Thursday, 19th September 2024

ಸಂಭವಾಮಿ ಯುಗೇ ಯುಗೇ…

ಆಲೋಚನೆ

ನಾಗೇಶ ಯು.ಸಿದ್ದೇಶ್ವರ

ಮೂರು ವರ್ಷಗಳ ಹಿಂದೆ ಮಾಡಿದ ಲಂಡನ್ ಪ್ರವಾಸ ನನಗೆ ಅವಿಸ್ಮರಣೀಯ!!.

ಅಲ್ಲಿರುವ ಮೇಡಂ ಟುಸ್ಸಾ ವ್ಯಾಕ್ಸ್ ಮ್ಯೂಸಿಯಮ್ನ, ನನ್ನ ಮನದಲ್ಲಿ ಇರಲು ಒಂದು ವಿಶೇಷ ಕಾರಣವಿದೆ. ಇಡೀ ಮ್ಯೂಸಿಯಂದ ವಿವಿಧ ಕೋಣೆಗಳಲ್ಲಿ ಜಗತ್ತಿನ ಅನೇಕ ಹೆಸರಾಂತ ವ್ಯಕ್ತಿಗಳು. ರಾಜಕಾರಣಿಗಳು ಚಿತ್ರನಟರು, ಆಟಗಾರರು ರಾಜಮನೆತನದವರು ಮತ್ತು ಸಾಧಕರ ಮೂರ್ತಿಗಳನ್ನು ಇಟ್ಟಿದ್ದಾರೆ. ಮೇಣ ಮತ್ತು ಇತರ ವಸ್ತುಗಳಿಂದ ತಯಾರಿಸಿದ ಸುಂದರ
ಮೂರ್ತಿಗಳು. ಅವುಗಳನ್ನು ನೋಡುವುದೇ ಒಂದು ಹಬ್ಬ!

ನೂರಾರು ದೇಶಗಳ ಪ್ರವಾಸಿಗರು ಈ ಮೂರ್ತಿಗಳ ಸೊಬಗನ್ನು ಕಣ್ತುಂಬಿಕೊಳ್ಳಲು ಒಂದು ರೂಮಿನಿಂದ ಇನ್ನೊಂದು
ರೂಮಿಗೆ ಧಾವಿಸುತ್ತ ತಮ್ಮ ನೆಚ್ಚಿನ ಸೆಲೆಬ್ರಿಟಿಗಳೊಂದಿಗೆ ಸೆಲಿ ತೆಗೆದು ಕೊಳ್ಳಲು ಹಾತೊರೆಯುತ್ತಾರೆ. ಎಲ್ಲಾ ರೂಮುಗಳಲ್ಲಿ ಮೂರ್ತಿಗಳನ್ನು ನೋಡುತ್ತಾ ನಾನು ಮುಂದೆ ಹೋಗುತ್ತಿದ್ದೆ. ಭಾರತೀಯ ಸೆಲೆಬ್ರಿಟಿಗಳನ್ನು ನೋಡಿದಾಗಲೆ ಹೆಮ್ಮೆಯಾಗು ತ್ತಿತ್ತು. ಒಂದು ರೂಮಿನ ಹತ್ತಿರ ಬಂದಾಗ ಅತಿಯಾದ ಜನಸಂದಣಿ ಇತ್ತು. ಆ ರೂಮಿನೊಳಗೆ ಹೋಗಲು ಹರಸಾಹಸ ಪಡಬೇಕಾಯಿತು.

