Virat Kohli: ಕಿಂಗ್ ಕೊಹ್ಲಿ ಬಯೋಪಿಕ್ಗೆ ಸಿದ್ಧತೆ; ಕಾಲಿವುಡ್ನ ಈ ಸ್ಟಾರ್ಗೆ ನಾಯಕ ಪಟ್ಟ?
Simbu: ಆರ್ಸಿಬಿ ತಂಡದ ಸ್ಟಾರ್ ಆಟಗಾರ, ಕ್ರಿಕೆಟ್ನ ದಂತಕಥೆ ವಿರಾಟ್ ಕೊಹ್ಲಿಗೆ ಜನತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಅವರನ್ನು ಕಿಂಗ್ ಕೊಹ್ಲಿ ಎಂದೇ ಕರೆಯಲಾಗುತ್ತದೆ. ಬ್ಯಾಟ್ ಹಿಡಿದು ಫೀಲ್ಡ್ಗಿಳಿದ್ರೆ ರನ್ ಮಳೆಯನ್ನೇ ಹರಿಸುವ ಮೂಲಕ ಬೌಲರ್ಸ್ಗಳಿಗೆ ನಡುಕ ಹುಟ್ಟಿಸುವ ಕೊಹ್ಲಿ ಅವರ ಬಯೋಪಿಕ್ ಸೆಟ್ಟೇರಲು ಸಿದ್ದತೆ ನಡೆಯುತ್ತಿದೆ. ಕಾಲಿವುಡ್ ಸ್ಟಾರ್ ಸಿಂಬು ಕೊಹ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ಮತ್ತು ಸಿಂಬು.


ಸ್ಟಾರ್ ಬ್ಯಾಟರ್ ಕಿಂಗ್ ಕೊಹ್ಲಿ ಇತ್ತೀಚೆಗೆ ಚಾಟ್ ಶೋನಲ್ಲಿ ತಾವು ಪದೆ ಪದೇ ಕೇಳುವ ತಮ್ಮಿಷ್ಟದ ಹಾಡನ್ನು ರಿವೀಲ್ ಮಾಡಿದ್ದಾರೆ. ಅವರು ಮೈದಾನದಲ್ಲಿ ಅಭ್ಯಾಸ ಮಾಡುವಾಗ, ಏರ್ಪೋರ್ಟ್, ವಿಮಾನದಲ್ಲಿ ಪ್ರಯಾಣ ಮಾಡುವಾಗ ʼನೀ ಸಿಂಗಮ್ ಧಾನʼ ತಮಿಳು ಸಾಂಗ್ ಅನ್ನು ಪದೇ ಪದೆ ಕೇಳುತ್ತಾರಂತೆ. ಆ ಹಾಡು ಎಂದರೆ ವಿರಾಟ್ಗೆ ತುಂಬಾ ಇಷ್ಟವಂತೆ. ಹೀಗಾಗಿಯೇ ಆ ಒಂದೇ ಹಾಡನ್ನು ಮತ್ತೆ ಮತ್ತೆ ಕೇಳುತ್ತಿರುವುದಾಗಿ ತಿಳಿಸಿದ್ದಾರೆ.

ʼನೀ ಸಿಂಗಮ್ ಧಾನʼ ನಟ ಸಿಲಂಬರಸನ್ (ಸಿಂಬು) ಅಭಿನಯದ ʼಪತ್ತು ತಲಾʼ ಚಿತ್ರದ ಹಾಡು. ಕನ್ನಡ ʼಮಫ್ತಿʼ ಚಿತ್ರದ ರಿಮೇಕ್ ಆಗಿರುವ ಇದು 2023ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರದ ʼನೀ ಸಿಂಗಮ್ ಧಾನʼ ವಿರಾಟ್ ಅವರ ಫೇವರೇಟ್ ಗೀತೆ. ಸಿದ್ ಶ್ರೀರಾಮ್ ಕಂಠದಲ್ಲಿ, ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿದೆ. ಕೊಹ್ಲಿ ತಮ್ಮ ನೆಚ್ಚಿನ ಹಾಡನ್ನು ರಿವೀಲ್ ಮಾಡುತ್ತಿದ್ದಂತೆ ಫ್ಯಾನ್ಸ್ ಕೊಹ್ಲಿ ಬಯೋಪಿಕ್ಗೆ ಸಿಂಬು ಉತ್ತಮ ಆಯ್ಕೆ ಎನ್ನುತ್ತಿದ್ದಾರೆ.

