Sunday, 8th September 2024

ಸವಾಲನ್ನು ಸಮಸ್ಯೆ ಎಂದುಕೊಳ್ಳದೆ ಅವಕಾಶವೆಂದು ಪರಿಭಾವಿಸಿ

ಶ್ವೇತಪತ್ರ

shwethabc@gmail.com

ಹಿಂದೆ ನಾವು ಸಮಸ್ಯೆಗಳೆದುರು ಸೋತಿದ್ದು ಮುಖ್ಯವಲ್ಲ; ಆದರೆ ಸೋಲುಗಳನ್ನು ನಾವು ಹೇಗೆ ನೋಡುತ್ತೇವೆ ಎಂಬ ದೃಷ್ಟಿಕೋನದಲ್ಲಿ ನಮ್ಮ ಮುಂದಿನ ಯಶಸ್ಸಿನ ದಾರಿ ಅಡಗಿರುತ್ತದೆ. ‘ನಾನು ಸೋತುಹೋದೆ’ ಎನ್ನುವುದಕ್ಕೂ, ‘ನನಗಿನ್ನೂ ಯಶಸ್ಸು ದೊರೆತಿಲ್ಲ’ ಎನ್ನುವುದಕ್ಕೂ ಅಗಾಧವಾದ ವ್ಯತ್ಯಾಸವಿದೆ. ಇದಕ್ಕೆ ಸಾರ್ವತ್ರಿಕ ಉದಾಹರಣೆ- ನಮ್ಮೆಲ್ಲರ ಮನೆಗಳನ್ನು ಬೆಳಗಿಸುತ್ತಿರುವ ಥಾಮಸ್ ಆಲ್ವಾ ಎಡಿಸನ್.

ತಮಗೆ ಸಮಸ್ಯೆ ಇದೆ ಎಂದು ಹೇಳಿಕೊಂಡು ತುಂಬಾ ಜನ ನನ್ನ ಬಳಿ ಆಪ್ತಸಲಹೆಗೆ ಬರುತ್ತಾರೆ. ಬರುವವರದ್ದೆಲ್ಲ ಒಂದೇ ಅಳಲು- ‘ಮೇಡಂ, ದಯವಿಟ್ಟು ನಮಗೆ ಸಹಾಯ ಮಾಡಿ. ಈ ಸಮಸ್ಯೆಗಳ ಜತೆಗೆ ನಮಗೆ ಹೆಣಗಲಾಗುತ್ತಿಲ್ಲ’ ಅಂತ. ನಾನು ಅವರಿಗೆಲ್ಲ ಸ್ಪಷ್ಟವಾಗಿ ಹೇಳುವುದು, ‘ನೋಡಿ, ಮೊದಲು ನೀವು ನನ್ನ ಜತೆ
ಮಾತನಾಡಿ. ನಂತರದಲ್ಲಿ ನಿಮ್ಮ ಸಮಸ್ಯೆಗಳನ್ನು ನೀವು ನಿಭಾಯಿಸಲು ಸಾಧ್ಯವಾಗುತ್ತದೆಯೋ ಇಲ್ಲವೋ ನೋಡೋಣ’ ಅಂತ. ಆದರೆ ಎಷ್ಟೋ ಜನ ಇದನ್ನು
ಸಮಾಧಾನವಾಗಿ ಕೇಳಲು ತಯಾರಿರುವುದಿಲ್ಲ. ಆಗೆಲ್ಲ ನನಗೆ ಇಂಗ್ಲಿಷ್ ನಾಟಕವೊಂದರ ಸಾಲುಗಳು ನೆನಪಿಗೆ ಬರುತ್ತವೆ- ಸಮಸ್ಯೆಗಳಿಲ್ಲದ ಸಮಾಧಾನದ ಜಾಗವೊಂದೇ, ಅದು ನಾವು ಚಿರವಾಗಿ ನಿದ್ರಿಸುವ ತಾಣ.

