Saturday, 27th July 2024

ಅಕ್ಷಯ್​ ಕುಮಾರ್ ಇನ್ನು ಭಾರತೀಯ ಪ್ರಜೆ

ಮುಂಬೈ: ಬಾಲಿವುಡ್​ ಸ್ಟಾರ್ ಅಕ್ಷಯ್​ ಕುಮಾರ್ ಅಧಿಕೃತವಾಗಿ ಭಾರತೀಯ ಪ್ರಜೆ ಯಾಗಿ ಹೊರಹೊಮ್ಮಿದ್ದಾರೆ.

ಅಕ್ಷಯ್​  ಭಾರತೀಯ ಸಿನಿಮಾ ರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಓರ್ವರು. ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ಕಿಲಾಡಿ ನಟ ದೇಶಭಕ್ತಿ ಮತ್ತು ಭಾರತೀಯ ಸೇನೆ ಬೆಂಬಲಿಸುವ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೋಲರ್​ಗಳು ನಟನನ್ನು ಕೆನಡಿಯನ್​​ ಕುಮಾರ್​ ಎಂದೇ ಗುರುತಿಸಿದ್ದರು.

ಸ್ವಾತಂತ್ರ್ಯ ದಿನಾಚರಣೆಯಂದು ನಟ ಅಧಿಕೃತವಾಗಿ ಭಾರತೀಯನಾಗಿದ್ದೇನೆಂದು ತಿಳಿಸಿ ದ್ದಾರೆ. ಬಾಲಿವುಡ್​ ಕಿಲಾಡಿ ಆಗಸ್ಟ್ 15ರಂದು ಅಧಿಕೃತವಾಗಿ ಭಾರತೀಯ ಪೌರತ್ವ ಪಡೆದಿ ದ್ದಾರೆ.

ಪೌರತ್ವ ಪಡೆದಿರುವ ದಾಖಲೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿರುವ ನಟ ಅಕ್ಷಯ್​ ಕುಮಾರ್​, ಮನಸ್ಸು ಮತ್ತು ಪೌರತ್ವ ಎರಡೂ ಹಿಂದೂ ಸ್ತಾನಿ, ಸ್ವಾತಂತ್ರ್ಯ ದಿನದ ಶುಭಾಶಯಗಳು, ಜೈ ಹಿಂದ್​ ಎಂದು ಬರೆದುಕೊಂಡಿ ದ್ದಾರೆ.

ಕೆಲ ವರ್ಷಗಳ ಹಿಂದೆ ವೈಯಕ್ತಿಕ ಪರಿಸ್ಥಿತಿ ನಟನನ್ನು ಕೆನಡಾ ಪೌರತ್ವ ಆಯ್ದುಕೊಳ್ಳುವಂತೆ ಪ್ರೇರೇಪಿಸಿತು. ಕೆನಡಿಯನ್​ ಇಂಡಿಯನ್​ ಸ್ಟಾರ್ ಎಂದು ಗುರುತಿಸಿಕೊಂಡರು. ಕೆನಡಾ ಪೌರತ್ವ ಹೊಂದಿದ್ದ ವಿಷಯ ನಟನನ್ನು ಟೀಕೆಗೊಳಗಾಗುವಂತೆ ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!