ಅದು ನಮ್ಮ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ ಮೂರ್ತಿ ಇರುವ ರೂಮು. ಭಾರತೀಯರಿಗಿಂತ ಹೆಚ್ಚಾಗಿ ಬೇರೆ ದೇಶದ ಜನರು ಅಲ್ಲಿ ತುಂಬಿ ತುಳುಕುತ್ತಿದ್ದರು. ಮೋದಿ ಮೋದಿ ಎಂಬ ಜಯಕಾರ ಮೊಳಗಿತ್ತು. ಆ ಪರಿಸ್ಥಿತಿಯಲ್ಲಿ ನಾನು ಸೆಲಿ ತೆಗೆದು ಕೊಳ್ಳುವುದು ಬದಿಗಿರಲಿ ಹತ್ತಿರವೂ ಹೋಗಲು ಸಾಧ್ಯವಾಗಲಿಲ್ಲ !!. ನಮ್ಮ ಗೈಡ್ ಹೇಳುತ್ತಲೇ ಇದ್ದ. ನಿಮ್ಮ ದೇಶದ ಬಗ್ಗೆ ಯೂರೋಪ್ ಜನರಿಗೆ ಮೊದಲಿನಿಂದಲೂ ಸ್ವಲ್ಪ ಅಸಡ್ಡೆ ಆದರೆ ಈಗ ನಿಮ್ಮ ಪ್ರಧಾನಿ ಮೋದಿಜಿ ಬಂದ ಮೇಲೆ ಇಲ್ಲಿಯ ಜನ ಗೌರವದಿಂದ ನೋಡುತ್ತಾರೆ. ನೀವೇ ನೋಡಿದರ ಮೋದಿ ಮೂರ್ತಿಯನ್ನು ನೋಡಬಯಸುವ ಜನರ ಉತ್ಸುಕತೆಯನ್ನ !!

ಲಂಡನ್ ಮತ್ತು ಯೂರೋಪ್ ದೇಶಗಳ ವಿವಿಧ ಸುಂದರ ತಾಣಗಳನ್ನು ವೀಕ್ಷಿಸಿ ಸಂತೋಷಪಟ್ಟರೂ ಭಾರತ ದೇಶದ
ಶಕ್ತಿಯಾದ ಆ ವ್ಯಕ್ತಿಯ ಮೂರ್ತಿಯ ಹತ್ತಿರವೂ ಹೋಗಲು ಸಾಧ್ಯವಾಗಲಿಲ್ಲ ಎಂಬ ನೋವು ಕಾಡುತ್ತಲೇ ಇತ್ತು. ಆ ಕೊರಗು ಹಾಗೇ ಉಳಿಯಿತು. ನಮ್ಮೊಡನೆ ಪ್ರವಾಸದಲ್ಲಿದ್ದ ಬೆಂಗಳೂರಿನ ಮಿತ್ರ ಹೇಳಿದ ’ಸಾರ್ ನೀವು ಟೆನ್ಷನ್ ಮಾಡಿಕೊಳ್ಳಬೇಡಿ ಪ್ರಧಾನಿ ಮೋದಿಜಿ ನಮ್ಮವರು.ನಮ್ಮ ಪ್ರಧಾನಿ. ನಮ್ಮ ದೇಶದಲ್ಲಿಯೇ ಭೇಟಿಯಾಗಬಹುದಲ್ಲವೇ ?’ ಅವನ ಮಾತು ಕೇಳಿ ನಕ್ಕು ಸುಮ್ಮನಾದೆ.!

ಆ ಸಂದರ್ಭ ಕಳೆದು ಮೂರು ವರ್ಷಗಳೇ ಕಳೆದಿವೆ. ದಿನಾಲೂ ಟಿವಿಯಲ್ಲಿ ಮೋದಿಜಿಯವರನ್ನು ನೋಡುತ್ತೇನೆ. ಕಳೆದ ವಾರ ಅವರ ಹುಟ್ಟುಹಬ್ಬ (೧೭ ಸೆಪ್ಟೆಂಬರ್)ಕ್ಕಿಂತ ಎರಡು ದಿನ ಮೊದಲು ಟಿವಿ ಸುದ್ದಿ ನೋಡುವಾಗ ಪ್ರಧಾನಿಯವರ ಜನ್ಮದಿನದ ಸಂಭ್ರಮದ ವಿಷಯ ತಿಳಿಯಿತು. ನಮ್ಮಂತಹ ಸಾಮಾನ್ಯ ಪ್ರಜೆಗಳು ಅವರ ಹತ್ತಿರ ಹೋಗಿ ಶುಭಾಶಯ ಹೇಳಲು ಸಾಧ್ಯವೇ.. ಎಂದು ಕನವರಿಸಿದೆ.

