Sunday, 8th September 2024

ಅಮೆರಿಕದ ಕಾಡಿನ ಕಾಲುದಾರಿಗಳು

ಶಿಶಿರಕಾಲ

shishirh@gmail.com

ಹೊರಗಿನವರಿಗೆ ಅಮೆರಿಕ ಎಂದಾಕ್ಷಣ ಕಲ್ಪನೆಯಲ್ಲಿ ಎತ್ತೆತ್ತರದ ಕಟ್ಟಡಗಳು, ಕಾರುಗಳೇ ತುಂಬಿರುವ ಅತಿ ವೇಗದ ಹೈವೇಗಳು ಇತ್ಯಾದಿಗಳು ಮೂರ್ತ ರೂಪ ಪಡೆಯುತ್ತವೆ. ಸಾಮಾನ್ಯವಾಗಿ ಅಮೆರಿಕಗೆ ಪ್ರವಾಸ ಬಂದವರ ಫೋಟೋಗಳೆಂದರೆ ನ್ಯೂಯೊರ್ಕ್, ಕ್ಯಾಲಿ-ರ್ನಿಯಾ ಮೊದಲಾದ ನಗರಗಳ ಭವ್ಯ, ಗಗನ ಚುಂಬಿ ಕಟ್ಟಡಗಳು, ಇನ್ನೊಂದಿಷ್ಟು ಪ್ರವಾಸೀ ತಾಣಗಳು, ಸ್ಟ್ಯಾಚ್ಯು ಒಫ್ ಲಿಬರ್ಟಿ ಇತ್ಯಾದಿ. ಇಲ್ಲಿಗೆ ಪ್ರವಾಸಕ್ಕೆಂದು ಬರುವ ಪ್ರತಿ ಯೊಬ್ಬರ ಪಟ್ಟಿಯಲ್ಲಿ ಇರುವ ಜಾಗಗಳೆಲ್ಲ ಬಹುತೇಕ ಒಂದೇ ಇರುತ್ತವೆ.

ಭಾರತದಿಂದ ಪ್ರವಾಸಕ್ಕೆ ಬರುವ ಸಂಬಂಽಕರು, ಸ್ನೇಹಿತರು ನಯಾಗರ ಫಾಲ್ಸ್ ಒಂದನ್ನು ನೋಡಲೇಬೇಕು ಎಂದು ಹೇಳುವುದಿದೆ. ಭಾರತಕ್ಕೆ ಬರುವ ವಿದೇಶಿ ಪ್ರವಾಸಿರು ಹೇಗೆ ತಾಜ್ ಮಹಲ್‌ಗೆ ಹೋಗಬೇಕೆನ್ನುತ್ತಾರೆಯೋ ಹಾಗೆಯೇ ಇಲ್ಲಿಗೆ ಬಂದವರೆಲ್ಲ ನಯಾಗರಾ ಜಲಪಾತ ನೋಡಬೇಕು. ನೀವು ನಂಬುತ್ತೀರೋ ಇಲ್ಲವೋ, ಹೀಗೆ ಮನೆಗೆ ಬಂದ ನೆಂಟರನ್ನು ಕರೆದುಕೊಂಡೇ ಎಂಟು ಬಾರಿ ನಯಾಗರಾ ಫಾಲ್ಸ್ ಗೆ ಹೋಗಿಬಂದಿದ್ದೇನೆ. ಅಂತಹ ಬಹುಜನಪ್ರಿಯ ಪ್ರವಾಸಿತಾಣಗಳನ್ನೆಲ್ಲ ಮೂರ್ನಾಲ್ಕು ಬಾರಿ ಬಂದ ಪ್ರವಾಸಿಗರ ಜೊತೆಯಲ್ಲಿಯೇ ಸುತ್ತಿದ್ದು ಇದೆ.

ಪ್ರವಾಸಿಯೊಬ್ಬ ಇನ್ನೊಂದು ದೇಶವನ್ನು ನೋಡುವ ಆಯಾಮವೇ ಬೇರೆ. ಪ್ರತೀ ದೇಶ-ಪ್ರದೇಶದಲ್ಲಿಯೂ ಹೊರಗಿನ ಪ್ರವಾಸಿಗರು ನೋಡುವ ಒಂದಿಷ್ಟು ಸ್ಟ್ಯಾಂಡರ್ಡ್ ಜಾಗಗಳಿರುತ್ತವೆ. ಇದರ ಹೊರತಾದ ದೇಶ, ವ್ಯವಸ್ಥೆ – ಅಲ್ಲಿಯೇ ನೆಲೆಸಿದಲ್ಲಿ, ಕಾಲ ಕಳೆದಂತೆ ನಮ್ಮೆದುರು ತೆರೆದುಕೊಳ್ಳುತ್ತದೆ. ಅಮೆರಿಕ ಎಂದರೆ ಸ್ಕೈಲೈನ್ ಬಿಲ್ಡಿಂಗುಗಳು, ಆಧುನಿಕ ನಗರಗಳು, ಸೂಪರ್ – ಹೈವೇಗಳಷ್ಟೇ ಅಲ್ಲ ಎಂಬುದೇ ಬಹುತೇಕ ಹೊರಗಿನವರಿಗೆ ಗೊತ್ತೇ ಆಗುವುದಿಲ್ಲ.

