸಂಗತಿಗಳನ್ನು ನೆನಪಿಸಿಕೊಳ್ಳಲೇಬೇಕು. ಹೆಚ್ಚು ಕಡಿಮೆ ಈ ಹೋರಾಟ ಪ್ರಾಾರಂಭವಾಗಿದ್ದು 1834ರ ಸಂದರ್ಭದಲ್ಲಿ. ಆ ಸಂದರ್ಭದಲ್ಲಿ ಅಯೋಧ್ಯೆೆಯಲ್ಲಿದ್ದ ಹಳೆ ಕಟ್ಟಡವನ್ನು ಹಿಂದುಗಳು ಕೆಡವಿ ಹಾಕಿದ ಪರಿಣಾಮವಾಗಿ. ಅದರಿಂದ ಕೋಪಗೊಂಡ ಆ ಭಾಗದ ಅಂದಿನ ಡಿ.ಸಿ. ನಿಕಲ್‌ಸ್‌‌ನ್ ಹಿಂದುಗಳಿಗೆ ಸರಿಯಾದ ಪಾಠ ಕಲಿಸುವ ಉದ್ದೇಶದಿಂದ ವಿಪರೀತ ತೆರಿಗೆ ಹೇರಿದ. ಅದರಿಂದ ಬಂದ ಹಣವನ್ನು ಒಬ್ಬ ಮುಸ್ಲಿಿಂ ವ್ಯಕ್ತಿಿಗೆ ಮಸೀದಿ ಕಟ್ಟಲು ಕಾಂಟ್ರಾಾಕ್‌ಟ್‌ ಕೊಟ್ಟ. ಆದರೆ ಆ ವ್ಯಕ್ತಿಿ ಪೂರ್ಣ ಪ್ರಮಾಣದ ಮಸೀದಿ ಕಟ್ಟಲಿಲ್ಲ. ಸುಮಾರು ವರ್ಷಗಳವರೆಗೆ ಕೋಲಾಹಲಗಳು ಮುಂದುವರಿದಿದ್ದವು. 1948ರ ಸುಮಾರಿನಲ್ಲಿ ಜೈನಾಥ ಎನ್ನುವ ಸಂತರು ಆ ಜಾಗವನ್ನು ಹಿಂದುಗಳಿಗೆ ಬಿಟ್ಟುಕೊಡಬೇಕೆಂದು ಸರಕಾರಕ್ಕೆೆ ಪತ್ರ ಬರೆದು ಹೋರಾಟ ನಡೆಸಿದರು. ಆದರೆ ಸರಕಾರ ಅದಕ್ಕೆೆ ಬಗ್ಗಲಿಲ್ಲ.

ಹಿಂದುಗಳು ತೀವ್ರವಾಗಿ ಗಲಾಟೆ ಪ್ರಾಾರಂಭ ಮಾಡಿದಾಗ, ಅಂದಿನ ನ್ಯಾಾಯಾಲಯ ಗರ್ಭಗುಡಿಗೆ ಬೀಗ ಹಾಕಿಸಿತು. 1950ರಲ್ಲಿ ಒಬ್ಬ ವ್ಯಕ್ತಿಿ ರಾಮನ ಪೂಜೆ ಮಾಡಲು ಅನುಮತಿ ನೀಡಬೇಕೆಂದು ಕೋರ್ಟ್ ಮೊರೆ ಹೋದಾಗ, ಅನುಮತಿ ಕೊಟ್ಟು ಸರಕಾರದ ಮುಜರಾಯಿ ಇಲಾಖೆಯಿಂದ ಒಬ್ಬ ಅರ್ಚಕನನ್ನು ನೇಮಕ ಮಾಡಲಾಗಿತ್ತು. ಜತೆಗೆ ಅದರ 200 ಮೀಟರ್ ಒಳಗಡೆ ಯಾವೊಬ್ಬ ಮುಸ್ಲಿಿಂ ವ್ಯಕ್ತಿಿ ಬರಬಾರದೆಂಬ ತೀರ್ಪು ಕೂಡಾ ಹೊರಡಿಸಿತ್ತು. ಆದರೆ ಹಿಂದುಗಳ ಬೇಡಿಕೆ ರಾಮನಿಗೆ ಮುಕ್ತವಾಗಿ ಪೂಜೆ ನಡೆಸುವುದಾಗಿತ್ತು. 1950 ರಲ್ಲಿ ರಾಮನ ಭಜನೆ ಪ್ರಾಾರಂಭಿಸಿದರು ಇದು 1990ರ ಡಿಸೆಂಬರ್ 6ರ ವರೆಗೆ ನಡೆದಿತ್ತು. ಇದಕ್ಕೂ ಮೊದಲು 1980ರಲ್ಲಿ ಇಡೀ ದೇಶಾದ್ಯಂತ ಬೃಹತ್ ಆಂದೋಲನಗಳಾದವು.

