Sunday, 10th November 2024

ಸುಶಾಂತ ಪ್ರಕರಣ ; ಅರ್ನಾಬ್ ವಿರೋಧಿಗಳು ತಿಳಿಯಬೇಕಾದದ್ದೇನು ?

ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್

ಕಳೆದ ಎರಡು ತಿಂಗಳಿನಿಂದ ಹಿಂದಿ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಪ್ರಧಾನವಾಗಿ ವರದಿ ಮಾಡಿ, ಅದರ ಬಗ್ಗೆೆಯೇ ಚರ್ಚೆ ಯನ್ನು ಮೀಸಲಾಗಿಟ್ಟಿರುವ ‘ರಿಪಬ್ಲಿಕ್ ಟಿವಿ’ ಚಾನೆಲ್‌ನ ಅರ್ನಾಬ್ ಗೋಸ್ವಾಮಿ ಅವರನ್ನು ಕೆಲವರು ಟೀಕಿಸುತ್ತಿದ್ದಾರೆ.

ಟಿವಿ ಸ್ಟುಡಿಯೋವನ್ನು ಕೋರ್ಟ್ ಹಾಲ್ ಆಗಿ ಪರಿವರ್ತಿಸಿ, ಇಡೀ ಘಟನೆ ಬಗ್ಗೆೆ ಗೋಸ್ವಾಮಿ ನ್ಯಾಯಾಧೀಶರ ರೀತಿ ತೀರ್ಪು ನೀಡುತ್ತಿದ್ದಾರೆ, ಅವರು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ ಮತ್ತು ತನಿಖಾ ಸಂಸ್ಥೆ ಮೇಲೆ ಪರೋಕ್ಷ ಪ್ರಭಾವ ಬೀರು ತ್ತಿದ್ದಾರೆ ಎಂದೆಲ್ಲ ಅವರ ವಿರುದ್ಧ ಅರಚುತ್ತಿದ್ದಾರೆ. ಅರ್ನಾಬ್ ಗೋಸ್ವಾಮಿ ಭಾರತದಲ್ಲಿ ಟಿವಿ ಪತ್ರಿಕೋದ್ಯಮವನ್ನು ಸತ್ಯಾನಾಶ ಮಾಡಿದರು, ತಮ್ಮ ಚಾನೆಲ್ಲನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿ ದ್ದಾರೆ ಎಂದೂ ನಿಂದಿಸುತ್ತಿದ್ದಾರೆ.

ರಿಪಬ್ಲಿಕ್ ಚಾನೆಲ್ ಆನ್ ಮಾಡಿದರೆ ಸಾಕು, ಸುಶಾಂತ ಸಾವಿನ ಪ್ರಕರಣ ಅಪ್ಪಳಿಸುತ್ತದೆ, ಗೋಸ್ವಾಮಿಗೆ ಇದನ್ನು ಬಿಟ್ಟರೆ
ಬೇರೆ ಯಾವ ವಿಷಯವೂ ಮುಖ್ಯವೆಂದು ಅನಿಸುತ್ತಿಲ್ಲವಾ ಎಂದೂ ಅನೇಕರು ಪ್ರಶ್ನಿಸುತ್ತಿದ್ದಾರೆ. ಟಿವಿ ಮಾಧ್ಯಮದ ಘನತೆ
ಇದಕ್ಕಿಿಂತ ಕಡಿಮೆಯಾಗಲು ಸಾಧ್ಯವೇ ಇಲ್ಲ, ಒಂದು ಸಾವಿನ ಪ್ರಕರಣವನ್ನು ರಾಷ್ಟ್ರೀಯ ನಾಟಕದ ರೀತಿಯಲ್ಲಿ ಬಿಂಬಿಸಿ,
ಒಂದು ಸಾಮಾನ್ಯ ಪ್ರಸಂಗವನ್ನು ರಾಷ್ಟ್ರಮಟ್ಟದ ಸುದ್ದಿಯಾಗಿ ವೈಭವೀಕರಿಸಿ ವರದಿ ಮಾಡುತ್ತಿರುವ ರೀತಿ ಅಸಹ್ಯದ
ಪರಮಾವಧಿ ಎಂದೂ ಅನೇಕರು ಜರೆಯುತ್ತಿದ್ದಾರೆ. ಇವೆಲ್ಲಾ ಟಿಆರ್‌ಪಿಗಾಗಿ ನಡೆಸುತ್ತಿರುವ ಪ್ರಹಸನ, ಯಾವ ಸುದ್ದಿಗೆ ಎಷ್ಟು
ಮಹತ್ವ ನೀಡಬೇಕು ಎಂಬುದು ಗೊತ್ತಾಗದವರ ಕೈಯಲ್ಲಿ ಟಿವಿ ಮಾಧ್ಯಮ ಸಿಕ್ಕರೆ ಏನಾಗುತ್ತದೆ ಎಂಬುದಕ್ಕೆ ಇದು ತಾಜಾ
ನಿದರ್ಶನ ಎಂದೆಲ್ಲಾ ಅವರನ್ನು ಹಿಂಡುತ್ತಿದ್ದಾರೆ.