ಇಲ್ಲಿ ವರ್ಷಕ್ಕೆ ಹಲವು ಫೂಟ್ ಹಿಮ ಬೀಳುವ ಪ್ರದೇಶಗಳಿವೆ, ಒಂದು ಹುಂಡು ಮಳೆಯಾಗದ ರಣ ಮರುಭೂಮಿಗಳಿವೆ, ದಟ್ಟ ಹರಿದ್ವರ್ಣ ಕಾಡುಗಳಿವೆ, ಕರಾವಳಿ, ಮಲೆನಾಡು, ಬಯಲು ಸೀಮೆಗಳಿವೆ. ಜಗತ್ತಿನಲ್ಲಿ ಎಂತೆಂತ ವಾತಾವರಣ, ಪರಿಸ್ಥಿತಿಗಳಿವೆಯೋ ಅವೆಲ್ಲವೂ ಅಮೆರಿಕದ ನೆಲದಲ್ಲಿ ಸಿಗುತ್ತವೆ. ಅಷ್ಟೇ ಅಲ್ಲ, ಇನ್ನುವರೆಗೂ ಮನುಷ್ಯ ಕಾಲೇ ಇಡದ ಅದೆಷ್ಟೋ ಜಾಗಗಳು ಅಮೆರಿಕದಲ್ಲಿವೆ. ವಿಸ್ತಾರದಲ್ಲಿ ಅಮೆರಿಕ ಭಾರತಕ್ಕಿಂತ ಮೂರು ಪಟ್ಟು ದೊಡ್ಡದು. ಆದರೆ ಜನಸಂಖ್ಯೆ ಭಾರತದ ಕಾಲು ಭಾಗದಷ್ಟು. ಈ ಲೆಕ್ಕದಿಂದಲೇ ಅಮೆರಿಕದಲ್ಲಿ ಮನುಷ್ಯವಾಸವಿರದ ಜಾಗ ಎಷ್ಟಿರಬಹುದೆಂಬುದನ್ನು
ಅಂದಾಜಿಸಿಕೊಳ್ಳಬಹುದು.

ಅಮೆರಿಕದಲ್ಲಿ ಜನರು ರೈಲಿನಲ್ಲಿ ಪ್ರಯಾಣಿಸುವುದು ತೀರಾ ಕಡಿಮೆ. ಇಲ್ಲಿ ದೇಶದ ಉದ್ದಗಲಕ್ಕೂ ರೈಲ್ವೆ ಹಳಿಗಳಿದ್ದರೂ ಅವುಗಳಲ್ಲ ಓಡಾಡುವುದು ಹೆಚ್ಚಾಗಿ ಗೂq ಟ್ರೈನ್ ಗಳು. ಅದೆಷ್ಟೋ ದೊಡ್ಡ ನಗರಗಳ ಮಧ್ಯೆ ಜನರ ಓಡಾಟಕ್ಕೆ ರೈಲುಗಳೇ ಇಲ್ಲ. ಒಂದು ವೇಳೆ ಇದ್ದರೂ ರೈಲು ಪ್ರಯಾಣ
ವಿಮಾನ ಪ್ರಯಾಣಕ್ಕಿಂತ ತುಟ್ಟಿ. ಬಸ್ ವ್ಯವಸ್ಥೆಯೂ ಅಷ್ಟಕ್ಕಷ್ಟೇ. ಇಲ್ಲಿ ಪ್ರಯಾಣವೆಂದರೆ ಒಂದೋ ಕಾರ್ ಡ್ರೈವ್ ಮಾಡಬೇಕು, ಇಲ್ಲವೇ ವಿಮಾನ ವೇರಿ ಹಾರಿ ತಲುಪಬೇಕು. ಒಂದೆರಡು ಸಾವಿರ ಕಿಲೋಮೀಟರ್ ಕಾರು ಡ್ರೈವ್ ಮಾಡಿಕೊಂಡು ಹೋಗುವುದು ಇಲ್ಲಿ ತೀರಾ ಸಾಮಾನ್ಯ. ಅದಕ್ಕೆ ಬೇಕಾದ ಪ್ರಯಾಣದ ಪೂರ್ಣ ವ್ಯವಸ್ಥೆಯೇ ಇದೆ.

ಇಡೀ ದೇಶವನ್ನು ಒಳ್ಳೆಯ ರಸ್ತೆಗಳು ಒಂದಾಗಿ ಜೋಡಿಸುತ್ತವೆ. ಇದೆಲ್ಲದಕ್ಕೆ ವ್ಯತಿರಿಕ್ತವೆನಿಸುವ ಇನ್ನೊಂದು ಮಾರ್ಗ ವ್ಯವಸ್ಥೆ ಇಲ್ಲಿದೆ. ಅದೆಂದರೆ ಇಲ್ಲಿನ ಕಾಲುದಾರಿಗಳು. ಎಲ್ಲ ಸೇರಿಸಿದರೆ ಸುಮಾರು ಒಂದೂವರೆ ಲಕ್ಷ ಕಿಲೋಮೀಟರ್ ಉದ್ದವಾಗುವಷ್ಟು ಕಾಲುದಾರಿಗಳು ಅಮೆರಿಕದ ಉದ್ದಗಲಕ್ಕೆ ಚಾಚಿಕೊಂಡಿವೆ. ಇವುಗಳಲ್ಲಿ ಬಹುತೇಕ – ಬಹಳ ಹಿಂದೆ ಇಲ್ಲಿನ ಮೂಲ ನಿವಾಸಿಗಳು (ರೆಡ್ ಇಂಡಿಯ) ವ್ಯಾಪಾರ ವ್ಯವಹಾರ, ಬೇಟೆ ಮೊದಲಾದ ಓಡಾಟದಕ್ಕೆ ಮಾಡಿಕೊಂಡ ಕಾಲುದಾರಿಗಳು. ಒಂದು ಕಾಲದಲ್ಲಿ ಅಂದಿನ ದೊಡ್ಡ, ಮುಖ್ಯ ಊರುಗಳನ್ನು ಜೋಡಿಸುವ ವ್ಯವಸ್ಥೆ ಇದಾಗಿತ್ತು. ಜನರು
ನಡೆದು, ಪ್ರಾಣಿಯನ್ನು ಅವಲಂಬಿಸಿ ಒಂದು ಜಾಗದಿಂದ ಇನ್ನೊಂದಕ್ಕೆ ಈ ಮಾರ್ಗವನ್ನು ಅನುಸರಿಸಿ ಪ್ರಯಾಣಿಸುತ್ತಿದ್ದರು.