ನಾನು ಶಾಲೆ ಕಾಲೇಜುಗಳಲ್ಲಿ ಓದುವಾಗ ಅಪ್ಪ ಹೇಳುತ್ತಿದ್ದ ಮಾತು ..‘ Nothing is impossible’.’.. ಎಂಬ ಮಾತು ನೆನಪಾ ಯಿತು. ಮುಂಜಾನೆ ಬೆಂಗಳೂರಿನಿಂದ ದಿಲ್ಲಿಗೆ ಹೋಗುವ ವಿಮಾನದಲ್ಲಿ ಆಸೀನನಾದೆ. ಆಕಾಶಕ್ಕೆ ಚಿಮ್ಮಿದ ವಿಮಾನ ತಾಸುಗಳಲ್ಲಿ ದಿಲ್ಲಿಯಲ್ಲಿ ಇಳಿಯಿತು. ಮತ್ತೊಂದು ತಾಸಿನಲ್ಲಿ ನಾನು ಮೋದಿಜಿಯವರ ಮನೆ ಮುಂದೆ ನಿಂತಿದ್ದೆ!!.. ಸೆಕ್ಯುರಿಟಿಯವರಿಗೆ ಗುರುತಿನ ಚೀಟಿ ಕೊಟ್ಟು ಒಳಗೆ ಹೋದೆ. ನನ್ನನ್ನು ಕಟ್ಟಡದ ಹೊರಗಿನ ವಿಶಾಲ ಅಂಗಳದಲ್ಲಿ ಒಂದು ಖುರ್ಚಿಯಲ್ಲಿ ಕುಳಿತು ಕಾಯಲು ತಿಳಿಸಲಾಯಿತು. ನನ್ನ ಮುಂದೆ ದೊಡ್ಡ ಟೇಬಲ್ ಮತ್ತು ನಾನು ಕುಳಿತ ವಿರುದ್ಧ ದಿಕ್ಕಿನಲ್ಲಿ ಮತ್ತೊಂದು ಖುರ್ಚಿ ಇತ್ತು. ಅದು, ನನ್ನ ಕಣ್ಣನ್ನೇ ನಂಬಲಾರದ ಕ್ಷಣ !!..

ಚಹಾ ಮಾಡಿ ಮಾರಿ ಬದುಕಿದ ಸಾಮಾನ್ಯ ವ್ಯಕ್ತಿ ಭವ್ಯ ಭಾರತದ ಚುಕ್ಕಾಣಿ ಹಿಡಿದಿದ್ದು ಪ್ರಜಾಪ್ರಭುತ್ವದ ಒಂದು ಅಮೋಘ ಸಾಧನೆಯೇ ಸರಿ !!. ಅಂತಹ ಜನಪ್ರಿಯ ಪ್ರಧಾನಿ ಮೋದಿಜಿಯವರು ಮುಗುಳ್ನಗುತ್ತ ಅಂಗಳದೊಳಗೆ ಹೆಜ್ಜೆ ಹಾಕಿದರು. ಹೌದು, ಅದೇ ಜುಬ್ಬ, ಅದೇ ಜಾಕೆಟ್, ನೀಟಾಗಿ ತೀಡಿದ ಬಿಳಿಯ ತಲೆಗೂದಲು, ಮತ್ತು ಗಡ್ಡ … ನಾನು ಲಂಡನ್ ನಗರದಲ್ಲಿ ನೋಡಿದ ಮೂರ್ತಿಯೇ ನಿತ್ತಂತಿತ್ತು!!, ಅಂತರವಿಷ್ಟೇ, ಈಗ ಮಾ ಧರಿಸಿದ್ದರು.