ಕರೋನಾ ವೈರಸ್ಸಿನಿಂದಾಗಿ ಇಡೀ ಜಗತ್ತು ನಲುಗಿದೆ; ನಮ್ಮ ದೇಶ ಹಿಂದೆಂದೂ ಕಾಣದ ಆರ್ಥಿಕ ಹಿನ್ನೆೆಡೆಯನ್ನು ಅನುಭವಿಸು ತ್ತಿದೆ; ಜಿಡಿಪಿ ರಸಾತಳ ಕಂಡಿದೆ; ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ; ಬಹುತೇಕ ಎಲ್ಲಾ ಕೈಗಾರಿಕೆಗಳು ನೆಲ ಕಚ್ಚಿವೆ; ಹೋಟೆಲ್, ಪ್ರವಾಸೋದ್ಯಮ, ವಿಮಾನಯಾನ, ಶಿಕ್ಷಣ, ರಿಯಲ್ ಎಸ್ಟೇಟ್… ಹೀಗೆ ಎಲ್ಲಾ ರಂಗಗಳೂ ಸದ್ಯಕ್ಕೆ ಚೇತರಿಸಿಕೊಳ್ಳಲಾಗದಷ್ಟು ನಷ್ಟ ಅನುಭವಿಸಿವೆ; ದೇಶ ಹಿಂದೆಂದೂ ಅನುಭವಿಸದ ವಿಚಿತ್ರ ಮತ್ತು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ ; ಹೀಗಿರುವಾಗ, ಇಂಥ ಸಂಕಷ್ಟದ ಸಮಯದಲ್ಲಿ ಮಾಧ್ಯಮ ಬಹಳ ಜವಾಬ್ದಾರಿಯ ಪಾತ್ರ ವಹಿಸಬೇಕು; ಸರಕಾರವನ್ನು ಎಚ್ಚರಿಸುವ, ತಿದ್ದುವ, ಸಲಹೆ ನೀಡುವ ರಚನಾತ್ಮಕ ಕಾರ್ಯಕ್ಕೆ ಮುಂದಾಗಬೇಕು; ಇಂಥ ಸಮಯದಲ್ಲಿ, ಸುಶಾಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಅವನನ್ನು ಮರ್ಡರ್ ಮಾಡಿದ್ದಾರೋ ಎಂಬುದು ರಾಷ್ಟ್ರೀಯ ಮಹತ್ವ ಪಡೆಯಬಾರದು; ಒಬ್ಬ ನಟನ ಆತ್ಮಹತ್ಯೆ ಎರಡು ತಿಂಗಳು ರಾಷ್ಟ್ರೀಯ ಸ್ತರದ ಸುದ್ದಿಯಾಗಿ ಕಾಡಬಾರದು, ಅದಕ್ಕೆ ಅಷ್ಟೆಲ್ಲಾ ಪ್ರಾಧಾನ್ಯ, ಮಹತ್ವ ನೀಡಬಾರದು ಎಂಬುದು ಅರ್ನಾಬ್ ಗೋಸ್ವಾಮಿ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳು.
ಮೇಲ್ನೋಟಕ್ಕೆ ಆ ಟೀಕೆಗಳಲ್ಲಿ ಹುರುಳಿದೆ ಎಂದೆನಿಸುತ್ತದೆ.