ಕ್ರಮೇಣ ವಾಹನ, ರಸ್ತೆಯ ವ್ಯವಸ್ಥೆ ನಿರ್ಮಾಣಗೊಂಡ ನಂತರ ಜನರ ವ್ಯಾವಹಾರಿಕ, ದೈನಂದಿನ ಓಡಾಟಗಳು ರಸ್ತೆಗಿಳಿದವು. ಆದರೆ ಅಮೆರಿಕನ್ನರು ಈ ಕಾಲು ದಾರಿಯನ್ನು ಮರೆಯಲಿಲ್ಲ, ಕಡೆಗಣಿಸಲಿಲ್ಲ. ಬದಲಿಗೆ ನಡೆಯಲೆಂದೇ ಈ ದಾರಿಗಳನ್ನು ಹಾಗೆಯೇ ಇಟ್ಟುಕೊಂಡರು. ಅಲ್ಲಿ ನಡೆಯಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡರು. ಈಗ ಈ ಕಾಲುದಾರಿಗಳೆಂದರೆ ಅದು ಬಳಕೆಯಾಗುವುದು ನಡೆದು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ತಲುಪಲು ಅಲ್ಲ. ಬದಲಿಗೆ ನಡೆಯಬೇಕೆಂಬವರಿಗೆ ನಡೆಯಲು ಇರುವ ವ್ಯವಸ್ಥೆಯಾದೆ. ಇಲ್ಲಿ ನಡೆಯುವವರದ್ದು ನಡೆಯುವುದೇ ಉದ್ದೇಶ.

ಬಹಳ ಹಿಂದೆ ಆದಿ ಶಂಕರರು ಕಾಲ್ನಡಿಗೆಯಲ್ಲಿಯೇ ಭಾರತವನ್ನೆಲ್ಲ ಸುತ್ತಿದ್ದರು ಎಂದು ಕೇಳಿದ್ದೇವೆ. ಆದರೆ ಇಂದು ಕಾಲ್ನಡಿಗೆಯಲ್ಲಿಯೇ ಭಾರತವನ್ನು ಸಂಕ್ರಮಿಸುವುದು ಸುಲಭವಲ್ಲ. ನಮ್ಮಲ್ಲಿಯೂ ಕಾಲುದಾರಿಗಳಿದ್ದವು. ಆದರೆ ಅವು ಕ್ರಮೇಣ ರಸ್ತೆಗಳಾಗಿ, ಹೈವೆಗಳಾಗಿವೆ. ಈಗ ದಾರಿ ನಡೆಯದೇ ಮುಚ್ಚಿ ಹೋಗಿದೆ. ಆದರೆ ಅಮೆರಿಕದಲ್ಲಿ ಹಾಗಲ್ಲ. ಇಂದಿಗೂ ಅದೆಷ್ಟೋ ಕಾಲುದಾರಿಗಳನ್ನು ಇಲ್ಲಿ ಕಾಪಾಡಿಕೊಳ್ಳಲಾಗಿದೆ. ಅಮೆರಿಕದ ಕಾಲುದಾರಿಗಳಲ್ಲಿಯೇ ಅತ್ಯಂತ ಉದ್ದವಾದ zಂದರೆ ಅಪಾಲಚನ್ ಕಾಲುದಾರಿ (Appalachian Trail Conservancy). ಇದರ ಉದ್ದ ಬರೋಬ್ಬರಿ ಮೂರುವರೆ ಸಾವಿರ ಕಿಲೋಮೀಟರ್. ಯಾವುದೇ ಊರೊಳಗೆ ಹೊಕ್ಕದೆ ನೇರ ನಡೆಯುತ್ತಿದ್ದರೆ ತಿಂಗಳಾನುಗಟ್ಟಲೆ ಹೋಗಿಮುಟ್ಟದಷ್ಟು ದೂರದ ಕಾಲು ದಾರಿ. ಅಮೆರಿಕದ ದಕ್ಷಿಣಕ್ಕಿರುವ ಜಾರ್ಜಿಯಾ ರಾಜ್ಯದಿಂದ ಉತ್ತರದ ಮೇನ್ ರಾಜ್ಯದವರೆಗೆ ಚಾಚಿರುವ ಈ ಕಾಲುದಾರಿ ಹೈಕಿಂಗ್ ಮಾಡುವವರ ಮಟ್ಟಿಗೆ ಮೌಂಟ್ ಎವರೆ ಇದ್ದಂತೆ.

