Sunday, 16th June 2024

ಚೀನಾವನ್ನು ಯಾಕೆ ಪ್ರಶ್ನೆ ಮಾಡಲಾಗುತ್ತಿಲ್ಲ?

ಅನಿಸಿಕೆ

ರವಿ ಎನ್‍ ಶಾಸ್ತ್ರೀ ನ್ಯಾಯವಾದಿ

ಕರೋನಾ ಎಂಬ ವಿಷ ಬೀಜವನ್ನು ಬಿತ್ತಿ, ವಿಶ್ವದ ಆರ್ಥಿಕತೆಯನ್ನು ಅಲ್ಲೋಲ – ಕಲ್ಲೋಲ ಮಾಡಿ, ವಿಶ್ವದ ಆರೋಗ್ಯ ಥರ್ಮೋಮೀಟರನ್ನೆೆ ಉಲ್ಟಾ ಮಾಡಿದ ಚೀನಾದೇಶವನ್ನು ಯಾಕೆ ಪ್ರಶ್ನೇ ಮಾಡಲಾಗುತ್ತಿಲ್ಲ..? ಹಾಗಾದರೆ ಈ ಸಾವು – ನೋವುಗಳಿಗೆ ಯಾರು ಬಾಧ್ಯಸ್ಥರು.

ಕರೋನಾ ಒಂದು ಆಕಸ್ಮಿಕವಲ್ಲ ಒಂದು ವಿಸ್ ಮೆಜರ್/ ದೇವರ ಕೊಡುಗೆ ಅಥವಾ ‘ಆ್ಯಕ್‌ಟ್‌ ಆಫ್ ಗಾಡ್’ ಅಂದರೆ ದೇವರ ಮುನಿಸು ಅಲ್ಲಾ, ಹೌದು ಕಾನೂನಿನ ಪರಿಭಾಷೆಯಲ್ಲಿ ವ್ಯಾಖ್ಯಾನಿಸುವಂತೆ ಪ್ರಕೃತಿ ಸಹಜವಾಗಿ ಈ ರೋಗಾಣುಗಳ ಉತ್ಪತ್ತಿಯಾಗಿರುವುದಿಲ್ಲ ಅಂದರೆ ಪ್ರಕೃತಿಯ ಅಸಹಜ ಬದಲಾವಣೆ ಈ ರೋಗಾಣುವಿಗೆ ಕಾರಣವಾ..?

ಇತ್ತೀಚೆಗೆ ಮೇ 2020, ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದಲ್ಲಿ ನಡೆದ ದುರಂತದಲ್ಲಿ, 11 ಜನ ಸಾಗೀಡಾಗುತ್ತಾರೆ, ಮತ್ತು ಚಿಕಿತ್ಸೆ ಪಡೆಯುತ್ತಿರುವವರಿಗೂ ಮುಖ್ಯಮಂತ್ರಿಗಳು ಪರಿಹಾರವನ್ನು ಘೋಷಿಸಿಸುತ್ತಾರೆ. ಎಲ್‌ಜಿ ಪಾಲಿಮರ್ ಇಂಡಸ್ಟ್ರೀಯಿಂದ ಲೀಕ್ ಆದ ರಾಸಾಯನಿಕದಿಂದ ಈ ಘಟನೆ ನಡೆದಿರುತ್ತದೆ. ಯಾವುದೇ ಅಸಹಜ ಘಟನಾವಳಿಗಳಿಂದ ಉಂಟಾಗುವ ಹಾನಿಗಳಿಗೆ
ಸೂಕ್ತ ಪರಿಹಾರ ದೊರಕಿಸಿಕೊಡುವುದು ಕಾನೂನಿನ ಚೌಕಟ್ಟಿನಲ್ಲಿ ಅವಕಾಶಗಳಿವೆ ಎಂಬುದನ್ನು ನಾವು ಇಲ್ಲಿ ಸ್ಮರಿಸಬೇಕಾ ಗುತ್ತದೆ. ಒಬ್ಬ ವೈದ್ಯನು ತಾನು ರೋಗಿಯ ಉಪಚಾರ ಮತ್ತು ಚಿಕಿತ್ಸೆ ನೀಡುವುಲ್ಲಿ ಯಾವುದೇ ಅಲಕ್ಷತೆ ಮತ್ತು ಅಜಾಗರೂಕತೆ ಮಾಡುವಂತಿಲ್ಲ, ಹೀಗೆ ಯಾವುದೇ ವೃತ್ತಿಧರ್ಮಗಳ ಮರ್ಮವನ್ನು ಕಾಪಾಡುವುದು ಅಷ್ಟೇ ಅನುಚಿತ. ಒಂದು ಸರಕಾರದ ಅಂಗವನ್ನು ಕೂಡ ಬಾಧ್ಯಸ್ಥರನ್ನಾಗಿ ಮಾಡುವಂಥ ನಿಶ್ಚಿತ ಮತ್ತು ನಿರ್ಧಿಷ್ಟ ಕರ್ತವ್ಯವನ್ನು

