ಶ್ವೇತಪತ್ರ
shwethabc@gmail.com
ಸಾಮಾಜಿಕ ಮಾಧ್ಯಮದಲ್ಲಿ ನಾನು, ನೀವು ಯಾವುದೋ ಒಂದು ಪದವನ್ನು, ಚಿಹ್ನೆಯನ್ನು ಒತ್ತುತ್ತಾ ಹೋದರೆ, ಇಂಟರ್ನೆಟ್ ನಾವು ಯಾರು ಎಂಬುದನ್ನು ಮತ್ತು ನಮಗೇ ಗೊತ್ತಿಲ್ಲದ ನಮ್ಮನ್ನು ಲೈಕು, ಶೇರು, ಕಮೆಂಟುಗಳ ಮೂಲಕ ನಮಗೆ ತಿಳಿಸಿಬಿಡುತ್ತದೆ. ಅಂತ ರ್ಜಾಲವಾಗಲಿ, ಸಾಮಾಜಿಕ ಮಾಧ್ಯಮವಾಗಲಿ ಏಕಿಷ್ಟು ವ್ಯಸನವಾಗಬೇಕು ಎಂಬುದು ಇಲ್ಲಿನ ಪ್ರಶ್ನೆ.
ಹೌದೋ, ಅಲ್ಲವೋ? ಬೇಕೋ, ಬೇಡವೋ? ಯಂತ್ರಗಳಿಗೆ ನಾವು ಅಂಟಿಕೊಂಡಿರುವುದಂತೂ ಅಷ್ಟೇ ಸತ್ಯ. ಯಾವುದಕ್ಕಾದರೂ ಅಂಟಿಕೊಳ್ಳುವ ಚಟವಿದೆಯಲ್ಲ ಅದು ನಮ್ಮ ಹೆಚ್ಚಿನ ಗಮನವನ್ನು ಬೇಡುತ್ತದೆ. ಸಾಮಾಜಿಕ ಮಾಧ್ಯಮಗಳಿಗೆ ನಮ್ಮ ಅಡಿಕ್ಷನ್ ಇದೆಯಲ್ಲ ಅದನ್ನು ನಾವೆಲ್ಲ ವ್ಯಸನವನ್ನಾಗಿ ಮಾಡಿಕೊಂಡಿರುವುದಂತೂ ಎಲ್ಲರೂ ಒಪ್ಪುವಂಥ ವಿಷಯವೇ ಸರಿ.
ಸಾಮಾಜಿಕ ಮಾಧ್ಯಮಗಳಿಗೆ ಹೀಗೆ ವ್ಯಸನರಾಗುವುದಿದೆಯಲ್ಲ ಇದನ್ನು ಜೂಜಾಟಕ್ಕೆ ಹೋಲಿಸಬಹುದು. ಎಲ್ಲಾ ಜೂಜುಕೋರರು ಯಾವುದಾದ ರೊಂದು ಅಮೂರ್ತ ಚಿಹ್ನೆಯನ್ನು ನಂಬುತ್ತಾರೆ. ಇಸ್ಪೀಟಿನ ಎಲೆಯ ಮೇಲಿನ ಯಾವುದಾದರೂ ಚುಕ್ಕಿಯೋ, ನಂಬರೋ, ಬಣ್ಣವೋ ಹೀಗೆ ಯಾವುದೋ ಒಂದು ಚಿಹ್ನೆಯ ಆಧಾರದಲ್ಲಿ ಇಸ್ಪೀಟಿನ ಎಲೆ ಯಾವುದೆಂದು ಸರಿಯಾಗಿ ಗುರುತಿಸಲು ಯತ್ನಿಸುತ್ತಾರೆ. ಉತ್ತರವನ್ನು ಅತ್ಯಂತ ವೇಗವಾಗಿಯೂ, ಕ್ರೂರವಾಗಿಯೂ ಇರಬಹುದು.