ಇಷ್ಟೊಂದು ದೂರ ಒಂದೇ ಹೊಡೆತಕ್ಕೆ ನಡಿಯುವುದೆಂದರೆ ಸಾಧಾರಣದಂತವರಿಗೆ ಸಾಧ್ಯವೇ ಇಲ್ಲ. ಈ ಕಾಡಿನ ಕಾಲುದಾರಿ ಹಲವು ಊರುಗಳ ಹತ್ತಿರದಿಂದ ಹಾದು ಹೋಗುತ್ತದೆ. ಸಾಮಾನ್ಯವಾಗಿ ಇಂತಹ ಒಂದು ಊರಿಗೆ ತಲುಪಿ, ಅಲ್ಲಿಂದ ಈ ಕಾಲು ದಾರಿ ಹಿಡಿದು ಇನ್ನೊಂದು ಊರಿನ ಹತ್ತಿರ ವಾಗಿ ನಡಿಗೆ ಮುಗಿಸುವವರೇ ಜಾಸ್ತಿ. ಸಾಮಾನ್ಯರಿಗೆ ಒಂದೇ ಸಲಕ್ಕೆ ಈ ಕಾಲುದಾರಿಯನ್ನು ಮುಗಿಸಲಿಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಬಹುತೇಕರು ಪ್ರತೀ ವರ್ಷ ತುಂಡು ತುಂಡು ಸಾಗಿ ವರ್ಷಗಳ ತರುವಾಯ ನಡಿಗೆಯನ್ನು ಪೂರೈಸುತ್ತಾರೆ, ದಾಖಲಿಸಿಕೊಳ್ಳುತ್ತಾರೆ.

ಈ ಕಾಲ್ನಡಿಗೆಯನ್ನು ಪೂರ್ಣ ಮೂರುವರೆ ಸಾವಿರ ಕಿಲೋಮೀಟರ್ ಒಂದೇ ಜಪಾಟಿಗೆ ಮುಗಿಸುವ ಪರಮ ಸಾಹಸಿಗಳಿಗೇನು ಕೊರತೆಯಿಲ್ಲ. ಪ್ರತೀ ವರ್ಷ ಸುಮಾರು ಮೂರರಿಂದ ನಾಲ್ಕು ಸಾವಿರ ಮಂದಿ ಈ ಸಾಹಸಕ್ಕೆ ಮುಂದಾಗುತ್ತಾರೆ. ಇದೇನು ಕೂತವನು ಎದ್ದು ನಡೆಯಲು ಹೊರಟಂತಲ್ಲ ವಲ್ಲ. ಇದಕ್ಕೆ ಬೇಕಾದ ದೈಹಿಕ, ಮಾನಸಿಕ ತಯಾರಿಗಳಾಗಬೇಕು. ಎಲ್ಲಿಯೂ ನಿಲ್ಲದೆ ಪ್ರತೀ ದಿನ ನಡೆದರೆ ಸುಮಾರು ಮೂರರಿಂದ ನಾಲ್ಕು ತಿಂಗಳು ಬೇಕು. ಅಷ್ಟು ಕಾಲಕ್ಕೆ ಬೇಕಾಗುವ ಆಹಾರ, ಹಣ ಇದೆಲ್ಲದರ ವ್ಯವಸ್ಥೆ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲ, ಹೀಗೆ ನಡೆಯುವಾಗ ಯಾವುದೇ ದುಡಿಮೆ ಇರುವು ದಿಲ್ಲ. ಹಾಗಾಗಿ ಆರ್ಥಿಕ ಅವಲಂಬನೆಯಿದ್ದರೆ ಅದನ್ನೂ ಹೊಂದಿಸಿಕೊಳ್ಳಬೇಕು. ಹೀಗೆ ಹೊರಡುವ ಅದೆಷ್ಟೋ ಮಂದಿ ತಾವಿರುವ ಅಪಾರ್ಟ್‌ಮೆಂಟು ಗಳನ್ನು, ಬಾಡಿಗೆ ಮನೆಯನ್ನು ಖಾಲಿ ಮಾಡಿ ಹೋಗುವುದಿದೆ. ಏಕೆಂದರೆ ಅಷ್ಟು ಕಾಲ ಅನವಶ್ಯ ಬಾಡಿಗೆ ಕಟ್ಟಬೇಕು.

ನಡೆಯಲೆಂದೇ ಕೆಲಸಕ್ಕೆ ರಿಸೈನ್ ಮಾಡುವವರಿಗೇನೂ ಕಮ್ಮಿಯಿಲ್ಲ. ಇಷ್ಟೆಲ್ಲ ತಯಾರಿ, ಆಧುನಿಕ ಸಲಕರಣೆಗಳು ಇತ್ಯಾದಿ ಹೊಂದಿದ್ದರೂ ಈ ಕಾಡಿನ ಹಾದಿ ಸುಲಭವಲ್ಲ. ವಿಷಪೂರಿತ ಹಾವುಗಳು, ಕರಡಿ, ಬೆಟ್ಟದ ಸಿಂಹ, ಇನ್ನಿತರ ವನ್ಯಪ್ರಾಣಿಗಳು, ರಣ ಬಿಸಿಲು, ಹಿಮ, -೨೫’ಸೆ. ನಷ್ಟು ಚಳಿ, ಕಾಡಿ ನಲ್ಲಿಯೇ ಮಲಗಬೇಕು ಇತ್ಯಾದಿ. ಈ ಎಲ್ಲ ಟ್ರೈಲ್‌ಗಳಲ್ಲಿ ಅಲ್ಲಲ್ಲಿ ನೀರಿನ ವ್ಯವಸ್ಥೆ, ತಂಗಲು, ರಾತ್ರಿ ಮಲಗಲು ವ್ಯವಸ್ಥೆಯನ್ನು ಸರಕಾರವೇ ಮಾಡಿ ಟ್ಟಿರುತ್ತದೆ. ಸಾಮಾನ್ಯವಾಗಿ ಇಂತಹ ವ್ಯವಸ್ಥೆಗಳು ಕಾಡಿನ ದಾರಿ ಊರಿಗೆ ಹತ್ತಿರವಾಗುವಲ್ಲಿ ಇರುತ್ತವೆ. ಇಂತಹ ನಿಗದಿತ ಜಾಗಗಳು ಸಾಮಾನ್ಯ ವಾಗಿ ನೂರು ಇನ್ನೂರು ಕಿಲೋಮೀಟರಿಗೆ ಒಂದೆರಡಿರುತ್ತವೆ. ಅಲ್ಲಿಯೇ ಒಂದೆರಡು ದಿನ ಸುಧಾರಿಸಿಕೊಳ್ಳುವವರಿರುತ್ತಾರೆ. ಇನ್ನು ಕೆಲವರು ಅಲ್ಲಿಯೇ ಹತ್ತಿರದಲ್ಲಿರುವ ಊರಿನ ಅಂಗಡಿಗಳಿಗೆ ಹೋಗಿ ಬೇಕಾದದ್ದನ್ನು ಖರೀದಿಸಿ ಮುಂದುವರಿಯುವವರಿದ್ದಾರೆ.