ಸಮಸ್ಯೆಗಳು ನಮ್ಮ ಬದುಕಿಗೆ ನಮ್ಮ ಇರುವಿಕೆಯನ್ನು ದೃಢಪಡಿಸುವ ಅಂಶಗಳು. ನಿಮಗೆ ದೊಡ್ಡ ಸಮಸ್ಯೆಗಳಿವೆ ಎಂದರೆ ಅವುಗಳಿಗೆ ಧನ್ಯರಾಗಿರಿ. ಏಕೆಂದರೆ ಆ
ಸಮಸ್ಯೆಗಳು ನಿಮ್ಮನ್ನು ಮತ್ತಷ್ಟು ಜೀವಂತವಾಗಿಯೂ, ಮಗದಷ್ಟು ಕಾರ್ಯಪ್ರವೃತ್ತರನ್ನಾಗಿಯೂ ಇರಿಸುತ್ತವೆ (ಒಬ್ಬ ಮನುಷ್ಯನನ್ನು ಆತನಿಗಿರುವ ಸಮಸ್ಯೆ ಆಧಾರದಲ್ಲಿ ಜಡ್ಜ್ ಮಾಡಬಹುದೆಂದು ಕೆಲವೊಬ್ಬರು ಹೇಳುವುದಿದೆ). ‘ಸಮಸ್ಯೆಗಳೆಂದರೆ ಕೆಟ್ಟವು’ ಎಂಬುದು ತುಂಬಾ ಜನರ ಅನಿಸಿಕೆ. ನಮ್ಮೆಲ್ಲರ ಬದುಕಿನ ಆಶಯ- ‘ಯಾವುದೇ ಸಮಸ್ಯೆಗಳಿಲ್ಲದೆ ನೆಮ್ಮದಿಯಾಗಿ ಇದ್ದುಬಿಡಬೇಕು’ ಎನ್ನುವುದು.

ಇಂಥ ಮನಸ್ಥಿತಿಯಲ್ಲಿದ್ದಾಗ ಸಮಸ್ಯೆ ಯೊಂದು ಎದುರಾದರೆ, ನಮ್ಮ ಹಣೆಬರಹವನ್ನು ದೂರುತ್ತಾ ಇರುವ ಎಲ್ಲಾ ಶಕ್ತಿಯನ್ನು ಸಮಸ್ಯೆಯನ್ನು ಹಳಿಯುವುದಕ್ಕೆ ವಿನಿಯೋಗಿಸಿಬಿಡುತ್ತೇವೆ. ಇದು ನಿರಾಶಾವಾದಿಗಳ ದೃಷ್ಟಿಕೋನ. ಆಶಾವಾದಿಗಳು ಸಮಸ್ಯೆಯನ್ನು ಮತ್ತೊಂದು ದೃಷ್ಟಿಕೋನದಲ್ಲೇ ನೋಡಲು ಪ್ರಯತ್ನಿಸುತ್ತಾರೆ. ಸಮಸ್ಯೆಗಳನ್ನು ಎದುರಿಸಿ ಆ ಮೂಲಕ ಭಯವನ್ನು ತೊಡೆದುಹಾಕಿ ಮುನ್ನುಗ್ಗಿದರೆ, ನಾನೇನು ಹೇಳುತ್ತಿದ್ದೇನೆ ಎಂಬುದು ನಿಮಗೆ ಅರ್ಥವಾಗುತ್ತದೆ. ಆದರೆ ನಮ್ಮಲ್ಲಿ ಅನೇಕರು ಸಮಸ್ಯೆಗಳ ಭಯದಿಂದ ಹೊರಬರಲಾರದೆ ಇರುವುದರಿಂದ ಸಮಸ್ಯೆಗಳನ್ನು ಅವಕಾಶಗಳೆಂದು ಪರಿಗಣಿಸಲು ಸೋಲುತ್ತಾರೆ.