ಪೂರೈಸುವಲ್ಲಿ ಎಡವಬಾರದೆಂದು, ಒಂದು ವೇಳೆ ಹಾನಿಗೊಳಗಾದ ವಸ್ತು/ವ್ಯಕ್ತಿ ಸೂಕ್ತ ಪರಿಹಾರ ಪಡೆದುಕೊಳ್ಳುವಲ್ಲಿ ಅರ್ಹನಾಗಿರುತ್ತಾನೆ. ಮಾಸ್ಟರ್ ಅಂಡ್ ಸರ್ವಂಟ್ ಲೈಯಾಬಿಲಿಟಿ, ಅಂದರೆ ಸೇವಕರ ತಪ್ಪಿಗೆ ಒಡೆಯನು ಪರಿಹಾರ ನೀಡಬೇಕು. ಗ್ರಾಹಕರ ರಕ್ಷಣಾ ಕಾನೂನು 2019, ಅಗತ್ಯಸೇವೆಗಳ ನಿರ್ವಹಣಾ ಕಾನೂನು, ಮೋಟರ್ ವೆಹಿಕಲ್ ಆಕ್‌ಟ್‌, ಮುನ್ಸಿಪಾಲಿಟಿ ಮತ್ತು ಇನ್ನು ಸ್ಥಳೀಯ ಸಂಸ್ಥೆಗಳ ಕಾಮಗಾರಿಗಳಿಂದ ಹಾನಿವುಂಟಾದಾಗ ನೌಕರನ ಬದಲಾಗಿ ಸಂಸ್ಥೆ/ಸರಕಾರವನ್ನು ಹೊಣೆ ಗಾರನನ್ನಾಗಿ ಮಾಡಲಾಗುತ್ತದೆ. ಹಾಗೇ ಒಬ್ಬ ವಿಜ್ಞಾನಿಯ ಪ್ರಯೋಗ ಶಾಲೆಯಲ್ಲಿ ಸೋರಿಕೆಯಿಂದಾಗೆ ಅಮಾಯಕರ ಜೀವ ಹಾನಿಗೆ ಆ ಪ್ರಯೋಗಕ್ಕೆೆ ಅವಕಾಶ ನೀಡಿದ ಸರಕಾರ/ ರಾಜ್ಯ/ ದೇಶ ಪರಿಹಾರ ನೀಡ ಬೇಕಾಗುತ್ತದೆ.

ನಮ್ಮ ಕರ್ನಾಟಕದ ಮಲೆನಾಡಿನ ಗೇರು ಗಿಡಗಳಿಗೆ ತಗುಲಿದ ಕೀಟವನ್ನು ನಾಶ ಮಾಡುವುದಕೋಸ್ಕರವಾಗಿ ವೈಮಾನಿಕ ಎಂಡೋಸಲ್ಫಾನ್ ಸಿಂಪಡನೆಯಿಂದ ಜೀವಹಾನಿ ಮತ್ತು ಅಂಗವಿಕಲತೆವುಂಟಾದ ಅನೇಕ ಸ್ಥಳೀಯ ನಿವಾಸಿಗಳಿಗೂ ಉಪಚಾರ ಮತ್ತು ಪರಿಹಾರದ ದೃಷ್ಟಿಯಿಂದ ಸರಕಾರವನ್ನು ಹೊಣೆಗಾರರನ್ನಾಗಿ ಮಾಡಿ ಪರಿಹಾರ ನೀಡಿದ್ದು ಇದೆ. ಉತ್ತಮವಾದ ಆರೋಗ್ಯಕ್ಕೆ ಅವಶ್ಯವಿರುವ ಸ್ವಚ್ಛಂದ ಗಾಳಿ, ನೀರು ಮತ್ತು ಬೆಳಕಿಗೆ ಹಾನಿಯುಂಟು ಮಾಡುವ ಯಾವುದೇ ಪರಿಸರ ನಾಶಕಾರಿ ಕಾರ್ಯಗಳಿಗೆ ಶಿಕ್ಷೆ ನೀಡುವಂಥ ಕಾನೂನು ನಮ್ಮ ಸಂವಿಧಾನದಿಂದ ಪಡೆದಿದ್ದಾಗಿದೆ.