1981ರಲ್ಲಿ ಬಾಳಾಸಾಹೇಬ ದೇವರಸರ ಸಮ್ಮುಖದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಭೆ ಜರುಗಿತ್ತು. ಈ ಸಭೆಯ ಮುಖ್ಯ ಉದ್ದೇಶವೆಂದರೆ, ಯಾವುದಾದರೊಂದು ರಾಷ್ಟ್ರೀಯ ವಿಷಯವನ್ನು ಕೈಗೆತ್ತಿಿಕೊಂಡು ದೇಶಾದ್ಯಂತ ಜಾಗೃತಗೊಳಿಸಲು ನಿರ್ಧರಿಸುವುದು. ಎಲ್ಲರೂ ಜಮ್ಮು-ಕಾಶ್ಮೀರ ವಿಷಯ ಪ್ರಸ್ತಾಾಪಿಸಿದರು. ಆದರೆ ಬಾಳಾಸಾಹೇಬ ದೇವರಸರು ಅಯೋಧ್ಯೆೆಯ ವಿಷಯ ಸೂಕ್ತವಾಬಹುದೆಂಬ ಸಲಹೆ ಕೊಟ್ಟಾಾಗ ಇದನ್ನೇ ಅಂತಿಮಗೊಳಿಸಿ ಜಾಗೃತಿ ಕಾರ್ಯ ಪ್ರಾಾರಂಭಿಸಿದರು. ಪ್ರಮುಖವಾಗಿ ಉತ್ತರಪ್ರದೇಶದಲ್ಲಿ 6, ಬಿಹಾರದಲ್ಲಿ 3 ಒಟ್ಟು 9 ರಾಮಜಾನಕಿ ರಥಯಾತ್ರೆೆ ಹೊರಡಿಸಲಾಗಿತ್ತು. ನಂತರ 1985 ಉಡುಪಿಯಲ್ಲಿ ಎರಡನೆ ಧರ್ಮಸಂಸದ್ ನಡೆದಿತ್ತು. ಆ ಸಭೆಯಲ್ಲಿ 50 ಜನ ಸಂತರು ಒಂದು ನಿರ್ಣಯವನ್ನು ಕೈಗೊಳ್ಳುತ್ತಾಾರೆ. 1986 ಮಾರ್ಚ್ ಒಳಗಡೆ ಅಯೋಧ್ಯೆೆಯ ಗರ್ಭಗುಡಿಯ ಬೀಗವನ್ನು ಸರಕಾರ ತೆಗೆಯಬೇಕು. ಇಲ್ಲದಿದ್ದರೆ ನಾವೆಲ್ಲರೂ ಆತ್ಮಾಾಹುತಿ ಮಾಡಿಕೊಳ್ಳುತ್ತೇವೆಂದು. ಆಗ ಕೋರ್ಟ್‌ನಲ್ಲಿ ಜಡ್‌ಜ್‌ ಆದೇಶದಂತೆ 1949ರಲ್ಲಿ ಹಾಕಿದ ಗರ್ಭಗುಡಿ ಬೀಗವನ್ನು 1986ರಲ್ಲಿ ತೆಗೆಯಲಾಯಿತು. ರಾಮನ ಪೂಜೆ ಮತ್ತೆೆ ಶುರುವಾಯಿತು.