‘ನಾನೊಬ್ಬ ಲೂಸರ್‘ ಇದು ನಮ್ಮಲ್ಲಿ ಅನೇಕರಿಗೆ ಇರುವ ಮನಸ್ಥಿತಿ, ಸೋಲನ್ನು ಒಪ್ಪಿಕೊಳ್ಳುವ ಮನೋಭಾವ. ಇದು ಏಕೆ ಆಗುತ್ತದೆ ಎಂದರೆ, ಒಂದರ ಹಿಂದೆ ಒಂದು ಸೋಲುಗಳು ನಮ್ಮನ್ನು ಮುತ್ತತೊಡಗಿದಾಗ ಮನಸ್ಸು ಮಂಕಾಗುತ್ತದೆ. ‘ಇದು ನನಗೇ ಏಕೆ ಆಗುತ್ತದೆ?’ ಎಂಬ ಆಲೋಚನೆಗೆ ಬಿದ್ದು ಬದುಕಲ್ಲಿ
ನಾನೊಬ್ಬ/ಳು ಲೂಸರ್ ಎಂದು ನಿಧಾನಕ್ಕೆ ಮನಸ್ಸು ಒಪ್ಪಿಕೊಳ್ಳುವುದಕ್ಕೆ ಶುರು ಮಾಡಿಬಿಡುತ್ತದೆ. ನಮಗೆ ಬಂದ ಸಮಸ್ಯೆಗಳಿಂದಾಗಿ ‘ನಾವು ಲೂಸರ್’ ಎಂದುಕೊಳ್ಳುವುದಾದರೆ ಗೆಲ್ಲುವುದಾ ದರೂ ಹೇಗೆ? ಅಲ್ಲಿಗೆ ಯಶಸ್ಸನ್ನು ನಾವೇ ಹೊರಗುಳಿಯುವಂತೆ ಮಾಡಿದಂತಾಗಿಬಿಡುತ್ತದೆಯ ಲ್ಲವೇ? ಹಿಂದೆ ನಾವು ಸಮಸ್ಯೆಗಳೆದುರು ಸೋತಿದ್ದು ಮುಖ್ಯವಲ್ಲ; ಆದರೆ ಸೋಲುಗಳನ್ನು ನಾವು ಹೇಗೆ ನೋಡುತ್ತೇವೆ ಎಂಬ ದೃಷ್ಟಿಕೋನದಲ್ಲಿ ನಮ್ಮ ಮುಂದಿನ ಯಶಸ್ಸಿನ ದಾರಿ
ಅಡಗಿರುತ್ತದೆ.

‘ನಾನು ಸೋತುಹೋದೆ’ ಎನ್ನುವುದಕ್ಕೂ, ‘ನನಗಿನ್ನೂ ಯಶಸ್ಸು ದೊರೆತಿಲ್ಲ’ ಎನ್ನುವುದಕ್ಕೂ ಅಗಾಧವಾದ ವ್ಯತ್ಯಾಸವಿದೆ. ಇದಕ್ಕೆ ಸಾರ್ವತ್ರಿಕ ಉದಾಹರಣೆ- ನಮ್ಮೆಲ್ಲರ ಮನೆಗಳನ್ನು ಬೆಳಗಿಸುತ್ತಿರುವ ಥಾಮಸ್ ಆಲ್ವಾ ಎಡಿಸನ್. ನೆಪೋಲಿಯನ್ ಹಿಲ್ ಮೊದಲ ಬಾರಿಗೆ ಥಾಮಸ್ ಆಲ್ವಾ ಎಡಿಸನ್ ಅವರನ್ನು ಸಂದರ್ಶಿಸುತ್ತಾ, ‘ಮಿಸ್ಟರ್ ಎಡಿಸನ್, ಲೈಟ್ ಬಲ್ಬ್ ಕಂಡುಹಿಡಿಯುವ ವೇಳೆ ನಿಮಗೆ ಸಾವಿರ ಸಲ ಸೋಲುಂಟಾಯಿತು; ಇದರ ಬಗ್ಗೆ ಜಗತ್ತಿಗೆ ಏನನ್ನು ಹೇಳಲು
ಬಯಸುತ್ತೀರಿ?’ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸುವ ಎಡಿಸನ್, ‘ಮೊದಲಿಗೆ ನಿಮ್ಮ ಕ್ಷಮೆಯನ್ನು ಯಾಚಿಸುತ್ತೇನೆ.

ಏಕೆಂದರೆ ನಿಮ್ಮ ಪ್ರಶ್ನೆಯೇ ತಪ್ಪು ಎಂದು ಹೇಳಲು ಬಯಸುತ್ತೇನೆ. ನಾನು ಸಾವಿರ ಸಲ ಸೋಲಲಿಲ್ಲ, ಬದಲಿಗೆ ಸಾವಿರ ಪ್ರಯೋಗಗಳನ್ನು ಮಾಡಿದೆ. ಆದರೆ ಅವುಗಳ ಕಾರ್ಯ ಕಾರಣವಾಗಲಿಲ್ಲ ವಷ್ಟೇ. ಯಾವುದು ಸರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೋಡುವುದಕ್ಕೆ ನಾನು ತೆಗೆದುಕೊಂಡದ್ದು ಸಾವಿರ ಪ್ರಯತ್ನಗಳು’ ಎಂದು ಉತ್ತರಿಸುತ್ತಾರೆ. ನಮ್ಮೆಲ್ಲರಿಗೂ ಇಂಥವೇ ಸಾವಿರ ಕಲಿಕಾ ಅನುಭವಗಳಿವೆಯಲ್ಲವೇ? ನಡೆಯಲು ಶುರುವಿಟ್ಟು ನಿಲ್ಲಲು ಬಾರದೆ ಬಿದ್ದದ್ದು, ಆದರೂ ಪ್ರಯತ್ನಿಸಿ ನಡೆದದ್ದು ಹೀಗೆ. ಇದು ನಮ್ಮೊಳಗೆ ಸಾಧ್ಯವಾಗಿದ್ದು ಹೇಗೆಂದರೆ, ಬೇರೆಯವರ ಯಶಸ್ಸು ನಮಗೆ ಸ್ಫೂರ್ತಿಯಾಯಿತು, ಅಲ್ಲವೇ? ಕೆಲವರಿಗೆ
ಮೊದಲನೆಯ ಪ್ರಯತ್ನದಲ್ಲಿಯೇ ಗೆಲುವು ಸಿಕ್ಕಿಬಿಡಬಹುದು; ಆಗ ನಾವೆಲ್ಲ ನಮ್ಮನ್ನು ಲೂಸರ್ ಎಂದುಕೊಂಡು ಪ್ರಯತ್ನಿಸುವುದನ್ನು ನಿಲ್ಲಿಸಬಾರದು.

