ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಪ್ರೇಯಸಿ ಜೊತೆಗಿದ್ದ ಮಗನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೋಷಕರು; ವಿಡಿಯೊ ವೈರಲ್

21 ವರ್ಷದ ಯುವಕನೊಬ್ಬ ಆತನ 19 ವರ್ಷದ ಗೆಳತಿಯನ್ನು ಕರೆದುಕೊಂಡು ಬೈಕಿನಲ್ಲಿ ಸುತ್ತುವಾಗ ಅವನ ಪೋಷಕರು ಈ ದೃಶ್ಯವನ್ನು ಕಂಡು ಅವರನ್ನು ರೆಡ್‍ಹ್ಯಾಂಡ್‍ ಆಗಿ ಹಿಡಿದು ಸಾರ್ವಜನಿಕವಾಗಿ ಥಳಿಸಿದ ಘಟನೆ ಕಾನ್ಪುರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

ಪ್ರೇಯಸಿ ಜೊತೆ ಸುತ್ತಾಡ್ತಿದ್ದ ಮಗನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೋಷಕರು!

Profile pavithra May 3, 2025 1:25 PM

ಕಾನ್ಪುರ: ಯುವಕನೊಬ್ಬ ತನ್ನ ಗೆಳತಿಯನ್ನು ಕರೆದುಕೊಂಡು ಬೈಕಿನಲ್ಲಿ ಸುತ್ತುತ್ತಿರುವುದನ್ನು ನೋಡಿದ ಆತನ ಪೋಷಕರು ಆತನಿಗೆ ಸಾರ್ವಜನಿಕವಾಗಿ ಥಳಿಸಿದ ಘಟನೆ ಕಾನ್ಪುರದಲ್ಲಿ ನಡೆದಿದೆ. ಗುಜೈನಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮ್ ಗೋಪಾಲ್ ಜಂಕ್ಷನ್‍ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.ವೈರಲ್ ಆದ ವಿಡಿಯೊದಲ್ಲಿ, ಬೈಕಿನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಜೋಡಿಗೆ ತಾಯಿ-ತಂದೆ ಹಿಗ್ಗಾಮಗ್ಗಾ ಹೊಡೆಯುವುದು ಸೆರೆಯಾಗಿದೆ. ಪೊಲೀಸರ ಪ್ರಕಾರ, ರೋಹಿತ್ ಎಂಬ ವ್ಯಕ್ತಿ ತನ್ನ ಗೆಳತಿಯೊಂದಿಗೆ ಬೈಕಿನಲ್ಲಿ ತಿರುಗಾಡುವಾಗ ಅವನ ಹೆತ್ತವರಾದ ಶಿವಕರನ್ ಮತ್ತು ಸುಶೀಲಾ ಕಣ್ಣಿಗೆ ಬಿದ್ದಿದ್ದಾರೆ.ರೋಹಿತ್ ಮತ್ತು ಅವನ ಗೆಳತಿಯ ನಡುವಿನ ಸಂಬಂಧವನ್ನು ಒಪ್ಪದ ಅವನ ಪೋಷಕರು ಅವನನ್ನು ಮತ್ತು ಅವನ ಗೆಳತಿಯನ್ನು ಸಾರ್ವಜನಿಕರ ಮುಂದೆ ಹೊಡೆಯಲು ಥಳಿಸಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದ ನಂತರ ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಕೌನ್ಸೆಲಿಂಗ್ ಮಾಡಿದ ನಂತರ ಅವರ ಜಗಳ ಬಿಡಿಸಿದ್ದಾರೆ ಮತ್ತು ಮುಂದಿನ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ಹಿಂದೆ ಯುವತಿಯೊಬ್ಬಳು ತನ್ನ ಗೆಳೆಯನ ಜೊತೆ ಮನೆಬಿಟ್ಟು ಆತನ ಮನೆಗೆ ಓಡಿಹೋಗಿದ್ದಳು. ಆಕೆಯ ಪೋಷಕರಿಗೆ ಈ ಬಗ್ಗೆ ಸುಳಿವು ಸಿಕ್ಕಾಗ, ಅವರು ಯುವಕನ ಮನೆಗೆ ಬಂದು ಮಗಳನ್ನು ಮನೆಯಿಂದ ಹೊರಗೆ ಎಳೆದೊಯ್ದ ಅವರನ್ನು ಸಾರ್ವಜನಿಕವಾಗಿ ಥಳಿಸಿದ್ದರು. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಅದು ವೈರಲ್ ಆಗಿತ್ತು. ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯ ಅಮರ್ಪಟನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು.

ಈ ಸುದ್ದಿಯನ್ನೂ ಓದಿ:Viral Video: ಮದುವೆಯ ದಿರಿಸಿನಲ್ಲೇ ಧರಿಸಿ ಮ್ಯಾರಥಾನ್ ಓಡಿದ ಮಹಿಳೆ; ಇದರ ಹಿಂದಿದೆ ಮನಮಿಡಿಯುವ ಕಥೆ!

ಮೈಹಾರ್ ಜಿಲ್ಲೆಯ ಅಮರ್ಪಟಾನ್ ಪ್ರದೇಶದ ಸುವಾ ಗ್ರಾಮದ ಯುವತಿಯೊಬ್ಬಳು ಹಳ್ಳಿಯ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಹುಡುಗಿ ತನ್ನ ಹೆತ್ತವರ ಮನೆಯಿಂದ ಓಡಿಹೋಗಿ ತನ್ನ ಗೆಳೆಯನ ಮನೆಗೆ ಬಂದಿದ್ದಳು. ಹುಡುಗಿಯ ಹೆತ್ತವರಿಗೆ ಈ ವಿಷಯ ತಿಳಿದು ಇಡೀ ಕುಟುಂಬವು ಅವಳ ಗೆಳೆಯನ ಮನೆಗೆ ನುಗ್ಗಿ ತಮ್ಮ ಮಗಳನ್ನು ಎಳೆದುಕೊಂಡು ಹೋಗಿದ್ದಾರೆ. ಹುಡುಗಿ ಪ್ರತಿರೋಧಿಸಿದಾಗ, ಅವಳ ಹೆತ್ತವರೂ ಅವಳನ್ನು ಥಳಿಸಿದ್ದಾರೆ.. ಆದರೆ ಈ ಪ್ರಕರಣದ ಬಗ್ಗೆ ಮಾಹಿತಿಯನ್ನು ಯಾರು ಪೊಲೀಸರಿಗೆ ನೀಡಿಲ್ಲ. ಹಾಗಾಗಿ ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿತ್ತು.