Saturday, 27th July 2024

ಪುಣ್ಯಭೂಮಿಯ ಕಾಯುವ ಸೇವಕ ಮೋದಿ

ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ಕೆಲ ವರ್ಷಗಳ ಹಿಂದೆ ಒಬ್ಬ ವ್ಯಕ್ತಿಗೆ ವೀಸಾ ನಿರಾಕರಿಸುತ್ತದೆ. ಆದರೆ ಎರಡು ದಶಕದ ಬಳಿಕ ಅದೇ ವ್ಯಕ್ತಿಗೆ ರೆಡ್ ಕಾರ್ಪೆಟ್ ಸ್ವಾಗತವನ್ನು ನೀಡುತ್ತದೆ. ಇಷ್ಟು ಮಾತ್ರವಲ್ಲದೇ, ಆ ವ್ಯಕ್ತಿ ನನ್ನ ಅತ್ಯಾಪ್ತ ಸ್ನೇಹಿತ ಎನ್ನುವ ಮಾತನ್ನು ಆ ದೇಶದ ಅಧ್ಯಕ್ಷ ಡೊನಾಲ್‌ಡ್‌ ಟ್ರಂಪ್ ಹೇಳುತ್ತಾರೆ. ಈ ರೀತಿ ವೀಸಾ ನಿರಾಕರಿಸಿದ್ದ ವ್ಯಕ್ತಿ ಮತ್ಯಾರು ಅಲ್ಲ ಅದು ಪ್ರಧಾನಿ ನರೇಂದ್ರ ಮೋದಿ. ಇಂದಿನ ಪ್ರಧಾನಿ ಮೋದಿ 70ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರ ಬಗ್ಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ವಿಶ್ವವಾಣಿಯೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನ ಪೂರ್ಣಪಾಠ ಇಲ್ಲಿದೆ.

*ಮೋದಿ ಅವರನ್ನು ನೀವು ಯಾವ ರೀತಿ ನೋಡುತ್ತೀರಿ?
ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಹೊಗಳುವುದಕ್ಕಾಗಿ ಈ ರೀತಿಯ ಮಾತನ್ನು ಹೇಳುತ್ತಿಲ್ಲ. ಆದರೆ ಅವರ ಕಾರ್ಯ ವೈಖರಿ, ಆಡಳಿತ ದಕ್ಷತೆ ಹಾಗೂ ಜನರ ಮೇಲೆ ಅವರಿಗೆ ಇರುವ ಕಾಳಜಿಯನ್ನು ನೋಡಿದರೆ, ಈ ರೀತಿಯ ವ್ಯಕ್ತಿಯನ್ನು ನಾನು ಕಂಡಿಲ್ಲ. ಮೋದಿ ಕೇವಲ ಒಬ್ಬ ವ್ಯಕ್ತಿಯಲ್ಲ. ಅದೊಂದು ಶಕ್ತಿ ಎಂದರೆ ಅತಿಶಯೋಕ್ತಿಯಲ್ಲ. ಅನೇಕ ಬಾರಿ ಅವರ ಕಾರ್ಯಶಕ್ತಿ ಹಾಗೂ ಮನೋಶಕ್ತಿಯನ್ನು ನೋಡಿದರೆ, ಭಗವಂತ ಈಶ್ವರನೇ ಭೂಮಿಗೆ ಕಳಿಸಿರುವ ವ್ಯಕ್ತಿ ಎನಿಸುತ್ತದೆ. ಭಾರತ ಪುಣ್ಯಭೂಮಿ ಯಾಗಿದ್ದು, ಈ ಪುಣ್ಯಭೂಮಿಯನ್ನು ಕಾಯಲು ಬಂದಿರುವ ದೂತ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಇದರಲ್ಲಿ ಆಂತರಿಕ ಹಾಗೂ ದೇಶದ ಹೊರ ಭಾಗದಿಂದಲೂ ಹಲವು ಸಮಸ್ಯೆಗಳಿದ್ದವು. ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವುದಕ್ಕಾಗಿ ತಾಯಿ ಭಾರತ ಮಾತೆಗೆ ದೇವರು ನೀಡಿರುವ ವರ ಎಂದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು. ದೇಶ ಆತಂಕದ ಪರಿಸ್ಥಿತಿಯಲ್ಲಿರುವಾಗ ಮೋದಿ ಅವರು ಪ್ರಧಾನಿ ಹುದ್ದೆಯನ್ನು ಏರಿದ್ದಾರೆ. ದೇಶಕ್ಕೆ ಹಲವು ಯೋಜನೆಗಳನ್ನು ನೀಡುವ ಮೂಲಕ ಮೋದಿ ಅವರು ನಮಗೆ ದೇವರ ರೀತಿ ಭಾಸವಾಗುತ್ತಾರೆ.