ಪ್ರಯತ್ನದಲ್ಲಿ ವಿಫಲನಾದರೆ ಬರಿಗೈಯಲ್ಲಿ ಮನೆಗೆ ಹೋಗಬೇಕು, ಗೆದ್ದರೆ ಎಲ್ಲವನ್ನು ಬಾಚಿಕೊಂಡು ಮುನ್ನಡೆಯ ಬಹುದು. ಸಾಮಾಜಿಕ ಮಾಧ್ಯಮದಲ್ಲಿ ನಾನು ನೀವು ಯಾವುದೋ ಒಂದು ಪದವನ್ನು, ಚಿಹ್ನೆಯನ್ನು ಒತ್ತುತ್ತಾ ಹೋದರೆ, ಇಂಟರ್ನೆಟ್ ನಾವು ಯಾರು ಎಂಬುದನ್ನು ಮತ್ತು ನಮಗೇ ಗೊತ್ತಿಲ್ಲದ ನಮ್ಮನ್ನು ಲೈಕು, ಶೇರು, ಕಮೆಂಟುಗಳ ಮೂಲಕ ನಮಗೆ ತಿಳಿಸಿಬಿಡುತ್ತದೆ. ಇಲ್ಲಿ ಮುಖ್ಯವಾಗುವ ಆಸಕ್ತಿದಾಯಕ ಪ್ರಶ್ನೆ ಎಂದರೆ ಅಂತರ್ಜಾಲವಾಗಲಿ, ಸಾಮಾಜಿಕ ಮಾಧ್ಯಮ ವಾಗಲಿ ಏಕಿಷ್ಟು ವ್ಯಸನವಾಗಬೇಕು ಎಂಬುದು. ಸಾಮಾಜಿಕ ಮಾಧ್ಯಮಗಳ ವೇಗವನ್ನು ನೋಡುತ್ತಿದ್ದರೆ ಅವು ಜನರ ಗಮನವನ್ನು ಸೆಳೆಯಲು ಸೆಣೆಸುತ್ತಿರುವಂತಿದೆ.
ಜನರು ಸಾಮಾಜಿಕ ಮಾಧ್ಯಮಗಳಿಂದ ದೂರ ವಿರಲು ಪ್ರಯತ್ನಿಸಿ ಸೋಲುತ್ತಿರುವುದೇಕೆ ಎಂಬ ವಿಷಯದ ಕುರಿತು ೨೦೧೫ರಲ್ಲಿ ಸಮೀಕ್ಷೆ ನಡೆಸಲಾ ಯಿತು. ಇದರನ್ವಯ ೯೯ ದಿನಗಳವರೆಗೂ ಫೇಸ್‌ಬುಕ್‌ನಿಂದ ದೂರ ಉಳಿಯುತ್ತೇನೆ ಎಂದು ಶಪಥ ಮಾಡಿದವರು ಕೆಲವು ದಿನಗಳಷ್ಟಾದರೂ ಆ ವ್ಯಸನದಿಂದ ದೂರ ಉಳಿಯಲಾಗಲಿಲ್ಲ. ಫೇಸ್‌ಬುಕ್‌ನಿಂದ ಹಾಗೆ ದೂರ ಉಳಿದವರು ಬೇರೆ ಇನ್ಯಾವುದೋ ಸಾಮಾಜಿಕ ಮಾಧ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇನ್ನು ಸಾಮಾಜಿಕ ಮಾಧ್ಯಮಗಳಿಗೆ ವ್ಯಸನರಾಗದವರು ತಮ್ಮ ಪಾಡಿಗೆ ತಾವು ಖುಷಿಯ ಮನಸ್ಸಿನ ಚೌಕಟ್ಟಿನಲ್ಲಿ ಇದ್ದುಬಿಟ್ಟರು.