ಈ ಕಾಡು ದಾರಿ ಗಳೆಂದರೆ ಅಲ್ಲಿ ಮೊಬೈಲ್ ನೆಟ್ವರ್ಕ್ ಎಡೆ ಇರುವುದಿಲ್ಲ. ಕೆಲವೊಮ್ಮೆ ನೂರಿನ್ನೂರು ಕಿಲೋಮೀಟರ್ ಹೋದರು ಮೊಬೈಲ್‌ನಲ್ಲಿ
ಒಮ್ಮೆಯೂ ಒಂದು ಕಡ್ಡಿಯಷ್ಟು ಸಿಗ್ನಲ್ ಕೂಡ ಸಿಗುವುದಿಲ್ಲ. ಇಂತಹ ಜಾಗದಲ್ಲಿ ನಿಗದಿತ ಕಾಲುದಾರಿಯಿದ್ದರೂ ದಾರಿ ತಪ್ಪುವ ಸಾಧ್ಯತೆಗಳಿವೆ.
ಈಗ ಕೆಲವು ವರ್ಷದ ಹಿಂದೆ ೬೬ ವರ್ಷದ ಗೆರಿ ಲಾರ್ಗೆಯ್ ಎಂಬ ಅಮೆರಿಕನ್ ಅಪಾಲಚಾನ್ ಕಾಲುದಾರಿಯಲ್ಲಿ ನಡೆಯುತ್ತಿದ್ದವಳು ಕಾಣೆಯಾಗಿದ್ದಾಳೆ ಎಂಬ ದೊಡ್ಡ ಸುದ್ದಿಯಾಯಿತು. ಸಾಮಾನ್ಯವಾಗಿ ಇಲ್ಲಿ ದಾರಿ ತಪ್ಪಿದವರು ಇನ್ನೆಲ್ಲಿಗೋ ಊರಿಗೆ ತಲುಪಿ ಬಚಾವಾಗುವುದಿದೆ. ಆದರೆ ಗೆರಿಯ ಹಣೆಬರಹ ಸರಿಯಿರಲಿಲ್ಲ. ಟ್ರೈಲ್‌ನಲ್ಲಿ ನಡೆಯುವಾಗ ಬಹಿರ್ದೆಸೆಗೆಂದು ದಾರಿ ಬಿಟ್ಟು ಪಕ್ಕದ ಕಾಡಿನೊಳಕ್ಕೆ ಹೊಕ್ಕವಳಿಗೆ ವಾಪಸ್ಸಾಗಲು ದಾರಿ ಸಿಗಲೇ ಇಲ್ಲ. ಅವಳ ಹತ್ತಿರ ಜಿಪಿಎಸ್ ಕೂಡ ಇರಲಿಲ್ಲ. ಮೊಬೈಲ್ ಅಂತೂ ಮೊದಲೇ ಕೆಲಸಮಾಡುವುದಿಲ್ಲ. ಬಹು ದೀರ್ಘ ಕಾಲ ಅವಳಿಗಾಗಿ ಹುಡುಕಾಟ ನಡೆಯಿತು. ಆಕೆ ಹಲವು ವಾರಗಳ ಕಾಲ ದಾರಿ ಹುಡುಕಿದ್ದಳು.