‘ನನ್ನಿಂದ ಇದು ಸಾಧ್ಯವಿಲ್ಲ’ ಎಂಬುದಾಗಿ ನಮ್ಮ ಒಂದು ಸೋಲಿನ ಮುಂದೆ ನಾವು ಯಶಸ್ವಿಯೇ ಆಗಲಾರವೆಂದು ತೀರ್ಮಾನಿಸಿಬಿಡಬಹುದೇ, ಯೋಚಿಸಿ! ಒಂದಲ್ಲ ಸಾವಿರ ಸೋಲುಗಳನ್ನು ನಾವು ಪ್ರಯತ್ನಗಳೆಂದು ಪರಿಗಣಿಸಿ ನಮ್ಮನ್ನು ನಾವೇ ಪ್ರೇರೇಪಿಸಿಕೊಳ್ಳಬೇಕು, ಥೇಟು ನಮ್ಮ ಬಿಲ್ ಸ್ಯಾಂಡ್ ತರಹ. ಬಿಲ್
ಸ್ಯಾಂಡ್ ಕ್ಯಾಲಿಫೋರ್ನಿಯಾದ ಸ್ಯಾನ್ ಕ್ವೆಂನ್ ಟಿನ್ ಜೈಲಿನ ಒಬ್ಬ ಕೈದಿ. ಆತ ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಮೇಲೆ ತನ್ನ ಜೈಲಿನ ಅನುಭವದ ಕುರಿತು Iqs ಖeZbಟಡಿ ಊZoಠಿ ಎಂಬ ಪುಸ್ತಕವನ್ನು ರಚಿಸುತ್ತಾನೆ ಹಾಗೂ ಒಬ್ಬ ಮೋಟಿವೇಷನಲ್ ಗುರುವಾಗುತ್ತಾನೆ.

ಒಮ್ಮೆ ೧,೫೦೦ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಬಿಲ್ ಸ್ಯಾಂಡ್ ತನ್ನ ಬದುಕಿನ ಅನುಭವಗಳನ್ನು ಅವರೆದುರಿಗೆ ತೆರೆದಿಡುವ
ಪ್ರಯತ್ನ ವನ್ನು ಮಾಡುತ್ತಿರುತ್ತಾನೆ. ‘ನನ್ನ ತಂದೆ-ತಾಯಂದಿರಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ನನ್ನ ತಂದೆಯೋರ್ವ ನ್ಯಾಯಾಧೀಶ ರಾಗಿದ್ದರೆ, ನನ್ನ ತಾಯಿ ಕುಡಿತದ ಚಟಕ್ಕೆ ಅಂಟಿಕೊಂಡಿರುತ್ತಾಳೆ. ಇಬ್ಬರಿಗೂ ಅವರದ್ದೇ ಜಗತ್ತು. ಅವರ ಗಮನವನ್ನು ನನ್ನೆಡೆಗೆ ಸೆಳೆಯಲು ನಾನು ಮನೆಯ ಮುಂದಿನ ಗಾಜಿನ ಕಿಟಕಿಯನ್ನು ಒಡೆದುಹಾಕುತ್ತಿದ್ದೆ. ನಂತರ ಅಂಗಡಿಗಳಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುವುದಕ್ಕೆ ಶುರುಮಾಡಿದೆ. ಹೀಗೆ ನನ್ನನ್ನು ಯಾರೂ ಕೇಳುವವರಿಲ್ಲದಾಗಿ ಮುಂದೆ ಅನೇಕ ದೊಡ್ಡ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿ ಜೈಲು ಸೇರಿದೆ.

