ಬೆಂಗಳೂರು: ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್ (Daali Dhananjaya) ಹಾಗೂ ತೆಲುಗಿನ ಸತ್ಯದೇವ್ (Satyadev) ನಟನೆಯ ʼಜೀಬ್ರಾʼ (Zebra) ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ನ. 22ಕ್ಕೆ ಈ ಮಲ್ಟಿಸ್ಟಾರ್ಸ್ ಹಾಗೂ ಬಹುಭಾಷಾ ಚಿತ್ರ ʼಜೀಬ್ರಾ ʼ ತೆರೆಗೆ ಬರಲಿದೆ. ಹೀಗಾಗಿ ಧನಂಜಯ್ ಹಾಗೂ ಸತ್ಯದೇವ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಮಾಲ್‌ನಲ್ಲಿ ಇತ್ತೀಚೆಗೆ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಇವೆಂಟ್‌ಗೆ ಮುಖ್ಯ ಅತಿಥಿಗಳಾಗಿ ದುನಿಯಾ ವಿಜಯ್ ಕುಮಾರ್, ಸತೀಶ್ ನೀನಾಸಂ, ಸಪ್ತಮಿ ಗೌಡ, ನಾಗಭೂಷಣ್ ಆಗಮಿಸಿದ್ದರು.
ನಟ ದುನಿಯಾ ವಿಜಯ್ ಕುಮಾರ್ ಮಾತನಾಡಿ, ʼʼಇಲ್ಲಿ ಒಂದಷ್ಟು ಜನ ನನ್ನ ತಮ್ಮಂದಿರು ಇದ್ದಾರೆ. ಧನಂಜಯ್ ಬಗ್ಗೆ ಅಪಾರವಾದ ಗೌರವಿದೆ. ತಾನು ಬೆಳೆದು ತನ್ನವವರನ್ನು ಬೆಳೆಸುತ್ತಾರೆ. ಧನಂಜಯ್ ಬಂದ ರೂಟ್, ಸ್ಟ್ರಗಲ್, ಅವರ ಮನಸ್ಸು ನನಗೆ ಇಷ್ಟ. ʼಸಲಗʼದಲ್ಲಿ ಮುಖ್ಯ ಪಾತ್ರ ಮಾಡಿ ನನಗೆ ಗೆಲುವು ತಂದು ಕೊಟ್ಟಿದ್ದಾರೆ. ಸತ್ಯದೇವ್ ಕಷ್ಟುಪಟ್ಟು ದೊಡ್ಡ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಸಿನಿಮಾಗೆ ಭಾಷೆ ಇಲ್ಲ. ಎಷ್ಟು ಖುಷಿ, ನೋವು ಹಂಚಿಕೊಳ್ಳುತ್ತೇವೆ.ʼ ಜೀಬ್ರಾʼ ನಮ್ಮ ಕನ್ನಡದ ಸಿನಿಮಾ, ಎಲ್ಲಾ ಕಡೆ ಯಶಸ್ಸು ಸಿಗಲಿʼʼ ಎಂದು ಶುಭ ಹಾರೈಸಿದರು.
ಕನ್ನಡದಲ್ಲೇ ನೋಡಿ
ಧನಂಜಯ್ ಮಾತನಾಡಿ, ʼʼಕನ್ನಡ ವರ್ಷನ್ ಸಿನಿಮಾಗಳನ್ನು ನೀವು ಹೆಚ್ಚಾಗಿ ನೋಡುವುದರಿಂದ ಬೇಡಿಕೆ ಹೆಚ್ಚಾಗುತ್ತದೆ. ಪಕ್ಕಾ ಕನ್ನಡ ಸಿನಿಮಾ ಎನಿಸಲು ಶಶಾಂಕ್ ಮತ್ತು ತಂಡ ತುಂಬಾ ಚೆನ್ನಾಗಿ ಡಬ್ ಮಾಡಿದೆ. ʼಜೀಬ್ರಾʼ ಇದೇ ನ. 22ಕ್ಕೆ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆʼʼ ಎಂದು ತಿಳಿಸಿದರು.
ಸತ್ಯದೇವ್ ಅವರು ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ʼಜೀಬ್ರಾʼ ಚಿತ್ರದಲ್ಲಿ ಧನಂಜಯ್ ಆದಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಸತ್ಯದೇವ್ ಕೂಡ ಮತ್ತೊಬ್ಬ ಹೀರೋ ಆಗಿ ಅಭಿನಯಿಸಿದ್ದಾರೆ. ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್, ಅಮೃತಾ ಅಯ್ಯಂಗಾರ್ ಇನ್ನಿತರರು ತಾರಾಬಗಳದಲ್ಲಿದ್ದಾರೆ. ʼಕೆಜಿಎಫ್ʼ ಮತ್ತು ʼಸಲಾರ್ʼ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ.
ಧನಂಜಯ್ ಅಭಿನಯದ 26ನೇ ಚಿತ್ರ
ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎಸ್.ಎನ್. ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡಿದ್ದಾರೆ. ಎಸ್ ಶ್ರೀಲಕ್ಷ್ಮೀ ರೆಡ್ಡಿ ಸಹ ಚಿತ್ರದ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ, ಮೀರಾಖ್ ಸಂಭಾಷಣೆ ಸಿನಿಮಾಗಿದೆ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ʼಜೀಬ್ರಾʼ ಸಿನಿಮಾಕ್ಕೆ ಈಶ್ವರ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಧನಂಜಯ್ ಅಭಿನಯದ 26ನೇ ಸಿನಿಮಾ ಎನ್ನುವುದು ವಿಶೇಷ.
ಈ ಸುದ್ದಿಯನ್ನೂ ಓದಿ: Vidyapathi Movie: ‘ವಿದ್ಯಾಪತಿ’ಗೆ ನವರಸ ನಾಯಕ ಸಾಥ್; ಜಗ್ಗೇಶ್ ಧ್ವನಿಯಲ್ಲಿ ‘ಅಯ್ಯೋ ವಿಧಿಯೇ’ ಹಾಡು ಕೇಳಿ