ಮುಖ್ಯ ಸಂಗತಿ ಎಂದರೆ 1986ರಲ್ಲಿ ಶಾ ಬಾನು ತಲಾಕ್ ಪ್ರಕರಣದಲ್ಲಿ ರಾಜೀವ್ ಗಾಂಧಿ ಸರಕಾರ ಇದು ಮುಸ್ಲಿಿಂರ ಧಾರ್ಮಿಕ ವಿಚಾರದಲ್ಲಿ ಕೋರ್ಟ್ ಕೈಹಾಕಬಾರದೆಂದು ಹೇಳಿಕೆ ನೀಡಿದ್ದರು. ಇದರಿಂದ ಪ್ರೇರಿತಗೊಂಡಿದ್ದ ಬಿಹಾರದ ಕಿಶನ್‌ಗಂಜ್‌ನ ಎಂಪಿ ಆಗಿದ್ದ ಸೈಯದ್ ಶಾಹುದುದ್ದೀನ್ ಅಯೋಧ್ಯೆೆಯ ವಿಷಯವಾಗಿ ಹೋರಾಡಲು ‘ಬಾಬ್ರಿಿದ್ ಮಸಜಿದ್ ಆ್ಯಕ್ಷನ್ ಕಮೀಟಿ’ ಎಂಬ ಸಂಘಟನೆ ಕಟ್ಟಿಿಕೊಂಡ. ಎಲ್ಲರಿಗೂ ನೆನಪಿರಲಿ, ಅಲ್ಲಿಯವರೆಗೂ ಬಾಬರಿ ಮಸಜಿದ್ ಎಂಬ ಪದವನ್ನು ಯಾರೂ ಬಳಸಿರಲಿಲ್ಲ. ಮೊದಲು ಅಲ್ಲಿದ್ದ ಪೊಲೀಸ್ ಠಾಣೆಯ ಹೆಸರು ರಾಮ ಜನ್ಮಸ್ಥಾಾನ ಪೊಲೀಸ್ ಠಾಣೆ. ಜನ್ಮಸ್ಥಾಾನ ಮಸಜಿದ್ ಎಂಬ ಹೆಸರಿತ್ತು. ಬಾಬ್ರಿಿದ್ ಮಸಜಿದ್ ಆ್ಯಕ್ಷನ್ ಕಮೀಟಿಯ ವತಿಯಿಂದ ಜಾಗ ಬಿಟ್ಟುಕೊಡುವಂತೆ ಕೋರ್ಟಿಗೆ ಹೋದರು. ಆಗಲೇ ಹಿಂದುಗಳೂ ಸಹ ‘ರಾಮ ಜನ್ಮಭೂಮಿ ಸಮಿತಿ’ ಎಂಬ ಸಮಿತಿಯೊಂದನ್ನು ರಚಿಸಿಕೊಂಡರು. 1988ರ ಸಂದರ್ಭದಲ್ಲಿ ವಿಎಚ್‌ಪಿ ಮುಖಂಡ ಅಶೋಕ್ ಸಿಂಘಾಲ್ ಈ ರೀತಿ ಹೇಳಿಕೆ ಕೊಟ್ಟರು.