*ನೀವು ಮೊದಲು ಅವರನ್ನು ಹತ್ತಿರದಿಂದ ನೋಡಿದ್ದು ಯಾವಾಗ?
ನಾನು ಪ್ರಧಾನಿ ಮೋದಿ ಅವರನ್ನು ಹಲವು ದಶದಿಂದಲೂ ಗಮನಿಸುತ್ತಿದ್ದೇನೆ. ಗುಜರಾತ್ ಆಡಳಿತ, ಅಲ್ಲಿನ ಅಭಿವೃದ್ಧಿ ಪರ್ವದ ಬಗ್ಗೆ ಹಲವು ಬಾರಿ ನೋಡಿದ್ದೇನೆ. ಆದರೆ ಅವರನ್ನು ತುಂಬ ಹತ್ತಿರದಿಂದ ನೋಡಿದ್ದು, ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ವೇಳೆ. ಈ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಅವರು ನನಗೆ ಊಟದ ಪ್ರಭಾರಿಯಾಗಿ ಜವಾಬ್ದಾರಿಯನ್ನು ನೀಡಿದ್ದರು. ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದೀಜಿ, ಅಮಿತ್ ಶಾ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಹಾಜರಿದ್ದರು.

ಈ ವೇಳೆ ನಡೆದ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಪ್ರಧಾನಿಗಳಿಗೆ ಊಟ ಬಡಿಸುವುದು ಅಥವಾ ಅವರನ್ನು ಹತ್ತಿರದಿಂದ ನೋಡುವುದು ಎಂದರೆ ಖುಷಿಯ ಜತೆ ಜತೆಗೆ ಆತಂಕವೂ ಇರುತ್ತದೆ. ಇದೇ ರೀತಿಯ ಆತಂಕದಲ್ಲಿಯೇ
ಅಶೋಕ ಹೋಟೆಲ್‌ನ ವೇಟರ್ ಒಬ್ಬ, ಊಟ ಬಡಿಸುವಾಗ ಪ್ರಧಾನಿ ಅವರ ಶರ್ಟ್ ಮೇಲೆ ಸಾಂಬಾರ್ ಅನ್ನು ಚೆಲ್ಲಿದ. ಇದನ್ನು ನೋಡಿ ನಾವೆಲ್ಲ ಗಾಬರಿಗೊಂಡು, ಏನಾಗುವುದೋ ಎಂದು ಅಂದುಕೊಂಡೆವು. ಆದರೆ ಮೋದಿ ಅವರು ಮಾತ್ರ ಈ ಯಾವು ದನ್ನು ಲೆಕ್ಕಿಸಲಿಲ್ಲ. ಬದಲಿಗೆ ಶರ್ಟ್ ಮೇಲೆ ಸಾಂಬಾರು ಚೆಲ್ಲಿದೆ ಎನ್ನುವುದನ್ನು ತಲೆಕೆಡಿಸಿಕೊಳ್ಳಲಿಲ್ಲ. ಹಿಂದಿರುಗಿಯೂ
ನೋಡಲಿಲ್ಲ. ಇದೇ ರೀತಿಯಲ್ಲಿಯೇ ಊಟ ಮುಗಿಸಿದರು. ಇದಾದ ಬಳಿಕ ಎಲ್ಲ ವೇಟರ್‌ಗಳು ಬಂದು ಕ್ಷಮೆ ಕೇಳಿದರೂ, ಅದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಸಾಂಬಾರು ಬಿದ್ದ ಶರ್ಟ್‌ನಲ್ಲಿಯೇ ಕೆಲವರೊಂದಿಗೆ ಫೋಟೊ ತೆಗೆಸಿಕೊಂಡರು. ಬಳಿಕ ಪಕ್ಕದಲ್ಲಿದ್ದ ಕೋಣೆಗೆ ಹೋಗಿ, ಅಂಗಿ ಯನ್ನು ಬದಲಾಯಿಸಿಕೊಂಡು ಬಂದರು. ಆದರೆ ಪ್ರಧಾನಿ ಜಾಗದಲ್ಲಿ ಮೋದಿ ಅವರನ್ನು ಬಿಟ್ಟು ನಾವ್ಯಾರೇ ಇದ್ದರೂ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸುತ್ತಿದ್ದೇವು. ಪ್ರಧಾನಿ ಸ್ಥಾನ ಹೋಗಲಿ, ಜನಸಾಮಾನ್ಯರು ವೇಟರ್‌ಗಳ
ಮೇಲೆ ಹಾರಾಡುವುದು ಸಾಮಾನ್ಯ. ಆದರೆ ಪ್ರಧಾನಿ ಅವರು ಅದನ್ನ ಮಾಡಲಿಲ್ಲ. ಅವರ ವ್ಯಕ್ವಿತ್ವವೇ ಹಾಗೆ, ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ. ಬದಲಿಗೆ ಅವರಿಗೆ ಅವರ ಗುರಿ ಸ್ಪಷ್ಟವಾಗಿರುತ್ತದೆ. ಅದನ್ನು ಮುಟ್ಟುವ ಬಗ್ಗೆ ಮಾತ್ರ ಯೋಚನೆ
ಮಾಡುತ್ತಿರುತ್ತಾರೆ. ಅದನ್ನು ಬಿಟ್ಟು ಇತರ ವಿಚಾರದ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

