Wednesday, 11th December 2024

’Angry Rantman’ ಅಭ್ರದೀಪ್ ಸಾಹಾ ನಿಧನ

ಮುಂಬೈ: ವಿಚಿತ್ರವಾಗಿ ಸಿನಿಮಾ ವಿಮರ್ಶೆ ಮಾಡಿ ಅವರು ಫೇಮಸ್ ಆಗಿದ್ದ 27 ವರ್ಷದ ಅಭ್ರದೀಪ್ ಸಾಹಾ ಅವರು ನಿಧನ ಹೊಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರ‍್ಯಾಂಟ್​ಮ್ಯಾನ್ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಹೀಗಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಸಾಕಷ್ಟು ಜೋಶ್​ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಿದ್ದರು. ಜೊತೆಗೆ ಇತರ ವಿಡಿಯೋಗಳನ್ನು ಕೂಡ ಮಾಡುತ್ತಿದ್ದರು. ಅವರಿಗೆ 4.8 ಲಕ್ಷ ಹಿಂಬಾಲಕರು ಇದ್ದರು.

ಅವರ ತಂದೆ ಆಯಂಗ್ರಿ ರ‍್ಯಾಂಟ್​ಮ್ಯಾನ್ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ್ದರು. ‘ನನ್ನ ಮಗ ಇನ್ನೂ ಐಸಿಯುನಲ್ಲೇ ಇದ್ದಾನೆ’ ಎಂದು ಹೇಳಿದ್ದರು.

ಅವರು ‘ಕೆಜಿಎಫ್ 2’ ಸಿನಿಮಾದ ವಿಮರ್ಶೆ ಮಾಡಿದ್ದರು. ‘ರಾಕಿಭಾಯ್ ಪ್ರಧಾನಮಂತ್ರಿ ಆದರೆ ನಮ್ಮ ದೇಶ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಇರುತ್ತದೆ’ ಎಂದು ಕೂಗಿ ಹೇಳಿದ್ದರು. 10 ನಿಮಿಷಗಳ ಈ ವಿಡಿಯೋ ಬರೋಬ್ಬರಿ 17 ಲಕ್ಷ ವೀಕ್ಷಣೆ ಕಂಡಿದೆ. ಅವರು ಕೂಗಾಡಿಕೊಂಡು ಸಿನಿಮಾ ವಿಮರ್ಶೆ ಹೇಳಿದ್ದರು. ಯಶ್ ನಟನೆಯನ್ನು ಹಾಡಿ ಹೊಗಳಿದ್ದರು.