ಭಾರತೀಯ ಸಂವಿಧಾನವು ಪರಿಚ್ಛೇದ 32ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು 226 ಮತ್ತು 227ರ ಅಡಿಯಲ್ಲಿ ಉಚ್ಛ ನ್ಯಾಯಾಲಯಕ್ಕೆ ಮೂಲಭೂತ ಹಕ್ಕುಗಳ ರಕ್ಷಣೆಗೋಸ್ಕರವಾಗಿ, ರಿಟ್ ಆಫ್ ಮ್ಯಾಂಡಮಾಸ್, ಸರ್ಸಿರೊರಿ, ಪ್ರೊಬಿಷನ್, ಕೋ-ವಾರಂಟೋ ಮುಖಾಂತರ ಪರಿಹಾರವನ್ನು ಕೇಳಲು ನಮ್ಮ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಉತ್ತಮವಾದ ಉದಾಹರಣೆ.

ಎಂ.ಸಿ. ಮೆಹ್ತಾನಂಥ ಪರಿಸರವಾದಿ ಹೋರಾಟಗಾರರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವ ಮುಖಾಂತರ ಮಾನವ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಕೃತ್ಯಗಳನ್ನು ಕೋರ್ಟಿಗೆಳೆದು ಪರಿಹಾರಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 1985ರಲ್ಲಿ ಮಧ್ಯಪ್ರದೇಶದಲ್ಲಿರುವ ಭೂಪಾಲದಲ್ಲಿ ಟಾಕ್ಷಿಕ ಮಿಥಾಲ್ ಇಸೋಸೈನೇಟ್ ಎಂಬ ವಿಷಾನಿಲ ಸೋರಿಕೆಯಿಂದ ಸಾವಿರಾರು ಜನರು ಮೃತಪಟ್ಟು, ಶಾಶ್ವತ ಅಂಗ ನ್ಯೂನತೆಗೆ ತುತ್ತಾದಾಗ ಯಶಸ್ವಿ ಕಾನೂನು ಹೋರಾಟದ ಮುಖಾಂತರ ಪರಿಹಾರ ಕಂಡುಕೊಂಡಿದ್ದು ನಮಗೆಲ್ಲ ತಿಳಿದ ವಿಷಯವಾಗಿದೆ.

ಇಲ್ಲಿ ಮಾನ್ಯ ನ್ಯಾಯಾಲಯಗಳು ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದೂರದರ್ಶಿತ್ವವನ್ನು ಪ್ರದರ್ಶಿಸಿ ಜುಡಿಷಿ
ಯಲ್ ಅಕ್ಟಿಸಮ್/ ನ್ಯಾಯಾಲಯಗಳ ಮುತವರ್ಜಿ ತನದಿಂದ ಇತ್ಯರ್ಥಗೊಳಿಸಿ ಪರಿಹಾರ ನೀಡಿದ್ದು ನಮಗೆಲ್ಲ ಗೊತ್ತಿರುವ ಸಂಗತಿ. ಮುಖ್ಯವಾದ ಸಂಗತಿಯೆಂದರೆ ಭೂಪಾಲ ದುರಂತಕ್ಕೆ ಕಾರಣೀಭೂತ ವಾಗಿರುವುದು ಒಂದು ಬಹುರಾಷ್ಟ್ರೀಯ
ಸಂಸ್ಥೆ ಎಂಬುದು ಮತ್ತು ಸದರಿ ಸಂಸ್ಥೆಯನ್ನು ಹೊಣೆಗಾರನನ್ನಾಗಿ ಮಾಡುವಲ್ಲಿ ಕಾನೂನಿನ ಹೋರಾಟದಲ್ಲಿ ನಾವು ಯಶಸ್ವಿ ಯಾದ ಪರಿ, ಆ ಸಮಯದಲ್ಲಿ ಪ್ರೆಸಿಡೆಂಟ್‌ಗಳ ಕೊರತೆ ನ್ಯಾಯಾಲಯಗಳಿಗೆ ಕಾಡಿದ್ದು ಇದೆ.