ಈ ವಿಷಯವನ್ನು ಅರ್ನಾಬ್ ಅತಿಯೆನಿಸುವಷ್ಟು ವರದಿ ಮಾಡಿದ್ದು, ಅಗತ್ಯಕ್ಕಿಿಂತ ಜಾಸ್ತಿ ಕಿರುಚಿದ್ದು ನಿಜ. ಸುಶಾಂತ
ಸಾವಿನ ಪ್ರಕರಣಕ್ಕಿಿಂತ ಮುಖ್ಯವಾದ ವಿಷಯ ಬೇರೇನೂ ಇಲ್ಲ ಎನ್ನುವಷ್ಟರ ಮಟ್ಟಿಗೆ ‘ರಿಪಬ್ಲಿಕ್ ಟಿವಿ’ ವರದಿ ಮಾಡಿದ್ದು
ವಾಸ್ತವ. ಆದರೆ ಇಲ್ಲೊಂದು ಮುಖ್ಯ ಸಂಗತಿಯನ್ನು ಗಮನಿಸಬೇಕು. ಅದೇನೆಂದರೆ, ಒಂದು ವೇಳೆ, ಅರ್ನಾಬ್ ಇದನ್ನೂ
ಮಾಮೂಲು ಸುದ್ದಿಯಂತೆ ನೋಡಿದ್ದರೆ, ಎರಡನೇ ದಿನಕ್ಕೆ ವರದಿ ಮಾಡುವುದನ್ನು ನಿಲ್ಲಿಸಿದ್ದರೆ, ಈ ಸುದ್ದಿಯನ್ನು ಬೆಂಬೆತ್ತಿ
ಹೋಗದಿದ್ದರೆ, ಎರಡು ತಿಂಗಳು ಡಿಬೇಟ್ ಮಾಡದಿದ್ದರೆ, ಈ ಪ್ರಕರಣವೂ ಮತ್ತೊಬ್ಬ ನಟನ ಮಾಮೂಲು ಆತ್ಮಹತ್ಯೆ ಪ್ರಕರಣ
ಎಂಬ ಪಟ್ಟಿಗೆ ಸೇರಿಬಿಡುತ್ತಿತ್ತು. ಯಾರೂ ಸಹ ಇದಕ್ಕೆ ಮಹತ್ವ ನೀಡುತ್ತಿರಲಿಲ್ಲ. ನಾಲ್ಕು ದಿನ ಜನ ಶೋಕ ವ್ಯಕ್ತಪಡಿಸಿ, ಕಂಬನಿ
ಮಿಡಿದು, ನಂತರ ತಮ್ಮ ತಮ್ಮ ಕೆಲಸದಲ್ಲಿ ತಾವು ನಿರತರಾಗುತ್ತಿದ್ದರು. ಅಲ್ಲಿಗೆ ಸುಶಾಂತ ಪ್ರಕರಣ ಮುಗಿದುಹೋಗುತ್ತಿತ್ತು.

ಈಗ ನಡೆಯುತ್ತಿರುವುದೂ ಅದೇ ಅಲ್ಲವೇ? ಇಂಥ ಆತ್ಮಹತ್ಯೆ ಪ್ರಕರಣಗಳಲ್ಲಿ, ಮಾಧ್ಯಮಗಳು ಮೂರ್ನಾಲ್ಕು ದಿನ ವರದಿ
ಮಾಡಿ ಸುಮ್ಮನಾಗುತ್ತವೆ. ಅಷ್ಟೊತ್ತಿಗೆ ಬೇರೆ ವಿಷಯಗಳು ಸಿಗುತ್ತವೆ. ಅಲ್ಲಿಗೆ ಎಲ್ಲರೂ ಅದನ್ನು ಬಿಟ್ಟುಬಿಡುತ್ತಾರೆ. ನಂತರ
ಇದು ಯಾರಿಗೂ ಬೇಡದ ವಿಷಯವಾಗುತ್ತದೆ. ಪೊಲೀಸರು ಆರೋಪ ಪಟ್ಟಿ ಸಲ್ಲಿಸಿ, ತನಿಖೆ ಕೈಗೊಳ್ಳುವ ಹೊತ್ತಿಗೆ, ಜನ
ಅದನ್ನು ಮರೆತಿರುತ್ತಾರೆ. ಅನಂತರ ಆ ಪ್ರಕರಣ ಯಾವ ಹಾದಿ ಹಿಡಿಯಬಹುದು ಎಂಬುದು ಎಲ್ಲರಿಗೂ ಗೊತ್ತಿದೆ. ಇದು ಇಷ್ಟು
ದಿನಗಳ ಕಾಲ ಯಾವುದೇ ಪ್ರಕರಣ ವರದಿಯಾಗುವ ಕ್ರಮ ಮತ್ತು ಮರೆತು ಹೋಗುವ ವಿಧಾನ. ಅದರಲ್ಲೂ ನಮ್ಮ ರಾಜಕಾರಣಿ ಗಳದು ದಪ್ಪ ಚರ್ಮ, ಒಂದೆರಡು ಸಲ ತಿವಿದರೆ ಏನೂ ಅನಿಸುವುದೇ ಇಲ್ಲ. ಅದೆಷ್ಟೇ ಗಂಭೀರ ವಿಷಯವಾದರೂ ಲಕ್ಷವಹಿಸುವುದಿಲ್ಲ. ಸುಶಾಂತ್ ಸಿಂಗ್ ಆತ್ಮಹತ್ಯೆೆ ಅಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂದು ಒಂದೆರಡು ದಿನ ವರದಿ ಮಾಡಿದ್ದರೆ, ಈ ಪ್ರಕರಣವನ್ನು ಸಿಬಿಐಗೆ ಕೊಡುತ್ತಿದ್ದರಾ? ಆಗ, ಈಗ ಬಯಲಾದ ಸಂಗತಿಗಳು ಬೆಳಕು ಕಾಣುತ್ತಿದ್ದವಾ? ಬಾಲಿವುಡ್‌ನಲ್ಲಿ ಇಷ್ಟೆಲ್ಲಾ ಹೊಲಸುಗಳಿವೆ ಎಂಬುದು ತಿಳಿಯುತ್ತಿತ್ತಾ? ಬಗೆದಷ್ಟೂ ರಹಸ್ಯಗಳು ಹೊರಬೀಳುತ್ತಿತ್ತಾ? ಒಂದು ಚಾನೆಲ್ ಹಠಕ್ಕೆ ಬಿದ್ದವರಂತೆ, ಹುಚ್ಚು ಹಿಡಿಸಿಕೊಂಡವರಂತೆ, ಈ ಪ್ರಕರಣದ ಹಿಂದೆ ಬೀಳದಿದ್ದರೆ, ಇಷ್ಟೊತ್ತಿಗೆ ಸುಶಾಂತ್ ಸತ್ತಿದ್ದು ಆತ್ಮಹತ್ಯೆಯಿಂದ ಎಂದೇ ಇಡೀ ಜಗತ್ತು ನಂಬುತ್ತಿತ್ತು.