*ಮೋದಿ ಆಡಳಿತ ಬಗ್ಗೆ ನಿಮ್ಮ ಅನಿಸಿಕೆ ಏನು?
ನನಗೆ 49 ವರ್ಷ. ನಾನು ಕಾಲೇಜು ದಿನಗಳಿಂದ ರಾಜಕೀಯಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದೇನೆ. ಆಗಿನಿಂದಲೂ ಇಂತಹ ಆಡಳಿತವನ್ನು ಕಂಡಿರಲಿಲ್ಲ. ಇಡೀ ವಿಶ್ವದಲ್ಲಿ ಭಾರತದ ಬಗ್ಗೆ ಮೊದಲು ಇದ್ದಂತಹ ಅಭಿಪ್ರಾಯವನ್ನು ಬದಲಾಯಿಸಿ, ಹೊಸ ಸಂಚಲನವನ್ನು ಮೂಡಿಸಿದ್ದಾರೆ. ಇಡೀ 130 ಕೋಟಿ ಜನರನ್ನು ಪ್ರತಿನಿಧಿಸುವ ಮೋದಿ ಅವರಿಗೆ ಎಲ್ಲರೂ ಸಹಕಾರ ನೀಡಿದರೆ, ಭಾರತವನ್ನು ವಿಶ್ವಗುರುವಾಗಿ ನೋಡಬೇಕು ಎಂದು ನಮ್ಮ ಸ್ವಾಮಿ ವಿವೇಕಾನಂದ ಅವರ ಕನಸು ನನಸಾಗುವುದರಲ್ಲಿ ಅನು ಮಾನವಿಲ್ಲ. ಇದಕ್ಕೆ ಮೋದೀಜಿ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯ ಬೇಕು. ಮೋದಿ ನೇತೃತ್ವದಲ್ಲಿ ಭಾರತದ ವಿಶ್ವಗುರು ಕನಸು ಖಂಡಿತ ನೆರವೇರುತ್ತದೆ. ಮೋದಿ ಅವರಿಗೆ 75 ವರ್ಷವಾಗುತ್ತಿದ್ದಂತೆ, ಎಲ್ಲಿ ಅವರು ರಾಜಕೀಯದಿಂದ ಹಿಂದೆ ಸರಿಯು ತ್ತಾರೋ ಎನ್ನುವ ಆತಂಕವಿದೆ. ಆ ರೀತಿ ಆಗದೇ, ಕನಿಷ್ಠ ಇನ್ನೂ 10 ವರ್ಷಗಳ ಕಾಲ ಅವರೇ ಈ ದೇಶದ ಪ್ರಧಾನಿಯಾಗಿ ನಮ್ಮನ್ನು ಮುನ್ನಡೆಸಬೇಕು. ದೇಶದ ಪ್ರಗತಿಯಲ್ಲಿ ಇನ್ನೂ ಏನೇನು ಅಭಿವೃದ್ಧಿಯಾಗಬೇಕು ಎಂದುಕೊಂಡಿದ್ದಾರೋ, ಅದೆಲ್ಲವನ್ನು ಮಾಡಿಯೇ ತೀರಬೇಕು ಎನ್ನುವುದು ನನ್ನ ಆಶಯ.

*ಮೋದಿ ಸರಕಾರಕ್ಕೆ 6 ವರ್ಷ ತುಂಬಿದೆ. ಈ ಬಗ್ಗೆ ಏನು ಹೇಳುತ್ತೀರಾ?
ದೇಶಕ್ಕೆ ಸ್ವಾತಂತ್ರ ಬಂದು 73 ವರ್ಷ ಆಗಿದೆ. ಎಷ್ಟರ ಮಟ್ಟಿಗೆ ದೇಶ ಪ್ರಗತಿ ಆಗಬೇಕಿತ್ತೋ ಅಷ್ಟರ ಮಟ್ಟಿಗೆ ಆಗಲಿಲ್ಲ. ಇದಕ್ಕೆ ಕಾರಣ ಯಾರು ಎಂದು ಹುಡುಕುವುದಕ್ಕೆ ಮೋದಿ ಅವರು ಹೋಗಲಿಲ್ಲ. ಬದಲಿಗೆ ಈಗಿನಿಂದ ದೇಶವನ್ನು ಯಾವ ರೀತಿ ಬದಲಾಯಿಸಬೇಕು ಎನ್ನುವತ್ತ ತಮ್ಮ ಗಮನ ಹರಿಸಿದರು. ದೇಶದಲ್ಲಿ ಕಳೆದ ಕೆಲ ವರ್ಷಗಳಿಂದ ಆಗುತ್ತಿರುವ ಬದಲಾವಣೆ ಗಳನ್ನು ಗಮನಿಸಿದರೆ, ಪ್ರಧಾನಿ ಸ್ಥಾನವನ್ನು ನರೇಂದ್ರ ಮೋದಿ ಅವರು ಅಲಂಕರಿಸಿದ ಬಳಿಕ ದೇಶ ಪ್ರತಿಯೊಂದು ವಿಚಾರ ದಲ್ಲಿಯೂ ಅಭಿವೃದ್ಧಿಯಾಗುತ್ತಿದೆ. ಕಳೆದ ಆರು ದಶಕಗಳಲ್ಲಿ ಆಗಬೇಕಿದ್ದ ಕೆಲಸಗಳು ಆಗಿವೆ ಎಂದರೂ ಅಚ್ಚರಿಯಿಲ್ಲ. ಅವರು ಬಂದ ಬಳಿಕ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ ಎನ್ನುವುದನ್ನು ಒಂದು ಗಂಟೆಯಲ್ಲಿ ಮುಗಿಸೋ ಪಟ್ಟಿ ಅಲ್ಲ ಇದು. ಪ್ರಧಾನಿಯಾಗುತ್ತಿದ್ದಂತೆ ಮಧ್ಯಮ ವರ್ಗ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆಂದೇ ಹಲವು ಯೋಜನೆ ಗಳನ್ನು ರೂಪಿಸಿದರು.