ಕೆಲವೊಂದು ಸಮೀಕ್ಷೆಗಳನ್ನು, ಸಂಶೋಧನೆಗಳ ವರದಿ ಗಳನ್ನು ಆಧರಿಸಿ ನೋಡಿದರೆ ಕೆಲವರಿಗೆ ಸಾಮಾಜಿಕ ಮಾಧ್ಯಮಗಳಿಗೆ ಅಂಟಿಕೊಳ್ಳುವುದು, ಖಿನ್ನತೆಯ ಮನಸ್ಸಿಗೆ ತಮಗೆ ತಾವು ಕೊಟ್ಟುಕೊಂಡ ಚಿಕಿತ್ಸೆಯಂತಿರುತ್ತದೆ ಹಾಗೂ ಬೇರೆಯವರ ದೃಷ್ಟಿಯಲ್ಲಿ ತಾವು ಅದ್ಭುತವಾಗಿಯೂ, ಖುಷಿಯಾಗಿಯೂ ಇರುವುದಾಗಿ ತೋರಿಸಿಕೊಳ್ಳುವ ಉಮೇದಾಗಿರುತ್ತದೆ. ಇಲ್ಲಿ ಸಾಮಾಜಿಕ ಮಾಧ್ಯಮದ ವ್ಯಸನ ಯಾಕಾಗುತ್ತದೆಂದರೆ, ಕೆಲವೊಮ್ಮೆ
ನಾವು ಹಾಕುವ ಬರಹಗಳು, ಫೋಟೋಗಳು, ಮತ್ತಿನ್ನೇನೋ ಸಂಗತಿಗಳಿಗೆ ನಾವು ಅಲ್ಲಿ ಸಮಾಜದ ಅನುಮತಿಯನ್ನು ಅಪೇಕ್ಷಿಸುತ್ತಿರುತ್ತೇವೆ- ಪ್ರತಿಕ್ರಿಯೆಯ ರೂಪದಲ್ಲಿ, ಲೈಕ್, ಶೇರ್ ರೂಪದಲ್ಲಿ. ಟ್ರಿಸ್ಟನ್ ಹ್ಯಾರಿಸ್ ಗೂಗಲ್‌ನ ಮಾಜಿ ವಿನ್ಯಾಸಕಾರ.
ನಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನನ್ನು ಜೇಬಿನಲ್ಲಿರುವ ತೂತಾಗಿರುವ ಯಂತ್ರ ಎಂದು ಆತ ಬಣ್ಣಿಸುತ್ತಾನೆ. ಸ್ಮಾರ್ಟ್ ಫೋನಿನ ಅನೇಕ ಆಮಿಷಗಳಿಗೆ ನಾವೆಲ್ಲ ಬಂದಿಯಾಗಿದ್ದೇವೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿರುವ ವಿಷಯವೇನು ಗೊತ್ತೇ? ಸ್ಮಾರ್ಟ್ -ನಿನ ಈ ಆಮಿಷಗಳು ಕ್ಷಣಕ್ಷಣಕ್ಕೂ
ಬದಲಾಗುವುದರಿಂದ ಅವು ಎಂದಿಗೂ ನಮ್ಮೊಳಗೆ ಅಭದ್ರತೆಯನ್ನು ಸೃಷ್ಟಿಸುತ್ತಲೇ ಇರುತ್ತವೆ. ಪ್ರತಿ ಬಾರಿಯೂ ಅದರಿಂದ ನಮಗೇನು ಸಿಗುತ್ತದೆ ಎಂಬ
ಅಸ್ಪಷ್ಟತೆಯಲ್ಲೇ ನಾವು ಕಳೆದುಹೋಗಿರುತ್ತೇವೆ. ಸಾಮಾಜಿಕ ಮಾಧ್ಯಮದಲ್ಲಿ ಲೈಕ್ ಬಟನ್ ಎಂಬುದೊಂದು ಸೃಷ್ಟಿಯಾದ ದಿನದಿಂದಲೂ ಮನುಷ್ಯ ಮತ್ತಷ್ಟು ವಿಚಲಿತನಾದ. ತನ್ನ ಯಾವುದೋ ಒಂದು ಪೋಸ್ಟ್ ಹಾಕಿ ಎಷ್ಟು ಲೈಕ್ಸ್, ವೀವ್ಸ್ ಸಿಕ್ಕಿದೆ ಎಂಬುದನ್ನು ಪದೇಪದೆ ಇಣುಕುತ್ತಲೇ ಕೂತ- ಜೂಜುಕೋರನಂತೆ. ಹೀಗೆನ್ನುತ್ತಾರೆ ಮಾನವ ಶಾಸಜ್ಞೆ ನತಾಶಾ ದೌಶಲ್.
