Friday, 20th September 2024

ನಿಮ್ಮ ಮಹಾ ಅಭಿಮಾನಿ ಶಿಷ್ಯ

ಬಸವರಾಜ್ ಮಹಾಮನಿ

ಬಹಳ ಜನ ಮಾತನಾಡುತ್ತಾರೆ ಕಲಾವಿದರು ಬಹಳ ಸುಖವಾಗಿರುತ್ತಾರೆ ಅಂತ. ಊರು ಊರು ತಿರುಗುವ ನಮ್ಮ ಪಾಡು ಏನು ಅಂತ ನಮಗೆ ಮಾತ್ರ ಗೊತ್ತು. ಕಾರ್ಯಕ್ರಮ ಸರಿಯಾದ ಸಮಯಕ್ಕೆ ಪ್ರಾರಂಭವಾಗಿ ಸಮಯಕ್ಕೆ ತಕ್ಕಂತೆ ಕಾರ್ಯಕ್ರಮ ಮುಗಿ ದರೆ, ನಾವು ಬಸ್ ಅಥವಾ ರೈಲು ಹಿಡಿದು ಮರುದಿನ ಇನ್ನೊೊಂದು ಕಾರ್ಯಕ್ರಮ ನೀಡಲು ಬೇರೆ ಊರಿಗೆ ಹೋಗುತ್ತೇವೆ.
ಒಂದು ಸಲ ಅಥಣಿ ಕಾರ್ಯಕ್ರಮಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರ್‌ಗೆ ಹೋಗಬೇಕಿತ್ತು. ಅಥಣಿಯಲ್ಲಿ ಅನಿ
ವಾರ್ಯ ಕಾರಣಗಳಿಂದ ನಮ್ಮ ಕಾರ್ಯಕ್ರಮ ವಿಳಂಬವಾಯಿತು.

ಬಸ್ ತಪ್ಪಿತು. ಸಂಘಟಕರು ಕಾರಿನಲ್ಲಿ ಧಾರವಾಡದ ರೇಲ್ವೆೆ ನಿಲ್ದಾಣಕ್ಕೆ ರಾತ್ರಿ 2 ಗಂಟೆಗೆ ತಂದು ಬಿಟ್ಟರು. ಬೆಳಿಗ್ಗೆೆ 5 -30 ಕ್ಕೆ ರೈಲು ಇರುವುದು ತಿಳಿಯಿತು. ರೇಲ್ವೆೆ ನಿಲ್ದಾಣದಲ್ಲಿ ಅವತ್ತು ಸರಿಯಾದ ಲೈಟ್ ಕೂಡ ಇದ್ದಿಲ್ಲ. ಅಲ್ಲಿನ ಶೌಚಾಲಯದ ಮುಂದೆ ಮಾತ್ರ ಲೈಟ್ ಬೆಳಗುತ್ತಿತ್ತು!

ಆ ಕಾರಣ ಶೌಚಾಲಯದ ಮುಂದೆ ಬೆಳಗಿನವರಿಗೂ ಸೊಳ್ಳೆ ಕಚ್ಚಿಸಿಕೊಂಡು ಕುಳಿತುಕೊಳ್ಳಬೇಕಾಯಿತು! ಬೆಳಗಿನ ಜಾವ 5.30ಕ್ಕೆೆ
ರೈಲು ಹಿಡಿದು ಬೆಂಗಳೂರಿಗೆ ನಾವು ಬಂದಾಗ ಮಧ್ಯಾಹ್ನ 2 ಗಂಟೆ. ಅವತ್ತು ಸಾಯಂಕಾಲ ನಮ್ಮ ಗುರುಗಳಿಂದ, ಅಂದರೆ ಗಂಗಾವತಿ ಪ್ರಾಣೇಶ್ ಅವರಿಂದ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಕಾರ್ಯಕ್ರಮ. ಬಹಳಷ್ಟು ಸುಸ್ತಾಗಿದ್ದ ನಮಗೆ ಕಾರ್ಯ ಕ್ರಮ ಹೇಗೆ ಆಗುತ್ತೋ ಎನ್ನುವ ಆತಂಕ. ಆದರೆ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ನಮ್ಮ ಗುರುಗಳ ಮಾತಿಗೆ ಸ್ಟೇಜ್ ಮೇಲೆ ಇದ್ದ ಸ್ವಾಮಿಗಳೂ, ನೆರೆದಿದ್ದ ಜನರೂ ಬಿದ್ದು ಬಿದ್ದು ನಕ್ಕರು. ಅಲ್ಲಿವರೆಗೆ ನಮಗಾಗಿದ್ದ ಸುಸ್ತು ಆಯಾಸ ಎಲ್ಲಾ ಹೊರಟು ಹೋಯಿತು. ಹಾಸ್ಯ ಕಲಾವಿದರಿಗೆ ಕಾರ್ಯಕ್ರಮದಲ್ಲಿ ಜನರ ನಕ್ಕು ಬಿಟ್ಟರೆ ಸಾಕು, ಅವರ ಎಲ್ಲಾ ಸುಸ್ತು ಮಾಯವಾಗಿ ಬಿಡುತ್ತದೆ!