ಅವರು ಜಾರಿಗೆ ತಂದಿರುವ ಮತ್ತೊೊಂದು ಮಹತ್ವ ಯೋಜನೆಯೆಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ. ಈ ಹಿಂದೆ ಹಲವು ದಶಕಗಳಿಂದ ರೈತರಿಗೆ ಪಿಂಚಣಿ ನೀಡಬೇಕು ಎಂದು ಹಲವು ಸಂಘ ಸಂಸ್ಥೆಗಳು ಆಗ್ರಹಿಸಿದ್ದವು. ಆದರೆ ಇದು
ಸಾಧ್ಯವಾಗಿರಲಿಲ್ಲ. ಆದರೀಗ ರೈತರ ಖಾತೆಗೆ ಆರು ಸಾವಿರ ರು. ಸಹಾಯಧನ ನೀಡುವ ಮೂಲಕ ಪರೋಕ್ಷವಾಗಿ ಪಿಂಚಣಿ ಯನ್ನು ನೀಡುತ್ತಿದ್ದಾರೆ.

ಇದರೊಂದಿಗೆ ರೈತರಿಗೆ ಗೊಬ್ಬರದ ಕೊರತೆಯಾಗದಂತೆ ಬೇವು ಲೇಪಿತ ಯೂರಿಯಾ ಮಾಡಿರುವುದು ಅದ್ಭುತ ಕಾರ್ಯವಾಗಿದೆ.
ಜನ್‌ಧನ್ ಖಾತೆ, ಕರೋನಾ ಸಮಯದಲ್ಲಿ ಬಡವರಿಗೆ ಅವರ ಖಾತೆಗಳಿಗೆ ಹಣ ಪಾವತಿಸುವುದು. ಗ್ಯಾಸ್ ಸಬ್ಸಿಡಿ ಹೆಸರಿನಲ್ಲಿ ಹಿಂದಿನ ಸರಕಾರಗಳು ಕೋಟ್ಯಂತರ ರು.ಗಳನ್ನು ವಂಚಿಸಿದ್ದವು. ಆದರೆ ಮೋದೀಜಿ ಬಂದ ನಂತರ ಸಬ್ಸಿಡಿಯನ್ನು ಅವರ
ಖಾತೆಗಳಿಗೆ ನೆರವಾಗಿ ಹೋಗೋ ರೀತಿ ಮಾಡಿದರು. ಆರೋಗ್ಯದ ವಿಚಾರದಲ್ಲಿ, ಪಡಿತರ ಚೀಟಿ ಹೀಗೆ ಹಲವಾರು ಸಮಸ್ಯೆಗಳನ್ನು ಹತೋಟಿಗೆ ತಂದರು.

ಮತ್ತೆ ಚೀನಾ ಆಗಲೀ, ಪಾಕಿಸ್ತಾನವಾಗಲೀ ಭಾರತ ಅಂದರೆ ಹೆದರುವಂತೆ ದೇಶದ ರಕ್ಷಣಾ ವ್ಯವಸ್ಥೆಯನ್ನು ಸುಭದ್ರಗೊಳಿಸಿದರು. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ. ನಿಜವಾಗಲೂ ಉರಿ ಸಿನಿಮಾ ನೋಡುತ್ತಿದ್ದರೆ ಮೈಯಲ್ಲಾ ಜುಮ್ ಎನ್ನುತ್ತದೆ.
ಯಾವ ರೀತಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಬಂದಿದ್ದಾರೆ ಎಂದು. ಇದೆಲ್ಲ ದೇಶ ಹೆಮ್ಮೆ ಪಡುವ ವಿಷಯ.

ಅಂತಹ ಲೀಡರ್‌ಶಿಪ್ ಇರುವುದರಿಂದಲೇ ಅಲ್ವ ಆಗಿದ್ದು. ಮನಮೋಹನ್ ಸಿಂಗ್ ಅಥವಾ ಸೋನಿಯಾ ಗಾಂಧಿ ಅವರು ಇದೇ ಸ್ಥಾನದಲ್ಲಿ ಕೂತಿದ್ದರೆ ಏನು ಆಗುತ್ತಿರಲಿಲ್ಲ. ಮೋದಿ ಅವರ ಮುಂದಾಲೋಚನೆ, ನಾಯಕತ್ವ ಗುಣವಿರುವುದರಿಂದ ಇದೆಲ್ಲ ಆಗುತ್ತಿದೆ. ಯುವಕರಿಗೆ ಪ್ರಧಾನಿಗಳ ಮೇಲೆ ನಂಬಿಕೆ ಮತ್ತು ಅಭಿಮಾನ ಇರುವುದಕ್ಕೆ ಸಾಧ್ಯವಾಗುತ್ತದೆ.

