Friday, 20th September 2024

ಬೆಂಕಿಗೆ ಆಹುತಿಯಾಗಿ, ಮುಳುಗಿದ ಯುದ್ಧನೌಕೆ ‘ಖಾರ್ಗ್‌’

ಟೆಹ್ರಾನ್‌: ಇರಾನ್‌ನ ಬೃಹತ್‌ ಯುದ್ಧನೌಕೆ ‘ಖಾರ್ಗ್‌’ ಬೆಂಕಿಗೆ ಆಹುತಿಯಾಗಿ, ಒಮಾನ್‌’ನ ಗಲ್ಪ್ ಪ್ರದೇಶದಲ್ಲಿ ಮುಳುಗಿರುವ ಕುರಿತು ವರದಿಯಾಗಿದೆ. ಪರ್ಷಿಯನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಬಳಿ ಒಮಾನ್ ಕೊಲ್ಲಿ ಯಲ್ಲಿ ಜಾಸ್ಕ್‌ ಬಂದರಿನ ಸಮೀಪ ಹಡಗು ಮುಳುಗಿತು. 1977ರಲ್ಲಿ ಬ್ರಿಟನ್‌ನಲ್ಲಿ ನಿರ್ಮಾಣವಾದ ಈ ಯುದ್ಧನೌಕೆ 1984ರಲ್ಲಿ ಇರಾನ್‌ಗೆ ಹಸ್ತಾಂತರಗೊಂಡಿತ್ತು. ಪ್ರಮುಖ ಸರಕು ಸಾಗಣೆ ನೌಕೆಯಾಗಿ ಹಾಗೂ ಹೆಲಿಕಾ ಪ್ಟರ್‌ಗಳ ಚಿಮ್ಮು ಹಲಗೆಯಾಗಿ ಬಳಕೆಯಾಗುತ್ತಿತ್ತು. ಇರಾನ್‌ ನೌಕಾಪಡೆಯಲ್ಲಿ ಸಂಭವಿಸಿದ ಮೂರನೇ ದೊಡ್ಡ ದುರಂತವಾಗಿದೆ. 2020ರಲ್ಲಿ ಜಸ್ಕ್‌ ಬಂದರಿನ ಬಳಿ ಕ್ಷಿಪಣಿಯೊಂದು ಅಚಾತುರ್ಯದಿಂದ […]

ಮುಂದೆ ಓದಿ

ಕರೋನಾ ಭೀತಿ: ಚೀನಾದಲ್ಲಿ ವಿಮಾನಗಳ ಹಾರಾಟ ಸ್ಥಗಿತ

ಶಾಂಘೈ: ಚೀನಾದಲ್ಲಿ ಕರೋನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತ ಗೊಳಿಸಲಾಗಿದೆ. ಗುವಾಂಗ್‌ಜೌನಲ್ಲಿ ಏಕಾಏಕಿ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದು, ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಗುವಾಂಗ್‌ಜೌ...

ಮುಂದೆ ಓದಿ

ಆಫ್ಘಾನ್‌’ನಲ್ಲಿ ಹಿಂಸಾತ್ಮಕ ದಾಳಿ: 20 ನಾಗರಿಕರ ಸಾವು, 34 ಮಂದಿ ಗಾಯ

ಕಾಬುಲ್: ಅಫ್ಘಾನಿಸ್ತಾನದ ಐದು ಪ್ರಾಂತ್ಯಗಳಲ್ಲಿ ವಿವಿಧ ರೀತಿಯ ಹಿಂಸಾ ತ್ಮಕ ದಾಳಿಗಳು ನಡೆದಿದ್ದು 20ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟು, 34 ಮಂದಿ ಗಾಯಗೊಂಡಿದ್ದಾರೆ. ನಂಗರ್ಹಾರ್ ಪ್ರಾಂತ್ಯದ ಶಿರ್ಜಾದ್...

ಮುಂದೆ ಓದಿ

ದಕ್ಷಿಣ ಫ್ಲೋರಿಡಾದಲ್ಲಿ ಗುಂಡಿನ ದಾಳಿ: ಇಬ್ಬರ ಸಾವು, 25 ಜನರಿಗೆ ಗಾಯ

ಮಿಯಾಮಿ: ದಕ್ಷಿಣ ಫ್ಲೋರಿಡಾದ ಔತಣಕೂಟ ಸಭಾಂಗಣದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, 20 ರಿಂದ 25 ಜನರು ಗಾಯ ಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ....

ಮುಂದೆ ಓದಿ

ಭಾರತಕ್ಕೆ ಎರಿಕ್‌ ಗಾರ್ಸೆಟ್ಟಿ ರಾಯಭಾರಿ ?