‘ನಾವು ರಾಮನ ಶಿಲಾನ್ಯಾಾಸ ಮಾಡುತ್ತೇವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಆ ಪ್ರಕಾರವಾಗಿ ಇಡೀ ದೇಶಾದ್ಯಂತ ಚಟುವಟಿಕೆಗಳು ಪ್ರಾಾರಂಭವಾದವು. ದೇಶದ ಮೂಲೆ ಮೂಲೆಗಳಿಂದ ಕಲ್ಲು, ಇಟ್ಟಿಿಗೆ ಇತ್ಯಾಾದಿ ವಸ್ತುಗಳು ಬಂದವು. ಸರಕಾರದಿಂದಲೂ ಅದಕ್ಕೆೆ ಅನುಮತಿ ದೊರಕಿತು. ನ. 9, 1989ರಂದು ಶಿಲಾನ್ಯಾಾಸ ಸಿದ್ಧವಾಯಿತು. ಅದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆದವು. ಮುಲಾಯಂ ಸಿಂಗ್‌ರ ಸರಕಾರ ಅಧಿಕಾರಕ್ಕೆೆ ಬಂದಿತ್ತು. ಕೇಂದ್ರದಲ್ಲಿ ‘ವಿಶ್ವನಾಥ ಪ್ರತಾಪ್ ಸಿಂಗ್’ ಪ್ರಧಾನಿಯಾಗಿದ್ದರು. ಅದೇ ಸಂದರ್ಭದಲ್ಲಿ ಎಲ್.ಕೆ. ಅಡ್ವಾಾಣಿಯವರು ದೇಶಾದ್ಯಂತ ರಾಮ ರಥಯಾತ್ರೆೆ ಕೈಗೊಳ್ಳಲು ನಿರ್ಧರಿಸಿದಾಗ, ಮುಲಾಯಂ ಸಿಂಗ್‌ರು ತೀವ್ರವಾಗಿ ವಿರೋಧಿಸಿ ರಥಯಾತ್ರೆೆಗೆ ನಾನು ಅವಕಾಶ ಮಾಡಿ ಕೊಡುವುದಿಲ್ಲವೆಂದು ಬಹಿರಂಗ ಹೇಳಿಕೆ ಕೂಡಾ ಕೊಟ್ಟಿಿದ್ದರು. ದೇಶಾದ್ಯಂತ ಹೋರಾಟ ತೀವ್ರಗೊಂಡವು, ರಥಯಾತ್ರೆೆಯ ಚಾಲನೆಗೆ ದೇಶದ ಮೂಲೆ ಮೂಲೆಗಳಿಂದ ಜನಸಾಗರ ಹರಿದುಬಂದಿತ್ತು. ರಥಯಾತ್ರೆೆ ಚಾಲನೆಯ ಸಂದರ್ಭದಲ್ಲಿ ಫೈರಿಂಗ್ ಆಗಿ ಸುಮಾರು 60 ಜನ ಕರಸೇವಕರು ಹತರಾದರು.

ಅಯೋಧ್ಯೆೆಯ ರಾಮಮಂದಿರದ ಜಾಗ ಒಟ್ಟು 2.7 ಎಕರೆ. ಅದರ ಸುತ್ತಮುತ್ತಲಿನ ಒಟ್ಟು 50 ಎಕರೆ ಜಾಗವನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಆ ಜಾಗವನ್ನು ಬಿಟ್ಟು ಕೊಡಬೇಕೆಂದು 1992ರಲ್ಲಿ ಹಿಂದುಗಳು ಕೋರ್ಟ್‌ಗೆ ರೀಟ್ ಹಾಕಿದರು. ಈ ವಿಚಾರದಲ್ಲಿ ಕೋರ್ಟ್ ತಡ ಮಾಡುತ್ತ ಹೋಯಿತು. ರೊಚ್ಚಿಿಗೆದ್ದ ಹಿಂದೂಗಳು ನ.30, 1992ರಂದು, ಮಸೀದಿ ಕಟ್ಟಡವನ್ನು ಒಡೆದು ಹಾಕುವ ತೀರ್ಮಾನ ಕೈಗೊಂಡರು.