ಕೊನೆಯಲ್ಲಿ ಆಹಾರ, ನೀರು ಸಿಗದಾಗಿ ಮಲಗಿದಲ್ಲಿಯೇ ಕೊನೆಯುಸಿರೆಳೆದಳು. ಎರಡು ವರ್ಷದ ನಂತರ ದಾರಿ ತಪ್ಪಿಸಿಕೊಂಡ ಇನ್ನೊಬ್ಬ ವ್ಯಕ್ತಿ ಅಚಾನ ಕ್ಕಾಗಿ ಕಾಡಿನ ಮಧ್ಯೆ ಸ್ಲೀಪಿಂಗ್ ಬ್ಯಾಗ್ ಒಂದನ್ನು ಕಂಡು ಒಳಕ್ಕೆ ನೋಡಿದಾಗ ಅವಳ ಮೂಳೆಗಳಷ್ಟೇ ಅಲ್ಲಿ ಉಳಿದಿದ್ದವು. ಜೊತೆಯಲ್ಲಿದ್ದ ಡೈರಿ ಅವಳು ಅನುಭವಿಸಿದ ಎಲ್ಲ ಕಷ್ಟಗಳ ದಾಖಲೆಯಾಗಿತ್ತು. ಹೀಗೆ ಆಗೀಗ ದಾರಿ ತಪ್ಪಿ, ವನ್ಯ ಪ್ರಾಣಿಗಳ ದಾಳಿಯಿಂದ, ನೀರು ಆಹಾರವಿಲ್ಲದಂತಹ ಸ್ಥಿತಿಯಿಂದ ಕೊನೆಯಾಗುವವರೂ ಇzರೆ. ಈಗೀಗ ಜಿಪಿಎಸ್ ವ್ಯವಸ್ಥೆ ಸುಧಾರಿಸಿರುವುದರಿಂದ ಅಂತಹ ಘಟನೆಯಾದಾಗ ಎಮರ್ಜೆನ್ಸಿ ಸಿಗ್ನಲ್ ಕಳಿಸಿದರೆ ಸರಕಾರ ಕಾಡಿನ ಮಧ್ಯದಿಂದ ಹೆಲಿಕಾಪ್ಟರ್ ಮೂಲಕ ರಕ್ಷಿಸುವ ವ್ಯವಸ್ಥೆ ಮಾಡಿದೆ.

ಇಂತಹ ಸಾವಿರ ಕಿಲೋಮೀಟರ್ ಮೀರಿದ ಇನ್ನೂ ಹತ್ತು ಕಾಲು ದಾರಿಗಳು ಅಮೆರಿಕದಲ್ಲಿವೆ. ಅದು ಬಿಟ್ಟು ಒಂದೂರಿಂದ ಇನ್ನೊಂದೂರಿಗೆ, ಕೆಲವೇ ನೂರು ಮೈಲಿಯ ಕಾಲು ದಾರಿಗಳು ಸಾವಿರಾರಿವೆ. ಹತ್ತಿಪ್ಪತ್ತು ಮೈಲಿಯ ಕಾಲುದಾರಿಗಳು ಲಕ್ಷ ಸಂಖ್ಯೆಯಲ್ಲಿವೆ. ಅಮೆರಿಕಾದ ಪಶ್ಚಿಮದಲ್ಲಿರುವ
ಕೆಲವು ಕಾಡು ದಾರಿಗಳು ಹತ್ತಾರು ಜಲಪಾತಗಳ ಮಾರ್ಗವಾಗಿ ಸಾಗುತ್ತವೆ. ಇಲ್ಲಿನ ಡೆತ್ ವ್ಯಾಲಿ ಎಂಬ ಮರುಭೂಮಿಯಲ್ಲಿಯೂ ಇಂತಹ ಕಾಲುದಾರಿ ಗಳಿವೆ. ಅಲ್ಲಿನ ತಾಪಮಾನ ಹಗಲಲ್ಲಿ ೫೦’ಸೆ ಗಿಂತ ಮೀರುವುದರಿಂದ ಇಲ್ಲಿ ನಡೆಯುವವರು ಸಂಜೆ ನಾಲ್ಕರಿಂದ ಬೆಳಗಿನ ಹತ್ತು ಗಂಟೆಯವರೆಗೆ
ಮಾತ್ರ ನಡೆಯಲು ಅನುಮತಿ. ಇದೆಲ್ಲ ಬಿಟ್ಟು ಪ್ರತೀ ಊರುಗಳೊಳಗೆ, ಊರಿನಾಚೆ ಹೊರಗೆ ಇರುವ ನಡಿಗೆಯ ದಾರಿಗಳು ಅಸಂಖ್ಯ. ನಮ್ಮೂರಿನ ಹತ್ತಿರ ‘ಬಫೆಲೊ ಗ್ರೋ’ ಎಂಬ ಊರಿದೆ. ಇದರ ಶಬ್ಧಾರ್ಥ ಕೋಣನ ಕಾಡು. ನಾವು ತಮಾಷೆಗೆ ಆ ಊರನ್ನು ‘ಕೋಣನ ಕುಂಟೆ’ ಎಂದು ಕರೆಯುವುದು.

ಆ ಊರಿನ ವಿಶೇಷತೆಯೇನೆಂದರೆ ಅಲ್ಲಿನ ಕಾಲು ದಾರಿಗಳು. ಆ ಊರಿನಲ್ಲಿರುವ ಸುಮಾರು ಐವತ್ತು ಪಾರ್ಕುಗಳನ್ನು ಕೂಡಿಸುವ ಒಂದು ಕಾಲುದಾರಿ ಯಿದೆ. ಒಂದು ಪಾರ್ಕಿನಿಂದ ಇನ್ನೊಂದಕ್ಕೆ, ಅಲ್ಲಿಂದ ಮಗದೊಂದಕ್ಕೆ ಹೀಗೆ ಇಡೀ ಊರಿನ ಎಲ್ಲ ಪಾರ್ಕುಗಳನ್ನು ಕಾಲ್ನಡಿಗೆಯ ಸಂಕ್ರಮಿಸಬಹುದು. ಫ್ಲೋರಿಡಾ, ಕ್ಯಾಲಿಪೋರ್ನಿಯಾ ಮೊದಲಾದ ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಗುಂಟ ನೂರಾರು ಮೈಲಿ ಹೋಗುವ ಕಾಲುದಾರಿ ಗಳಿವೆ. ಹೀಗೆ ದೇಶವಿಡೀ ನಡೆಯಬೇಕೆಂದರೆ ಅಮೆರಿಕದಲ್ಲಿ ಕಾಲುದಾರಿಗೆ ಕೊರತೆಯಿರುವುದಿಲ್ಲ. ಹಾಗಾಗಿಯೇ ಅಮೆರಿಕ ನಡೆಯುವವರ ಸ್ವರ್ಗ. ನೀವು ಯಾವುದೇ ಊರಲ್ಲಿರಿ, ಯಾವುದೇ ಪೇಟೆಯಲ್ಲಿರಿ. ನಡೆಯಬೇಕೆಂದರೆ ಅಡೆತಡೆಯಿಲ್ಲದ ನೂರು ಮೈಲಿಯ ಕಾಲು ದಾರಿ ಅಲ್ಲಿ ಇದ್ದೇ ಇರುತ್ತದೆ.