ವಾಷಿಂಗ್ಟನ್‌: ಭಾರತದಲ್ಲಿನ ಅಮೆರಿಕದ ಮುಂದಿನ ರಾಯಭಾರಿಯಾಗಿ ಎರಿಕ್‌ ಗಾರ್ಸೆಟ್ಟಿ ನೇಮಕಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಗಾರ್ಸೆಟ್ಟಿ ಅವರು, ಬೈಡನ್‌ ಅವರ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಹ ಉಸ್ತುವಾರಿಯಾಗಿದ್ದರು....

ಮುಂದೆ ಓದಿ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್: ಎಂಟು ಮಂದಿ ಸಾವು

ಸ್ಯಾನ್ ಫ್ರಾನ್ಸಿಸ್ಕೋ: ಕ್ಯಾಲಿಫೋರ್ನಿಯಾದಲ್ಲಿ ಬುಧವಾರ ರೈಲ್ವೆ ಯಾರ್ಡ್ ನ ಉದ್ಯೋಗಿ ಗುಂಡಿನ ದಾಳಿ ನಡೆಸಿದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋದ ಸ್ಯಾನ್ ಜೋಸ್...

ಮುಂದೆ ಓದಿ

ಲಸಿಕೆ ಹಾಕಿಸಿಕೊಂಡಿದ್ದ ಮೊದಲ ವ್ಯಕ್ತಿ ವಿಲಿಯಂ ನಿಧನ

ಲಂಡನ್: ಪ್ರಪಂಚದಲ್ಲಿಯೇ ಮೊದಲ ಬಾರಿ ಕರೋನಾ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದ ಬ್ರಿಟನ್‌ ದೇಶದ ವಿಲಿಯಂ ಷೇಕ್ಸ್‌ಪಿಯರ್(81) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಡಿಸೆಂಬರ್ 8, 2020ರಂದು,...

ಮುಂದೆ ಓದಿ

ಭಾರತದ ತೊರೆದಿದ್ದ ಮೆಹುಲ್ ಚೋಕ್ಸಿ ಅಂಟಿಗಾದಲ್ಲೂ ನಾಪತ್ತೆ

ಆಂಟಿಗಾ: ಭಾರತ ತೊರೆದು ಅಂಟಿಗಾ ದ್ವೀಪ ರಾಷ್ಟ್ರದಲ್ಲಿ ನೆಲೆ ಕಂಡುಕೊಂಡಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ವಜ್ರ ವ್ಯಾಪಾರಿ, ಗೀತಾಂಜಲಿ ಸಮೂಹದ ಮೆಹುಲ್...

ಮುಂದೆ ಓದಿ

ಕರೋನಾ ವೈರಸ್‌ ಮೌಂಟ್ ಎವರೆಸ್ಟ್ ಏರಿತ್ತಾ ?

ವಿಶ್ವದ ಎತ್ತರದ ಶಿಖರಗಳಂದು ಮೌಂಟ್ ಎವರೆಸ್ಟ್. ಪ್ರತಿ ಪರ್ವತಾರೋಹಿಗೂ ಜೀವನದಲ್ಲಿ ಒಂದೇ ಒಂದು ಸಲ ಆದರೂ ಮೌಂಟ್ ಎವರೆ ಏರಬೇಕು ಅನ್ನೋದೇ ದೊಡ್ಡ ಕನಸಾಗಿರುತ್ತದೆ. ಆ ಕನಸು...

ಮುಂದೆ ಓದಿ

ಮೌಂಟ್ ಯಿರಾಗೊಂಗೋದಲ್ಲಿ ಜ್ವಾಲಾಮುಖಿ: 15 ಮಂದಿ ಸಾವು

ಗೋಮಾ: ಕಾಂಗೋ ದೇಶದ ಈಶಾನ್ಯ ಪ್ರಾಂತ್ಯದಲ್ಲಿ ಸಂಭವಿಸಿದ ಜ್ವಾಲಾಮುಖಿಯಿಂದ ಲಾವಾರಸ ಉಕ್ಕಿ, 15 ಮಂದಿ ಮೃತ ಪಟ್ಟು, 500ಕ್ಕೂ ಹೆಚ್ಚು ಮನೆಗಳು ನಾಶವಾಗಿದೆ. ಮೌಂಟ್ ಯಿರಾಗೊಂಗೋದಲ್ಲಿ ಜ್ವಾಲಾಮುಖಿ...

ಮುಂದೆ ಓದಿ