1993ರಲ್ಲಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ರಾಷ್ಟ್ರಪತಿಯವರ ಪರವಾಗಿ ಪ್ರಶ್ನೆೆ ಕೇಳಿದರು. 1992ರಲ್ಲಿ ಕರ ಸೇವಕರು ಧ್ವಂಸಗೊಳಿಸಿದ ಆ ಕಟ್ಟಡ ಒಡೆಯುವುದಕ್ಕೆೆ ಮುಂಚೆ ಅಲ್ಲಿ ಹಿಂದು ದೇವಾಲಯವಿತ್ತೆೆ? ಅದಕ್ಕೆೆ ಕೋರ್ಟ್ ಸುಮ್ಮನಾಗಿ, ಒಂದು ವೇಳೆ ಏನೇ ತೀರ್ಪು ಬಂದರೆ ಅದಕ್ಕೆೆ ನಿಮ್ಮ ನಿರ್ಧಾರವೇನು? ಎಂದು ಕೋರ್ಟ್ ಪುನಃ ಕೇಳಿತು. ಒಂದು ವೇಳೆ ಹಿಂದು ದೇವಾಲಯ ಇತ್ತು ಎಂದು ಕೋರ್ಟ್ ತೀರ್ಪು ನೀಡಿದ್ದರೆ, ಆ 2.7 ಎಕರೆ ಜಾಗವನ್ನು ಹಿಂದುಗಳಿಗೆ ಬಿಟ್ಟುಕೊಡಲು ಪಿ.ವಿ. ನರಸಿಂಹ ರಾವ್ ಸರಕಾರ ರೆಡಿ ಇತ್ತು. ಆದರೆ, ಪಿ.ವಿ. ನರಸಿಂಹ ರಾವ್ ಪ್ರಶ್ನೆೆಗೆ ಉತ್ತರ ಕೊಡಬೇಕಾದರೆ, ಕೋರ್ಟ್ ಆ ಜಾಗದಲ್ಲಿ ಅರ್ಕಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಇಲಾಖೆಯಿಂದ ಅಲ್ಲಿ ಉತ್ಖನನ ನಡೆಸಬೇಕೆಂದು ತೀರ್ಮಾನಿಸಿತು. ಆ ಕಾರ್ಯದಲ್ಲಿ 60 ರಷ್ಟು ಹಿಂದುಗಳು, 40 ರಷ್ಟು ಮುಸ್ಲಿಿಂರಿರಬೇಕು. ಅದರ ಉಸ್ತುವಾರಿಯನ್ನು ಒಬ್ಬ ಹಿಂದು, ಒಬ್ಬ ಮುಸ್ಲಿಿಂ ನೋಡಿಕೊಳ್ಳಬೇಕೆಂದು ಆದೇಶಿಸಿತು. ಅನೇಕ ವರ್ಷ ಉತ್ಖನನ ಕಾರ್ಯ ನಡೆಯಿತು.

ಆ ದಾಖಲೆಯನ್ನು 2003ರಲ್ಲಿ ಕೋರ್ಟಿಗೆ ಒಪ್ಪಿಿಸಲಾಯಿತು. ಅವುಗಳನ್ನು ಪರಿಶೀಲಿಸಿ ತೀರ್ಪನ್ನು ಸ. 30, 2010 ಸಂಜೆ 4 ಗಂಟೆಗೆ ನೀಡಲು ನಿರ್ಧರಿಸಿತ್ತು. ಆ ತೀರ್ಪಿನಲ್ಲಿ ಮೂರು ಜನ ಜಡ್‌ಜ್‌‌ಗಳಿದ್ದರು. ಮಿಶ್ರಾಾ, ಖಾನ್, ಅಗರ್‌ವಲಾ. 7 ಸಾವಿರ ಪುಟಗಳ ತೀರ್ಪು ಹೊರಬಂದಿತ್ತು. ಅದರಲ್ಲಿ ಮೂರು ಭಾಗಗಳನ್ನಾಾಗಿ ವಿಂಗಡಿಸಲಾಗಿತ್ತು. ಮೊದಲನೆಯದ್ದು ‘ಯಾವ ಜಾಗವನ್ನು ಹಿಂದುಗಳು ರಾಮ ಹುಟ್ಟಿಿದ ಜಾಗವೆಂದು ಹೇಳುತ್ತಾಾರೋ, ಅದನ್ನು ನಾವು ಒಪ್ಪುುತ್ತೇವೆ. ಎರಡನೆಯದಾಗಿ 1992ರಲ್ಲಿ ಯಾವ ಕಟ್ಟಡವನ್ನು ಕರಸೇವಕರು ಒಡೆದರೋ, ಅದಕ್ಕೆೆ ಮುಂಚಿತವಾಗಿ ಅಲ್ಲಿ ಹಿಂದು ಕಟ್ಟಡವಿತ್ತು. ಇನ್ನು ಮೂರನೆಯದಾಗಿ ಖಾನ್ ಅಗರ್‌ವಾಲಾ ಹೇಳಿದ್ದು, ‘ಇದು ಹಿಂದು ಸ್ಟ್ರಕ್ಚರ್, ಮಿಶ್ರಾಾ ಹೇಳಿದ್ದು, ಹಿಂದು ಟೆಂಪಲ್, ಕೊನೆಗೆ ಈ ಮೂವರು ಜಡ್‌ಜ್‌‌ಗಳು ಹೇಳಿದ್ದು, ಅದು ಯಾವತ್ತೂ ಮಸೀದಿಯಾಗಿರಲಿಲ್ಲವೆಂದು. ಕೊನೆಗೆ ಕೋರ್ಟ್ ಆ ಜಾಗವನ್ನು ಮೂರು ಭಾಗ ಮಾಡಿ ತೀರ್ಪು ಕೊಟ್ಟಿಿತು. ಹೀಗೆ ಈ ಕೇಸ್ ಇನ್ನೂ ಮುಂದುವರಿದಿದ್ದು 2016ರಲ್ಲಿ ಸುಬ್ರಮಣ್ಯ ಸ್ವಾಾಮಿಯವರು ಈ ಕೆಲಸ ಬೇಗ ವಿಚಾರಣೆಯಾಗುವಂತೆ ಕೋರ್ಟ್‌ಗೆ ಅರ್ಜಿ ಹಾಕಿದರು.