ಗಡಿಬಿಡಿಯಲ್ಲಿ ಎದ್ದು ನಿಂತು ನಮಸ್ಕಾರ ಮಾಡಿದೆ. ನಮಸ್ಕಾರ ಎನ್ನುತ್ತಾ ಬೈಟಿಯೇ ಎಂದು ಹೇಳಿ ಟೇಬಲ್ಲಿನ ಮತ್ತೊಂದು
ತುದಿಯಲ್ಲಿರುವ ಖುರ್ಚಿಯಲ್ಲಿ ಆಸೀನರಾದರು.’ಯಾವಾಗ ಬಂದಿರಿ ? ಎಲ್ಲಾ ಕ್ಷೇಮವೇ ? ಏನು ನಮ್ಮನ್ನು ಭೇಟಿಯಾಗಲು ಬಯಸಿ ಬಂದಿದ್ದೀರಲ್ಲ? ಏನು ವಿಷಯ ?……. ಅವರು ಕೇಳಿದರು. ನಾನು ಹೇಳಿದೆ…. ಮೋದಿಜಿ, ಇಂದು ತಮ್ಮ ಜನ್ಮದಿನ,
ನಿಮಗೆ ಶುಭಾಶಯ ಕೋರಲು ಬಂದಿದ್ದೇನೆ. ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ತಮಗೆ ಒಳ್ಳೆಯದಾಗಲಿ ಎಂದೆ.

ಧನ್ಯವಾದಗಳು , ಕರ್ನಾಟಕದಿಂದ ಬಂದೀದ್ದೀರಿ ಎಂದು ತಿಳಿಯಿತು ತಾವು ಯಾವ ಊರಿನಲ್ಲಿ ವಾಸಿಸುತ್ತೀರಿ ? ತಮ್ಮ ಸಮಯ ಹೇಗೆ ಕಳೆಯುತ್ತೀರಿ? ನಿಮ್ಮದೇನಾದರೂ ವಿಶೇಷ ಹವ್ಯಾಸ ಇದೆಯೇ?.ಮೋದಿಜಿ ಯವರ ಮಾತು ಹಿತವಾಗಿತ್ತು, ಆತ್ಮೀಯ ವಾಗಿತ್ತು. ನಾನೊಬ್ಬ ನಿವೃತ್ತ ಅಧಿಕಾರಿ, ವಿಶ್ರಾಂತ ಜೀವನ, ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ನಿವೃತ್ತಿಯಾಗಿದ್ದರಿಂದ ಬೇರೆ ಏನೂ ಕೆಲಸ ಮಾಡುತ್ತಿಲ್ಲ , ಓದುವುದು ಮತ್ತು ಆಗಾಗ ಬರೆಯುತ್ತೇನೆ, ಕನ್ನಡ ಹಿಂದಿ ಸಾಹಿತ್ಯದಲ್ಲಿ ಒಲವಿದೆ ಎಂದು ಉತ್ತರಿಸಿದೆ. ಪ್ರಧಾನಿ ಮೋದಿಜಿ ಮುಗುಳ್ನಗುತ್ತಾ ನೀವು ವೃತ್ತಿಯಿಂದ ನಿವೃತ್ತರಾಗಿರಬಹುದು ಪ್ರವೃತ್ತಿಯಿಂದ ನಿವೃತ್ತರಾಗಬೇಡಿ ನಿವೃತ್ತಿ ಯಾಚೆಯೂ ಜೀವನವಿದೆ.