*ಕೇಂದ್ರ ಕರೋನಾ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸುತ್ತಿದೆ?
ಇಡೀ ವಿಶ್ವಕ್ಕೆ ಕರೋನಾ ವ್ಯಾಪಿಸಿದಾಗ, ವಿಶ್ವದ ಎಲ್ಲ ನಾಯಕರು ಆರ್ಥಿಕತೆ ಹಾಗೂ ಆರೋಗ್ಯ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದರು. ವಿಶ್ವದ ದೊಡ್ಡಣ್ಣ ಅಮೆರಿಕ ಸಹ ಈ ಗೊಂದಲಕ್ಕೆ ಹೊರತಾಗಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆಯ ಬಗ್ಗೆೆ ತಲೆಕೆಡಿಸಿಕೊಳ್ಳದೇ, ದೇಶದ ಜನರ ಆರೋಗ್ಯವೇ ಮುಖ್ಯವೆಂದು ಲಾಕ್‌ಡೌನ್ ಮಾಡಿದರು. ಲಾಕ್‌ಡೌನ್ ಸಮಯದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ
ಉಚಿತ ದಿನಸಿ ನೀಡುವ ಕೆಲಸಕ್ಕೆ ಮುಂದಾದರು. ಮೊದಲು ಲಾಕ್‌ಡೌನ್ ಮಾಡಿದಾಗ, ಲಾಕ್‌ಡೌನ್ ಮಾಡಿ ತಪ್ಪು ಮಾಡಿದರು ಎಂದು ಕೆಲವರು ಮಾತನಾಡಿದರು. ಆದರೆ ಪ್ರಧಾನಿಗಳು ಜನರಲ್ಲಿ ಕರೋನಾ ಹಾಗೂ ಕರೋನಾದಿಂದ ದೂರವಿರಲು ಯಾವ ರೀತಿ ಬದುಕಬೇಕು ಎಂದು ಜಾಗೃತಿ ಮೂಡಿಸಲು ಹೇಳಿ ಲಾಕ್‌ಡೌನ್ ಮಾಡಿದರು.

ಇನ್ನು ತಮ್ಮ ಜೀವದ ಹಂಗನ್ನು ತೊರೆದು ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ದಾದಿಯರು, ಕರೋನಾದಿಂದ ಜನರನ್ನು ದೂರವಿರಲು ಹೋರಾಡುತ್ತಿದ್ದ ಪೊಲೀಸರು, ಪೌರ ಕಾರ್ಮಿಕರು ಹಾಗೂ ಮಾಧ್ಯಮದವರನ್ನು
ಕರೋನಾ ವಾರಿಯರ್‌ಸ್‌ ಎಂದು ಹೇಳಿದರು. ಅವರಿಗೆ ಸ್ಫೂರ್ತಿ ಕೊಡುವುದಕ್ಕೆ ಇಡೀ ದೇಶದಲ್ಲಿ ಒಂದು ದಿನ ಸಂಜೆ ಗಂಟೆ ಬಾರಿಸುವ ಮೂಲಕ ಆತ್ಮವಿಶ್ವಾಸ ತುಂಬಿದರು. ಕರೋನಾ ರೋಗಿಗಳಿಗೆ ವಿಶ್ವಾಸ ತುಂಬಲು ದೀಪ ಹಚ್ಚಿಸಿ, ನಿಮ್ಮ ಜತೆ ನಾವಿದ್ದೇವೆ ಎಂಬ ಸಂದೇಶ ಸಾರಿದರು.

ತದನಂತರ ವಿಚಾರಗಳಲ್ಲಿ ಮೋದಿ ಸರಕಾರ ಆರ್ಥಿಕವಾಗಿ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಇಂತಹ ಒಂದು ನಾಯಕತ್ವ ಗುಣ ಇರುವಂಥವರು ಮೋದೀಜಿ. ಸಂಘ ಪರಿವಾರದ ಹಿನ್ನೆಲೆಯಲ್ಲಿ ಪ್ರಚಾರಕರಾಗಿ ಬೆಳೆದಿರುವ ಒಂದು ವ್ಯಕ್ತಿತ್ವ, ಇಂದು
ಕೆಳಮಟ್ಟದಲ್ಲಿ ಏನೇನು ಅಂಶಗಳು ಇವೆ ಎಂದು ತಿಳಿದಿರುವ ವ್ಯಕ್ತಿ. ಜನರಿಗೆ ಯಾವ ಸಮಯದಲ್ಲಿ, ಯಾವ ವಿಚಾರದಲ್ಲಿ ಸ್ಪಂದಿಸಬೇಕೋ ಅರಿತಿರುವ ಮಹಾನ್ ಚೇತನ. ಇವತ್ತು ನಾವೆಲ್ಲಾ ನೆಮ್ಮದಿಯಿಂದ ಇದ್ದೇವೆ ಅಂದರೆ ಅದಕ್ಕೆ ಮೋದೀಜಿ ಕಾರಣ. ಇಂತಹ ಕರೋನಾ ಪರಿಸ್ಥಿತಿಯಲ್ಲಿ ಬೇರೆ ಯಾರಾದ್ರು ಇದ್ದಿದ್ದರೆ, ಮೊದಲು ದೇಶ ಬಿಟ್ಟು ಅವರು ಓಡಿಹೋಗಿರೋರು ಅಥವಾ ಅವರ ಕೊಠಡಿಯಲ್ಲೇ ಲಾಕ್‌ಡೌನ್ ಆಗಿರುತ್ತಿದ್ದರು.