ಅಲ್ಲಿ ನನಗೆ ವಿಕೃತ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಹೇಳುತ್ತಿದ್ದರು. ನಾನು ಇಲ್ಲವೆಂದಾಗ ನನ್ನ ಮೂಗು ಮುರಿದರು (ಈ ಸಂದರ್ಭದಲ್ಲಿ ಬಿಲ್ ಸ್ಯಾಂಡ್ ತನ್ನ ಚಪ್ಪಟೆ ಮೂಗನ್ನು ಸವರಿ ವಿದ್ಯಾರ್ಥಿಗಳಿಗೆ ತೋರಿಸುತ್ತಾನೆ). ನಂತರ ನನ್ನ ಕೈನ ಎಲ್ಲಾ ಬೆರಳುಗಳನ್ನು ಮುರಿದರು. ಆದರೆ ಮುಂದೆ ಜೈಲಿನ ವಾರ್ಡನ್ ಆಗಿದ್ದ ಕ್ಲೆನ್ಟನ್ ಡೂಫಿ ನನ್ನ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿ ಅನೇಕ ಪುಸ್ತಕಗಳನ್ನು ನನಗೆ ಓದಲು ನೀಡುತ್ತಿದ್ದರು. ಪ್ರತಿ ಪುಸ್ತಕಗಳ ಗೆರೆಗಳ ನಡುವೆ
ಇಣುಕುತ್ತಿದ್ದ ಆಲೋಚನೆಗಳನ್ನು ನಾನು ನನ್ನದಾಗಿಸಿಕೊಳ್ಳುತ್ತಿದ್ದೆ. ಜೈಲಿನಿಂದ ಬಿಡುಗಡೆಗೊಂಡ ನಂತರ ‘ಸೆವೆನ್ ಸ್ಟೆಪ್ ಫೌಂಡೇಷನ್’ ಎಂಬ ನನ್ನದೇ ಸಂಸ್ಥೆಯನ್ನು ಸ್ಥಾಪಿಸಿ ನನ್ನ ಸ್ಫೂರ್ತಿಯ ಮಾತುಗಳ ಮೂಲಕ ಜನರಲ್ಲಿ ಭರವಸೆ ತುಂಬತೊಡಗಿದೆ’. ಹೀಗೆ ಮಾತನಾಡುತ್ತಾ ಆಡುತ್ತಾ ಬಿಲ್ ಸ್ಯಾಂಡ್ ೧,೫೦೦ ವಿದ್ಯಾರ್ಥಿಗಳನ್ನು ನಗಿಸುತ್ತಾ ಅಳಿಸುತ್ತಾ ಅವರ ಬದುಕನ್ನು ಬದಲಾಯಿಸುವ ಪ್ರಯತ್ನದಲ್ಲಿ ಇರುತ್ತಾನೆ.

ತನ್ನ ಭಾಷಣದಲ್ಲಿ ಆತ ಹೇಳುವ ಮಾತುಗಳು ನಮ್ಮೆಲ್ಲರಿಗೂ ಸ್ಫೂರ್ತಿಯ, ಭರವಸೆಯ, ಪ್ರೇರಣೆಯ ಮಾತುಗಳೇ ಆಗಿವೆ. ಎಂಥದೇ ಪರಿಸ್ಥಿತಿಯಲ್ಲೂ ಋಣಾತ್ಮಕ ಮನೋಭಾವವನ್ನು ಸಕಾರಾತ್ಮಕ ಮನೋಭಾವವನ್ನಾಗಿ ಪರಿವರ್ತಿಸಿಕೊಳ್ಳುತ್ತ, ಕೈದಿಯಾಗಿದ್ದ ವ್ಯಕ್ತಿಯೊಬ್ಬ ಇಂದು ಬರಹಗಾರನಾಗಿ,
ಮೋಟಿವೇಷ ನಲ್ ಮಾತುಗಾರನಾಗಿ, ಆಪ್ತ ಸಲಹೆಗಾರನಾಗಿ ಬದಲಾಗಿದ್ದು ನಮ್ಮೆಲ್ಲರ ಎದುರಿನ ಜೀವಂತ ನಿದರ್ಶನವಾಗಿದೆ. ಹಾಗಿದ್ದರೆ, ಇಂಥದೇ ಬದಲಾವಣೆ ನಮ್ಮಿಂದ ಸಾಧ್ಯವಿಲ್ಲವೇ? ಜಸ್ಟ್ ನೀವೇ ಯೋಚಿಸಿ.