ನಿಮ್ಮಂತಹ ಹಿರಿಯರು ಸಮಾಜಮುಖಿಯಾದ ಮತ್ತು ಸಮಗ್ರ ರಾಷ್ಟ್ರದ ಐಕ್ಯತೆ /ಭದ್ರತೆಯ ಚಿಂತನೆ ಮಾಡಬೇಕು. ನಿಮ್ಮ ಲೇಖನ ಮತ್ತು ಮಾತುಗಾರಿಕೆ ಹಾಗೂ ಸೇವಾಭಾವದಿಂದ ಜನಜಾಗೃತಿ ಮೂಡಿಸಬಹುದಲ್ಲವೇ ? ನೋಡಿ ಎಲ್ಲರೂ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ ಆದರೆ ಗುಣಮಟ್ಟದ ಸಲಹೆ ಮತ್ತು ಪರಿಹಾರದ ಬಗ್ಗೆ ಮಾತನಾಡುವವರು ವಿರಳ. ಯೋಗಾ,ಸ್ವಚ್ಛತೆ ಯಂತಹ ಕಾರ್ಯಕ್ರಮಗಳಲ್ಲಿ, ತಾವು ಹೆಚ್ಚು ,ಹೆಚ್ಚು ಜನರೊಂದಿಗೆ ಬೆರೆತು, ನಿಮಗೂ ಸಮಾಜಕ್ಕೂ ಹಿತವಾಗುವ ಕೆಲಸ ಮಾಡಬಹುದಲ್ಲ? ಮೋದಿಜಿ ಭಾವುಕರಾಗಿ ಮಾತನಾಡಿದರು. ಮೋದಿಜಿ ತಾವು ಯಾವುದೇ ಉಡುಗೊರೆ ಸ್ವೀಕರಿಸುವದಿಲ್ಲ ಎಂದು ಕೇಳಿದ್ದೇನೆ ಅದಕ್ಕಾಗಿ ನಾನೇನೂ ತರಲಿಲ್ಲ ಶುಭಾಶಯ ಕೋರುತ್ತಿದ್ದೇನೆ ಅಷ್ಟೇ…. ಅವರ ಉತ್ತರ ಹೀಗಿತ್ತು ಈ ಬಾರಿ ನನಗೆ ನಿಮ್ಮಿಂದ ಗಿಫ್ಟ್ ಬೇಕು. ಮಾಸ್ಕ್ ಧರಿಸುತ್ತೇನೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇನೆ, ಅನವಶ್ಯಕ ಓಡಾಟ, ಜನಜಂಗುಳಿ ಮದ್ಯೆ ಹೋಗುವುದನ್ನು ನಿಲ್ಲಿಸುತ್ತೇನೆ. ಎಂದು ನೀವು ಪಣ ತೊಟ್ಟು ಕಾರ್ಯರೂಪಕ್ಕೆ ತಂದರೆ ಅದೇ ನನಗೆ ನೀವು
ಕೊಡಬಹುದಾದ ಗಿ-…..!!

ನಾನು ಸಮ್ಮತಿ ಸೂಚಕವಾಗಿ ತಲೆಯಾಡಿಸಿದೆ. ಅವರು ಮುಂದುವರಿದು, ..ತಾವು ವಾಜಪೇಯಿಯವರ ಕವಿತೆ ಓದಿದ್ದೀರಾ? ….ಕೇಳಿದರು. ನಾನೆಂದೆ….. ಹೌದು, ವಾಜಪೇಯಿಯವರ ಕವಿತೆಗಳನ್ನು ಓದಿ , ಪುಳಕಿತನಗಿದ್ದೇನೆ,.. ಎಂದು ವಿವರಿಸಿ, ನೆನಪಿನಲ್ಲಿ ಇರುವ ಒಂದು ಸಾಲು ಹೇಳಿದೆ….. ಮೇರೆ ಪ್ರಭು , ಮುಝೆ ಇತನೀ ಊಂಚಾಯಿ ಕಭೀ ಮತ್ ದೇನಾ , ಗೈರೊಂಕೊ ಗಲೆ ನ ಲಗಾ ಸಕು ಮೋದಿಜಿ ,ಇದನ್ನು ಕೇಳಿ ಕೈಯ್ಯಾಡಿಸಿ ಸಂತೋಷ ವ್ಯಕ್ತಪಡಿಸಿದರು.