ಈ ಹಿನ್ನೆೆಲೆಯಲ್ಲಿ ನೋಡಿದಾಗ, ಅತಿಯೆನಿಸಿದರೂ ಅರ್ನಾಬ್ ಮಾಡಿದ್ದು ಸರಿಯೇ. ಅತಿಯೆನಿಸದಿದ್ದರೆ ಯಾರಿಗೆ ಏನೂ ಅನಿಸುವುದೇ ಇಲ್ಲ. ಆಗಲೇ ಬಿಸಿ ತಟ್ಟೋದು. ಅರ್ನಾಬ್ ಅತಿಯೆನಿಸುವಷ್ಟು ವರದಿ ಮಾಡದಿದ್ದರೆ, ಈ ಪ್ರಕರಣ ಏನಾಗುತ್ತಿತ್ತು ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಯಾರೂ ಸುಖಾಸುಮ್ಮನೆ ಬೊಬ್ಬೆ ಹೊಡೆಯುವುದಿಲ್ಲ. ಬೊಬ್ಬೆೆ ಹೊಡೆದರೆ ಮಾತ್ರ ಎಲ್ಲರೂ ಅತ್ತ ಗಮನಿಸುತ್ತಾರೆ. ಬೊಬ್ಬೆೆ ಹೊಡೆಯುವುದು ಕೆಲವರಿಗೆ ಕಿರಿಕಿರಿಯೆನಿಸಬಹುದು, ಕರ್ಕಶವೆನಿಸಬಹುದು. ಆದರೆ ಕೆಲವೊಮ್ಮೆ ಅನಿವಾರ್ಯ. ಮೆಲ್ಲಗೆ ಹೇಳಿದಾಗ ಕೇಳದಿದ್ದರೆ ಕಿರುಚಲೇ ಬೇಕಾಗುತ್ತದೆ ಮತ್ತು ಕಿರುಚುತ್ತಲೇ ಇರಬೇಕಾಗುತ್ತದೆ.

ಸುಶಾಂತ್ ಪ್ರಕರಣದಲ್ಲಿ ಅರ್ನಾಬ್ ಅದನ್ನೇ ಮಾಡಿದ್ದಾರೆ. ‘ಪ್ರಜಾಪ್ರಭುತ್ವದ ಕಾವಲುನಾಯಿ’ ಕಿರುಚುವ, ಬೊಗಳುವ
ಮತ್ತು ಕಚ್ಚುವ ಕೆಲಸವನ್ನು ಮಾಡುತ್ತಲೇ ಇರಬೇಕಾಗುತ್ತದೆ. ಅದು ಎಲ್ಲರಿಗೂ ಸಹ್ಯವಾಗುವುದಿಲ್ಲ. ಅಂಥವರು ಕಿವಿ ಮುಚ್ಚಿಕೊಳ್ಳುತ್ತಾರೆ, ಇಲ್ಲವೇ ಕಿರುಚುವವರ ವಿರುದ್ಧವೇ ಕಿರುಚುತ್ತಾಾರೆ. ಇವೆಲ್ಲಾ ಸಾಮಾನ್ಯ. ಎಲ್ಲಾ ಸಂದರ್ಭಗಳಲ್ಲೂ
ರೋಗಿಯನ್ನು ಕೇಳಿಯೇ ಚಿಕಿತ್ಸೆ ಕೊಡಲಾಗುವುದಿಲ್ಲ. ಜೀವವನ್ನು ಉಳಿಸಲು ಕಾಲನ್ನು ಕತ್ತರಿಸಬೇಕಾಗುತ್ತದೆ. ಕಿರುಚುವ ವರೆಲ್ಲರೂ ಕಿರಾತಕರಲ್ಲ. ಅರ್ನಾಬ್ ಮಾಡಿದ್ದು ಸರಿ ಇದೆ.

