Friday, 21st June 2024

ನಟಿ ಭೈರವಿ ವೈದ್ಯ ಕ್ಯಾನ್ಸರ್’ಗೆ ಬಲಿ

ಮುಂಬೈ: ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ನಟಿ ಭೈರವಿ ವೈದ್ಯ (67) ಕೊನೆಯುಸಿರೆಳೆದಿದ್ದಾರೆ.

ಮಲಯಾಳಂನ ನಿರ್ಮಾಪಕ, ಎಐಸಿಸಿ ಸದಸ್ಯ ಮತ್ತು ಉದ್ಯಮಿ ಪಿ.ವಿ ಗಂಗಾಧರನ್ ನಿಧನದ ಬೆನ್ನಲ್ಲೇ ಚಿತ್ರ ರಂಗದಿಂದ ಮತ್ತೊಂದು ಆಘಾತದ ಸುದ್ದಿ ಬಂದಿದೆ.

ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಹಿರಿಯ ನಟಿ 45 ವರ್ಷಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಗುರುತಿಸಿ ಕೊಂಡಿದ್ದು, ಹಲವು ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ

ನಟಿ ಭೈರವಿ ವೈದ್ಯ ಅವರು ಐಶ್ವರ್ಯಾ ರೈ ಅಭಿನಯದ ತಾಲ್ ಮತ್ತು ಸಲ್ಮಾನ್ ಖಾನ್ – ರಾಣಿ ಮುಖರ್ಜಿ ಜೋಡಿಯ ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಪುತ್ರಿ ಜಾನಕಿ ವೈದ್ಯ ಅವರು ತಾಯಿಯ ನಿಧನದ ಬಗ್ಗೆ ಸಾಮಾಜಿಕ ಮಾಧ್ಯಮ ದಲ್ಲಿ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

“ನನಗೆ ನೀವು ನನ್ನ ಮಾ, ಮಾಮ್​​, ಮಮ್ಮಿ, ಚೋಟಿ, ಭೈರವಿ ಎಲ್ಲವೂ ಆಗಿದ್ದಿರಿ. ವರ್ಣರಂಜಿತ, ನಿರ್ಭೀತ, ಸೃಜನಶೀಲ, ಕಾಳಜಿಯುಳ್ಳ, ಜವಾಬ್ದಾರಿ ಯುತ ವ್ಯಕ್ತಿಯಾಗಿದ್ದಿರಿ. ಚಲನಚಿತ್ರ, ಟಿವಿ, ಒಟಿಟಿ ಯಾವುದೇ ಆಗಿರಲಿ, ಉದ್ಯಮದಲ್ಲಿ ತನ್ನ ಹೆಸರನ್ನು ಪ್ರಜ್ವಲಿಸಿಕೊಂಡ ಮಹಿಳೆ. ಮುಗುಳ್ನಕ್ಕರು, ನಗು ಬೀರಿದರು. ಕೊನೆಯ ಉಸಿರು ಇರುವವರೆಗೂ ಹೋರಾಡಿದ ಮಹಿಳೆ, ನಿಮಗೆ ನನ್ನ ಪ್ರಣಾಮಗಳು. ನೀವು ನಮ್ಮನ್ನು ಬಿಟ್ಟು ಬಹಳ ಬೇಗ ನಿರ್ಗಮಿಸಿದಿರಿ. ನಟಿಯ ಪುತ್ರಿ ಜಾನಕಿ ವೈದ್ಯ ಎಂದು ಬರೆದುಕೊಂಡಿದ್ದಾರೆ..

ನಟಿಯ ಸಹೋದ್ಯೋಗಿ, ಚಿತ್ರರಂಗ ಸೇರಿದಂತೆ ಅಭಿಮಾನಿಗಳಿಗೆ ಇದು ಆಘಾತಕಾರಿ ಸುದ್ದಿಯಾಗಿದೆ.

ಕಾರ್ಯಕ್ರಮವೊಂದರ ಸಹ ನಟಿ ಸುರಭಿ ದಾಸ್ ಅವರು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!