1985ರಲ್ಲಿ ಒಂದು ಅಂತಾರಾಷ್ಟ್ರೀಯ ಸಂಸ್ಥೆಯನ್ನು ಹೊಣೆಗಾರನನ್ನಾಗಿ ಮಾಡುವಲ್ಲಿ ನೀಡಬೇಕಾದ ತೀರ್ಪುಗಳ ಉದ್ಧರಣ
ಮಾಡುವಂಥ ಅವಕಾಶಗಳು ತುಂಬಾ ಕಡಿಮೆ ಇದ್ದವು. ಇದಕ್ಕೆ ಬುನಾದಿಯನ್ನು ಹಾಕಿದ್ದು ಅಂತಾರಾಷ್ಟ್ರೀಯ ಕಾನೂನು ಮತ್ತು ಒಡಂಬಡಿಕೆಗಳು. ಮತ್ತು ನಮ್ಮದೆ ಸಂವಿಧಾನ. ಆದರೆ ಇತ್ತೀಚಿನ ದಿನಗಳಲ್ಲಿ ಜಾಗತೀಕರಣದಿಂದಾದ ಬದಲಾವಣೆ ಗಳಿಂದ ಸಹಜವಾಗಿಯೇ ಕಾನೂನು ಕ್ಷೇತ್ರ ಕೂಡ ತನ್ನ ಎಲ್ಲೆ/ಗಡಿ/ರೇಖೆ ಮೀರಿ ತನ್ನ ಕಾರ್ಯ ಕ್ಷೇತ್ರವನ್ನು ಆವರಿಸಿಕೊಂಡಿದೆ.

ಈ ಹಿಂದೆ ಅನೇಕ ಸಾಂಕ್ರಾಮಿಕ ರೋಗಗಳು ಈ ಜಗತ್ತಿನಲ್ಲಿ ಆಯಾ ಕಾಲಘಟ್ಟಲ್ಲಿ ಸಾವು – ನೋವುಗಳು ಇತಿಹಾಸದ ಕಾಲಗರ್ಭ ದಲ್ಲಿ ಹೂತು ಹೋಗಿವೆ. ಪ್ಲೇಗ್, ಬ್ಲ್ಯಾಕ್ ಡೆತ್, ಕೋಕೊ-ಲಿಜಿಟ್ಲಿ(1545-1548), ಅಮೆರಿಕನ್ ಪ್ಲೇಗ್(16 ನೇ ಶತಮಾನ), ಲಂಡನ್ನಿನ ಪ್ಲೇಗ್ (1665-1666), ಗ್ರೇಟ್ ಪ್ಲೇಗ್ (1720-1723), ರಷ್ಯನ್ ಪ್ಲೇಗ್(1770-1772), ಫಿಲಿಡೆಲ್ಪಯಾ ಹಳದಿ ಜ್ವರ(1793), ಪ್ಲು ಪೆಂಡಾಮಿಕ್( 1889-1890), ಅಮೆರಿಕನ್ ಪೊಲೀಯೋ ಪೆಂಡಾಮಿಕ್( 1916), ಸ್ಪಾನಿಷ್ ಪ್ಲೂ (1918-1920), ಏಯನ್ ಪ್ಲೂ (1957-1958), ಏಡ್‌ಷ್‌ ಪೆಂಡಾಮಿಕ್(1981), ಎಚ್1ಎನ್1 ಸ್ವುನ್ ಪ್ಲೂ (2009-2010), ಎಬೋಲಾ ಎಪಿಡ್ಯಾಮಿಕ್(2014 –
2016), ಝೀಕಾ ವೈರಸ್(2015), ಇವುಗಳ ಉತ್ಪತ್ತಿ ಯಾವುದಾದರೂ ಪ್ರಾಣಿ ಮತ್ತು ಪಕ್ಷಿ ಎಂಬುದು. ಆದರೆ ಈ ಕರೋನಾ ಮಾತ್ರ ಮಾನವ ನಿರ್ಮಿತ ಎಂಬುದು.