ಪತ್ರಕರ್ತರಲ್ಲಿ ಇನ್ನಷ್ಟು ಬದಲಾವಣೆ ಬೇಕು ಪತ್ರಕರ್ತರ ಬಗ್ಗೆೆ ಒಂದು ಆರೋಪವಿದೆ. ಅದೇನೆಂದರೆ, ಬೇರೆಯವರ ತಪ್ಪುಗ ಳನ್ನು ಮುಖಪುಟದಲ್ಲಿ ದೊಡ್ಡದಾಗಿ ಪ್ರಕಟಿಸುವ ಪತ್ರಕರ್ತರು, ತಮ್ಮ ತಪ್ಪುಗಳನ್ನು ಮಾತ್ರ ಒಳಪುಟಗಳಲ್ಲಿ ಸಣ್ಣದಾಗಿ ಪ್ರಕಟಿಸುತ್ತಾರೆ. ಇದು ನಿಜವೂ ಹೌದು. ಈ ವಿಷಯದಲ್ಲಿ ಪತ್ರಕರ್ತರು ಇನ್ನಷ್ಟು ಹೃದಯ ವೈಶಾಲ್ಯ ಮೆರೆಯಬೇಕು ಎಂದು ಎಲ್ಲರೂ ಬಯಸುತ್ತಾರೆ.

ಇಂದಿಗೂ ಅನೇಕ ಓದುಗರ ತಕರಾರೇನೆಂದರೆ, ಪತ್ರಕರ್ತರೇಕೆ ತಮ್ಮ ತಪ್ಪುಗಳನ್ನು ಮುಖಪುಟದಲ್ಲಿ ಪ್ರಕಟಿಸುವುದಿಲ್ಲ ಎಂದು.
ಅಸಲಿಗೆ, ಪತ್ರಕರ್ತರು ತಮ್ಮ ತಪ್ಪುಗಳನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ತಪ್ಪು ಬೇರೆಯವರ ಗಮನಕ್ಕೆ ಬಂದ ನಂತರ, ಪಾರಾಗುವ ಮಾರ್ಗವಿದೆಯಾ, ಬೇರೆಯವರ ಮೇಲೆ ಹೊರಿಸಬಹುದಾ ಎಂದು ಯೋಚಿಸುತ್ತಾರೆ. ಅವ್ಯಾವವೂ ಸಾಧ್ಯವಿಲ್ಲ ಎಂಬುದು ಗೊತ್ತಾದ ನಂತರ, ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಆಗಲಾದರೂ ಅದನ್ನು ಮುಖಪುಟದಲ್ಲಿ ಪ್ರಕಟಿಸಬಹುದಲ್ಲಾ? ಉಹುಂ.. ಅದನ್ನು ಒಳಪುಟದಲ್ಲಿ ಸಣ್ಣದಾಗಿ ಪೇಜ್ ಫಿಲ್ಲರ್ ಆಗಿ ಬಳಸಿ ಕೈ ತೊಳೆದುಕೊಳ್ಳುತ್ತಾರೆ.

ಮುಖಪುಟದಲ್ಲೇ ಕ್ಷಮಾಪಣೆ ಪ್ರಕಟಿಸಬೇಕು ಎಂದು ಕೋರ್ಟ್ ತೀರ್ಪು ನೀಡಿದ ಪ್ರಸಂಗಗಳನ್ನು ಬಿಟ್ಟರೆ, ಉಳಿದ ಸಂದರ್ಭ ಗಳಲ್ಲಿ ಅಲ್ಲಿ ಅದನ್ನು ಪ್ರಕಟಿಸಿದ್ದು ಇಲ್ಲವೇ ಇಲ್ಲ. ತಪ್ಪು ಮಾಡಿದ್ದು ಗೊತ್ತಾಗುತ್ತಿದ್ದಂತೆ, “Quickly and with candour’  ಕ್ಷಮಾಪಣೆಯನ್ನು ಪ್ರಕಟಿಸಬೇಕಂತೆ.

ಅದರಿಂದ ಪತ್ರಿಕೆಯ ಮಾನ – ಮರ್ಯಾದೆ ಹೋಗುವ ಬದಲು, ಜಾಸ್ತಿಯಾಗುತ್ತದೆ. ಪತ್ರಿಕೆ ಬಗ್ಗೆ ವಿಶ್ವಾಸಾರ್ಹತೆ  ಜಾಸ್ತಿ ಯಾಗುತ್ತದೆ. ಓದುಗರಲ್ಲಿ ತಾವು ಓದುವ ಪತ್ರಿಕೆ ಬಗ್ಗೆ ವಿನೀತ ಭಾವ ಬೆಳೆಯುತ್ತದೆ. ತಪ್ಪನ್ನು ಓದುಗರೇ ಎತ್ತಿ ತೋರಿಸ ಬೇಕೆಂದಿಲ್ಲ, ಪತ್ರಿಕೆಯ ಸಂಪಾದಕೀಯ ಸಿಬ್ಬಂದಿಗೆ ಗೊತ್ತಾದರೂ ಸಾಕು, ಮರುದಿನವೇ ಕ್ಷಮಾಪಣೆ ಕೋರಿ, ಸರಿಯಾದ ಮಾಹಿತಿ ನೀಡಬೇಕು. ಯಾವ ಕಾರಣಕ್ಕೂ ಓದುಗರನ್ನು ದಾರಿ ತಪ್ಪಿಸಬಾರದು, ಯಾವತ್ತೂ ಅವರಿಗೆ ನಿಖರ, ಸ್ಪಷ್ಟ ಮತ್ತು ಸತ್ಯವಾದ ಮಾಹಿತಿಯನ್ನೇ ನೀಡಬೇಕು.