*ಆತ್ಮನಿರ್ಭರದಿಂದಾದ ಪ್ರಯೋಜನವೇನು?
ಈ ಪ್ರಶ್ನೆಯನ್ನು ಈಗಲೇ ಕೇಳುವುದಕ್ಕಿಿಂತ ಇನ್ನೊೊಂದು ವರ್ಷ ಬಿಟ್ಟು ಕೇಳಿದರೆ, ನಾವು ಉತ್ತರಿಸುವ ಮೊದಲೇ ನಿಮಗೆ ಉತ್ತರ ಸಿಗುತ್ತದೆ. ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ಸ್ವಾವಲಂಬಿಯಾಗಿರಬೇಕು. ಸ್ವಾವಲಂಬಿ ದೇಶವಾಗಲೂ, ನಮ್ಮ ದೇಶ ಪ್ರತಿಕ್ಷೇತ್ರದಲ್ಲಿಯೂ ತನ್ನದೇ ಆದ ಸಾಧನೆ ಮಾಡಬೇಕು. ಇದಕ್ಕಾಗಿಯೇ ಮೊದಲಿಗೆ ಮೇಕ್ ಇನ್ ಇಂಡಿಯಾ ಮೂಲಕ
ದೇಶದ ವಸ್ತುಗಳನ್ನು ಉಪಯೋಗಿಸಿ, ನಿಮಗೆ ಯಾವ ಕೆಲಸದಲ್ಲಿ ಪ್ರಾವೀಣ್ಯತೆ ಇರುತ್ತದೆಯೋ, ಅದನ್ನು ನಮ್ಮ ದೇಶದಲ್ಲಿ ಪ್ರಯೋಗಿಸಿ ಎಂದಿದ್ದಾರೆ.

ಚೀನಿ ವಸ್ತುಗಳನ್ನು ಕಡೆಗಣಿಸಿ, ನಮ್ಮಲ್ಲೇ ಅವುಗಳನ್ನು ತಯಾರಿಸುವ ಪ್ರೋತ್ಸಾಹ ನೀಡಿದ್ದಾರೆ. ವ್ಯಾಪಾರ ವಾಹಿವಾಟಿನಲ್ಲಿ ಭಾರತ 130ರಲ್ಲಿ ಇದ್ದದ್ದು, 64ನೇ ಸ್ಥಾನಕ್ಕೆ ಬಂದಿದೆ. ಮೋದೀಜಿ ಇನ್ನೂ ಪ್ರಧಾನಿ ಹುದ್ದೆೆಯಲ್ಲಿ ಮುಂದುವರಿದರೆ ಮತ್ತಷ್ಟು ಅಭಿವೃದ್ಧಿ ಕಾಣುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಇದೀಗ ಆತ್ಮನಿರ್ಭರ ಭಾರತದಿಂದ ಇನ್ನಷ್ಟು ಸ್ವಾವಲಂಬಿ ಭಾರತದ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ.

*ಮೋದಿ ಸರಕಾರದಲ್ಲಿ ಸಾರಿಗೆ ವ್ಯವಸ್ಥೆಗೆ ಆಗಿರುವ ಅನುಕೂಲಗಳೇನು?

ಮೊದಲೇ ಹೇಳಿದಂತೆ ಪ್ರಧಾನಿ ಅವರು ದೇಶದ ಆಮೂಲಾಗ್ರ ಬದಲಾವಣೆಗೆ ಒತ್ತು ನೀಡಿದ್ದಾರೆ. ಸಾರಿಗೆ ಕ್ಷೇತ್ರ  ಅಭಿವೃದ್ಧಿಯಾಗಬೇಕಾದರೆ ಮೊದಲು ದೇಶದ ರಸ್ತೆಗಳು ಅಭಿವೃದ್ಧಿಯಾಗಬೇಕು ಎಂದು ನಂಬಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕೈಗೊಂಡ ಹಲವು ಯೋಜನೆಗಳನ್ನು ಅಪ್‌ಡೇಟ್ ಮಾಡಿ ಪುನರಾರಂ
ಭಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೋಗುವಾ ಟೋಲ್ ಗೇಟ್‌ಬಳಿ ಕಾಯುವುದನ್ನು ತಪ್ಪಿಸಲು ಫಾಸ್‌ಟ್‌ ಟ್ಯಾಗ್ ಆರಂಭಿಸಿ, ಸವಾರರಿಗೆ ಅನುಕೂಲ ಮಾಡಿದ್ದಾರೆ.