ಸಾಮಾಜಿಕ ಮಾಧ್ಯಮದ ಕ್ಲೀಷೆ ಏನು ಗೊತ್ತಾ? ಅದರಲ್ಲಿ ಹಾಕುವ ನಮ್ಮ ಪೋಸ್ಟು, ಫೋಟೋ ವಗೈರಾ ವಗೈರಾಗಳಿಗೆ ಸಮಾಜದ ಅನುಮತಿಯನ್ನು ಸರಿಯಾದ ಕ್ರಮದಲ್ಲಿ ಸಿಗಬೇಕೆಂದು ಹವಣಿಸುವುದು. ನಮ್ಮ ಪ್ರತಿ ಪೋಸ್ಟು ನಮ್ಮ ಪ್ರಕಾರ ‘ಗಾಡ್ ಆಫ್ ಎವ್ರಿಥಿಂಗ್’. ನಾವು ಹಾಕುವ ಒಂದು ಸ್ಟೇಟಸ್ ಅದೊಂದು ತೀರ್ಪು. ಯಂತ್ರದ ಮೂಲಕ ನಮ್ಮ ಬಗ್ಗೆ ನಾವು ಹೇಳಹೊರಡುವುದು. ಸಾಮಾಜಿಕ ಮಾಧ್ಯಮದಲ್ಲಿ ಏನೇ ಮಾಡಲು ಪ್ರಯತ್ನಿಸಿದರೂ ಅಲ್ಲೊಂದು ತೀರ್ಪಿಗಾಗಿಯೇ ನಾವು ಹಾತೊರೆಯುತ್ತಲಿರುತ್ತೇವೆ. ಇಲ್ಲಿ ಎಲ್ಲರೂ ಬಾಜಿ ಕಟ್ಟುತ್ತೇವೆಯೇ ಹೊರತು ಯಾರೂ ಕಳೆದುಕೊಳ್ಳಲು
ತಯಾರಿರುವುದಿಲ್ಲ.
ಅಮೆರಿಕದ ಲಾಮನ್ ಪ್ಯಾಟ್ರಿಕ್ ಗೆರಾಟ್ ಹೀಗೆನ್ನುತ್ತಾನೆ- ‘ಸಾಮಾಜಿಕ ಮಾಧ್ಯಮದ ವ್ಯಸನವಿದೆಯಲ್ಲ ಅದು ನಮ್ಮನ್ನು ಹತಾಶರನ್ನಾಗಿ ಮಾಡಿ, ನಮ್ಮೊಳಗೆ ಟೊಳ್ಳಾದ ಅನುಪಯುಕ್ತ ಒತ್ತಡವನ್ನು ಉಂಟುಮಾಡುತ್ತದೆ’ ಎಂದು. ಈ ಸಾಮಾಜಿಕ ಮಾಧ್ಯಮದ ವ್ಯಸನಕ್ಕೂ ಖಿನ್ನತೆಗೂ ನೇರ ಸಂಬಂಧವಿದೆ ಎಂದು ಪದೇಪದೆ ಮನೋವಿಜ್ಞಾನದ ಸಂಶೋಧನೆಗಳು ಪ್ರತಿಪಾದಿಸುತ್ತಲೇ ಇವೆ. ಅಷ್ಟೇ ಅಲ್ಲದೆ ಮಾನಸಿಕ ಆರೋಗ್ಯದ ಏರುಪೇರಿಗೆ,
ಹದಿಹರೆಯದವರಲ್ಲಿ ಆತ್ಮಹತ್ಯೆ ಆಲೋಚನೆಗಳಿಗೂ ಸಾಮಾಜಿಕ ಮಾಧ್ಯಮ ಋಣಾತ್ಮಕವಾಗಿ ಕಾರಣವಾಗುತ್ತಿದೆ.