ಸುದ್ದಿ ನೀಡುವ ಅವಸರದಲ್ಲಿ ತಪ್ಪುಗಳಾಗುವುದು ಸಹಜ. ಹಾಗಂತ ನಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳಬಾರದು. ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದೆಂದರೆ, ಓದುಗರನ್ನು ವಾಸ್ತವದಿಂದ ವಿಮುಖಗೊಳಿಸಿದಂತೆ. ಪತ್ರಿಕೋದ್ಯಮದಲ್ಲಿ ಒಂದು ಮಾತಿದೆ – ‘ಯಾವ ಸಂಪಾದಕನೂ ಓದುಗರ ಮುಂದೆ ಕ್ಷಮೆ ಯಾಚಿಸಿ ಸಣ್ಣವನಾಗಿಲ್ಲ.’ ಹೀಗಿರುವಾಗ ಮುಖಪುಟದಲ್ಲಿ ಕ್ಷಮೆ
ಯಾಚಿಸಲು ಯಾಕೆ ಹಿಂದೇಟು ಹಾಕಬೇಕು? ತನ್ನ ಪತ್ರಿಕೆಯ ಒಳಪುಟಗಳನ್ನು ಓದುಗರು ಓದುವುದಿಲ್ಲ ಎಂದು ಭಾವಿಸುವ
ಸಂಪಾದಕ ಮಾತ್ರ ಹೀಗೆ ಯೋಚಿಸಬಲ್ಲ.

ಅಮೆರಿಕದ ಅಲಬಾಮಾದಲ್ಲಿ ‘ಮೊಬೈಲ್ ಪ್ರೆಸ್ ರಜಿಸ್ಟರ್’ ಎನ್ನುವ ಪತ್ರಿಕೆಯಿದೆ. ಅದು ಏನೇ ತಪ್ಪು ಮಾಡಿದರೂ ತಿದ್ದುಪಡಿ, ವಿಷಾದ ಮತ್ತು ಕ್ಷಮೆಯಾಚನೆಯನ್ನು ಮುಖಪುಟದಲ್ಲಿಯೇ ಪ್ರಕಟಿಸುತ್ತದೆ. ಅದಕ್ಕೆೆಂದೇ ನಿರ್ದಿಷ್ಟ ಜಾಗವನ್ನು ಮೀಸಲಿಟ್ಟಿದೆ. ಅದೇ ರೀತಿ, ‘ಅಗಸ್ಟಾ ಕ್ರಾನಿಕಲ್’ ಎಂಬ ಪತ್ರಿಕೆ ಯಾವ ಪುಟದಲ್ಲಿ, ಯಾವ ಜಾಗದಲ್ಲಿ ತಪ್ಪು ವರದಿ ಪ್ರಕಟವಾಗಿದೆಯೋ, ಅದೇ ಜಾಗದಲ್ಲಿ, ತಿದ್ದುಪಡಿ ಪ್ರಕಟಿಸುತ್ತದೆ. ತಪ್ಪುಗಳನ್ನು ಒಪ್ಪಿಕೊಳ್ಳುವುದು ನಮ್ಮ ದೌರ್ಬಲ್ಯವಲ್ಲ, ಅದು ಅವಮಾನವೂ ಅಲ್ಲ. ಅದು ಪ್ರಾಮಾಣಿಕತೆ ಮತ್ತು ಓದುಗರನ್ನು ಗೌರವಿಸುವುದರ ಸಂಕೇತ.