ಅಮೆರಿಕನ್ನರೆಂದರೆ ದೈತ್ಯ ದೇಹದವರು, ಅಶಿಸ್ತಿನವರು ಎಂಬೆಲ್ಲ ನಂಬಿಕೆ ಹಲವರಲ್ಲಿದೆ. ಅದಕ್ಕೆ ವ್ಯತಿರಿಕ್ತವೆನಿಸುವ, ಪ್ರತೀ ದಿನ ಹತ್ತಿಪ್ಪತ್ತು ಮೈಲಿ ನಡೆಯುವ ಜನಸಂಖ್ಯೆಯೂ ಇಲ್ಲಿ ಅದಕ್ಕಿಂತ ಜಾಸ್ತಿಯಿದೆ. ಮನುಷ್ಯ ಇತಿಹಾಸದ ಶೇ.೯೯ಕ್ಕಿಂತ ಜಾಸ್ತಿ ಕಾಲ ನಾವೆಲ್ಲರೂ ನಡೆದುಕೊಂಡೇ ಸಾಗಿದ್ದ ಲ್ಲವೇ? ದೇಶಾಂತರ, ಖಂಡಾಂತರ ಎಲ್ಲವೂ ಕಾಲ್ನಡಿಗೆಯಲ್ಲಿಯೇ. ಚಿಕ್ಕ ಗುಂಪುಗಳಲ್ಲಿ, ಪ್ರಾಣಿಗಳ ವಲಸೆಯನ್ನು ಅನುಸರಿಸಿ, ಕಾಲ, ಋತುವಿಗನು ಗುಣವಾಗಿ ನಿರಂತರ ನಡೆದೇ ನಡೆದಿದ್ದೇವೆ. ಇತ್ತೀಚಿಗಷ್ಟೇ ನಾವು ಕೂತು ಪ್ರಯಾಣಿಸಲು ಕಲಿತದ್ದು. ಈ ಕಾಲ್ ನಡಿಗೆಯ ವಲಸೆಯೇ ಮನುಷ್ಯನಿಗೆ ಪೃಕೃತಿಯ ಎಲ್ಲ ಬದಲಾವಣೆಗಳಿಗೆ ಹೊಂದಿಕೊಳ್ಳುವುದನ್ನು ಕಳಿಸಿದ್ದು. ಬದುಕುವ ಕಲೆ, ಆತ್ಮ ರಕ್ಷಣೆಯ ಚಾತುರ್ಯ ಇವೆಲ್ಲವೂ ಹೀಗೆ ನಡೆಯುತ್ತಲೇ ಮನುಷ್ಯ ಕಲಿತದ್ದು.

ಕಾಲುದಾರಿಗಳೆಂದರೆ ಅದೊಂದು ವಿಮಶವಾಹಿನಿ, ಪಾರಂಪರಿಕ ಬಳುವಳಿ. ಅಪ್ಪ ನಡೆದ, ಪರಿಚಯಿಸಿದ ಹಾದಿಯ ಮಗನೂ, ಮೊಮ್ಮಗನೂ, ಮರಿಮಗನೂ ನಡೆದದ್ದು. ಆದಿಮಾನವನ ಸಮಯದಲ್ಲಿ ಒಂದೇ ಸ್ಥಳದಲ್ಲಿ ನೆಲೆಸುವ ಪದ್ಧತಿ ಇರಲಿಲ್ಲ. ಜೀವಂತ ಇರಬೇಕೆಂದರೆ ನಡೆದು ವಲಸೆ ಹೋಗಬೇಕಿತ್ತು. ಕೆಲವು ಋತುಮಾನಕ್ಕೆ ತಕ್ಕ ವಾರ್ಷಿಕ ವಲಸೆ, ಇನ್ನು ಕೆಲವು ಶಾಶ್ವತ ವಲಸೆ. ಮರುಭೂಮಿ, ಫಲವತ್ತು ಪ್ರದೇಶ ಬದಲಾದಂತೆ, ಚಲಿಸಿದಂತೆ ಮನುಷ್ಯನೂ ನಡೆದು ಬದುಕನ್ನು ಹಿಂಬಾಲಿಸಿದ್ದಕ್ಕೇ ಪ್ರಪಂಚದಾದ್ಯಂತ ಮನುಷ್ಯ ಸ್ಥಾಪನೆಯಾಗಿರುವುದು, ಸಂಸ್ಕೃತಿಯ ಪ್ರತ್ಯೇಕತೆ
ಬೆಳೆದಿರುವುದು. ನೂರೆಂಟು ವೈವಿಧ್ಯದ ಮನುಷ್ಯ ಜನಾಂಗಗಳು ವಿಕಾಸನವಾಗಿದ್ದೇ ಈ ನಡಿಗೆಯ ವಲಸೆಯಿಂದ.