ಯಾಕೆಂದರೆ ಈ ವೈರಸ್ಸೆಂಬುದೆ ಮಾನವ ನಿರ್ಮಿತ, ಪ್ರಕೃತಿ ನಿರ್ಮಿತವಲ್ಲ. ಈ ಕರೋನಾ ಮಹಾಮಾರಿ ಮಾನವ ನಿರ್ಮಿತ ಮತ್ತು ಪ್ರಯೋಗಾಲಯದಿಂದ ಹೊರಚಾಚಿದ ರಾಸಾಯನಿಕ ಎಂಬುದು ಗುಟ್ಟಾಗಿ ಉಳಿದಿಲ್ಲ, ಮತ್ತು ಅಲ್ಲಿ ಈ ಜೈವಿಕ
ಪ್ರಯೋಗ ಅವ್ಯಾಹತವಾಗಿ ನಡೆದಿತ್ತು ಮತ್ತು ಈ ಜೀವ ಸತ್ವವು ಹೊರ – ಜಗತ್ತಿಗೆ ಜಿಗಿಯಲ್ಪಟ್ಟಾಗ ಮಾಡಬಹುದಾದ ಹಾನಿಯ ಮಾಹಿತಿಯು ಅಲ್ಲಿ ಪ್ರಯೋಗದಲ್ಲಿ ತೊಡಗಿಕೊಂಡ ಸಂಶೋಧಕರಿಗೆ ಅರಿವಿತ್ತೆಂಬುದು ಗಮನಾರ್ಹವಾದ ವಿಚಾರ. ಇಂತಹ ಮನುಷ್ಯ ಮಾರಣ ಹೋಮಕ್ಕೆ ಕಾರಣವಾಗುವಂಥ ಪ್ರಯೋಗ ಅಲ್ಲಿ ಏತಕ್ಕಾಗಿ ನಡೆದಿತ್ತೆೆಂಬುದು ಈಗ ಅಪ್ರಸ್ತುತ. ಆದರೆ ಇಡೀ ವಿಶ್ವಕ್ಕೆ, ಜೀವ ಜಗತ್ತಿಗೆ ಇಷ್ಟೊಂದು ಹಾನಿ ಮಾಡಬಹುದಾದ ರಾಸಾಯನಿಕವನ್ನು ಅಥವಾ ಸೂಕ್ಷ್ಮಜೀವಿಯನ್ನು ಹೊರ ಹೋಗ ದಂತೆ ತಡೆಯುವಲ್ಲಿ ಎಡವಿದ ಅರ್ಥಾತ್ ಯಾವುದೇ ಮುಂಜಾಗ್ರತೆ ಕೈಗೊಳ್ಳುವಲ್ಲಿ, ವಿಫಲವಾದ ಸಂಸ್ಥೆ, ಆ ದೇಶವನ್ನು ತಪ್ಪಿತಸ್ಥರನ್ನಾಗಿ ಮಾಡಬೇಕಿರುವುದು ಒಂದು ಸಮಯೋಚಿತ ನಡೆ.

ಈ ಬಗ್ಗೆ ಈ ಪಿಡುಗಿನಿಂದ ಬಳಲುತ್ತಿರುವ, ಜೀವಹಾನಿ, ಆರ್ಥಿಕ ಹಾನಿ, ಆರೋಗ್ಯಹಾನಿಗಳನ್ನು ಡಾಲರ್ ಲೆಕ್ಕದಲ್ಲಿ ಪಟ್ಟಿ ಮಾಡಿ ಪರಿಹಾರವನ್ನು ಕೇಳುವುದು ಕಾನೂನಡಿಯಲ್ಲಿ ಅತ್ಯಂತ ಸೂಕ್ತವೆನಿಸುತ್ತದೆ. ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಈ ಹಿಂದೆ ನೀಡಿದ ತೀರ್ಪನಡಿಯಲ್ಲಿ ಇದಕ್ಕೆ ಅವಕಾಶವಿದೆ ಎಂಬುದು ಅಷ್ಟೇ ಸತ್ಯವಾಗಿದೆ. ಡೋನೋಗ್ ವಿರುದ್ಧ ಸ್ಟೀವನ್ಸನ್ (1932)ರಲ್ಲಿ ಸ್ಕಾಟ್ಸ್ ಡೆಲಿಸಿಟ್ ಲಾ,  ಇಂಗ್ಲೀಷ್ ಅಪವರ್ತ್ಯಕಾನೂನಿಡಿಯಲ್ಲಿ, ನಿರ್ಲಕ್ಷ್ಯವು ನಿರ್ಲಜ್ಯವಾಗಬಾರದು, ಪ್ರಮಾಣಿಕ ಜಾಗರೂಕತೆಯಿಂದ ಇನ್ನೊಬ್ಬರ ಜೀವ ಮತ್ತು ಆಸ್ತಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು, ಹಾನಿಮಾಡಿದರೆ ಪರಿಹಾರ ನೀಡುವುದು ಕರ್ತವ್ಯವಾಗಿದೆ ವೆಂಬುದನ್ನು ಸ್ಪಷ್ಟವಾಗಿ ಹೇಳಿದ್ದು ಇದೆ.