ಸಾಮಾಜಿಕ ಮಾಧ್ಯಮದ ವ್ಯಸನವನ್ನು ನಾವು ಜೇಡರಬಲೆಗೆ ಹೋಲಿಸಬಹುದು. ಜೇಡ ತನ್ನ ಸುತ್ತಲೂ ಬಲೆ ನೇಯುತ್ತಾ ಅದರ ಒಳಗೆ ತಾನೇ ಸಿಲುಕಿ ಹೊರ ಬರಲಾರದೆ ಒದ್ದಾಡುವಂತೆ ನಮ್ಮ ಪರಿಸ್ಥಿತಿ. ನಮ್ಮ ಬದುಕು ಹೆಚ್ಚು ಅಸ್ತವ್ಯಸ್ತವಾಗತೊಡಗಿದೆ ಎಂದರೆ ಸಾಮಾಜಿಕ ಮಾಧ್ಯಮ ಚೆನ್ನಾಗಿ ತನ್ನ ಕಾರ್ಯಚಟುವಟಿಕೆಯನ್ನು ಕಾರ್ಯಗತಗೊಳಿಸಿದೆ ಎಂದರ್ಥ. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾರಾನ್ ಲ್ಯಾನಿಯರ್ ಸಾಮಾಜಿಕ
ಮಾಧ್ಯಮವನ್ನು ಕ್ಯಾರೆಟ್ ಹಾಗೂ ನಶೆಗೆ ಹೋಲಿಸುತ್ತಾನೆ. ಸಾಮಾಜಿಕ ಮಾಧ್ಯಮವು ಸಕಾರಾತ್ಮಕ ಹಾಗೂ ಋಣಾತ್ಮಕ ಎರಡೂ ಅಂಶಗಳನ್ನು ಹೊಂದಿದೆ. ನಾವು ಯಾವುದಕ್ಕೆ ಹೆಚ್ಚು ಆಕರ್ಷಿತರಾಗುತ್ತೇವೋ ಅದು ನಮಗೆ ಚಟವಾಗುತ್ತಾ ಹೋಗುತ್ತದೆ.
ಸ್ಮಾರ್ಟ್ ಫೋನ್‌ಗಳಲ್ಲಿ ಆಪ್‌ಗಳನ್ನು ತಯಾರು ಮಾಡುವವರು ಕೃತಕ ಬುದ್ಧಿಮತ್ತೆಯನ್ನು ಬಳಸಿ ಆ ಮೂಲಕ ನಮ್ಮ ಮನಸ್ಸನ್ನು ನಿಯಂ
ತ್ರಿಸುತ್ತಿರುತ್ತಾರೆ. ಉದಾಹರಣೆಗೆ ಗೂಗಲ್ ಸರ್ಚ್‌ನಲ್ಲಿ ನೀವು ಯಾವುದಾದರೂ ವಿಷಯದ ಬಗ್ಗೆ ಟೈಪಿಸಿ ಮತ್ತೆ ನೀವು ಫೇಸ್‌ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಹೀಗೆ ಯಾವುದೇ ಸಾಮಾಜಿಕ ಮಾಧ್ಯಮಗಳ ಖಾತೆಗೆ ಹೋದಾಗಲೂ ನೀವು ಗೂಗಲ್‌ನಲ್ಲಿ ತಡಕಾಡಿದ ವಿಷಯಗಳಿಗೆ ಸಂಬಂಧಪಟ್ಟ ವಿಚಾರಗಳೇ ಇಣುಕುತ್ತಿರುತ್ತವೆ. ಇದನ್ನು ಸಾಮಾಜಿಕ ಮಾಧ್ಯಮದ ವಿಷಕಾರಕತೆ ಎನ್ನಲು ಅಡ್ಡಿಯಿಲ್ಲ.
ನಮ್ಮಲ್ಲಿ ಹೇಳುತ್ತಾರಲ್ಲ ‘ಅತಿಯಾದರೆ ಅಮೃ ತವೂ ವಿಷವೇ’ ಎಂಬಂತೆ. ಸಾಮಾಜಿಕ ಮಾಧ್ಯಮಗಳ ವ್ಯಸನ ಹೀಗೇ ಮುಂದುವರಿದರೆ ಏನಾಗಬಹುದು?
ಉತ್ತರ ಬಹು ಸ್ಪಷ್ಟ. ನಮ್ಮ ಮನೋಸಾಮಾಜಿಕ ಬದುಕಲ್ಲಿ ಖಂಡಿತವಾಗಿಯೂ ವ್ಯತ್ಯಾಸಗಳು ಉಂಟಾಗತೊಡಗುತ್ತವೆ (ಆಗಲೇ ಉಂಟಾಗಿಬಿಟ್ಟಿದೆ). ಒಮ್ಮೆ ನಾವು ಅಂತ ರ್ಜಾಲದ ಒಳಹೊಕ್ಕರೆ ಅಲ್ಲಿಂದ ನೇರವಾಗೇ ಅಂತ ರ್ಜಾಲದ ವಿನ್ಯಾಸಕಾರರು ನಮ್ಮನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ನಾವು ಎಷ್ಟು ಹೊತ್ತು ಇರಬೇಕೆಂಬುದನ್ನು ಅವರೇ ನಿಯಂತ್ರಿಸತೊಡಗುತ್ತಾರೆ. ಇದು ಆಗುವುದು ನಮ್ಮ ಮನಸ್ಸನ್ನು ನಿಯಂತ್ರಿಸಲು ನಾವು ಸೋತಾಗ.