ಬಾಲ ಕಲಾವಿದನಾಗಿ ಕಾಲಿವುಡ್ಗೆ ಕಾಲಿಟ್ಟ ಸಿಂಬು 2002ರಲ್ಲಿ ರಿಲೀಸ್ ಆದ ತಮಿಳಿನ ʼಕಾದಲ್ ಅರಿವಾತಿಲ್ಲೈʼ ಸಿನಿಮಾ ಮೂಲಕ ನಾಯಕನಾಗಿ ಭಡ್ತಿ ಪಡೆದರು. ಅಂದಿನಿಂದ ಅವರು ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಒಂದೊಳ್ಳೆ ಅಭಿಮಾನಿ ವರ್ಗವನ್ನೂ ಸಂಪಾದಿಸಿದ್ದಾರೆ. ಇದೀಗ ಸಿಂಬು ವಿರಾಟ್ ಕೊಹ್ಲಿ ಬಯೋಪಿಕ್ಗೆ ಸೂಕ್ತ ಎಂಬ ಚರ್ಚೆ ಆರಂಭವಾಗಿದೆ.

ವಿರಾಟ್ ಕೊಹ್ಲಿ ಅವರ ಫಿಟ್ನೆಸ್, ಅವರ ಸ್ಟೈಲ್, ನೋಟವನ್ನು ಸಿಂಬು ಹೋಲುತ್ತಾರೆ. ಹೀಗಾಗಿ ವಿರಾಟ್ ಬಯೋಪಿಕ್ ಪ್ಲ್ಯಾನ್ ನಡೆದರೆ ಅವರ ಪಾತ್ರವನ್ನು ನಿಭಾಯಿಸೋದಿಕ್ಕೆ ಸಿಂಬು ಬೆಸ್ಟ್ ಎಂಬ ಮಾತು ಮುಂಬೈ ಗಲ್ಲಿಯಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಕೊಹ್ಲಿ ಬಯೋಪಿಕ್ ಬಗ್ಗೆ ವದಂತಿ ಹರಡಿದ್ದು, ಸಿಂಬು ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ.

ಅತ್ತ ಐಪಿಎಲ್ನಲ್ಲಿ ವಿರಾಟ್, ಇತ್ತ ಸಿನಿಮಾದಲ್ಲಿ ಸಿಂಬು ಮಿಂಚುತ್ತಿದ್ದಾರೆ. ಸಿಂಬು ಸದ್ಯ ಕಮಲ್ ಹಾಸನ್ ಜತೆಗೆ ನಟಿಸಿದ ʼಥಗ್ ಲೈಫ್ʼ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೇ ʼಎಸ್ಟಿಆರ್ 49ʼ, ʼಎಸ್ಟಿಆರ್ 50ʼ ಮತ್ತು ʼಎಸ್ಟಿಆರ್ 51ʼ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಜೀವನಚರಿತ್ರೆಯಲ್ಲಿ ಸಿಂಬು ಕಾಣಿಸಿಕೊಂಡರೆ ಇಬ್ಬರು ಸ್ಟಾರ್ಗಳ ಪಾಲಿಗೆ ಹಬ್ಬವಾಗಲಿದೆ.

2016ರಲ್ಲಿ ಕ್ರಿಕೆಟರ್ ಎಂ.ಎಸ್.ಧೋನಿ ಅವರ ಜೀವನವನ್ನಾಧರಿಸಿದ ʼಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿʼ ಬಾಲಿವುಡ್ ಚಿತ್ರ ತೆರೆಕಂಡಿತ್ತು. ಧೋನಿ ಪಾತ್ರದಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದರು. ಯಾರಿಗೂ ಗೊತ್ತಿಲ್ಲ ಧೋನಿಯ ಬದುಕಿನ ಪುಟಗಳನ್ನು ಈ ಸಿನಿಮಾದ ಮೂಲಕ ತೆರೆದಿಡಲಾಗಿತ್ತು. ನೀರಜ್ ಪಾಂಡೆ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 216 ಕೋಟಿ ರೂ. ಗಳಿಸಿತ್ತು. ಒಂದುವೇಳೆ ಕೊಹ್ಲಿ ಬಯೋಪಿಕ್ ತೆರೆಮೇಲೆ ಬಂದರೂ ಅಬ್ಬರಿಸಲಿದೆ ಎನ್ನುವ ಮಾತಿ ಕೇಳಿ ಬರುತ್ತಿದೆ.