ಜಗತ್ತು ಅವಕಾಶಗಳಿಂದ ತುಂಬಿದೆ. ಮೇಲೆ ನಾನು ನೀಡಿರುವ ಉದಾಹರಣೆಗಿಂತ ಭಯಾನಕವಾದ ಸಮಸ್ಯೆ ನಮ್ಮೆಲ್ಲರಿಗೂ ಇಲ್ಲವೆಂದೇ ನಾನಂತೂ ಭಾವಿಸಿರುವೆ. ಮೇಲಿನ ಎಲ್ಲಾ ಉದಾಹರಣೆಗಳಲ್ಲೂ ವ್ಯಕ್ತಿಗಳು ಬದುಕಿನ ಅತಿಶೋಚ ನೀಯ ಪರಿಸ್ಥಿತಯನ್ನು ಮುಟ್ಟಿಬಂದವರಾಗಿದ್ದಾರೆ. ಅದು ಆರ್ಥಿಕತೆಯೇ ಇರಲಿ, ವೈಯಕ್ತಿಕ ವಿಚಾರವೇ ಇರಲಿ, ಅನೇಕ ಸೋಲುಗಳೇ ಇರಲಿ, ಕೈಕೊಟ್ಟ ಆರೋಗ್ಯವೇ ಆಗಿರಲಿ, ಏನೇ ಇರಲಿ, ಪುಟಿದೆದ್ದು ಮತ್ತೆ ಬದುಕನ್ನು ಜೀವಿಸಿದವ ರಾಗಿದ್ದಾರೆ. ಅವರದ್ದೇ ಭಯಗಳನ್ನು ಎದುರಿಸಿದ್ದಾರೆ, ಇಷ್ಟಾಗಿಯೂ ಗೆಲುವನ್ನು ಕಂಡಿದ್ದಾರೆ.

ಎಲ್ಲರಿಗೂ ಸಮಸ್ಯೆ ಬರಬೇಕು, ಇರಬೇಕು ಎಂದು ಹೇಳುವುದು ನನ್ನ ಉದ್ದೇಶವಲ್ಲ; ಸಮಸ್ಯೆಯು ಸವಾಲನ್ನು ಎದುರಿಸುವ ಅವಕಾಶದ ಬಾಗಿಲು ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದೇನೆ, ಅಷ್ಟೇ. ಸಮಸ್ಯೆಗಳು ನಮ್ಮನ್ನು ದೈಹಿಕವಾಗಿಯೂ, ಮಾನಸಿಕ ವಾಗಿಯೂ, ಅಧ್ಯಾತ್ಮಿಕ ವಾಗಿಯೂ ಗಟ್ಟಿಗೊಳಿಸುತ್ತವೆ.
ನಾನೊಂದು ಶಿಬಿರದಲ್ಲಿ ಭಾಗವಹಿಸಿದ್ದೆ, ಅದು ಮನೋ ವಿಜ್ಞಾನಕ್ಕೆ ಸಂಬಂಧಪಟ್ಟದ್ದು. ಅಲ್ಲಿ ನಮಗೆ ಅತ್ಯಂತ ಶಕ್ತಿಯುತ ವಾದ ತಂತ್ರಗಾರಿಕೆಯೊಂದನ್ನು ಹೇಳಿಕೊಟ್ಟಿದ್ದರು.

ಯಾವುದಾದರೂ ಕೆಲಸವನ್ನು ಮಾಡುವಾಗ ಭಯವಾದರೆ, ಹೀಗೆ ನಾನು ಹೇಳುವ ಮಂತ್ರವನ್ನು ಗಟ್ಟಿಯಾಗಿ ಹೇಳಿಕೊಂಡು ಬಿಡಿ- ‘ಏನಾಗುತ್ತೋ ನೋಡೇ ಬಿಡೋಣ’. ಈ ಮಂತ್ರವನ್ನು ಪದೇ ಪದೆ ಹೇಳುತ್ತಾ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ, ಅದ್ಭುತವಾದ ಫಲಿತಾಂಶವೇ ನಿಮ್ಮದಾಗುತ್ತದೆ. ಒಮ್ಮೆ
ಪ್ರಯತ್ನಿಸಿ ನೋಡಿ.

Leave a Reply

Your email address will not be published. Required fields are marked *

error: Content is protected !!