ನಮ್ಮ ಗುರುಗಳಾದ ಗಂಗಾವತಿ ಪ್ರಾಣೇಶ್ ಅವರ ಜತೆ ಸಾಕಷ್ಟು ಕಾರ್ಯಕ್ರಮ ನೀಡಿದ್ದೇನೆ. ಅವರ ಮಾತುಗಳನ್ನು ಎಷ್ಟು ಸಲ
ಕೇಳಿದರೂ, ಮತ್ತೊಮ್ಮೆ ಕೇಳಬೇಕು ಅಂತ ಅನ್ನಿಸುತ್ತೆೆ. ಒಮ್ಮೊಮ್ಮೆ ಅದೇ ವಿಷಯವನ್ನು ಬೇರೆಲ್ಲೋ ಹೇಳಿದ್ದರೂ, ಅದೇ ವಿಷಯಕ್ಕೆ ಇನ್ನೊೊಂದು ಆಯಾಮ ನೀಡಿ, ನಗು ಉಕ್ಕಿಸುವ ಅವರ ಜಾಣ್ಮೆೆ ಅಸಾಧಾರಣ. ಅವರ ಇನ್ನೊೊಂದು ವಿಶೇಷತೆ ಎಂದರೆ ತಾವು ಬೆಳೆಯುವದರ ಜತೆಯಲ್ಲೇ, ನನ್ನಂತಹ ಶಿಷ್ಯರು ಮತ್ತು ಸಹ ಕಲಾವಿದರನ್ನೂ ಬೆಳೆಸುವಂಥದ್ದು. ಇವರ ಮಾತುಗಳನ್ನು ಕೇಳಿ ಉತ್ತರ ಕರ್ನಾಟಕದಲ್ಲಿ 14 ಜನ ಶಿಷ್ಯಂದಿರು ತಯಾರಾಗಿದ್ದಾರೆ.

ಒಮ್ಮೊಮ್ಮೆ ಶಿಷ್ಯಂದಿರಿಗೆ, ಅಂದರೆ ನಮಗೆ ಕಟುವಾಗಿ ಹೇಳುತ್ತಾರೆ ‘ಹೊಸ ಬಟ್ಟೆೆ ಹಾಕಿಕೊಳ್ಳುವದರ ಜತೆ, ಕಾರ್ಯಕ್ರಮದಲ್ಲಿ ಹೊಸ ಜೋಕ್ ಅಥವಾ ನಿಮ್ಮ ಹೊಸ ಅನುಭವ ಹೇಳಿ’ ಎಂದು. ಅಂದರೆ ದೈನಂದಿನ ಜೀವನದಲ್ಲಿ ನಾವು ಕಂಡ, ಅನುಭವಿಸಿದ ಘಟನೆಗಳಿಗೆ ತಿಳಿ ಹಾಸ್ಯ ಲೇಪಿಸಿ, ಜನರಿಗೆ ನೀಡಬೇಕು ಎಂಬುದು ಅವರ ಮಾರ್ಗದರ್ಶನ. ಪ್ರಾಣೇಶ್ ಗುರುಗಳಿಂದ ನಾವು ಮುಖ್ಯ ವಾಗಿ ಕಲಿತದ್ದು ಅವರ ಸರಳತೆ. ಅವರು ಸುಲಭವಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ.

