ಇದಕ್ಕೂ ಮುನ್ನ ಆರ್ಥರ್ ರೋಡ್ ಜೈಲಿನ ಅಧೀಕ್ಷಕ ನಿತಿನ್ ವಾಯ್ಚಲ್ ಹೇಳಿಕೆಯಲ್ಲಿ, ‘ನಾವು ಆರ್ಯನ್ ಖಾನ್ ಅವರ ಬಿಡುಗಡೆ ಆದೇಶವನ್ನು ಸ್ವೀಕರಿಸಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ತಂದೆ ಶಾರುಖ್ ಖಾನ್ ತಮ್ಮ ಮಗನನ್ನು ಕರೆ ತರಲು ಆರ್ಥರ್ ರೋಡ್ ಜೈಲಿಗೆ ತಲುಪಲು ತಮ್ಮ ನಿವಾಸ ಮನ್ನತ್ನಿಂದ ಹೊರಟಿದ್ದಾರೆ. ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಆರ್ಯನ್ಗೆ ಜಾಮೀನು ನೀಡುವಾಗ, ಬಾಂಬೆ ಹೈಕೋರ್ಟ್ ಅವರಿಗೆ 14 ಜಾಮೀನು ಷರತ್ತುಗಳನ್ನು ವಿಧಿಸಿ, ಜೈಲಿ ನಿಂದ ಬಿಡುಗಡೆ ಮಾಡಲು ಆದೇಶ ನೀಡಿದೆ.
ಜಾಮೀನು ಪಡೆದಿರುವ ಆರ್ಯನ್ ಖಾನ್ ಮತ್ತು ಅವರ ಇಬ್ಬರು ಸಹ ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ ಮುನ್ ಧಮೇಚಾ ಅವರನ್ನು ತಲಾ ಒಂದು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ನಲ್ಲಿ ಒಂದು ಅಥವಾ ಇಬ್ಬರ ಶ್ಯೂರಿಟಿ ಯೊಂದಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೈಕೋರ್ಟ್ ಹೇಳಿತ್ತು.