Friday, 20th September 2024

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ

ತನ್ನಿಮಿತ್ತ
ಸಂದೀಪ್ ಶರ್ಮಾ

ಆತ್ಮಹತ್ಯೆ ತಡೆಗಟ್ಟುವುದು ಒಂದು ಜಾಗತಿಕ ಸವಾಲು. ಜಗತ್ತಿನಾದ್ಯಂತ ಎಲ್ಲ ವಯಸ್ಸಿನವರಲ್ಲಿ ಸಾವಿಗೆ ಕಾರಣಗಳ ಪಟ್ಟಿಯಲ್ಲಿ ಮೊದಲ 20 ಸ್ಥಾನಗಳಲ್ಲಿ ಆತ್ಮಹತ್ಯೆೆ ಪ್ರತಿವರ್ಷ ಕಂಡುಬರುತ್ತದೆ.

ಇದು ಸುಮಾರು 8 ಲಕ್ಷ ಜನರ ಸಾವಿಗೆ ಕಾರಣವಾಗಿದೆ ಅಂದರೆ, ಸರಿಸುಮಾರು ಪ್ರತಿ 40 ಸೆಕೆಂಡಿಗೆ ಒಂದು ಆತ್ಮಹತ್ಯೆೆ ನಡೆಯು ತ್ತಿದೆ ಎಂದರ್ಥ. ಜಾಗತಿಕ ಮಟ್ಟದಲ್ಲಿ ಪ್ರತೀ ಒಂದು ಲಕ್ಷ ಜನಸಂಖ್ಯೆಯಲ್ಲಿ 11.4 ಜನ ಆತ್ಮಹತ್ಯೆಗೀಡಾಗುತ್ತಾರೆ. 15ರಿಂದ 24ನೇ ವಯಸ್ಸಿನಲ್ಲಿ ಸಂಭವಿಸುವ ಬಹುತೇಕ ಸಾವುಗಳಿಗೆ ಮುಖ್ಯ ಕಾರಣ ಆತ್ಮಹತ್ಯೆ. ಪ್ರಪಂಚದಾದ್ಯಂತ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಆತ್ಮಹತ್ಯೆ ಕಂಡುಬಂದಿದೆ.

ಈ ವರ್ಷವೂ ಕೂಡ ಸೆಪ್ಟೆೆಂಬರ್ 10ರಂದು ‘ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ’ವೆಂದು ಆಚರಿಸಲಾಗುವುದು. ಆತ್ಮಹತ್ಯೆ ಮಾಡಿಕೊಳ್ಳುವುದು ಒಂದು ಹೇಯ ಕೃತ್ಯ, ಮೂರ್ಖತನ ಎನ್ನುವುದರ ಬಗ್ಗೆ ಹಾಗೂ ಆತ್ಮಹತ್ಯೆ ತಡೆಯ ಬಗ್ಗೆ ಅರಿವು ಮೂಡಿ ಸಲು ಈ ದಿನವನ್ನು ಆಚರಿಸಲಾಗುವುದು. ಆತ್ಮಹತ್ಯೆ ಪ್ರಯತ್ನವನ್ನು ತಡೆಗಟ್ಟಲು ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳ ಲಾಗಿದೆ. ಮನುಷ್ಯ ಮಾನಸಿಕ ಆಘಾತಕ್ಕೆ ಒಳಗಾದಾಗ ಈ ರೀತಿಯ ತಪ್ಪು ನಿರ್ಧಾರಕ್ಕೆ ಬರುತ್ತಾರೆ. ಆದ್ದರಿಂದ ಮೊದಲು ಆತ್ಮಹತ್ಯೆ ಮಾಡಿಕೊಳ್ಳದಂತೆ ಮನುಷ್ಯ ಮನಸ್ಸನ್ನು ಗಟ್ಟಿ ಮಾಡಕೊಳ್ಳಬೇಕು ಎಂಬ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಏ) ಕೂಡ ಕಾರ್ಯನಿರತವಾಗಿದೆ.