‘ನಿರ್ಭಯಾ’ ಯೋಜನೆ ಇದು ಮೋದಿ ಸರಕಾರದಿಂದ ಈ ವರ್ಷದಲ್ಲಿ ಜಾರಿಯಾಗಿದೆ. ದೇಶದಲ್ಲಿ ವಾಯುಮಾಲಿನ್ಯ  ನಿಯಂತ್ರಿಸುವ ಉದ್ದೇಶದಿಂದ ಪರಿಸರ ಜಾಗೃತಿಯಿಂದ ಎಲೆಕ್ಟ್ರಿಕ್ ಬಸ್‌ಗಳನ್ನು ಉತ್ತೇಜನ ನೀಡಲು ಕೇಂದ್ರ ಸರಕಾರ
ಸಜ್ಜಾಗಿದೆ. ಬೆಂಗಳೂರಿನಲ್ಲಿಯೂ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಹೆಚ್ಚಾಗಲಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಜನಿಸಿದ ನಂದೀಶ್ ರೆಡ್ಡಿ ಅವರು ರೈತರ ಕುಟುಂಬದಿಂದ ಬಂದ ನಾಯಕ. ದಿ. ಕೋಟೆ ಶ್ರೀನಿವಾಸ ರೆಡ್ಡಿ ದಂಪತಿಯ ಪುತ್ರ.  ಕೋಟೆ ಎನ್.ಎಸ್.ನಂದೀಶ್ ರೆಡ್ಡಿ ಅವರು 1999 ರಲ್ಲಿ ಯುವ ನಾಯಕರಾಗಿ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಅಂದಿನಿಂದ ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದರು. ಅವರು 2001 ರಿಂದ ಹಿರಿಯ ನಾಯಕರೊಂದಿಗೆ ತಳಮಟ್ಟದಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದರು ಮತ್ತು ಬೆಂಗಳೂರು ಪ್ರದೇಶದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ವಿಧಾನಪರಿಷತ್ ಚುನಾವಣೆಗಳಲ್ಲಿ ಪಕ್ಷಕ್ಕಾಗಿ ದುಡಿದರು.

ಅವರ ಕೊಡುಗೆಯನ್ನು ಪರಿಗಣಿಸಿ, ಪಕ್ಷವು ಅವರನ್ನು 2004ರ ಚುನಾವಣೆಗೆ ವರ್ತೂರು ಕ್ಷೇತ್ರದ ಉಸ್ತುವಾರಿ ವಹಿಸಿತು. 2008ರಲ್ಲಿ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವರಿಗೆ ಬಿಜೆಪಿ ಟಿಕೆಟ್ ನೀಡಿತು, ಇದರಲ್ಲಿ ಅವರು
ಮಾಜಿ ಸಚಿವ ಎ.ಕೃಷ್ಣಪ್ಪ ಅವರನ್ನು ಸೋಲಿಸಿ ಗೆದ್ದರು. ರಾಜಕೀಯ ಪ್ರವೇಶಕ್ಕೂ ಮೊದಲು ಸುಮಾರು ಎರಡು ದಶಕಗಳ ಕಾಲ ಆರ್‌ಎಸ್ ಎಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಅವರು ತಮ್ಮ ಕಾಲೇಜು ದಿನಗಳಲ್ಲಿ ಎಬಿವಿಪಿ ಸಂಘಟನೆಯಲ್ಲಿ ಬಹಳ
ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು.

ನೀವು ಬಿಎಂಟಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೇಲೆ ಯಾವ ಯಾವ ಯೋಜನೆಗಳನ್ನು ಜಾರಿಗೆ ತಂದಿದ್ದಿರಿ?
ಬಿಎಂಟಿಸಿಯಲ್ಲಿ ನಾನು ಜವಾಬ್ದಾರಿ ತೆಗೆದುಕೊಂಡ ಮೇಲೆ ನಮ್ಮ ದುದೃಷ್ಟ ಕರೋನಾ ಶುರು ಆಯ್ತು. ಅಂದುಕೊಂಡ ಮಟ್ಟಕ್ಕೆ ಯೋಜನೆಗಳನ್ನು ತರಲಿಕ್ಕೆ ಆಗಲಿಲ್ಲ. ಆದರೆ ಸತತವಾಗಿ ಚಾಲಕ ಮತ್ತು ನಿರ್ವಾಹಕರ ಸಮಸ್ಯೆಗಳನ್ನು ಬಗೆಹರಿಸುವ ುದರಿಂದ ಹಿಡಿದು ಜನರು ಕಾರು, ಬೈಕ್ ಬಿಟ್ಟು ಬಸ್ ಉಪಯೋಗಿಸುವ ಹಾಗೆ ಮಾಡುವುದು ನಮ್ಮ ಗುರಿ. ಮತ್ತೆ ಎಲೆಕ್ಟ್ರಿಕ್ ಬಸ್‌ಗಳು ಬರಬೇಕಿತ್ತು, ಈಗ ಅದು ತಡವಾಗುತ್ತಿದೆ. ನಮ್ಮ ಸಿಬ್ಬಂದಿಗೆ ನಿಮ್ಹಾಸ್ಸ್‌‌ನಲ್ಲಿ ಚಿಕಿತ್ಸೆಗೆ ಅನುಕೂಲ ಮಾಡಿ, ಒತ್ತಡ ನಿವಾರಣೆಗೆ ಎಂವೈಯುಗೆ 10-15 ದಿನಗಳಲ್ಲಿ ಸಹಿ ಮಾಡುತ್ತಿದ್ದೇವೆ.