ವಿಶ್ವ ಆರೋಗ್ಯ ಸಂಸ್ಥೆಯು 1983ರಲ್ಲಿ, ಲ್ಯಾಬೊರೇಟರಿ ಬಯೋಮ್ಯಾನುವಲ್ ಎಂಬ ಕರಡುನೀತಿಯನ್ನು ಅನುಷ್ಠಾನಕ್ಕೆ  ತಂದಿದ್ದು, ಮೂರನೇಯ ಪಠ್ಯದಲ್ಲಿ ಸೋಂಕು ತಗುಲುವ ರಸಾಯನಿಕಗಳ ರಕ್ಷಣೆ ಬಗ್ಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಮುಂದುವರಿದ ದೇಶ ಗಳಾದ ಯುಎಸ್‌ಎ, ಯುಕೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಮುಂತಾದ ದೇಶ
ಗಳು 1963ರಲ್ಲಿ ವಿಶ್ವ ಸಂಸ್ಥೆಯ ಅಡಿಯಲ್ಲಿ ಕ್ರಿಮಿನಲ್ ಇಂಜುರೀಸ್ ಕಂಪನ್ಸೇಶನ್ ಲೆಜಿಸಲೇಶನ್ ಅನ್ನು ಎಲ್ಲಸದಸ್ಯ ರಾಷ್ಟ್ರ ಗಳು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿದವು ಮತ್ತು 1963ರಲ್ಲಿ ನ್ಯೂಜಿಲೆಂಡ್ ದೇಶವು, 1964ರಲ್ಲಿ ಯುನೈಟೆಡ್ ಕಿಂಗ್ ‌ಡಮ್ ದೇಶವು ಈ ಅಂತಾರಾಷ್ಟ್ರೀಯ ಕರಡು ನೀತಿ ಯನ್ನು ತಮ್ಮ ದೇಶಗಳಲ್ಲಿ ಅಡಾಪ್ಟ್ ಮಾಡಿಕೊಂಡವು.

ವಿಶ್ವ ಸಂಸ್ಥೆಯು ಕೂಡ ನೊಂದ ಜೀವಿಗಳಿಗೆ ಪರಿಹಾರ ಒದಗಿಸುವ ಯುನಿವರ್ಸಲ್ ಡಿಕ್ಲೇರೆಶನ್ ಅನ್ನು 1985ರಲ್ಲಿ ಲಾಗೂ ಮಾಡಿಕೊಂಡಿತು. ಇದನ್ನು ನೋಂದವರಿಗೆ ಪರಿಹಾರ ನೀಡುವ ಮ್ಯಾಗ್ನಾ ಕಾಟರ್ ಎಂದು ಕರೆಯಲಾಗಿದೆ. 1997 ರಲ್ಲಿ ಈ ಬಗ್ಗೆ
ಮಾನವ ಹಕ್ಕುಗಳ ರಕ್ಷಣೆಗಾಗಿ ವಿಸ್ತೃತ ಪರಿಚ್ಛೇದಗಳು ಬಂದದ್ದು ನಮಗೆ ತಿಳಿದಿದೆ. ‘ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಆಫ್ ಜಸ್ತಿಸ್’ ಕಾರ್ಯ ವ್ಯಾಪ್ತಿಯಲ್ಲಿ ಬರುತ್ತದೆ ಎಂಬುದು ತಿಳಿದ ವಿಷಯವಾಗಿದೆ. ಚೀನಾದೇಶದ ವುಹಾನಿನ ಪ್ರಯೋಗ ಶಾಲೆಯಲ್ಲಿ ಈ ಅಚಾತುರ್ಯ್ಯ ನಡೆದಿದೆ ಎಂಬುದು ಸ್ಪಷ್ಟ, ಚೀನಾ ದೇಶ ಮತ್ತು ಆ ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಿ, ಅಂತಾರಾಷ್ಟ್ರೀಯ ಕ್ಲೇಮು ಕಮೀಷನರ್‌ರನ್ನು ನೇಮಿಸಿ, ಹಾನಿಗೊಳಗಾದ ದೇಶಗಳಿಗೆ ನಷ್ಟ ಪರಿಹಾರ ಕೊಡಿಸುವುದು ಅಗತ್ಯ.

Leave a Reply

Your email address will not be published. Required fields are marked *

error: Content is protected !!