ಅವರಲ್ಲಿ ಈಗಲೂ ಇರುವುದು ಅದೇ ಹಿಂದಿನ ಸರಳತೆ, ಮುಗ್ಧ ಮನಸ್ಸು. ಯಾವುದೇ ಅಹಂ ಇಲ್ಲದ ವ್ಯಕ್ತಿತ್ವ. ಅವರು ಹಾಸ್ಯ ಲೋಕದಲ್ಲಿ ಬೆಳೆದ ರೀತಿ ಅದ್ಭುತ ಹಾಗೂ ಸ್ಫೂರ್ತಿದಾಯಕ. ಅವಕಾಶವೇ ಇಲ್ಲದ ಕಾಲದಲ್ಲಿ ಅವಕಾಶ ಸೃಷ್ಟಿ ಮಾಡಿಕೊಂಡು ಬೆಳೆದ ರೀತಿ ಅದ್ಭುತವಾದದ್ದು. ಅವರು ಇವತ್ತು ಕರ್ನಾಟಕದ ಹಾಸ್ಯಲೋಕದ ದಂತಕಥೆ ಅಂದರೆ ತಪ್ಪಾಗಲಿಕ್ಕಿಲ್ಲ.

ಉತ್ತರ ಕರ್ನಾಟಕದಿಂದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಪಾಲ್ಗೊೊಂಡ ಮೊದಲ ಕಲಾವಿದರು ನಮ್ಮ ಗಂಗಾವತಿ ಪ್ರಾಣೇಶ್ ಅವರು. ‘ವಿಶ್ವವಾಣಿ’ಯ ಅಂಕಣಕಾರರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ. ಅವರಿಗೆ ಅಧ್ಯಯನ ಅಂದ್ರೆ ತುಂಬಾ ಇಷ್ಟ.
ಕಾರ್ಯಕ್ರಮದ ವೇಳಾಪಟ್ಟಿಯ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ. ‘ನೀನು ಹೇಳಿದ ಸ್ಥಳಕ್ಕೆ ಕಾರ್ಯಕ್ರಮ ಕೊಟ್ಟು ಬರುತ್ತೀನಿ. ಕಾರ್ಯಕ್ರಮ ಸಾಯಂಕಾಲ 6 ಗಂಟೆ ಪ್ರಾರಂಭವಾಗಿ 9 ಗಂಟೆಗೆ ಮುಗಿಯಬೇಕು’ ಅಂತ ಖಡಕ್ ಆಗಿ ಹೇಳಿದ್ದಾರೆ.

ಕಾರಣ ಕೇಳಿದರೆ  ‘ನನಗೂ ವಯಸ್ಸಾಯಿತು. ಜಾಸ್ತಿ ಲೇಟ್ ಆಗುವ ಕಾರ್ಯಕ್ರಮ ಬೇಡ. ಆರೋಗ್ಯಕ್ಕೆ ಒಳ್ಳೆಯದಲ್ಲಾ’ ಅಂತ ಹೇಳುತ್ತಾರೆ. ‘ವಯಸ್ಸು ಆಯಿತು’ ಎಂದು ಹೇಳುವ ನನ್ನ ಗುರುಗಳಾದ ಗಂಗಾವತಿ ಪ್ರಾಣೇಶ್ ಅವರಿಗೆ ಇಂದಿಗೆ 60 ವರುಷ. ಹುಟ್ಟು ಹಬ್ಬದ ಶುಭಾಶಯಗಳು ಗುರುಗಳೇ! ದೇವರು ನಿಮಗೆ ಸುಖ ಶಾಂತಿ ನೆಮ್ಮದಿ, ಆರೋಗ್ಯ ನೀಡಲೆಂದು ಹಾರೈಸುತ್ತೇನೆ.