ನಡೆಯುತ್ತಲೇ ಇದ್ದ ಮನುಷ್ಯನ ಕಾರಣ ಮಾತ್ರ ಇತ್ತೀಚೆ ಕಾಲ ಕಳೆಯುತ್ತ ಬದಲಾಗಿದೆ. ಮೊದಲು ಆಹಾರಕ್ಕೆ, ವಾತಾವರಣಕ್ಕೆ ತಕ್ಕಂತೆ ಇದ್ದ ವಲಸೆ ಕ್ರಮೇಣ ವ್ಯಾಪಾರಕ್ಕೆ, ವ್ಯವಹಾರ, ತೀರ್ಥಯಾತ್ರೆ ಇವೇ ಮೊದಲಾದ ಕಾರಣಗಳಿಗೆ ಬದಲಾದವು. ಈಗ ವಿಮಾನವಿದೆ, ಕಾರು-ರೈಲುಗಳಿವೆ. ಆದರೆ ಇದೆಲ್ಲದರ ನಡುವೆ ನಡೆಯಲಿಕ್ಕೆಂದೇ ಕಾಲುದಾರಿಗಳನ್ನು ಇಂದಿಗೂ ಕಾಪಿಟ್ಟುಕೊಂಡ ಅಮೆರಿಕನ್ ವ್ಯವಸ್ಥೆ ಅನನ್ಯ. ಹಿಂದೆ ಬದುಕಿನ ಅನಿವಾರ್ಯ ವಾಗಿದ್ದ ನಡಿಗೆ ಇಂದು ಹವ್ಯಾಸ, ಸಾಹಸ, ಸಾಧನೆ ಇತ್ಯಾದಿಯಾಗಿ ಬದಲಾಗಿದೆ. ಆದರೆ ನಡಿಗೆಯೆನ್ನುವುದು ದೈಹಿಕ ಮತ್ತು ಮಾನಸಿಕ ಅವಶ್ಯಕತೆಯಾಗಿ ಇನ್ನೂ ನಮ್ಮ ಜೊತೆಯಲ್ಲಿಯೇ ಉಳಿದುಕೊಂಡಿದೆ.

ವಾನರ ಲಕ್ಷ ಲಕ್ಷ ವರ್ಷ ನಡೆದು ನರನಾದ. ಕೂತ ಕೆಲಸ ಮಾಡುವುದು, ದುಡಿಯುವುದು ಕಲಿತ. ಕೂತೇ ಚಲಿಸುವುದೂ ಸಾಧನೆಯೆಂದೇ ಆಯಿತು. ಈಗ ವೈದ್ಯರು ಕುಳಿತುಕೊಳ್ಳುವುದು ವಿಷ, ಖಜಿಠಿಠಿಜ್ಞಿಜ ಜಿo ಠಿeಛಿ ಛಿಡಿ oಞಟhಜ್ಞಿಜ, ಆರೋಗ್ಯಕ್ಕೆ ನಡೆಯಬೇಕೆಂದು ಹೇಳುತ್ತಾರೆ. ನಡೆದಷ್ಟೂ ಒಳ್ಳೆಯದು ಎಂಬುದೇ ಆರೋಗ್ಯದ ಬಹಿರಂಗ ಗುಟ್ಟಾಗಿದೆ. ಹೀಗಿರುವಾಗ ಇಂತಹ ಐತಿಹಾಸಿಕ ಕಾಲು ದಾರಿಗಳನ್ನು ಇಂದಿಗೂ ಸವೆಸುತ್ತ, ಕಾಪಾಡಿಕೊಂಡು ಜೀವಂತವಿಟ್ಟಿರುವ ಅಮೆರಿಕನ್ ವ್ಯವಸ್ಥೆ, ಸರಕಾರ, ಜನರ ಕಾಳಜಿ ಮತ್ತು ನಡಿಗೆಯ ಪ್ರೀತಿ ಅನನ್ಯ. ಅಮೆರಿನ್ ಸರಕಾರ ಪ್ರತೀ ವರ್ಷ ಈ ಕಾದ ಕಾಲುದಾರಿಗಳ ನಿರ್ವಹಣೆಗೆ ಯಥೇಚ್ಛ ಹಣ ಖರ್ಚುಮಾಡುತ್ತದೆ. ಜನರಿಗೆ ನಡೆಯಲು ಬೇಕಾದ ವ್ಯವಸ್ಥೆಯನ್ನು ಶೃದ್ಧೆಯಿಂದ ಸಂಭಾಳಿಸುತ್ತದೆ. ಅದಕ್ಕೆ ಅನುಗುಣವಾಗಿ ಜನರೂ ಅಷ್ಟೇ ಪ್ರೀತಿಯಿಂದ ಈ ಟ್ರೈಲ್ – ಕಾಲು ದಾರಿಯನ್ನು ನೋಡಿಕೊಳ್ಳುತ್ತಾರೆ. ಈ ಕಾಲುದಾರಿಯಲ್ಲಿ ನಡೆಯುವಾಗ ಅನುಸರಿಸ ಬೇಕಾದ ನಿಯಮ ಒಂದೇ – ’Be a fish, don’t leave any trace’. ನಡೆಯುವವರು ಯಾವುದೇ ಕುರುಹನ್ನು ಬಿಡಬಾರದು ಎಂದುದೊಂದೇ ಇಲ್ಲಿನ ಕಾಯ್ದೆ.

Leave a Reply

Your email address will not be published. Required fields are marked *

error: Content is protected !!