ನಮಗೆಲ್ಲ ಇದರಲ್ಲಿ ಒಂದು ದಿವ್ಯ ಸಂದೇಶ ಇದೆಯಲ್ಲವೇ? ಎಂದರು. ಸಮಯವೂ ಮುಗಿದಿತ್ತು. ಪ್ರಧಾನಿ ಮೋದಿಜಿ ಎದ್ದು ,ಧನ್ಯವಾದಗಳು. ಎನ್ನುತ್ತಾ ತಮ್ಮ ಮುಂದಿನ ಕರ್ತವ್ಯದ ಕಡೆ ಮುಖ ಮಾಡಿದರು. ಅವರು ಗಂಭೀರವಾಗಿ ನಡೆಯುತ್ತಿದ್ದಂತೆ, ಯುಗಪುರುಷ ನನ್ನೇ ಭೇಟಿಯಾದಷ್ಟು ಪುನೀತನಾದೆ, ಮನಸ್ಸಿನಲ್ಲಿ ಮೂಡಿಬಂದ ಭಗವದ್ಗೀತೆಯ ನುಡಿ ದನಿಯಾಗಿ ಹೊರ ಹೊಮ್ಮಿತು. ಧರ್ಮಸಂಸ್ಥಾಪನಾರ್ಥಾಯಾ ಸಂಭವಾಮಿ ಯುಗೇ ಯುಗೇ. ಪದೇ ಪದೇ ಮಾರ್ದನಿಗೊಳ್ಳುತ್ತಲೇ ಇತ್ತು. ಸಂಭವಾಮಿ ಯುಗೇ ಯುಗೇ ಭುಜವನ್ನು ತಟ್ಟುತ್ತಾ, ನನ್ನವಳು ನಿದ್ದೆ ಮಾಡಿದ್ದು ಸಾಕು, ಎದ್ದೇಳಿ, ಬೆಳಗಾಯಿತು,ನಾನು ಪಾತ್ರೆ ತೊಳೆಯುತ್ತೇನೆ,ನೀವು ಹೊಸ ಕಸಬರಿಗೆ ಬೇಕು ಎಂದಿದ್ದೀರಿ, ತಂದು ಇಟ್ಟಿದ್ದೇನೆ ಮನೆಯ ಒಳಗೆ, ಹೊರಗೆ ಕಸ ಗುಡಿಸಿ ಸ್ವಚ್ಛ ಮಾಡಿ,…. ಓಹ್ ಇದೆಲ್ಲ ಕನಸು , ಕಣ್ಣುಜ್ಜಿ ಎಚ್ಚರಾದಾಗ, ಎದುರಿಗೆ ಕಸಬರಿಗೆ, ಮೋದಿಜಿಯವರ ಸ್ವಚ್ಛ ಭಾರತವನ್ನು ನೆನಪಿ ಸಿತು.

ಟೇಬಲ್ ಮೇಲಿರುವ ಮಾ, ಗೋಡೆಯ ಮೇಲಿರುವ ಗಡಿಯಾರ..ಎಲ್ಲವೂ ನನ್ನ ವ್ಯಾಪ್ತಿಯಲ್ಲಿರುವ ಕರ್ತವ್ಯದ ಕಡೆ ಕರೆಯಿತು. ಹೌದು, ನಾನು ಪ್ರಧಾನಿ ಮೋದಿಜಿ ಯವರನ್ನು ಭೇಟಿಯಾದದ್ದು, ಮಾತನಾಡಿದ್ದು ಎಲ್ಲಾ ಕನಸಿನಲ್ಲಿ,!!! ಕನಸಿನಲ್ಲಿ ಯಾದರೂ ಆ ಯುಗಪುರುಷ ನ ಭೇಟಿಯಾಯಿತು. ಅಂತೂ ನನ್ನ ಕನಸಿನಲ್ಲಿ, ಕನಸು ನನಸಾಯಿತು. !!!