2017 ಮಾರ್ಚ್‌ನಲ್ಲಿ ಕೋರ್ಟ್, ಇದು ಭಾವನಾತ್ಮಕ ವಿಷಯವಾಗಿರುವುದರಿಂದ ಹೊರಗಡೆ ನೀವೇ ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಂತೆ ಸೂಚಿಸಿದರು. ಇದಕ್ಕೆೆ ಸುನ್ನಿಿ ವಕ್‌ಫ್‌ ಬೋರ್ಡ್ ಮಾತುಕತೆಗೆ ನಾವು ತಯಾರಿದ್ದೇವೆಂದು ಹೇಳಿಕೆ ನೀಡಿದಾಗ, ಶಿಯಾ ಮುಸ್ಲಿಿಂರು ಬಾಬರ್ ಶಿಯಾ ಪಂಥದವನಿರುವುದರಿಂದ ಸುನ್ನಿಿಯವರು ಇದರಲ್ಲಿ ತಲೆ ಹಾಕಬಾರದೆಂದು ಗಲಾಟೆ ಮಾಡಿದರು. ಈ ರೀತಿಯಲ್ಲಿ ರಾಮ ಜನ್ಮ ಭೂಮಿಯ ಹೋರಾಟ ಶತಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ವಾಸ್ತವವಾಗಿ ರಾಮ ಒಬ್ಬ ಹಿಂದು ಎನ್ನುವ ಕಾರಣಕ್ಕಾಾಗಿ ಮುಸ್ಲಿಿಮರು ಅವನನ್ನು ಒಪ್ಪಿಿಕೊಳ್ಳಬೇಕಿಲ್ಲ. ಬಾಬರ್ ಒಬ್ಬ ಮುಸ್ಲಿಿಂ ಎಂಬ ಕಾರಣಕ್ಕೆೆ ಹಿಂದುಗಳು ವಿರೋಧಿಸಬೇಕಿಲ್ಲ. ಬದಲಾಗಿ ರಾಮ ಒಬ್ಬ ಮಹಾಪುರುಷ, ರಾಮ ರಾಷ್ಟ್ರೀಯತೆ, ಸಂಸ್ಕೃತಿಯ ಪ್ರತೀಕ, ಬಾಬರ್ ಒಬ್ಬ ಆಕ್ರಮಣಕಾರಿ ಎಂಬುದು ಎಲ್ಲರಿಗೂ ಗೊತ್ತಿಿರುವ ವಿಚಾರವಾದ್ದರಿಂದ ಇದು ಹಿಂದೂ ಮುಸ್ಲಿಿಂರ ವಾದವಲ್ಲ. ಬದಲಾಗಿ ರಾಷ್ಟ್ರೀಯತೆ ಮತ್ತು ಅರಾಷ್ಟ್ರೀಯತೆಯ ಮಧ್ಯೆೆ ನಡೆದಿರುವ ಯುದ್ಧವಾಗಿದೆ ಅಷ್ಟೆೆ.