ಕೆಲವರು ಸಾವು ಒಂದೇ ನಮ್ಮ ಸಮಸ್ಯೆಗೆ ಪರಿಹಾರ ಎಂದು ಮೂರ್ಖರಂತೆ ಯೋಚಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿ, ಅದನ್ನು ನೋಡಿ ಅವರನ್ನು ಬದುಕಿಸಿರುತ್ತಾರೆ. ಅವರ ಸ್ಥಿತಿಯಂತೂ ಮತ್ತಷ್ಟು ಶೋಚನೀಯ. ಆತ್ಮಹತ್ಯೆ ಬಗ್ಗೆ ಯೋಚಿಸುವ ವ್ಯಕ್ತಿಗಳ ಮನಸ್ಸು ತುಂಬಾ ವಿಚಿತ್ರವಾಗಿರುತ್ತದೆ. ಚಿಕ್ಕ- ಪುಟ್ಟ ವಿಷಯಕ್ಕೆ ಆತ್ಮಹತ್ಯೆ ಒಂದೇ ಪರಿಹಾರ ಎಂದು ಯೋಚಿಸುವ ವ್ಯಕ್ತಿಗಳು ತಮ್ಮ ಬದುಕನ್ನು ಆತ್ಮಹತ್ಯೆ ಮಾಡಿಕೊಂಡು ಕೊನೆಗೊಳಿಸುತ್ತಾರೆ. ಆದ್ದರಿಂದ
ಚಿಕ್ಕ ಸಮಸ್ಯೆಗೂ ನಾನು ಸಾಯಬೇಕು ಎಂದು ಯೋಚಿಸುವವರು ಆ ಮನಸ್ಥಿತಿಯಿಂದ ಹೊರಬರಲೇಬೇಕಿದೆ, ಇಲ್ಲದಿದ್ದರೆ ಅಪಾಯ. ಆತ್ಮಹತ್ಯೆ ಎನ್ನುವುದು ದುಡುಕಿನ ನಿರ್ಧಾರವಾಗಿರುತ್ತದೆ. ಸಾಯಬೇಕು ಎಂಬ ಯೋಚನೆ ಬಂದಾಗ ಒಂದು ಕ್ಷಣ ಬೇರೆ ಕಡೆ ನಮ್ಮ ಮನಸ್ಸನ್ನು ಹೊರಳಿಕೊಂಡರೆ ಖಂಡಿತ ಸಾಯಬೇಕೆನಿಸುವುದಿಲ್ಲ. ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಜೀವನದಲ್ಲಿ ಜಿಗುಪ್ಸೆ ಬಂದು ಸಾಯಬೇಕು ಎಂದು ಅನಿಸಿದಾಗ ಮನಸ್ಸನ್ನು ಮತ್ತೊೊಂದೆಡೆ ಕೇಂದ್ರೀಕರಿಸಿದರೆ ಖಂಡಿತ ಸಾಯುವ ಯೋಚನೆ ದೂರವಾಗುವುದು. ಆತ್ಮಹತ್ಯೆಯ ಭೂತ ಯಾವ ದೇಶವನ್ನು ಬಿಟ್ಟಿಲ್ಲ. ವಿಶ್ವದೆಲ್ಲೆಡೆ ಆತ್ಮಹತ್ಯೆ ಮಾಡಿ ಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಜೀವನ ಶೈಲಿ ಕಾರಣವಾಗಿರುತ್ತದೆ. ಆತ್ಮಹತ್ಯೆಯ ಯೋಚನೆ ವ್ಯಕ್ತಿಯಲ್ಲಿ ಮೂಡುವುದು ಒಂದು ಕಾಯಿಲೆ. ಇದಕ್ಕೆ ಸೂಕ್ತ ಸಮಯದಲ್ಲಿ ಉತ್ತಮ ಚಿಕಿತ್ಸೆೆಯ ಅಗತ್ಯವಿದೆ ಎಂದು ಖ್ಯಾತ ಮಾನಸಿಕ ತಜ್ಞರು ಅಭಿಪ್ರಾಯ  ಪಟ್ಟಿದ್ದಾರೆ.

ರಾಜ್ಯದಲ್ಲಿ ಅತ್ಯಧಿಕ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮುಖ ನಗರಗಳಲ್ಲಿ ಬೆಂಗಳೂರು ಅಗ್ರಪಂಕ್ತಿಯಲ್ಲಿದೆ. ಪ್ರಸ್ತುತವಾಗಿ 2017ರ ಅನುಪಾತಕ್ಕಿಿಂತ ಶೇಕಡಾ 50ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಅಲ್ಲದೇ ಕಳೆದ ನಾಲ್ಕು ವರ್ಷಗಳಲ್ಲೇ ಅತಿ ಹೆಚ್ಚು ಆತ್ಮಹತ್ಯೆಯ ಸಾವು ದಾಖಲಾದ ವರ್ಷವಾಗಿತ್ತು. ಬೆಂಗಳೂರಿನ ಇಂಥ ಅನೇಕ ಆತ್ಮಹತ್ಯಾ ಪ್ರಕರಣಗಳು ವರದಿಯಾಗದೇ ಇರುವುದು ಸಹ ಅಚ್ಚರಿಯ ಸಂಗತಿಯೇ. ಅಂಕಿ ಅಂಶಗಳ ಪ್ರಕಾರ ಆತ್ಮಹತ್ಯಾ ಪ್ರಕರಣಗಳ ಸಂಖ್ಯೆ ಏರುಪೇರಾದರೂ, ‘ಸೂಸೈಡ್ ಕ್ಯಾಪಿಟಲ್’ ಎಂಬ ಭೂತ ಮಾತ್ರ ಬೆಂಗಳೂರನ್ನು ಬಿಟ್ಟು ಇನ್ನೂ ತೊಲಗಿಲ್ಲ ಎಂಬುದು ವಿಷಾದನೀಯ.