ಕಳೆದ ವರ್ಷದಲ್ಲಿ ಸಾರಿಗೆಯಲ್ಲಿ 500 ಕೋಟಿಯಷ್ಟು ನಷ್ಟ ಇದೆ. ಅದಕ್ಕೂ ಮೊದಲಿನ ವರ್ಷದಲ್ಲಿ 390 ಕೋಟಿ, ಅದಕ್ಕೂ ಮುಂಚೆ 300 ಕೋಟಿ ಹೀಗೆ ಕಳೆದ 5-6 ವರ್ಷಗಳಿಂದ ಸತತವಾಗಿ ಬಿಎಂಟಿಸಿ ಸಂಸ್ಥೆ ನಷ್ಟದಲ್ಲಿ ಇದೆ. ನಮ್ಮ ಟಾರ್ಗೆಟ್ ಈ ವರ್ಷದಲ್ಲಿ ಲಾಭ ಮತ್ತು ನಷ್ಟಗಳನ್ನು ಸರಿದೂಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದರ ಜತೆಗೆ ಒಂದು ಇಂಡಿಯನ್ ಸಾಫ್‌ಟ್ ‌‌ವೇರ್ ಕಂಪನಿ ಜತೆ ಟೈಅಪ್ ಆಗುತ್ತಿದ್ದೇವೆ. ನಮ್ಮ ಇಲಾಖೆಯಲ್ಲಿ ಹಿಂದೆ ತುಂಬ ಸೋರಿಕೆಯಾಗಿದೆ. ಅದೆಲ್ಲವನ್ನು ಈಗ ತಡೆ ಯುವ ನಿಟ್ಟಿನಲ್ಲಿ ಎಲ್ಲವನ್ನು ಕಂಪ್ಯೂಟರ್ ಮಯ ಮಾಡಲು ಮುಂದಾಗುತ್ತಿದ್ದೇವೆ. 2020ರಲ್ಲೇ ಇದನ್ನೆಲ್ಲ ಅಭಿವೃದ್ಧಿ ಮಾಡು ತ್ತೇವೆ. ಸೋರಿಕೆಯನ್ನು ಸೊನ್ನೆ ಮಾಡದೆ ಬಿಡುವುದಿಲ್ಲ. ಇದರಿಂದಲೇ ಇಲಾಖೆಗೆ ನಷ್ಟವಾಗುತ್ತಿರುವುದು. ಶೀಘ್ರ ಇದನ್ನೆಲ್ಲ ಖಂಡಿತಾ ಸರಿಪಡಿಸುತ್ತೇವೆ.

*ಮೋದಿ ಕೇವಲ ಒಬ್ಬ ವ್ಯಕ್ತಿಯಲ್ಲ. ಅವರೊಂದು ಶಕ್ತಿ, ಭಗವಂತ ಈಶ್ವರನೇ ಭೂಮಿಗೆ ಕಳಿಸಿರುವ ಮಹಾನ್ ಚೇತನ
*ದೇಶದ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವುದಕ್ಕಾಗಿ ತಾಯಿ ಭಾರತಿಗೆ ದೇವರು ನೀಡುವ ವರ ಎಂದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ

*ವಿಶ್ವದಲ್ಲಿ ಭಾರತದ ಬಗ್ಗೆ ಮೊದಲು ಇದ್ದಂತಹ ಅಭಿಪ್ರಾಯವನ್ನು ಬದಲಾಯಿಸಿ, ಹೊಸ ಸಂಚಲನವನ್ನು ಮೂಡಿಸಿದ ಮಹಾನ್ ನಾಯಕ

*ಪ್ರಧಾನಿ ಸ್ಥಾನವನ್ನು ನರೇಂದ್ರ ಮೋದಿ ಅವರು ಅಲಂಕರಿಸಿದ ಬಳಿಕ ದೇಶ ಪ್ರತಿಯೊಂದು ವಿಚಾರದಲ್ಲಿಯೂ ಅಭಿವೃದ್ಧಿ

*ಮೋದಿ ಅವರ ಮುಂದಾಲೋಚನೆ, ನಾಯಕತ್ವ ಗುಣ ಇವೆಲ್ಲ ಯುವಕರಿಗೆ ಪ್ರಧಾನಿಗಳ ಮೇಲೆ ನಂಬಿಕೆ ಮತ್ತು ಅಭಿಮಾನ ಇರುವುದಕ್ಕೆ ಸಾಧ್ಯ

*ಚೀನಾ ಆಗಲೀ, ಪಾಕಿಸ್ತಾನವಾಗಲೀ ಭಾರತ ಅಂದರೆ ಹೆದರುವಂತೆ ದೇಶದ ರಕ್ಷಣಾ ವ್ಯವಸ್ಥೆಯನ್ನು ಸುಭದ್ರಗೊಳಿಸುವಲ್ಲಿ
ಯಶಸ್ವಿ

*ಸಾರಿಗೆ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಮೊದಲು ದೇಶದ ರಸ್ತೆಗಳು ಅಭಿವೃದ್ಧಿಯಾಗಬೇಕು ಎಂದು ನಂಬಿರುವ ಮೋದೀಜಿ

Leave a Reply

Your email address will not be published. Required fields are marked *

error: Content is protected !!