Friday, 13th December 2024

ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಟ ಪ್ರಭಾಸ್‌

ಹೈದರಾಬಾದ್: ನಟ ಪ್ರಭಾಸ್‌ ಮುಂಬರುವ ಚಿತ್ರ ‘ಆದಿಪುರುಷ’ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

‘ಆದಿಪುರುಷ’ ಚಿತ್ರದ ಟ್ರೇಲರ್‌ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದು, ತಿರುಪತಿ ಜಿಲ್ಲೆಯ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಪ್ರಾರ್ಥನೆ ಸಲ್ಲಿಸಿದರು.

ಟ್ವೀಟ್ ಮಾಡಿರುವ ನಟ ಪ್ರಭಾಸ್‌, ಆದಿಪುರುಷ ಸಿನಿಮಾವು ಇದೇ ಜೂನ್ 16ರಂದು ವಿಶ್ವದಾದ್ಯಂತ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಓಂ ರಾವತ್‌ ನಿರ್ದೇಶಿಸಿರುವ ‘ಆದಿಪುರುಷ’ ಸಿನಿಮಾವು ಬಿಗ್‌ ಬಜೆಟ್‌ ಚಿತ್ರವಾಗಿದ್ದು, ಚಿತ್ರದಲ್ಲಿ ನಟಿ ಕೃತಿ ಸನೋನ್, ಸನ್ನಿ ಸಿಂಗ್‌ , ದೇವ ದತ್ತ ನಾಗೆ ಹಾಗೂ ಸೈಫ್ ಅಲಿ ಖಾನ್‌ ಸಹ ನಟಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ‘ಆದಿಪುರುಷ’ ಚಿತ್ರವು 3ಡಿಯಲ್ಲಿ ಕಾಣಿಸಲಿದ್ದು, ಮೊದಲ ಪ್ರದರ್ಶನವು ಜೂನ್ 13ರಂದು ನ್ಯೂಯಾರ್ಕ್‌ನ ಟ್ರಿಬೆಕಾ ಚಲನಚಿತ್ರೋತ್ಸವ 2023ನಲ್ಲಿ ತೆರೆ ಮೇಲೆ ಬರಲಿದೆ.