ನ್ಯೂಯಾರ್ಕ್ ಟೈಮ್ಸ್‌ನ ರಿಪೋರ್ಟರ್ ಮ್ಯಾಕ್ಸ್ ಫಿಶರ್ The Chaos Machine ಎಂಬ ತಮ್ಮ ಪುಸ್ತಕದಲ್ಲಿ ಹೇಳುವಂತೆ ಮಿದುಳಿನಲ್ಲಿ ಉತ್ಪತ್ತಿಯಾಗುವ ನರಸಾಗಾ ಣಿಕೆಯಾದ (Neurotransmitters) ಡೋಪಮೈನ್ ನಾವು ತೋರುವ ವರ್ತನೆಯ ಜತೆ ಸದಾ ಸಕಾರಾತ್ಮಕವಾದ ಯೋಜನೆಯಲ್ಲಿ ಇರುತ್ತದೆ ಮತ್ತು ಆ ವರ್ತನೆಯನ್ನು ಪುನರಾವರ್ತಿಸಲು ಪ್ರೇರೇಪಿಸುತ್ತದೆ.
ಈ ಡೋಪಮೈನ್ ವ್ಯವಸ್ಥೆಯು ಯಾವುದಾದರೂ ಪ್ರತಿಫಲಾಪೇಕ್ಷೆಗೆ ಒಳಗಾದರೆ ಅದು ನಮ್ಮೊಳಗೆ ವಿನಾಶಕಾರಿ ವರ್ತನೆಯು ಉಲ್ಬಣಗೊಳ್ಳುವಂತೆ ಮಾಡುತ್ತಾ ಸಾಗುತ್ತದೆ- ಮತ್ತೊಮ್ಮೆ ಬಾಜಿ ಕಟ್ಟುವಂತೆ, ಇನ್ನೊಂದು ಪೆಗ್ ಹಾಕುವಂತೆ ಅಥವಾ ತಾಸುಗಟ್ಟಲೆ ಮೊಬೈಲ್ ಹಿಡಿದು ಕೂರುವಂತೆ. ನನ್ನದೇ ಪಿಎಚ್‌ಡಿ ಸಂಶೋಧನೆ ಇದೇ ಅಂತರ್ಜಾಲಕ್ಕೆ ಸಂಬಂಧ ಪಟ್ಟದಾಗಿದೆ. ಹದಿಹರೆಯದವರಲ್ಲಿ ಈ ಅಂತರ್ಜಾಲದ ಪ್ರಭಾವವು, ನಿದ್ರೆ ಹಾಗೂ ಓದಿನ ಏರುಪೇರಿಗೂ ಬಹಳ ಪ್ರಮುಖವಾದ ಕಾರಣವಾಗಿದೆ. ಇಲ್ಲಿ ಹದಿಹರೆಯದವರ ಮೇಲೆ ಅಂತರ್ಜಾಲದ ಋಣಾತ್ಮಕ ಪ್ರಭಾವ ಹೆಚ್ಚಾಗಿರು
ವುದು ಕಂಡುಬಂದಿದೆ. ಆಗಷ್ಟೇ ಬದಲಾವಣೆಗೆ ಒಗ್ಗಿ ಕೊಳ್ಳುತ್ತಿರುವ ಮನಸ್ಸಿನ ಮೇಲೆ ಅಂತರ್ಜಾಲ ಪ್ರಭಾವ ಬೀರಿ ಹದಿಹರೆಯದ ಮನಸ್ಸುಗಳನ್ನು ಘಾಸಿಗೊಳಿಸುತ್ತಿದೆ. ಮನಸ್ಸುಗಳಿಗೆ, ಸಮಾಜಕ್ಕೆ ಅಂಟಿಕೊಳ್ಳುವುದು ಸಾಮುದಾಯಿಕವಾಗಿ ವ್ಯಸನವಾದರಷ್ಟೇ ನಮಗೆ ಯಂತ್ರಗಳಿಂದ ಮುಕ್ತಿ.