ನಾವು ಮಾಡಿದ ತಪ್ಪು ವರದಿಗೆ, ತಿದ್ದುಪಡಿ ಪ್ರಕಟಿಸಿದರೆ, ಯಾವ ಓದುಗನೂ ಕೋರ್ಟಿಗೆ ಹೋಗುವುದಿಲ್ಲ. ಇದನ್ನು ನಿರಾಕರಿಸಿ ದಾಗ ಮಾತ್ರ ಆತ ಕಾನೂನು ಕ್ರಮಕ್ಕೆ ಮುಂದಾಗುತ್ತಾನೆ. ಕೋರ್ಟಿನಲ್ಲಿ ಪ್ರಕರಣ ಇತ್ಯರ್ಥವಾಗಲು ಹಲವಾರು ವರ್ಷಗಳು ಹಿಡಿಯುವುದರಿಂದ, ಓದುಗರು ಮರೆತು ಬಿಡುತ್ತಾರೆಂದು ಸಂಪಾದಕರು ಕ್ಷಮೆ ಯಾಚಿಸುವುದಿಲ್ಲ ಅಥವಾ ತಿದ್ದುಪಡಿಯನ್ನೂ ಪ್ರಕಟಿಸುವುದಿಲ್ಲ. ‘ಅಮೆರಿಕನ್ ಲಾಯರ್’ ಎಂಬ ಪ್ರಮುಖ ನಿಯತಕಾಲಿಕ ಒಂದು ‘ತಿದ್ದುಪಡಿ ಶಿಷ್ಟಾಚಾರ’ವನ್ನು ಹೊಂದಿದೆ. ಪತ್ರಿಕೆಯಲ್ಲಿ ಯಾರು ತಪ್ಪು ಮಾಡಿದ್ದಾರೋ, ಅದಕ್ಕೆ ಕಾರಣರಾದವರ ಹೆಸರುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತದೆ.

ತಪ್ಪುಗಳನ್ನು ಒಪ್ಪಿಕೊಳ್ಳಬೇಕು, ಆದರೆ.. ಕೆಲವು ಸಲ ಮಾಡಿದ ತಪ್ಪಿಗಿಂತ, ನಂತರ ಪ್ರಕಟಿಸಿದ ತಿದ್ದುಪಡಿ, ಸ್ಪಷ್ಟನೆ ಇನ್ನೂ ಆಭಾಸವನ್ನುಂಟು ಮಾಡುತ್ತವೆ. ಲಂಡನ್ನಿನಲ್ಲಿ “Planning” ಎಂಬ ನಿಯತಕಾಲಿಕವಿದೆ. ಒಮ್ಮೆ ಅದು ಮುಂದಿನ ಸಂಚಿಕೆಯಲ್ಲಿ ‘ಪ್ಲಾನಿಂಗ್ ಡೈರೆಕ್ಟರಿ’ ಪ್ರಕಟಿಸುವುದಾಗಿ ಘೋಷಿಸಿತು. ಆದರೆ ಅದು ಪ್ರಕಟವಾಗಲೇ ಇಲ್ಲ. ಬೇರೆ ಪತ್ರಿಕೆಯಲ್ಲಿ ಹೀಗಾಗಿದ್ದರೆ, ಕ್ಷಮಿಸಬಹುದಿತ್ತು. ಆದರೆ ಪತ್ರಿಕೆಯ ಹೆಸರೇ ಪ್ಲಾನಿಂಗ್. ಅದೇ ಈ ತಪ್ಪನ್ನು ಮಾಡಿದರೆ? ಅದಕ್ಕೆೆ ಆ ಪತ್ರಿಕೆಯ ಸಂಪಾದಕರು ಮುಂದಿನ ಸಂಚಿಕೆಯಲ್ಲಿ ಹೀಗೆ ಬರೆದರು – “We are sorry that the Planning Directory has so far not
appeared. This is because it is considerably bigger than originally anticipated and is taking longer to print’’ ಹಾಗಾದರೆ ‘ಪ್ಲಾನಿಂಗ್’ ಪತ್ರಿಕೆಯ ಸಂಪಾದಕನೇ ಸರಿಯಾಗಿ ಪ್ಲಾನ್ ಮಾಡಿರಲಿಲ್ಲ ಎಂದು ಒಪ್ಪಿಕೊಂಡಂತಾಯಿತು.

ಸಂಪಾದಕರು ತಪ್ಪುಗಳನ್ನು ಒಪ್ಪಿಕೊಳ್ಳಬೇಕು. ಆದರೆ ಈ ರೀತಿಯ ದಡ್ಡತನವನ್ನು ಪ್ರದರ್ಶಿಸಬಾರದು. ಸಮಾಜವಾದ ಮತ್ತು ಆತನ ಪಾಲು ! ಒಮ್ಮೆ ಬಿಲಿಯನೇರ್ ಮತ್ತು ಮಹಾದಾನಿ ಎಂದು ಕರೆಯಿಸಿಕೊಂಡ ಉದ್ಯಮಿಯೊಬ್ಬರನ್ನು ಗೌರವಿಸಲು ಒಂದು ಪಾರ್ಟಿಯನ್ನು ಏರ್ಪಡಿಸಲಾಗಿತ್ತು. ಆ ಪಾರ್ಟಿಯಲ್ಲಿ ಒಬ್ಬ ಕಿರಿಕ್ ಪಾರ್ಟಿ ಬಂದು, ‘ಏನು ಸ್ವಾಮೀ, ನೀವು ಇಷ್ಟು
ಸಂಪಾದಿಸಿದ್ದೆಲ್ಲಾ ನಿಮ್ಮದಲ್ಲ. ನಿಮ್ಮ ಕೆಲಸಗಾರರು ದುಡಿದ ಫಲವಾಗಿ ನೀವು ಶ್ರೀಮಂತರಾಗಿದ್ದೀರಿ. ನಿಮಗೆ ಸಮಾಜವಾದ ದಲ್ಲಿ ನಂಬಿಕೆಯಿಲ್ಲವೇ? ನಿಮ್ಮ ಸಂಪಾದನೆಯಲ್ಲಿ ಉಳಿದವರ ಪಾಲಿದೆ.

ನ್ಯಾಯಯುತವಾಗಿ ನೀವು ಅದನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕು’ ಎಂದು ಎಲ್ಲರಿಗೂ ಕೇಳುವಂತೆ ಜೋರಾಗಿ ಹೇಳಿದ.
ಇದರಿಂದ ಆ ಉದ್ಯಮಿಗೆ ತುಸು ಮುಜುಗರವಾದಂತಾಯಿತು. ಆದರೆ ತೋರಿಸಿಕೊಳ್ಳಲಿಲ್ಲ. ಆ ಕಿರಿಕ್ ಪಾರ್ಟಿಯನ್ನು ಕರೆದು, ‘ದಯವಿಟ್ಟು ನೀವು ನಾಳೆ ನಮ್ಮ ಆಫೀಸಿಗೆ ಬರಬೇಕು. ನಿಮ್ಮ ಪಾಲನ್ನು ಕೊಡುತ್ತೇನೆ. ಸ್ವೀಕರಿಸಬೇಕು’ ಎಂದು ಹೇಳಿದ. ಅದಕ್ಕೆ ಆತ ಒಪ್ಪಿದ. ಪಾರ್ಟಿ ಮುಂದುವರಿಯಿತು. ಉದ್ಯಮಿ ಬೀಸುವ ದೊಣ್ಣೆೆಯಿಂದ ತಪ್ಪಿಸಿಕೊಂಡ.

ಮರುದಿನ ಉದ್ಯಮಿಯ ಸೆಕ್ರೆಟರಿ ಬಂದು, ‘ಸಾರ್, ನಿಮ್ಮನ್ನು ಭೇಟಿ ಮಾಡಲು ಯಾರೋ ಬಂದಿದ್ದಾರೆ’ ಎಂದಳು. ನೋಡಿದರೆ ಕಿರಿಕ್ ಪಾರ್ಟಿ! ತನ್ನ ಸೆಕ್ರೆಟರಿಗೆ ಉದ್ಯಮಿ ಹೇಳಿದ – ‘ನೋಡು, ಇವರು ಮಹಾನ್ ಸಮಾಜವಾದಿಗಳು. ನನ್ನ ಸಂಪಾದನೆಯಲ್ಲಿ ಇವರ ಪಾಲೂ ಇದೆ. ನಾನು ದುಡಿದ ಹಣವನ್ನು ಜಗತ್ತಿನ ಪ್ರತಿಯೊಬ್ಬರಿಗೂ ಹಂಚಿದರೆ ಎಷ್ಟಾಗುತ್ತದೆ ಎಂದು ತಿಳಿಸು. ಇವರ ಪಾಲನ್ನು ಚೆಕ್‌ನಲ್ಲಿ ಕೊಡು’ ಹತ್ತು ನಿಮಿಷದ ನಂತರ ಆಕೆ ಬಂದು ಚೆಕ್ ನೀಡಿದಳು.

ಅದರಲ್ಲಿ ‘ಒಂಬತ್ತು ಪೈಸೆ’ ಎಂದು ಬರೆದಿತ್ತು ! ಹೂ ಗಿಡಗಳ ಜತೆ ಮಾತಾಡುವುದು ! ‘ನನ್ನ ಹೆಂಡತಿಗೆ ಗಾರ್ಡನಿಂಗ್ ಅಂದರೆ ಬಹಳ ಇಷ್ಟ. ಅವಳು ಪ್ರತಿ ಹೂ ಗಿಡದ ಬಳಿ ನಿಂತು ಗಂಟೆಗಟ್ಟಲೆ ಮಾತಾಡುತ್ತಾಳೆ ಗೊತ್ತಾ?’ತಮ್ಮ ಪಕ್ಷದ ನಾಯಕರೊಬ್ಬರು ವಾಜಪೇಯಿ ಅವರಿಗೆ ಹೇಳಿದರಂತೆ.

ಅದಕ್ಕೆೆ ವಾಜಪೇಯಿ ಹೇಳಿದರಂತೆ – ‘ಆದರೆ ಆ ಹೂಗಿಡಗಳು ಅವಳ ಮಾತನ್ನು ಕೇಳಿವೆಯೋ ಇಲ್ಲವೋ ಎಂಬುದು ಗೊತ್ತಾಗುವು ದಾದರೂ ಹೇಗೆ?’ (ಅನಂತಕುಮಾರ ಹೇಳಿದ್ದು)